ಪ್ರೀತಿಸಿಯೇ ಬಿಟ್ಟಳು
ಮನುವಿನ ಸ್ಪರ್ಷಕ್ಕೆ ಮನಸ್ಸು ಕೊಂಚ ಗಲಿಬಿಲಿಯಾಯಿತು..ಇದ್ಯಾವುದನ್ನು ತೋರಿಸಿಕೊಳ್ಳದೆ ಸ್ವಲ್ಪ ದೂರ ಸರಿದು ನಿಂತಳು..
ಮಾತು ಬದಲಾಯಿಸಿದಳು "ಈ ಮಳೆ ಇವಾಗ್ಲೇ ಶುರು ನೋಡು"
ಸಿಲ್ವಿ ಹಾಸ್ಟೆಲ್ ಇರುವುದು ಇನ್ನೂ ಒಂದು ಕಿಲೋಮೀಟರ್ ದೂರ.
ಹೋಗೋಣ ಬಾ ಎಂದು ಕರೆದ ಅವನ ಮಾತಿಗೆ ಮರುಮಾತನಾಡದೆ ಜೊತೆ ನಡೆದಳು.
ಮಳೆ ಆರ್ಭಟಿಸುತ್ತಿದ್ದರೆ ಹಿಮದ ಗಾಳಿಗೆ ಚಳಿ ಚುಮುಚುಮು ಅನಿಸುತ್ತಿತ್ತು.
ಆಗೊಮ್ಮೆ ಈಗೊಮ್ಮೆ ಎಲ್ಲ ಕಡೆಯಿಂದ ನುಸುಳುತ್ತಿದ್ದ ಗಾಳಿ ಅವರನ್ನು ಮಳೆಯಿಂದ ತೋಯಿಸುತ್ತಿತ್ತು.
ಕೊಡೆ ನೆಪಮಾತ್ರ ಮಳೆಯಿಂದ ಅವರು ಅರ್ಧ ಒದ್ದೆಯಾಗಿ ಹೋಗಿದ್ದರು.ಮಳೆ ಇನ್ನೂ ಹೆಚ್ಚಾದಾಗ ಅಲ್ಲೇ ಹತ್ತಿರವಿದ್ದ ಮರದ ಬಳಿ ನಡೆದರು.
ಅವರ ವಯಸ್ಸು ಅಂತಹದು ಮನಸ್ಸಿನ ಭಾವನೆಗಳು ಗರಿಬಿಚ್ಚಿ ನರ್ತಿಸುತ್ತಿತ್ತು ಬಣ್ಣ ಬಣ್ಣದ ಕನಸುಗಳು ಮಿಂಚಿ ಮರೆಯಾಗುತ್ತಿತ್ತು.
ಬಯಕೆ ಬಿಚ್ಚಿಡದೆ ಹೋದರೂ ಅವನ ಬಿಸಿ ಉಸಿರು ತಾಗಿ ನಸು ಕೆಂಪಾದ ಅವಳು ಆ ಹಸಿ ಮಳೆಯಲ್ಲಿ ತುಸು ನಕ್ಕಳು.
ಕೊಂಚ ಆಹ್ಲಾದಕರವಾದ ಮನಕ್ಕೆ ಅವಳಿಂದ ಒಪ್ಪಿಗೆ ದೊರೆತಂತಾಯಿತು.
ಮನುವಿಗೆಕೊ ಹದಿನೈದು ನಿಮಿಷದ ದಾರಿ ಕೇವಲ ಮೂರು ನಿಮಿಷದಲ್ಲೆ ಮುಗಿದುಹೋಯಿತಲ್ಲ ಎನಿಸುತ್ತಿತ್ತು.
ಇದುವರೆಗೂ ಅವಳ ಆಕರ್ಷಣೆಯಲ್ಲಿ ಇದ್ದ ಮನುವಿಗೆ ನೈಜ ಪ್ರೇಮ ಆ ಜಡಿ ಮಳೆಯಲ್ಲಿ ಹುಟ್ಟಿತೆಂದರೆ ತಪ್ಪಾಗಲಾರದು.
ಜೊತೆಯಲ್ಲಿದ್ದಷ್ಟು ಹೊತ್ತು ಪ್ರಪಂಚವನ್ನೇ ಮರೆತಿದ್ದರು ಏನು ಮಾತನಾಡದ ಮೂಕರು. ಅಗಲಿಕೆ ಎಂದಾಗ ಹೇಳಿಕೊಂಡಷ್ಟು ಮುಗಿಯದ ಮಾತಿದೆ. ಹಾಸ್ಟೆಲ್ ತಲುಪಿದ ಸಿಲ್ವಿ ಒಂದೊಂದೆ ಮೆಟ್ಟಿಲೇರುತ್ತಾ ಕೈ ಬೀಸಿ ಅವನ ಬಿಳ್ಕೊಡುತ್ತಿದ್ದಳು.ಅವಳು ಮರೆಯಾಗುವವರಗೂ ಅವನು ನೋಡುತ್ತಿದ್ದ.ವಿರಾಹದ ನೋಟ ಅವರಿಬ್ಬರನ್ನು ಭಾವುಕರನ್ನಾಗಿಸಿತ್ತು.
ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದಳು ..ಅವನ ನೆನಪೆ ಕಾಡುತ್ತಿತ್ತು.. ಹೇ ಹುಡುಗ ಯಾಕಿಷ್ಟು ದೂರ..
ಯಾಕೆ ಹೀಗೆ ಕಾಡುತ್ತಿರುವೆ..ನನ್ನ ಹೃದಯದ ತಳಮಳ ನಿನಗೆ ತಿಳಿಯದೆ..ಬಳಿ ಬಂದು ನನ್ನ ಸೇರಬಾರದೆ..ಹೀಗೆ ಪ್ರೀತಿ ಗುಂಗಲ್ಲಿ ಚಡಪಡಿಸುತ್ತಾ ಮಂದಿರಾ ಎದೆಯ ಮೇಲಿನ ಹಚ್ಚೆಯ ಸವರಿಕೊಂಡಳು..ಹಚ್ಚೆಯ ಶಾಯಿಂದ
ಮನುವಿನ ಹೆಸರು ಹಚ್ಚ ಹಸುರಾಗಿತ್ತು.
ಅವಳು ಅದೆಷ್ಟು ಬಾರಿ ಪ್ರಪೋಸ್ ಮಾಡಿದ್ದರೂ ಮನು ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ. ನಸುನಕ್ಕು ಸುಮ್ಮನಾಗುತ್ತಿದ್ದ.
ಮಂದಿರಾ ಹೈ ಸೊಸೈಟಿಯ ದೊಡ್ಡ ಬ್ಯಾಗ್ರೌಂಡ್ ನ ಹುಡುಗಿ. ಬಯಸಿದ್ದೆಲ್ಲ ಕೊಂಡುಕೊಳ್ಳುವಷ್ಟು ಹಣ ಅವಳಲ್ಲಿತ್ತು.ಅದ್ಯಾಕೊ ಮನುವಿಗೆ ಮಾರು ಹೋಗಿದ್ದಳು.ಪ್ರೀತಿಯನ್ನು ಹಣದಿಂದ ಕೊಂಡುಕೊಳ್ಳಲಾಗದು ಎಂದರಿತಿರುವುದರಿಂದ ಮನುಗಾಗಿ ಅವನ ಹಿಂದೆ ಬಿದ್ದು ಗೋಳಾಡುತ್ತಿದ್ದಳು.
ಇನೈದು ದಿನ ಕಾಲೆಜಿಗೆ ರಜೆ ಇದೆ..ಅದೆ ಮಂದಿರಾನ ಗೊಂದಲಕ್ಕೆ ಕಾರಣ. ಹೇಗೆ ಮನುವನ್ನು ನೋಡಲಿ ..ಅವಳಿಗೆ ನಿದ್ದೆ ಬಂದಿಲ್ಲ..ಹಾಗೆ ಹಾಸ್ಟೆಲ್ ರೂಮ್ ನಿಂದ ಹೊರಬಂದಳು..ಯಾರೊ ಪೋನಿನಲ್ಲಿ ಮಾತಾಡುತ್ತಿದ್ದರು.
"ಪ್ಲೀಸ್ ಮನು ಮೀಟ್ ಅಗೊಕೆ ಅಗಲ್ಲ"
ಅರ್ಥ ಮಾಡ್ಕಳ್ಳೊ ಕಾಲೇಜಿನಲ್ಲಿ ಸಿಗ್ತಿಯಲ್ಲ ಏನಂತ ಅಲ್ಲೆ ಹೇಳೊ.."
"ಇಲ್ಲಾ ಪ್ಲೀಸ್ ನಿನ್ ಜೊತೆ ಪರ್ಸನಲಾಗಿ ಮಾತಡಬೇಕು."
"ಆಗಲ್ಲಾ ಏನಿವಾಗ"
"ಇಷ್ಟೇ ತಾನೆ"
ಯಾವುದು ಸ್ಪಷ್ಟವಾಗಿರಲಿಲ್ಲ..ಅಸ್ಪಷ್ಟ ಮಾತುಗಳು ಕೇಳಿ ಬರುತ್ತಿದ್ದ ಕಡೆ ನಡೆದಾಗ.ಅ ಕತ್ತಲಲ್ಲಿ ಏನು ಕಾಣಿಸದಾಯ್ತು.
ನನ್ನದು ಭ್ರಮಲೋಕ ಸದಾ ಮನು ಮನು ಮನು..
ನಾನು ಹುಚ್ಚಿಯಾಗಿದ್ದನಿ..
ಅವಳಿಗೆ ಅವಳೆ ಸಮಾಧಾನ ಮಾಡಿಕೊಂಡಳು.
"ಸನ್ನಿಧಿ ಗಾರ್ಡನ್" ವಿಶಾಲವಾದ ಪಾರ್ಕ.ವಿವಿಧ ಬಗೆಯ ಗಿಡ ಮರಗಳು ,ಬಗೆಬಗೆಯ ಹೂ ಗಿಡಗಳು..ತೂಗು ಉಯ್ಯಾಲೆಗಳು,ಕಲ್ಲು ಮಂಚಗಳು.ಹಕ್ಕಿ ಸಂಕುಲಗಳು.ನೀರಿನ ಕೊಳಗಳು,ಮೀನಿನ ಪಾಂಡ್ ಗಳು ಹೀಗೆ ಮಿನಿ ಲಾಲ್ ಭಾಗ್ ಅನ್ನವಂತೆ ಕಂಗೊಳಿಸಿತ್ತು.
ಇನ್ನೊಂದು ಕಡೆ ಗ್ರಂಥಾಲಯಗಳು.ಪುಟ್ಟದೊಂದು ದೇವಸ್ಥಾನ.ಅಲ್ಲೆ ಪಕ್ಕದಲಿ ಸ್ಮಾರಕ..ಚಿಕ್ಕದೊಂದು ಹರಿಯುವ ಝರಿ.
ಇಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯಾರಿಗೂ ಪ್ರವೇಶವಿರಲಿಲ್ಲ.
ಐಡಿ ಕಾರ್ಡ್ ಗಳಿಂದ ಪ್ರವೇಶ ದ್ವಾರ ತೆರೆಯುತ್ತಿತ್ತು.
ತುಂಬ ಹೊತ್ತಿನಿಂದ ಅವನು ಕಾಯುತ್ತಿದ್ದ ಅವಳ ಅಗಮನವಿರಲಿ ಯಾರು ಕೂಡ ಅತ್ತ ಕಡೆ ಸುಳಿದಿಲ್ಲ.
ಸೌಂದರ್ಯ ರಾಶಿಯಲ್ಲಿ ಕುಳಿತ್ತದ್ದರೂ ಪ್ರಕೃತಿಯನ್ನು ಆಸ್ವಾಧಿಸುವ ಮನಸ್ಸಾಗಲಿ ಚೈತನ್ಯವಾಗಲಿ ಅವನಲ್ಲಿ ಇದ್ದಂತಿಲ್ಲ.ಇನ್ನೊಂದು ತಾಸು ಕಾಯಲು ಸಿದ್ದನಿದ್ದ.
ಅಬ್ಬಾ ಸ್ವರ್ಗದಿಂದ ದೇವತೆಯೇ ಇಳಿದು ಬಂದಂತೆ.ಒಂದು ಅರ್ಥವಾಗದ ಮನು ಅವಳತ್ತ ನೋಡತೊಡಗಿದ.
ಯಾಕಿಷ್ಟು ಅಲಂಕಾರ ಹಸೆಮಣೆ ಏರುವ ವಧುವಿನಂತೆ ಕಂಗೊಳಿಸುತ್ತಿದ್ದಳು. ಮನ ಮೋಹಕ ಚೆಲುವೆ ಹತ್ತಿರ ಬರುತ್ತಿದ್ದರೆ ಅವಳ ಕೈಗಳ ನೋಡಿ ಮನು ನಡುಗಲಾರಂಬಿಸಿದನು.
ಸಿಲ್ವಿ...
ಅವಳು ನಿರ್ಧಾರ ಮಾಡಿಕೊಂಡೆ ಬಂದಿದ್ದಳು.ಅಲೋಚನೆಯಂತೆ ಅವನನ್ನು ವರಿಸಲು ನಿರ್ಧಾರಿಸಿ ಸಿದ್ದಳಾಗೆ ಬಂದಿದ್ದಳು.ಕೈಯಲ್ಲಿ ಮಾಂಗಲ್ಯ ಹಿಡಿದೆ ಬಂದಿದ್ದಳು.
ಮನುವಿಗೆ ಮಾತನಾಡಲು ಅವಕಾಶವೇ ಇರಲಿಲ್ಲ.ಅವನ ಕೈ ಹಿಡಿದು ಹತ್ತಿರದ ದೇವಸ್ಥಾನಕ್ಕೆ ಕರೆದೊಯ್ದಳು. ಗುಡಿಯಲ್ಲಿ ಮೊದಲ ಬಾರಿಗೆ ಅವಳೆ ದೀಪ ಹಚ್ಚಿದಳು.
ನಿನಗೆ ನನ್ನಲ್ಲಿ ಪ್ರೀತಿ ಇರುವುದು ಸತ್ಯವೆಂದರೆ ಈ ಮಾಂಗಲ್ಯವನ್ನು ದೇವರ ಎದುರಿಗೆ ಕಟ್ಟು ಇಲ್ಲವಾದರೆ
ನನ್ನ ಶವಕ್ಕೆ ಕಾಲುಂಗುರ ತೊಡಿಸು.
ಮಾತನಾಡಲು ಏನು ಉಳಿದಿಲ್ಲ ಅವಳಿಗೆ ತಾಳಿ ಕಟ್ಟಿ ಹಣೆಗೆ ಕಂಕುಮವಿಟ್ಟ..ದೀಪದ ಸುತ್ತ ಸಪ್ತಪದಿ ತುಳಿದರು..
ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಮನು-ಸಿಲ್ವಿ ಗಂಡ ಹೆಂಡತಿಯರಾದರು..ಅಂದಿನ ರಾತ್ರಿ ದೇವರ ಸನ್ನಿದಿಯಲ್ಲಿ ಕಳೆದರು.
ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಮನು-ಸಿಲ್ವಿ ಗಂಡ ಹೆಂಡತಿಯರಾದರು..ಅಂದಿನ ರಾತ್ರಿ ದೇವರ ಸನ್ನಿಧಿಯಲ್ಲಿ ಕಳೆದರು..
"ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ.."
ಯಾರು ಬರೆದರೋ ಈ ವಾಕ್ಯವನ್ನು ದೇವ ಭಾಷೆಯಲ್ಲಿ..
ಎತ್ತಣ ಎತ್ತಣದ ಸಂಬಂಧವೊ ಅವರಿಬ್ಬರನ್ನು ಒಂದುಗೂಡಿಸಿದ್ದು.. ಯಾರ ಒಪ್ಪಿಗೆಯ ಮೇರೆಗೆ ಅವರ ಪಯಣ.. ಯಾರು ಬಲ್ಲರು?..
ಹರಿಯುವ ಝರಿಯಲ್ಲಿ ಮುಖ ತೊಳೆದು ಅವನೆದುರು ನಿಂತಿರವಳು..ತ್ವಚೆಯ ಬಣ್ಣ ರಂಗೇರಿ ಕಾಂತಿಯಿಂದ ಕಂಗೊಳಿಸುತ್ತಿತು...ಅದ್ಯಾವ ಕಾರಣ ನಾ ಹೇಳಲಾರೆ.ಮುಂಜಾನೆಯ ಸೂರ್ಯರಶ್ಮಿಯ ಹೊಂಗಿರಣಕ್ಕೊ ಇಲ್ಲಾ ಹೆಣ್ಣೆದೆ ಹಿಗ್ಗಿದ ಆನಂದಕ್ಕೊ.
ಇನ್ನೇನು ಒಂದು ತಿಂಗಳಷ್ಟೇ ಕಾಲೇಜು ಜೀವನ. ಆ ಒಂದು ತಿಂಗಳು ಕಳೆಯುವದು ಸಿಲ್ವಿಗೆ ತಂಬ ಕಷ್ಟವಾಯ್ತು.
ತನ್ನ ಗುಟ್ಟನ್ನು ಯಾರಲ್ಲು ಹೇಳಿಕೊಳ್ಳುವಂತಿರಲಿಲ್ಲ. ಸಾಲದ್ದಕ್ಕೆ ತಾಳಿ ಯಾರ ಕಣ್ಣಿಗೂ ಬೀಳವ ಹಾಗಿರಲಿಲ್ಲ.
ರಜಾ ಮುಗಿದರೂ ಎರಡು ದಿನ ಕಾಲೇಜಿಗೆ ಸಿಲ್ವಿಯ ಪಾದ ಸ್ಪರ್ಶವಿಲ್ಲ.. ಮನು ಮಂಕಾಗಿದ್ದ ಅವಳ ನೋಡದಿರುವುದು ಅವನಿಂದ ಸಾಧ್ಯವಿರಲಿಲ್ಲ. ಪೋನ್ ಮಾಡಿದಾಗ ಇಂದು ಬರುವುದಾಗಿ ತಿಳಿಸಿದ್ದಳು.
ಅಬ್ಬಾ ಮಾಡರ್ನ್ ಗೌರಮ್ಮ..ಕತ್ತಿನವರೆಗೂ ದಿರಿಸು ಧರಿಸಿದ್ದಳು. ಎಲ್ಲರಿಗೂ ಸಿಲ್ವಿಯ ಅವತಾರ ನೋಡಿ ಅಶ್ಚರ್ಯ, ಮನುವಿಗೆ ನನ್ನ ಚೆಲ್ವಿ ಇವಳೇನಾ ಅನಿಸಿತ್ತು.
ಮನು ಮಾತಾಡಲಿಲ್ಲ ,ಒಂದು ತಿಂಗಳು ಕಾಲೇಜಿನಲ್ಲಿ ಮಾತು ಕತೆ ಬೇಡ ಎಂದಿದ್ದಳು.
ಹನಿ ಹನಿ ಇಂಚರಕ್ಕೆ ತುಂತುರು ಮಳೆಯಲ್ಲಿ ನಾಟ್ಯವಾಡಿದೆ ಕಾಮನಬಿಲ್ಲು ಎಲ್ಲೋ ಮರೆಯಲ್ಲಿ. ಮನು ಕ್ಲಾಸಿನಲ್ಲಿ ಇದ್ದರೂ ಅವನ ಮನಸ್ಸು ಸಿಲ್ವಿಯೊಂದಿಗೆ ಡುಯೆಟ್ ಹಾಡುತ್ತಿತ್ತು.ಕ್ಲಾಸ್ ಮುಗಿದಿದ್ದರೂ ಅವನೊಬ್ಬನೇ ಅವನ ಗುಂಗಲ್ಲೆ ಕುಳಿತಿರುತ್ತಿದ್ದ ಅವನನ್ನು ಎಚ್ಚರಿಸಿದ್ದು ಅವಳ ಸ್ಪರ್ಶ.
ಹೆಗಲ ಮೇಲಿದ್ದ ಅವಳ ಕೈಯನ್ನು ನಿಧಾನವಾಗಿ ಪಕ್ಕಕ್ಕಿರಿಸಿ ಹಾಯ್ ಮಂದಿರಾ ನೀನು ಬಂದಿದ್ದು ಗೊತ್ತಾಗ್ಲಿಲ್ಲ ಸಾರಿ...
ಈಗೀಗ ಅವನಿಗೆ ಹಿಂಸೆ ಅನಿಸುತ್ತಿತ್ತು ಬೇಕೆಂತಲೇ ಮೈಮೇಲೆ ಬೀಳುತ್ತಿದ್ದ ಅವಳನ್ನು ಸಮಾಧಾನಿಸುವುದು ಅವನಿಂದ ಆಗುತ್ತಿರಲಿಲ್ಲ.
ಯಾಕೋ ಸೈಕೋತರ ಆಡ್ತೀಯಾ.
ನನ್ನ ಜೊತೆ ಸರಿಯಾಗಿ ಯಾಕೆ ಮಾತಾಡುತ್ತಿಲ್ಲ ಇನ್ನು ಕಾಲೇಜು ಕೆಲವೇ ದಿವಸ ಎಂದು ಅವನನ್ನು ತಬ್ಬಿಕೊಳ್ಳಲು ಮುಂದಾದಳು.
ಮನು ಕೊಂಚ ಹಿಂದೆಸರಿದ ಕ್ಲಾಸಿನಲ್ಲಿ ಅವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಇಂದೇಕೋ ಮಂದಿರಾ ತುಂಬಾ ಭಾವಪರವಶಳಾಗಿದ್ದಳು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡಳು.ಮನು ಬಿಡಿಸಿಕೊಳ್ಳಲು ತಡಕಾಡಿದ..ಅವಳ ಬಂಧನ ಇನ್ನೂ ಗಾಢವಾಯಿತು ಅವನನ್ನು ಚುಂಬಿಸಲು ಯತ್ನಿಸಿದಳು ಅವಳನ್ನು ದೂರತಳ್ಳಿ ಕೋಪದಲ್ಲಿ ಕೆನ್ನೆಗೆ ಬಾರಿಸಿದ.
"ನೋಡು ನನಗೆ ನನ್ನದೇ ಆದ ಜೀವನವಿದೆ ಮೋಜು-ಮಸ್ತಿ ಮಾಡಲು ತುಂಬಾ ಜನರ ಸಿಗುತ್ತಾರೆ ಹೋಗು" ಎಂದು ಬಿರ ಬಿರನೆ ಹೊರಟು ಬಿಟ್ಟ.
"ಮನು ನಾನು ಅಪರಾಧಿ ಎಂಬ ಭಾವ ನನ್ನನ್ನು ಕಾಡುತ್ತಿದೆ ಇಲ್ಲಿರಲು ನನಗೆ ಸಾಧ್ಯವಾಗುತ್ತಿಲ್ಲ ಹೆತ್ತವರ ನಿರೀಕ್ಷೆಯನ್ನು ಹುಸಿ ಮಾಡಿರುವೆ.ಪ್ಲೀಸ್ ನನ್ನನ್ನು ಕ್ಷಮಿಸಿಬಿಡು. ನಿನ್ನ ಅಸಹಾಯಕತೆಯನ್ನು ನನ್ನಿಂದ ಸಹಿಸಲಾಗುತ್ತಿಲ್ಲ.
ಈ ಒಂದು ತಿಂಗಳು ನಮ್ಮಿಬ್ಬರ ಜೀವನದಲ್ಲಿ ಅಮೂಲ್ಯವಾದ ದಿನಗಳು.
ಹೌದು ನೀನು ನಿನ್ನ ಗುರಿ ಮುಟ್ಟಲು..ನಾನು ನನ್ನ ಹೆತ್ತವರೊಂದಿಗೆ ಕಡೆಯ ದಿನಗಳನ್ನು ಕಳೆಯಲು.
ಮೌನದ ತೇರಿಗೆ ನೆನಪುಗಳೇ ರಾಯಭಾರಿ..
ಕಾಯುವೇ ಗೆಳೆಯ ನೀ ಬಂದು ಕರೆಯುವ ದಾರಿಯನು..
ಕೊಂಚ ಮನಸ್ಸು ಮಾಡು..ನನ್ನಿ ನಿರ್ಧಾರಕ್ಕೆ ಬೆಂಬಲಿಸು.ಇಂದು ಸಂಜೆ ಊರಿಗೆ ಪ್ರಯಾಣಿಸುತ್ತಿರುವೇ..
ಇಂತಿ ನಿನ್ನವಳು ಸಿಲ್ವಿ..."
"ಈ ಸಂಜೆ ನನ್ನ ಬದುಕನ್ನು ನಿರ್ಧರಿಸಿದರೆ ಅದರ ನಿರ್ಣಾಯಕ ನೀನೆ...
ಭಾನು ಬಾಗಿರುವುದು ಭಾರದಿಂದಲ್ಲ. ಭುವಿಯ ಬಾಂಧವ್ಯ ಬೆಸೆಯಲು..
ಮನು ನಾನು ನಿನ್ನ ತುಂಬಾ ಪ್ರೀತಿಸ್ತೀನಿ ನಿನ್ನ ಬಿಟ್ಟು ಒಂದು ಕ್ಷಣನು ನನ್ನಿಂದ ಇರೋಕಾಗಲ್ಲ ನೀನು ಹೊಡೆದಿರುವುದು ನನಗೆ ಬೇಜಾರಿಲ್ಲ. ಆದರೆ ನೀನಾಡಿದ ಮಾತು ನನ್ನನ್ನು ತುಂಬಾ ಕಾಡುತ್ತಿದೆ.
ನನಗೆ ತಂದೆ ತಾಯಿ ಯಾವುದಕ್ಕೂ ಇಲ್ಲ ಎಂದವರಲ್ಲ. ನಾನು ಕೇಳಿದ್ದೆಲ್ಲವೂ ನನಗೆ ಸಿಕ್ಕಿದೆ ಆದರೆ ಅವರಿಗೇನು ಗೊತ್ತು ನಾನು ಬಯಸಿದ ಪ್ರೀತಿ ಕೊಡಲು ಅವರು ಮರೆತರು.
ಆ ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ.
ನಂಗೊತ್ತು ಒಬ್ಬರನ್ನೊಬ್ಬರು ಪ್ರೀತಿಸಿದರೆ ಮಾತ್ರ ಜೀವನ. ಅಂತಹ ಜೀವನ ನನಗಿಲ್ಲ,
ಆದರೂ ಸಣ್ಣದೊಂದು ಆಸೆ, ಒಂದು ಅವಕಾಶ ನೀನು ನೀಡುವುದಾದರೆ ನಾನು ಜೀವಂತವಾಗಿರುವೆ ಇಲ್ಲದಿದ್ದರೆ ನಾನು ನನ್ನ ಬದುಕನ್ನು ಅಂತ್ಯಗೊಳಿಸಲು ಸಿದ್ದಳಿರುವೆ.
ಸಂಜೆ ಒಂಭತ್ತರ ತನಕ ನೀಲಾವರಿ ಬೆಟ್ಟದಲ್ಲಿ ನಿನಗಾಗಿ ಕೈಯಲ್ಲಿ ಜೀವ ಹಿಡಿದು ಕಾದಿರುವೆ..
ಇಂತಿ ನಿನ್ನ ಪ್ರೀತಿಯ ಮಂದಿರಾ"
ಏಕ ಕಾಲದಲ್ಲಿ ಬಂದ ಎರಡು ಮೆಸೇಜ್ ಗಳು ಮನುವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದವು..
ಸ್ವಲ್ಪ ಯಾಮಾರಿದರೂ ಪರಿಸ್ಥಿತಿ ಕೈ ಮೀರಿ ಹೋಗುವುದು.ಎರಡೂ ಸನ್ನಿವೇಶವನ್ನು ಬಹು ಜಾಗರೂಕತೆಯಿಂದ ನಿಭಾಯಿಸಬೇಕೆಂಬುದು ಮನುವಿಗೆ ತಿಳಿದಿತ್ತು.
ಮನದಲ್ಲಿ ಏನೋ ಲೆಕ್ಕಾಚಾರ ಹಾಕಿದವನು ಗಿರಿಧಾಮ ಪಕ್ಕದ ನೀಲಾವರಿ ಬೆಟ್ಟದತ್ತ ಹೊರಟನು....
ನಿರ್ಜನವಾದ ಆ ರಾತ್ರಿಯಲ್ಲಿ ಹುಣ್ಣಿಮೆಯು ಹಾಲು ಬೆಳಕು ಸೂಸಿತ್ತು. ಅಲ್ಲಿ ಯಾರು ಇದ್ದಂತಿರಲಿಲ್ಲ,ಕಡಿದಾದ ಬೆಟ್ಟ ಒಂದು ಕಡೆಗೆ ಬಾಗಿತ್ತು.ಕಮರಿಯ ಆಳ ಸುಮಾರು ೧೨೦ ರಿಂದ ೧೫೦ ಅಡಿ ಇರಬಹುದು.
ಮಂದಿರಾ ಅಲ್ಲೆಲ್ಲು ಕಾಣದ ಕಾರಣ ಪಕ್ಕದಲ್ಲೆ ಇದ್ದ ಮರವೇರಿ ಸುತ್ತಲೂ ಕಣ್ಣು ಹಾಯಿಸಿದ.
ಕೃಷ್ಣ ಸುಂದರಿ ವಸ್ತ್ರಲಂಕಾರದಲ್ಲಿ ಕಂಗೊಳಿಸುತ್ತಿದ್ದಳು.ಇವಳು ಸಹ ಮಧುವಣಗಿತ್ತಿ ತರಹ ಅಲಂಕಾರ ಮಾಡಿ ಕೊಂಡಿರುವಳು.
ಮನು ಮರದಿಂದಿಳಿದು ನೇರವಾಗಿ ಅವಳತ್ತ ಹೆಜ್ಜೆ ಹಾಕಿದ.
ಅಶ್ಚರ್ಯವೆನ್ನವಂತೆ ಅಲ್ಲಿ ಯಾರಿರಲಿಲ್ಲ. ಭಯದಲ್ಲಿ ಅವನ ಎದೆ ಹೊಡೆದು ಕೊಳ್ಳುತ್ತಿತ್ತು ಮತ್ತೆ ಮಂದಿರಾ ....ಮಂದಿರಾ...ಎನ್ನುತ್ತ ಬೆಟ್ಟದ ತುದಿ ಏರಿ ಕಮರಿಯ ಕಡೆ ಇಣುಕಿದ....
"ನೀನು ಬಂದೇ ಬರ್ತಿಯಾ ಅಂತ ಗೊತ್ತು ಕಾಣೋ"
ಹಿಂದಿನಿಂದ ತಬ್ಬಿಕೊಂಡಳು ಮಂದಿರಾ... ಮನುವಿಗೆ ಹೋದ ಜೀವ ಬಂದಂತಾಯಿತು...
ಅವನು ಅವಳನ್ನು ವಿರೋಧಿಸಲಿಲ್ಲ... ಅವಳ ಮನಸ್ಸೊ ಇಚ್ಚೆಯಂತೆ ಅವನನ್ನು ಮುದ್ದಿಸಿದಳು.
ಮನು ಕಲ್ಲು ಬಂಡೆಯಂತೆ ನಿಂತಿದ್ದ..ಅವನ ಕಣ್ಣುಗಳಿಂದ ಉದುರಿದ ಬಾಷ್ಪ ಮಂದಿರಾನ ಕೆನ್ನೆ ಸವರಿತು.
ಏನಾಯಿತು ಮನು ಯಾಕೆ ಅಳುತ್ತಿದ್ದಿ?
ಮನು ಅವಳ ಕೈ ಹಿಡಿದು ಸ್ವಲ್ಪ ದೂರ ನಡೆದ..
ಅವರಿಬ್ಬರೂ ಅಲ್ಲೆ ಕಲ್ಲಿನ ಮೇಲೆ ಕುಳಿತರು..
ಮನು ಮಾತಾಡತೊಡಗಿದ.
ಮಂದಿರಾ ...ನನ್ನ ಎಷ್ಟು ಪ್ರೀತಿಸ್ತಿಯಾ?
ಮಂದಿರಾ: ತಂಬಾನೇ....ಮನು ನಿನ್ನ ಬಿಟ್ಟಿರೋಕೆ ಸಾಧ್ಯವಿಲ್ಲ ಕಾಣೋ
ಮನು: ನಾನು ಸಹ ಅವಳನ್ನ ಬಿಟ್ಟು ನಿನ್ ಜೋತೆ ಹೇಗಿರಲಿ..
ನಿಂಗೆ ಒಂದ ದಿನನೂ ನಂಗೂ ಒಂದು ಮನಸ್ಸಿದೆ ಅಂತ ಅನಿಸಲಿಲ್ಲವೇ?
ಮಂದಿರಾ: ಯಾಕೆ ನೀನು ಯಾರನ್ನಾದರೂ ಪ್ರೀತಿಸ್ತಿದ್ದಿಯಾ?
ಮನು: ಹೌದು..
ಮಂದಿರಾ: ಹಾಗಾದ್ರೆ ನನಗು ನಿನಗು ಏನು ಸಂಬಂಧ ಮತ್ಯಾಕೆ ಈ ನಡು ರಾತ್ರಿಯಲ್ಲಿ ಬಂದೆ?
ಮನು: ನಾನು ನಿನ್ನ ಭಾವನೆಗಳಿಗೆ ಬೆಲೆ ಕೊಟ್ಟು ಬಂದೆ..ತಪ್ಪೆ? ಹಾಗಾದರೆ ಪ್ರೀತಿಗಿರುವುದು ಒಂದೇ ಮುಖನಾ?
ಮಂದಿರಾ: ನಿನ್ನ ಪ್ರೀತಿಗೆ ಹತ್ತು ಹಲವು ಮುಖವಿರಬಹುದು. ಅದರೆ ನನ್ನ ಪ್ರೀತಿಗೆ ಒಂದೇ ಮುಖ..ನೀನಂದು ಕೊಂಡಂತೆ ನಾನೇನು ಹೇಡಿಯಲ್ಲ.. ಅದರೂ ನಾನು ನನ್ನ ಮನಸ್ಸಿನ ಹತೋಟೆ ಕಳೆದುಕೊಂಡಿದ್ದು ಸುಳ್ಳಲ್ಲ. ಒಮ್ಮೊಮ್ಮೆ ನೀನಿಲ್ಲದ ಈ ಜಗತ್ತು ಬರಿ ಶೂನ್ಯ ಅನಿಸಿಬಿಡುತ್ತೆ. ನಿನ್ನಷ್ಟು ಮಾನಸಿಕ ಸ್ಥೈರ್ಯ ನನ್ನಲಿಲ್ಲ..ಪ್ಲೀಸ್ ಅಳು ಬರುತ್ತೆ ನನ್ನ ಬಿಟ್ಟು ಹೋಗಬೇಡ...
ಮನು: ಇಲ್ಲ ಪುಟ್ಟ..ನಾನೆಂದು ನಿನ್ನ ಸ್ನೇಹಿತನೆ..ಆದರೆ ನೀನಂದು ಕೊಂಡಂತೆ ಪ್ರೇಮಿಯ ಸ್ಥಾನ ಆಲಂಕರಿಸಲಾರೆ.
ಇನ್ನಾದರೂ ನಿನ್ನ ಹುಚ್ಚಾಟವನ್ನು ಬಿಡಬಹುದು ತಾನೇ?
ಮಂದಿರಾ: ಹಾ...ಈ ಹುಚ್ಚು ಹುಡುಗಿ ನಿನ್ನ ಮರೆತು ಬಿಡುತ್ತಾಳೆ..ಹೆಣ್ಣು ಈ ಸಮಾಜದಲ್ಲಿ ಏನು ಬಯಸಿದರೂ ತಪ್ಪೆ.ಅವಳಿಗೆ ಏನು ಸಿಗುತ್ತದೋ ಅದರಲ್ಲಿ ತೃಪ್ತಿ ಕಾಣಬೇಕು.. ಅಲ್ಲವೇ..
ಅವರಿಬ್ಬರ ತರ್ಕ ಅಂತ್ಯವಿಲ್ಲದ್ದು. ಮೌನಿಯಾದ ಮನು ಆಕಾಶದ ಕಡೆ ಮಖಮಾಡಿ ಯೋಚಿಸುತ್ತಿದ್ದರೆ ಮಂದಿರಾ ಅವನ ಹೆಗಲಿಗೊರಗಿ ಕುಳಿತ್ತಿದ್ದಳು.
ಹುಣ್ಣಿಮೆಯ ಬೆಳದಿಂಗಳಲ್ಲಿ ನಕ್ಷತ್ರಗಳು ಕಣ್ಣಮುಚ್ಚಾಲೆ ಆಡುತ್ತಿದ್ದರೆ ಅದರಲ್ಲೊಂದು ನಕ್ಷತ್ರ ಕಾಲು ಜಾರಿ ಭುವಿಯತ್ತ ಓಡೋಡಿ ಬರುತ್ತಿತ್ತು.
ಮನು ಮಂದಿರಾನ ಸಮಧಾನಿಸತೊಡಗಿದ...ಏಳು ..ನಾವಿಲ್ಲಿರುವುದು ಸರಿಯಲ್ಲ..ಯಾರಾದರೂ ನೋಡಿದರೂ ಚೆನ್ನಾಗಿರಲ್ಲ..
ಬಾ...ಹೋಗೋಣ ಎಂದು ಕೈ ಹಿಡಿದುಕೊಂಡ..
ಮಂದಿರಾಗೆ ಬೇರೆ ದಾರಿ ಇರಲಿಲ್ಲ ಅವನೊಂದಿಗೆ ನಡೆದಳು.ಅವಳನ್ನು ಹಾಸ್ಟೆಲ್ ಗೆ ಬಿಟ್ಟು ಮತ್ತೆ ಸ್ವಲ್ಪ ಸಮಧಾನ ಹೇಳಿ ಅಲ್ಲಿಂದ ಹೊರಟ.
ರಾತ್ರಿ ೨ ಘಂಟೆ ಇರಬಹುದು ,.ಗುಸು ಗುಸು ಪಿಸು ಮಾತು ಕೇಳಿ ಮನು ಗಕ್ಕನೆ ನಿಂತ..ನೀಲಾವರಿ ಬೆಟ್ಟದಿಂದ ಹಿಡಿದು ಗಿರಿಧಾಮದವರೆಗೆ ಯಾವುದೇ ಜನವಸತಿ ಇರಲಿಲ್ಲ..
ಆದರೂ ಐದಾರು ಜನರ ಗುಂಪೊಂದು ಬೆಂಕಿ ಹಾಕಿಕೊಂಡು ಮಾತಾಡುತ್ತಿದ್ದರು. ಕೈಯಲ್ಲಿದ್ದ ನಾಡ ಕೋವಿಗಳು ಅವರನ್ನು ಬೇಟೆಗಾರರೆಂದು ಉಹಿಸಲು ಅಸಾಧ್ಯವಾಗಲಿಲ್ಲ.
ಮನುವನ್ನು ತಡೆದು ಹೀಗೆಲ್ಲ ತಿರುಗಾಡಬೇಡ..ಬೇಗ ಮನೆ ಸೇರಿಕೊ..ನಾವು ನಕ್ಸಲೇಟ್ ಯಾರಿಗೂ ನಮ್ಮ ಬಗ್ಗೆ ಹೇಳಬೇಡ ಎಂದು ಸೂಚಿಸಿದರು.. ತರಾತುರಿಯಲ್ಲಿ ಮನೋಹರ ಹಾಸ್ಟೆಲ್ ಸೇರಿಕೊಂಡ.
ಮುಂದಿನ ಒಂದಿಪ್ಪತ್ತು ದಿನಗಳು ಎಲ್ಲಾ ಮಾಮೂಲಿನಂತೆ ಇದ್ದವು.ಎಲ್ಲರೂ ಅವರವರ ಎಗ್ಸಾಂನಲ್ಲಿ ಬ್ಯುಸಿ..ಸಿಲ್ವಿಯ ಸುಳಿವು ಸುಳಿದಿರಲಿಲ್ಲ..
ಮನೋಹರ ತುಂಬಾ ಖುಷಿಯಾಗಿದ್ದ..ಇವತ್ತು ಅವನ ಕೊನೆಯ ಪರೀಕ್ಷೆ,ಇನ್ನೆನು ನಾಳೆ ಅವಳು ಬಂದು ಸೇರುವಳು..
ಕಡೆಯ ಪರೀಕ್ಷೆ ಮುಗಿಸಿದ್ದ ಮನು ನಾಪತ್ತೆಯಾಗಿದ್ದ.
ಸಿಲ್ವಿಯಲ್ಲಾದ ಬದಲಾವಣೆ ಅವಳ ಚಿಕ್ಕಮ್ಮನನ್ನು ಅನುಮಾನಕ್ಕಿಡುಮಾಡಿತ್ತು..ಪರೀಕ್ಷೆ ಪೋಸ್ಟಪೋನ್ ಅಗಿತ್ತೆಂದು ಸುಳ್ಳು ಹೇಳಿದ್ದಳು.ಅವರು ಅವಳ ಬ್ಯಾಗ್ ಪರಿಶೀಲಿಸಿದಾಗ ಕರಮಣಿ ಸರ ಅವರನ್ನು ಬೆಚ್ಚಿ ಬೀಳಿಸಿತ್ತು.
ಇತ್ತ ಸಿಲ್ವಿ ದೈಹಿಕವಾಗಿ ಬದಲಾಗಿದ್ದಳು.ವಿಪರೀತ ಸುಸ್ತು ,ತಲೆ ಸುತ್ತು ಏನೇನೋ ಸೂಚನೆ ನೀಡುತ್ತಿತ್ತು.
ಇನ್ನು ಮುಚ್ಚಿಡಲು ಭಯವಾದಗ ಚಿಕ್ಕಮ್ಮನೊಂದಿಗೆ ಎಲ್ಲಾ ಹೇಳಿ ಕೊಂಡಿದ್ದಳು.
ಅವರು ಯಾರಿಗೂ ತಿಳಿಯದಂತೆ ಸಿಲ್ವಿಯೊಂದಿಗೆ ಮನುವಿನ ಮೀಟ್ ಮಾಡಲು ಹೊರಟರು.
ಅದರೆ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿತ್ತು.. ಮನು ಸಿಲ್ವಿಗೆ ಕೈಕೊಟ್ಟು ತಲೆಮರೆಸಿಕೊಂಡಿರುವನು ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಯಾರು ಹಬ್ಬಿಸಿರುವರು ಎನ್ನುವುದಕ್ಕೆ ಆಧಾರವಿಲ್ಲ.. ಮನುವಿನ ಗೈರು ಅದಕ್ಕೆ ಪುಷ್ಟಿ ನೀಡುತ್ತಿತ್ತು.
ಯಾವುದೇ ಸುಳಿ ಸಿಗದ ಅವರು ಅಳುತ್ತ ಹಿಂದಿರುಗಿದರು.
ಸಿಲ್ವಿಯ ಅಳುವಿನ ರೋಧನ ತಾಯಿಗೆ ಸಹಿಸಲಾಗಲಿಲ್ಲ.ಹೀಗೆ ಮನುವಿನ ಹುಡುಕಾಟದಲ್ಲಿ ಒಂದು ವಾರ ಕಳೆದಿದ್ದರು. ಸಂದರ್ಭಕ್ಕನುಗುಣವಾಗಿ ಅವರ ಸಮಯ ಪ್ರಜ್ಞೆ ಕೆಲಸಮಾಡಿತು.ಸಿಲ್ವಿಯ ಜೀವನ ಹಾಳಾಗುವುದು ಅವರಿಗಿಷ್ಟವಿರಲಿಲ್ಲ.
ಜಾನ್ ಅವರ ದೂರ ಸಂಬಂಧಿ ತನ್ನದೆ ಸ್ವಂತ ಬ್ಯುಸಿನೆಸ್ ಮಾಡಿಕೊಂಡಿದ್ದ..ಅವಸರವಸರದಲ್ಲಿ ಮದುವೆಗೆ ಸಿದ್ದತೆ ಮಾಡಿಸಿದರು.
ಆತ್ಮಹತ್ಯೆಯ ಯೋಚನೆ ತಲೆಯಲ್ಲಿ ಸುಳಿದು ಸುಳಿದು ಮಾಯವಾಗುತ್ತಿತ್ತು.ಮನು ಮಾಡಿದ ಮೋಸದಿಂದ ಮನಸ್ಸು ಘಾಸಿಯಾಗಿತ್ತಾದರೂ...ಇನ್ನೊಂದು ಜೀವವನ್ನು ಸಾಯಿಸಲು ಅವಳಿಗೇನು ಹಕ್ಕಿದೆ?
ವಿಜೃಂಭಣೆಯ ಆಚರಣೆಯಲ್ಲಿ ಮುಗಿದ ಮದುವೆ ಅಂತೋನಿ ಕುಟುಂಬಕ್ಕೆ ಉಲ್ಲಾಸ ನೀಡಿದರೆ ಸಿಲ್ವಿಗೆ
ನುಂಗಲಾರದ ಬಿಸಿ ತುಪ್ಪ.ಒಳಗೊಳಗೆ ನೊಂದಳು,ಒಡಲೊಳಗೆ ಅತ್ತಳು.
ಹೆಣ್ಣಿನ ಜೀವನ ಕನ್ನಡಿಯಿದ್ದಂತೆ ಅದಕ್ಕೊಂದು ಪ್ರೇಮ್ ಇದ್ದರೇನೆ ಚಂದ..ಇಲ್ಲಾ ಇಲ್ಲಾ ಅದೊಂದು ಸುಂದರ ಭಾವಚಿತ್ರ ಯಾವ ಪ್ರೇಮ್ ಹಾಕಿದರೂ ಹೊಂದಿಕೊಂಡು ಬಿಡುತ್ತೆ..ಒಮ್ಮೆ ಹೊಂದಿಕೊಂಡರೆ...ಆ ಚೌಕಟ್ಟೆ ಅವಳಿಗೆ ರಕ್ಷಣೆ..ಅವಳು ಯಾವತ್ತೂ ಆ ಚೌಕಟ್ಟನ್ನು ಮೀರಿ ಹೊರಬರಲು ಮನಸ್ಸು ಮಾಡಳು..
ಅವಳಗೀಗ ಏಳುವರೆ ತಿಂಗಳು ಲೆಕ್ಕಚಾರ ಏನೇ ಇರಲಿ...ಮುದ್ದಾದ ಮಗು..ಎಲ್ಲರ ನಗುವಿಗೆ ಕಾರಣ..ಅತಿ ಸಂಭ್ರಮ ಪಟ್ಟವರ ಪಟ್ಟಿಯಲ್ಲಿ ಜಾನ್ ಮೊದಲನೆಯವ..ಚಿಕ್ಕಮ್ಮ ಅರಿತೆ ಬಾಣಂತನ ಮಾಡಿದರು.
ಛಲ ಬಿಡದ ಸಿಲ್ವಿ ಇಂಜಿನಿಯರಿಂಗ್ ನ ಕೊನೆಯ ಸೆಮಿಸ್ಟರ್ ಮುಗಿಸಿದ್ದಳು.. ಮಾರ್ಕ್ಸ್ ಕಾರ್ಡಗಾಗಿ ಕಾಲೇಜಿಗೆ ಬಂದಿದ್ದವಳಿಗೆ ಇದಿರಾದವನು ಮನೋಹರ್.
ತನ್ನ ಕಣ್ಣನ್ನು ತಾನೆ ನಂಬಲಾಗಲಿಲ್ಲ.
ಜನ್ಮ ಜನ್ಮಾಂತರದ ಬಾಂಧವ್ಯ ಸಾರಿ ಹೇಳುತ್ತಿತ್ತು.ಕೊರಳಲ್ಲಿರುವ ತಾಳಿ..
ಹತ್ತಿರ ಬಂದ ಮನುವಿನ ಮಧ್ಯ ತನ್ನ ಬ್ಯಾಗ್ ಹಿಡಿದು ಅಂತರ ಕಾಯ್ದುಕೊಂಡಳು.ರೋಷದಿಂದ ಅವಳ ರಕ್ತ ಕುದಿಯುತ್ತಿತ್ತು. ಕೈ ಹಿಡಿದ ಮನುವನ್ನೊಮ್ಮೆ ದಿಟ್ಟಿಸಿ ನೋಡಿದಳು, ಅದೇ ಮುಗ್ದ ಹುಡುಗ ನನ್ನವನು...ಯಾಕೊ ಅವಳ ಕೋಪ ಹೆಚ್ಚು ಹೊತ್ತು ನಿಲ್ಲಲಿಲ್ಲ....ಅವಳನ್ನು ಕಾಫಿ ಶಾಪ್ ಗೆ ಕರೆದು ಕಾರಣ ಕೇಳದಿದ್ದರೂ ಎಲ್ಲವನ್ನು ಹೇಳತೊಡಗಿದ..
ಅಂದು ನನ್ನ ಕೊನೆಯ ಪರೀಕ್ಷೆ.. ಎಷ್ಟು ಖಷಿಯಾಗಿದ್ದೆ..ನಿನ್ನ ನೋಡಲು ತುದಿಗಾಲಲ್ಲಿ ನಿಂತಿದ್ದೆ.ಬೆಳ್ಳಂಬೆಳೆಗೆ ೪:೩೦ ರ ಬಸ್ಸಗೆ ತುಸು ಬೇಗನೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದೆ.
ಯಾವದೋ ಗುಂಪೊಂದು ನನ್ನ ಕಿಡ್ನಪ್ ಮಾಡಿತ್ತು.ಎಚ್ಚರವಾದಗ ದಟ್ಟ ಕಾಡಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಢಕಾಯಿತರ ಮಧ್ಯ ನಾನಿದ್ದೆ..
ನಾನೆ ಮಾಡಿಕೊಂಡ ಎಡವಟ್ಟು ಅದರಲ್ಲಿ ಐದಾರು ಜನ ಪರಿಚಿತರು...ನೀವು ನಕ್ಸಲೇಟ್ ಅಲ್ಲವೇ ಎಂದು ಕೇಳಿದ್ದೆ..
ಸುಮಾರು ಹತ್ತು ದಿನಗಳ ಕಾಲ ನನ್ನನ್ನು ಕೂಡಿ ಹಾಕಿದ್ದರು..
ಮತ್ತೆಲ್ಲಿಗೋ ನನ್ನ ಸಾಗಿಸಿದರು.. ಗುಜರಾತ್ ನ ಸ್ಥಳಿಯ ಕೋರ್ಟ್ ನನಗೆ ೧೪ ತಿಂಗಳ ಶಿಕ್ಷೆ ವಿಧಿಸಿತ್ತು.ಕಾರಣ ಕೇಳಿದ್ದಕ್ಕೆ ನಾನೊಬ್ಬ ನಕ್ಸಲೇಟ್..
ಜಾಮೀನಿಗಾಗಿ ನನ್ನ ಅಪ್ಪ ಅಮ್ಮ ತಮ್ಮ ಅಲ್ಲಿಯ ತನಕ ಬಂದಿದ್ದರೂ ಯಾವುದೇ ಉಪಯೋಗವಾಗಲಿಲ್ಲ.
ಪರಿಸ್ಥಿತಿ ನೋಡು ಒಮ್ಮೊಮ್ಮೆ ನಮ್ಮ ತಪ್ಪು ಸರಿ ಯಾವುದು ಪರಿಗಣನೆಗೆ ಬರಲ್ಲ.
ಮಂದಿರಾ ಹೇಳಿದಳು ನೀನು ಪುನಃ ಪರೀಕ್ಷೆ ಬರೆದೆ ಅಂತ.
ಅಬ್ಬಾ ದೇವರು ದೊಡ್ಡವನು.ನನಗೆ ಎಷ್ಟೇ ನೋವು ಕೊಟ್ಟರು.. ನಿನ್ನನ್ನು ದೂರ ಮಾಡಲಿಲ್ಲ...
ನೀನು ಹೇಗಿದ್ದಿ ಸಿಲ್ವಿ..ತುಂಬ ನೋವು ಕೊಟ್ಟು ಬಿಟ್ಟೆ ಅಲ್ವಾ...
ಸಿಲ್ವಿ ನಗುತ್ತ ತನ್ನ ಬಗ್ಗೆ ಒಂದಿಂಚು ಮಾಹಿತಿ ಬಿಟ್ಟು ಕೊಡದೆ
"ಮನು..ಯಾರು ನನ್ನಿಂದ ನಿನ್ನನ್ನು ದೂರ ಮಾಡಲಾರರು..
ಈ ಒಂದುವರೆ ವರ್ಷದಲ್ಲಿ ನಿನಗಾಗಿ ಹಂಬಲಿಸದೆ ಇರುವ ದಿನವಿಲ್ಲ.. ನಮ್ಮಿಬ್ಬರ ಕಷ್ಟ ಮುಗಿಯಿತು...ಇನ್ನು ಸುಖದ ದಿನಗಳು..ನಮ್ಮ ಮನೆಯಲ್ಲು ಒಪ್ಪಿದ್ದಾರೆ. ಇನ್ನು ಹತ್ತು ದಿನಗಳು ಇಲ್ಲೆ ಮೀಟ್ ಮಾಡೋಣ..ನಾನು ಎಲ್ಲಾ ಸಿದ್ದತೆ ಮಾಡಿಕೊಳ್ಳುವೆ..ಅಲ್ಲಿ ತನಕ ನನಗೆ ಪೋನ್ ಮಾಡು ಎಂದು ಪೋನ್ ನಂಬರ್ ನೀಡಿದ್ದಳು..
ಅವರಿಬ್ಬರ ಊರು ಸುಮಾರು ೨೦ ಕಿ ಮಿ ಅಕ್ಕ ಪಕ್ಕದಲ್ಲಿತ್ತು..ಇಬ್ನರೂ ಒಂದೇ ಬಸ್ಸನಲಿ ಕೈ.ಕೈ ಹಿಡಿದು ಊರಿಗೆ ಬಂದಿದ್ದರು..
ಸಿಲ್ವಿ ತುಂಬ ಜಾಗರೂಕತೆಯಿಂದ ಸನ್ನಿವೇಶವನ್ನು ನಿಭಾಯಿಸಿದಳು. ಅವಳಿಗೆ ಎಲ್ಲವೂ ಅರಿವಾಗಿತ್ತು.ಇಲ್ಲಿ ಮನುವಿನ ಯಾವ ತಪ್ಪು ಇಲ್ಲ.. ಅವಳ ಜೀವನದ ಇಂಚಿಂಚು ಘಟನೆ ಅವನಿಗೆ ಹೇಳುವ ಮನಸ್ಸು ಮಾಡಲಿಲ್ಲ..ಹೇಳಿದರೂ ಏನು ಪ್ರಯೋಜನ..ನನ್ನ ಹಣೆಯಲ್ಲಿ ಬರೆದಿರುವುದೆ ಇಷ್ಟು . ಎಲ್ಲವನ್ನ ಹೇಳಿ ಅವನ ಜೀವನವಿಡಿ ಕೊರಗುವಂತೆ ಮಾಡುವುದಕ್ಕಿಂತ ನಾನು ಮೋಸಗಾರ್ತಿ ಆಗುವುದೇ ಲೇಸು...ನನ್ನ ದ್ವೇಷಿಸಿಯಾದರೂ ಅವನ ಜೀವನ ರೂಪುಗೊಳ್ಳಲಿ.. ಮನಸ್ಸು ಮನುವನ್ನೆ ಬಯಸುತ್ತಿದ್ದರೂ ,,ಜೀವನದಲ್ಲಿ ಅವನು ಎಂದೋ ಮುಗಿದು ಹೋದ ಅಧ್ಯಾಯ..
ಪ್ರತಿದಿನ ಮನುವಿನೊಂದಿಗೆ ಮುದ್ದು ಮುದ್ದಾಗಿ ಮಾತನಾಡುತ್ತಿದ್ದಳು...ಇಂದು ಮೊಬೈಲ್ ಸ್ವಿಚ್ಚಡ್ ಆಪ್..
ಮನುವಿಗೆ ಒಂದು ತೋಚಲಿಲ್ಲ..ಅವಳು ನಿಗದಿಪಡಿಸಿದ ಸ್ಥಳದಲ್ಲೂ ಅವಳಿಲ್ಲ..ಅಂತೂ ಹುಡುಕಾಡಿ ಅವಳ ಮನೆಗೆ ಹೋದ ಮನುವಿಗೆ ಅವಳ ಚಿಕ್ಕಮ್ಮನ ಮಾತು ಕೇಳಿ ಸಿಡಿಲು ಬಡಿದಂತಾಯ್ತು..
"ಸಿಲ್ವಿಗೆ ಮೊನ್ನೆಯಷ್ಟೆ ಮದುವೆಯಾಯ್ತ... ಹುಡುಗ ಫ್ರಾನ್ಸ್‌ನಲ್ಲಿ ಬ್ಯುಸಿನೆಸ್ ಮ್ಯಾನ್..ಮದುವೆಯಾಗಿ ವಿದೇಶಕ್ಕೆ ತೆರಳಿದರು". ನಂಬದಾದ ನನಗೆ ಸಾಕ್ಷಿ ಸಮೇತ ಪೋಟೊ ಮುಂದಿಟ್ಟರು..
ಇದೇನು ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ..ನಿನ್ನೆಯವರೆಗೂ ನನ್ನ ಜೊತೆ ಮುದ್ದು ಮುದ್ದಾಗಿ ಮಾತಾಡಿಕೊಂಡಿದ್ದಳು..
ಅವಳಿಗೆ ಇನ್ನೊಂದು ಮದುವೇನಾ?
ಅವಳು ನನ್ನನ್ನು ತಿರಸ್ಕರಿಸುವವಳಾಗಿದ್ದರೆ ಮೊನ್ನೆ ಮೊನ್ನೆ ವರೆಗೂ ತಾಳಿಯನ್ನೆಕೆ ಇಟ್ಟುಕೊಂಡಿದ್ದಳು.
ಹೌದು..ಕೆಲವೊಂದು ಪ್ರಶ್ನೆ ಪ್ರಶ್ನೆಯಾಗಿದ್ದರೆ ಚಂದ.ಒಂದಂತು ಸತ್ಯ ಅವಳಿಗೆ ನನ್ನ ಅವಶ್ಯಕತೆಯಿಲ್ಲ.ಇದ್ದಿದ್ದರೆ ನನ್ನೊಂದಿಗೆ ಇರುತ್ತಿದ್ದಳು.
ಎಲ್ಲಾ ಖುಷಿಯಾಗಿರಬೇಕಿದ್ದರೆ ನಾನೊಬ್ಬ ದುಃಖಿಯಗಿ ಅಳುವುದು ಎಷ್ಟು ಸರಿ ..
ನಾನು ನನ್ನ ಜವಬ್ದಾರಿ ಮರೆಯುವ ಹಾಗಿಲ್ಲ..ಮನೆ ಪರಿಸ್ಥಿತಿನ ಸ್ವಲ್ಪ ಸುಧಾರಿಸಬೇಕು.ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು.. ಅಮೇಲೆ ನನ್ನ ಜೀವನ ...
ಕೈ ತಪ್ಪಿ ಹೋದ ಕ್ಯಾಂಪಸ್ ಸೆಲೆಕ್ಷನ್..ಕೈಕೊಟ್ಟ ಮಡದಿ..ಎಲ್ಲವನ್ನು ಮರೆತು ಹೊಸ ಜೀವನಕ್ಕೆ ಕಾಲಿಟ್ಟಿದ್ದ ಮನು..
ಬೆಂಗಳೂರಿನಂತ ಮಹಾನಗರದಲ್ಲಿ ಕೆಲಸಕ್ಕೇನು ಬರವಿರಲಿಲ್ಲ.. ಓದಿಗೆ ತಕ್ಕ ಕೆಲಸವೂ ಸಿಕ್ಕಿತು.. ಮೊದಲೆಲ್ಲ ಮನುವಿಗೆ ಸಿಲ್ವಿ ಕನಸಾಗಿ ಕಾಡುತ್ತಿದ್ದಳು..ಬರು ಬರುತ್ತ ಕನಸು ಮಸುಕಾಗಿತ್ತು..ಅದರೆ ಎಂದೂ ಅವಳನ್ನ ಮರೆತವನಲ್ಲ..ಅದಕ್ಕೆ ಇನ್ನು ಮದುವೆಯಾಗದಿರುವುದೆ ಸಾಕ್ಷಿ.. ಈ ಆರು ವರ್ಷದಲ್ಲಿ ಅವಳು ಅವನಿಂದ ತುಂಬ ದೂರ ಹೋಗಿದ್ದಳು..ಇಂದೇಕೊ ಅವಳ ನೆನಪು ಬಹಳ ಕಾಡಿ ಕುಸಿದು ಕುಳಿತ..
ಹೌದು ಅವಳೇ.. ನಾನು ತಿರುಗಿ ನೋಡಿದ್ದು..ಅವಳು ನೋಡಿದ್ದಾಳೆ..
ಛೆ...ಬೇರೆಯಾರದರು...
ಇಲ್ಲಾ ..ಅವಳ ನೋಟ ನನ್ನ ಅಣುಕಿಸುತ್ತಿತ್ತು.
ಮೈ ಜುಮ್ ಅನ್ನುವಂತಾಯಿತು..ಅವಳು ಇದೇ ಊರಲ್ಲಿದ್ದಾಳೆ...
ಪ್ರೀತಿಸಿದ ಹುಡುಗಿ ಮೋಸ ಮಾಡಬಹುದು.
ಆದರೆ ಕೈ ಹಿಡಿದವಳು ಮೋಸ ಮಾಡುವಳೇ..
ಶಾಂತವಾಗಿದ್ದ ಮನುವಿನ ಬಾಳಲ್ಲಿ ಮತ್ತೆ ಸಿಲ್ವಿ ಬಿರುಗಾಳಿ ಎಬ್ಬಿಸಿದಳು..ನಾನೇಕೆ ಆಟೊ ನಿಲ್ಲಿಸಿಲ್ಲ.. ಅಂದರೆ...ಅವಳ ಪಕ್ಕದಲ್ಲಿದ್ದವನು...ಜಾನ್...ಜಾನ್ ಜಾಕಸ್ ಪೆರ್ನಾಂಡಿಸ್...
ಅಯ್ಯೊ...ಒಂದಕ್ಕೊಂದು ತಾಳೆಯಾಗುತ್ತಿದೆ..ಹೌದು ಅವಳೆ ನನ್ನ ಸಿಲ್ವಿ..
ಹೌದು ಅವರು ನಮ್ಮ ಕಂಪನಿಗೆ ಎಂ ಎಸ್ ಸ್ಟೀಲ್ ರಾಡ್ಗಳ ಸಪ್ಲೈರ್ ಜಾನ್...
ಅವರ ಮನೆ ವಿಳಾಸ ಕಲೆ ಹಾಕಲು ಅವನಿಗೇನು ಕಷ್ಟವಾಗಲಿಲ್ಲ..ನೇರವಾಗಿ ಮನೆಗೆ ಹೋಗಲು ಅವನಿಗದು ಸರಿ ಅನಿಸುತ್ತಿರಲಿಲ್ಲ..
ಜಾನ್ ಇಲ್ಲದ ಸಮಯದಲ್ಲಿ ಅವಳನ್ನು ಬೇಟಿ ಮಾಡಬೇಕು.ತುಂಬ ಸಲ ಹಿಂಬಾಲಿಸಿದ್ದ,ಕೊನೆಗೊಂದು ದಿನ ಅವಕಾಶ ತಾನಾಗಿಯೇ ಒದಗಿ ಬಂತು.
ನನಗೊತ್ತಿತ್ತು ನೀನು ಬಂದೆ ಬರುತ್ತಿಯಂತ ಆದರೆ ಇಷ್ಟು ಬೇಗ ನಿನ್ನ ಆಗಮನ ಉಹಿಸಿರಲಿಲ್ಲ..
ಆಕಸ್ಮಿಕವಾಗಿ ಸಿಕ್ಕ ಅಪ್ಪುಗೆಗೆ ಮನು ಬೆಚ್ಚಿ ಬಿದ್ದ....
ಸರಿ ತಪ್ಪುಗಳನ್ನು ಸೃಷ್ಟಿಸಿದವರಾರು..ಯಾವುದು ಸರಿ ಯಾವದು ತಪ್ಪು .. ಅತ್ಮವಂಚನೆ ಮಾಡಿಕೊಂಡು ಎಲ್ಲರ ಮೆಚ್ಚುಗೆಗಾಗಿ ಬದುಕುವುದು ಎಷ್ಟು ಸರಿ... ಆಕ್ಚವಲೀ ಅದೇ ಸರಿ.....
ನಾವು ಸಮಾಜಕ್ಕಾಗಿ ಬದುಕಬೇಕು.ಅತ್ಮವಂಚನೆಯಾದರೂ ಸರಿಯೇ ಮಾಡಿದ ತಪ್ಪನ್ನು ತಿದ್ದಿ ಬದುಕಬೇಕು.
ಮನು ರಿಯಾಲಿ ಸಾರಿ....ನಿನಗೆ ನನ್ನನ್ನ ಸಾಯಿಸಿಬಿಡುವಷ್ಟು ಕೋಪ ಇದೆಯಲ್ವಾ...
ಜೀವನ ನಾವಂದುಕೊಂಡಷ್ಟು ಸುಲಭವಲ್ಲ..ಅಂದು ನನ್ನ ಪರಿಸ್ಥಿತಿಯಲ್ಲಿ ನೀನಿದ್ದರೂ ಇದನ್ನೆ ಮಾಡುತ್ತಿದ್ದೆ...
ಯಾರು ಅರಿಯದ ಯಾರಲ್ಲೂ ಹೇಳಿಕೊಳ್ಳಲಾಗದ ಒಂದು ನಿಗೂಢ ಸತ್ಯ ಇಂದಿಗೂ ನನ್ನ ಜೀವ ಹಿಂಡುತಿದೆ..
ನಿನಂದುಕೊಂಡಂತೆ ನಾನು ನಿನಗೊಸ್ಕರ ನಿನ್ನ ಪ್ರೀತಿಗೊಸ್ಕರ ಒಂದುವರೆ ವರ್ಷ ಕಾದಿಲ್ಲಾ...ಒಂದು ವೇಳೆ ಕಾದಿದ್ದರೇ ಇದೆ ಸಮಾಜ ನನ್ನ ಚೀ... ತೂ ..ಅಂತ ಉಗಿಯುತ್ತಿತ್ತು..ಕಾರಣ ಸ್ಟಿಪನ್ ಗೆ ತಂದೆ ನೀನು...
ಈಗ ಹೇಳು ಸಮಾಜದ ಬಾಯಿಮುಚ್ಚಿ ನನಗೆ ಜೀವನ ಕೊಟ್ಟ ಜಾನ್ ಗೆ ಮೋಸ ಮಾಡಿ ನಿನ್ನ ಜೊತೆ ಬರಬೇಕಿತ್ತೆ?
ಅಥವಾ ಸತ್ಯ ಹೇಳಿದ್ದಿದ್ದರೆ ಆಗಿನ ಪರಿಸ್ಥಿತಿಯಲ್ಲಿ ನೀನು ಏನು ಮಾಡುತ್ತಿದ್ದೆ..?
ಇಂದಿಗೂ ನಿನ್ನ ಪ್ರೀತಿಸುವೆ...ಹಾಗಂತ ನಿನ್ನನ್ನು ಪಡೆಯಬೇಕೆಂಬ ಸ್ವಾರ್ಥ ನನ್ನಲಿಲ್ಲ..ತ್ಯಾಗ ಎನ್ನುವುದು ಈ ಪ್ರೀತಿಯ ಇನ್ನೊಂದು ಮುಖ.
ನಾವಂದು ಕೊಂಡಂತೆ ಜಗತ್ತನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಒಬ್ಬರನ್ನು ಪ್ರೀತಿಸಿದರೆ ...ಅವರ ಪ್ರೀತಿ ಇನ್ನೊಬ್ಬರ ಮೇಲಿರುತ್ತೆ..ಹೀಗೆ ಯಾರೋ ಯಾರನ್ನೊ ಯಾವದೋ ಕಾರಣಕ್ಕೊ ಇಷ್ಟಪಡುತ್ತಾರೆ.
ವಿಪರ್ಯಾಸವೆಂದರೆ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿಯೂ ಹೀಗಿದ್ದಿವಿ ನೋಡು.
ಅವಳ ಮಾತಿನ ಮುಂದೆ ಮನುವಿಗಿದ್ದ ಪ್ರಶ್ನಾವಳಿಗಳು ಕುಸಿದು ಬಿದ್ದವು. ಏನು ಮಾತನಾಡಬೇಕು ಅನ್ನುವುದೆ ಅವನಿಗೆ ತೋಚಲಿಲ್ಲ..
ನನ್ನ ಜೀವನದಲ್ಲಿ ಅಂತದೇನು ವ್ಯತ್ಯಾಸವಿಲ್ಲ..ಕಳೆದು ಕೊಳ್ಳಲು ಕೊಂಡುಕೊಂಡಿದ್ದೇನು ಇಲ್ಲ.
ನಿನ್ನ ಜೀವನ ಚೆನ್ನಾಗಿದೆ, ಇದು ಹೀಗೆ ಇರಲಿ..ನಾನು ಇಲ್ಲೆ ಹೆಚ್ಚು ಹೊತ್ತಿದ್ದರೆ,ಸರಿಯಲ್ಲ...
ಅವಳ ಮರು ಮಾತಿಗೆ ಕಾಯದೆ ಬಿರಬಿರನೆ ಹೊರನೆಡೆದ.
ಸ್ಟಿಪನ್ ತುಂಟ ನಗು ಅಂಗಳದಲ್ಲಿ ಕೊಂಚ ಹೊತ್ತು ಅವನ ನಿಲ್ಲಿಸಿತ್ತು.
ಅದಾವಗಲೇ ಸ್ಕೂಲ್ ಮುಗಿಸಿ ಬಂದ ಸ್ಟಿಪನ್ ಅಂಕಲ್ ಎನ್ನ ತೊಡಗಿದರಿಂದ ಮನು ಅಲ್ಲೆ ನಿಂತಿದ್ದ.
ಮಗುವಿನ ಮುಖ ದಿಟ್ಟಿಸಲಾಗದೆ...ಕೈ ಬೀಸಿ ಟಾಟಾ ಮಾಡುತ್ತ ಹೊರ ನೆಡೆದ.
ಹೌದು ಎಲ್ಲಾ ಪ್ರಶ್ನೆಗಳಿಗು ಉತ್ತರ ಸಿಕ್ಕಿದ್ದರೂ ನನ್ನ ಬದುಕು ಪ್ರಶ್ನೆಯಾಗಿಯೇ ಉಳಿದಿದೆ. ನಾನೆ ನನ್ನ ಬಗ್ಗೆ ಯೋಚಿಸದ ಮೇಲೆ ಇನ್ಯಾರು ಚಿಂತಿಸುವರು.
***
ಇಷ್ಟು ದಿನವಿಲ್ಲದ ಯೋಚನೆ ಈಗ ಸಿಲ್ವಿಯ ಮನಸ್ಸು ಆವರಿಸಿಕೊಂಡಿತ್ತು
ಹೌದು ಅವನನ್ನು ಮದುವೆಗೆ ಒಪ್ಪಿಸಲು ಸಾಧ್ಯವೇ?
ಸಾಧ್ಯವಾಗಿರುತ್ತಿದ್ದರೆ...
ನನ್ನಿಂದ ಮನುವಿಗೆ ಅನ್ಯಾಯ ಆಗಿರಬಹುದು...ನಾನೆ ಏನಾದರೂ ಮಾಡಿ ಅವನ ಜೀವನ ಸರಿಪಡಿಸಬೇಕು. ಅವನು ಒಂಟಿತನದಿಂದಲೇ ಅದೆಷ್ಟು ನೋವನ್ನು ಅನುಭವಿಸುತ್ತಿದ್ದಾನೆ.
ಈ ಕೆಲಸವನ್ನು ನಾನು ಹೇಗೆ ಮಾಡಲಿ .. ಅವನನ್ನು ಹೇಗೆ ಮತ್ತೆ ಸಂಪರ್ಕಿಸಲಿ...
ಅದೇನು ಕಷ್ಟದ ಕೆಲಸವಲ್ಲ..ಯಾರದರೂ ಕಾಲೇಜಿ ಗೆಳರಯರನ್ನು ಸಂಪರ್ಕಿಸಿದ್ದೆ ಆದಲ್ಲಿ ಅವನ ಪೋನ್ ನಂಬರ್ ನ್ನು ಪಡೆಯಬಹುದಾಗಿತ್ತು..
ಹಳೆಯ ಡೈರಿಯಲ್ಲಿ ಸುಮಾರು ನಂಬರಗಳಿದ್ದವು,ಆದರೆ ಯಾವುದರ ಮುಂದು ಖುದ್ದಾಗಿ ಹೆಸರು ನಮೂದಿಸಿಲ್ಲ..
ಅದರಲ್ಲಿ ಸುಮಾರು ಮಂದಿ ೧೦೦ ಮೆಸೆಜ್ಗಳಿಗಾಗಿ ಸಿಮ್ ತಗೊಂಡವರು.ವ್ಯಾಲಿಡಿಟಿ ಮುಗಿತ್ತಿದ್ದಂತೆ ಎಸೆದವರೆ ಜಾಸ್ತಿ...
ಹಾ ಹಾ ರಿಂಗಾಗುತ್ತಿದೆ ..ಆದರೆ ಯಾರು ರಿಸಿವ್ ಮಾಡಿರಲಿಲ್ಲ...ಎರಡು ಮೂರು ಪ್ರಯತ್ನಗಳ ನಂತರ ಅಡುಗೆ ಕೆಲಸಕ್ಕೆ ಒಳನಡೆದಳು.
ಯಾವುದೋ ಅನೌನ ಕರೆ ಬಂದಿರುವುದು ನೋಡಿ ಸಿಲ್ವಿ ರಿ ಡಯಲ್ ಮಾಡಿದರೆ..ಅತ್ತ ಕಡೆಯಿಂದ
ಹು ಇಸ್ ದಿಸ್..?
ಹಾಯ್ ನಾನು ಸಿಲ್ವಿ ನೀವು..
ಯಾವ ಸಿಲ್ವಿ..?
ಅವಳು ಉತ್ತರಿಸುವ ಮೊದಲೆ..
ಒವ್ ನೀನಾ... ನಾನು ಲಾವಣ್ಯ ಕಣೆ...ಹೇಗಿದ್ದಿ...
ಇವಗಾ ಅದೇನು ಇಷ್ಟು ವರ್ಷದ ನಂತರ ನಮ್ಮ ನೆನಪು..
ಪರಸ್ಪರ ಕುಶಲೋಪಚಾರ ಮಗಿಸಿ ಸಿಲ್ವಿ ತನಗೆ ಬೇಕಾದ ಮಾಹಿತಿ ಕಲೆ ಹಾಕಿದಳು.
ಈ ನಡುವೆ ಹೆಚ್ಚು ಚರ್ಚೆ ಯಾಗಿದ್ದು ಮಂದಿರಾ ಬಗ್ಗೆ..
ಯಾಕೋ ಲಾವಣ್ಯಳ ಮಾತು ನಂಬಬೇಕೊ ಬೇಡವೊ ಒಂದು ಅರ್ಥವಾಗಲಿಲ್ಲ.
ಕಾಲೇಜಿನಲ್ಲಿರುವಾಗಲೇ ಮನು ಮತ್ತು ಮಂದಿರಾ ಪ್ರೀತಿಸಿರಲು ಸಾಧ್ಯವೇ?
ಅವರಿಬ್ಬರೂ ಅವಗಾವಗ ನೈಟೌಟ ಹೊಗ್ತಿರ್ತರಂತೆ....
ಚೇ ಈ ಲಾವಣ್ಯಳ ಮಾತು ಹೇಗೆ ನಂಬಲಿ..
ನಾನು ಸಹ ಅದೆ ಕಾಲೇಜಲ್ವಾ ...
ಅಬ್ಬಾ ಈ ಹುಡ್ಗಿರೆಲ್ಲಾ ಹೀಗೆ ಎಷ್ಟೊಂದ ಕಥೆ ಕಟ್ತರಪ್ಪ..
ಅದೇನೆ ಇರಲಿ..ಒಂದ್ಸಲ ಯಾಕೆ ಮನು ಹಾಗೂ ಮಂದಿರಾ ಜೊತೆ ಮಾತಡಬಾರ್ದು.
ಸಿಲ್ವಿ ಸುಮ್ಮನೆ ಮಂದಿರಾ ಜೊತೆ ಮಾತಾಡಿದಳು,
ಮನುವಿಗೆ ಇನ್ನು ಮದುವೆಯಾಗಿಲ್ಲ ಎಂದಾಗ ಅವಳು ಮನುವನ್ನು ಇಷ್ಟ ಪಟ್ಟಿದ್ದನ್ನು
ಅವನಿಗೆ ಪ್ರಪೋಸ್ ಮಾಡಿದ್ದನ್ನು
ಅವನು ಯಾರನ್ನೊ ಇಷ್ಟ ಪಟ್ಟಿದ್ದನ್ನು..ಎಳೆ ಎಳೆಯಾಗಿ ಬಿಚ್ಚಿಟ್ಟಳು.
ಸಿಲ್ವಿಗೆ ಈಗಾಗಲೇ ಎಲ್ಲಾ ಅರ್ಥವಾಗಿದ್ದು, ತಾನು ಯಾಕೊ ಸರಿಯಾದ ದಾರಿಯಲ್ಲಿ ಹೊಗ್ತಿರವುದು ಅರಿವಾಯ್ತು.
ಅದರೆ ಮನುವನ್ನು ಒಪ್ಪಿಸುವುದು ಅದೇನು ಸುಲಭದ ಮಾತಾಗಿರಲಿಲ್ಲ.
ಅವಳಿಗೆ ತೋಚಿದ್ದು ಒಂದೇ ಮಾರ್ಗ..ಇದನ್ನು ಬಿಟ್ಟರೆ ನನಗೇನು ತೋಚಲ್ಲ. ಸಾರಿ ಮನು..
ಮನದಲ್ಲಿ ಮುಂದಿನ ಯೋಚನೆ ರೆಡಿಯಾಗಿತ್ತು.ಎಲ್ಲಾ ಅವಳಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಮನು ಮಂದಿರನಾ ಮದುವೆ.
ಇದ್ದಕಿದ್ದಂತೆ ಅವಳ ಅಲೋಚನೆಗಳನ್ನೆಲ್ಲಾ ಹಿಂದಿಕ್ಕಿದ್ದು ಆ ವಾಟ್ಸಪ್ ಮೆಸೆಜ್. ಓದಿದವಳ ಮೊಗದಲಿ ಗೆಲುವಿನ ಮಿಂಚೊಂದು ಮೂಡಿ ಮರೆಯಾಯಿತು.
ಹಾಯ್ ಸಿಲ್ವಿ ಮುಂದಿನ ತಿಂಗಳು ನನ್ನ ಮದುವೆ ತಪ್ಪದೆ ಬರಬೇಕು.ಮೊದಲ ಇನ್ವಿಟೇಷನ್ ನಿನಗಾಗಿ..
ಚಿ | ಮನೋಹರ
ಚಿ |ಸೌ | ಮೈತ್ರಿ
ಬೇಡ ಬೇಡವೆಂದರೂ ಕಾಡಿ ಬೇಡಿ ಪ್ರೀತಿಸಿಯೇ ಬಿಟ್ಟಳು ಮೈತ್ರಿ
ಹೇಗೋ ಅಂತು ಮನುವಿಗೆ ಮದುವೆಯಾದರೆ ಅವಳಿಗೆ ಸಾಕಿತ್ತು.ತಾನಾಗಿ ರಿಸ್ಕ್ ತಕೊಂಡು ಮಾಡಬೇಕಾದ ಕೆಲಸ ಯಾವುದೇ ರಿಸ್ಕ್ ಇಲ್ಲದೆ ನೆರವೇರುತಿರುವುದು ಖುಷಿಕೊಟ್ಟ ವಿಚಾರ.
ಮಂದಿರಾ ಮತ್ತೊಮ್ಮೆ ಮನುವಿಗೆ ಪ್ರಪೋಸ್ ಮಾಡಿದ್ದಳು.ಅದು ಆರು ವರ್ಷದ ನಂತರ..
ಸಿಲ್ವಿ ಹೇಳಿದ ಮೇಲೆನೆ ಅವಳಿಗೆ ಗೊತ್ತಾಗಿದ್ದು ಮನುವಿಗಿನ್ನು ಮದುವೆಯಾಗಿಲ್ಲ ಅಂತ.
ಮನುವಿಗೂ ಅಶ್ಚರ್ಯವಾಗಿತ್ತು ಮಂದಿರಾ ಕಾಲ್ ಮಾಡಿದ್ದನ್ನು ನೋಡಿ.ಇದೆಲ್ಲ ಸಿಲ್ವಿಯ ಬೇಟಿಯ ಪರಿಣಾಮವೆಂಬುವುದು ಸಾಬಿತಾಗಿತ್ತು.
ಮನು ತನ್ನನ್ನೆ ತಾನು ಪ್ರಶ್ನಿಸಿಕೊಂಡಿದ್ದ.ಸಿಲ್ವಿಯನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗುವುದು ಅವನಿಗಾಗದ ಮಾತು.
ತನ್ನ ಮನಸ್ಸಿಗೆ ಮೋಸ ಮಾಡಿಕೊಂಡು ಪ್ರತಿನಿತ್ಯ ನೋವು ಅನುಭವಿಸುವುದಕ್ಕಿಂತ ಹೀಗೆ ಇದ್ದು ಬಿಡುವುದು ಎಷ್ಟೊ ವಾಸಿ.
ನಾವು ಅದೆಷ್ಟೋ ಯೋಚಿಸಿದರೂ ಕೆಲವೊಂದು ವಿಷಯಗಳಿಗೆ, ಭಾವನೆಗಳಿಗೆ ಸುಖಾಂತ್ಯ ನೀಡಲು ಸಾಧ್ಯವಿಲ್ಲ. ತಾತ್ಕಲಿಕವಾಗಿ ಶಮನ ಮಾಡಿದ ಸಮಸ್ಯೆಗಳು ಮತ್ತೆ ಕವಲೊಡೆದು ಆಗಾಗ ನಮ್ಮನ್ನು ಕಾಡುವುದೇ ಹೆಚ್ಚು.
ಹೀಗಿದ್ದರೂ ನಮ್ಮೆಲ್ಲ ಸಮಸ್ಯೆಗಳಿಗೆ ನಮ್ಮದೆ ಆದ ಪರಿಹಾರ ಮಾರ್ಗವಿರುವುದು ಖಂಡಿತ.ಇಲ್ಲಿ ನಾವು ಮನೋ ವೈಫಲ್ಯತೆಗೆ ಒಳಗಾಗಬಾರದಷ್ಟೆ.
ಕಟುವಾಗಿದ್ದರೂ ತೆಗೆದುಕೊಂಡ ನಿರ್ಧಾರಕ್ಕನುಗುಣವಾಗಿ ಬದುಕುವುದು ಲೇಸು. ನೋವನ್ನು ಎಲ್ಲರಿಗೂ ಹಂಚುವುದಕ್ಕಿಂತ ನಮ್ಮೊಳಗೆ ಶಮನ ಮಾಡುವುದು ಒಳ್ಳೆಯದು.
ಒಂದರ್ಥದಲ್ಲಿ ಮನು ಹಾಗೆ ಮಾಡಿದ್ದ..ಮಂದಿರಾನ ಮಾತಿಗೆ "ಸಾರಿ ...ಮಂದಿರಾ ಬೇಜರಾಗಬೇಡ ನಾನು ಮೊದಲೆ ಹೇಳಿದಿನಲ್ಲ .ಪ್ರೀತಿಸುತ್ತಿರುವ ವಿಷಯ...ಅವಳೇ ಮೈತ್ರಿ..ಮುಂದಿನ ತಿಂಗಳಲ್ಲಿ ಮದುವೆ ಕಾಣೆ...ಇಲ್ಲಿ ತನಕ ಅವಳ ಸ್ಟಡೀಸ್ ಗಾಗಿ ಕಾದಿದ್ದೆ..ಲಾಷ್ಟ ಮಂತ್ ಮಾತುಕತೆ ಮುಗಿತು, ಸಿಂಪಲ್ಲಾಗಿ ಊರಲ್ಲಿ..."
ಅವಳು ಸಪೋರ್ಟಿವ್ ಅಗಿ ಒವ್ ಕಂಗ್ರಾಜುಲೇಷನ್ ಎಂದಿದ್ದಳು.
ಮೊದಲೆಲ್ಲ ಈ ಪ್ರಪಂಚ ಸ್ವಾರ್ಥದಲ್ಲಿ ಮುಳುಗಿ ಹೋಗಿದೆ ಎನ್ನುತ್ತಿದ್ದ ಮನುವಿಗೆ ಈಗೀಗ ಯೋಗಿಗಳು, ತ್ಯಾಗಿಗಳು ಕಾಣಿಸತೊಡಗಿದರು.
ಅದರಲ್ಲೂ ತನ್ನ ಜೀವನದ ಬಗ್ಗೆ ಮುತುವರ್ಜಿವಹಿಸಿದ ಸಿಲ್ವಿ ಮಹಾ ತ್ಯಾಗಿಯಂತೆ ಕಂಡಳು.
ಹೌದು ಅವಳ ಖುಷಿಗಾದರೂ ನಾನು ಮದುವೆಯಾಗಬೇಕು..ಕೇವಲ ಅವಳಿಗೋಸ್ಕರ ಮದುವೆಯಾಗಲು ಮನು ಸಿದ್ದನಾದ. ಅದ್ಯರೋ ಮೈತ್ರಿ
ನಗು ನಗುತ್ತಲೆ ಹೆಸರನ್ನು ಟೈಪಿಸಿದ್ದ ಮನುವಿನೊಳಗೆ ಅದೇನೊ ರೋಧನೆ.
ಮೊದಲ ಪ್ರೀತಿಯನ್ನು ಮರೆಯುವದು ಅಷ್ಟು ಸುಲಭವಲ್ಲ..ಎದೆಯಾಳಕೆ ಚುಚ್ಚಿದ ಮುಳ್ಳಿನಂತೆ ಅವಾಗವಗ ವೇದನೆಯಾಗುವುದು
ಸಿಲ್ವಿ ..ಮದುವೆ ಇನ್ವಿಟೇಷನ್ ಕಂಡು ಸತ್ಯವೆಂದೇ ನಂಬಿದ್ದಳು.ಮನದ ಮೂಲೆಯಲ್ಲಿ ಅನುರಾಗದ ಅಲೆಯೊಂದಿಗೆ ಮನುವಿನ ನೆನಪು ಚೂರುಪಾರು ಹಾದು ಹೋದರು.. ವಾಸ್ತವದ ಮೊಗದಲಿ ಅದು ನಗಣ್ಯ..
ಇಂದು ಎಲ್ಲವನ್ನು ಮರೆತು ನೆಮ್ಮದಿಯಾಗಿದ್ದಾಳೆ..
ಸಿಲ್ವಿ ಬೆಂಗಳೂರಿನಲ್ಲೇ ಇರುವುದರಿಂದ
ಅಕಸ್ಮಾತ್ತಾಗಿಯು ಬೇಟಿಯಾಗಬಾರದೆಂಬ ನಿರ್ಧಾರ ಹಾಗೂ ಜಾನ್ ಅವರ ಕಂಪನಿ ವೆಂಡರ್ ಆಗಿರುವುದರಿಂದ
ಮನೋಹರ ಕಂಪನಿ ಕೆಲಸಕ್ಕೆ ರಿಸೈನ್ ನೀಡಿ ಊರಿಗೆ ಹೊರಟಿರುವನು.
ಊರಲ್ಲಿರುವ ಹತ್ತು ಎಕರೆ ಜಾಗದಲಿ ಅಪ್ಪ ಅಮ್ಮ ಹಾಗೂ ತಮ್ಮ ಜೀವನ್ ಜೊತೆ ಕೃಷಿ ಕಾರ್ಯದಲ್ಲಿ ಕೈಜೋಡಿಸುವುದು ಮುಂದಿನ ಪ್ಲಾನ್ ಆಗಿತ್ತು.
ನಿನ್ನೆಯ ಪ್ರಯಣ ತಂದೊಡ್ಡಿದ ಆಯಾಸದಿಂದ ಬೆಳಿಗ್ಗೆ ಒಂಬತ್ತಕ್ಕೆ ಎದ್ದು ಹಲ್ಲುಜ್ಜುತ್ತಿದ್ದ ಮನು ಅವಳನ್ನೆ ನೋಡುತ್ತಿದ್ದ.. ಎಲ್ಲೊ ನೋಡಿದ ನೆನಪಾಗಿ ತಾಯಿಯ ಮುಖ ನೋಡಿದಾಗ...
ಅವಳಾ ...ಪಕ್ಕದ ಮನೆ ಕಮಲಳ ಮಗಳು ಮೈತ್ರಿ ಹಾಲು ಕೊಟ್ಟು ಹೋಗಲು ಬಂದಿದ್ದಳು ಎಂದರು.
ಮುಗಿಯಿತು.
ನಿಮ್ಮ ಅನಿಸಿಕೆಗಳಿಗೆ ಸ್ವಾಗತ...🙏