Saturday, 8 October 2016

ಜೀವನ ಜಾತ್ರೆ

                          
                           ಜೀವನ ಜಾತ್ರೆ



ತೇರ ಹಬ್ಬದಿ ದೂರವಾದೆವು...

ಅಪ್ಪ ಅಮ್ಮನಾ ಕಾಣದೆ....
ಜಾತ್ರೆ  ಮುಗಿದು ರಾತ್ರಿ  
ಕಳೆದ ಮೇಲೆ  ಖಾತ್ರಿಯಾಗಿತ್ತು ...
ಇಲ್ಲಿರುವುದು  ಸುಮ್ಮನೆ.

ಬಿಕ್ಕಳಿಸಿದ ದುಃಖಕ್ಕೆ
ಅಣೆಕಟ್ಟು ಕಟ್ಟಿದಳಕ್ಕ
ಗಾಳಿ ಗುಳ್ಳೆ  ಊದುತ.
ಚಿಂದಿ ಆಯ್ದರು ಬದುಕು..
ಚಂದವೆನುತ...

ಇಂದಿಗೂ ಅದೇ ಜಾತ್ರೆಯಲಿ
ಮಾಸಿದ ಮುಖಗಳ
ನನ್ನ ಮಾತೆಯಾ
ಅವಳ ಪ್ರೀತಿಯಾ
ರುಜು ಮಾಡುವವರಾರು?

ಎಲ್ಲ ಅರಿತ ದೇವರು
ಹೊರಟಾಯಿತು
ತೇರ ಏರಿ ಮೆರವಣಿಗೆಗೆ.
ಎಂದಿನಂತೆ ಇಂದು ಸಹ
ಕೊನೆಗುಳಿದಿರುವುದು
ನಾನು ನನ್ನಕ್ಕ