Wednesday, 5 October 2016

ಆಸೆ

                                ಆಸೆ


ಝಗಿಸುವ ಜಗದಲಿ ಜಿಗಿಯುವ ಆಸೆ
ನಲಿಸುವ ಜನರೊಳು ನಲಿಯುವ ಆಸೆ
ಹಸಿರಲೆ ಹರುಷವ ಹರಿಸುವ ಆಸೆ
ರಜತ ರಥದಲಿ ರಂಜಿಸುವಾಸೆ
ಹೂಗಳ ಹೊಳಪನು ಹೊಗಳುವ ಆಸೆ
ಪರಿಸರದಲಿ ಪರಿಮಳ ಪಸರಿಸುವ ಅಸೆ
ವರ್ಣ ಬಣ್ಣ ಬಣ್ಣನೆಯ ಬಣ್ಣಿಸುವಾಸೆ
ನದಿಯ ನಾದಕೆ ನರ್ತಿಸುವಾಸೆ
ಚಿತ್ತಾರದಾಗಸದಿ ಚಂದ್ರ ಬಂಬ ಚಿತ್ರಿಸುವಾಸೆ
ಮುಗಿಲಿನ ಮೊಗದಲಿ ಮುಗ್ಧತೆ ಮುದ್ರಿಸುವಾಸೆ
ಅಂತೆ ಕಂತೆ ಚಿಂತೆಗೆ ಚಿತೆಯಿಡುವಾಸೆ
ಸುತ್ತ ಮುತ್ತ ಜನರ ಜೊತೆಯಿರುವಾಸೆ..

            ಸಂದೇಶ ಪೂಜಾರಿ ಗುಲ್ವಾಡಿ