Tuesday, 11 October 2016

ನೆನಪುಗಳು

          ನೆನಪುಗಳು

ಅಂದು ಹುಣ್ಣಿಮೆಯಾಗಿತ್ತು
ಅಂಗಳ ತುಂಬ ತಿಂಗಳ ಬೆಳಕು ಬೆಳದಿಂಗಳ ಚೆಲ್ಲಿತ್ತು..
ಮನವೇತಕೊ ಗತಕಕೆ ತಿರುಗಿತ್ತು. 

ಅಂದು ಚಿಂತೆಕಾಣದ ಮನ
ಚಿಂತೆಯಲೆ ನರಳುತಿದೆ ಈ ದಿನ.
ಬದುಕೆಲ್ಲಾ ಬರಿ ಯೋಗ ಧ್ಯಾನ
ಮೂಕವಾಯ್ತು ಮೌನ....

ಎಲ್ಲವ ಸಾಧಿಸಿ ಜಯಿಸುವ ಕನಸು ಆ ಯುವತನದಲ್ಲಿ.
ಬದುಕನು ನೀಗಿಸಿ ಮುಳುಗಿಸಿ ಮನಸು ಈ ಮುಪ್ಪಿನಲ್ಲಿ..

ಭೊಗಸೆಯ ತುಂಬ ಕಂಡ ಕನಸ ಕದ್ದೊಯ್ದವರಾರು 
ಮಾತು ಮಾತಿಗೂ ನಗಿಸುತಿದ್ದ ಜನ ಎಲ್ಲಿ ನನ್ನವರು?

ಬಾಳ ತಿರುಳೆಲ್ಲ ಇರುಳಲ್ಲಿ ತೊಯ್ದಂತಿದೆ.
ಕಾದ ಮರಳಲ್ಲಿ ಬಿಸಿ ನೀರ ಹೊಯ್ದಂತಿದೆ.

ಬಾ ಚಂದ್ರಮ ಇಲ್ಲಿ ಭುವಿಗೆ
ತಾ ಬೆಳಕನು ಎನ್ನ ಬಾಳಿಗೆ.....
         -ಸಂದೇಶ ಪೂಜಾರಿ ಗುಲ್ವಾಡಿ

No comments: