Monday, 20 August 2018

ದೇವರೆ ಇಲ್ಲದ ಬದುಕಿನಲಿ

ಯಾರ್ ಏನೆ ಹೇಳಿ..ಜೀವಾ ನೀನಿಲ್ದೆ ನಾನ್ ಬದುಕಲ್ಲಾ.ಅದು ಬದುಕೆ ಅಲ್ಲ.ಅವರಿಗೇನ್ ಗೊತ್ತು ನೀನೆ ನನ್ ಜೀವ ಅಂತ..


ದೇವರೆ ಇಲ್ಲದ ಬದುಕಿನಲಿ 

ನೀನೆ ಜೊತೆಯಾದೆ.
ನಗುವು ಕಾಣದ ಹೃದಯದಲಿ
ಮಗುವು ನೀನಾದೆ.
ನನ್ನ ನಗುವು ನೀನಾದೆ.|ಪ|

ಬಾಳೆ ಒಲವಿನ ಹೊಂದಿಕೆ

ಪ್ರೀತಿ ಅದರಲಿ ನಂಬಿಕೆ

ನಿನದೆ ಪ್ರೀತಿಯ ಪ್ರತಿಬಿಂಬ

ತಬ್ಬುತ ಮರೆತೆನು ಜಗವನ್ನೆ.

ಮುಗ್ದ ನಗುವಲ್ಲಿ....

ತೊದಲು ಮಾತನ್ನು ಉಲಿಯುತ ನಲಿಯುತ ಹಾಗೆ ಬಾರೋ ಕಂದ..
ಬಳಲಿದೆ ಒಡಲು..
ಸಿಹಿಯನು ಉಣಿಸುವೆ ಉಣಿಸುವೆ..

ಬೆಳಕು ತಂದೆ ಬಾಳಿಗೆ

ನೀಗಿಸಿದೆ ನನ್ನ ಬೇಗೆ
ಪ್ರತಿದಿನ ಪ್ರತಿ ಕ್ಷಣ ಇರಲೀ ಸೌಭಾಗ್ಯ..
ತುದಿಯಲಿ ಮೊದಲಲಿ ನೀನೆ ಮೊದಲಿಗ..

ಸುಖವೇ ಇರಲಿ ದುಃಖವೇ ಬರಲೀ

ನಿನ್ನ ಪ್ರೀತಿಯೊಂದೆ ನನಗೆ ಶಾಶ್ವತ..

No comments: