Tuesday, 22 November 2016

ಕವಿತೆ ಓ ಕವಿತೆ

ಕವಿತೆ ಓ ಕವಿತೆ ನನ್ನ ಮನದಲಿ ನೀ ಬೆರತೆ
ಹೂ ಬನದಲಿ ಕುಳಿತರೂ ನಿನ್ನದೇ ಚಿಂತೆ..
ಅರಿತೆ  ನಾನರಿತೆ ನಿನ್ನ ಮನದಲಿ ನಾ ಬೆರತೆ...
ಬಿಡುವಿಲ್ಲದೆ ನಾ ನಿನ್ನ ಮರೆತೆ...
ಬಿಟ್ಯಾಕೆ ಹೋದೆ ನೀ...ಈ ಬಳಗದ ಗೆಳೆತನ ಕೊಟ್ಯಾಕೆ..ಹೋದೆ ನೀ....

ನಿನ್ನ ಪ್ರೀತಿಗಾಗಿ ನಿಮ್ಮ ಪ್ರೀತಿಗಾಗಿ ನಾ ಮತ್ತೆ ಬರುವೆನು....ನಾ ಮತ್ತೆ ಬರೆವೆನು....





ಸಂದೇಶ ಪೂಜಾರಿ ಗುಲ್ವಾಡಿ

ಸಾಲದ ಮನೆ

ಸಾಲದ ಮನೆ

ಇದು ಸಾಲದ ಮನೆ
ಇಲ್ಲಿ ಸಾಲವು ಸಿಗುವುದು ಬನ್ನಿ..
ಊಟಕೂ ಸಾಲದ ಮನೆ
ಪ್ರೀತಿಗೂ ಸಾಲದ ಮನೆ
ನೋಟಕೆ ಸಾಲಾದ ಮನೆ..
ನೋಟಿಗೆ ಸಾಲದ ಮನೆ
ಬನ್ನಿ ಇದು ಸಾಲು ಸಾಲಾದ ಮನೆ
ಸಾವಿರ ಸಾವಿರ ಕೋಣೆ 
ಇಲ್ಲಿ ಸಾಲದ ಸಾವಿನ ಕೋಣೆ..
ಎಲ್ಲಿ ಸಾಲದ ಕೊನೆ.?..........ಸಾವಿನ ಕೊನೆ...

    ಸಂದೇಶ ಪೂಜಾರಿ ಗುಲ್ವಾಡಿ

Wednesday, 2 November 2016

ಗೋಡೆ

ಗೋಡೆ

ಒಂದೇ ಪ್ರೀತಿಗೆ ಎರಡು ಮುಖಗಳು
ಆಚೆ ಅವಳು ಈಚೆ ನಾನು ಗೋಡೆ ಬರಹಗಳು.
ಅಕ್ಕ ಪಕ್ಕದ ಮನೆಯವರು ನಮ್ಮ ಪ್ರೀತಿಗೆ ತಡೆ ಜಾತಿಯೆಂಬ ಈ ಗೋಡೆ.
ಒಂದೇ  ಅಂತಸ್ತು  ಸಂಧಿಸಲಾಗಲಿಲ್ಲಾ.ಸಂಧಿಗೊಂದು ತೂತ ಕೊರೆದು ಆಚೆ ಇಣುಕುವಾಸೆ.
ಅಣ್ಣ ಬಂದ ಸುಣ್ಣ ತಂದ ಬಣ್ಣ ಬಳಿದು ಬಿಟ್ಟ.
ಹಳೆಯ ನೆನಪು ಹೇಳದ ಮಾತು ಗೋಡೆಯೊಳಗೆ ಮಾಸಿತ್ತು.
ಹೇಳಬೇಕಿದ್ದ ಅದೆಷ್ಟೋ ಕನಸುಗಳು  ಭಿತ್ತಿಯೊಳಗೆ ಬತ್ತಿ ಹೋಗಿತ್ತು.

                          -ಸಂದೇಶ ಪೂಜಾರಿ ಗುಲ್ವಾಡಿ