ಹಾಯ್ ಮಮ್ಮಿ..
ನಿನ್ನ ಕಂಡಾಗಲೆಲ್ಲಾ ಅದೇನೊ ಖುಷಿ..ಇಂದಿಗೆ ೩೯ ದಿನಗಳು ಕಳೆದವು.ಇಷ್ಟು ದಿನ ಬೇಕಾಯಿತು ನಂಗೆ ನಿನ್ನ ಬಗ್ಗೆ ಯೋಚಿಸಲು.. ದಿನದ ೨೪ ಘಂಟೆನು ನನ್ನೆ ನೊಡ್ತಾ ಇರ್ತಿಯಲ್ಲ ಅದೇನ್ ಪ್ರೀತಿ ನನ್ನ ಮೇಲೆ ನಿಂಗೆ.
ಎನ್ ಮಾಡ್ಲಿ ನನ್ನ ಮನಸ್ಸಿನ ಭಾವನೆಯನ್ನ ಹೇಗೆ ವ್ಯಕ್ತಪಡಿಸಲಿ,ನಂಗಿರೋದ ಒಂದೇ ಮಾರ್ಗ ಅದೆ.. ಅಳೊದೊಂದೆ.
ನಾನ್ ನಿಂಗೆ ಮುದ್ದಾಗಿ ಕಾಣಿಸ್ತಾ ಇದ್ದಿನಿ ಅಲ್ವಾ ಅಮ್ಮ..
ನಂಗೆ ಸ್ನಾನ ಮಾಡ್ಸಿ,ಮೆಕಪ್ ಮಾಡೊದು ಅಜ್ಜಿನೆ ಅದ್ರುನೂ...ಚಂದ ನೋಡಿ ಖುಷಿ ಪಡೊದು ನೀನೆ ಅಂತ ಗೊತ್ತು ನಂಗೆ..
ಇವಾಗ ನಾನು ತುಂಬಾ ದೂರದ ತನಕ ನೋಡಬಹುದು.. ತಲೆನ ಮಾತ್ರ ಎತ್ತೊಕೆ ಆಗ್ತ ಇಲ್ಲ..ಅಂದಹಾಗೆ ನನ್ನ ದಿಂಬದ ಮೇಲೆ ಮಲಗಿಸಬೇಡ ಅಮ್ಮ.ಯಾಕೆಂದರೆ ನನ್ನ ಪೇಸ್ ಕ್ಯೂಟ್ ಅಗಬೇಕು ತಾನೆ?.
ನಾನು ನಿಂಗೆ ಮೊದಲಿನ ಹಾಗೆ ಜಾಸ್ತಿ ತೊಂದರೆ ಕೊಡಲ್ಲ.ಈಗೀಗ ಜಾಸ್ತಿ ನಿದ್ರೆ ಮಾಡ್ತಿನಿ.ಅಮ್ಮ ನಂಗೆ ಮಿರರ್ ನೋಡಬೇಕು ಅನಿಸ್ತಿದೆ.
ಅಬ್ಬಾ ಕಾಮನ ಬಿಲ್ಲಿನಂತೆ ಬರೆದಿರವೆ ನನ್ನ ಹುಬ್ಬನ್ನ..ಗಲ್ಲಕ್ಕೆ ಕಾಡಿಗೆಯ ದೃಷ್ಟಿ ಬೊಟ್ಟು.
ನಂಗೆ ಮಾತ್ರ ಯಾಕೆ ಪೌಡರ್ನ ಹಾಗೆ ಮುಖದಲ್ಲಿ ಬಿಟ್ಟಬಿಡ್ತಿಯಾ. ಆದ್ರೂ ನಾನ್ ತುಂಬ ಸ್ಮಾರ್ಟ್ ಅಲ್ವಾ?
ಮೊನ್ನೆ ಕಿವಿ ಚುಚ್ಚಿದ್ರಲ್ಲ ತುಂಬ ನೋವಾಗಿತ್ತು. ಅಜ್ಜ ಮಾಡಿದ ಔಷಧಿ ಅದೇ ಮೆಣಸ್ಸನ್ನ ಬೀಜ ತೆಗೆದು ತೆಂಗಿನ ಎಣ್ಣೆಯಲ್ಲಿ ಕುದಿಸಿ ಹಾಕಿದ್ದರಲ್ಲ,ಇವತ್ತು ನೋವೆ ಇಲ್ಲ.
ಅಮ್ಮ ಡ್ಯಾಡಿಗೆ ಒಂದು ಮೆಸೆಜ್ ಮಾಡು ನಾನ್ ನಾಳೆ ಅವರನ್ನ ನೋಡಬೇಕು.
ಅಮ್ಮ ನಿದ್ದೆ ಬರ್ತಿದೆ..ಒಂದ ಮುತ್ ಕೊಡು ಮಲಗ್ತಿನಿ.
ರಾತ್ರಿ ಪೂರ್ತಿ ನಿದ್ದೆ ಮಾಡಬೇಕು ಅನ್ಕೊಂಡೆ..ಹಸಿವು ಮದ್ಯ ಮದ್ಯ ಎಚ್ಚರಿಸ್ತಿತ್ತು.ನಿನ್ನನ್ನು ಕೂಡ ಎಚ್ಚರಿಸಿದ್ದೆ..ನೀ ನೀಡುವ ಅಮೃತ ..ಅದೊಂದೆ ನನ್ನ ಆಹಾರ ಇವಾಗ..
ಅಂದ ಹಾಗೆ ಡ್ಯಾಡಿ ಯಾವಗ ಬರ್ತಾರೆ? ನಾಳೆನಾ ..ಅವರಿಗೂ ರಜಾ ತಾನೆ. ಹುಂ ಬರ್ಲಿ..ನಂಗೇನ್ ಸರ್ಪ್ರೈಸ್ ಕೊಡ್ತಾರೆ ನೋಡ್ತಿನಿ..
ಇವತ್ ಯಾಕೊ ಮಲಗಿದಲ್ಲಿ ಮಲ್ಕೊಳ್ಳೋಕೆ ಇಷ್ಟ ಆಗ್ತಾ ಇಲ್ಲಾ.. ನನ್ನ ಎತ್ಕೊಂಡು ಮನೆಯಂಗಳ ತೋರ್ಸತಿಯಾ..
ಒಂದ್ ಕಂಡಿಷನ್ ಮಧ್ಯಾಹ್ನ ೧೧ ರಿಂದ ಸಂಜೆ ೩ ಗಂಟೆ ತನಕ ನಾನ್ ಬರಲ್ಲಾ..ಆವಗಿನ ಬಿಸಿಲನ್ ನಂಗೆ ಸಹಿಸೋಕೆ ಅಗಲ್ಲ.
ಅಮ್ಮ..ಹ್ಯಾಂಡಲ್ ವಿತ್ ಕೇರ್.ನಿಂಗೆ ನಾನು ಮೊದಲ ಮಗಳಲ್ವಾ ಹಾಗಾಗಿ..ಹುಸಾರು..
ನಾನು ನಿಂಗೆ ಮೊದಲಿನ ಹಾಗೆ ಜಾಸ್ತಿ ತೊಂದರೆ ಕೊಡಲ್ಲ.ಈಗೀಗ ಜಾಸ್ತಿ ನಿದ್ರೆ ಮಾಡ್ತಿನಿ.ಅಮ್ಮ ನಂಗೆ ಮಿರರ್ ನೋಡಬೇಕು ಅನಿಸ್ತಿದೆ.
ಅಬ್ಬಾ ಕಾಮನ ಬಿಲ್ಲಿನಂತೆ ಬರೆದಿರವೆ ನನ್ನ ಹುಬ್ಬನ್ನ..ಗಲ್ಲಕ್ಕೆ ಕಾಡಿಗೆಯ ದೃಷ್ಟಿ ಬೊಟ್ಟು.
ನಂಗೆ ಮಾತ್ರ ಯಾಕೆ ಪೌಡರ್ನ ಹಾಗೆ ಮುಖದಲ್ಲಿ ಬಿಟ್ಟಬಿಡ್ತಿಯಾ. ಆದ್ರೂ ನಾನ್ ತುಂಬ ಸ್ಮಾರ್ಟ್ ಅಲ್ವಾ?
ಮೊನ್ನೆ ಕಿವಿ ಚುಚ್ಚಿದ್ರಲ್ಲ ತುಂಬ ನೋವಾಗಿತ್ತು. ಅಜ್ಜ ಮಾಡಿದ ಔಷಧಿ ಅದೇ ಮೆಣಸ್ಸನ್ನ ಬೀಜ ತೆಗೆದು ತೆಂಗಿನ ಎಣ್ಣೆಯಲ್ಲಿ ಕುದಿಸಿ ಹಾಕಿದ್ದರಲ್ಲ,ಇವತ್ತು ನೋವೆ ಇಲ್ಲ.
ಅಮ್ಮ ಡ್ಯಾಡಿಗೆ ಒಂದು ಮೆಸೆಜ್ ಮಾಡು ನಾನ್ ನಾಳೆ ಅವರನ್ನ ನೋಡಬೇಕು.
ಅಮ್ಮ ನಿದ್ದೆ ಬರ್ತಿದೆ..ಒಂದ ಮುತ್ ಕೊಡು ಮಲಗ್ತಿನಿ.
ರಾತ್ರಿ ಪೂರ್ತಿ ನಿದ್ದೆ ಮಾಡಬೇಕು ಅನ್ಕೊಂಡೆ..ಹಸಿವು ಮದ್ಯ ಮದ್ಯ ಎಚ್ಚರಿಸ್ತಿತ್ತು.ನಿನ್ನನ್ನು ಕೂಡ ಎಚ್ಚರಿಸಿದ್ದೆ..ನೀ ನೀಡುವ ಅಮೃತ ..ಅದೊಂದೆ ನನ್ನ ಆಹಾರ ಇವಾಗ..
ಅಂದ ಹಾಗೆ ಡ್ಯಾಡಿ ಯಾವಗ ಬರ್ತಾರೆ? ನಾಳೆನಾ ..ಅವರಿಗೂ ರಜಾ ತಾನೆ. ಹುಂ ಬರ್ಲಿ..ನಂಗೇನ್ ಸರ್ಪ್ರೈಸ್ ಕೊಡ್ತಾರೆ ನೋಡ್ತಿನಿ..
ಇವತ್ ಯಾಕೊ ಮಲಗಿದಲ್ಲಿ ಮಲ್ಕೊಳ್ಳೋಕೆ ಇಷ್ಟ ಆಗ್ತಾ ಇಲ್ಲಾ.. ನನ್ನ ಎತ್ಕೊಂಡು ಮನೆಯಂಗಳ ತೋರ್ಸತಿಯಾ..
ಒಂದ್ ಕಂಡಿಷನ್ ಮಧ್ಯಾಹ್ನ ೧೧ ರಿಂದ ಸಂಜೆ ೩ ಗಂಟೆ ತನಕ ನಾನ್ ಬರಲ್ಲಾ..ಆವಗಿನ ಬಿಸಿಲನ್ ನಂಗೆ ಸಹಿಸೋಕೆ ಅಗಲ್ಲ.
ಅಮ್ಮ..ಹ್ಯಾಂಡಲ್ ವಿತ್ ಕೇರ್.ನಿಂಗೆ ನಾನು ಮೊದಲ ಮಗಳಲ್ವಾ ಹಾಗಾಗಿ..ಹುಸಾರು..
ಅಮ್ಮಾ.... ನಾನೆಲ್ಲಿದ್ದಿನಿ ..ಅಬ್ಬಾ ತಲೆ ತಿರಗ್ತಿದೆ..ಭೂಮಿ ಅಲುಗಾಡ್ತಿದೆ...ಅಮ್ಮಾ...
ಭಯದಲ್ಲಿದ್ದ ನನ್ನ ಪಪ್ಪ ಎತ್ಕೊಂಡಾಗಲೇ ಗೊತ್ತಾಗಿದ್ದು. ಪಪ್ಪ ನನ್ನ ನೋಡಲು ರಾತ್ರಿನೆ ಬಂದಿದ್ರು.
ಅವರ ಕುರಚಲು ಗಡ್ಡ ನನ್ನ ಹೊಟ್ಟೆಗೆ ತಗುಲಿ ಕಚಕುಳಿಯಿಡುತ್ತಿತ್ತು.
ಒಂದಷ್ಟು ಹೊತ್ತು ಮುದ್ದಾಡಿ ನನ್ನ ಅಳು ತಣ್ಣಗಾಗುತ್ತಿದ್ದಂತೆ ಕೆಳಗೆ ಮಲಗಿಸಿದರು.
ಅಬ್ಬಾ ಮತ್ತಾದೆ ಕಂಪನ..ಗಾಳಿಯಲ್ಲಿ ತೇಲಿದಂತೆ..
ಈ ಬಾರಿ ಡ್ಯಾಡಿ ಅವರ ಮುಖವನ್ನು ನನ್ನ ಹತ್ತಿರ ತಂದು ವೊಲ್ ..ವೋಲ್... ಓ...ಎನ್ನುತ್ತಿದ್ದರು..
ಆ ದೈರ್ಯ ತುಂಬುವ ಕೈ ನನ್ನ ಕೆನ್ನೆ ಸವರಿದಾಗ ಭಯ ತನ್ನಿಂದ ತಾನೆ ಮಾಯವಾಗಿತ್ತು.
ಅವರ ಇನ್ನೊಂದು ಕೈ ತೊಟ್ಟಿಲ ತೂಗುತ್ತಿತ್ತು.
ಮೊದಲ ಬಾರಿ ತೊಟ್ಟಿಲೇರಿದಾಗ ಹಾಗನಿಸಿತು. ಪಪ್ಪಾ ನಂಗೆ ಸರ್ ಪ್ರೈಸ್ ಗಿಪ್ಟ್ ನೀಡಿದ್ದರು. ನೆಮ್ಮದಿಯ ನಿದ್ದೆ ಆವರಿಸಿತು.
ರಾತ್ರಿ ಎರಡೆರಡು ಬಾರಿ ಬೇಕಂತಲೆ ಅತ್ತೆ..ಆಮೇಲ್ ತಾನೆ ಅಮ್ಮ ಪಕ್ಕದಲ್ಲಿ ಮಲಗಿಸಿಕೊಂಡಿದ್ದು. ನೈಸ್ ಐಡಿಯಾ..ನಾ?
ಇವತ್ತು ನಂಗೆ ಅಜ್ಜಿ ತಂದ ಡ್ರೆಸ್ ಹಾಕು. ನಂಗಿಷ್ಟ ಅದು.ತಂಬಾ ಮೃದು,ಹತ್ತಿ ಬಟ್ಟೆ, ಎರಡೇ ಲಾಡಿ..ಸೋ ಸಿಂಪಲ್.
ಇಷ್ಟ ದಿನ ನಾನು ಚಿಕ್ಕ ಚಿಕ್ಕ ಸ್ಮೈಲ್ ಮಾಡತ್ತಿದ್ದೆ.ಇವತ್ ನೋಡು ಎಷ್ಟ್ ಜೋರಾಗಿ ನಗತ್ ಇದ್ದಿನಿ..
ಹೇ ಹೇ...ಇದು ನನ್ನ ಮೊದಲ ಟೂತ್ ಲೆಸ್ ಸ್ಮೈಲ್.
ಅಮ್ಮ ನೀನ್ ನನ್ನ ಬಟ್ಟೆಯಲ್ಲಿ ಸುತ್ತಿ ಮಲಗಿಸ್ತಿಯಲ್ಲಾ.
ನಿಜವಾಗಲೂ ನಂಗೆ ಅಳು ಬರುತ್ತೆ..ಪ್ಲೀಸ್ ಕೈಗಳನ್ನಾದ್ರು ಹೊರಗಿಟ್ಟು ಸುತ್ತು.
ಅಮ್ಮ ಈ ವಾರ ತುಂಬ ಎಗ್ಸೈಟಿಂಗ್ ನಾನು ಬಹಳ ಕಲಿಯೊದಿದೆ..ನನ್ನ ಜೊತೆ ನೀನು ಮಗುವಾಗ್ತಿಯಲ್ವಾ?..
ಎನ್ ಗೊತ್ತಾ ಇವತ್ತು ನಾನು ಎರಡ ಸಲ ಉಲ್ಟಾ ಹಾಕಲು ಟ್ರೈ ಮಾಡಿದೆ..ಸೋ ಫೈಲುರ್..
ಅಮ್ಮ ಹಾಡು ಗುನುಗುತ್ತ ನನ್ನ ಡ್ರೆಸ್ ಅಪ್ ಮಾಡುತ್ತಿದ್ಲು.
ಅಪ್ಪ ಅಲ್ರೆಡಿ ರೆಡಿಯಾಗಿದ್ರು.
ನಂಗೆ ಹೊಸ ಡ್ರೆಸ್,ಕೈಬಳೆ,ಕಾಲ್ಗೆಜ್ಜೆ,ಕಾಲುಚೀಲ ...ಹ್ಯಾಟು.. ಸೇಮ್ ಬೇಬಿ ಶ್ಯಾಮಲಿ ತರಾನೆ ರೆಡಿ ಮಾಡಿದ್ರು. ಕೊನೆಯಲ್ಲಿ ಒಂದು ದೃಷ್ಟಿ ಬೊಟ್ಟು..
ಹಾಂ ಇಂದು ಮೊದಲ ಫ್ಯಾಮಿಲಿ ಟ್ರಿಪ್. ಅಪ್ಪನ ಕಾರ್ ನಲ್ಲಿ ಅಮ್ಮನ ಜೊತೆ ಹಿಂದಿನ ಸೀಟ್ನಲ್ಲಿ ಕುತ್ಕೊಂಡು..ಅಲ್ಲಾ..ಅಲ್ಲಾ ಮಲ್ಕೊಂಡು ಹೊಗ್ತಾ ಇದ್ರೆ..ವಾವ್ ಸೂಪರ್...
ಇದೇನು ಆಸ್ಪತ್ರೆ.. ಫ್ಯಾಮಿಲಿ ಟ್ರಿಪ್ ಅಲ್ಲಾ..ಫ್ಯಾಮಿಲಿ ಡಾಕ್ಟರ್ ಹತ್ರ ಬಂದಿದ್ದರು.
ಡಾಕ್ಟರ್ ಅಂಕಲ್ ನಂಗೆ DTPa-Hib-IPV-HepB, 13vPCV, and rotavirus ಇಂಜೆಕ್ಷನ್ ಕೊಟ್ಟರು.
ಒಂದ ಸಲ ನನ್ನ ಅಳುವಿನ ಚೀರಾಟಕ್ಕೆ ಆಸ್ಪತ್ರೆ ಫುಲ್ ಸೈಲೆಂಟ.
ಎರಡ ದಿನ ನನ್ನ ಹಾರಾಟ ಏನು ನಡಿಯಲಿಲ್ಲ.ಉಲ್ಟಾ ಹಾಕೋಕು ಟ್ರೈ ಮಾಡಲೆ ಇಲ್ಲ.
ಈಗ ನಾನು ಕೈಗಳನ್ನ ಜೋರಾಗಿ ಬಡಿತಿನಿ,ಕುತ್ತಿಗೆಯನ್ನ ಎತ್ತತೀನಿ..ನನ್ನ ಅಟದ ಗೊಂಬೆನ ಹಿಡಿಯೋಕೆ ಹೋಗ್ತಿನಿ..
ಅಜ್ಜಿ ತಾತನ ಪರಿಚಯ ಹಿಡಿತಿನಿ..ಅಮ್ಮ ಹಾಕೊ ಮೂಸಿಕ್ ನ ಆಲಿಸ್ತೀನಿ...ನಾನು ಡಾನ್ಸರ್ ಆಗಬೇಕು.
ಇನ್ನೂ ಎನೇನೊ ಆಸೆ...ಪಪ್ಪನ ನೋಡಿದಾಗ ಇಂಜಿನಿಯರ್ ಆಗಬೇಕು..ನಿನ್ನನ್ನ ನೋಡಿದಾಗ ಟೀಚರ್ ಆಗಬೇಕು..ಅಂಕಲ್ ನೋಡಿದಾಗ ಡಾಕ್ಟರ್ ಆಗಬೇಕು..
ಹಾಂ..ನಾನ್ ಎಲ್ಲಾ ಆಗಬೇಕು..ಎಲ್ಲರಿಗೂ.ಎಲ್ಲಾ ನಾನೆ ಆಗಬೇಕು.ಎಲ್ಲಾ ನನ್ನೆ ಮುದ್ದಿಸಬೇಕು.
ಡ್ಯಾಡಿ ಇವತ್ತೊಂದ ದಿನ ರಜೆ ಹಾಕಿ.ಪ್ಲೀಸ್...ಅನಬೇಕನಿಸಿದ್ರು ಸುಮ್ಮನಾದೆ.
ಮನೆಯಲ್ಲಿ ಏನೆ ಫಂಕ್ಷನ್ ಇದ್ರೂನು ಅವರು ಕೆಲಸಕ್ಕೆ ಹೊರಡುವಾಗ ಯಾರು ಅವರನ್ನ ತಡೆಯುತ್ತಿರಲಿಲ್ಲವಂತೆ, ಒಂದು ವೇಳೆ ತಡೆದರೂ ಕೇಳುತ್ತಿರಲಿಲ್ಲವಂತೆ..ಹಾಗೆ ಸುಮ್ಮನಾದೆ..
ಇವತ್ತು ನೋಡಿದ್ರೆ ಅದೆಲ್ಲಾ ಸುಳ್ಳು ಅನಿಸುತ್ತೆ..ನನ್ನ ಬಿಟ್ಟ ಹೋಗಲು ಮನಸ್ಸೆ ಇಲ್ಲ..ಅವರ ಕಣ್ಣುಗಳನ್ನ ನೋಡ್ತಿದ್ರೆ..ಪಪ್ಪ...ಪಾಪ ಅನಿಸುತ್ತಿತ್ತು.ಅವರ ಗಾಂಭಿರ್ಯ ಮರೆತಂತಿತ್ತು. ಒಂದು ಬಾರಿ ಅಮ್ಮನ ಬಿಟ್ಟು ಪಪ್ಪನ ಜೋತೆ ಹೋಗೋಣ ಎನಿಸಿತು.
ಐ ಮಿಸ್ ಯು ಪಪ್ಪಾ...
ಓ ಡ್ಯಾಡ...ಓ ಡ್ಯಾಡ
ನಿನ್ನ ಕಣ್ಣ ಕಂಬನಿಯ ಸುರಿಸ ಬೇಡ
ನನ್ನ ..ಅಮ್ಮನ ಎಂದೂ ಮರೆಯಬೇಡ..
ಓ ಡ್ಯಾಡ...ಓ ಡ್ಯಾಡ
ಟೆಕ್ನಾಲಜಿ ತುಂಬ ಮುಂದಿದೆಯಪ್ಪ..
ಹೋದ ತಕ್ಷಣ ಮರಿಯದೆ ಮಾಡು ವೀಡಿಯೊ ಕಾಲಪ್ಪ..
ಹ್ಯಾಪಿ ನಿವ್ ಇಯಾರ್....ಹಮ್ ಇವಾಗ ಯಾಕೆ ಹೇಳ್ತಿನಿ ಅಂತಾನಾ...ಬಿಜಿ ಕಣ್ರೀ ತುಂಬಾ ಬ್ಯುಸಿ..ನನ್ನ ಕೆಲಸ ಮಾಡೋಕೆ ನಂಗೆ ಟೈಮೆ ಇಲ್ಲ, ನನ್ನೆಲ್ಲಾ ಕೆಲಸವನ್ನು ಅಮ್ಮನೇ ಮಾಡುವುದು.
ಮೊನ್ನೆ ಡಿಸೆಂಬರ ೩೧.. ಆವಾಗಷ್ಟೆ ಮಲಗಿದ್ದೆ. ಅಮ್ಮತೊಟ್ಟಿಲನ್ನ ತೂಗಿ ತೂಗಿ ಕಷ್ಟಪಟ್ಟು ಮಲಗಿಸಿದ್ದಳು.
ಸುಮಾರು ರಾತ್ರಿ ೧೨ ಘಂಟೆ ಇರಬಹುದು.ಇದ್ದಕಿದ್ದಂತೆ ಗುಂಡಿನ ಸುರಿಮಳೆನೆ ಗೈದರು ನೆರಮನೆಯವರು. ನಾನು ಹೆದರಿ ಬೆಚ್ಚಿಬಿದ್ದು ಅಳತೊಡಗಿದೆ.ಎನ್ ಜನರಪ್ಪ ಹೊಸ ವರ್ಷ ಆಚರಿಸುವುದು ಹೀಗೆನಾ?.
ಈಗೀಗ ನಾನು ನಗುವುದ ನೋಡಿ ಅಮ್ಮ ತುಂಬ ಸಂತೋಷವಾಗಿದ್ದಾಳೆ.ಅವಳಿಗೆ ಈ ಕಲ್ಪನೆ ಹಿಂದೆ ಇದ್ದಿತೋ ಇಲ್ಲವೋ..
ಗೆಜ್ಜೆ ಸದ್ದು ಚೆನ್ನಾಗಿದೆ..ಕಾಲಿಂದ ಕಿಕ್ ಮಾಡಿ ಮಾಡಿ ಕೇಳಿಸಿಕೊಂಡೆ.
ಪದೇ ಪದೇ ಆಳುತ್ತಿದ್ದ ನಾನು ಈಗ ತುಂಬ ಹೊತ್ತು ಆಟವಾಡುವದ ಕಲಿತಿರುವೆ..ಇದರಿಂದ ಅಮ್ಮನಿಗೂ ಸ್ವಲ್ಪ ಬಿಡುವು.
ಈಗಂತೂ ನನಗೊಬ್ಬಳಿಗೆ ಮಲಗಿರಲು ಸಾಧ್ಯವೇ ಇಲ್ಲ..ಪಕ್ಕದಲ್ಲಿ ಯಾರಾದರೂ ಇಲ್ಲ ಅಂತ ತಿಳಿದರೆ ಅತ್ತಾದರೂ ಕರೆಸಿಕೊಳ್ಳುವೆ...
ಬೆಳ್ಳಂಬೆಳಗೆ ಎಣ್ಣೆಯ ಅಭ್ಯಂಜನ, ಅಜ್ಜಿ ಮಾಡಿಸುತ್ತಿದ್ದ ಯೋಗಾಸನ, ಬಿಸಿನೀರಿನ ಸ್ನಾನ ...ಅಬ್ಬಾ ಎಂತ ಹಿತ ನೀಡುವುದು.
ಅವಾಗಲೇ ಮಂಪರು ಮತ್ತೇರಿ ಬರುವುದು. ನಿದ್ದೆಯಿಂದ ಏಳುವುದೆ ತಡ ಹೊತ್ತು ಹೊತ್ತಿನ ಊಟ..ಹೆತ್ತಮ್ಮನ ಮುತ್ತು..ನಿತ್ಯ ದೊರೆಯುತಿರೆ.. . ನಾನೆ ಭಾಗ್ಯಶಾಲಿ..ಇದಕ್ಕೆ ತಾನೆ ಅತ್ತು ಕರೆಯುವುದು ಕಮ್ಮಿಮಾಡಿದ್ದು.
ಅಬ್ಬಾ ...ನನ್ನ ನಗು ಎಷ್ಟು ಪೊಪುಲರ್ ಆಗ್ತಿದೆ..ಎಲ್ಲರೂ ನೋಡಿ ಕಮೆಂಟ್ ಮಾಡಿದವರೇ..ನನ್ನ ಖುಷಿಯಲ್ಲಿ ಎಲ್ಲರೂ ಖುಷಿಪಡೋರು....
ಅಮ್ಮ ಥ್ಯಾಂಕ್ಸ ನನ್ನದು ಒಂದು ಟಿಕ್ ಟ್ಯಾಕ ಮಾಡಿ ಎಲ್ಲರಿಗೂ ಪರಿಚಯಿಸಿದ್ದಕ್ಕೆ..
ಅದೇನೋ ಗೊತ್ತಿಲ್ಲಾ ನಾನಂತು ಹ್ಯಾಪಿ..ಸದಾ ಮುಗುಳ್ ನಗು ಸೂಸೋದೆ ನನ್ನ ಹವ್ಯಾಸವಾಗಿ ಬಿಟ್ಟಿದೆ.
ಇದು ಎಲ್ಲರಿಗೂ ಇಷ್ಟವಂತೆ.
ಮೊನ್ನೆ ಅಮ್ಮ ಡ್ಯಾಡಿ ಹತ್ರ ಮಾತಾಡುವುದನ್ ನಾನು ಕದ್ದು ಕೇಳಿಸಿಕೊಂಡೆ..ನಿಮ್ಮ ಮಗಳು ನಿದ್ದೆಯಲ್ಲು ನಗ್ತ ಇರ್ತಾಳೆ...
ನಂಗೆ ನಿದ್ದೆ ಬಂದಾಗ ನನ್ನ ಕನಸಲ್ಲಿ ದೇವರು ಬರ್ತಾರೆ..ದೇವರು ನನ್ನ ಜೋತೆ ಆಟ ಆಡ್ತಾ ಅಂಗಾಲಿಗೆ ಕಿರುಬೆರಳಿಂದ ಕಚಕುಳಿ ಇಟ್ಟಾಗ ನಗು ಬರುತ್ತೆ.
ನಾನು ಇವಾಗ ತುಂಬ ಆಕ್ಟೀವ್ ಆಗಿದ್ದಿನಿ..ಎಲ್ಲರ ಧ್ವನಿಯನ್ನು ಗುರುತಿಸುವೆ..ಯಾವುದಾದರು ಮೂಲೆಯಿಂದ ಧ್ವನಿ ಬಂದರೂ ತಿರುಗಿ ನೋಡುವಷ್ಟು ಪರಿಣಿತಳು.
ಚಿಕ್ಕ ಆಟಿಕೆ ಕೊಟ್ಟರೆ ಗಟ್ಟಿಯಾಗಿ ಹಿಡಿಯುವ ಬಲನು ಬಂದಿದೆ...
ಯಾರು ಬಯ್ಯಬೇಡಿ ನಾನೊಂದು ಕೆಟ್ಟ ಹವ್ಯಾಸವನ್ನು ಬೆಳಸಿಕೊಂಡು ಬಿಟ್ಟಿದಿನಿ..ಇದು ನಂಗೆ ತುಂಬ ಹಿಂದಿನ ಅಭ್ಯಾಸ..
ಬೆರಳು ಚೀಪೊದು...
ಕಾಲಿ ಬೆರಳಲ್ಲಾ...ಒಮ್ಮೊಮ್ಮೆ ಇಡಿ ಕೈಯನ್ನೆ ..ಯಾಕೆ ಎರಡು ಕೈಗಳನ್ನು ಬಾಯೊಳಗೆ ಹಾಕಿದುಂಟು..
ಈ ಅಮ್ಮ ತುಂಬ ಜೋರು..ಎಲ್ಲರೂ ಕಾಲು ಚೀಲ ಹಾಕುವರು..ನನ್ನಮ್ಮ ನಂಗೆ ಕೈ ಚೀಲಗಳನ್ನು ಹಾಕಿ ಬೆರಳನ್ನು ಭದ್ರ ಮಾಡಿದ್ದಾರೆ..
ಅಮ್ಮ ಜೋರದ್ದಷ್ಟೆ ಪಾಪ..ನನ್ನ ವಿಭಿನ್ನ ಅಳುವಿಗೂ ಒಂದೊಂದು ಅರ್ಥ ಅರಿತವಳು..
ಹಸಿವಿನ ಅಳುವಿಗೆ ಹಾಲುಣಿಸುವಳು.ದುಃಖದ ಅಳುವಿಗೆ ಮುತ್ತಿಕ್ಕಿ ಮಾತಾಡಿಸುವಳು. ಸಾಂಗತ್ಯ ಬಯಸಿ ಅತ್ತಾಗ ಎತ್ತಿ ಎದೆಗಪ್ಪಿಕೊಳ್ಳುವಳು.ನಿದ್ದೆಯ ಮಂಪರು ಹತ್ತಿ ಅತ್ತಾಗ ತೊಟ್ಟಿಲ್ಲಿಟ್ಟು ಜೋಗುಳ ಹಾಡುವಳು.ಈ ಮಮತೆಯ ಮಹಾತಾಯಿ ಮಡಿಲಲ್ಲಿ ಮಗು ನಾನು,ಅವಳ ನಗು ನಾನು..
ಇತ್ತಿಚೆಗೆ ತುಂಬ ದಿನದಿಂದ ನಂಗೆ ಏನ್ ಹೇಳಬೇಕೊ ಅರ್ಥನೆ ಆಗ್ತಿಲ್ಲ. ಯಾಕೊ ತುಂಬ ಬೇಜಾರು..ನಾನು ಡಿಜಿಟಲ್ ಬೇಬಿ ಆಗ್ತಿದಿನಿ ಅನಿಸ್ತಿದೆ..
ಅದ್ಯಾಕೊ ಡ್ಯಾಡಿ ಮಮ್ಮಿ ನನ್ನ ಎಲ್ಲೊ ಬಚ್ಚಿಟ್ಟಿದ್ದಾರೆ.
ಈಗೀಗ ನನ್ನ ಪ್ರಪಂಚ ಎರಡೇ ರೂಮು..
ತಿಂಗಳಿಗಿಂತ ಹಿಂದೆ ಬೀಸುತ್ತಿದ್ದ ಗಾಳಿ ಇಲ್ಲಿ ಯಾಕಿಲ್ಲ...
ಗಾಳಿಗೆ ಆಡ್ತಿದ್ದ ಹಸಿರೆಲೆ ನೋಡೊಕಾಗ್ತಿಲ್ಲ..
ರಾಜ-ರಾಣಿನ ಬಿಟ್ಟು ಇಲ್ಲಿ ಬೇರೆ ಯಾರಿಲ್ಲ..
ಯಾರು ಮುಟ್ಟೊರಿಲ್ಲ..ಅಟ್ಟಕ್ಕೆ ಎತ್ತಿಕೊಂಡು ಹೋಗೊರಿಲ್ಲ..
ಇದೆಂತ ಊರು...ಲೆಕ್ಕಕ್ಕೆ ಕೋಟಿ ಜನರು..
ನೋಟಕ್ಕೆ ಒಬ್ಬರೂ ಸಿಕ್ಕರು..
ಸದ್ಯ ಈಗೀಗ ಅಜಸ್ಟ್ ಆಗ್ತಿದಿನಿ..ಮೂಟೆ ಕಟ್ಟಿಟ್ಟಿದ್ದ ಒಂದೊಂದೆ ಆಟಿಕೆಗಳನ್ನ ಬದಲಾಯಿಸ್ತಾ ಇರ್ತಾರೆ.
ಯಾಕಂದ್ರೆ ನಾನು ಸಹ ವೆರೈಟಿ ಕೇಳ್ತಿರ್ತಿನಿ.
ಮೊದಲು ಬೋರಲು ಹಾಕುವುದ ಕಲಿತೆ....ಮುಂದಕ್ಕೆ ತೆವಳುದನ್ನ ಸ್ಕಿಪ್ ಮಾಡಿ...ನೇರವಾಗಿ ವಜ್ರಾಸನದಲ್ಲಿ ಕುಳಿತುಕೊಳ್ಳಲು ಪ್ರಾರಂಭಿಸಿರುವೆ.
ಈ ಮಮ್ಮಿಯಂತು ಈಗಾಗಲೆ ಸಿಲೆಬಸ್ ಸ್ಟಾರ್ಟ ಮಾಡಿದ್ದಾರೆ..
ಜಾನಿ ಜಾನಿ ಯಸ್ ಪಪ್ಪಾ..
ಟ್ವಿಂಕಲ್ ಟ್ವಿಂಕಲ್.... ಅಬ್ಬಾಬ್ಬಾ ಏನೇನೋ....
ಆದ್ರೆ ನಂಗಿಷ್ಟವಾದ್ದು....ಚಬ್ಬಿ ಚೀಕ್ಸ...ಡಿಂಪಲ್ ಚಿನ್...
ಡ್ಯಾಡಿ ಕಿವಿನ ಹಿಡಿಯೊದು,ಕೂದಲೆಳೆಯುವುದು ನಂಗಿಷ್ಟ..ರಾತ್ರಿ ನಿದ್ದೆ ಬರೊವರೆಗೂ ಮುದ್ದು ಮಾಡಿ ಮಲಗಿಸ್ತಾರೆ..ಅಮ್ಮನ ಕಾಡಿ ಕಾಡಿ ನನಗಾಗಿ ಹಾಡ ಹೇಳಿಸ್ತಾರೆ..ಪಾಪಾ ಡ್ಯಾಡಿಗೆ ಹಾಡೊಕೆ ಬರಲ್ಲ...😂
ಹಾಡೊಕೆ ಬರದಿದ್ರೆ ಏನಂತೆ..ಬರಿತಾರೆ...ಮೊನ್ನೆ ಮೊನ್ನೆ ನನಗಾಗಿ ಬರೆದಿರುವುದು.
ದೇವರೆ ಇಲ್ಲದ ಬದುಕಿನಲಿ
ನೀನೆ ಜೊತೆಯಾದೆ.
ನಗುವು ಕಾಣದ ಹೃದಯದಲಿ
ಮಗುವು ನೀನಾದೆ.ನನ್ನ ನಗುವು ನೀನಾದೆ.
ಬಾಳೆ ಒಲವಿನ ಹೊಂದಿಕೆ
ಪ್ರೀತಿ ಅದರಲಿ ನಂಬಿಕೆ
ನನದೆ ಪ್ರೀತಿಯ ಪ್ರತಿಬಿಂಬ
ತಬ್ಬುತ ಮರೆತೆನು ಜಗವನ್ನೆ.
ಮುಗ್ದ ನಗುವಲ್ಲಿ....
ತೊದಲು ಮಾತನ್ನು
ಉಲಿಯುತ ನಲಿಯುತ ಹಾಗೆ ಬಾರೋ ಕಂದ.
ಆದ್ರೆ ಎನ್ ಮಾಡ್ಲಿ... ಅ.....ಆ...ಏ....ಬಿಟ್ಟು ಏನು ಬರಲ್ಲ..
ಡ್ಯಾಡಿ ಆಸೆಗೆ ಮಾತನಾಡಲು ಪ್ರಯತ್ನ ಪಡ್ತಿನಿ..
ಇನ್ನೂ ಪ್ರಯತ್ನ ಮಾಡ್ತಾನೆ ಇದಿನಿ...
ಮುಂದಿನ ವಾರ ನಾನು ನಡಿಬೇಕು..ಓಡಾಡಬೇಕು...ಹೊರಗಡೆ ಏನೆನಿದೆ ಅಂತ ನೋಡಬೇಕು..ನಿಮಗೆ ಗೊತ್ತಾ ಆಲ್ರೆಡಿ ಆರ್ಡರ್ ಮಾಡಿದ್ದಿನಿ...ಪಿಂಕ್ ಶೂ..👠👠
ಲೈಟ್ ಬ್ರೌನ್..ಗೌನ್....👗
ಫಾಸ್ಟ ಫಾಸ್ಟ ..ಪಾಸ್ಟ್.. ಇವಾಗಿನ್ ಜನರೇಷ್ ನ ಹಾಗೆ ಅಲ್ಲವಾ...ಹಾಗಾಗಿ ನಾನು ಸಹ ತುಂಬ ಪಾಸ್ಟ್..
ಪುಟ್ಟ ಪುಟ್ಟ ಕಾಲು ಹೆಜ್ಜೆ ಮಾತ್ರ ಚಿಕ್ಕದು, ವೇಗ ಎಕ್ಸಪ್ರೆಸ್..
ಎರಡ್ ನಿಮಿಷ ಬಿಟ್ರೆ ಮನೆ ಕಂಪೌಂಡ್ ಹೊರಗಡೆ ಇರ್ತಿನಿ. ನಂದು ಯಾವಾಗ್ಲು ಒನ್ ವೇ...
ರಿಟರ್ನ ಬರಬೇಕಿದ್ರೆ ಅಮ್ಮನೆ ಎತ್ತಕೊಂಡ ಬರಬೇಕು..
ಬಾರಿ ಚಾಲು ನನ್ನಮ್ಮ..ಗೆಜ್ಜೆ ಸಪ್ಪಳ ಮಾಡದೆ ಹೊರಗಡೆ ಹೆಜ್ಜೆ ಹಾಕ್ತಿನಂತ.. ಪಿಂಕು ಪಿಂಕು ಚಪ್ಪಲಿ ತೊಡಿಸ್ತಾರೆ ಮನೆಯೊಳಗೆ..
ಮೊದಲಾಡಿದ ನುಡಿಯು ಬಾರಿ ತೊದಲು
ಮರು ನುಡಿಯೇ ಕಂದ ಎನಲು..
ಏರಿ ಕೂರುವೆ ಪಪ್ಪನ ಹೆಗಲು
ಪ್ರತಿದಿನ ಇದು ಮಾಮೂಲು...
ಪಪ್ಪಂಗೆ ಡಂಬೆಲ್ಸು ನಾನೆ ..ಡಿಪ್ಸ್ ಹೊಡಿಯೋಕೆ ಎಕ್ಸಟ್ರಾ ವೈಟು ನಾನೆ..
ನಂಗೆ ಸಾರಿ ತುಂಬಾ ಇಷ್ಟ..ಆದ್ರೆ ನನ್ನ ಸೈಜ್ ಗೆ ಎಲ್ಲೂ ಸಿಗಲ್ಲ..ಲಾಕ್ಡೌನ್ ಬೇರೆ.. ಹುಡುಕಿದೆ ಎಲ್ಲೆಲ್ಲು...ಗಾಡ್ರೆಜು.,ಟೇಬಲ್ಲು, ಕಬೋರ್ಡು,ಅಟ್ಟ,ಮೆಟ್ಲು... ಕೊನೆಗೆ ಸಿಕ್ಕಿದ್ದು ಅಮ್ಮನ ವೇಲು...
ನೋಡಿ ಡೀಪಿ ಹಾಕಿರ್ತಿನಿ..ಮರಿಬಾರ್ದು ಹೇಗಿದೆ ಅಂತ ಹೇಳೊಕೆ...
ನಾನ್ ಒಂದ ವಿಷಯ ಮರೆತ್ ಬಿಟ್ಟಿದ್ದೆ ..ತುಂಬ ಕಲ್ತಿದ್ದೆ ಈ ಲಾಕ್ ಡೌನಲ್ಲಿ
ನಾನ್ ಏನೆಲ್ಲಾ ಕಲ್ತಿದಿನಿ ಅಂದ್ರೆ..
ಹೌ ಡಾಗ್ ಸೆಯ್ಸ.........ಬೌ ಬೌ..
ಕ್ಯಾಟ್ ಸೇಯ್ಸ ....ಮೀಯವ್ ಮೀಯವ್..
ಕೌ ಸೇಯ್ಸ.. ಅಂಬೋ..
ಡಕ್ ಸೆಯ್ಸ ......ಕ್ವಕ್ ಕ್ವಕ್....
ನಾನು ಒನ್ ಟು ತ್ರೀ....ಸಂಡೆ ಮಂಡೇ ಹೆಳ್ತಿನಿ
ಅಷ್ಟೇ ಇರೊದು ನಮ್ಮ ಮನೆ ಕ್ಯಾಲೆಂಡರ್ ನಲ್ಲಿ..
ಒಮ್ಮೊಮ್ಮೆ ಗೋಡೆ ಮೇಲೆ ಬರಿಬೇಕು ಅನ್ಸುತ್ತೆ..
ಅಮ್ಮ ಕಣ್ ಬಿಟ್ಟಾಗ ಎಲ್ಲಾ ಮರ್ತೊಗುತ್ತೆ..
ತುಂಬಾ ಯೊಚ್ನೆ ಆಗ್ತಿದೆ ಅದ್ಯಾವಗ ಸ್ಕೂಲ್ ಒಪನ್ ಮಾಡ್ತರೋ..
ಹೇ ಹೇ ನನಗಲ್ಲ..ನಮ್ ಸೀನಿಯರ್ಸಗೆ ...
ನಾನಿನ್ನು ತುಂಬ ಜೂನಿಯರ್.. ಜಸ್ಟ್ ಎಯ್ಟಿನ್...ಎಯ್ಟಿನ್ ಮಂತ್..
ರೀಸೆಂಟಾಗಿ ಸ್ಕೂಲ್ ಗೆ ಹೋಗಿದ್ದೆ ಟೀಚರ್ಸ್ ಇಲ್ಲ.. ನರ್ಸ ಇದ್ದಿದ್ರು ಎರಡೆರಡ ಇಂಜೆಕ್ಷನ್ ಕೊಟ್ರು ಗೊತ್ತಾ ಟೂ ಡೇಸ್ ಫುಲ್ ಫೀವರ್..
ಈ ಇಂಜೆಕ್ಷನ್ ಮುಂದೆ ಕರೋನಾ ವ್ಯಾಕ್ಷಿನ್ ಏನು ಅಲ್ಲ..ನೀವೆಲ್ಲ ತಗೊಳ್ಳಿ ಅಯ್ತಾ ಮರಿಬೇಡಿ..
No comments:
Post a Comment