ಕರಿಮಣಿ ಮಾಲಿಕ ನೀ ನಲ್ಲ.
ಇಂದೇಕೋ ಹೃದಯ ಸೋತಿದೆ
ಮೌನದಲ್ಲೂ ಕೇಳದ ಸಾವಿರ ಮಾತಿದೆ
ತೀರವೆ ಇರದ ದೂರ ಬಾಳಲಿ ಬೆರೆತಿದೆ.....
ಮೌನದಲ್ಲೂ ಕೇಳದ ಸಾವಿರ ಮಾತಿದೆ
ತೀರವೆ ಇರದ ದೂರ ಬಾಳಲಿ ಬೆರೆತಿದೆ.....
ನಾನು ನನ್ನ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ ನನ್ನ ನಿರ್ಧಾರ ಸರಿಯೋ ತಪ್ಪೋ..ಕೊರಳಲ್ಲಿ ತೂಗುವ ಮಂಗಲ್ಯಕ್ಕೂ ನನ್ನೊಳಗಿನ ಭಾವನೆಗಳಿಗೂ ಏನು ಸಂಭಂದ.ವಿಧಿ ನಿಶ್ಚಯಿಸಿರುವ ಬಾಳಿನಲ್ಲಿ ನನ್ನದು ಒಂದು ಪಾತ್ರವೆಂದು ಸುಮ್ಮನಿರಲೇ..ಇಲ್ಲ ನನ್ನ ಹಕ್ಕಿಗಾಗಿ ಹೋರಾಡಲೇ..
ಹೋರಟ ಯಾರೊಂದಿಗೆ ...ನನ್ನವರೊಂದಿಗಿನ ಹೋರಾಟದಲ್ಲಿ ಜಯ ಅಪಜಯ ಎರಡೂ ಒಂದೆ.
ಹೋರಟ ಯಾರೊಂದಿಗೆ ...ನನ್ನವರೊಂದಿಗಿನ ಹೋರಾಟದಲ್ಲಿ ಜಯ ಅಪಜಯ ಎರಡೂ ಒಂದೆ.
ಮನ ಕರಗಿ ಕೊರಗಿತಲ್ಲ..
ಈ ಕರಿಮಣಿ ಮಾಲಿಕ ನೀನಲ್ಲ.
ನಿಶ್ಚಯ ದೃಡ ನಿರ್ಧಾರವನ್ನೆ ಮಾಡಿದ್ದಳು. ಯಾರಿಗೂ ಬಾರದಿರಲಿ ಈ ದೌರ್ಭಾಗ್ಯ ತನ್ನ ಮಾಂಗಲ್ಯವನ್ನು ತಾನೆ ಕಿತ್ತೆಸೆಯುವ ದುರ್ವಿಧಿ.
ಈ ಕರಿಮಣಿ ಮಾಲಿಕ ನೀನಲ್ಲ.
ನಿಶ್ಚಯ ದೃಡ ನಿರ್ಧಾರವನ್ನೆ ಮಾಡಿದ್ದಳು. ಯಾರಿಗೂ ಬಾರದಿರಲಿ ಈ ದೌರ್ಭಾಗ್ಯ ತನ್ನ ಮಾಂಗಲ್ಯವನ್ನು ತಾನೆ ಕಿತ್ತೆಸೆಯುವ ದುರ್ವಿಧಿ.
ಮಲ್ಲಿಗೆಯ ಮುಡಿದವಳು
ಮೆಲ್ಲಗೆ ನಡೆದವಳು
ಎಲ್ಲಿಗೆ ಅಂತ ತಿಳಿಸದವಳು..
ಗಲ್ಲವ ಹಿಂಡಿದ ಸಲುಗೆಯಲ್ಲೆ
ಎಲ್ಲವ ಉಸುರಿದವಳು ಸನ್ನೆಯಲ್ಲೆ..
ಮೆಲ್ಲಗೆ ನಡೆದವಳು
ಎಲ್ಲಿಗೆ ಅಂತ ತಿಳಿಸದವಳು..
ಗಲ್ಲವ ಹಿಂಡಿದ ಸಲುಗೆಯಲ್ಲೆ
ಎಲ್ಲವ ಉಸುರಿದವಳು ಸನ್ನೆಯಲ್ಲೆ..
ಅವಳ ಕೋಮಲ ಸ್ಪರ್ಶಕ್ಕೆ ಮನಸೋತ ನೀರವ್ ಗೆ ಎನೊಂದು ಅರ್ಥವಾಗಲಿಲ್ಲ.ಕನಸಿನ ಕನವರಿಕೆಯಲ್ಲಿ ಮನಸ್ಸು ಗರಿಬಿಚ್ಚಿ ಹಾಡುವಾಗ ವಾಸ್ತವ ಗೌಣವಾದಂತೆ ಅವನು ತನ್ನದೆ ಲೋಕದಲ್ಲಿ ವಿಹರಿಸುತ್ತಿದನು.
ಸಾಲು ಸಾಲು ದೀಪ ನದಿಯಲ್ಲಿ ತೇಲಿ ಬಿಡುತ್ತಿದ್ದವನ ಮನದಲ್ಲಿ ಒಂದೇ ಯೋಚನೆ.ಅವನಿಗಿದ್ದಿದ್ದು ಅದೊಂದೆ ಆಸೆ.ಅವಳು ಎಲ್ಲರಂತೆ ಖುಷಿಯಾಗಿರಬೇಕು.
ಮದುವೆಯಾಗಿ ಒಂದುವರೆ ವರ್ಷವಾದರೂ ಅವರದಿಂದು ಹೊಸ ಜೋಡಿ..ಹೊಸ ಪ್ರೇಮಿಗಳಂತೆ.
ಮೂಕಿಯಾದರೇನು ಭಾವನೆಗಳಿಲ್ಲದ ಮನುಷ್ಯನಿರುವನೇ..
ತಾಯ್ತನದ ಸುಖಕ್ಕೆ ಹಂಬಲಿಸುವ ಅವಳ ಮನ ಚಿಕ್ಕ ಮಕ್ಕಳನ್ನು ಕಂಡಾಗ ಎದೆಗೊತ್ತಿ ಮುದ್ದಾಡಿಸದಿದ್ದರೆ ಸಮಧಾನವೇ ಇಲ್ಲ..
ಇವಗಲೂ ಅವಳು ನೀರವ್ ಗೆ ಏನೇನೊ ಸನ್ನೆ ಮಾಡಿ ಹೋಗಿದ್ದಳು.
ತಾಯ್ತನದ ಸುಖಕ್ಕೆ ಹಂಬಲಿಸುವ ಅವಳ ಮನ ಚಿಕ್ಕ ಮಕ್ಕಳನ್ನು ಕಂಡಾಗ ಎದೆಗೊತ್ತಿ ಮುದ್ದಾಡಿಸದಿದ್ದರೆ ಸಮಧಾನವೇ ಇಲ್ಲ..
ಇವಗಲೂ ಅವಳು ನೀರವ್ ಗೆ ಏನೇನೊ ಸನ್ನೆ ಮಾಡಿ ಹೋಗಿದ್ದಳು.
ಅಮೇರಿಕಾದಲ್ಲೇ ಹುಟ್ಟಿ ಬೆಳೆದ ನೀರವ್ ಗೆ ತನ್ನ ತಾಯ್ನಾಡು ಇಂಡಿಯಾದ ಮೇಲೆ ಒಂತರ ಮಮಕಾರ. ಇಲ್ಲಿನ ಸಂಸ್ಕೃತಿಯ ಅರಿವಿಲ್ಲದಿದ್ದರೂ ಆಚರಿಸುವ ಗುಣವಿತ್ತು.
ತಿಂಗಳಿಗೊಮ್ಮೆ ಇಂಡಿಯಾ ಬೇಟಿ..ಎರಡು ದಿವಸವಿದ್ದು ಮತ್ತದೆ ಅಮೇರಿಕಾ...ಈ ನಿರ್ಧಾರಕ್ಕೆ ಕಾರಣ ತಾನೆಲ್ಲಿ ಹೆತ್ತವರಿಗೆ ನೋವು ಕೊಡುವೆನೋ ಅನ್ನೊ ಭಯ.
ತಿಂಗಳಿಗೊಮ್ಮೆ ಇಂಡಿಯಾ ಬೇಟಿ..ಎರಡು ದಿವಸವಿದ್ದು ಮತ್ತದೆ ಅಮೇರಿಕಾ...ಈ ನಿರ್ಧಾರಕ್ಕೆ ಕಾರಣ ತಾನೆಲ್ಲಿ ಹೆತ್ತವರಿಗೆ ನೋವು ಕೊಡುವೆನೋ ಅನ್ನೊ ಭಯ.
ಇಷ್ಟ ಪಟ್ಟು ಮದುವೆಯಾಗಿದ್ದು ನಿಶ್ಚಯಳನ್ನು ಆದರೆ ಸಂಸಾರ ಮಾತ್ರ ನಿಶ್ಚಲಳೊಂದಿಗೆ...ಅವನಿಗೆ ತನ್ನ ಬಗ್ಗೆ ಪರಿತಾಪವಿಲ್ಲ.ಇಂದು ನೀರವ್ ನಿಶ್ಚಲಳನ್ನು ತುಂಬು ಹೃದಯದಿಂದ ಪ್ರೀತಿಸುತಿರುವನು.
ಹೃದಯದ ಒಡತಿ
ಬಾಳಿನ ಸ್ಪೂರ್ತಿ
ತನ್ಮಯ ತನ್ನೊಳಗಿನ ರೀತಿ
ಅದಲು ಬದಲಾದ ಪ್ರೀತಿ
ಬಾಳಿನ ಸ್ಪೂರ್ತಿ
ತನ್ಮಯ ತನ್ನೊಳಗಿನ ರೀತಿ
ಅದಲು ಬದಲಾದ ಪ್ರೀತಿ
ಇಪ್ಪತೈದು ವರ್ಷಗಳೇ ಸಂದವು, ಗಂಡನ ಒತ್ತಡಕ್ಕೆ ಇಂಡಿಯಾ ಬಿಟ್ಟು ಅಮೇರಿಕಾದಲ್ಲಿ ನೆಲಸಿದ ತ್ರಿವೇಣಿಯ ಏಕಮಾತ್ರ ಸುಪುತ್ರ ನೀರವ್.
ಮೂಲತಃ ಮೈಸೂರಿನವರಾಗಿದ್ದ ತ್ರಿವೇಣಿ ಸ್ವತಃ ಕವಿಯತ್ರಿಯಾಗಿ ಗುರುತಿಸಿ ಕೊಂಡವರು.
ತಾಯಿಯ ಕನ್ನಡಾಭಿಮಾನ,ಕವಿತೆಗಳು ನೀರವ್ ಗೂ ತುಂಬ ಇಷ್ಟ.
ಅಮೇರಿಕಾದಂತಹ ದೇಶದಲ್ಲಿ ಒಂದಿಬ್ಬರು ಕನ್ನಡ ಮಾತನಾಡಿದರೆ ಸಾಕು,ಕನ್ನಡ ಸಂಘಟನೆಯ ಮಾತೆತ್ತುತ್ತಿದ್ದ.
ಮೂಲತಃ ಮೈಸೂರಿನವರಾಗಿದ್ದ ತ್ರಿವೇಣಿ ಸ್ವತಃ ಕವಿಯತ್ರಿಯಾಗಿ ಗುರುತಿಸಿ ಕೊಂಡವರು.
ತಾಯಿಯ ಕನ್ನಡಾಭಿಮಾನ,ಕವಿತೆಗಳು ನೀರವ್ ಗೂ ತುಂಬ ಇಷ್ಟ.
ಅಮೇರಿಕಾದಂತಹ ದೇಶದಲ್ಲಿ ಒಂದಿಬ್ಬರು ಕನ್ನಡ ಮಾತನಾಡಿದರೆ ಸಾಕು,ಕನ್ನಡ ಸಂಘಟನೆಯ ಮಾತೆತ್ತುತ್ತಿದ್ದ.
ವಾಷಿಂಗ್ಟನ್ ನ ಪುಲ್ಮನಾ ಯುನಿವರ್ಸಿಟಿಯಲ್ಲಿ ಓದುತ್ತಿರುವಾಗ ಪರಿಚಯವಾದವಳು ನಿಶ್ಚಯ..
ದೂರದಿಂದ ಕಾಣಿಸದಿದ್ದರೂ ಜೂಮ್ ಮಾಡಿ ನೋಡಿದಾಗ ಕಾಣುವ ಪುಟ್ಟ ಬಿಂದಿ, ಮೋಹಕ ಕಂಗಳು,ತಿದ್ದಿ ತೀಡಿದ ಹುಬ್ಬು, ತೀಕ್ಷ್ಣ ನೋಟ,ಮುಗ್ದ ನಗು ,ಅವಳಿಗೊಪ್ಪುವಂತ ಹೇರ್ ಸ್ಟೈಲ್,ಟಿ ಶರ್ಟ ಜೀನ್ಸನಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಳು.
ಅಯ್ಯೊ..ಅಮ್ಮ ನಾನೆನ್ ಚಿಕ್ಕ ಮಗುನಾ..ಇಲ್ಲಿ ಎಲ್ಲವೂ ಸರಿಯಾಗಿದೆ..ಚಿಕ್ಕಪ್ಪ ಎಲ್ಲ ನೊಡ್ಕೊಳ್ತಾರೆ..ಟೆನ್ಸನ್ ಮಾಡ್ಬೇಡಾ..ನಿಶ್ಚಲ ಹೇಗಿದ್ದಾಳೆ..
ಹಾ..ಸರಿ.. ಬಾಯ್ ಮಮ್ಮಿ..
ಹಾ..ಸರಿ.. ಬಾಯ್ ಮಮ್ಮಿ..
ಮತ್ತೊಮ್ಮೆ ನೀರವ್ ತಿರುಗಿ ನೋಡಿದ..ಇವಳು ಕನ್ನಡದವಳೆ..
ಮನ ಮೆರೆಸಿದ ಚೆಲುವು
ಮೈ ಮರೆಸಿದ ಒಲವು
ತಿರುಗ ಬೇಕೆಂದ ಪ್ರತಿ ಸಲವು
ಬಯಕೆ ಹಲವು.
ಮೈ ಮರೆಸಿದ ಒಲವು
ತಿರುಗ ಬೇಕೆಂದ ಪ್ರತಿ ಸಲವು
ಬಯಕೆ ಹಲವು.
ನಿಶ್ಚಯ ಹಾಗೂ ನಿಶ್ಚಲ ಅವಳಿ ಮಕ್ಕಳು..ಕೆಲವೇ ನಿಮಿಷಗಳ ಅಂತರ ನಿಶ್ಚಯನನ್ನು ಅಕ್ಕನಾಗಿಸಿತ್ತು.
ಬೆಳಯುತ್ತ ಅವರಿಬ್ಬರ ನಡುವೆ ಅದೇನು ಮೈತ್ರಿ,ಅದೆಂತಹ ಹೋಲಿಕೆ ಕೆಲವೊಮ್ಮೆ ಹೆತ್ತ ತಾಯಿಗೂ ಗುರುತಿಸಲಾಗುತ್ತಿರಲಿಲ್ಲ ಯಾರ್ಯರೆಂದು..ಆದರೆ ಅದೊಂದು ಕೊರತೆ ಎದ್ದು ಕಾಣುತ್ತಿತ್ತು ನಿಶ್ಚಲ ಮಾತನಾಡಳು ಅವಳು ಹುಟ್ಟುತ್ತಲೇ ಮೂಕಿಯಾದವಳು.
ತನ್ನ ತಂಗಿಯೆಂದರೆ ಎಲ್ಲಿಲ್ಲದ ಪ್ರೀತಿ.

ಹಾಯ್ ಐ ಯಮ್ ನೀರವ್...ನಿಮ್ಮ ಹೆಸರು...
ಸ್ವರ ಬಂದತ್ತ ತಿರುಗಿದ್ದಳು ..ಅಮೇರಿಕಾದಲ್ಲೂ ಕನ್ನಡ ಕೇಳಿ ಪುಳಕಿತಗೊಂಡು..ಮುಗುಳ್ನಗುತ್ತ..
ಹಾಯ್ ನಾನು ನಿಶ್ಚಯ...ಇಲ್ಲಿನ ಯುನಿವರ್ಸಿಟಿಯಲ್ಲಿ ತನ್ನ ಪಿ.ಎಚ್.ಡಿ ಗೆ ಸಂಬಂಧಿಸಿದಂತೆ ಒಂದು ತಿಂಗಳ ಅಧ್ಯಯನದ ಅವಕಾಶ ಸಿಕ್ಕರುವುದಾಗಿ ತಿಳಿಸಿದಳು..
ಹಾಯ್ ನಾನು ನಿಶ್ಚಯ...ಇಲ್ಲಿನ ಯುನಿವರ್ಸಿಟಿಯಲ್ಲಿ ತನ್ನ ಪಿ.ಎಚ್.ಡಿ ಗೆ ಸಂಬಂಧಿಸಿದಂತೆ ಒಂದು ತಿಂಗಳ ಅಧ್ಯಯನದ ಅವಕಾಶ ಸಿಕ್ಕರುವುದಾಗಿ ತಿಳಿಸಿದಳು..
ತಮ್ಮಿಬ್ಬರ ಪರಿಚಯದೊಂದಿಗೆ ಮಾತು ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ತಿರುಗಲು ಹೆಚ್ಚೇನು ಸಮಯ ಹಿಡಿಯಲಿಲ್ಲ.
ತ್ರಿವೇಣಿಯು ಮಗನಾಸೆ ತಳ್ಳಿ ಹಾಕುವ ಕೆಲಸ ಮಾಡಲಿಲ್ಲ.ತಂದೆಯನ್ನು ಅವರೆ ಒಪ್ಪಿಸಿದ್ದರು.
ನಿಶ್ಚಯಳ ತಂದೆ ತಾಯಂದಿರಿಗೂ ಯಾವುದೇ ಅಭ್ಯಂತರವಿರಲಿಲ್ಲ. ಶ್ರೀಮಂತ ಮನೆತನ,ಉತ್ತಮ ಸಂಬಂಧ. ನಿಶ್ಚಲಳಿಗೂ ಒಂದು ಗಂಡು ಸಿಕ್ಕಿದ್ದರೆ ಜೊತೆಯಲ್ಲೆ ಮದುವೆ ಮಾಡುವ ಆಸೆ ಇದ್ದಿದ್ದರೂ ಕಾಯುವ ಅವಕಾಶವಿರಲಿಲ್ಲ..
ಆಸೆಯ ಹಂಚಿಕೊಂಡು
ಕಾಯುವ ಕಾತುರ ನನಗಿಲ್ಲ
ಭಾಷೆಯ ನೀಡಿದಂತೆ
ನೀ ಬಂದು ಸೇರುವೆಯಲ್ಲ
ಏಕಾಂತಕ್ಕಿಂದು
ಕೊನೆಯಿಡು ನನ್ನ ನಲ್ಲ..
ಕಾಯುವ ಕಾತುರ ನನಗಿಲ್ಲ
ಭಾಷೆಯ ನೀಡಿದಂತೆ
ನೀ ಬಂದು ಸೇರುವೆಯಲ್ಲ
ಏಕಾಂತಕ್ಕಿಂದು
ಕೊನೆಯಿಡು ನನ್ನ ನಲ್ಲ..
ಕನ್ನಡಿಯ ಪ್ರತಿಬಿಂಬ ಎದುರಿಗಿದ್ದರೂ ತನ್ನನ್ನೆ ತಾನು ಮರೆತ್ತಿದ್ದಳು..ಇದಕ್ಕೆ ಅವಳು ಒಂದು ಕಿವಿಗೆ ಧರಿಸಿದ್ದ ಓಲೆಯೇ ಸಾಕ್ಷಿ ಎನ್ನುವಂತಿತ್ತು.
ಮದುವೆಗೆ ಇನ್ನು ಹೆಚ್ಚು ದಿನವಿಲ್ಲ ..ಹುಚ್ಚು ಆಸೆಯೊಂದಿಗೆ ನೀರವ್ ನ ಹೆಚ್ಚು ಹೆಚ್ಚಾಗಿ ಹಚ್ಚಿಕೊಂಡಿದ್ದಳು.
ಮದುವೆಗೆ ಇನ್ನು ಹೆಚ್ಚು ದಿನವಿಲ್ಲ ..ಹುಚ್ಚು ಆಸೆಯೊಂದಿಗೆ ನೀರವ್ ನ ಹೆಚ್ಚು ಹೆಚ್ಚಾಗಿ ಹಚ್ಚಿಕೊಂಡಿದ್ದಳು.
ಅದ್ದೂರಿಯ ಸಂಭ್ರಮದಲ್ಲೇನೊ ಮದುವೆಯು ಮುಗಿಯಿತು.ಈಗಿನ ವಿಷ್ಯ ಪ್ರಸ್ಥದ್ದು, ನಿಗದಿಯಾಗಿದ್ದಂತೆ ಎಲ್ಲವು ನಡೆದಿದ್ದರೆ ಯಾವ ಅನಾಹುತವೂ ಸಂಭವಿಸುತಿರಲಿಲ್ಲ.ಜ್ಯೋತಿಷ್ಯ ಶಾಸ್ತ್ರವೇ ಮುಳುವಾಯಿತೆ..ಅಮ್ಮನ ಪ್ರಕಾರ ಇನ್ನು ನಾಲ್ಕು ದಿನ ಒಳ್ಳೆಯ ದಿನವಿಲ್ಲ.
ಮೆತ್ತಗೆ ಬೀಸುವ ಗಾಳಿ ಸುಗಂಧ ದುಂದುಬಿಯಂತೆ ತೆರೆದಿರುವ ಕಿಟಕಿಯಿಂದ ನೀರವ್ ನನ್ನು ಅಣಕಿಸುತ್ತಿತ್ತು.ಮಣಿರತ್ನ ಮಂಚ ಚುಚ್ಚಿದಂತಾಗಿ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದನು..ಎದ್ದು ಕಾರಿಡಾರ್ ನಲ್ಲಿ ಒಂದೆರಡು ಹೆಜ್ಜೆಯಿಟ್ಟವನಿಗೆ ಅವಳ ಚೆಲುವು ಕೈ ಬೀಸಿ ಕರೆಯುತ್ತಿತ್ತು.
ತೆರೆದಿದೆ ಮನೆ..ಮನ... ಓ ..ಬಾ ಅತಿಥಿ ಎನ್ನುವಂತಿತ್ತು.
ತೆರೆದಿದೆ ಮನೆ..ಮನ... ಓ ..ಬಾ ಅತಿಥಿ ಎನ್ನುವಂತಿತ್ತು.
ಮೌನ ಮುರಿಯಲಿ
ಮಾತಿನ ಮರೆಯಲಿ
ಮೈತ್ರಿಯ ಕರೆಯಲಿ
ಮಾತಿನ ಮರೆಯಲಿ
ಮೈತ್ರಿಯ ಕರೆಯಲಿ
ಸ್ನೇಹದ ಸಲುಗೆಯಲ್ಲೆ ಅವಳ ಕೋಣೆ ಪ್ರವೇಶಿಸಿದವ ಮೃದುವಾಗಿ ಹಣೆಯನೊಮ್ಮೆ ಸ್ಪರ್ಶಿಸಿದ.ಗಡಿಬಿಡಿಯಲ್ಲಿ ತಡವರಿಸಿ ಮೇಲೇಳಲು ಯತ್ನಿಸಿದವಳ ಬಾಯಿಗೆ ಕೈ ಅಡ್ಡ ಹಿಡಿದು...
...ಶ್.. ಸುಮ್ಮನಿರು ಅತ್ತೆ ಮಾವ ಎಚ್ಚರವಾಗುವರು..
ಎಂದು ಹಣೆಗೆ ಮತ್ತಿನ ಮುತ್ತನಿಟ್ಟನು.
...ಶ್.. ಸುಮ್ಮನಿರು ಅತ್ತೆ ಮಾವ ಎಚ್ಚರವಾಗುವರು..
ಎಂದು ಹಣೆಗೆ ಮತ್ತಿನ ಮುತ್ತನಿಟ್ಟನು.
ಪ್ರತಿಭಟಿಸಿದವಳ ತಡೆದು..ಇಲ್ಲ ಕಾಣೆ ಈ ಶಾಸ್ತ್ರವೆಲ್ಲ ಅಷ್ಟೊಂದು ಸಿರಿಯಸ್ ಅಲ್ವಂತೆ ಎಂಬ ಸಮಜಾಯಿಷಿಯೊಂದಿಗೆ ಮುಂದುವರಿದ.
ಬಿತ್ತಿದ ಪ್ರೀತಿಯು
ಮೆತ್ತಗೆ ಮಾಡಿದೆ ಭಾವವ.
ನಿನ್ನ ಬಾಹುವಿನ ಬಲದೊಂದಿಗೆ
ವಿರೋಧಿಸುವ ಮನಸಿಲ್ಲ.
ಮಾತು ಮೌನವಾಗಿರುವುದು
ಮೂಕ ವೇದನೆಯ ನಡುವಲ್ಲಿ.
ಮೆತ್ತಗೆ ಮಾಡಿದೆ ಭಾವವ.
ನಿನ್ನ ಬಾಹುವಿನ ಬಲದೊಂದಿಗೆ
ವಿರೋಧಿಸುವ ಮನಸಿಲ್ಲ.
ಮಾತು ಮೌನವಾಗಿರುವುದು
ಮೂಕ ವೇದನೆಯ ನಡುವಲ್ಲಿ.
ನೀರವತೆಯ ನಿಶ್ಚಬ್ದದ ನಡು ರಾತ್ರಿಯಲ್ಲಿ ನಿಶ್ಚಲಳ ಅಳುವ ಧ್ವನಿ ನಿದ್ದೆಯ ಮಂಪರಿನಲ್ಲಿದ್ದ ನಿಶ್ಚಯಳನ್ನು ಎಚ್ಚರಿಸಿತು.
ಅವಾಗಲೇ ಸತ್ಯದ ಅರಿವಾಗಿದ್ದು ನೀರವ್ ಗೆ
ತನುವಿನೊಳು ತನ್ನವಳಾಗಿದ್ದವಳು ನಿಶ್ಚಲಳೆಂದು.
ತನುವಿನೊಳು ತನ್ನವಳಾಗಿದ್ದವಳು ನಿಶ್ಚಲಳೆಂದು.
ಇದೆಲ್ಲವೂ ಆಕಸ್ಮಿಕವಾಗಿದ್ದರೂ ವಾಸ್ತವವಾಗಿ ಸತ್ಯ ಕಣ್ಣೆದುರಲ್ಲೇ ಇತ್ತು.
ನದಿಯ ನೀರಿನಲ್ಲೂ ಬೆಳಕು ಪ್ರತಿ ಫಲನಗೊಂಡು ಹೊಂಬಣ್ಣ ಚೆಲ್ಲಿತ್ತು. ಇನ್ನೆನು ಮಹಾ ಮಂಗಳಾರತಿ ಸಮಯ ಗುಡಿಯಲ್ಲಿ ಘಂಟಾ ನಾದವಾದಗ....
ನಿಶ್ಚಲ...ನಿಶ್ಚಲ...
ಕರೆದ ಕೂಗಿಗೆ ಹಸುಗೂಸನ್ನೆತ್ತಿಕೊಂಡು ನಸುನಗುತ್ತ ಬಂದಳು ಪ್ರಾಣಸಖಿ....
1 comment:
Nice Post
Kannada Kavanagalu
Post a Comment