Sunday, 2 October 2016

ಮಮತೆ ಮಾತಾಡಿದಾಗ


ಮಮತೆ ಮಾತಾಡಿದಾಗ

ನಿನ್ನ ಜೊತೆಗೇ ನಾನಿದ್ದರೂ ಕ್ಷಣ ಕ್ಷಣಕ್ಕೂ  ನಿನ್ನ ನೋಡೊ ಹಂಬಲ
ಬರಿ ವೇದನೆ, ಕರೆವ ಕೂಗು ಮಾತೆ ನನಗಿರಲಿಲ್ಲ..
ನಿನ್ನ ಆಸೆ ಕಂಡು ಪ್ರತಿ ದಿನ ತುಟಿ ಒಪ್ಪುತ್ತಿತ್ತು.ಒಂದೊಂದು ಅಕ್ಷರ ಜೋಡಿಸಿದಾಗಲು ನಿನ್ನ ಕರೆಯಲಾಗಲಿಲ್ಲಾ.
ದಣಿದ ಕೂಗು ಮನೆಯಲ್ಲಾ ಕೇಳಿಸಿ
ತೊಟ್ಟಿಲಲ್ಲೆ ಹೌಹಾರುತಿದ್ದೆ. ಮಡಿಲಿಗೇರಿದಾಗ ಮಾತ್ರ ಹರುಷ ಮಂದಹಾಸ ನಿನ್ನಲ್ಲಿ ಕಾಣುತಿದ್ದೆ
ನಿನ್ನ ವರಸೆ ಬದಲಾಗಲಿಲ್ಲ.
ನಿನ್ನ ಮಮತೆ ಹೆಚ್ಚಾದಾಗ ನನ್ನ ಎದೆಗೊತ್ತಿಕೊಂಡಿದ್ದೆ.
ನನ್ನುಸಿರು ಕಟ್ಟಿ ಕಾಲಿಂದ ಒದ್ದು ಬಿಡಿಸಿಕೊಂಡಾಗಲೂ ನೀ ಖುಷಿ ಪಟ್ಟೆ

ನನ್ನ ಜೊತೆ ನೀ ತೊದಲಿದೆ ಆಗನಿಸಿತ್ತು ನಾನೇನು  ದಡ್ಡನಲ್ಲ.
ಅದರೆ ದಡ್ಡತನದಲ್ಲಿದ್ದ ನನ್ನನ್ನು ದೊಡ್ಡವನು ಮಾಡಿದ್ದು ನೀನು ತಾನೆ  ಅಮ್ಮಾ.......

                         ಸಂದೇಶ ಪೂಜಾರಿ ಗುಲ್ವಾಡಿ