Thursday, 13 October 2016

ನೀತಿ

                     ನೀತಿ

ನೀವು ಹಿರಿಯರು,ಪುರಾಣ ಗ್ರಂಥ ಹುಡುಕಿ ಹುಡುಕಿ ಕೊಡುತ್ತಿರುವಿರಿ ನಿದರ್ಶನ.
ಕಷ್ಟವಾದರೂ ಅವಡುಗಚ್ಚಿ ಪಾಲಿಸಿದೆ ನಿಮ್ಮ ಮಾರ್ಗದರ್ಶನ. 

ಸ್ವಂತಿಕೆಯ ಮೇಲೆ ಮೂಡುವ ಅದೆಷ್ಟೋ ಪ್ರಶ್ನೆ.
ರೀತಿ,ನೀತಿ,ರಿವಾಜುಗಳ ಮುಂದೆ ಮೂಕ ಸನ್ನೆ.

ನಾನು ಕಿರಿಯವ ನೈತಿಕತೆ ಭೋದಿಸಲು ಹೊರಟರೆ ತಪ್ಪು.
ಇರಲಿ ಬಿಡಿ ಕಾಯುವೆ ನನಗೂ ಬರುತ್ತಲ್ಲಾ ಮುಪ್ಪು.

ಕೊಂಚ ಹಿಡಿದರೂ ತಾಳೆಗರಿಗಳಿಗೆ ಹುಳುಕು,
ನನಗಿಲ್ಲ ಕಿಂಚಿತ್ತು ಅಂಜಿಕೆ,ಅಳುಕು.

ನೀತಿಗಳಲ್ಲಿ ಹುದುಗಿದ್ದರೆ ಸಾಕಲ್ಲವೆ ಸಾರ್ವಕಾಲಿಕ ಸತ್ವ.
ಇನ್ನೇನು ಬೇಕು ಮಂದಿ ಮನಸ್ಸುಗಳಲ್ಲಿ ಹೊಂದಲು ಅಮರತ್ವ.

                              ಸಂದೇಶ ಪೂಜಾರಿ ಗುಲ್ವಾಡಿ

No comments: