Wednesday, 20 March 2024

ನನ್ನಾಕೆ

 ನನ್ನಾಕೆ


ಗುಳಿ ಕೆನ್ನೆ ಹುಡುಗಿ ನನ್ನಾಕೆ ಬೆಡಗಿ
ನಕ್ತಾಳೆ ನೋಡಿ ಕಣ್ಸನ್ನೆ ಮಾಡಿ
ಒಲವಲ್ಲೆ ಸೆಳೆದು ನೋವೆಲ್ಲ ಕಳೆದು
ಹಂಚತ್ತಾಳೆ ಪ್ರೀತಿಯ ಹನಿಹನಿಯಾ

ಅವಳೊಂದು ಸುಂದರ ನೆನಪು
ಅವಳಿಂದ ಮುಂದಿನ ಬದುಕು
ಅವಳಿಗೆ ನನ್ನಯ ಪ್ರೀತಿಯು ಮುಡಿಪು

ಎಲ್ಲಿ ಮೂಡಿತೊ ಪ್ರೀತಿ. ಹೇಗೆ ಹಬ್ಬಿತೋ ನಾಕಾಣೆ..
ಪ್ರೀತಿ ಮೂಡಿದ್ದು ನಿಜ ಹಬ್ಬಿದ್ದು ನಿಜ ನಿನ್ನ ಚೆಲುವಿನಾಣೆ.
ಸಂಚು ಮೂಡಿಸಿದೆ ನಿನ್ನ ಕಣ್ಣಂಚಲಿ
ಕೊಲ್ಮಿಂಚು ಬರಸೆಳೆದಿದೆ ನಿನ್ನ ಸಂಚಲಿ
ಬೇಗ ಬರು ಗೆಳತಿ ಬಾಳಲಿ....
   


ಕನ್ನಡ ಸಿನಿಮಾ ಮತ್ತು ಕನ್ನಡ ಸಂಸ್ಕ್ರತಿ

ಒಂದು ಭಾಷೆ ಹಾಗೂ ಅಲ್ಲಿನ ಸಂಸ್ಕ್ರತಿ ಎರಡೂ ವಿಭಿನ್ನವಾದುದು. ಒಂದು ಭಾಷೆ ಆ ಸಂಸ್ಕ್ರತಿಯ ಮೇಲೆ ಹೆಚ್ಚಿನ ಪ್ರಭಾವ ಬೀರದು.ಆದರೆ ಅಲ್ಲಿನ ಸಂಸ್ಕ್ರತಿ ಭಾಷೆಯಲ್ಲಿ ಬಿಂಬಿತವಾಗುವುದು.

ಸಂಸ್ಕ್ರತಿಯೆನ್ನುವುದು ನಾಗರೀಕತೆಗೆ ಸಂಬಂದಿಸಿದ್ದು.ಒಂದೇ ನಾಗರೀಕತೆಯಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ. ಕೇವಲ ಕನ್ನಡ ಸಂಸ್ಕ್ರತಿಯೆಂದು ಕರೆಯುವುದು ಸಂಕೀರ್ಣ ಪದವಾಗಬಹುದು. ಭಾರತೀಯ ಸಂಸ್ಕ್ರತಿಯಲ್ಲಿ ಕನ್ನಡದ್ದು ಪಾಲುದಾರಿಕೆಯಷ್ಟೇ.

ಸಾಹಿತ್ಯವೆನ್ನುವುದು ಸಂಸ್ಕ್ರತಿಯನ್ನು ಉತ್ತುಂಗಕ್ಕೇರಿಸುವ ಕೆಲಸ ಮಾಡುವುದರಿಂದ ಕನ್ನಡ ಸಿನಿಮಾ ಕ್ಷೇತ್ರವು ತನ್ನ ಕೊಡುಗೆಯನ್ನು ಸಹ ನೀಡಿದೆ.
ಅದರೆ ಇತ್ತಿಚಿನ ಕನ್ನಡ ಸಿನಿಮಾ ಪರದೆಯ ಮೇಲೆ ಇಣುಕಿ ನೋಡಿದರೆ ಭಾಷೆಯ ಗೌರವ ಹೆಚ್ಚಿಸುವ ಕೆಲಸ ಮಂದಗತಿಯಲ್ಲಿ ಸಾಗಿದಂತೆ ಕಾಣುತ್ತಿದೆ.

ಸಿನಿಮಾದಲ್ಲಿರುವ ಸಾಹಿತ್ಯ ಕಥೆಗೆ ಪೂರಕವಾಗಿರತ್ತದೆ.ಕಥೆ ಒಂದು ನಿರ್ದಿಷ್ಟ ಸಂದೇಶವನ್ನು ಪ್ರೇಕ್ಷಕರಿಗೆ ನೀಡುತ್ತದೆ ಇಲ್ಲವೇ ಹೊಸ ಚಿಂತನೆಯನ್ನು ಹುಟ್ಟುಹಾಕುತ್ತದೆ.
ಕನ್ನಡ ಸಿನಿಮಾ ಕಥಾಹಂದರವನ್ನು ಸೂಕ್ಷ್ಮವಾಗಿ ಅವಲೋಕಿಸೋಣ..ಕನ್ನಡ  ಸಿನಿಮಾ ರಂಗ ಅನೇಕ ದಶಕಗಳಿಂದ ಬೇರೆ ಭಾಷೆ ಸಿನಿಮಾಗಳಿಗಿಂತ ಹಿಂದುಳಿದಿದೆ.ಇದು ಒಪ್ಪಲೇ ಬೇಕಾದ ಸತ್ಯ.
ಸಮಕಾಲಿನ  ಬೆಳವಣಿಗೆಯಿಂದ ಇತರ ಭಾಷೆಗೆ ಸಡ್ಡು ಹೊಡೆಯಲು ಎಲ್ಲಾ ಸಿದ್ಧತೆ ಇಂದು ಮಾಡಿಕೊಂಡಿರುವ ಕನ್ನಡ ಸಿನಿ ಕ್ಷೇತ್ರ ರಿಮೇಕ್ ಗೆ ಮಾರು ಹೋಗಿದೆ. ವ್ಯಾಪರದ ದೃಷ್ಟಿಯಿಂದ ಈ ಬೆಳವಣಿಗೆ ಅಗತ್ಯವಾಗಿದೆ.ಕನ್ನಡ ಸಿನಿಮಾ ಇಂದು ಮನೊರಂಜನೆಯ ಮಾತಾಗಿದೆ.ಇಂದೇನಿದ್ದರೂ  ಹೆಚ್ಚು ಪ್ರೇಕ್ಷಕರನ್ನು ಸೆಳೆದು ಬಾಕ್ಸ ಆಫೀಸ್ ಭರ್ತಿ ಮಾಡುವುದು. ಈ ಕಾರಣದಿಂದ ಸಿನಿಮಾ ನೋಡಿ ಭಾಷಾಭಿಮಾನ ಬೆಳೆಸಿಕೊಂಡವರು ಅತ್ಯಲ್ಪ, ಭಾಷಾಭಿಮಾನ ಬೆಳೆಸಲೆಂದೇ ಮಾಡಿದ ಸಿನಿಮಾ ನೋಡುವರೆ ಇಲ್ಲದಂತಾಗಿದೆ.

ಒಂದು ಬಗೆಯಲ್ಲಿ ಯೋಚಿಸಿದರೆ ಕನ್ನಡ ಸಂಸ್ಕ್ರತಿ ನಮ್ಮ ಹುಟ್ಟಿನಿಂದಲೆ ಬೆಳೆದು ಬಂದಿರುತ್ತದೆ.ಅದು ನಮ್ಮ ಭಾವನೆಗಳಿಂದಲೇ ಸದೃಡವಾಗಬೇಕೆ ಹೊರತು ಬಾಹ್ಯ ಪ್ರೇರಣೆಯಿಂದಲ್ಲ. ಕನ್ನಡ ಸಂಸ್ಕ್ರತಿಗೆ ಸಾವಿರಾರು ವರ್ಷದ ಇತಿಹಾಸವಿದೆ. ಹೋಲಿಕೆಯಲ್ಲಿ ಕನ್ನಡ  ಸಿನಿರಂಗ ಇನ್ನು ಮಗುವಷ್ಟೇ..ಕನ್ನಡ ಸಿನಿಮಾಗಳಿಂದ  ಕನ್ನಡ ಸಂಸ್ಕ್ರತಿ ಏಳ್ಗೆ ಕಂಡಿದ್ದಲ್ಲ ಎನ್ನುವುದು ಸಾಬೀತಾದರೂ, ಒಮ್ಮೊಮ್ಮೆ ಉತ್ಕ್ರಷ್ಟ ಸಾಹಿತ್ಯದಿಂದ,ಹಾಡುಗಳಿಂದ,ಕಥೆಗಳಿಂದ ಕನ್ನಡಿಗರ  ಮೈಮನ ರೋಮಾಂಚನವಾಗುವುದಂತು ಸುಳ್ಳಲ್ಲ.
ಇದೆ ಕಾರಣಕ್ಕೆ ಕನ್ನಡ ಸಿನಿರಂಗ ಕನ್ನಡ ತಾಯಿಯ ಸೇವೆ ಸದಾ ಮಾಡುತ್ತಿರಲಿ.


ನಿನ್ನೆ ಎಂಬ ಕರಾಳ

 

ನಿನ್ನೆಯ ದಿನದಂದು ಮುಚ್ಚಿಟ್ಟುಕೊಂಡ ಕಂಪನು
ಇಂದೇಕೆ ಪಸರಿಸುವ ಮನಸ್ಸು ಬಂತು ಹೂವಿಗೆ

ನಿನ್ನೆಯ ದಿನ ಬಿಸಿಲಿಗೆ ಬಾಡುತ್ತಿದ್ದ ಹೂವು
ಇಂದೇಕೆ ತಲೆದೂಗುತ್ತಿದೆ ಕೋಗಿಲೆ ಹಾಡಿಗೆ

ನಿನ್ನೆಯ ದಿನ ಬಿಸಿಲಿಗೆ ಬೇಸರಿಸುವ ಬೇಗೆ
ಇಂದೇಕೆ ರಂಜಿಸುತ್ತಿದೆ ಜಲಧಾರೆ ತಂಪಿಗೆ

ನಿನ್ನೆ ಒಲವಿಲ್ಲದ ಬಳ್ಳಿ ಬೇಡುತ್ತಿದೆ
ಇಂದು ಮರದ ಆಸರೆ.

ನಿಲುವಿಲ್ಲದ ನಿನ್ನೆಯಲಿ ನಲಿಯು ತುಂಬಲಿ ಇಂದು
ನಿನ್ನೆಯ ದಿನವೆಂಬ ಕರಾಳ ಕಳೆದು
ಇಂದಿಗಮೃತವ ಜಯಿಸಲಿ ಈ ಧರಣಿ

ಮಾನವ ಸ್ನೇಹಕೆ ಇಲ್ಲಿ ಕೊನೆಯಾಗದಿರಲಿ
ನಿರಂತರ ತುಂಬಿ ಅಕ್ಷಯವಾಗಲಿ ಈ ಗಣಿ


ತುಂತುರು ಸಿಂಚನ


    ತುಂತುರು ಸಿಂಚನ

ಮಣ್ಣಿನ ಒಡಲಿಗೆ ಘಮ್ಮನೆ ಅಮಲಿಗೆ
ತುಂತುರು ಹನಿಗಳ ಮಿಲನ.

ತಣ್ಣನೆ ಗಾಳಿಯ ಸಣ್ಣನೆ ಮಳೆಗೆ
ತಂಗಾಳಿಗೂ ಹೊಸದಾದ ಕಂಪನ.

ವರ್ಷದ ಧಾರೆಗೆ ಹರ್ಷವ ಮೂಡಿರಲು
ರೋಮಾಂಚನ ಮೈ ಮನ.

ಇಳೆಯಲಿ ಮಳೆಯ ಮುದ್ದಿಗೆ
ತಂಬೆಲ್ಲರ ಋತುಗಾನ..

ಚಾತಕ ಪಕ್ಷಿಯ ಕಾತುರಕೆ
ಹೊಸ ಋತುವಿನ ಆಗಮನ..


ನಡುಮನಿ ಸಿದ್ದ

 

ನಡುಮನಿ ಸಿದ್ದ


ಅವ್ ಹೊತಾ ಬತ್ತಾ..ಅತ್ತಿತ್ತ  ತಿರ್ಗಾಡ್ತಿದ್ದ, ನಿತ್ತಲ್ಲ ನಿತ್ಕಂತಿಲ್ಲ..
ಹೊಯ್ ಎಂತಾ ನಾನ್ ಕತಿ ಹೇಳ್ತಿದ್ನ ನೀವ್ ಹೂಂಗುಟ್ಟುಕ್ಯ..
ಇದ  ದಿನ ನಿತ್ಯದ ಸ್ಟೋರಿ ಮಾರ್ರೆ.ಅದೆ ನಮ್ಮ ಸಿದ್ದಣ್ಣನ ಸ್ಟೋರಿ..
ಅವನಿಗ್ಯಾ ಹಿಂದಾ ಮುಂದಾ?
ಒಂದ್ ಜೀವ್
ಆರು ಕಾಣಿ...ಅವನ್ ಕಂಡ್ ಕಲಿಕ್.
ಎಷ್ಟ್ ಚುರ್ಕ್ ಕಾಣಿ.
ಅವನ್ ಮುಖದ್ಯಾಗ ಇಪ್ಪು ಖುಷಿ ನಿಮ್ಗೆಲ್ಲ್ ಬತ್ತತ್?


"ಬಾಡದಾ ಆರದಾ ಅವನ ಮುಖದರವಿಂದ ಚಂದ ಚಂದ.."


ಅವ್ನಿಗೆ ಈ ಹೊಸ್ರ ಬಪ್ಪುಕು ಒಂದ್ ಕಾರಣ ಇತ್ತ್.
ಓಲ್ಕಾಣಿ  ಆ ಗೆದ್ದಿ ತುಂಡೆಗೆ  ಸಾಲ್ ಮನಿ ಕಾಣ್ಸತ್ತಾ?
ಆಗಳಿಕೆ ಅಲ್ಲ ಮೂರ್ ಮನಿ ಇದ್ದಿತ್ ಮಾರ್ರೆ.
ಆ ನಡ್ಗಿನ ಮನೆಗೆ ಈ ಶ್ರೀಧರ ಇದ್ದದ್.
ಆಬ್ಬಿ ಸಾಯುವರ್ಷದಾಗ ಇವನಿಗೊಂದ್ ಮದಿ ಮಾಡಿದಾಳ್.. ಹೆಂಡ್ತಿ ಏನೋ ಒಂತಿಂಗಳ ಇದ್ದಿದಾಳ್.ಕಡಿಕೆ ಯಾವನ್ನೊ ಕಟ್ಕಂಡ್ ಓಡಿ ಹೋದಳ್ ಅಂಬ್ರ..ನಂಗುತ್ತಿಲ್ಲಾ..ಊರೆಗ ಮಾತಾಡತ್ ಕೆಂಡದ್ ಅಷ್ಟೆ..
ನಿಜ ಯಂತ ಗುತಿತಾ..ಅದ್ ಬೇರೆನೆ ಕತಿ,
ದಿವಳಿ ಹಬ್ಬದ ಸುರೀಗೆ  ಎಂತದ ಮರೆ ಕಿಚ್ಚ ಹಿಡದ.ನೆನ್ಪಿಗೆ ಬತ್ತಿಲ್ಲಾ
.ಹಾ ಹಾ..
ಅದೆ ಅಕ್ಕ ತಂಗಿಯರ್ ಹೂವ್ ಹೆಕ್ಕುಕ್ ಹೋಯ್ದೆ..
ಅಲ್ಲೆ ಒಂದ್ ಗಳ್ಗಿ ಮಾತಾಡ್ಸಕ್ ಬಂದೆ.
ಹ್ಯಾಂಗಿದ್ಯ ಎಂತ ಮರೆಯಾ ಅನ್ಕಂಡ,ಹಂಗೆ ಒಂದ ಮಾತ್  ಹೊತ್ತ ಹಾಕ್ದೆ..ನಂಗ  ಬ್ಯಾಡ್ದಿದ್..ಆರೂ ಗಳ ಗಳ ಅಂಬ ಬಾಯ್ ಕೆಂತಾ..?

"ನೀನ್ ಒಬ್ನೆ ಹ್ಯಾಂಗ್ ಇರ್ತಿ ಮರೆ..ಇದ್ದದ್ ಒಂದ್ ಹೆಂಡ್ತಿನು ಮದಿಯಾಯಿ ಒಂದ್ ತಿಂಗಳ್ಯಾಗೆ ಅಟ್ಟೂಳಿ ಕೊಟ್ಟ ಓಡ್ಸದಿ ಅಂಬ್ರಲೆ"?

ಕೆಂಬುದ ಕೆಂಡ್ಕಂಡಿದೆ ಎದೆಗೆ ಪುಕ್ ಹುಟ್ಟಿತ್ ಬೈತ್ನೊ ಗೀತ್ನೋ ಅಂದೇಳಿ

ಸುಳ್ ಹೇಳ್ರೂ ಹೂ ಅಂಬ್ರಿ...ಬದ್ದು ಹೇಳ್ರೂ ಹೂ ಅಂಬ್ರಿ
ಪಾಪ ಅವ್  ಅದೇ ಮುಗಳ್ ನಗೆಗೆ ಹೇಳ್ದ್ ಕಾಣಿ..

" ನಂಗೆ ಮದಿ ಆಪತಿಗೆ ೩೫ ಮಳಿಗಾಲ ಕಳ್ದಿತ್. ಸುಮಾನಿಗೆ ೨೧ ಅಷ್ಟೇ.. ಅವಳಿಗೆ ಕಾಲೇಜ್ ಅಲ್ ಒಬ್ಬ ಪ್ರೇಂಡ್ ಇದ್ದಿದಾ ..ಅವನ್ನೆ ಮದಿ ಆಪ್ದ ಅಂತ ಅವರಿಬ್ಬರ ಅನ್ಕಂಡಿರ..ಈ  ಆಬ್ಬಿ  ಗಡ್ಬಿಡಿ ಮಾಡಿ ನಂಗ ಗೆಂಟಾಕ್ರ..
ನಂಗು ಅನ್ಸತ್ ಅವರಿಬ್ಬರ ಒಟ್ಟಿಗೆ ಇದ್ರ ಖುಷೆಗೆ ಇರ್ತರ್ ಅಂತ..ಅದ್ಕೆ ಅವನ್ ಕರ್ಸಿ ಘನ ಗಳ್ಗಿ ಕಂಡ ದೇವ್ಸತಾನ್ದಗೆ ನಾನೆ ಮದಿ ಮಾಡ್ಸಿ ಕಳ್ಸಿದೆ.."

ಎಂತ್ ಜನ ಮರ್ರೆ ಸಾವ್ರ ಕೊಟ್ರು ಸಿಗುದಿಲ್ಲ.
ಇಂತ ಉದಾತ್ತ ಜನ ಸಿಕ್ಕುದ ಅಪ್ರೂಪಾ..


"ಮನದಂಗಳ ಮರೆಯಲ್ಲಿ ಮರೆ ಮಾಡಿರುವ ನೋವುಗಳ
ಮೊಗದಲ್ಲಿ ಮಂದಹಾಸ ಮಾಸದ ಮಾರುಡಿಗ"


ಈ ಶ್ರೀಧರ ಎಲ್ಲಾ ಕೆಲ್ಸುಕು ರೆಡಿ..ಗೆದ್ದಿ ಹೂಡೂಕು,ದೋಣಿ ಒತ್ತುಕೂ,ಅಂಚ್ ಕೆರ್ಸುಕೂ,,ದರ್ಲಿ ತಪ್ಪುಕೂ,ಮಕ್ಕಳ ಆಡ್ಸುಕೂ..ಕಡಿನ್ ತುದಿಗೆ ಹೆಣ ಹೊರುಕು ರೆಡಿ...
ಹಿಂಗಾಯೇ  ಅವ ಸಿದ್ದ..ಅದ್ದ್...
ಅನಿಗಿದ್ದ ಟಾಲೆಂಟ್ ಒಂದೆರಡಾ..ಬತ್ತಿಲ್ಲಾ ಅಂಬ ಕೆಲ್ಸ ಇಲ್ಲ..ಆತಿಲ್ಲ ಅಂಬ ಮಾತಿಲ್ಲ.. ಅವನ್ ಮಾಡೊ ಮಿಮಿಕ್ರಿ ಡ್ಯಾನ್ಸ.ಹಾಡೊ ಸೊಂಗ್ ಒಂದ ಎರಡಾ..ನಂಗೆ ಸೀಟಿ ಹೊಡುಕೆ ಅವನೆ ಕಲ್ಸಿಕೊಟ್ಟದ.


"ಸಕಲ ಕಲಾವಿದ ಸಕಲರಲ್ಲಿ ಒಂದಾಗಿದ್ದು
ಜನರ ಮನಶಿಖರವೇರಿದ್ದ"


ದುಡದ್ ದುಡ್ಡೆಗೆ ಒಂದ್ ಪೈಸೂನು ಇಟ್ಕಂಡಗೆ ಇಲ್ಲ..ಬರಿ ಹಾಳ್ಗೇಡಿ ಕಾಂಬರ ಕಣ್ಣಿಗೆ.ಅದ್ರೆ ಅವನ ವಿಚಾರನೆ ಬೇರೆ..ತಾನೆಂತು ಶಾಲಿಗೆ ಹೊಯಿಲಾ..ಅಂದೇಳಿ..ನಾಲ್ಕೈದ್ ಮಕ್ಕಳಿಗೆ ..ಶಾಲಿಚೀಲದಿಂದ ಹಿಡಿದ ಅವರ ಅಶ್ರಮದ ಪೀಸ್ ವರೆಗೂ.. ಅವಂದೆ ಖರ್ಚ್.
ಒನೊಂದಸಲ ನಂಗನ್ಸುದ ಇದ್ದರ್ ಓಡ್ತರ್ರ...ಇಲ್ದಿದ್ದರ್ ಒದ್ದಾಡ್ತರ್..


"ಉದಾತ್ತ ಚರಿತನು ಉದರ ಕಟ್ಟಿ,ಊರಿಗೇ ಪರೋಪಕಾರಿಯಾದ"


ಒಂದಸಲ ಟೆಂಪೊದಾಗೆ ಸರ್ಕಾರದ ಒಂದ ಅನೊನ್ಸಮೆಂಟ್ ಬಂದಿತ್.

ಮನೆಗೊಂದು ಮಗು
ಊರಿಗೊಂದು ವನ

ಅವತ್ತೆ ಅವ್ ಡಿಸೈಡ್ ಮಾಡಿದ ಅಂಬ್ರ..ಮರ ಬೆಳಸರ್ ಸಾಕತಿಲ್ಲ..ಕಾಡೆ ಬೆಳಸುವ ಅಂತ..

ಹಳಿಶಾಲಿ ಕಟ್ಟಡ ಇತ್ತ ಅಲ್ಲೊಂದ ಐದ್ ಎಕ್ರಿಜಾಗ..ಖಾಲಿ ಇತ್ತ..ಜಾಗದ ಒಡಿಯರ್ ಗಿಡಿಯಾರ್ ಯಾರೂ ಇಲ್ಲ..ಅಲ್ಲಿ ಒಂದ ಕಾಡನ್ನೆ ಸೃಷ್ಟಿ ಮಾಡಿದ..ಇದನ್ನ ಮಾತ್ರ ಎಷ್ಟ ಕಷ್ಟ ಅದ್ರು ಸರಿ ಕಡುಕೆ ಬಿಡುಕಾಗ ಮಗ ಅಂದಿದ್ದ.

ನಾನಂದೆ ಯಾರಾರು ಕಡುಕೆ ಬಂದ್ರೆ ಊರರೆಲ್ಲ ಸೇರಿ ಕತ್ತಿ ಹಿಡ್ಕ ಹೊಪಾ..ನೀನೆನ್ ಟೆನ್ಸನ್ ಮಾಡ್ಬೇಡ .

ಅರ್ದೊಸಿ ಕಾಡ್ ಹೋದ್ ಈ ಕತ್ತಿ ಹಿಡದ ಊರರಿಂದಲೆ..

ಊರಿಗಂತು ವನ ಆಯ್ತ್ ...ಮನಿಗೆ ಮಗು ಯಾವಾಗ ಕೇಳ್ದೆ...ನಾನಿದಿನಲ್ಲ ಅಂತ ನಕ್ಕ...


"ಮನಸ್ಸು ಮಗುವಾದಗ ಮನುಷ್ಯ ಲಘುವಾಗುವನು"


ತಿಳಿಮುಗಿಲ ತೊಟ್ಟಿಲಲಿ

 

ತಿಳಿಮುಗಿಲ ತೊಟ್ಟಿಲಲಿ
ಬಿಳಿಮೋಡ ಹುಟ್ಟಿರಲೂ
ಮಳೆ ಕಟ್ಟಿ ಸುರಿಯುವುದೇ ಇಳೆಗೆ..

ಚಳಿಗಾಳಿ ಬೀಸಿರಲು
ನೀರುಕ್ಕಿ ಬರುತ್ತಿರಲು
ಹಾಯ್ದೋಣಿ  ಕಟ್ಟಿರುವೆ ಹೊಳೆಗೆ..

ಮಾಗಿದ ತೆನೆಯ ಫಸಲು
ಘಮ್ಮೆಂದ ಮಲ್ಲಿಗೆ ಎಸಳು
ಉಯ್ಯಾಲೆಯಾಡಿದೆ ನೋಡು ಹಕ್ಕಿಗೂಡು

ಹಾಸೋ ಕಲ್ಲಿನ ಮೇಲೆ ಮಲಗಿ
ಬೀಸೋ ಗಾಳಿಯ ಸವಿಯು
ಸೂಸಿ ತಂದ ಗಂಧ ಎಷ್ಟು ಚೆಂದ

ಕಲ್ಲು ಚಪ್ಪರದಿಂದ
ಹುಲ್ಲು ಹಾಸಿನವರೆಗೂ
ಬೆಳ್ಳಕ್ಕಿ ಸಾಲು..ಎಳೆ ಬಿಸಿಲಲ್ಲೂ..

ಹನಿ ಹನಿ ಇಂಚರಕೆ
ತುಂತುರು ಮಳೆಯಲ್ಲಿ
ನಾಟ್ಯವಾಡಿದೆ ಕಾಮನ ಬಿಲ್ಲು ಎಲ್ಲೋ ಮರೆಯಲ್ಲಿ..


Tuesday, 19 March 2024

ಹೈಕು

 

ಹೈಕು


ಬಾಳು ಬಂಗಾರ
ಮನವು ಬೆರೆತಾಗ
ಒಲವಿನಲಿ..


ಸ್ನೇಹ ಶೃಂಗಾರ
ದೊರೆತಾಗಲೇ ನೀನು
ಸಂಜೆಯಲಿ..


ನಗುವೆಂಬ ಆತ್ಮವಿಶ್ವಾಸಿ

 


ನಗು ತೋರಣವ ಕಟ್ಟಿ ಶೃಂಗರಿಸು ನಿನ್ನ ಮೊಗವ
ಮಂದಹಾಸದಿ ತೋರುವುದು ಆತ್ಮ ವಿಶ್ವಾಸ.

ಮೀನ ಮೇಷ ಎಣಿಸಿ ನಿರ್ಧರಿಸುವ ಮೂಡನಾಗದಿರು
ನಾಯಕನಾಗು ನೀ ನಾಗರಿಕನಾಗು.

ಅಲ್ಲೆ ಇರು..ಎಲ್ಲೆ ಇರು ಎಲ್ಲೆ ಮೀರದಿರು.
ವಾಲುವ ಮನಕೆ ಒಲಿಯದು ಯಶಸ್ಸು.

ಗಾಳಿಗೋಪುರವಾಗದಿರಲಿ ನಿನ್ನ ಗುರಿ
ಗುರು ತೋರುವ ಮಾರ್ಗದರ್ಶನವೇ ನಿನಗೆ ದಾರಿ.

ಇಲ್ಲಿ ಭಾವವು ಮುಖ್ಯ ಭಾವನೆಯು ಮುಖ್ಯ.
ಭಾವುಕನಾಗಿ ಕರ್ತವ್ಯ ಮರೆಯದಿರು.

ತರಾತುರಿಯಲಿ ನೀಡಿದ ತರಬೇತಿ ತ್ವರಿತದಿ ನೀ ಅರಿತೆ.
ಅರಿವು ನಿನಗಷ್ಟೆ ಜಂಭ ಪಡಬೇಡ.
ಅವರಿವರ ಯಶಸ್ವಿಗೆ ಮತ್ಸರವೂ ಬೇಡ.

ಅವರು ದರ್ಶಕರು ಮಾರ್ಗದರ್ಶಕರು
ಅವರ ಅರಿವಿನ ತಿರುಳನ್ನು ದಾರೆಯಾಗಿ ಎರೆದವರು.
ನಮ್ಮೊಳಗಿನ ಶಕ್ತಿಯನ್ನು ನಮಗೆ ಪರಿಚಯಿಸಿದವರು.

ಇವರು ಪ್ರೋತ್ಸಾಹಕರು.
ಅವಕಾಶವನ್ನು ಕಲ್ಪಿಸಿದವರು.
ಆಸಕ್ತಿ ಮೂಡಿಸಿದವರು.
ಆವರಣ ಸೃಷ್ಟಿಸಿದವರು.

ಮಹನ್ ಸಂಸ್ಥೆಯಲ್ಲಿ
ನಾವು ಕಲಿತೆವು..ಆಟವಾಡಿ ಕಲಿತೆವು.
ಹಾವು ಏಣಿ ಜೀವನದಲ್ಲಿ ಮುಂದೆ ಸಾಗುವದ ಕಲಿತೆವು.

ಮತ್ತೊಬ್ಬರ ಬದುಕಿಗೆ ಹೂವಾಗಿ ಅರಳುವುದ ಕಲಿತೆವು.
ಇನ್ನೊಬ್ಬರ ನೋವಿಗೆ ನೆರಳಾಗುವುದ ಕಲಿತೆವು.

ನಮಗೆ ಭರವಸೆ ಇದೆ.
ಈ ಸಂಸ್ಥೆಗೆ ನಮ್ಮ ಪ್ರೌಢತೆಗೆ ತಕ್ಕ ಹೆಮ್ಮೆಯ ಕಾಣಿಕೆ ನೀಡುವೆವು ಎಂಬ ಮನದಾಸೆ ನಮಗಿದೆ.


ಮೌನದಾಸೆ

 ಕೆಂಗುಲಾಬಿ ತೋಟದ ಪಕ್ಕದಲಿ

ಕಣ್ಣಂಚಿಗೆ ಸೆರೆಸಿಕ್ಕ ಹೂಗಾರ
ಹರೆಯದ ಹೆಣ್ಣು ನಕ್ಕರೂ
ಹಲ್ಲು ಕಿರಿಯದ ಮುಜುಗರ

ಕಾಲು ಸವೆದ ಜೀವನ
ಅರ್ಧ ದಾಟಿದ ಯೌವನ
ಆಸೆ ಕಂಗಳ ಹೂ ಮನ
ಯಾರಿ... ಚೆಲುವ ಮೋಹನ...

ತಿದ್ದಿ ತೀಡಿದ ಕುಡಿ ಮೀಸೆ
ಕನಸ್ಸಲ್ಲೂ ಅವನ ಭ್ರಮಿಸಿ
ಹತ್ತಿರದಲ್ಲೆ ಮುದ್ದಿಸುವಾಸೆ

ಮೈತ್ರಿಯ ಮಾಡಲೇ..
ಕೈಯ ಕುಲುಕಲೇ..
ಸ್ನೇಹ ನೋಟವ ಬೀರಲೇ...

ಗೊಂದಲದ ಮಧ್ಯ
ಮೂಡಿದ ಮನದಾಸೆಗೆ
ತಿಲಾಂಜಲಿ ನೀಡಿ
ಸದ್ದಿಲ್ಲದೆ ಜಾರಿ ಕೊಳ್ಳಲೇ..

ಇಲ್ಲ..ಅವನ ಅರಿವಿನಲ್ಲಿ
ನನ್ನ ಪರಿವೆಯಿಲ್ಲದೆ ಕಿತ್ತಿರುವ
ಗುಲಾಬಿ ಮೊಗ್ಗ  ಕೈಗಿತ್ತು ಜೋಪಾನ ಎನ್ನಲೇ..



ಮೌನಿ

 

ಮೌನಿ

ಮರೆತು ಹೋದೆ ನಾ
ಮೌನದ ಜೊತೆ ಬೆರೆತು ಹೋದೆ ನಾ
ಮಾತು ಕಟ್ಟಿ ಬಿಟ್ಟ ಪ್ರೇಮಿ ನೀನು
ಭಾವನೆ ವ್ಯಕ್ತಪಡಿಸಲಾಗದ  ಮೌನಿ ನಾನು.
ಅತ್ತು ಬತ್ತಿ ಹೋಗುವ ಮುನ್ನ
ಭಾವನೆಗಳಿಗೆ ಜೀವ ನೀಡು.
ಹೊತ್ತು ಹೊತ್ತಿಗು ಕಾಡುವ ನೆನಪು
ನಿನ್ನ ದಾರಿಯನ್ನೆ ಕಾದಿದೆ..
ಹೃದಯವ ಕುಕ್ಕಿ ರುಚಿ ನೋಡವ ತವಕವೇಕೆ
ಅದು ಚೂರದ ಗೂಡು ಒಂದು ಮಾಡು.


ಮನ ಜಾರಿತು ನಿನ್ನೊಳಗೆ

 

ಒಲವಿನ ಓಲೆಗೆ ಒಲಿದಾಳಾಕೆ
ಇನಿಯನ ಕಾಯುವ ಕಾತುರಕೆ..
ಕಸಿವಿಸಿ ಮನಕೆ ಹುಸಿ ಬಯಕೆ..  
ಮರಳ ಮೇಲೆ ಬೆರಳು ಗೀಚುತಾ ತರುಳೆ
ಮನದಲಿ ನಗುತಿರೆ.
ನಯನ ನಾಚುತಿರೆ ವದನ ನನ್ನ ದೋಚುತಿರೆ
ಭಾವ ತುಂಬಿದ ಬಯಕೆಗೆ ಜೀವ ಬಂದಿದೆ ಇಂದೆ.
ಕಣ್ಣ ಸನ್ನೆಯಲ್ಲಿಯೇ ಕೆನ್ನೆ ಕೆಂಪೇರಿದೆ.
ಕಿರುಬೆರಳ ಹಿಡಿದಾಗ ಅಡಿ ಮುಂದಿಟ್ಟು ದೂರ ಸರಿಯದೆ ಎದೆಗೆ ಒರಗಿದವಳು.
ಅಪ್ಪುಗೆಗೆ ಇದೆ ಒಪ್ಪಿಗೆಯೆಂದು ಹೆರಳ ಸರಿಸಿದೆ ಮೆಲ್ಲಗೆ.
ತೋಳ ಬಂಧನದಲ್ಲಿ ತೋಯಿಸಿದೆ ಮುತ್ತುಗಳ
ಬಿಸಿಯ ಬೆಸುಗೆಯಲ್ಲಿ ಬೆಸದ ಬಂಧನದಲ್ಲಿ
ಬರಿಯ ಭಾಷೆ ಉಸಿರಿನಲ್ಲಿ
ಬೆದರಿದ ಹನಿಗಳು ಕುಸಿದವು ಉಸುಕಿನಲ್ಲಿ.
ಕಣ್ಣ ಕಾಡಿಗೆ ಕಡಲ ಪಾಲಿಗೆ.
ಉಕ್ಕಿದ ಅಲೆಗಳ ಸಿಂಚನದಲ್ಲಿ ದೇಹ ತಂಪೇರಿದೆ.
ನಿನ್ನ ಪ್ರೀತಿಗೆ ನನ್ನ ಬಾಳು ಬೆರಗಾಗಿದೆ..


ಒಲವಿನ ಗೆಳತಿ

 

                     ಒಲವಿನ ಗೆಳತಿ
ಹುಚ್ಚು ಹುಡುಗಿ ನಿನ್ನ ನಾನು
ಮೆಚ್ಚಿಕೊಂಡೆ ಏಕೋ ಏನೋ
ಹೃದಯ ಬಯಸಿತೆ ನಿನ್ನ ಸಂಗ ಒಂದು ಅರಿಯೆನು.

ಮೋಡಿ ಮಾಡಿ ನನ್ನ ಕರೆದೆ
ನಿನ್ನ ನೋಡಿ ನನ್ನೆ ಮರೆತೆ
ಆಹಾ ನಂಟು ಮಾಡಿಕೊಂಡೆಯಲ್ಲ ಎಂತ ತುಂಟಿ ನೀನು.

ಸ್ನೇಹದ ನೋಟವಿದೆ
ಮಾತಿನಲ್ಲಿ ಮೋಡಿ ಇದೆ
ಹೇಳಲಾರದೆ ನಿನ್ನ ಸಲುಗೆಗೆ ನಾ ಸೋತು ಹೋದೆನು.

ಲಜ್ಜೆಗೆ ಹೆಜ್ಜೆ ನೀನು
ಹೆಜ್ಜೆಗೆ ಗೆಜ್ಜೆ ನಾನು 
ನನ್ನ ಅಂತರಂಗವ ಅಂದದಲ್ಲಿ ಬಂಧಿಮಾಡಿದೆ ನೀನು.

ಪ್ರೀತಿಯಲ್ಲಿ ಮೇಘಮಾಲೆ
ಮಾತಿನಲ್ಲಿ ಮೌನದೋಲೆ
ಒಲವಿನಲ್ಲಿ ನನ್ನ ತುಂಬಾ ಸನಿಹ ಸೆಳೆದವಳೇ..


ಬತ್ತಿದೆ ಭಾವನೆ ಮತ್ತೆ ಬಿತ್ತದಿರು ಕಾಮನೆ.

 

ಬತ್ತಿದೆ ಭಾವನೆ ಮತ್ತೆ ಬಿತ್ತದಿರು ಕಾಮನೆ.
ನಿನ್ನಂತರಂಗ ಅರಿವುವ ಮನಸ್ಸು ನನಗಿಲ್ಲ..
ನನ್ನದೀಗ ಪ್ರೀತಿ ಬತ್ತಿದ ಹೃದಯ..
ಕೇವಲ ನಿನ್ನ ಗೋಳು ಕೇಳಬಹುದು ವಿನಹ
ಬಾಳು ನೀಡಲು ಸಾಧ್ಯವಿಲ್ಲ.

ಕಾಡಬೇಡ ನಿನ್ನ ಕೂಡಿಕೊಳ್ಳುವ
ಕೊರಿಕೆ ನನಗಿಲ್ಲ
ಹಂಬಲಿಸುವ ಹೃದಯದಲ್ಲಿ
ಬೆಂಬಲಿಸುವ ಮನಸ್ಸೆ ಇಲ್ಲ.
ಮತ್ತೊಮ್ಮೆ ಪ್ರೀತಿ ಸಂಭವಿಸಲು ಸಾಧ್ಯವೇ ಇಲ್ಲ.

ಮುನಿಸಿಕೊಂಡಿದೆ ಮನಸ್ಸು ಕಡೆಗಳಿಗೆಯಲ್ಲಿ
ನಿನ್ನೊಂದಿಗೆ ಕರಗಿತು ಈ ಜಗತ್ತು.
ಕನಸೊಂದಿಗೆ ನಾ ಮಣ್ಣಾಗಿದ್ದಿದ್ದರೆ ಚೆನ್ನಾಗಿತ್ತು
ಇಂದು ನಿನ್ನ ದುರಂತಕೆ ನಗುವವರ
ಮಣಿಸಲಾಗುತ್ತಿಲ್ಲ,ನಿನ್ನ ತಣಿಸಲಾಗುತ್ತಿಲ್ಲ..


ಮುದ್ದು ಪೆದ್ದು

 

ನೀ ಕಾರಣವೋ ಪ್ರೇರಣೆಯೋ
ನನ್ನ ಖುಷಿಗೆ
ಓ ಪ್ರಿಯರಾಣಿಯೇ

ಮುದ್ದು ಪೆದ್ದು ಹುಡುಗಿ 
ನಿನ್ನ ಕದ್ದು ನೋಡವಾಸೆ..
ಸದ್ದು ಮಾಡದೆ ಬಂದಿರುವೆ ...ಈ ಮುಂಜಾವಲ್ಲಿ..

ಮುಸುಕೆಳೆದು ಕೊಳ್ಳದಿರು
ಮಗ್ಗಲು ಬದಲಾಯಿಸದೆ ಮಲಗು..
ಸಣ್ಣ ನಗುವಂದಿಗೆ..
ಕಿಟಕಿಯಲ್ಲಿ ಬಂದಿಣುಕುವೆ  ಆ ಚಂದ್ರನಂತೆ...

ನಿನ್ನ ಆಸೆಗೆ ಕೊಟ್ಟಿರುವ ಭಾಷೆ ಮುರಿದಿರುವೆ..
ಕೊಪಿಸಿ ಕೊಳ್ಳದಿರು..
ನೀ ಕೊಟ್ಟ ಸಿಹಿ ಮುತ್ತು ಖಾಲಿಯಾಗಿದೆ.

ಮೊದಲೇ ಕೊಟ್ಟಿರುತ್ತಿದ್ದರೆ
ಈ ಖಯಾಲಿ ಬೇಕಿರುತ್ತಿರಲಿಲ್ಲ..
ಭರ್ತಿ ಮಾಡಿಬಿಡು ನೀನೇ ಖುದ್ದಾಗಿ
ಸವಿಯ ಸಿಹಿ ಮುದ್ರೆಯೊತ್ತಿ...


ಗೆಳತಿ

 



ಗೆಳತಿ 
    
ತಿಳಿ ನೀಲಿ ಕಂಗಳ ಚೆಲುವೆ
ನಿನ್ನ ಹಳೆ ನೆನಪು ಮಾಸಲು
ಹೊಸದೇನ ನಾ ಮಾಡಬೇಕು ಹೇಳು.

ಮುಂಗುರುಳ ಮೇಘ ಸುಂದರಿ
ನಿನ್ನ ಬಿಳಿ ಮೊಗದಲ್ಲಿ ಹಳೆ ನಗುವ ಸ್ಪುಟಿಸಲು
ನಾನೇನು ಮಾಡಬೇಕು ಹೇಳು..

ನಿನ್ನ ಪ್ರೀತಿಯಲ್ಲ ಕದ್ದೊಯ್ದು
ಖಾಲಿ ನೆನಪುಗಳನ್ನು ಬಿಟ್ಟು ಹೋದ ಅವನಿಗೆ
ಗುಡ್ ಬಾಯ್ ಹೇಳಲು
ನಾನೇನು ಮಾಡಬೇಕು ಹೇಳು..

ಅಪರೂಪಕ್ಕೆ ನಿನ್ನ ನೋಡುತ್ತಿದ್ದೆ
ಏನೋ ಗುಂಗಲ್ಲಿ ಖುಷಿಯಾಗಿರುತ್ತಿದ್ದೆ
ಆ ಹಳೆ ಹುಡುಗಿ ಬೇಕು ನನಗೆ
ಅದಕ್ಕಾಗಿ ನಾನೇನು ಮಾಡಲಿ ಹೇಳು..

ನಿನ್ನ ದೂರಮಾಡಿದ ಗೆಳೆಯನಿಗೆ
ನಿನ್ನಂತೆ ಹಿಡಿಶಾಪ ಹಾಕಲೇ
ಇಲ್ಲ ಮೊದಲಬಾರಿಗೆ ನೀ ನನ್ನೊಂದಿಗೆ ನಕ್ಕಾಗ
ಅವನ ಮರೆಯಲ್ಲಿ  ನೋಡುತ್ತಿದ್ದ
ನಿನ್ನ ಹಳೆ ನಗುವ ನಾ ಮರೆತು ಬಿಡಲೇ?


ಹೂವು

 

ಹೂವು


ನನ್ನ ಎಳೆ ವಯಸ್ಸಿನಲ್ಲಿ ನನ್ನದೇ ಗುಡಿಸಿಲಿನಲ್ಲಿದ್ದ ಕಾಡ ಹೂವೊಂದು ನಗುವುದ ಕಂಡೆ
ಬೇಡಿ ಬಂದವನಿಗೆ ನೀಡದೆ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡೆ.

ಅಕ್ಕಪಕ್ಕದ ಹೂವುಗಳು ನಲುಗುವುದ ಕಂಡೆ ನೀನೊಬ್ಬಳೆ ನಗುವುದ ಕಂಡೆ.

ಬೇಡ ಬೇಡವೆಂದರೂ ಬೇಡನ ಕರೆದು
ಬಾಡಿಹೋಗುವ ಮುನ್ನ ಬಳುವಳಿಯಾಗಿ ನೀಡಿದೆ.

ನೀಡುವ ಮುನ್ನ ನನಗರಿವಿರಬೇಕಿತ್ತು.
ಬತ್ತಳಿಕೆಯಲ್ಲಿ ಮುಳ್ಳುಗಳೆ ತುಂಬಿರುವ ಬೇಡನಿಗೆ
ಹೂವಿನ ಮೃದುತ್ವ ಹೇಗೆ ಅರಿತಾನು..

ಇಲ್ಲೇ ಬಾಡಿದ್ದರೆ ನಿನ್ನ ಬೀಜಗಳಿಂದ ಹೂ ತೋರಣವೇ ಗುಡಿಸಲ ಮುಂದೆ ಇರುತ್ತಿತ್ತೊ ಏನೋ .
ಆಗಾಗ ಬೇಲಿಯಲ್ಲಿದ್ದ ಹೂಗಳ ಕಂಡಗ ನಿನ್ನೆ ಹುಡುಕುತ್ತಿದ್ದೆ ನಿನ್ನ ವಂಶವೃಕ್ಷ ಇರಬಹುದೆಂದು.

ಒರಟ ಅವನು ಮುಳ್ಳುಗಳ ಉಳಿಸಿ
ಎಸಳುಗಳ ಎಸೆದಿರಬಹುದು.
ಹೂವಿಗೆ ಮುಳ್ಳು ಕಾವಲು ಹೊರತು ಆಸರೆಯಲ್ಲ..
ಆಸರೆ ನೀಡುವ ದುಂಬಿ ಇತ್ತ ಕಡೆ ಸುಳಿದಿಲ್ಲ.

ಈ ಇಳಿ ವಯಸ್ಸಲ್ಲಿ ಎದುರಿದ್ದರೂ ನನ್ನ ಕಣ್ಗಳು ನಿನ್ನ ಗುರುತಿಸಲಾರವು.
ನೀ ಚುಚ್ಚಿದರೂ ಮುಳ್ಳುಗಳು ನನ್ನ ಸ್ಪರ್ಷಿಸಲಾರವು.


ಕೇಳು ನನ್ನವನೇ...

 

ಕೇಳು ನನ್ನವನೇ...ನನಗಾಗಿ ವ್ಯಥೆ ಪಡದಿರು..
ಭಾವದ ಜೀವ ನೂರು ಕಂಬನಿಯ ಹನಿಗಳ  ಮಿಡಿವಾಗ...
ಸ್ನೇಹದ ಸಿಂಚನ ಹರಿಸಬಹುದೇ..?

ಮರಳು ಮಾಡದಿರು ಮರೆಯಾಗು ನೀನು
ಮರಳುವೆ ನಾನು ಹಳೆ ನೋವಿಗೆ..
ಮುರಿದಿರೋ ಮನದಲಿ  ಹೊಸ ಹಾಡಿಗೆ..

ನನ್ನ ಭ್ರಮೆಲೋಕದಲಿ
ಹೇಗೆ ಸ್ಪಂದಿಸಲಿ ನಿನ್ನ ಭಾವಕೆ..
ಕಟ್ಟಿಕೊಂಡ ಬಂಧವಿನ್ನು ಬಿಟ್ಟು ಹೋಗದೆ ತಡೆದಿರುವಾಗ.

ಸ್ನೇಹಕ್ಕಿಲ್ಲಿ ಸೇತುವೆ ಕಟ್ಟದಿರು..
ಜಾರುತಿರುವ ಮನದಲಿ ಏರು ಪೇರಿನ ಭಾವ ಬೆಸೆಯದಿರು.
ಕೊಚ್ಜಿಹೋಗುವೆ ನಾ ನಿನ್ನ ಪ್ರೀತಿಯ ಪ್ರವಾಹದಲಿ...

ಕಲಕಿ ಹೋದ ಮನವ ಮತ್ತೆ ಕುಲುಕದಿರು..
ನೀ ನಿಲುಕದಿರು ನನಗೆ.. ಆಸೆಯ ಬಿತ್ತದಿರು..
ವಿರಹದಂಚಿಗೆ ನನ್ನ ದೂಡದಿರು.

ಗುಡಿಸಲೊಳಗಿನ ಮಡಿವಂತಿಕೆಗೆ..
ಹೆದರಿದ ಮರಿ ಜಿಂಕೆ‌ ನಾನು..
ಬೇಡವೆಂದರೂ ಬೇಡನ ಸ್ನೇಹ ದೊರೆತಿರುವದೆನಗೆ..
ಬಾಳಿನ ಉರಿಯಲಿ ಮನದ ಮರೆಯಲಿ ಮರೆಯಾಗು ನೀ

ಕ್ಷಮಿಸು ಗೆಳೆಯಾ ಮುನಿಸ್ಸಿನ್ನೇಕೆ
ಶಪಿಸೆನು ನಾನು ಯಾರನ್ನು.
ಯಾರ ದೂಷಿಸಲಿ ನಿನ್ನನ್ನ ,ನನ್ನನ್ನ ಆ ದೇವನನ್ನ..


ನಾ ಕನವರಿಸಿದ ಮೂಕಜ್ಜಿ

 

ನಾ ಕನವರಿಸಿದ ಮೂಕಜ್ಜಿ


ಕಾಡು ಕಂಡಿದ್ದನ್ನು ನಾಡು ಕಂಡಿತೇ
ಇಲ್ಲ ನಾಡು ಕಂಡಿದ್ದನ್ನು ಕಾಡು ಕಂಡಿತೇ
ಈ ಜೋಡು ಬೆಳೆದದ್ದು ಕಾಡಿನಲ್ಲೋ,
ಇಲ್ಲಾ ನಾಡಿನಲ್ಲೋ.
ಇಲ್ಲಾ ನಾಡುನುಡಿಗಳ ಚಿಂತನೆಯನ್ನು ಓಡು ಕಂಡಿತೇ
ಈ ಜಾಡು ಹಿಡಿದು ಹೊರಟವರು ಅದೆಷ್ಟು ಗಟ್ಟಿಗರು?
ಈ ಚಿಪ್ಪಿನ ಮೆದುಳು ಕಲ್ಪಿಸಿದೆಷ್ಟು? ಗ್ರಹಿಸಿದೆಷ್ಟು?

ಬಹುಶಃ ಆ ಕಾಡು ನಾಡನ್ನು ಕಂಡಿರಲಿಕ್ಕಿಲ್ಲ,
ಕಾಡ ಕಡಿದು ನಾಡ ಮಾಡಿ ಜೋಡಿಯಾಗಿ ಬಾಳಿದ್ದನ್ನು ಯಾರೂ ಕಂಡಿರಲಿಕ್ಕಿಲ್ಲ.
ನಮ್ಮ ಗ್ರಹಿಕೆ ಅಲ್ಪವಾಗಿದ್ದರೆ ನಮ್ಮ ಕಲ್ಪನೆ ಅಗಾಧ.
ಅದೇ ನಮ್ಮ ಗ್ರಹಿಕೆ ಅನಂತವಾಗಿದ್ದರೆ ನಮ್ಮ ಕಲ್ಪನೆ ಆಗ ಕ್ಷಣಿಕ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಮೂಕಜ್ಜಿಯ ಕನಸು ಇದೊಂದು ವಿಶಿಷ್ಟವಾದ ಅದ್ಭುತವಾದ ಕಾದಂಬರಿ.

ಅದೆಷ್ಟು ತಲೆಬುಡವಿಲ್ಲದ ಗೊಡ್ಡು ಸಂಪ್ರದಾಯಗಳು ನಮ್ಮಲ್ಲಿ ಬೆಳೆದು ಬಂದಿವೆ.
ಈ ಸಂಪ್ರದಾಯಗಳು ತಲಾತಲಾಂತರದಿಂದ ಬಂದಿದ್ದರೂ ನಾವೀಗ ಅದರ ಕೊಂಡಿ ಕಳಚಿಕೊಳ್ಳುವ ಪ್ರಯತ್ನದಲ್ಲಿದ್ದೇವೆ.ಇಂಥ ಕಾಲಘಟ್ಟದಲ್ಲಿ ಅದಕ್ಕೆ ಪ್ರೇರಣೆ ಎಂಬಂತೆ ಕಾರಂತರು ತಮ್ಮ ಮೂಕಜ್ಜಿಯ ಕನಸು ಎಂಬ ಕಾದಂಬರಿಯನ್ನು ರಚಿಸಿದರು.

ಲೇಖಕರಾದ ಡಾಕ್ಟರ್ ಕೆ. ಶಿವರಾಮ ಕಾರಂತರೆ ಹೇಳುವಂತೆ ಇಲ್ಲಿ ಕಥೆಗೆ ನಾಯಕರು ಇಲ್ಲ ನಾಯಕಿಯರೂ ಇಲ್ಲ. ಇಲ್ಲಿನ ಪಾತ್ರಗಳು ಜೀವಂತಿಕೆಯ ಸನ್ನಿವೇಶಗಳನ್ನು ನವಿರಾಗಿ ಕಟ್ಟಿಕೊಡುತ್ತದೆ.

ಈ ಕಾದಂಬರಿ ಓದುವ ಮೊದಲು ನನಗನಿಸಿದ್ದು ಹೀಗೆ..
ಮೂಕಜ್ಜಿಗೆ ಕನಸು ಬಿದ್ದಿರಲುಬಹುದು ಅಥವಾ ಯುವಜನತೆಯ ಮೇಲೆ ಅವಳು ಕನಸು ಕಟ್ಟಿಕೊಂಡಿರಲೂ ಬಹುದು ಆದರೆ ಲೇಖಕರಿಗೆ ಅವಳು ಹೇಗೆ ಪರಿಚಿತಳು? ಮೂಕಿಯಾದ ಅವಳು ಹೇಗೆ ವಿವರಿಸಿಯಾಳು?

ಕಾದಂಬರಿ ಓದಿ ಮುಗಿಸಿದ ನನಗೆ ವಸ್ತುಸ್ಥಿತಿಯ ಅರಿಯು ಬೇರೆಯೇ ಆಗಿತ್ತು.
ಮೊದಲ ಅಧ್ಯಾಯ ಓದುತ್ತಿರುವಂತೆ ಇದೊಂದು ಅಧ್ಯಯನದಿಂದ ಮೂಡಿಬಂದ ಬರಹವೆಂಬುದು ಸ್ಪಷ್ಟವಾಗುತ್ತದೆ.
ಇಲ್ಲಿನ ಪಾತ್ರಗಳು ಅದರದ್ದೇ ಆದ ಘನತೆಯನ್ನು ಸೃಷ್ಟಿಸಿಕೊಂಡಿವೆ.
ಈ ಪಾತ್ರಗಳು ಕಥೆಯಿಂದ ನಮ್ಮೊಂದಿಗೆ ಪಯಣಿಸುತ್ತ ನಮ್ಮ ಆಲೋಚನೆಗಳೊಂದಿಗೆ ವಿಮರ್ಶಿಸುತ್ತಾ ,ಚರ್ಚಿಸುತ್ತಾ, ಘರ್ಷಿಸುತ್ತಾ ಸಾಗುತ್ತದೆ.

ಬಾಲ್ಯದಲ್ಲಿ ವಿಧವೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಮೂಕಜ್ಜಿಯು ಜೀವನದಲ್ಲಿ ಅದೆಷ್ಟು ನೋವುಗಳನ್ನು ಅನುಭವಿಸಿದರು ಅವಳ ಬದುಕುವ ಛಲ ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತದೆ.
ಮೂಕಜ್ಜಿಯು ಕೇವಲ ಒಂದು ಪಾತ್ರವಾಗಿರದೆ ನಮ್ಮಲ್ಲಿರುವ ಅನೇಕ ಸಂದೇಹಗಳಿಗೆ ತರ್ಕಬದ್ಧವಾದ ಉತ್ತರ ನೀಡುತ್ತಾ ಮೂಲ ಸ್ಥಿತಿಯ ಬಗ್ಗೆ ಚಿಂತಿಸುವಂತೆ ಮಾಡುತ್ತಾಳೆ.
ನಮ್ಮಲ್ಲಿರುವ ಸೃಷ್ಟಿಯ ಬಗ್ಗೆ ಅನೇಕ ಕುತೂಹಲಗಳು ಆಶ್ಚರ್ಯ ,ಭ್ರಮೆ, ನಂಬಿಕೆ-ಮೂಢನಂಬಿಕೆ ,ಶಾಸ್ತ್ರ ಹೀಗೆ ಹತ್ತು ಹಲವು ಮೂಕ ಪ್ರಶ್ನೆಗಳಿಗೆ ಅವಳ ಕನಸಿನಿಂದ ಸುಪ್ತ ಮನಸ್ಸಿನಿಂದ ಉತ್ತರ ದೊರೆಯಬಹುದು.

ಇಲ್ಲಿ ಲೇಖಕರು ಸಂಶೋಧನೆ ನಡೆಸಲು ಸುಬ್ಬರಾಯರಂತಹ ಪಾತ್ರ ಸೃಷ್ಟಿಸಿದ್ದಾರೆ.ಸುಬ್ಬರಾಯರ ಮುಖಾಂತರ ಅನೇಕ ವಿಚಾರಗಳ ಮಂಥನ ಮಾಡಿದ್ದಾರೆ. ವಿಚಾರಗಳನ್ನು ಶಾಸ್ತ್ರೀಯವಾಗಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ್ದಾರೆ.
ನೈಜತೆ ಹಾಗೂ ಮೂಢನಂಬಿಕೆಯ ಮಗ್ಗಲಲ್ಲೂ ವಿಮರ್ಶಿಸಿದ್ದಾರೆ, ಮೂಢನಂಬಿಕೆಯ ವಿಡಂಬನೆ ಮಾಡುತ್ತಾ ಅಲ್ಲಲ್ಲೆ ಹಾಸ್ಯದ ಲೇಪನ ಮಾಡಿರುವವರು.

ಕತೆಯಲ್ಲಿ ಅನೇಕ ವಿಚಿತ್ರವಾದ ಸಂಪ್ರದಾಯಗಳು ಹಾಗೂ ಸನ್ನಿವೇಶಗಳ ವಿವರಣೆ ಇದೆ. ಕೆಲವೊಂದು ಆಚರಣೆಗಳು ನಮಗೆ ಅಸಹ್ಯ ಉಂಟು ಮಾಡದೆ ಆಶ್ಚರ್ಯ ಸೃಷ್ಟಿಸುವಂತದ್ದು.
ಒಮ್ಮೊಮ್ಮೆ ತೀರಾ ಕಾಲ್ಪನಿಕ ಇರಬಹುದೆ? ಅಥವಾ ಹೀಗೊಂದು ಪ್ರಪಂಚ ಇದ್ದಿತೆ ಎಂದನಿಸುವುದುಂಟು.

ಇಲ್ಲಿ ಸಾವಿರಾರು ಧರ್ಮಗಳು ಬೆಳೆದುಬಂದಿವೆ ಈ ಎಲ್ಲ ಧರ್ಮಗಳಲ್ಲೂ ಕುಂದುಕೊರತೆಗಳನ್ನು ನಾವು ನೋಡಬಹುದು,  ಹಾಗಿರುವುದರಿಂದಲೆ ಯಾವುದನ್ನು ಒಪ್ಪಲಿ ಯಾವುದ ಬಿಡಲಿ ಎನ್ನುವ ಗೊಂದಲ ಮೂಡುವುದು ಸಹಜ.

ಒಂದು ಕಾಲದಲ್ಲಿ ಸುಂದರವಾದ ಸಂಸ್ಕೃತಿ ಕೆಲವೊಂದು ಆಚರಣೆಗಳು ಇಂದಿಗೆ ತಪ್ಪಾಗಿ ಕಾಣಿಸಬಹುದು.  ಆ ಕಾಲಘಟ್ಟದಲ್ಲಿ ಅದು ಸರಿಯಾಗಿರುತ್ತದೆ ಇಲ್ಲದಿದ್ದರೆ ಅಲ್ಲಿ ವಿರೋಧದ ಅಲೆಗಳು ಹೋರಾಟವಾಗಲೀ ನಡೆಯಬೇಕಾಗುತ್ತದೆ.

ಈ ಜಗತ್ತಿನಲ್ಲಿ ಅನೇಕ ನಾಗರಿಕತೆಗಳು ಹುಟ್ಟಿ ತಮ್ಮ ಸಿದ್ಧಾಂತಕ್ಕಾಗಿ ಹೋರಾಡಿ ಕೊನೆಗೆ ಅಧಃಪತನವಾಗಿದೆ. ಅವೆಲ್ಲರ ಮಿಶ್ರಣ ವೆಂಬಂತೆ ನಾವು ಇವಾಗ ನೋಡುವುದು ಶೇಷ ಮಾತ್ರ.ಈ ಶೇಷವನ್ನು ಪೂರ್ಣವೆಂದು ನಾವು ನಂಬಬೇಕೆ?

ಉದಾಹರಣೆಗೆ ಇಂದಿನ ಯುಗದಲ್ಲಿ ಜಗತ್ತಿನಾದ್ಯಂತ ಅನೇಕ ಆಚರಣೆಗಳನ್ನು ನೋಡಬಹುದು ಪಾಶ್ಚಾತ್ಯ ಸಂಸ್ಕೃತಿಗಳು ನಮಗೆ ಉಸಿರುಗಟ್ಟಿಸಿ ತಪ್ಪು ಪರಿಕಲ್ಪನೆಯನ್ನು ಮೂಡಿಸಿರಬಹುದು.ಆದರೆ ಅಲ್ಲಿನ ಜನತೆ ಅದನ್ನು ಮೆಚ್ಚಿ ಶ್ಲಾಘಿಸಿದರು.ಅವರೇನು ದಡ್ಡರೆ? ಅವರಿಗೆ ಸರಿ-ತಪ್ಪುಗಳ ಮಾನದಂಡಗಳು ಇಲ್ಲವೇ?

ಸರಿ-ತಪ್ಪುಗಳನ್ನು ಅಳೆಯುವ ಮಾನದಂಡವೆಂದರೆ ಆಗಿನ ಕಾಲಘಟ್ಟ ,ವಾತಾವರಣ ,ಪರಿಸ್ಥಿತಿ ಹಾಗೂ ಪ್ರಸ್ತುತ ಜನರ ಮನಸ್ಥಿತಿಗಳು. ನಾವಂದುಕೊಂಡಂತೆ ಸತ್ಯ ಸಾರ್ವಕಾಲಿಕವಾಗಿ ಇರಬೇಕಾಗಿಲ್ಲ.

ಕೇವಲ ನೋಟದಿಂದ ವ್ಯವಹಾರದಿಂದ ವ್ಯಕ್ತಿ ಅಥವಾ ವಸ್ತುವಿನ ಗುಣ ಸ್ವಭಾವವನ್ನು ಅರಿಯಲಾಗದು ನಾಲ್ಕು ಜನರಿಂದ ನಾಲ್ಕು ಮಗ್ಗುಲಲ್ಲಿ ವಿಮರ್ಶಿಸಿದರೆ ಅದರ ಒಳ ಹೊರವು ಅರಿಯುವುದು.

ನಮ್ಮೂರು ನಮಗೆ ಸ್ವರ್ಗ ಎನಿಸಬಹುದು. ಕೆಲವು ವ್ಯಕ್ತಿಗಳಿಗೆ ನಿಂತ ನೆಲವು ಕೊನೆಗೊಮ್ಮೆ  ಬಿಕೋ ಎನಿಸಬಹುದು.ಹೊಸತನಕ್ಕಾಗಿ ಹಾತೊರೆಯಬಹುದು. ಹೀಗೆ ಹಾಳು ಹಳೆಯದೆಲ್ಲವೂ ಹಳೆದು ಹೊಸದು ಹುಟ್ಟಿರಬಹುದು.

ರಾಜ್ಯ ದೊಡ್ಡದು, ರಾಜಧಾನಿ ಅದರ ಹೃದಯಭಾಗ, ನಮಗೆಲ್ಲರಿಗೂ ಅನಿಸುವುದಿಷ್ಟು ನಮ್ಮ ನಗರ ರಾಜ್ಯ ನಮ್ಮೂರು ರಾಜಧಾನಿ ನಾವಿಲ್ಲಿಯ ಪ್ರಜೆಗಳು.ನಮ್ಮೂರಲ್ಲಿ ಎಲ್ಲಾ ವೈಭೋಗಗಳಿವೆ ಕಲೆ-ಸಾಹಿತ್ಯ ವಾಸ್ತುಶಿಲ್ಪ ಯಾವುದಕ್ಕೂ ಕೊರತೆಯಿಲ್ಲ ಆದರೆ ನಮ್ಮನ್ನು ನಾವು ರಾಜರಾಗಿ ಎಂದು ಕಲ್ಪಿಸಿಕೊಂಡಿಲ್ಲ.
ಇದು ಈಗಿನ ಅನಿಸಿಕೆ ಅಷ್ಟೇ. ಈ ನಮ್ಮ ಅನಿಸಿಕೆಗೆ ಮೂಲ ಪ್ರೇರಣೆ ಎಲ್ಲಿಂದ ಬಂತೋ ತಿಳಿಯದು. ನಮ್ಮ ಇತಿಹಾಸ ಕೆದಕಿ ನೋಡಿದರೆ ತಿಳಿಯಬಹುದೇನೊ. ಆವಾಗ ಇಲ್ಲಿನ ಪ್ರತಿ ಕಲ್ಲುಗಳು ಮಾತನಾಡಬಹುದೇನೊ ಕಲ್ಪನೆಯಲ್ಲಿದ್ದ ರಾಜ ಸಿಕ್ಕರೂ ಸಿಗಬಹುದು.

ಕಥೆಯ ಮಧ್ಯದಲ್ಲಿ ಲೇಖಕರು ನಮ್ಮಲ್ಲಿರುವ ಜಾತಿ ಕಟ್ಟುಪಾಡು ಆದಿಯಿಂದಲೂ ಹುಟ್ಟಿದ್ದಲ್ಲ ನಾವೇ ನಮಗೆ ಬೇಕಾದ ಹಾಗೆ ಸೃಷ್ಟಿಸಿಕೊಂಡಿದ್ದೇವೆ ಎನ್ನುವುದನ್ನ ವಿವರಿಸುತ್ತಾರೆ.

ದೇವರು ಒಬ್ಬನಿದ್ದಾನೆ ಅವನು ಅವತಾರ ಪುರುಷನಲ್ಲ ಎಲ್ಲವನ್ನು ಸೃಷ್ಟಿಸಿದ ಅವನಿಗೆ ಮತ್ತೆ ಮತ್ತೆ ಅವತಾರವೆತ್ತಿ ಮುಕ್ತಿ ಕೊಡಬೇಕಾದ ಅವಶ್ಯಕತೆ ಇಲ್ಲ.ಇಲ್ಲಿ ನಮ್ಮನ್ನು ದೇವರು ಸೃಷ್ಟಿಸಿದ್ದು ಅಥವಾ ನಾವೇ ದೇವರನ್ನು ಸೃಷ್ಟಿಸಿದೆವೊ ಎನ್ನುವಂತಾಗಿದೆ.

ನಮ್ಮ ಕಲ್ಪನಾಶಕ್ತಿ ಗಳಿಗೆ ಹೆಸರುಕೊಟ್ಟು ದೇವರನ್ನು ನೂರು ಮಾಡಿದ್ದೇವೆ ಚೂರು ಮಾಡಿದ್ದೇವೆ ಅದು ಅವರವರ ನಂಬಿಕೆಗೆ ಬಿಟ್ಟಿದ್ದು.ಎಲ್ಲವೂ ನನಗೆ ಅರಿತಿದ್ದರೆ ಎಲ್ಲರಂತೆ ಬದುಕುತ್ತಿರಲಿಲ್ಲ.

ನಮ್ಮಲ್ಲಿರುವ ಅದೇಷ್ಟು ಸಂಪ್ರದಾಯಗಳನ್ನು ಬಯಲಿಗೆಳೆಯುತ್ತಾರೆ. ಯಾವುದು ಸತ್ಯ ಯಾವುದು ಅಂಧಕಾರ.. ಯಾಕಾಗಿ ಹುಟ್ಟಿದ್ದು .ಅದನ್ನು ಸೃಷ್ಟಿಸಿದವರ ಉದ್ದೇಶವೇನು? ಆ ಉದ್ದೇಶ ಮುಟ್ಟಿತೆ?
ಪುನರ್ಜನ್ಮವೆಂಬುದೊಂದಿದೆಯೇ. ಹಾಗಿದ್ದರೆ ನಾವೆಷ್ಟನೆ ಜನ್ಮ? ಎಷ್ಟೇ ನೆನಪಿಸಿಕೊಂಡರು ಹಳೆಯ ಜನ್ಮದ ನೆನಪೇಕೆ  ಬರುತ್ತಿಲ್ಲ.ಇಲ್ಲಿರುವ ಸಂಬಂಧಗಳು ನಮಗೆ ಅಲ್ಲೂ ಇತ್ತೆ?
ನೆನಪಿಗೆ ಬರದ ಸಂಬಂಧಗಳು ಇದ್ದರೆಷ್ಟು ಬಿಟ್ಟರೆಷ್ಟು.

ಹಿಂದೆ ಅದೆಷ್ಟು ಆಡಂಬರ ಗತವೈಭವ ಸಿರಿ-ಸಂಪತ್ತು ಸಂತೃಪ್ತಿ ಇತ್ತೆಂದು ಕೇಳಿದ್ದೇವೆ ಆದರೆ ನೋಡಿಲ್ಲ.
ಅಂತ ಗತವೈಭವ ಇದ್ದಿತೆ? ಅದು ಕೇವಲ ಕಲ್ಪನೆಯೆ?
ಉದಾಹರಣೆಗೆ ನೂರು ವರ್ಷದವರು ನಮಗೆ ಸಿಕ್ಕರೆ ಅವರಿಂದ ಇನ್ನೂ ನೂರು ವರ್ಷಗಳ ಇತಿಹಾಸ ಕೇಳಿ ತಿಳಿಯಬಹುದು.ಒಂದು ವೇಳೆ ಅವರನ್ನು ಕೇಳಿದ್ದೆ ಆದರೆ ಅವರು ಹೇಳುವ ಮಾತು, ಬರಿ ಮಾತಲ್ಲ  ಅನುಭವ. ಅಂದಿನ ಕಷ್ಟದ ಬದುಕು ಒಂದು ಊಟಕ್ಕೂ ಕಷ್ಟ ಪಡುತ್ತಿದ್ದಿದ್ದು ಇವೇ  ಮುಂಚೂಣಿಯಲ್ಲಿರುತ್ತವೆ.
ಹಾಗಾದರೆ ಯಾವುದು ಸತ್ಯ? ಕಲ್ಪನೆಯನ್ನುವುದು ಎಲ್ಲಾ ಸತ್ಯವನ್ನು ಮುಚ್ಚಿಡುವ ಪೊರೆಯೆ?ಅದನ್ನು ಕಳಚುವವರಾರು?.

ಅದೆಷ್ಟು ಗೊಡ್ಡು ಸಂಪ್ರದಾಯಗಳು ನಮ್ಮಲ್ಲಿದ್ದರೂ ನಮ್ಮ ಸಂಸ್ಕೃತಿಯ ಬಗ್ಗೆ ನಾವು ಹೊಗಳಿಕೊಳ್ಳುವುದು ಬಿಟ್ಟಿಲ್ಲ.ಅಂತಹ ಧೈರ್ಯವು ನಮಗೆ ಇನ್ನು ಬಂದಿಲ್ಲ. ಆದರೆ ಮೂಕಜ್ಜಿಯು ನಮ್ಮಲ್ಲಿರುವ ಕೇಳಲಾಗದ ಪ್ರತಿರೋಧಿಸಲು ಆಗದ ಹತ್ತು ಹಲವು ಪ್ರಶ್ನೆಗಳನ್ನು ಸವಾಲೆಸೆದು ಎದುರಿಸಿ ನಿಂತವರು.

ಸಾವಿರಾರು ವರ್ಷದ ಇತಿಹಾಸ ವನ್ನು ಕೆದಕುವ ಸಾಹಸ ಲೇಖಕರು ಮಾಡಿದ್ದಾರೆ.ಆದರೆ ಅವುಗಳಿಗೆಲ್ಲ ನಮ್ಮ ಆತ್ಮಸಾಕ್ಷಿಯ ನೇರಕ್ಕೆ ಉತ್ತರವನ್ನು ನಾವು ಅರಿಯಬೇಕು.

ಮೂಕಜ್ಜಿಯ ಅದೆಷ್ಟು ನೇರ ಉತ್ತರ ನೀಡಿದರೂ ನಮ್ಮ ಜ್ಞಾನಕ್ಕೆ ದೊರೆಯುವಂತದಲ್ಲ. ಆದರೆ ನಮ್ಮ ಚಿಂತನೆಗೆ ಕಿಚ್ಚು ಹೊತ್ತಿಸುವಂತದ್ದು.

ಕತೆಯಲ್ಲಿ ಲೇಖಕರು ಆರಿಸಿಕೊಂಡ ವಿಷಯ ಮತ್ತು ವಸ್ತು ವಿಶಿಷ್ಟವಾದದ್ದು.ಅವರ ತರ್ಕಬದ್ಧ ನಿರೂಪಣೆ ಮೆಚ್ಚುವಂಥದ್ದು.ಮೌಢ್ಯತೆಯ ಆಚರಣೆಯೊಂದಿಗೆ ಹುಟ್ಟಿಕೊಂಡ ಕಥೆ ,ಚೈತನ್ಯದ ಹೊಸ ಬದಲಾವಣೆಯೊಂದಿಗೆ ಮುಗಿಯುವದು‌ ವಿಶೇಷ.

ಇಲ್ಲಿ ನನ್ನ ಅರಿವಿನ ಶಕ್ತಿಗನುಗುಣವಾಗಿ ನನ್ನದೇ ನಿಲುವಲ್ಲಿ  ವಿಮರ್ಶಿಸಲು ಪ್ರಯತ್ನಿಸಿರುವೆ..
ನೀವು ಸಹ ಈ ಕಾದಂಬರಿಯನ್ನು ಮರೆಯದೆ ಓದುವಿರೆನ್ನುವ ಆಶಯ ನನ್ನದು. ಕಾದಂಬರಿ ಓದಿದ ನಂತರ ನಿಮ್ಮ ವಿಮರ್ಶೆಯನ್ನು ನನ್ನೊಂದಿಗೆ ಹಂಚಿಕೊಳ್ಳಿ.
ಪ್ರತಿಕ್ರಿಯಿಸುವದನ್ನು ಮರೆಯಬೇಡಿ..

ಕಾದಂಬರಿ: ಮೂಕಜ್ಜಿಯ ಕನಸುಗಳು
ಲೇಖಕರು: ಡಾ.ಕೆ.ಶಿವರಾಮ ಕಾರಂತ


ಹಿಂಗೇಕೆ ಕಾಡುವೆ..

 

ಹಿಂಗೇಕೆ ಕಾಡುವೆ..


ಬಾಳಿಗೆ ಸುಖವ ನೀ ಬಯಸಿ
ಪ್ರೀತಿಯ ಮಾತಿಗೆ ಸವಿ ಬೆರಸಿ
ಬಿಡದೆ ಕಾಡುವೆ ನನ್ನರಸಿ.

ಆಸೆ ಮೋಹದ ಸ್ವಾರ್ಥದಲಿ
ಯಾತನೆ ಅನುಭವ ನೋಟದಲಿ
ಕೃಷವಾದೆನು ನಾ ಸೇರುವ ತವಕದಲಿ

ನನ್ನಿ ಮನದಲಿ ಮನೆ ಮಾಡಿ
ಸವಿ ಮಾತಲ್ಲೆ ಮನಸ ಕೊಲೆ ಮಾಡಿ
ನೀ ಪಡೆದ ಸುಖವೇನು ಹೇಳುವೆಯಾ..

ಬಯಕೆಗೂ ಒಂದು ಮಿತಿಯಿದೆ
ಅದರಲೆ ನಿನ್ನ ಹಿತವಿದೆ.
ಸನಿಹ ಬಯಸಿದ ಒಲವಿನ ಕಥೆಯಿದೆ

ಬಾವನೆ ಬಣ್ಣದ ಬದುಕಿನಲಿ
ವ್ಯೂಹದ ಬಂಧನ ಬೀತಿಯಲಿ
ಪ್ರೇಮವು ಸಾಗಿದೆ ಜೊತೆಯಲಿ.


ಚಿತ್ರ ಕವಿತ್ವ



ಹೊತ್ತು ಸಾಗುವ ಮುನ್ನ
ಬಂದು(ಧು) ಸೇರುವ ಮುನ್ನ
ನೀನೆ ಬಾ..ಮೊದಲೇ ಬಾ..

ವಿವರಣೆ: ಇಲ್ಲಿನ ಸಾಲುಗಳು ಎರೆಡೆರಡು ಆರ್ಥ ಕೊಡುವಂತವುಗಳು.
ಇಲ್ಲಿ ಖುಷಿ ಹಾಗೂ ದುಃಖ ಎರಡು ಒಂದೇ ಸಾಲಿನಲ್ಲಿ ಅಡಕವಾಗಿದೆ..
ಸನ್ನಿವೇಶ ೧:  ಇಬ್ಬರು ಪ್ರೇಮಿಗಳು ಇಬ್ಬರಲ್ಲೂ ಪ್ರೀತಿ ಸೆಳೆತವಿದೆ.ಅಲ್ಲಿ ಖುಷಿ ಇದೆ..ಪ್ರಿಯಕರ ಪ್ರಿಯತಮೆಗೆ ಹೇಳುತ್ತಾನೆ. "ಗೆಳತಿ  ಸಂಜೆಯಾಗುವ ಮುನ್ನ ,ನಾನು ನಿನ್ನೆಡೆಗೆ ಬರುವ ಮುನ್ನ, ನೀನೆ ಮೊದಲು ನನ್ನ ಬಳಿ ಬಾ" ಎಂದು ಕರೆಯುತ್ತಾನೆ.

ಸನ್ನಿವೇಶ ೨: ಇಲ್ಲಿ ಏಕಮುಖ ಪ್ರೀತಿ.ಪ್ರೀಯತಮೆ ಎಂದೂ ಪ್ರಿಯಕರನ ಸ್ನೇಹ ಒಪ್ಪಿಕೊಂಡಿಲ್ಲ.ಬೇಸತ್ತ ಪ್ರಿಯಕರ ವಿರಹಿಯಾಗಿ ದುಃಖದಲ್ಲಿ ಹೀಗೆ ಹೇಳುತ್ತಾನೆ." ನಾನು ನಿನ್ನ ಬಿಟ್ಟು ಬದುಕಲಾರೆನು,ನಾನು ಸತ್ತಾಗ ಹೊತ್ತು ಸಾಗುವ ಮುನ್ನ, ನನ್ನ ಬಂಧುಗಳು ಸೇರುವ ಮುನ್ನ,ಆಗಲಾದರೂ ನನ್ನ ನೋಡಲು ಮೊದಲು ನೀ ಬಾ"


ಉಲ್ಲಾಸ ನೀ ತುಂಬಲು

 

ಉಲ್ಲಾಸ ನೀ ತುಂಬಲು
ಉತ್ಸಾಹ ರಂಗೇರಲು
ಮನವು ನಿನ್ನನ್ನೆ ಹುಡುಕಿದೆ...

ನೂರಾರು ಆಸೆಗೂ ಮುನ್ನ
ನೀ ತೋರಿದ ಪ್ರೀತಿಯೇ ಚೆನ್ನಾ
ಸಲುಗೆ ನೀಡದೆ ಸುಲಿಗೆ ಮಾಡಿದೆ..

ಕಾಡುವ ಕಣ್ಗಳ ಚಲುವೆ
ಓಡುವ ಮೋಡಗಳ ನಡುವೆ
ಛಲವ ನನ್ನಲ್ಲಿ ನೀ ತುಂಬಿದೆ..

ಬದುಕಿಗೆ ಬಣ್ಣವನಿಟ್ಟೆ
ಬಯಕೆಗೆ ಅಶ್ರಯ ಕೊಟ್ಟೆ
ಬಂಗಾರದ ಬಳುವಳಿಯು ಈ ಬಾಳಿಗೆ

ಕಳೆದೊಂದು ಜನುಮದಿಂದ
ಬಳಿಬಂದು ನೀ ಸುಳಿದಂತೆ
ಅದೇಕೋ ಭಾಂದವ್ಯ ನನ್ನ ಒಳಗೊಳಗೆ.


ಮನೋ ಸ್ಥೈರ್ಯ

 

ಮನೋ ಸ್ಥೈರ್ಯ


ಇಂದಿನ ಒತ್ತಡದ ಬದುಕಿನಲ್ಲಿ ಯಾವ ಕಾರ್ಯವನ್ನು ಸರಿಯಾಗಿ ನಿರ್ವಹಿಸಲಾಗದೆ ಬವಣೆ ಪಡುತ್ತಿರುವ ಜೀವಿ ಮನುಷ್ಯ. ಕಾಲದೊಂದಿಗೆ ತೀವ್ರ ಪೈಪೋಟಿಯ ಜೀವನ ಸಾಗಿಸುವ ಮನುಷ್ಯ ತನ್ನ ಕರ್ತವ್ಯದಲ್ಲಿ ಎಡವುತ್ತಿದ್ದಾನೆ.
ಅತ್ತ ವೃತ್ತಿ ಬದುಕಿನಲ್ಲಿ ಹಿಡಿದ ಕಾರ್ಯವು ಅಪೂರ್ಣ ಇತ್ತ ವೈಯಕ್ತಿಕ ಜೀವನದಲ್ಲೂ ನೆಮ್ಮದಿ ಇಲ್ಲ ಎಂಬಂತಾಗಿದೆ.
ಇದಕ್ಕೆಲ್ಲ ಮುಖ್ಯ ಕಾರಣ ದೈಹಿಕ ಹಾಗೂ ಮಾನಸಿಕ ಅನಾರೋಗ್ಯ. ದಿನೇ ದಿನೇ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರಕರಣಗಳು ಇದಕ್ಕೆ ಪುಷ್ಟಿ ನೀಡುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 40 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.

ಹೆಚ್ಚಿನ ಆತ್ಮಹತ್ಯಾ ಪ್ರಕರಣಗಳಿಗೆ ಕಾರಣವಾಗಿರುವುದು ಮಾನಸಿಕ ಅಸ್ವಸ್ಥತೆ,ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲಾಗದ ಮಾನಸಿಕ ತೊಳಲಾಟ.

ಈ ಲೇಖನದ ಮೂಲಕ ಆತ್ಮಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತಾ ಜನತೆ ಮಾನಸಿಕ ಸ್ಥೈರ್ಯ ತಂದುಕೊಂಡು ಸವಾಲುಗಳನ್ನು ಎದುರಿಸಲಿ ಎನ್ನುವುದು ನನ್ನ ಆಶಯ..

ಸಾಮಾನ್ಯವಾಗಿ ಒಬ್ಬ ಮನುಷ್ಯನಲ್ಲಿ ಎರಡು ರೀತಿಯ ಭಾವನಾತ್ಮಕ ಮನಸ್ಸುಗಳು ಇರುತ್ತದೆ. ಇವುಗಳನ್ನು ಕ್ರಮವಾಗಿ ಸೂಕ್ಷ್ಮ ಹಾಗೂ ಸದೃಢ ಮನಸ್ಸು ಎನ್ನಬಹುದು.
ಈ ಸೂಕ್ಷ್ಮ ಮನಸ್ಸು ಹೊರ ಮನಸ್ಸಾಗಿದ್ದು ಒಳಮನಸ್ಸಿನ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ.

ಸೂಕ್ಷ್ಮ ಹಾಗೂ ಸದೃಢ ಮನಸ್ಸುಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸವಾಲು ನಮ್ಮ ಮುಂದಿದೆ.
ಅನುಭವಗಳಿಂದ ಮನಸ್ಸು ಮಾಗುತ್ತದೆ,  ಆದರೂ ಯೋಗ ಹಾಗೂ ಧ್ಯಾನಗಳಿಂದ ನಮ್ಮ ಮನಸ್ಸಿಗೆ ಬಲ ನೀಡಬಹುದು.

ಸಮಸ್ಯೆಗಳು ನೀಡುವ ನೋವು ಕಷ್ಟಗಳು ತಾತ್ಕಾಲಿಕವಾದುದು ಎಂಬ ಸತ್ಯವನ್ನು ಎಂದೂ ಮರೆಯಬಾರದು.
ಆರಂಭದಲ್ಲಿ ಸಮಸ್ಯೆಗಳು ಚಿಕ್ಕದಾಗಿರುತ್ತವೆ ಇವುಗಳನ್ನೇ ಬೆಟ್ಟದಂತೆ ಭ್ರಮಿಸುವುದು ನಮ್ಮ ಮನಸ್ಸು.
ಉದಾಹರಣೆಗೆ ನಮ್ಮ ಚಿಕ್ಕಂದಿನ ಘಟನೆಗಳನ್ನು ಮೆಲುಕು ಹಾಕೋಣ.

ಸ್ಕೂಲ್ ನಲ್ಲಿರುವಾಗ ಅದಾಗಲೇ ತಂದುಕೊಟ್ಟ ಹೊಸ ಪೆನ್ನು ಪುಸ್ತಕಗಳನ್ನು ಹಿಡಿದು ಸಂಭ್ರಮಿಸಿದ ನಮಗೆ ಅದೇ ಸಂಜೆ ತಮ್ಮ ವಸ್ತುಗಳನ್ನು ಕಳೆದುಕೊಂಡಾಗ  ಎಷ್ಟೊಂದು ಭಯವಾಗಿತ್ತು, ಮನೆಗೆ ಹೇಗೆ ಹೋಗಲಿ? ಮನೆಗೆ ಹೋಗಲೋ..ಬೇಡವೋ..  ಕಾರಣ ಏನು ಹೇಳಲಿ? ಹೀಗೆ ಆ ಎಳೆ ಮನಸ್ಸು ಎಷ್ಟೊಂದು ತಳಮಳಗೊಂಡಿತ್ತು.

ಅದೆಲ್ಲ ಸವಾಲುಗಳನ್ನು ಎದುರಿಸಿ ಬಂದ ನಮಗೆ ಆ ಚಿಕ್ಕಂದಿನ ವಿಷಯ ಇಂದು ಬಾಲಿಶವಾಗಿ ನಗು ತರಿಸಿದಂತು ನಿಜ..

ಹೀಗೆ ಒಂದು ಕಾಲದಲ್ಲಿ ಎದುರಿಸಿದ ಸವಾಲುಗಳು ಇಂದು ಏನೂ ಅಲ್ಲ ಎನ್ನುವ ಮಟ್ಟಿಗೆ ನಿರ್ಧಾರ ಮಾಡಿದೆವೆಂದರೆ ನಮ್ಮ ಮನಸ್ಸು ಅಷ್ಟೊಂದು ಪ್ರಭುದ್ದವಾಗಿದೆ ಎಂದರ್ಥ.

ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳಿರುತ್ತವೆ ಅದನ್ನು ಅರಿವಿಗನುಗುಣವಾಗಿ ಕಂಡುಕೊಳ್ಳಬೇಕಾದ್ದು ನಮ್ಮ ಜವಬ್ದಾರಿ.

ಈ ಸೂಕ್ಷ್ಮ ಹಾಗೂ ಸದೃಢ ಮನಸ್ಸುಗಳು ಎಲ್ಲರಲ್ಲೂ ಒಂದೇ ತೆರನಾಗಿ ಇರಲು ಸಾಧ್ಯವಿಲ್ಲ.
ಸೂಕ್ಷ್ಮ ಮನಸ್ಸು ಸಡನ್ ಶಾಕ್ ಗೆ  ಬೇಗ ಒಳಗಾಗುತ್ತದೆ.

ನಾವು ಕೇಳುವ ನೋಡುವ ಶುಭ ಹಾಗೂ ಅಶುಭ ಸನ್ನಿವೇಶಗಳು ಈ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ ಆ ವಿಷಯಗಳನ್ನು ಎಷ್ಟು ಹೊತ್ತು ನಮ್ಮ ಮನಸ್ಸಿನಲ್ಲಿ ಇಟ್ಟಿರುತ್ತೇವೆ ಎನ್ನುವುದು ಸದೃಢ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.

ಸೂಕ್ಷ್ಮ ಮನಸ್ಸಿನ ಪರಿಮಿತಿಯಿಂದ ಕೋಪ ಉದ್ವೇಗ ಹಾಗೂ ಹೃದಯಾಘಾತಗಳು ಸಂಭವಿಸಬಹುದು.
ಆನಂದ,ನಗು,ಕಣ್ಣಿರು ಹಾಗೂ ರೋಮಾಂಚನ ಇವೆಲ್ಲ ಸೂಕ್ಷ್ಮ ಮನಸ್ಸಿನ ಸಂವೇದನೆಗಳು.
ಅಲ್ಪ ಸಮಯದಲ್ಲಿಯೇ ಘಟಿಸುವ ಘಟನೆಗಳಾದುದರಿಂದ ಇವುಗಳನ್ನು ತಡೆಯುವುದು ಸ್ವಲ್ಪ ಕಷ್ಟ..
ಸೂಕ್ಷ್ಮ ಮನಸ್ಸಿನ ಗುಣಗಳು ವಂಶಪಾರಂಪರಿಕವಾಗಿ ಬಂದಿರಲೂಬಹುದು ಆದರೆ ಸದೃಢ ಮನಸ್ಸಿನ ಕಲ್ಪನೆಯನ್ನು ನಾವೇ ರೂಪಿಸಿಕೊಳ್ಳಬೇಕು.

ಮೊದಲೇ ಹೇಳಿದಂತೆ ಸದೃಢ ಮನಸ್ಸೆಂದರೆ ಸೂಕ್ಷ್ಮ ಸಂವೇದನೆಯ ಒಳಹರಿವು.ಇಲ್ಲಿ ಪ್ರಸ್ತತ ವಿಷಯವನ್ನು ಎಷ್ಟು ಹೊತ್ತು ಬಂಧಿಸಿಟ್ಟು,ಅದರಿಂದ  ಹೊರಬರುತ್ತೇವೆ ಎನ್ನುವುದು ಮುಖ್ಯ. ಸಮಸ್ಯೆಗಳಿಂದ ಹೊರಬರಲು ತೆಗೆದುಕೊಳ್ಳುವ  ಕಾಲ ಕನಿಷ್ಠವಾದಷ್ಟು ನಾವು ಸದೃಢರು‌.

ಸದೃಢ ಮನಸ್ಸಿನ ಗೊಂದಲದಂದ ಖಿನ್ನತೆ, ಶಾಶ್ವತವಾದ ಮರೆಯು,ಮಾನಸಿಕ ಅಸ್ವಸ್ಥತೆ ಹಾಗೂ ಆತ್ಮಹತ್ಯೆಗಳಂತ  ಪ್ರಕರಣಗಳಿಗೆ ಕಾರಣವಾಗಬಹುದು.

ನಾವು ಕೆಲವು ವ್ಯಕ್ತಿಗಳನ್ನು ಕಲ್ಲು ಮನಸ್ಸಿನವರು,ಭಾವನಗಳೆ ಇಲ್ಲದವರೆಂದು ಆಡಿಕೊಂಡಿದ್ದುಂಟು. ಇಂತಹ ವ್ಯಕ್ತಿಗಳ ಸದೃಢ ಮನಸ್ಸು ಪಕ್ವಗೊಂಡಿರುತ್ತದೆ.

ಸದೃಢ ಮನಸ್ಸನ್ನು ಗಟ್ಟಿಗೊಳಿಸುವುದು ಹೇಗೆ..?

ಇಲ್ಲಿ ಮುಖ್ಯವಾಗಿ ಬೇಕಿರುವುದು ತಾಳ್ಮೆ ಹಾಗೂ ಸಹನೆ.
ನಮ್ಮ ಮೇಲೆ ನಮಗಿರುವ ನಂಬಿಕೆ, ವಿಷಯಗಳನ್ನು ಅವಲೋಕಿಸುವ ಗುಣ ಹಾಗೂ ತಿಳುವಳಿಕೆಗಳು.

ಶಿಕ್ಷಣ ವ್ಯವಸ್ಥೆಯು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವದರೊಂದಿಗೆ  ವಿಷಯಗಳ ಅವಲೋಕನಕ್ಕೆ ದಾರಿ ಮಾಡಿಕೊಡುತ್ತದೆ.

ನಾವು ಮೊದಲು ಸಮಸ್ಯೆಗಳನ್ನು ದುರ್ಬಲಗೊಳಿಸಬೇಕು ಅಂದರೆ ಸಮಸ್ಯೆಗಳನ್ನು ದೂರದಿಂದ ಸ್ವೀಕರಿಸುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು.ಅವುಗಳನ್ನು ಮಿತ್ರರ ಸಂಬಂಧಿಕರ ಸಮಸ್ಯೆಗಳನ್ನಾಗಿ ಪರಿಗಣಿಸಿ ಏನೇನು ಸಲಹೆ ನೀಡಬಹುದು ಎಂದು ನಿರ್ಧರಿಸಬೇಕು.
ಹೀಗೆ ಮಾಡುವುದರಿಂದ ಮೈಂಡ್ ಬ್ಲಾಕಿಂಗ್ ಸಾಧ್ಯತೆ ಕಮ್ಮಿಯಾಗುತ್ತದೆ.

ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಲು ಮನಸ್ಸನ್ನು ಹದಗೊಳಿಸಬೇಕು.ಈ ಪ್ರಕ್ರಿಯೆ ನಿರಂತರವಾದುದ್ದು ದಿನದ 10 ಅಥವಾ 15 ನಿಮಿಷ ಯೋಗ ಅಥವಾ ಧ್ಯಾನಕ್ಕೆ ಮೀಸಲಿಡುವುದು ಉತ್ತಮ.

ಕೆಲವೊಂದು ಋಣಾತ್ಮಕ ವ್ಯಸನಗಳಾದ ಮದ್ಯಪಾನ, ಡ್ರಗ್ಸ್,ತಂಬಾಕು ಸೇವನೆಗಳಿಂದ ದೂರವಿರಬೇಕು.

ಭಾವನಾತ್ಮಕ ಸಂಬಂದ ಬೆಸೆಯುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಉತ್ತಮ.
ಉದಾಹರಣೆಗೆ ಬರವಣಿಗೆ ,ಮನರಂಜನಾ ಕಾರ್ಯಕ್ರಗಳು, ತೋಟಗಾರಿಕೆ ಇತ್ಯಾದಿ.

ಆತ್ಮವಂಚಕರಾಗದೆ  ಆತ್ಮಸ್ಥೈರ್ಯದ ಜೊತೆಗೆ ಮನೋಸ್ಥೈರ್ಯವನ್ನು ಬೆಳೆಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡುವ.
(ನನ್ನ ಪರಿಮಿತ ಅನುಭವಗಳಿಂದ ಲೇಖನ ಬರೆಯಲಾಗಿದೆ)


ನನ್ನೊ(!)ಳ ನೀನು(?)

 

ನನ್ನೊ(!)ಳ ನೀನು(?)


ನಿನ್ನೊಳಗಿನ ಗೆಳೆತನಕೆ ಏನೆಂದು ಹೆಸರಿಡಲಿ..
ಸ್ನೇಹಿತನೆನಲು ಸ್ನೇಹದ ಸಲುಗೆಯಿಲ್ಲ.
ಪ್ರೀಯತಮನೆನಲು ಭಾವದ ಸ್ಪರ್ಶವಿಲ್ಲ..
ಮರೆತು ಬಿಡಲು ಸಾಧ್ಯವಿಲ್ಲ
ನಂಗು ಗೊತ್ತು ನಿನಗೂ ಇದು ಬೇಕಿಲ್ಲ.

ಆದರೂ ಹೆಚ್ಚೆ ಹಚ್ಚಿಕೊಂಡಿರುವೆವು‌.
ನಿನ್ನ ನಾನು,ನನ್ನ ನೀನು..
ಕೋಪದುರಿಯಲಿ ಸುಡದಿರು
ನನ್ನ ನೆನಪನು.
ಮೆಲುಕು ಹಾಕುವ ಮೈತ್ರಿಗೆ
ಪದೆ ಪದೆ ಹೊಳಪು ನೀಡು.

ಕುಡಿಯೊಡೆದ ಆಸೆಯಂತೆ ಬಿಡದೆ ಕಾಡುತಿರುವೆ
ಕಡೆಗಣಿಸಿ ಹೊರಟವಗೆ
ಸಾಂದರ್ಭಿಕವಾಗಿ ಬಂಧಿ ಮಾಡಿದ ವಿಧಿಯು
ಸಾಂಕೇತಿಕವಾಗಿ ಬೂದಿ ಮಾಡಿದ.

ನಿನ್ನೆ ನೋಡುವ ತವಕದಲಿ
ಕಡಿಮೆ ಮಾಡಿಕೊಂಡಿರುವೆ ವೇಗ,ಆವೇಶ..
ವಂಚಿಸದೆ ನೀಡು ತುಸು ಅವಕಾಶ..

ಉತ್ತರ ಕಂಡುಕೊಂಡಿದ್ದೇನೆ.
ಒಬ್ಬರನೊಬ್ಬರು ಸಂಧಿಸದೆ,
ಹೀಗೆ ಸಮಾನಂತರದಲಿ ಸಂಚರಿಸಲು
ಬೆನ್ನು ಹಾಕದಿರು ಈ ಪಯಣದಲಿ.


ಹೇ ಹೃದಯ ಸ್ಪರ್ಶಿಯೇ"

 

ನನ್ನ ಸ್ನೇಹಿತರ ಕಾದಂಬರಿ ಕುರಿತಂತೆ ಹೀಗೊಂದು ಕವನ
ಕಾದಂಬರಿ " ಹೇ ಹೃದಯ ಸ್ಪರ್ಶಿಯೇ"

ಸಾಹಿತ್ಯ ಮಹಲ್ ನಲ್ಲಿ ಸಂಬಂಧಗಳಿಗೆ
ಹೆಸರಿಡುವ ಮುನ್ನ , ಆ ಬಂಧಗಳು ಬೆಸದಿದ್ದವು..

ಮನಸ ಘರ್ಷಿಸಿ
ಹೃದಯ ಸ್ಪರ್ಶಿಸುವ
ಈ ಕವನದ ಸಾಲು 
ನೀ ಅರಿಯದೆ ಹೋಗಲು
ಆ ಸಾಹಿತ್ಯದ ಮಹಲು
ನಿನಗೆ ಬರಿ ಗೋಜಲು.

ಕರುಣೆಯ ಕಡಲು ಪ್ರತಿ ದಿನಲೂ
ಪ್ರೀತಿಯ ಒಡಲು ಪ್ರತಿ ಮನದಲೂ

ಪದೆ ಪದೆ ನೀ ನೆನಪಾದೆ
ಅದೇ ಕವನದ ಗುಂಗಲಿ
ಅಚ್ಚ ಶ್ರೀಮಂತನ ಹುಚ್ಚು ಆಸೆಗೆ
ಮೆಚ್ಚಿದ ಕವಿ ನೀನು.

ಎಂದು ಬತ್ತದ ಉತ್ಸಾಹಿ
ಇಂದು ಸಾಹಿತ್ಯದ ರೂಪ ತಾಳಿ
ಸುತ್ತುತ್ತಾ ಸುತ್ತುತ್ತಾ ಸಾಗುವ
ಅದೆ ನಂಟಿಗೆ ಅಂಟಿಕೊಂಡಾಗ
ಮನವು ಹೃದಯ ಸ್ಪರ್ಶಿಸದೇ ?

ಕೇಳು ಗೆಳತಿ  ಕಂಗಳು ನೋಡಿ ಇಷ್ಟಪಟ್ಟಿದ್ದಲ್ಲ.
ಹೃದಯದ ಮಾತಿಗೆ ಸೋತಿಹನಲ್ಲ..
ಹತ್ತಿರ ಬಾರದೆ ಉತ್ತರ ನೀಡದೆ ನನ್ನ ಕಾಡಿದೆ
ಕಣ್ಣ ಮುಚ್ಚಾಲೆ ಆಟದಲಿ ನನ್ನೆ ಕೂಡಿದೆ.

ಯಾರಿಗಾಗಿ ಬರೆದೆ ಈ ಕವನ
ನನ್ನ ಹೃದಯದಲ್ಲಿ ಹುಟ್ಟಿತಲ್ಲ ತನನ
ಮೊಗವೆ ತೋರದೆ ಅರಳಿತಲ್ಲ ಪ್ರೀತಿಯ ಜನನ

ಬೆಳದಿಂಗಳ ಬಾಲೆಯೇ
ಬೆಳೆಸದಿರು ಆಸೆಯಾ
ಮುಗಿಲು ಬಾನ ಚುಂಬಿಸಿದಂತೆ
ಮುಸುಕಿನಲ್ಲಿ ಮುದ್ದಿಸು.

ಮುಖ ಪುಸ್ತಕದಲ್ಲೂ ಮೊಗವ ತೋರದ ನೀ
ನನ್ನ ಹೃದಯದಲ್ಲೊಂದು ಪ್ರತಿಬಿಂಬ ಅಚ್ಚಿಸಿದೆ.

ಇಲ್ಲೂ ಬಂಧವಿದೆ
ಸಹೋದರತೆಯ ಮೀರಿದ ಸಂಬಂಧ.
ಇಲ್ಲೂ ಕಪಟವಿದೆ
ಹಗೆತನವ ಮೀರಿದ ವೈರತ್ವ.
ಅತಿ ಆಸೆಯಾದಗ ಅಧಿಕಾರವಹಿಸುವ ಗುಣಗಳಿವು.

ಭಾವನೆಗಳ ಪಯಣದಲ್ಲಿ ಯಾರು ಒಂಟಿಯಲ್ಲ.
ತುಂಟ ನಗುವೊಂದು ಸಾಕು ಜಂಟಿಯಾಗಲು.

ಈ ಬಂಧ ಆ ಬಂದ
ಅನುಬಂಧ ಸಂಬಂಧ
ವಿಷಯ ವಿಸ್ಮಯ ಇಲ್ಲಿ ಎಲ್ಲವೂ ಗೋಜಲು
ಸಾಹಿತ್ಯದ ಪರಿಧಿಯಲ್ಲಿ ಸವೆದ ಲೇಖನಿಗೆ
ಮಾತ್ರ ಗೊತ್ತಂತೆ ನೋವಿನ ಮಜಲು.

ನನ್ನ ಗುರಿಯ ಅರಿವು ನನಗಿಲ್ಲ.
ಆದರೂ ಬೇರೆಯವರಿಗೆ ಗುರುವಾಗ ಬೇಕಾಯಿತಲ್ಲ.
ವಿಧಿಯು ಕಷ್ಟ ಪಡುತಿರುವಳು ಎಲ್ಲರ ಒಂದು ಗೂಡಿಸಲು
ಹೊರಟಳಲ್ಲ ನನ್ನೇ ಪ್ರೀತಿ ದಾಳವಾಗಿಸಿ.

ಅದೆ ಕನಸು ಅದೆ ಮುನಿಸು
ಪ್ರತಿದಿನ, ಹೊಸದೇನಿದೆ
ನಿನ್ನ ನೆನಪೊಂದು ಬಿಟ್ಟು.

ಇಲ್ಲಿ ಎಲ್ಲವೂ ಕ್ಷೇಮ
ಕವನ ಕನವರಿಸಿದೆ ಸಾಹಿತ್ಯದೊಂದಿಗೆ
ಮಿಲನವಾಗದ ಹೃದಯದ ಭಾವ
ಬರಿಯ ವಿಸ್ಮಯ.
ಇಂಪಾದ ಹೃದಯಕೆ
ತಂಪಾದ ಸ್ಪರ್ಶ ನೀಡಲು
ಒಬ್ಬರಿಗೊಬ್ಬರನ್ನು  ಗಂಟು ಹಾಕಿದ ವಿಧಿಯು.

🖌 ಸಂದೇಶ ಪೂಜಾರಿ ಗುಲ್ವಾಡಿ


ಸರ(ಹ)ಕಾರಿ ನೌಕರಿ

 

ನಿನ್ನೆಯಷ್ಟೆ ಬಂದ ವರದಿ ನನ್ನನ್ನು ತುಂಬ ದಿಗಿಲುಗೊಳಿಸಿತ್ತು.
ಈ ದಿನ ಕೈಗಳು ತಮ್ಮಷ್ಟಕ್ಕೆ ತಮ್ಮ ಕೆಲಸ ಮಾಡುತ್ತಿದ್ದರೂ ನನ್ನ ಮನವೇಕೊ ಗೊಂದಲದ ಬೀಡಾಗಿತ್ತು. ಹೇಗೆ ನಿಭಾಯಿಸಲಿ ಸರ್ಕಾರ ನನಗೆ ನೀಡಿದ ಕರ್ತವ್ಯವನ್ನು,

ಕರ್ತವ್ಯವೇ ದೇವರು ಅದನ್ನು ಶೃದ್ದಾಪೂರಕವಾಗಿ ಮಾಡಬೇಕು ಎನ್ನತ್ತಿದ್ದ ತಂದೆಯ ಮಾತುಗಳು ಈಗ ದೈರ್ಯ ತುಂಬುತ್ತಿಲ್ಲ.

ನಾನು ಅದೆಷ್ಟೊ ಕನಸು ಕಂಡವಳು, ಇಂತಹದೊಂದು ದಿನ ಯೋಚಿಸಿಯೇ ಇರಲಿಲ್ಲ.
ಸರಕಾರಿ ನೌಕರಿ ನಮ್ಮಂತವರ ಪಾಲಿಗಲ್ಲ, ಅದು ದುಡ್ಡಿದ್ದವರ ಆಸ್ತಿ ಅನ್ನೊ ತತ್ವವನ್ನೆ ನಂಬಿಕೊಂಡಿದ್ದ ಬಡತನದ ಕುಟುಂಬ ನಮ್ಮದು.
ರಿಕ್ಷಾ ಓಡಿಸುತ್ತಿದ್ದ ನಮ್ಮ ತಂದೆ ಹಗಲು ರಾತ್ರಿ ಎನ್ನದೆ ಬಾಡಿಗೆ ಮಾಡುತ್ತಿದ್ದರು.ಅವರಾಸೆ ಒಂದೆ ಆಗಿತ್ತು ಹೇಗಾದರು ಮಾಡಿ ನನ್ನ ಮಗಳನ್ನು ಕಲ್ಲೆಕಟರ್ ಮಾಡುತ್ತೇನೆ ಎನ್ನುತ್ತಿದ್ದರು. ಎಷ್ಟೊ ಸಾರಿ ನಾನು ನಕ್ಕು ಅದು ಕಲ್ಲೆಕಟರ್ ಅಲ್ಲ...ಕಲೆಕ್ಟರ್(district collector)
ಅನ್ನುತ್ತಿದ್ದೆ.

ನನ್ನ ತಂದೆಗೆ ನಾನಂದ್ರೆ ತುಂಬ ಅಭಿಮಾನ ಜೊತೆಗೆ ಹೆಮ್ಮೆ ಕೂಡ.ಈ ಇಚ್ಛಾಶಕ್ತಿಯೇ ನನ್ನ ಓದಿನೆಡೆಗೆ ತಳ್ಳಿತ್ತು.
ಅವರಾಸೆಯಂತೆ ಅದೆಷ್ಟೋ ಸರ್ಕಾರಿ ಪರೀಕ್ಷೆ ಬರೆದಿರುವ ನಾನು ಕೊನೆಗೆ ಅದರಾಸೆ ಬಿಟ್ಟು ಬಿಟ್ಟಿದ್ದೆ.

ನನ್ನ ಮಗಳಿಗೆ ಸರಕಾರಿ ಕೆಲಸ ಸಿಗುತ್ತೆ ತನ್ನ ತಮ್ಮಂದಿರನ್ನ ಓದಿಸ್ತಾಳೆ.ನಮ್ಮ ಸಂಸಾರವನ್ನು ಮೇಲೆತ್ತುತ್ತಾಳೆ ಎನ್ನುವ ಅವರ  ನಂಬಿಕೆಗೆ ಅತ್ತು ಬಿಟ್ಟಿದ್ದೆ.

ಕೊನೆಯ ಪ್ರಯತ್ನ ಎನ್ನುವಂತೆ ನಗರಾಭಿವೃದ್ಧಿ ಕಾರ್ಯಲಯದಲ್ಲಿ ಎರಡನೆ ದರ್ಜೆಯ ಕ್ಲರ್ಕ್ ಪೋಸ್ಟ್ ದೊರೆತ್ತದ್ದು ನನ್ನ ಪುಣ್ಯವೆ.
ಈ ಎರಡು ವರ್ಷದಲ್ಲಿ ನಮ್ಮ ಸಂಸಾರ ಸ್ವಲ್ಪ ಸುಧಾರಿಸಿತ್ತು.

ಮನೆಗೆ ತೆರಳಿದಾಗ ಆತಂಕ ಕಾಡುತ್ತಿತ್ತು, ತಿಂಡಿ ತಿನ್ನುವ ಮನಸ್ಸಿರಲಿಲ್ಲ, ಕೋಣೆ ಸೇರಿದ ನನ್ನ ಮನಸ್ಸು ಇನ್ನೂ ಭಾರವಾಗಿತ್ತು.

ಇತ್ತೀಚಿಗೆ  ನಗರದಲ್ಲಿ ಹೆಚ್ಚಿದ ಕೋವಿಡ್ ೧೯ ಪ್ರಕರಣದಿಂದ ಸರ್ಕಾರವಂತು ಹೈರಣವಾಗಿತ್ತು. ಸರ್ಕಾರಿ ನೌಕರರನ್ನು ಬಳಸಿಕೊಂಡು  ರೋಗ ನಿರ್ಮೂಲನೆಗೆ ಕಾರ್ಯತಂತ್ರ ರೂಪಿಸುತ್ತಿದೆ.

ಹೌದು ನಾವುಗಳು ಸೊಂಕಿತರ ಬೇಟಿ ಮಾಡಿ ಮಾಹಿತಿ ಕಲೆ ಹಾಕಬೇಕಿತ್ತು.
ನಾವೇನು ಡಾಕ್ಟರ್ಸ ಅಲ್ವಲ್ಲಾ..ನಾವು ಈ ಕೆಲಸವನ್ನೆ ಮಾಡಬೇಕೆಂದಿದ್ದರೆ ವೈದ್ಯ ವೃತ್ತಿ ಆರಿಸಿಕೊಳ್ಳಬಹುದಿತ್ತಲ್ವಾ..

ನನ್ನ ಹಣೆ ಬರಹ..ಯಾರೇನು ಮಾಡಿಯಾರು..
ನನ್ನಿಂದ ಮನೆಯವರಿಗೂ ತೊಂದರೆ..
ಈಗಷ್ಟೇ ಬಿ.ಕಾಂ ಸೇರಿದ ತಮ್ಮ, ಚಿಕ್ಕಿ ಅನ್ನುತ್ತಿದ್ದ ಮುದ್ದು ಪುಟ್ಟಿ. ವಯಸ್ಸಾದ ಅಪ್ಪ..ಅಮ್ಮ  ಹೀಗೆ ಒಬ್ಬೊಬ್ಬರು ಕಣ್ಣ ಮುಂದೆ ಬಂದು ಹೋದರು.
ಜೀವನಕ್ಕೆ ಆದಾಯವಾಗಿದ್ದ ಕೆಲಸ ಬಿಡುವಂತೆನು ಇರಲಿಲ್ಲ..
ಕೆಲಸ ಮಾಡಲು ಹೋಗಲು ಕರೋನ ಭಯ..ಈ ಗೊಂದಲದಲ್ಲಿ ನಾ ಹೇಗೆ ಕರ್ತವ್ಯ ನಿರ್ವಹಿಸಲು ಸಾಧ್ಯ
ಕೊನೆಗೊಂದು ನಿರ್ಧಾರಕ್ಕೆ ಬರಲೇ ಬೇಕಾಯಿತು.

ಕಣ್ಣಿರಿನ ಕೋಡಿಯಲ್ಲಿ ರಿಸೈನ್ ಲೆಟರ್ ಟೈಪ ಮಾಡಿದೆ.
ಈ ಕೆಲಸಕ್ಕಾಗಿ ಪಟ್ಟಿದ್ದ ಕಷ್ಟ ನೆನೆದು ದುಃಖ ಉಮ್ಮಳಿಸಿತು.ಅಲ್ಲೆ ಮರದ ಕುರ್ಚಿಗೆ ಒರಗಿದ್ದೆ..

ತಂದೆಯ ಕೈ ಕೆನ್ನೆಯ ಸವರಿದಾಗ  ಕಣ್ಣಂಚಿನ ನೀರನ್ನು ಒರೆಸಿಕೊಂಡು ಎಲ್ಲವ ಹೇಳಿಬಿಟ್ಟೆ..
ಅವರು ನಗುತ್ತಾ ಓದಿದವಳಾಗಿ ಇದಕ್ಕೆಲ್ಲ ಹೆದರೋದ..
ಇದಕ್ಕೆಲ್ಲ ಭಯವೇಕೆ.
ನಾವೆಲ್ಲ ಇಲ್ಲವೊ ನಿನ್ನ ಜೊತೆ ...ಎಂದು ದೈರ್ಯ ತುಂಬಿದರು.

ತಂದೆಯ ಸ್ನೇಹಿತರೊಬ್ಬರು ಹೇಳಿದ ಮಾತಿದು.. ನಾನು ಹೆದರುತ್ತಿದ್ದೆ ಮೊದಲು...ಈಗ ಅರಿವಾಗಿದೆ ..ನಮ್ಮ ಅವಶ್ಯಕತೆ ಸಮಾಜಕ್ಕಿದೆ..ಇಂತಹ  ಸನ್ನಿವೇಶದಲ್ಲಿ ಕಾರ್ಯಮಾಡುವುದು ಅಗತ್ಯವಾಗಿದೆ.ನಿನಂದು ಕೊಂಡಂತೆ ಭಯಪಡೊದು  ಏನು ಇಲ್ಲ. ಮುನ್ನೆಚ್ಚರಿಕೆ ..ಜಾಗೃತೆಯಿಂದ ಕೆಲಸ ಮಾಡು..ಎಲ್ಲದಕ್ಕೂ ದೈರ್ಯವಾಗಿರು.

ಆಗೋದ ಅಗಲಿ ಅಂತ ದೈರ್ಯಮಾಡಿ ಹೊರಟಿದ್ದೆ. ಹೌದು ಅವರು ಹೇಳಿದ ಮಾತು  ನಿಜ..ಮೊದಲ ದಿನ ತುಂಬ ಭಯ ಪಟ್ಟಿದ್ದೆ..ಆದರೆ ಈಗ ಹಾಗಿಲ್ಲ..ಎಲ್ಲವೂ ಟಿ.ವಿ. ನ್ಯೂಸ್ ಗಳಂತಿಲ್ಲ...

ನಾನು ಚಪ್ಪಾಳೆ ತಟ್ಟಿದ್ದೇನೆ. ಘಂಟೆ ಬಾರಿಸಿದ್ದೇನೆ
ನಾನು ಹೆಮ್ಮೆ ಪಟ್ಟಿದ್ದೇನೆ ಕೋವಿಡ್ ವಾರಿಯರ್ಸ್‌ಗೆ..ಅವರ ಕಾರ್ಯಕ್ಕೆ,
ಸ್ವತಃ ನಾವು ಆ ಕಾರ್ಯಕ್ಕೆ ಗುರುತಿಸಲ್ಪಟ್ಟಾಗ ಹೀಗೇಕೆ ಹಿಂಜರಿಕೆ.
ಭಯವೇಕೆ ನಾವು ಜಾಗೃತವಾಗಿ ಸಮಾಜದೊಂದಿಗೆ ಕೈ ಜೋಡಿಸೋಣ...

 


ಇದ್ ಭಾಷಿ ಅಲ್ಲ ಬದ್ಕ್

 

ಏಗಳಿಕೂ ಮರ್ತ್ ಹೋಪ್ದಲ್ಲಾ..
ಎದಿಯೊಳಗೆ ಬೆರ್ತ್ ಹೊಯ್ತಲ್ಲಾ..

ಇದ ಭಾಷಿಯಲ್ಲ ಬದ್ಕ್
ನಮ್ ಕುಂದಾಪ್ರದ ಜನಕ್

ಹುಟ್ಟಿ ಬೆಳೆದ ಆಡಿ ನಲಿದ
ಭಾಷಿ ಇದ ತಿಳ್ಕೊ..
ನೂರು ಭಾಷಿ ಮಧ್ಯ ನೀನ್
ಆಸಿ ಮಾಡಿ ತಬ್ಕೊ..

ಅಬ್ಬಿ ಹೇಳದ್ ಆಣಿ ಮಾತಿದ್
ಜಾಣನಾಗಿ ನೀನ್ ಮರುದಾ..

ಕೂಲಿಗಾಗಿ ಕೂಳಿಗಾಗಿ ಎಲ್ಲಿ ಹೋದ್ರು ಓಕೆ..
ವರ್ಷಕೊಮ್ಮೆ ಊರಿಗೆ ಬಂದು ಹೋಯ್ಕೆ..

ಗಾಳಿ ಮಳೆ ಬಾರಿ ಚಳಿಗೆ
ಕಳ್ ಮ್ಯಾಳಿ ಹೈಕಂಡ್
ರಗ್ಗಿನೊಳಗೆ ನುಗ್ಗಿ ಗೊರ್ಕಿ ಹೊಡಿವರಲ್ಲ..

ಗುಡ್ಗ್ ಮಿಂಚಲ್ಲೆ, ಗೆದ್ದಿ ಅಂಚಲ್ಲೆ
ಕಂಬ್ಳಿ ಹೊದ್ಕಂಡ ನಟ್ಟಿ ಮಾಡ್ದವರ ನಾವು...

ಹೆದ್ರಿಕಿ ಬಿಟ್ರೂನು...ಬಿಲಸ್ ಬಿಟ್ಟವರಲ್ಲ..
ಯಾರಿಗೆನು ಕಮ್ಮಿ ನಮ್ಮ ಹಮ್ಮು ಬಿಮ್ಮು

ಬಯಲ ಪ್ರೀತಿಯ ವಿಶ್ವದೆಲ್ಲೆಡೆ ಹಂಚಿದೆವು ನೋಡಿ
ಎದಿ ಹೊಯ್ಲಲ್ಲೆ ಗೆದ್ದಿ ಕೊಯ್ಲ್ ಮಾಡಿ
ಆರು ಹಗೆಯಿಲ್ಲದೆ ನಗೆಯಾಡುವ ಮೊಗವ ನೋಡಿ..


ಮಾಡರ್ನ್ ಕವನ

 

ಅಂದು ಬಡತನವಿತ್ತು
ತುತ್ತು ಅನ್ನಕ್ಕೂ ಹಾಹಾಕಾರವಿತ್ತು.
ಅಗುಳ ಮೇಲೆ ದೃಷ್ಟಿ ಹೊರತು
ಅಂಗೈಲಿ ಹಿಡಿದಿರುವ ಚಿನ್ನದ ತಟ್ಟೆ ಮೇಲಲ್ಲಾ.

ಹಸಿದ ಆವೇಶದ ಭರದಲ್ಲಿ
ತುತ್ತು ನೆತ್ತಿಗೇರಿ
ಹಪಹಪಿಸುವ ಹೊಟ್ಟೆ
ನುಂಗಿ ನೀರು ಕುಡಿದಿತ್ತು.

ಹೊಟ್ಟೆ ತುಂಬಿದ ಮೇಲೂ
ಬಡತನವಿತ್ತು.
ಕಾರಿನ ಮೇಲೆ ಕುಳಿತು
ಭಿಕ್ಷೆ ಬೇಡುವಂತೆ.

ಹೊಟ್ಟೆ ತುಂಬಿದ ಹಾಗೆ
ರಟ್ಟೆ ತುಂಬಿತು.
ಅನ್ನದ ಮೇಲಿನ ದೃಷ್ಟಿ ಹೊನ್ನಿನ ಮೇಲೆ
ಕೈ ಕೈ ಮೇಲಾಯಿತು..


ಪ್ರೀತಿಯೇ ಉಸಿರು

 ಪ್ರೀತಿಯ ಉಸಿರ

ಎದೆಯಲ್ಲಿ ತುಂಬಿಟ್ಟು

ದೂರಾದೆ ಏಕೆ ನನ್ನ ಗೆಳತಿ..


ಬರೆದಿಟ್ಟ ಹೆಸರಿಗೆ 

ನಿನ್ನುಸಿರ ಸೇರಿಸದೆ

ಸಾಕಗಿ ಹೋಯಿತೇ ನನ್ನ ಗೆಳತಿ.


ನನ್ನದೆ ನೋವಿನ ಪ್ರೀತಿಯ

ಕೊಳಲ ನೀ ನುಡಿಸಿದೆ.

ಋತುಗಳೇ  ಅತ್ತರೂ ನಿನ್ನದೆ

ಕರಗದೆ?


ನೀ ದೂರಿದ್ದರೂ ನನ್ನ ಮನ

ನಿನ್ನ ಬಳಿ ಸುಳಿದಾಡಿದೆ

ನನಗರಿವಿಲ್ಲದೆ ನಿನ್ನ ನೆಪ

ನಾ ಮಾಡಿದೆ.


ಆಸರೆ ಬಯಸಿದ ನನ್ನ

ನೀ ಸೆರೆ ಮಾಡಿದೆ.

ಪ್ರೀತಿಗೆ ವಿರಹದ ರೂಪ 

ನೀ ನೀಡಿದೆ.


ಕಾಡಿದೆ ಬೇಡಿದೆ

ಸತಾಯಿಸಿ ದೂಡಿದೆ.

ಆದರೂ ನನ್ನೆದೆ 

ಪ್ರೀತಿಯ ಮಾಡಿದೆ.


ಹೃದಯದ ಧ್ವನಿ

 

ಇಂದೇಕೋ ಹೃದಯ ಸೋತಿದೆ
ಮೌನದಲ್ಲೂ ಕೇಳದ ಸಾವಿರ ಮಾತಿದೆ
ತೀರವೆ ಇರದ ದೂರ ಬಾಳಲಿ ಬೆರೆತಿದೆ.....

ಮೊನ್ನೆ ತೆರದ ಹೃದಯಕೆ
ನಿನ್ನೆಯು ಮರೆತೆ ಕದ ಹಾಕಲು
ಎಂತ ಸಮಯವರಿತೆ ನೀ ಬಂದು ಕೂರಲು..

ಹೃದಯ ಪದೆ ಪದೇ ಕೇಳಿಕೊಳ್ಳುತ್ತಿತ್ತು.
ಎಂದೋ ಕನಸು ಕದ್ದ ಚೆಲುವೆ
ಇವಳೇ ಆಗಿರಲೆಂದು.


ಹಿಂಗೇ ನಾ

 

ನಿನ್ನ ನೋಡಲು ತಡಕಾಡಿದೆ
ಪ್ರೇಮ ಪಲ್ಲವಿ ಬರೆದಾಗಿದೆ.
ಎಲ್ಲಿ ಹೋದರಲ್ಲಿ
ಅವಿತವಿತು ಕಾಡಿದೆ.
ಪ್ರೀತಿನೇ ಹಿಂಗೇನಾ
ಅಳಿಸಾದ ಚಿತ್ರನಾ..

ಬಾಳೊಂದು ಪಯಣ
ನೂರಾರು ನಿಲ್ದಾಣ
ಎಲ್ಲೆಲ್ಲಿ ತಂಗಲಿ
ನಾ ನಿನ್ನ ಗುಂಗಲಿ..


ಕವಿತೆ

 

ಕವಿತೆ ಓ ಕವಿತೆ
ನನ್ನ ಮನದಲ್ಲಿ ನೀ ಬೆರೆತೆ
ಹೂ ಬನದಲ್ಲಿ ಕುಳಿತರೂ ನಿನದೆ ಚಿಂತೆ

ಅರಿತೆ ನಾ ಅರಿತೆ
ನಿನ್ನ ತನುವಲಿ ನಾ ಬೆರೆತೆ
ಬಿಡುವಿಲ್ಲದೆ ನಿನ್ನ ಮರೆತೆ

ಬಿಟ್ಯಾಕೆ ಹೋದೆ ನೀ
ಈ ಬಳಗದ ಗೆಳೆತನ ಕೊಟ್ಯಾಕೆ ಹೋದೆ ನೀ
ನಿನ್ನ ಪ್ರೀತಿಗಾಗಿ ನಿಮ್ಮ ಪ್ರೀತಿಗಾಗಿ
ನಾ ಮತ್ತೆ ಬರುವೆನು..ಮತ್ತೆ ಬರೆವೆನು..


ನೀ ದೂರಿದ್ದರೂ ನಿನ್ನ ನೆಪ ಮನ ಮಾಡಿದೆ

 

ನೀ ಬಹಳ ದೂರಿದ್ದರೂ
ನನ್ನ ಮನ ನಿನ್ನ ಬಳಿ ಸುಳಿದಾಡಿದೆ.
ನಾ ದೂರಾದರೂ
ಅರಿವಿಲ್ಲದೆ ನಿನ್ನ ನೆಪ ಮಾಡಿದೆ.
ನೋವು ಮನಕಾದರೂ
ಅದೆಂತ ಖುಷಿ ನಿನಗೆ
ಕಾರಣ ಹೇಳದೆ ನೀ ಮೌನಿಯಾದೆ
ಮನವೀಗ ಗೊಂದಲದ ಗೂಡು
ನೆನಪುಗಳು ಅದೆಷ್ಟು ಸುಂದರ ಸುಮಧುರ
ಒಮ್ಮೊಮ್ಮೆ ಏಕಾಂತಕೆ ತಿರುಗಿ ಸೃಷ್ಟಿಸಿದೆ ಆತಂಕ
ನಿನ್ನ ಮನಸ್ಸು ಅರಿಯಲು ಅದೆಷ್ಟು
ಡಾಕ್ಟರೇಟ್ ಮಾಡಬೇಕೋ ನಾನು
ಅಳಿಸಿ ಬಿಡು ಎಂದಿದ್ದರೆ ಮುಗಿದು ಹೋಗುತ್ತಿತ್ತು
ಪ್ರತಿ ದಿನ ಅಳಿಸುವ ಬಯಕೆ ಏಕೆ..


ಕನ್ನಡ ನಾಡು

 

ನಾವು ಕನ್ನಡಿಗರು ವೀರ ಕನ್ನಡಿಗರು
ದೀಮಂತಿಕೆಯ ಕೆಚ್ಚೆದೆಯ ಸರದಾರರು
ಕರ್ನಾಟಕವೇ ತವರೂರು ಕನ್ನಡವೆ ಉಸಿರು

ತೆಂಗು ಅಡಿಕೆಯ ಬೆಳೆಯುವ ನಾಡು
ಗಂಧ ಹೊನ್ನೆಯ ಈ ಕಾಡು
ಮುಂಜಾನೆಯ ಹಕ್ಕಿ ಪಕ್ಷಿಗಳ ಚಿಲಿಪಿಲಿ ಹಾಡು

ಓ ಕನ್ನಡ ತಾಯೇ
ಇದು ನಿನ್ನಯ ಮಾಯೇ
ನಿನ್ನ ಮಕ್ಕಳ ಕಾಯೇ

ಓ ಮಾನವ ನಾಡಿಗಾಗಿ ಮಾಡು ನೀ ತ್ಯಾಗ
ಇದು ನಿನಗೆ ಬಂದ ಶುಭಯೋಗ
ನೀ ಹಾಡು ಹೊಸ ರಾಗ

ನೀ ಮಾಡು ನಾಡಿನ ರಕ್ಷಣೆ
ತೋರಬೇಡ ಇದಕ್ಕೆ ದಾಕ್ಷಿಣೆ
ಈ ಕೆಲಸಕೆ ನೀನೆ ಹೊಣೆ.

( writen on 4/07/2004 ...8 th std 😇😜)


ಹುಡುಕಬೇಕು ನನ್ನಿನಿಯಳ

 

ಹುಡುಕಬೇಕು ನನ್ನಿನಿಯಳ
ಕಡತಗಳ ಸಾಲಿನಲ್ಲಿ
ಎಂದೊ ಬರೆದಿಟ್ಟ ಪುಸ್ತಕವದು.

ಹೆಕ್ಕಿ ತೆಗೆದು ಮತ್ತೆ ಅಚ್ಚಾಯಿಸಿ
ಓದಬೇಕೆನಿಸುತ್ತಿದೆ
ಅವಳ ಪ್ರೀತಿಯನು.

ಹೊತ್ತಿಗೆಯಲ್ಲಿ ಅವಳ
ಮುತ್ತಿನ ಸಹಿಯ ಕಾಣದೆ
ತಿರುವಿ ಹಾಕುತ್ತಿರುವೆ ಪ್ರತಿ ಹಾಳೆಗಳನ್ನು
ತುಟಿಯಿಂದ ಅದ್ದಿದ ಬೆರಳುಗಳಿಂದ.


ಎಂತ ಕ್ಷಣವದು

 

ಆಹಾ ಎಂತ ಕ್ಷಣ ಬಾನಾಡಿ ನೋಡು ಒಂದು ಕ್ಷಣ
ಅಲ್ಲಿ ಸಾವಿರ ಸಾವಿರ ನೋಟವಿದೆ
ಕಣ್ಣ ಕೊರೈಸುವ ಮಾಟವಿದೆ.
ಕಂಪಿನ ಇಂಪಿಗೆ ದುಂಬಿಯ ಸಾಮರಾಸ್ಯವಿದೆ
ಅಂದು ಇಂದಿಗೂ ಮೀರಿದ ನಂಬಿಕೆಯ ಚುಂಬನವಿದೆ.

ಎಕೋ ಏನು ಎದೆಯ ದ್ವನಿಗೆ ಜೀವ ಬಂದಿದೆ
ನೋವ ನುಂಗಿ ಸಂತೋಷವ ಹಂಚಲು ಕಾದು ಕುಂತಿದೆ
ಅಂತರವಿಲ್ಲದ ಸ್ವರ ಸಂಚಾರ ಮೈಯ ಮುಟ್ಟಿದೆ.
ಗುರಿಯೆ ಕಾಣದ ಅರಿವು ಇಂದು ಮುಗಿಲ ಮೇರೆ ಮೀರಿದೆ

ಕೆಂದವರೆ ಮಗ್ಗಿನ ಮೊಗದಲ್ಲಿ ಹಾಸ್ಯ ಲಾಸ್ಯವಾಡಿದೆ
ಬಯಕೆ ತೋಟಕೆ ಆತುರ ಆತುರದ ಕಾತುರವಿದೆ.
ಚಂದ್ರನದಲ್ಲದ ಇಂದ್ರನಿಗಿಲ್ಲದ ಸುಖ ಸಾಮ್ರಾಜ್ಯ ನನ್ನದಾಗಿದೆ.


ಹೊಂಬೆಳಕೆ

 

ಹೊಂಬೆಳಕೆ ಹೊಂಬೆಳಕೆ ಹೊನ್ನಿನ ಗಣಿಯೆ
ತನಮನಕೆ ತನುಮನಕೆ ಬಣ್ಣದ ಮಣಿಯೆ
ಜಗವೆಲ್ಲ ನಗುವೆಲ್ಲ ನಿನ್ನದೆ ಮಾಯೆ
ನೆನಪಲ್ಲಿ ಮನದಲ್ಲಿ ನೆರಳಲ್ಲೆಲ್ಲ ನಿನ್ನ ಛಾಯೆ

ಸೃಷ್ಟಿಯೊಂದು ದೀಪ ಮುಷ್ಟಿಯೊಳಗೆ ನಾನಾ ರೂಪ
ತೋರುತ ಕಣ್ಣ ಮುಚ್ಚಾಲೆ ಯಾಕಪ್ಪಾ.
ಇಂದು ಇರುವ ನೋಟ
ನಾಳೆ ಕಾಣದ ಆಟ
ಸಾಗುತ್ತಿರುವುದು ನಿರಂತರ ಈ ಓಟ

ಧರೆ ಜನರ ಮನಸ್ಸು ರಂಗು ರಂಗಿನ ಕನಸ್ಸು
ಒಮ್ಮೆ ಮುನಿಸು ಇನ್ನೊಮ್ಮೆ ಜೇನ ಹರಿಸು
ದೂರ ತೀರದ ಸಂಚಾರ ಹಾಡುಗಾನದ ಇಂಚರ
ಭಾವ ಲಹರಿಯು ಸುಂದರ..ಆಹಾ ಸುಮಧುರ

ಸಾಕು ಕೋಪ ಮುನಿಸು
ನಿನ್ನ ಪ್ರೀತಿ ಸೊಗಸು
ಆಂತರ್ಯದಲ್ಲಿ ಜನಿಸು
ಬಾಹ್ಯದಲ್ಲಿ ರಾರಾಜಿಸು.


ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ

 

ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ
ಮಾತಿಗಾಗಿ ಕರೆವೆಯಲ್ಲ ಮಾತಿನಲ್ಲಿ ಏನು ಇಲ್ಲ
ಮೌನದಲ್ಲೂ ನೆಮ್ಮದಿಯಿಲ್ಲ..
ಆದ್ರೂನು ಪ್ರೀತಿಗ್ಯಾಕೆ  ಸೋತೆ ಕಾಣೆ ಹೇಳೆ ಓ ಜಾಣೆ

ನೋಡು ನೋಡು ಎಂತ ನೋಟ
ಮಾಯಾ ಜಿಂಕೆ ನಾಗಾಲೋಟ
ನಿನ್ನ ನೋಡಿ ಕೂಡ  ಮಗ್ಗು ಬಾಡದು
ಅಂತದ್ರಲ್ಲಿ ..
ಅಂತದ್ರಲ್ಲಿ  ನಾನು ಯಾಕೊ ಸಿಗ್ಗು ಸೋತೆನೋ..

ಮಾಯಾ ಮಂತ್ರ ನಂಬೋರ ಉಂಟೆ
ಆದ್ರೂನು ನಂಬಬೇಕ್ ಕಾಣೆ
ಎಲ್ಲಿ ಹೋದ್ರು ಬಂದೆ ಬರುವೆ .
ಪಕ್ಕಕ್ಕ ಬಂದು ಮಾಯವಾಗ್ವೆ...
ತಾನನಾ..ನಾ ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ

ನಿನ್ನ ಇಷ್ಟ ನನಗೂ ಇಷ್ಟ
ಅಂತ ಸ್ಪಷ್ಟವಾಗಿ ಹೇಳದಿದ್ರೂ..
ನೀ ಬೆಳೆದು ಬಿಟ್ಟೆ ಎಷ್ಟೋ ಎತ್ತರ ನನ್ನ ಮನದಲ್ಲಿ
ಆ ಕಲ್ಪನೆಯೇ ಎಷ್ಟೋ ಸುಂದರ..
ಆದ್ರೂನು ನಾ ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ


ನೀ ನನ್ನ ತೊರೆದರೂ

 

ನೀ ನನ್ನ ತೊರೆದರೂ ನಾ ನಿನ್ನ ಮರೆಯೆನು
ಪ್ರತಿ ಕ್ಷಣ ಪ್ರತಿ ದಿನ ನಿನ್ನ ಬಿಂಬ ಮೂಡಿದೆ ಮನದಲಿ
ಕಣ್ಣ ತುಂಬಿಕೊಳ್ಳಲು ನೀನಿಲ್ಲ ಜಗದಲಿ

ಜೋಪಾನ ಮಾಡೋ ಹೊತ್ತಿಗೆ
ಅದಲು ಬದಲಾಯಿತೆ ಹೃದಯ
ಹೊರಟಿರುವೆ ಎಲ್ಲಿಗೆ...ಇಷ್ಟೊಂದು ಆತುರ
ಯಾರ ಕರೆಯ ದಾವಂತಕೆ..

ನಾಳೆಯ ನಾ ಹೀಗೆ ಕಳೆಯುವೆ.
ನಿನ್ನೆಯ ನಿನ್ನ ನೆನಪಲಿ.
ಇಂದು ಮಾತ್ರ ಒಂದು ಕೋರಿಕೆ..
ನೆರವೇರಿಸೊ ಬಂಧು ಮಿತ್ರನೆ..

ಕಾಣುವ ಕಂಗಳೆಲ್ಲಾ ಮಂಕಾದವು
ನೀನಿಲ್ಲದೇ  ಕಾಡುವ ಕನಸೆಲ್ಲಾ ದಂಗಾದವು
ಅನುರಾಗದ ಅಪರಾಧಿ ನಾ..
ಅನುಗಾಲದ ನಿನ್ನ ಪ್ರೀತಿ ಮುಂದೆ..

ಮೌನಿ ನೀನಾಗ ಬೇಡ
ಮೌನದಲೂ ಮಾತಾಡುವೆ ನಾನೀಗ.
ಧ್ಯಾನಿ ನೀನಾಗ ಬೇಡ
ನಿನ್ನ ಧ್ಯಾನದಲ್ಲಿ ನಾನಿರುವಾಗ.

ಮರು ಜನ್ಮಕ್ಕೂ ನೂರು ಜನ್ಮಕ್ಕೂ
ನಿನ್ನನ್ನೆ ಬಯಸುವೆ
ಈ ಜನ್ಮದ ಅಸಲೂ ಬಾಕಿ ಇದೆ.
ವಸೂಲಿ ಇನ್ನೂ ಇದೆ..
ಶೇಷ ಸಂಭಾಷಣೆ ನೆಡದಿದೆಯೀಗ
ಹೇಳ ಬೇಕಾದುದು ತುಂಬ ಇದೆ.


ಜಗ ಮರೆಸೋ ಹೊತ್ತಿಗೆ

 

ಈ ನಿನ್ನ ಪ್ರೀತಿಗೆ ಜಗವೇ ಮರೆಯವಾಗ ನೋವು ಮರೆಯಾಗದಿರುವುದೆ...?

ನನಗೂ ಹಾಗೂ ನನ್ನ ಪುಸ್ತಕಕ್ಕೂ ಬಹಳ ನಂಟಿತ್ತು..ಎರಡೆರಡು ಪೇಜು ಜೊತೆಗೇ ಅಂಟಿತ್ತು.
ತಿಂಡಿಯಿಂದ ಹಿಡಿದು ಊಟದ ಕೊನೆಗೂ ಎಡಗೈಯಲ್ಲೆ ಇತ್ತು.
ನಾನು ತಿನ್ನುವುದರೊಂದಿಗೆ ಪುಸ್ತಕಕ್ಕೂ ತಿನಿಸಿದ್ದುಂಟು..ಹಾಗಾಗಿ ಕಪ್ಪು ಬಿಳುಪಿನ ಪಠ್ಯದಲ್ಲಿ ಅಲ್ಲಲ್ಲಿ ಬಣ್ಣದ ಹಾವಳಿಯಿತ್ತು.
ಮತ್ತೆ ಮತ್ತೆ ಘಮ್ಮೆಂದು ನನ್ನ ಓದಲು ಕರೆದಿತ್ತು.
ಕಾರ್ ಶೇವ್ ಮಿಕ್ಸರಿಗೂ‌ ತನ್ನನ್ನೇ ತ್ಯಾಗಮಾಡಿತ್ತು.

ಅಂದಿನಂತೆ ಇಂದು ಕೂಡ ನನ್ನ ತೊಡೆಯ ಮೇಲೆ ಅದರ ಸ್ಥಾನವಿದ್ದರೂ ಅವಕಾಶ ಸಿಕ್ಕಾಗೆಲ್ಲ ಎದೆಯೇರಿ ಕುಳಿತುಕೊಳ್ಳುತ್ತಿತ್ತು.
ನಿದ್ದೆಯ ಮಂಪರು ಏರುತ್ತಿದ್ದರೂ ಮತ್ತೆ ನಕ್ರ ಮಾಡಿ ಇನ್ನೇನೊ ಯೋಚಿಸುವಂತೆ ಮಾಡುತ್ತಿತ್ತು.
ನಂಟು ಕಳೆದುಕೊಂಡು ಒಂಟಿಯಾದಗೆಲ್ಲ ಎರಡೂ ಕೈಗಳಿಂದ ಅಪ್ಪಿಕೊಳ್ಳುತ್ತೇನೆ..ಕೊನೆಯ ಪುಟ ಓದಿದ ಮೇಲೆ ಒಂದಿಷ್ಟು ಸಾಂತ್ವಾನ ನಾನೆ ಹೇಳುತ್ತೇನೆ.

ಒಂದಷ್ಟು ದಿನಗಳ ಹಿಂದೆ ಮೊಬೈಲ್ ಕೈಗೆ ಬಂದಾಗಿಂದ ಆಪ್ಲಿಕೇಶನ್ ಅಡಿಯಲ್ಲಿ ಇಣುಕುತಿದ್ದಾನೆ.ನಾನು ತಡಕಾಡುತ್ತಿದ್ದೇನೆ ಸಮಯ ಸಾಕಾಗದೆ ಅವನ ಅಪ್ಲಿಕೇಶನ್ ಸಿಗದೆ..

ಜ್ಞಾನ ಭಂಡಾರ ಬಿರುದಾಂಕಿತನು ಒಮ್ಮೊಮ್ಮೆ ಪುಸ್ತಕದ ಬದನೆಕಾಯಿ ಅನ್ನೊ ತೆಗಳಿಕೆಗೂ ಪಾತ್ರವಾದವನು
ಬೇರೆಯವರ ಹಣೆಬರಹ ಬದಲಾಯಿಸಲು ಬಂದು
ಪಾಪ‌ ಅದೆಷ್ಟು ಜನರಿಗೆ ತಲೆದಿಂಬಾಗಿ..ತನ್ನ ಹಣೆಬರಹ ಬರೆದ ಕರ್ತೃವಿನ ಮೇಲೆ ಕೋಪಕೊಂಡು ತನ್ನೊಳಗೆ ತಾನು ಅತ್ತಿದ್ದ ಕಹಿ ನೆನಪನ್ನು ನನಗೂ ಉಸುರಿದ್ದ..

ಹೌದು ಅವನೊಡನೆಯ ಸಂಬಂಧ ಇಂದು ನಿನ್ನೆಯದಲ್ಲ..ಹಲವಾರು ವರ್ಷಗಳಾದ್ದು..ಅಂದು ನಿನ್ನ ಜಾತಿ ,ಧರ್ಮ, ನೀತಿ ಇದ್ಯಾವುದ ಕೇಳದೆ ಮೆಚ್ಚಿಕೊಂಡಿದ್ದೆ,ಜಾಸ್ತಿ ಹಚ್ಚಿಕೊಂಡಿದ್ದೆ.

ಅಂಗಳದಲ್ಲಿ, ತಂಗಾಳಿಯಲ್ಲಿ ,ಬೆಳದಿಂಗಳಲ್ಲಿ,‌ ಮರದ ಕೊಂಬೆಗಳಲ್ಲಿ ಕುಳಿತು ನಿನ್ನ ಓದಿದ ನೆನಪು..
ಆ ಕತ್ತಲ ರಾತ್ರಿಯಲ್ಲಿ ಕಪ್ಪ ಹಲಿಗೆಯ ಮೇಲೆ ಸೀಮೆಯೆಣ್ಣೆ ಬೆಳಕಲ್ಲಿ ಸೀಮೆ ಸುಣ್ಣದಲ್ಲಿ ನಿನ್ನ ಅಕ್ಕರೆಯ ಅಕ್ಷರವ ತಿದ್ದಿದ ನೆನಪು..

ಪ್ರತಿ ವರ್ಷ ಉದ್ದ ಕ್ಯಾಲೆಂಡರ್ ಹರಿದು ನಿನಗೊಂದು ಅಂಗಿ ತೊಡಿಸಿ,ಲೇಬಲ್ ಹಚ್ಚಿ  ಹೆಸರಿಟ್ಟ ನೆನಪು..
ಗೋಣಿಚೀಲದಲ್ಲಿ ಮೂಟೆಕಟ್ಟಿ ಬೆನ್ನ ಮೇಲೆ ಹೊತ್ತ ನೆನಪು. ಜೋರು ಮಳೆಯಲಿ ಮೊಣಕಾಲು ನೀರಲ್ಲಿ ನಿನ್ನ ಶರ್ಟಿನೊಳಗೆ ಬಚ್ಚಿಟ್ಟು ಕಾಪಾಡಿದ ನೆನಪು.

ಹಳೆ ನೆನಪು ಏನೇ ಇರಲಿ ಇಂದಿಗೂ ನೀ ಹೊಸಬ ..ಹೊಸ ಹೋಸ ವಿಷಯಗಳ ಸಮಗ್ರ
ಹೊಸ ಸ್ನೇಹಿತ..ಅದರೆ ಅದೇ ಹಳೆ ಪ್ರೇಮ.

ಜಗ ಮರೆಸೋ ಹೊತ್ತಿಗೆ
ಮೊಗದಲಿ ನಗು ತರಿಸೊ ಹೊತ್ತಿಗೆ
ಮನಸಾಯ್ತು ಮೆತ್ತಗೆ.


ಇಲ್ಯಾರು ಇಲ್ಲಾ

 

ಯಾರೋ ನೋವಿನಿಂದ ನೊಂದು ನರಳುವ ಧ್ವನಿ ಹೆಣ್ಣು ಸ್ವರವಿರಬೇಕು, ಕಣ್ಣ ರೆಪ್ಪೆಗಳು ಒಂದನ್ನೊಂದು ಬಿಗಿದುಕೊಂಡಿವೆ.ಒದ್ದಾಡಿ ಮಿಸುಕಾಡಿದಾಗ ಹಣೆಯಲ್ಲಿ ನೆರಿಗೆಗಳು ಮೂಡಿದವು ಹೊರತು ಕಣ್ಣು ತೆರಯಲಾಗಲಿಲ್ಲ.ನನ್ನ ಕೈಕಾಲುಗಳು ಸ್ವಾದಿನ ಕಳೆದು ಕೊಂಡಿವೆಯೆನೋ ಅವುಗಳು ನನಗೆ ಸ್ಪಂದಿಸಲಿಲ್ಲ.
ಒಂದೆರಡು ಬಾರಿ ಉಸಿರೆಳೆದುಕೊಂಡ ನೆನಪು.ನರಳುವ ಧ್ವನಿ ಕ್ಷೀಣಿಸಿ ನಿರ್ಜನವಾದ ಮೌನ ಆವರಿಸಿತು.ಗಡಿಯಾರದ ಸೆಕೆಂಡು ಮುಳ್ಳುಗಳು ಘಂಟೆಯ ಶಬ್ದಕ್ಕಿಂತ ಹೆಚ್ಚಿಗೆ ಬಡಿದು ಕೊಳ್ಳುತ್ತಿತ್ತು.

ಅಲ್ಲೆ ಕಣ್ಣು ಬಾಡಿದಂತಾಗಿ ನಿದ್ರೆ ಸಮಿಪಿಸುತ್ತಿರಬೇಕು.ಅದೊಂದು ವಿಚಿತ್ರವಾದ ದ್ವೀಪ,ನಾನು ನನ್ನ  ನಾಲ್ಕು ಜನ ಸ್ನೇಹಿತರು ಎಲ್ಲಿಗೋ ಹೊರಟಿದ್ದಿವಿ ಎಲ್ಲಿಗಂತ ತಿಳಿಯದು. ಬಹುಶಃ ನಾವು ದಾರಿ ತಪ್ಪಿ ಬಂದಿರಬಹುದು.. ಸೂರ್ಯನ ಬೆಳಕು ಬೀಳದ ಜನವಸತಿ ಇಲ್ಲದ ಪ್ರದೇಶವದು.ಒಂದು ಹಾಳು ಬಿದ್ದ ಗುಡಿಯಲ್ಲಿ ನಾವೆಲ್ಲ ಮಲಗಿದ್ದೆವೆ..ಎನೋ ಕತ್ತರಿಸುವ ಸದ್ದಿಗೆ ಎಚ್ಚರವಾಗಿ ನೋಡಿದೆ..ದಡೂತಿ ದೇಹ ರಕ್ತ ಸಿಕ್ತವಾದ ಕರುಳೊಂದು ಅವನ ಕೊರಳಲ್ಲಿ ನೇತಾಡುತ್ತಿತ್ತು.
ಅವನು ಚಾಕುವಿನಿಂದ ಇರುಳ್ಳಿ ಕತ್ತರಿಸುವಂತೆ ಎಲ್ಲರನ್ನು ಹದವಾಗಿ ಕೊಚ್ಚುತ್ತಿದ್ದ.ನನ್ನ ನೋಡಿಕೊಂಡೆ ನನಗೆ ಕಾಲುಗಳೆ ಇರಲಿಲ್ಲ..ಅದಾಗಲೆ ಕೊಚ್ಚಿ ಮುಗಿಸಿದ್ದ.ಎದೆ ಝೆಲ್ ಎಂದಿತು ಕಿಟರನೆ ಕಿರುಚಿ ಎದ್ದು ಬಿಟ್ಟೆ..ಗಡಿಯಾರ ನೋಡಿದಾಗ ಘಂಟೆ  ಎರಡಾಗಿತ್ತು.

ಭಯದಿಂದ ನನ್ನ ಮಖದಲ್ಲಿ ಬೆವರಿಳಿಯಿತು.ಬೆಳಗಿಂದ ಸಾಮನುಗಳನ್ನು ತಂದು ಜೋಡಿಸಿ ಸುಸ್ತಾಗಿತ್ತು.ಆ ಸುಸ್ತಿಗಂತಲೇ ಕಾಣುತ್ತೆ ಜ್ವರದಿಂದ ಮೈ ಸುಡುತ್ತಿತ್ತು.
ರಂಜಿತ್ ಹಾಗೂ ರಾಜೇಶ್ ನನ್ನ ಪಕ್ಕದಲ್ಲಿ ಮಲಗಿದ್ದರು.
ಅವರಿಬ್ಬರನ್ನು ಎಬ್ಬಿಸುವ ಮನಸ್ಸಗದೆ ನಾನೆ ಬಾತ್ ರೂಮ್ ಗೆ ಹೋಗಿ  ಟವೆಲ್ ಒದ್ದೆಮಾಡಿ ಹಣೆಗೆ ಪಟ್ಟಿಯಂತೆ ಕಟ್ಟಿಕೊಂಡು ಮತ್ತೆ ಮಲಗಿಕೊಂಡೆ. ಹೊರಗಿನ ಬೀದಿ ದೀಪ ಕಿಟಕಿಯ ಗಾಜನ್ನು ಹಾಯ್ದು ಕೋಣೆಯಲ್ಲಿ ಪ್ರತಿ ಫಲಿಸುತ್ತಿತ್ತು.

ಇನ್ನೂ ನಿದ್ದೆ ಬಂದಿಲ್ಲ ಯಾರೊ ಗುನುಗುತ್ತಿದ್ದರು..ರಂಜಿತ್..

"ಭ್ರುಕುಟಿ ಪುಟ ಕಟ ಕಟ"
"ಅಕ್ಷಿ ಸಂಪುಟ ದುರುಳ ಸಂಕಟ"
"ಮಾರ್ಜಾಲ ಮರ್ಕಟ"

ರಂಜಿತ್ ಮರದ ಕುರ್ಚಿಯ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತ್ತಿದ್ದ,ಅವನು ಎನೇನೊ ಹೇಳುತ್ತಿದ್ದ ಗಹಗಹಿಸಿ ನಗುತ್ತಿದ್ದ..
ನೋಡಲ್ಲಿ ನೋಡಲ್ಲಿ...
ಎದುರಿಗಿದ್ದ ದೃಶ್ಯ ನೋಡಿ ನನ್ನ ಜಂಘಾಬಲವೆ ಹುದುಗಿ ಹೊಯಿತು.ರೋಮಗಳು ನಿಮಿರಿ ಹೆಗಲ ಮೇಲೆ ಮಿಂಚು ಸಂಚಾರವಾದಂತಾಯಿತು.

ರಾಜೇಶ್ ನೆಲದ ಮೇಲೆ ಕಂಬದ ಹಾಗೆ ಮಲಗಿದ್ದ..ಅವನ ಮುಖ ವಿಕಾರವಾಗಿತ್ತು..ಕಣ್ಣು ಗುಡ್ಡೆ ಹೊರಚಾಚಿದಂತೆ  ಮಲಗಿದ್ದ.ಅವನ ಕಾಲ ಬೆರಳು ಸಂದಿನಿಂದ ರಕ್ತ ಒಸರುತ್ತಿತ್ತು.
ಅದೊ ಅದೋ ಆ ಕಪ್ಪು ಬೆಕ್ಕು ತನ್ನ ನಾಲಿಗೆ ಹೊರಚಾಚಿ ರಕ್ತ ಹೀರುತ್ತಿತ್ತು.

ಇದು ಕನಸಲ್ಲ..ನಾನು ನೋಡುತ್ತಿದ್ದೆನೆ..ಪ್ರತಿಭಟಿಸಲಾಗತ್ತಿಲ್ಲ,ಮಾತೆ ಬಾಯಿಯಿಂದ ಹೊರಹೊಮ್ಮುತ್ತಿರಲಿಲ್ಲ.  ಬಹಳ ಕಷ್ಟಪಟ್ಟು ದೀಪ ಹೊತ್ತಿಸಿದೆ..ಹೌದು ಇಲ್ಯಾರು ಇಲ್ಲ..ಪಕ್ಕ ನನಗರಿವಿದೆ ನಾನು ಕಂಡಿದ್ದು ಕನಸಲ್ಲ..
ಯಾವಗ ನಿದ್ರೆ ಆವರಿಸಿತೊ ಒಂದು ತಿಳಿಯದು.ಎಚ್ಚರವಾದಗ ವಿನಯ್ ಹಾಸ್ಪಿಟಲ್ ನ ೨೦೩ ರೂಮ್ ನಂ ನಲ್ಲಿ ಅಡ್ಮಿಟ್ ಆಗಿದ್ದೆ. ಇಂದಿಗೂ ಅರ್ಥವಾಗುತ್ತಿಲ್ಲ..ಅಲ್ಲಿ ಕೊನೆಯ ಬಾರಿ ಕಂಡಿದ್ದು ನನ್ನ ಹೊರತು ಇನ್ಯಾರು ಇರಲಿಲ್ಲ.. ನಮ್ಮ ನಾಲ್ಕು ಜನರಲ್ಲಿ ಇನ್ನೊಬ್ಬರು ಯಾರೆಂದು ನೆನಪಿಗೆ ಬರುತ್ತಿಲ್ಲ...


ಕ್ರಾಂತಿ

 


ವಿಶ್ವವೇ ಸಾರುತ್ತಿರುವುದು ಸೌಹಾರ್ದತೆಯ ನೀತಿ
ಆದರೆ ಎಲ್ಲಿದೆ ಬಂಧುಗಳೆ  ಶಾಂತಿ?
ಕೊಟ್ಟು ಸಲಹುವವರಾರು ಪ್ರೀತಿ

ಭಯ ಬುಗಿಲೆಬ್ಬಿಸಿ  ಭಯೋತ್ಪಾದಕರಾಡುತ್ತಿದ್ದ
ಮಾತು ದೇಶದಲ್ಲಿ ಕ್ರಾಂತಿ
ಆರ್ಥ ಮಾಡಿಕೊಳ್ಳುವರಾರು
ಮುಗ್ಧ ಮನಸ್ಸುಗಳ ಭೀತಿ

ಹೃದಯ ಹೀನವಾಗಿ ತಾಂಡವಾಡುತ್ತಿದೆ ಅನೀತಿ
ಅಸ್ಥಿರತೆಯ ಶೋಕ ಸ್ತುತಿ
ಬುದ್ದಿ  ವಿಕಾಸಿಸುತ್ತಿದ್ದಂತೆ
ಮನುಷ್ಯನಾಗುತ್ತಿರುವನೇ ಸ್ವಾರ್ಥಿ?

ಅದೆಷ್ಟೋ ನಾಶಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆ
ಸುಮ್ಮನೆ ವ್ಯರ್ಥವಾಗುವ ಶಕ್ತಿ
ಆರ್ಥವಿಲ್ಲದ ಆತ್ಮಾಹುತಿ
ತಪ್ಪಲ್ಲವೇ ತಮ್ಮ ತನವ ಮರೆತ ರೀತಿ.


ಬೆಳಕು ತಂದೆ ಬಾಳಲಿ

 


ಜೀವವಿಲ್ಲದ ಬದುಕಿನಲ್ಲಿ
ಭಾವ ತುಂಬಿದೆ ಹರುಷದಲಿ|ಪ|

ಕೊಂಚ ಕೊಂಚ ಆವರಿಸಿ
ಎದೆಯ ದಿಂಬಿಗೆ ತಲೆಯಿರಿಸಿ
ಮಧುರ ಮೈತ್ರಿಯಲ್ಲಿ ನನ್ನ
ಹೃದಯವ ಅಲಂಕರಿಸಿ.|೧|

ಎದೆಯ ಪಿಸುಮಾತಿಗೆ
ನಸುನಗೆಯ ತುಂಬಿ
ಆಸೆಯ ಅಂಚಲಿ  ಮೂಡಿದ ಬಯಕೆಗೆ
ಶೃಂಗಾರದ ಸಂಗಮ ನೀ ತಂದು |೨|

ಭಯದ ಕನವರಿಕೆಯ ನೀ ಸರಿಸಿ
ಬಾಳಲಿ ಬೆಳಕನು ಮತ್ತೆ ಮೂಡಿಸಿ
ಕೈ ಹಿಡಿದು ಜೊತೆಯಲಿ ಅನುಸರಿಸಿ|೩|

ಬೇಡದೆ ವಧುವಿಗೆ
ವರ ನೀನಾದಂತೆ
ಬಾಡದೆ ಹಾಗೆ ಕಾಪಾಡಿದೆ
ದುಗುಡ ಕಳೆದಿದೆ ಇನ್ನೇನು ಚಿಂತೆ|೪|


ಪ್ರೇಮಾ ಪಲ್ಲವಿ.... ಚರಣಾ ನಿನ್ನದು..

 

ಪ್ರೀತಿಯ ಸಾಲಿಗೆ ಅರ್ಥ ನೀನು
ಪ್ರತಿ ಜನ್ಮದಲ್ಲೂ ನಿನ್ನನ್ನೇ ಬಯಸುವ
ಸ್ವಾರ್ಥಿ ನಾನು
ಪ್ರೇಮಗೀತೆಗೆ ಪಲ್ಲವಿ ನೀನು
ನನ್ನೀ ಪಯಣದಲ್ಲಿ ಸ್ಪೂರ್ತಿ ನೀನು

ಅಂತರಂಗ ಅರಿತ ಅನುರಾಗಿಯೇ
ನನಗಾಗಿಯೇ ಹುಟ್ಟಿದ ಗೆಳತಿಯೆ
ನಗು ಮೊಗದ ಒಡತಿಯೇ

ಪ್ರೀತಿಯ ಹನಿಗಳ ಮುತ್ತಿನ ಪಾಕಕೆ
ಬಯಕೆಯ ಬೆಸುಗೆ ನಾ ಹಾಕುವೆ
ನೀ ಕರೆದೊಳು ಬಂದು ಸಂಧಿಸುವೆ
ನನ್ನ ಕರದಲಿ ನಿನ್ನ ಬಂಧಿಸುವೆ..

ಅಕ್ಕರೆ ಮಾತಿಗೆ ನೀ ಸಿಕ್ಕರೆ
ನನ್ನೊಂದಿಗೆ ತುಸು ನಕ್ಕರೆ
ನನಗದೆ ಸ್ವರ್ಗ

ಪ್ರತಿ ಜನ್ಮದಲ್ಲೂ
ರತಿಯಾಗಿ ಕಾಡು
ಸತಿಯಾಗೋ ತನಕ
ನಿನ್ನ ಹಳೆ ನೆನಪು ಮರಳೊ ತನಕ


ನೀ ಬಳಿ ಬಂದೆ

 

ನೀನೆಂದು ನನ್ನವಳು ನನಗಾಗಿ ಬಂದವಳು
ಪ್ರೀತೀಲಿ ಈ ಲೋಕ ತರೆದಿಟ್ಟವಳು
ಮಗುವೇ ನೀನಾಗಿ ನಗುವೆ ನನಗಾಗಿ
ನನ್ನ ನಗಿಸಿ ನಕ್ಕವಳು

ಅಪೂರ್ವ ರೂಪದವಳು ಅಪರಂಜಿ ಇವಳು
ಅಪರೂಪಕೆ ಸಿಕ್ಕವಳು.
ಹೊಗಳಲು ಅಪಸ್ವರವೆಲ್ಲಿ
ಅಪಾರ ಪ್ರೇಮಿ ನಾ...

ಭಯದ ಕನವರಿಕೆಯ  ನೀ ಸರಿಸಿ
ಬಾಳಲಿ ಬೆಳಕನು ಮತ್ತೆ ತೋರಿಸಿ
ಜೋತೆಯಲಿ ಅನುಸರಿಸಿ
ಬಂದೆ..ನೀ...

ಆಸೆಯ ಅಂಚಲಿ ಮೂಡುವ ಬಯಕೆಗೆ
ಶೃಂಗಾರದ ಸಂಗಮ ನೀ ತಂದು
ಎದೆಯ ಪಿಸುಮಾತಿಗೆ
ನಿನ್ನ ನಸು ನಗೆಯ ತುಂಬಿ
ಭ್ರಮೆಯ ಬದುಕಲಿ ಬಣ್ಣದ ರಂಗೇರಿಸಿದೆ..


ಗ ಕಾಗುಣಿತ ಕವಿತೆ

 

ಗಗನದ ಕುಸುಮವೇ ನೀನು
ಗಾಳಿಯು ಬೀಸಲು ಏನೋ
ಗಿಜಿ ಗಿಜಿ ಗುಟ್ಟುವ ಮನದ ಭಾವವ
ಗೀಚುವ ಆಸೆಯು ನನ್ನಲಿ

ಗುನುಗುವೆ ನಿನ್ನನೇ ಅನುದಿನ ನಾನು
ಗೂಡಲಿ ಎದೆಯ ಗೂಡಲಿ ಈ ಕೂಡಲೇ
                  ಬಂಧ ಬಿಗಿಯಾಗಲಿ

ಗೃಹಧಾರಿಣಿ ಮನ ಸಂಚಾಲಿನಿ
ಗೆಲುವಾದ ಓ ಒಲವೇ ನನ್ನ ನಲಿವೇ
ಗೇಯತೆ ಆ ಮಧುರ ನುಡಿಯಲಿ
                            ಮನವೀಗ ನಿನ್ನ ಜೊತೆ  ಸೇರಿ
ಗೈರಾದ ನನ್ನ ದಿನಚರಿ

ಗೊಲ್ಲನ ರಾಧೆಯಂತೆ ನನ್ನಯ ಮಾತಿಗೆ
ಗೋಪಿಕೆ  ನೀನು ಆದೆ
ಗೌರವತೆಯ ಕೈಯ ಹಿಡಿದು
ಗಂಧರ್ವ ಲೋಕವ ನಾನು ಕಂಡೆನು
ಗಹನವಾದ ಪ್ರೀತಿಯ ಸವಿಯ ಉಂಡೆನು.


ಕ ಕಾಗುಣಿತ ಕವಿತೆ

 

ಕನಸಲಿ ಕಾಣುವ ಮೋಹಕ ರೂಪ ನಿನ್ನದು
ಕಾಡಿಗೆಯ ಕಣ್ಣಲ್ಲಿ ಕಾಣದೆ ಕಾಡಿಸೊ ಅಮಲೂ ನಿನ್ನದು.
ಕಿರು ನಗೆಯಲಿ ಮರು ಮಾತಾಡದೆ ಮರೆಯಾದರೆ ನೀ
ಕೀಲಿ ಕೊಟ್ಟ ಬರಿ ಬೊಂಬೆ ನಾ..

ಕುಡಿಯೊಡೆದ ಕನಸಿಗೆ
                ಕೊಡೆ ಹಿಡಿಯೇ ಬಾ ಗೆಳತಿ
ಕೂಡಿ ಬಾಳುವ ಕಡೆತನಕ

ಕೃಶವಾದೆನು ನಿನ್ನ ನಶೆಯಲ್ಲಿ
ಕೆಣಕುವ ಕಣ್ಣೋಟ ಸಾಕೀಗ
ಕೇಳೆ ಗೆಳತಿ ಪ್ರೀತಿ ಮಾತೀಗ
ಕೈ ಹಿಡಿದು ನಡೆವೆ ಜನುಮ ಜನುಮಕೂ

ಕೊನೆಯಿಲ್ಲದ ಪ್ರೀತಿ ಈ ಸಂಗಮ
ಕೋಟಿ ನಂಟಿಗೂ ನಿಲುಕದ ವಿಹಂಗಮ
ಕೌಮಾರಿ ಕನಸು ನೂರೊಂದು ಬಯಕೆ
ಕಂಬನಿಯ ಕೋಣೆಯಲಿ
ಕಹಳೆಯ ದ್ವನಿಯಲ್ಲಿ ಈ ಕೂಗು ನಿನಗೆ ಕೇಳದೇ?


ಅವನೆಂದರೆ

 

ಮಾತುಗಾರ ಮೋಡಿಗಾರ
ಸಲಿಗೆಯ ಹದ್ದುಮೀರ
ಅವನ ಖುಷಿಯ
ನನಗೆಯಿತ್ತ ಪಾಲುದಾರ..
ವಾಸ್ತವಕ್ಕೆ ದೂರ ಅವನು ಬಲು ದೂರ

ತುಸು ಹೆಚ್ಚೆ ಹುಚ್ಚಿ ನಾನು
ನನ್ನೊಳಗೆ ಅವನ ಹಚ್ಚಿಕೊಂಡು.
ಮನಬಿಚ್ಚಿ ಮಾತಾಡೊ ಆಸೆ
ತುಂಬಾ ಅಚ್ಚು ಮೆಚ್ಚು ಕಾಣೋ

ತಪ್ಪು ಸರಿ ಅನ್ನುವ ಉಯ್ಯಾಲೆ
ಮನಸ್ಸು
ಒಪ್ಪುತ್ತಿಲ್ಲ ಯಾಕೋ..
ನನ್ನಲ್ಲಿ ತಪ್ಪು ಹುಡುಕಬೇಡ ಗೆಳೆಯಾ

ನನ್ನೊಳಗೆ ನಾನು ನಕ್ಕೆ
ನಿನ್ನ ನೆನಪಿನಾಳಕ್ಕೆ
ಮುಗ್ಧ ಮನಸ್ಸು ಜಾರಿ
ಅದು ಎಲ್ಲ ಎಲ್ಲೇ ಮೀರಿ
ಬೇಡ ಬೇಡವೆಂದು
ಬಯಸಿದೆ  ನಿನ್ನ ಇಂದು..


ಗಜಲ್೧

 

ನನ್ನೆದೆಯೊಳಗೆ ಹಾಡಿದ ತನನಂ ನಿನಗೆ ಕೇಳಿಸದೇ ಸಖಿ
ಎದೆಯಾಲಿಂಗನವ ಮಾಡಿದ  ಕಿವಿಗಳು ಆಲಿಸದೇ ಸಖಿ

ಮನದಲಿ ಮೀಟುವ ಸ್ವರಕೆ ನಾ ದ್ವನಿಯಾಗಿರಬಹುದು
ಇಂಪನ ಸ್ವರಗಳು ತಂಪನು ನೀಡಿದ ಮೇಲೂ, ಹೃದಯವು ಪ್ರೀತಿಯ ಅರಿಯದೇ ಸಖಿ

ಆಳ ತಿಳಿಯದಿಳಿದು ಸೆಳೆತಕ್ಕೆ ಸಿಕ್ಕು ಮಿಸುಕಾಡುತ್ತಿರುವೆ
ವಿರಾಹಿಯ ಜೀವ ಉಳಿಸಲು ನನ್ನತ್ತ ನೋಟ ಸುಳಿಯದೇ ಸಖಿ.

ಸನಿಹ ಸುಳಿದರೂ ವಿರಹದ ಹಾಡು ಗುನುಗುತ್ತಿರವೆ
ಹೃದಯ ಗಾನದ ಘಂಟಾ ಘೋಷಣೆ ಮೊಳಗದೇ ಸಖಿ

ಉಸಿರೂ ನಿಲ್ಲಲುಬಹುದು..ಅಂದ ಚಂದ ಕುಂದಿ ಮಂದವಾಗಲೂ ಬಹುದು
ನಿನ್ನೇ ಬಯಸುವ ಒಳಮನಸ್ಸಿನ ತುಡಿತ ತಿಳಿಯದೇ ಸಖಿ

ಒಲವಿನೊಲುಮೆಯಲಿ ಪ್ರೀತಿ ಮುತ್ತನಿಟ್ಟ ಈ ಸಂದೇಶ
ಜನ್ಮ ಜನ್ಮಕೂ ಪ್ರೇಮ ಬಂಧನವ ಬೆಸೆಯದೇ ಸಖಿ


ನಿನ್ನಲೊಂದು ಪ್ರಶ್ನೆ

 

ಕಣ್ಣಂಚಲಿ ಜಾರುವ ಹನಿಗಳನ್ನ  ಸಾಕ್ಷಿಯಿಲ್ಲದೆ ಬತ್ತಿಸಿ ಬಿಟ್ಟವಳಲ್ಲವೇ...ಅದೆಂತಹ ಸಹನೆ ನಿನ್ನದು. ಹಾಗಂತ ಮುಖವಾಡದ ಬದುಕು ನಿನ್ನದಲ್ಲ..
ನೋವುಂಡ ಜೀವ ಕುಗ್ಗಿ ಹೋಗುವುದಂತೆ.ಅದರೆ‌ ಅದೆಂತಹ ಜೀವನ ಸ್ಥೈರ್ಯ..
ತುಟಿಯಂಚಲಿ ಮಿನುಗುವ ಕಿರು ನಗೆಯ ಜೊತೆಗೆ
ಆಶಾಕಂಗಳ ಸ್ಪೂರ್ತಿಯ ಚಿಲಮೆ ಆ ಪ್ರತಿ ನೋಟವು.
ನೋವಿಗೂ ನಲಿವಿನ ಪಾಠ ಕಲಿಸಿದವಳು..ನೋವನು ಯಾರು ಹುಡುಕಲಾರದ ಆಳಕೆ ಹುದುಗಿಸಿಟ್ಟವಳು..
ಇದೆಲ್ಲಾ ಹೇಗೆ ಸಾಧ್ಯ..ಈ ಗೆಲುವಿಗೆ ಸ್ಪೂರ್ತಿಯಾರು.?
ನಿನ್ನ ಸಹನೆಯೇ..ಇಲ್ಲ ಆತ್ಮ ಸ್ಥೈರ್ಯವೇ..?
ಸಹನೆಗೂ ಅಷ್ಟೊಂದು ಶಕ್ತಿನಾ...
ಸೋಜಿಗವೇ ಕಾಡುವುದು..ಸರಮಾಲೆ ಪ್ರಶ್ನೆಗಳ ಜೊತೆ ಉತ್ತರವೇ ಸಿಗದೆ...
ಹೌದು..ಆ ನೋವಿನಲ್ಲೂ ನಗುವುದ ಹೇಗೆ ಕಲಿತೆ..?


ಪ್ರೇಮ ಸಂಜೆ

 


ನಾ ನಿನ್ನ ನೋಡಲು ಪ್ರೇಮ ಸಂಜೆಯಾಗಿರೇ
ಮನದಲ್ಲಿ ಮೂಡಿದ ಮಧುವಣಗಿತ್ತಿಯೇ....
ಕನವರಿಸೋ ಕನಸುಗಳು ಕದನವಾಡಿದೆ.
ನಿನ್ನ ಸನಿಹ ಸುಳಿಯಲು  ಮನಸ್ಸ ಸೆಳೆಯಲು..

ಆ ಹುಣ್ಣಿಮೆ  ..ಈ ಹೆಣ್ಣಿಗೆ ಧಾರೆ ಎರೆದಳೆ
ಕಾಂತಿಯ ಸೊಬಗ
ಅಂದವಾದ ನಿನ್ನ ಮಂದಹಾಸ ಚೆನ್ನಾ
ಸೋಲುತಾ ವಾಲುತಾ ಕಬ್ಬಿಗ ನಾ

ಚೂರು ನಕ್ಷತ್ರ ಹಣೆಗೆ ಚಿತ್ತಾರ
ಜಾರಿದ ಮುಂಗುರುಳು ಓಲೆಯ ಓಗರ
ನಸುಗಂಪಿನ  ಕೆನ್ನೆಲಿ ಚಂದ್ರ ಕುಳಿ ಇಟ್ಟಂತೆ..
  ಮರಳು ಮಾಡುವ ನಿನ್ನ
ಓರೆನೋಟಕೆ ಮನ ವಾಲಿದೆ ತಟ್ಟಂತೆ

ಒಮ್ಮೆ ತಿರುಗಿ ನೋಡು , ಪ್ರೀತಿ ಮಾತನಾಡು
ಇನ್ನು ಸಲಿಗೆ ನೀಡೆ ಪ್ರೇಮದರಸಿ
ಮನದಿ ನಿನ್ನ ಅಪ್ಪುವಂತೆ  ಒಪ್ಪಿಕೊಳ್ಳೆ..


ಹ್ಯಾಪಿಡೇ

 

ಅದೆಷ್ಟೋ ಅಪ್ಪುಗೆಯ ನಂತರವೂ ಆ ಬಂಡೆ ಸ್ಥಿರವಾಗಿದೆಯೆಂದರೆ ಅಲೆಗಿರುವ ಪ್ರೇಮ, ಆ ದುಂಡು ಕಲ್ಲಿಗೆ ದಂಡವಾಗಿ ಹೋಯಿತೇ?   ಇಲ್ಲಾ ಇನ್ನೆನನ್ನೊ ಬಯಸಿ ಅಡ್ಡನಿಂತಿರುವ  ಬಂಡೆಯನ್ನು ದಾಟಲಾಗದೆ ಹಿಂದೆ ಸರಿಯುತ್ತಿದೆಯೇ?
ಪ್ರೀತಿಯೆಂದರೆ ಹೀಗೆ
ಅಲೆಯ ಅಲೆದಾಟವೋ. ಬಂಡೆಯ ಜಡತ್ವವೋ.
ಉತ್ಕಟ ಉತ್ಕರ್ಷದಲ್ಲಿ
ಆರ್ಭಟಿಸಿದ ಝರಿಯ ಸೌಮ್ಯವಾಗಿ ಹಾಲ್ನೊರೆಯಲಿ ಹರಿದಿದ್ದು ಸಹ ನೋಡಿದೆ.
ತನಗೂ ಇದಕ್ಕೂ ಸಂಬಂಧವೇ ಇಲ್ಲಾ ಎನ್ನುವಂತೆ ನಿಶ್ಚಲವಾಗಿ ನಿಂತ ಬಂಡೆ ಕಲ್ಲಿನ ಜೀವನವೂ ಸೋಜಿಗವೇ..

ಉಳಿಸಿಕೊಳ್ಳಲಾಗದ ಯಾವ ಬಂಧಗಳಿಗೂ ಭಾವನೆಯನ್ನು ಬೆಸೆಯಬಾರದು.ಕಳೆದುಕೊಂಡು ಪರಿತಪಿಸಿ ಹಾರೈಸುವ  ಆ ಮನದ ನೋವು ಇನ್ನೊಬ್ಬರನ್ನು ನೆಮ್ಮದಿಯಾಗಿ ಇರಿಸಲಾರದು. ತಾಳ್ಮೆಯ ಈ ಪರಿ ಕೆಲವೊಮ್ಮೆ ಅಸಹನೀಯ ಎನಿಸಿದರೂ ಪವಿತ್ರ ಪ್ರೇಮದ ಮುಂದೆ ಎಲ್ಲವೂ ಗೌಣ.
      ಹ್ಯಾಪಿ ಡೇ....


ನ್ಯಾನೊ ಕಥೆ- ಸಂನ್ಯಾಸಿಯ ಕಥೆ

 

ಸಾರ್ವಜನಿಕವಾಗಿ ಎಲ್ಲರೆದುರು ಅವಳಿಟ್ಟ ಮುತ್ತಿಗೆ  ಅವನು ಸಂಸಾರಿಯಾದ.


ಹುಡುಕದಿರು

 

ಕರೆಯ ಬೇಡವೇ ನನ್ನ ಸೆಳೆಯಬೇಡವೆ
ಮೌನವಾಗಿ ಇರುವೆ ನಾ..ನಿನ್ನ ಕರೆಗೆ ನಾ

ಕಾಡು ನೀ..ಬೇಡು ನೀ ಎಷ್ಟೆ ಸನಿಹ ಬಂದರೂನು
ಓಡುತಿರುವೆ ಹಿಡಿಯಲಾರೆ ನೀ

ನನ್ನ ಹಟದ ಮುಂದೆ
ನಿನ್ನ ಪ್ರೀತಿಯೆಂದು  ಹಿಂದೆ..ಅದು ಉರಿವ ದೊಂದೆ

ಅರ್ಥವರಿಯದೆ ವ್ಯರ್ಥ ಮಾಡದಿರು
ನಿನ್ನ ಜೀವನ ...ನಿನ್ನ ನೋವನ್ನ..

ಚಿನ್ನ ನೀನು ಜ್ವಾಲೆ ನಾನು
ಕರಗಬೇಡ ಹತ್ತಿರ ಸುಳಿದು..ಬರಿ ಇದ್ದಿಲೆ ಉಳಿವುದು

ಕಂಗಳಿಂದ ಜಾರೋ ಕಂಬನಿ ನೀನು
ಹುಂಬ ನಾನು..ಏನು ಅರಿಯೆನು..
ಮತ್ತೆ ಹುಡುಕದಿರು.. ನೀ ಜಾರುವ ಹನಿಯ
ಮತ್ತೆ ಹುಡುಕದಿರು.....


ಜಟಕಾ ಬಂಡಿ

 

ರೋಷ ದರ್ಪದಲಿ ಮೆರೆದೆ, ಅಹಂಕಾರದಲಿ ಉರಿದೆ.
ಉರಿವ ದಿನ ಊರುಗೋಲ ಮರೆತೆ
ಮರೆತ ಕ್ಷಣದಲಿ ಎಲ್ಲವ ಅರಿತೆ..
ಅರಿತಾಗ ಬದುಕಲ್ಲಿ ಉಳಿದಿದ್ದ ದಿನಗಳೇ ಎರಡೂ
ಎರಡು ಗಾಲಿಗಳು ಕುದುರೆ ಹೆಗಲ ಮೇಲೆ
ಮೇಲೆ ನೋಡುವ ವಿಧಿಯ ಕೈಯಲ್ಲಿ ಸೂತ್ರ
ಸೂತ್ರದಾರನ ಲೀಲೆಯಂತೆ ನಮ್ಮ ಪಾತ್ರ
ಪಾತ್ರವರ್ಗದಲ್ಲಿ ಕೇವಲ ನಟನೆಯೊಂದೆ
ಒಂದೆ ಬದುಕಲಿ ನೋವು ನಲಿವ ಕಂಡೆ
ಕಂಡರಿತ ಮೇಲೆ ಈ ಬದುಕೇ ಜಟಕಾ ಬಂಡಿ
ಬಂಡಿ ಓಡಿಸುವ ವಿಧಿ ಅದರ ನಾಯಕ


ದಾರಿ ಮುಚ್ಚಿರುವುದು

 

ಮುಗ್ದ ವ್ಯಾಪಾರಿ
ಹೋದ ನನ್ನ ಮಾರಿ
ಪೆಚ್ಚು ಮೋರೆ ನೋಡದೆ
ಹುಚ್ಚು ಹಣದ ಆಸೆಗೆ

ಕೊಂಡು ಕೊಳ್ಳಲು ನೂರು ಸರದಾರರು
ಬರಿ ಸರಕು ನಾನು...
ಇವರ ಕೈಯಿಂದವರ ಕೈಗೆ ಸೇರಿ
ಹರಾಜಿನಲ್ಲೆ ಬಿಕಾರಿ..

ನೋಟಿನ ಮೌಲ್ಯಕೊಟ್ಟು
ಬೂಟಿನ ಕೆಳಗಿಟ್ಟು ತೂಗುವ
ಇವರಲ್ಲಿ ಕೇಳಬಹುದೆ
ಸ್ವಾತಂತ್ರ್ಯ ಸಮಾನತೆ

ದಪ್ಪ ಚರ್ಮದ
ಅಂದ ಕುರುಡರ ಹಿಂದೆ
ಹಿಂದು ಮುಂದು ನೋಡದೆ ನಡೆದಿದ್ದು
ನಂದು ತಪ್ಪೆ..

ಪ್ರತಿಭಟಿಸಲು ನಾನು ಒತ್ತೆಯಾಳು
ಯಾರು ಕೇಳರು ಕತ್ತೆ ಗೋಳು
ಕಂಡು ಕಾಣದೆ ನಟಿಸಿದವರಕ್ಕಿಂತ
ನಕ್ಕು ನಡೆದವರೇ ಸುಮಾರು ಪಾಲು

ಅಂದು ಕೈಯಲ್ಲಿ ಜೀವ ಹಿಡಿದು
ಓಟಕ್ಕಿಳಿದೆ,
ಹಿಂಬಾಲಿಸಲು ಬೆನ್ನು ಕಾಣುತ್ತಿತ್ತು.
ಹಾಳೂರು ಮೂಳೂರೆಂಬ ಯೋಚನೆಯಿರಲಿಲ್ಲ..

ಇಂದು ಸಹ ಕೈಯಲ್ಲಿ ಜೀವ ಹಿಡಿದಿರುವೆ
ಹಿಂದಿರುಗಿ ನೋಡಲು ಬೆನ್ನು ಕಾಣಿಸುತ್ತಿದೆ.
ಹಿಂಬಾಲಿಸುತ್ತಿದ್ದಾರೆ,
ಯಾವ ಊರೆಂಬ ಯೋಜನೆಯಿಲ್ಲ.
ಮುಂದೆ ದಾರಿ ಇಲ್ಲ.

ಈ ಜೀವಕ್ಕೆ ಮತ್ತೆ ನೋವೇಕೆ.
ಪವಾಡ ನಡೆಯಲಿಲ್ಲ ,ಅಖಾಡಕಿಳಿಯಲಿಲ್ಲ..
ಮಲೀನವಾಗುದಕ್ಕಿಂತ  ವಿಲೀನವಾಗುವುದೇ ಅಂತ್ಯ
ಎರಡು ಹೆಜ್ಜೆಗೆ ಹರಿವ ತೊರೆ
ಕೊಚ್ಚಿ ಸಾಗಲಿ ಪಾಪದ ಹೊರೆ.


ಜೀವನದ ಸಣ್ಣ ಸಣ್ಣ ಖುಷಿಗಳನ್ನೂ ತೀವ್ರವಾಗಿ ಅನುಭವಿಸುವರೇನು? ನಿಮ್ಮ ಜೀವನ ಪ್ರೀತಿ ಎಂತಹದು?

 

happiness ಎನ್ನುವುದು ಬಾಹ್ಯ ಪ್ರಕ್ರಿಯೆಯಲ್ಲ..ಇದೊಂದು ಆಂತರಿಕ ಮಾನಸಿಕ ಸ್ಥಿತಿ.
ಐಹಿಕ ಭೋಗಗಳು ,ವಸ್ತುಗಳು,ಸೌಲಭ್ಯಗಳು ಪಂಚೇಂದ್ರಿಯಗಳನ್ನು ತಣಿಸಿ ಮನಸ್ಸನ್ನು ಮುದಗೊಳಿಸುತ್ತದೆ..
ಈ ಮನಮುದಗೊಳ್ಳುವ ಪ್ರಕ್ರಿಯೆ ಆದಷ್ಟು ಮನಸ್ಸಿನಲ್ಲೇ ಅಂಕುರಿಸಿದರೆ ಖುಷಿಯನ್ನು ನಾವೇ ಸೃಷ್ಟಿಸಿದಂತೆ..

ಯಾವಾಗಲೂ ನಮ್ಮ ಖುಷಿಯನ್ನು ನಾವೇ ಕಂಡುಕೊಳ್ಳಬೇಕು..ಸಾಧ್ಯವಾದಷ್ಟು ಸಣ್ಣ ಪುಟ್ಟ ವಿಷಯಗಳಲ್ಲಿ ಸಂತೋಷದ ಅಲೆಯ ಸೃಷ್ಟಿಸಿ ಖುಷಿ ಪಡಬೇಕು..

ಬದುಕು ಎಂದ ಮೇಲೆ ಏಳು ಬೀಳು ಕಷ್ಟ ಸುಖ ಸಾಮಾನ್ಯ.ಬೇಸರಿಸಿ ಮರುಗುವುದರಿಂದ ದುಃಖ ದೂರವಾಗದು.. ಹಾಗಿದ್ದ ಮೇಲೆ ಚಿಂತೆಯ ಕ್ರಾಂತಿ ಯಾಕೆ?

ಇಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸಬಹುದು.. ಚಿಂತೆ ಇಲ್ಲದೆ ಚಿಂತನೆ ಹೇಗೆ ಸಾಧ್ಯ? ಯೋಚಿಸದೆ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು..
ಯೋಚನೆಯೆನ್ನುವುದು ಗಂಭೀರವಾಗಿದ್ದು ಸಕಾರಾತ್ಮಕತೆಯಿಂದ ಕೂಡಿರಬೇಕು ಹೊರತು ಭಾವೋದ್ರಿಕ್ತವಾಗಿ ದುಃಖತೃಪ್ತವಾಗಿರಬಾರದು.
ಹಸನ್ಮುಖಿಯಾಗಿ ಸವಾಲುಗಳನ್ನು ಸ್ವೀಕರಿಸುತ್ತ ಮೊದಲು ನಮ್ಮನ್ನು ನಾವು ಪ್ರೀತಿಸುವುದರಿಂದ ಈ ಖುಷಿ ಸಿಗಬಹುದು.


ನಿಮ್ಮ ಪ್ರಕಾರ ಡಿಪ್ರೆಶನ್ ಎಂದರೇನು? ಅದನ್ನು ಹೋಗಲಾಡಿಸುವ ಯಾವೆಲ್ಲ ಕ್ರಮ/ಮಾರ್ಗಗಳಿವೆ?

 

ಡಿಪ್ರೆಶನ್... ಮಾನಸಿಕ ಕೀಳರಿಮೆ

ಇಂದಿನ ಒತ್ತಡದ ಬದುಕಿನಲ್ಲಿ ಯಾವ ಕಾರ್ಯವನ್ನು ಸರಿಯಾಗಿ ನಿರ್ವಹಿಸಲಾಗದೆ ಬವಣೆ ಪಡುತ್ತಿರುವ ಜೀವಿ ಮನುಷ್ಯ. ಕಾಲದೊಂದಿಗೆ ತೀವ್ರ ಪೈಪೋಟಿಯ ಜೀವನ ಸಾಗಿಸುವ ಮನುಷ್ಯ ತನ್ನ ಕರ್ತವ್ಯದಲ್ಲಿ ಎಡವುತ್ತಿದ್ದಾನೆ.
ಅತ್ತ ವೃತ್ತಿ ಬದುಕಿನಲ್ಲಿ ಹಿಡಿದ ಕಾರ್ಯವು ಅಪೂರ್ಣ ಇತ್ತ ವೈಯಕ್ತಿಕ ಜೀವನದಲ್ಲೂ ನೆಮ್ಮದಿ ಇಲ್ಲ ಎಂಬಂತಾಗಿದೆ.
ಇದಕ್ಕೆಲ್ಲ ಮುಖ್ಯ ಕಾರಣ ದೈಹಿಕ ಹಾಗೂ ಮಾನಸಿಕ ಅನಾರೋಗ್ಯ. ದಿನೇ ದಿನೇ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರಕರಣಗಳು ಇದಕ್ಕೆ ಪುಷ್ಟಿ ನೀಡುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 40 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.

ಹೆಚ್ಚಿನ ಆತ್ಮಹತ್ಯಾ ಪ್ರಕರಣಗಳಿಗೆ ಕಾರಣವಾಗಿರುವುದು ಮಾನಸಿಕ ಅಸ್ವಸ್ಥತೆ,ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲಾಗದ ಮಾನಸಿಕ ತೊಳಲಾಟ.

ಸಾಮಾನ್ಯವಾಗಿ ಒಬ್ಬ ಮನುಷ್ಯನಲ್ಲಿ ಎರಡು ರೀತಿಯ ಭಾವನಾತ್ಮಕ ಮನಸ್ಸುಗಳು ಇರುತ್ತದೆ. ಇವುಗಳನ್ನು ಕ್ರಮವಾಗಿ ಸೂಕ್ಷ್ಮ ಹಾಗೂ ಸದೃಢ ಮನಸ್ಸು ಎನ್ನಬಹುದು.
ಈ ಸೂಕ್ಷ್ಮ ಮನಸ್ಸು ಹೊರ ಮನಸ್ಸಾಗಿದ್ದು ಒಳಮನಸ್ಸಿನ ಜೊತೆ ನಿರಂತರ ಸಂಪರ್ಕದಲ್ಲಿರುತ್ತದೆ.

ಸೂಕ್ಷ್ಮ ಹಾಗೂ ಸದೃಢ ಮನಸ್ಸುಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸವಾಲು ನಮ್ಮ ಮುಂದಿದೆ.
ಅನುಭವಗಳಿಂದ ಮನಸ್ಸು ಮಾಗುತ್ತದೆ,  ಆದರೂ ಯೋಗ ಹಾಗೂ ಧ್ಯಾನಗಳಿಂದ ನಮ್ಮ ಮನಸ್ಸಿಗೆ ಬಲ ನೀಡಬಹುದು.

ಸಮಸ್ಯೆಗಳು ನೀಡುವ ನೋವು ಕಷ್ಟಗಳು ತಾತ್ಕಾಲಿಕವಾದುದು ಎಂಬ ಸತ್ಯವನ್ನು ಎಂದೂ ಮರೆಯಬಾರದು.
ಆರಂಭದಲ್ಲಿ ಸಮಸ್ಯೆಗಳು ಚಿಕ್ಕದಾಗಿರುತ್ತವೆ ಇವುಗಳನ್ನೇ ಬೆಟ್ಟದಂತೆ ಭ್ರಮಿಸುವುದು ನಮ್ಮ ಮನಸ್ಸು.
ಉದಾಹರಣೆಗೆ ನಮ್ಮ ಚಿಕ್ಕಂದಿನ ಘಟನೆಗಳನ್ನು ಮೆಲುಕು ಹಾಕೋಣ.

ಸ್ಕೂಲ್ ನಲ್ಲಿರುವಾಗ ಅದಾಗಲೇ ತಂದುಕೊಟ್ಟ ಹೊಸ ಪೆನ್ನು ಪುಸ್ತಕಗಳನ್ನು ಹಿಡಿದು ಸಂಭ್ರಮಿಸಿದ ನಮಗೆ ಅದೇ ಸಂಜೆ ತಮ್ಮ ವಸ್ತುಗಳನ್ನು ಕಳೆದುಕೊಂಡಾಗ  ಎಷ್ಟೊಂದು ಭಯವಾಗಿತ್ತು, ಮನೆಗೆ ಹೇಗೆ ಹೋಗಲಿ? ಮನೆಗೆ ಹೋಗಲೋ..ಬೇಡವೋ..  ಕಾರಣ ಏನು ಹೇಳಲಿ? ಹೀಗೆ ಆ ಎಳೆ ಮನಸ್ಸು ಎಷ್ಟೊಂದು ತಳಮಳಗೊಂಡಿತ್ತು.

ಅದೆಲ್ಲ ಸವಾಲುಗಳನ್ನು ಎದುರಿಸಿ ಬಂದ ನಮಗೆ ಆ ಚಿಕ್ಕಂದಿನ ವಿಷಯ ಇಂದು ಬಾಲಿಶವಾಗಿ ನಗು ತರಿಸಿದಂತು ನಿಜ..

ಹೀಗೆ ಒಂದು ಕಾಲದಲ್ಲಿ ಎದುರಿಸಿದ ಸವಾಲುಗಳು ಇಂದು ಏನೂ ಅಲ್ಲ ಎನ್ನುವ ಮಟ್ಟಿಗೆ ನಿರ್ಧಾರ ಮಾಡಿದೆವೆಂದರೆ ನಮ್ಮ ಮನಸ್ಸು ಅಷ್ಟೊಂದು ಪ್ರಭುದ್ದವಾಗಿದೆ ಎಂದರ್ಥ.

ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳಿರುತ್ತವೆ ಅದನ್ನು ಅರಿವಿಗನುಗುಣವಾಗಿ ಕಂಡುಕೊಳ್ಳಬೇಕಾದ್ದು ನಮ್ಮ ಜವಬ್ದಾರಿ.

ಈ ಸೂಕ್ಷ್ಮ ಹಾಗೂ ಸದೃಢ ಮನಸ್ಸುಗಳು ಎಲ್ಲರಲ್ಲೂ ಒಂದೇ ತೆರನಾಗಿ ಇರಲು ಸಾಧ್ಯವಿಲ್ಲ.
ಸೂಕ್ಷ್ಮ ಮನಸ್ಸು ಸಡನ್ ಶಾಕ್ ಗೆ  ಬೇಗ ಒಳಗಾಗುತ್ತದೆ.

ನಾವು ಕೇಳುವ ನೋಡುವ ಶುಭ ಹಾಗೂ ಅಶುಭ ಸನ್ನಿವೇಶಗಳು ಈ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ ಆ ವಿಷಯಗಳನ್ನು ಎಷ್ಟು ಹೊತ್ತು ನಮ್ಮ ಮನಸ್ಸಿನಲ್ಲಿ ಇಟ್ಟಿರುತ್ತೇವೆ ಎನ್ನುವುದು ಸದೃಢ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.

ಸೂಕ್ಷ್ಮ ಮನಸ್ಸಿನ ಪರಿಮಿತಿಯಿಂದ ಕೋಪ ಉದ್ವೇಗ ಹಾಗೂ ಹೃದಯಾಘಾತಗಳು ಸಂಭವಿಸಬಹುದು.
ಆನಂದ,ನಗು,ಕಣ್ಣಿರು ಹಾಗೂ ರೋಮಾಂಚನ ಇವೆಲ್ಲ ಸೂಕ್ಷ್ಮ ಮನಸ್ಸಿನ ಸಂವೇದನೆಗಳು.
ಅಲ್ಪ ಸಮಯದಲ್ಲಿಯೇ ಘಟಿಸುವ ಘಟನೆಗಳಾದುದರಿಂದ ಇವುಗಳನ್ನು ತಡೆಯುವುದು ಸ್ವಲ್ಪ ಕಷ್ಟ..
ಸೂಕ್ಷ್ಮ ಮನಸ್ಸಿನ ಗುಣಗಳು ವಂಶಪಾರಂಪರಿಕವಾಗಿ ಬಂದಿರಲೂಬಹುದು ಆದರೆ ಸದೃಢ ಮನಸ್ಸಿನ ಕಲ್ಪನೆಯನ್ನು ನಾವೇ ರೂಪಿಸಿಕೊಳ್ಳಬೇಕು.

ಮೊದಲೇ ಹೇಳಿದಂತೆ ಸದೃಢ ಮನಸ್ಸೆಂದರೆ ಸೂಕ್ಷ್ಮ ಸಂವೇದನೆಯ ಒಳಹರಿವು.ಇಲ್ಲಿ ಪ್ರಸ್ತತ ವಿಷಯವನ್ನು ಎಷ್ಟು ಹೊತ್ತು ಬಂಧಿಸಿಟ್ಟು,ಅದರಿಂದ  ಹೊರಬರುತ್ತೇವೆ ಎನ್ನುವುದು ಮುಖ್ಯ. ಸಮಸ್ಯೆಗಳಿಂದ ಹೊರಬರಲು ತೆಗೆದುಕೊಳ್ಳುವ  ಕಾಲ ಕನಿಷ್ಠವಾದಷ್ಟು ನಾವು ಸದೃಢರು‌.

ಸದೃಢ ಮನಸ್ಸಿನ ಗೊಂದಲದಂದ ಖಿನ್ನತೆ, ಶಾಶ್ವತವಾದ ಮರೆಯು,ಮಾನಸಿಕ ಅಸ್ವಸ್ಥತೆ ಹಾಗೂ ಆತ್ಮಹತ್ಯೆಗಳಂತ  ಪ್ರಕರಣಗಳಿಗೆ ಕಾರಣವಾಗಬಹುದು.

ನಾವು ಕೆಲವು ವ್ಯಕ್ತಿಗಳನ್ನು ಕಲ್ಲು ಮನಸ್ಸಿನವರು,ಭಾವನಗಳೆ ಇಲ್ಲದವರೆಂದು ಆಡಿಕೊಂಡಿದ್ದುಂಟು. ಇಂತಹ ವ್ಯಕ್ತಿಗಳ ಸದೃಢ ಮನಸ್ಸು ಪಕ್ವಗೊಂಡಿರುತ್ತದೆ.

ಸದೃಢ ಮನಸ್ಸನ್ನು ಗಟ್ಟಿಗೊಳಿಸುವುದು ಹೇಗೆ..?

ಇಲ್ಲಿ ಮುಖ್ಯವಾಗಿ ಬೇಕಿರುವುದು ತಾಳ್ಮೆ ಹಾಗೂ ಸಹನೆ.
ನಮ್ಮ ಮೇಲೆ ನಮಗಿರುವ ನಂಬಿಕೆ, ವಿಷಯಗಳನ್ನು ಅವಲೋಕಿಸುವ ಗುಣ ಹಾಗೂ ತಿಳುವಳಿಕೆಗಳು.

ಶಿಕ್ಷಣ ವ್ಯವಸ್ಥೆಯು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವದರೊಂದಿಗೆ  ವಿಷಯಗಳ ಅವಲೋಕನಕ್ಕೆ ದಾರಿ ಮಾಡಿಕೊಡುತ್ತದೆ.

ನಾವು ಮೊದಲು ಸಮಸ್ಯೆಗಳನ್ನು ದುರ್ಬಲಗೊಳಿಸಬೇಕು ಅಂದರೆ ಸಮಸ್ಯೆಗಳನ್ನು ದೂರದಿಂದ ಸ್ವೀಕರಿಸುವ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು.ಅವುಗಳನ್ನು ಮಿತ್ರರ ಸಂಬಂಧಿಕರ ಸಮಸ್ಯೆಗಳನ್ನಾಗಿ ಪರಿಗಣಿಸಿ ಏನೇನು ಸಲಹೆ ನೀಡಬಹುದು ಎಂದು ನಿರ್ಧರಿಸಬೇಕು.
ಹೀಗೆ ಮಾಡುವುದರಿಂದ ಮೈಂಡ್ ಬ್ಲಾಕಿಂಗ್ ಸಾಧ್ಯತೆ ಕಮ್ಮಿಯಾಗುತ್ತದೆ.

ಜೀವನದಲ್ಲಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಲು ಮನಸ್ಸನ್ನು ಹದಗೊಳಿಸಬೇಕು.ಈ ಪ್ರಕ್ರಿಯೆ ನಿರಂತರವಾದುದ್ದು ದಿನದ 10 ಅಥವಾ 15 ನಿಮಿಷ ಯೋಗ ಅಥವಾ ಧ್ಯಾನಕ್ಕೆ ಮೀಸಲಿಡುವುದು ಉತ್ತಮ.

ಕೆಲವೊಂದು ಋಣಾತ್ಮಕ ವ್ಯಸನಗಳಾದ ಮದ್ಯಪಾನ, ಡ್ರಗ್ಸ್,ತಂಬಾಕು ಸೇವನೆಗಳಿಂದ ದೂರವಿರಬೇಕು.

ಭಾವನಾತ್ಮಕ ಸಂಬಂದ ಬೆಸೆಯುವ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಉತ್ತಮ.
ಉದಾಹರಣೆಗೆ ಬರವಣಿಗೆ ,ಮನರಂಜನಾ ಕಾರ್ಯಕ್ರಗಳು, ತೋಟಗಾರಿಕೆ ಇತ್ಯಾದಿ.

ಆತ್ಮವಂಚಕರಾಗದೆ  ಆತ್ಮಸ್ಥೈರ್ಯದ ಜೊತೆಗೆ ಮನೋಸ್ಥೈರ್ಯವನ್ನು ಬೆಳೆಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡುವ.


ಜೀವನದಲ್ಲಿ ಸಂತೋಷ ಬಂದಾಗ ಹಿಗ್ಗದೇ ದುಃಖವಾದಗ ಕುಗ್ಗದೇ ಸ್ಥಿತಪ್ರಜ್ಞೆಯಿಂದಿರಲು ಏನು ಮಾಡಬೇಕು?

 

ಹೌದು ಜೀವನದಲ್ಲಿ ಸುಖ- ದುಃಖಗಳು ಶಾಶ್ವತವಲ್ಲ..
ಇಲ್ಲಿ ಎಲ್ಲವೂ ಅನಿಶ್ಚಿತ. ಹೀಗಿರುವಾಗ ನಮ್ಮ ಮನಸ್ಸನ್ನು ನಾವೇ ಅಣಿಗೊಳಿಸಬೇಕು.ಬರುವ ಸಂತೋಷವನ್ನು ಆನಂದಿಸುವುದರಲ್ಲಿ ತಪ್ಪಿಲ್ಲ..ಅದರೆ ಅದನ್ನು ಸಿಂಪಲಾಗಿ ಸ್ವೀಕರಿಸುವುದರಿಂದ ಮನಸ್ಸು ಉನ್ಮಾನದಲ್ಲಿ ಹಿಗ್ಗುವುದಿಲ್ಲ.

ಮೊದಲು ಸುಖವನ್ನು ಸಾಮಾನ್ಯವಾಗಿ ಸ್ವೀಕರಿಸಲು ಕಲಿತರೆ ಸಾಕು..ಇದೆ ಮಾರ್ಗ ಮುಂದೆ ದುಃಖವನ್ನು ಕುಗ್ಗದೇ ಸ್ಥಿತ ಪ್ರಜ್ಞೆಯಿಂದ ಸ್ವೀಕರಿಸಲು ಸಹಾಯ ಮಾಡುವುದು.

ಯಾವ ಮನದೊಡೆಯ ತನ್ನ ಮನ ಒಡೆಯಲು ಬಿಡದೆ
ಮನಸ್ಸನ್ನು ತನ್ನ ಹಿಡಿತದಲ್ಲಿ ಹಿಡಿಯ ಬಯಸುತ್ತಾನೊ
ಅಂತವನು ಹಿಗ್ಗದೆ ಕುಗ್ಗದೆ ಸ್ಥಿತಪ್ರಜ್ಞೆಯಿಂದಿರುತ್ತಾನೆ.


ಪದ ವಿನೋದಗಳು

 

ಪದವಿನೋದಗಳು ಪದಗಳೊಂದಿಗೆ ಆಡುವ ಸಾಹಿತ್ಯದ ಆಟ
ಅಕ್ಷರಶಃ ಅಕ್ಷರಗಳಿಂದ ಚಮತ್ಕಾರ ಸೃಷ್ಟಿಸುವ ಬಗೆ..
ಪದಗಳೆಡೆಯಲಡಗಿದ ಡಬಲ್ ಮೀನಿಂಗ ತ್ರಿಬಲ್ ಮೀನಿಂಗಗಳನ್ನು ಹೊರಗೆಳೆಯುವ ಪರಿ...

ಉದಾಹರಣೆಗೆ

ಬೇಡನ ಹೆಂಡತಿ ಬಸಿರಾಗಿದುದನ್ನು ಕಂಡು
ಕಾಡಹಕ್ಕಿಗಳು ಬೇಡಿ ಕೊಂಡವು
ಬೇಡ..ಬೇಡ...ಕಾಡಿಗೆ ಮತ್ತೊಬ್ಬ ಬೇಡ..

ಇಲ್ಲಿ ಕಾಡ ಹಕ್ಕಿಗಳು ಒಂದರ್ಥದಲ್ಲಿ ಬೇಡನ ಮಗನನ್ನು ಸ್ವಾಗತಿಸಿದರೆ..ಇನ್ನೊಂದರ್ಥದಲ್ಲಿ ನೋವನ್ನು ತೋಡಿಕೊಳ್ಳುತ್ತಿದೆ


ಹೊತ್ತು ಸಾಗುವ ಮುನ್ನ
ಬಂದು(ಧು) ಸೇರುವ ಮುನ್ನ
ನೀನೆ ಬಾ..ಮೊದಲೇ ಬಾ..

ಇಲ್ಲಿನ ಸಾಲುಗಳು ಎರೆಡೆರಡು ಆರ್ಥ ಕೊಡುವಂತವುಗಳು.
ಇಲ್ಲಿ ಖುಷಿ ಹಾಗೂ ದುಃಖ ಎರಡು ಒಂದೇ ಸಾಲಿನಲ್ಲಿ ಅಡಕವಾಗಿದೆ..
ಸನ್ನಿವೇಶ ೧:  ಇಬ್ಬರು ಪ್ರೇಮಿಗಳು ಇಬ್ಬರಲ್ಲೂ ಪ್ರೀತಿ ಸೆಳೆತವಿದೆ.ಅಲ್ಲಿ ಖುಷಿ ಇದೆ..ಪ್ರಿಯಕರ ಪ್ರಿಯತಮೆಗೆ ಹೇಳುತ್ತಾನೆ. "ಗೆಳತಿ  ಸಂಜೆಯಾಗುವ ಮುನ್ನ ,ನಾನು ನಿನ್ನೆಡೆಗೆ ಬರುವ ಮುನ್ನ, ನೀನೆ ಮೊದಲು ನನ್ನ ಬಳಿ ಬಾ" ಎಂದು ಕರೆಯುತ್ತಾನೆ.

ಸನ್ನಿವೇಶ ೨: ಇಲ್ಲಿ ಏಕಮುಖ ಪ್ರೀತಿ.ಪ್ರೀಯತಮೆ ಎಂದೂ ಪ್ರಿಯಕರನ ಸ್ನೇಹ ಒಪ್ಪಿಕೊಂಡಿಲ್ಲ.ಬೇಸತ್ತ ಪ್ರಿಯಕರ ವಿರಹಿಯಾಗಿ ದುಃಖದಲ್ಲಿ ಹೀಗೆ ಹೇಳುತ್ತಾನೆ." ನಾನು ನಿನ್ನ ಬಿಟ್ಟು ಬದುಕಲಾರೆನು,ನಾನು ಸತ್ತಾಗ ಹೊತ್ತು ಸಾಗುವ ಮುನ್ನ,
ನನ್ನ ಬಂಧುಗಳು ಸೇರುವ ಮುನ್ನ,ಆಗಲಾದರೂ ನನ್ನ
ನೋಡಲು ಮೊದಲು ನೀ ಬಾ"


ಅವನು ಎಲ್ಲರಿಗಿಂತ ಮುಂದಿದ್ದ..
ತುಸು ಬೇಗನೆ ಸಾವಾರಿಸಿಕೊಂಡು ಮುನ್ನೆಡೆದ....

ಇಲ್ಲಿಯು ಸಹ ಖುಷಿ ಹಾಗೂ ದುಃಖದ ವಿಚಾರಗಳಿವೆ.
ಖುಷಿಯೆಂದರೆ ಅವನು ಎಲ್ಲರಿಗಿಂತ ಮುಂದಿರುವುದು..ಸ್ವಲ್ಪ ಎಡವಿದರೂ ಬೇಗನೆ ಸರಿಪಡಿಸಿಕೊಂಡು ಮನ್ನೆಡೆದಿದ್ದು.

ದುಃಖವೆಂದರೆ ಅವನು ತನ್ನ ಎಳೆ ವಯಸ್ಸಿನಲ್ಲೇ ಸಾವನ್ನು ಆಯ್ಕೆ ಮಾಡಿಕೊಂಡಿದ್ದು..


ಅಂದು ಕಂಡಂತೆ ಎಂದು ಕಾಣುವಿ...?
ಮನದಲಿ ಅಂದುಕೊಂಡಂತೆ ಎಂದೂ ಕಾಣುವೆ
ನೀನಂದು ಕಂಡಂತೆ ಎಂದು ಕಾಣುವಿ?
ನನಗೆ ನೀ ಅಂದು ಕಂಡಂತೆ ಇಂದು ಕಾಣುವೆ..


ಇದು ಸಾಲದ ಮನೆ
ಇಲ್ಲಿ ಸಾಲವು ಸಿಗುವುದು ಬನ್ನಿ.
ಊಟಕೂ ಸಾಲದ ಮನೆ
ಪ್ರೀತಿಗೂ ಸಾಲದ ಮನೆ
ನೋಟಕೆ ಸಾಲಾದ ಮನೆ.
ನೋಟಿಗೆ ಸಾಲದ ಮನೆ
ಬನ್ನಿ ಇದು ಸಾಲು ಸಾಲಾದ ಮನೆ


ಕರಿಮಣಿ ಮಾಲಿಕ ನೀ ನಲ್ಲ


ಅವನು ನನ್ನವನಲ್ಲ..


ಪ್ರೀತಿಸಿಯೇ ಬಿಟ್ಟಳು

ಹೀಗೆ ಇನ್ನು ಕೆಲವು ಉದಾಹರಣೆಗೆ
ಹಿಂದಿನಿಂದಲೂ ಅಥವಾ ಮುಂದಿನಿಂದಲೂ ಒದಿದರೂ ಒಂದೇ ಅರ್ಥ ನೀಡುವಂತದ್ದು

ಕುಬೇರನಿಗೇನಿರಬೇಕು
ವಿಕಟಕವಿ
ಮದ್ರಾಸಿನ ಸಿದ್ರಾಮ
ಹೀಗೆ ಕನ್ನಡದಲ್ಲಿ ತುಂಬಾನೆ ಇದೆ..ನಾವು ಇಂತಹ ಸೂಕ್ಷ್ಮಗಳನ್ನು
ಗುರುತಿಸಬೇಕಷ್ಟೇ...


ಬಾಲಮಂಗಳ

 

ನಾನು ಬಾಲಮಂಗಳ,ಚಂಪಕದ ಹುಚ್ಚು ಪ್ರೇಮಿ...ಅದರೆ ಯಾವುದೇ ಪುಸ್ತಕ ಕೊಂಡು ಕೊಂಡಿರಲಿಲ್ಲ..ಶಾಲೆಯಲ್ಲಿ ಒಬ್ಬರ ಕೈಯಲ್ಲಿದ್ದಿದ್ರೆ ಸಾಕಿತ್ತು.ಎಲ್ಲರಿಗೂ ಸರ್ಕುಲೇಟ್ ಆಗುತ್ತಿತು.
ಕಥೆ ಪುಸ್ತಕಗಳನ್ನು ಶಾಲೆಯಲ್ಲಿ ಅಥವಾ ಮನೆಯಲ್ಲಿ ಓದಲು ಅವಕಾಶ ಇರಲಿಲ್ಲ. ಹಾಗಾಗಿ ಪಠ್ಯ ಪುಸ್ತಕದ ಮದ್ಯ ಇಟ್ಟು ಓದುತ್ತಿದ್ದೆ..
ಒಮ್ಮೆ ಬಾಲಮಂಗಳ ಸಿಕ್ಕಿದರೆ ಸಾಕು ಪೂರ್ತಿ ಓದಿ ಮುಗಿಸದ ಹೊರತು ನೆಮ್ಮದಿ ಇರುತ್ತಿರಲಿಲ್ಲ.

ಮುಖ್ಯವಾಗಿ ನನ್ನಲ್ಲಿ ಕಾವ್ಯ ಪ್ರಜ್ಞೆ ಮೂಡಲು ಕಾರಣ ಬಾಲಮಂಗಳ..ಚಿತ್ರ ನೋಡಿ ಬರೆಯಿರಿ ಅಂಕಣ ತುಂಬ ಪ್ರಭಾವ ಬೀರಿತ್ತು.

ಡಿಂಗ,ಶಕ್ತಿಮದ್ದು ತುಂಬಾ ಪೆವರೇಟ್. ಅವನ ಒಂದೊಂದು ಹೊಡೆತಗಳು ಇಂದಿಗೂ ನಗು ತರಿಸುತ್ತೆ..ಟಾಂ,ಟಪ್...ಪಟಾರ್....

ಬಾಲ್ಯದಲ್ಲಿ ವೈದ್ಯರು, ವೀರ ಬಾಲಕ.ಕರಿಂಗಾಡ,ತುಂಟ ರಾಹಲ್,ಚಂದ್ರು ಹೀಗೆ ಎಲ್ಲರೂ ಚಿರಪರಿಚಿತರು..


ನಮ್ಮೂರು

 

ನಮ್ಮೂರು ಬಲು ಸುಂದರ
ಅಂಟಿಕೊಂಡಿರುವುದು ಕಣ್ಮನ
ತೊಯಿಸುವ ಹಸುರಿನ ಹಂದರ
ಕಮರಿಯ ಕನರಕೆ ತೊನೆಯುವ ಕಾಡು
ಪ್ರಕೃತಿ ಚೆಲುವಿನ ಹಸುರಿನ ಗೂಡು
ಸರದಿಯ ಸಾಲಲಿ ನಿಂತ ಮೇಘದ ಹೊದಿಕೆಯ ಬೆಟ್ಟ
ಅದರ ಚೆಲುವ ನೋಡಿ ರವಿಯು ಕಂಗೆಟ್ಟ.
ಗಿಡ ಮರ ಬಳ್ಳಿ ಹಬ್ಬಿ ಸಾಂಕೇತಿಸುತಿದೆ ಇಲ್ಲಿನ ಜನ ಒಂದು
ಪುಷ್ಪ ಕಮಲವರಳಿ ಸಾರುತಿದೆ ಜನಕೆ ಜಯವೆಂದು
ನದಿಯ ಜುಳು ಜುಳು ನಾದ ಸಂಗೀತವ ಮೀರಿತ್ತು
ದುಂಬಿಗಳ ಕಲರದ ಝೇಂಕಾರ ಅದು ಏನೊ ಗಮ್ಮತ್ತು.
ಪಂಚಮದಿಂಚರದಲಿ ಕೋಗಿಲೆಯ ಸ್ವರ
ಅದ ಕೇಳಿ ಕರಗಿದೆ ಮನದ ಭಾರ..

ನನ್ನೂರು..ಕರಾವಳಿಯ ಕುಂದಾಪುರ... ತನ್ನದೆ ಸ್ವಾದಿಷ್ಟವಾದ ಭಾಷಾ ಪ್ರಪಂಚವನ್ನು ಹತ್ತಾರು ಹಳ್ಳಿಗಳಲ್ಲಿ ಪಸರಿಸಿದೆ.ಇಲ್ಲಿ ನೂರಾರು ದೇವಾಲಯಗಳಿದ್ದು.ವರ್ಷವಿಡೀ ಜಾತ್ರೆ ,ರಥೋತ್ಸವ ಜರುಗುತ್ತದೆ.

ಇಲ್ಲಿ ಅನೇಕ ವಿಶೇಷ ಸ್ಥಳಗಳನ್ನ ನೋಡಬಹುದು.
ಸಾಗರ ಸಮುದ್ರವನ್ನು ಸೇರುವ ಸಂಗಮ..ಹಾಗೆಯೇ
ಸಾಗರ ಸಮುದ್ರ ಜೊತೆ ಜೊತೆಯಲ್ಲಿದ್ದರು ಒಂದನ್ನೊಂದು ಸೇರದ ವಿಹಂಗಮ ನೋಟ...

ಸಾವಿರಾರು ಪಕ್ಷಿ ಸಂಕುಲ.. ಬಣ್ಣ ಬಣ್ಣದ ಪಾತರಗಿತ್ತಿ ಪ್ರಪಂಚ ನಮ್ಮನ್ನು ಮೂಕ ವಿಸ್ಮಯಗೊಳಿಸುತ್ತದೆ.
ಜಲಪಾತಗಳು, ಜಲಧಾರೆಗಳು,ಸಮುದ್ರದ ತೀರಗಳು.,ದೇಗುಲಗಳು ಹಾಗೂ ಕರಾವಳಿ ಖಾದ್ಯಗಳು ಪ್ರವಾಸಿಗರನ್ನು ತೃಪ್ತಿಗೊಳಿಸುದರಲ್ಲಿ ಸಂದೇಹವಿಲ್ಲ..
ಅವಕಾಶ ಮಾಡಿಕೊಂಡು ಬೇಟಿ ನೀಡಿ....


ಅದೆ ಪ್ರೀತಿ ಸ್ವಲ್ಪ ಬೇರೆ ರೀತಿ

 

ತಪ್ಪು ನನ್ನದಲ್ಲ ಗೆಳತಿ
ನಿನ್ನ ಮೇಲಿನ ಅತಿಯಾದ ಮೋಹ
ಎಲ್ಲಿ ನೀನು ಸಿಗದೇ ಹೋಗುವೆ ಅನ್ನುವ ಭಾವ

ಅದಕ್ಕೊಸ್ಕರನೆ ಕಾಡಿಸಿದೆ
ಪೀಡಿಸಿದೆ ಸತಾಯಿಸಿದೆ

ನಿನ್ನ ನೋವು ನನಗೆ ಕಾಣಿಸಲಿಲ್ಲ.
ನಿನ್ನ ಪಡೆಯಬೇಕೆಂಬ ಹಟದಲಿ
ನನ್ನತನವ ಮರೆತು ಬಿಟ್ಟಿದ್ದೆ.

ಹಟ ಮುಗಿದು ಸಿಟ್ಟು ತಣಿದು ಅರಿವಾದಗ
ನಿನ್ನ ಹೃದಯದಲಿ ನಾನು ಒರಟನಾಗಿರುವೆ.
ಅದೆಷ್ಟು ದೂರ ನಿನ್ನ ಮನಸ್ಸು ನನ್ನ ಬಿಟ್ಟು  ಹೊರಟಿರಬಹುದೇನೋ

ಮತ್ತೆ ಮಮತೆಯಲಿ ಇಲ್ಲಿಗೆ ತಂದು ನಿಲ್ಲಿಸಿದ್ದು ಅದೇ ಪ್ರೀತಿಯಲ್ಲವೇ?


ಮರೆತು ಕಾಡುತಿರು

 

ಮರೆಯುವದೆಲ್ಲ ಮರೆತು ಬಿಡು
ಮರೆತು ನೀನು ಮೆರೆದು ಬಿಡು
ಆ ಮಧುರ ಮೈತ್ರಿಯಲಿ ನನ್ನ ಕಾಡಿ ಬಿಡು||

ಸಿಗದ ನಿನ್ನ
ಮೊಗದ ತುಂಬ 
ನಗುವೆ ಎಂದು ಇರಲಿ

ತೊರೆದ ನನ್ನ
ಮರೆತೆಯೆಂಬ
ಸುಳಿವೆ ಸಿಗದೆ ಹೋಗಲಿ

ಹಳೆಯ ನೆನಪು
ಗಾಢ ಮುನಿಸು
ಮತ್ತೆ ಇಣುಕಿ ಕೆಣಕದಿರಲಿ.

ಈ ಕ್ಷಣವು ಮನವ
ಜರಿದ ಹಾಗೆ
ಕಣ ಕಣವು ನನ್ನ ಮರೆತು ಬಿಡಲಿ

ಮಾಯ ಬದುಕಿನ
ಸುಖದ ಜಗಕೆ
ಈ ಕರಾಳ ನೆರಳ ಅಂಜಿಕೆ ಬೇಡ ಸಖಿ.


ಅರಿತೆವೇನು ನಾವು ನಮ್ಮ ಅಂತರಾಳ

 

ಅರಿತೆವೇನು ನಾವು ನಮ್ಮ ಅಂತರಾಳ
ಬೆರೆತೆವೇನು ಎಲ್ಲರೊಂದಿಗೆ ಸನಿಹ ಬಹಳ.
ಕರೆದೆವೇನೆ ಸ್ನೇಹ ಬಂಧುಗಳ
ಮರೆತೆವೇನೇ ನೋವ ಬಿಂದುಗಳ

ಸಂಬಂಧ ಬೆಸೆಯಲು ಸಮಯ ಬೇಕಲ್ಲ..
ಅದ ನೀಡಲು ಸಿದ್ದರಿರಬೇಕಲ್ಲ
ಸಂಧಿಸಲು ಸಿಗಲೆ ಬೇಕಲ್ಲ
ಸಿಕ್ಕಾಗ ಒಂದು ನಗುವು ಬೇಕಲ್ಲ
ನಕ್ಕರು ಅನುಮಾನಿಸದಿರಲು
ಹಳೆಯ ನೆನಪು ಬೇಕಲ್ಲ

ಕೂಡಿ ನಲಿದ ದಿನಗಳೆಷ್ಟು
ಜೋಡಿ ಕಳೆದ ಸಮಯವೆಷ್ಟು..
ಬಾಲ್ಯವೊಂದು ಬಿಟ್ಟರೇ
ಸಿಗದು ನಮಗೆ ಉತ್ತರ

ತುಂಬ ರಭಸದ ಜೀವನ
ಬೇಸತ್ತು ಸಾಗುವ ಮೈ ಮನ
ಎಲ್ಲಿ ಕಂಡೆವು ಯೌವನ
ಅರ್ಧ ವಯಸ್ಸಿಗೆ ಮುದಿ ಮನ


ನಿನ್ನಲ್ಲಿ ನಾನಿಲ್ಲದ ಮೇಲೆ

 

ನಿನ್ನ ಮನಸಲ್ಲಿ ನಾನಿಲ್ಲದೆ ಮೇಲೆ
ಈ ಹೃದಯ ಚೂರಾಯಿತು
ಕನಸಲಿ ನಿನ್ನ ಕಾಣದೆ
ಕಣ್ಮಚ್ಚಿ ದಿನ ಮೂರಾಯಿತು
ಒಡಲಿನ ಒಡಕಿಗೆ
ಕಂಬನಿ ಇಂಗಿ
ನಡುಗಿದೆ‌ ದೇಹವು
ಭಯದಲಿ ಜೋರಾಗಿ
ಇಂದೇನೆ ಮಡಿವೆನು ಎಂಬ ಆತಂಕದಿ..
ಯಾರಲು ಹೇಳದ ಮೂಕ ಮೌನ
ದೂರದೆ ದೂರಾದೆ ನನ್ನಿಂದ ನಾ...
ಅಳಬೇಕೆ ನಾ ಏನ ಕಳೆದು ಕೊಂಡೆನೆಂದು
ಎಲ್ಲಾ ಕಳೆದು ಕೊಳ್ಳುವೆ ನಾ ಅನ್ನೊ ಭ್ರಮೆಯಲಿ..
ಮನ ಹಗುರಾಗಬೇಕಿತ್ತು..
ನಿನ್ನ ಹೆಗಲಿಗೆ ಒರಗಿ ಎಲ್ಲಾ ಹೇಳಿಕೊಂಡ ಮೇಲೆ.
ಇನ್ನು ಭಾರ ಇನ್ನು ಭಾರ
ಏರಿಳಿತ ಎದೆ ಬಡಿತ..
ಹೆಪ್ಪುಗಟ್ಟಿ ಕಪ್ಪಾದವು
ನೀ ಹೊಸಕಿದ  ಗುಲಾಬಿ ದಳ..


ಒಲವು

 

ಚಂದಿರನ ಮೊಗದಲಿ ಅಂದವೇಕೋ ಇಂದು
ಹುಣ್ಣಿಮೆಯೆ..
ನೈದಿಲೆಯ ಕಂಡ ಮೇಲಂತು ಬದಲಾಯಿತು ಚಹರೆ
ಇದು ನಿಜವೇ..

ನಿನ್ನೊಲವಿನ ಸನಿಹಕೆ ಬಂದ ಮೇಲೆ
ಮೊಗ್ಗಿನ ಮನದಲಿ ಮುದ್ದಿನ ಕನಸುಗಳು
ದೂರಾಗಿ ಹಗುರಾಯ್ತು ನಮ್ಮೆಲ್ಲಾ ಮುನಿಸುಗಳು.

ನಿನ್ನಲೂ ನನ್ನಲೂ  ಈ ಪ್ರೀತಿ ಮೂಡಲು
ಈ ಒಲವಿಗೆ ನಾವಿಬ್ಬರೆ ಶಾಮಿಲೂ..


ಇದೆಂತಹ ಸಂಬಂಧ

 

ನಿನ್ನ ನೆನಪುಗಳು ಸಾಕು ನನಗೆ
ಕನಸುಗಳು ಮೂಡಲು..ಮತ್ತೆ ಯಶಸ್ಸಿನ ಉತ್ತುಂಗ ಶಿಖರವೇರಲು ಹಾಗೆಯೇ ತಲೆಕೆದರಿ ಬಿಕಾರಿಯಾಗಲು.


ಕನ್ನಡ ನಾಡು

 

ಚೆಲುವ ಕನ್ನಡ ನಾಡು
ಹಸುರಿನ ಪಲ್ಲಕ್ಕಿಯ ಗೂಡು
ಪ್ರಕೃತಿ ಮಾತೆಯ ನೀ ನೋಡು
ಮನತುಂಬಿ ಹಾಡು
ನೀ ಕನ್ನಡ ಮಾತಾಡು

ಕರ್ನಾಟಕ ಕವಿಗಳ ನಾಡು
ಕಲಿಗಳ ಬೀಡು ಕಲೆಗಳ ಸೊಗಡು
ಮುಗ್ಧತೆ ಇವರ ಮನಸ್ಸು
ಹತ್ತಿರ ಬಂದು ನೋಡು
ಜೊತೆಗೂಡು ಒಡನಾಡು

ಬಂದವರೆಲ್ಲ ಬಂಧುಗಳು
ಅವರಲಿ ನಾವು ಒಂದುಗಳು
ಸಾಗರ ಅಲೆಯ ಉಕ್ಕುವ ರೀತಿ
ಸಹೋದರ ಮಮತೆಯು ನಮ್ಮಯ ಪ್ರೀತಿ

ಆಡು ಭಾಷೆಯಲ್ಲಿ ಪ್ರೀತಿಯನಿಟ್ಟು
ನೂರು ಭಾಷೆಗೂ ಗೌರವ ಕೊಟ್ಟು
ಐಕ್ಯತೆ ಮೆರೆದೆವು
ರಾಷ್ಟ್ರವ್ಯಾಪಿ ಸಾಮರಸ್ಯದಲಿ ಬೆರೆತೆವು.


ಓ ಪ್ರೇಮಾಂಜಲಿ

 

ಓ ಪ್ರೇಮಾಂಜಲಿ
ಯಾಕಿಷ್ಟು ಕೋಪ ನನ್ನಲಿ
ಈ ಇಬ್ಬನಿಯ ಕೂಡಿ
ಮರೆಯಾಗಿ ಕಾಡುವೆ ಮನದಲಿ..

ಮುಂಜಾವಲಿ ಮಂಜಾಗಿ ಬಂದು ಕೈಗೆ ಸಿಗದೆ
ನನ್ನ ತಣಿಸಿ
ನಿನ್ನ ಸಂಚಂತೆ ಮಿಂಚಿ ಹೋದೆ..
ಇಂಚಿಂಚು ಹುಡುಕಿದರೂ ನೀ
ಕಣ್ಣಂಚಲ್ಲೆ ಮಿನುಗಿ ಹೋದೆ.

ಈ ಮದ್ಯ ಮಧ್ಯಾಹ್ನ
ನೀ ಬರದ ಕಾರಣ 
ಆ ಸಂಜೆಗಾಗಿ ಕಾದೆ..ಮುಸ್ಸಂಜೆಯಿಂದ ಕಾದೆ.
ನೀ ಬಂದಿದ್ದೆ ಕೂಡ
ಏನೇನೊ ತಂದಿದ್ದೆ..

ಒಂದಿಷ್ಟು ಮಾತು ಬೇಕಿತ್ತು
ನಿನ್ನಲ್ಲೆ ಕಳೆದೊಗಲು.
ತುಟಿಯಂಚ ನಗುವು ಸಾಕಿತ್ತು
ನಾನಲ್ಲೆ ಮಗುವಾಗಲು.
ನಿನ್ನ ಮಡಿಲೇರಲು


ಕಾದಿರುವೇ ನಿನಗಾಗಿ

ಕಾದಿರುವೇ ನಿನಗಾಗಿ

ಕಾದು ಕಾದು ಸಾಕಾದೆ ನಿನ್ನ ಆಗಮನಕ್ಕೆ
ಮಾಸಗಳು ಅಧಿಕವೆನಿಸುತ್ತಿದೆ ನಿನ್ನ ಹಂಬಲಿಸಿ.
ದುಃಖ ಇಮ್ಮಡಿಯಾದಗ,
ನನಗೆ ನಾನೆ ಸಮಜಾಯಿಷಿ ನೀಡುತ್ತಿರುವೆ
ನಿನ್ನ ಸ್ಪರ್ಶಿಸಿ..ಇಲ್ಲಾ ನನ್ನನ್ನೆ ಸ್ಪರ್ಶಿಸಿ..

ದೇಹ ಒಂದು ಜೀವವೂ ಒಂದು
ನಿನ್ನುಸಿರೇ ನನ್ನುಸಿರು
ನನ್ನ ನಾಡಿ ಮಿಡಿತ ನೀನು..
ನಿನ್ನ ಹೃದಯ ಬಡಿತ ನಾನು

ನಿನ್ನ ನೋಡೊ ಹಂಬಲಕೆ
ನನ್ನ ಹೃದಯ ಬಡಿದಿದೆ ಎರಡು ಪಟ್ಟು..
ನಿನ್ನ ಮೃದು ತುಳಿತಕ್ಕೆ  ಭಾವಂತರಂಗದಲಿ
ಸಂತಸ ಆಲೆಯಾಗಿ ಮೂಡಿದೆ..

ಕಾಯಿಸದಿರು ಸತಾಯಿಸದಿರು
ನಿನ್ನ ನೋಡಲು ನೋವಲ್ಲು
ಖುಷಿ ಪಡುತ್ತಿರುವಳು ನಾನೊಬ್ಬಳೆ...



ಅಂದ(ಧ) ಕನಸು

 

ಸತ್ತು ಸುಕ್ಕುಗಟ್ಟಿದ
ಸೂಪ್ತ ಮನಸ್ಸಿನ
ಸುತ್ತ ಸುತ್ತಿ,
ಆಪ್ತತೆ ಬಿತ್ತಿ
ಪ್ರೀತಿ ಮಾಡಿದಳು ಸ್ವಪ್ನ ಸುಂದರಿ.

ಬಣ್ಣ ಬಣ್ಣದ ಬಯಕೆ ಬಯಸಿ
ಬಳಿ ಬಂದಾಗ
ಬೆವೆತು ಬೆದರಿ
ದೂರ ಓಡಿದಳು ಗಾಂಧಾರಿ.

ಮೊದಲೇ ಗೊತ್ತಿತ್ತು ಹೆಣ್ಣು ಚಂಚಲೇ
ನಾ ಹೇಗಾ ನಂಬಲೆ...
ಪ್ರೀತಿಸಿದವಳೆಂದು ಹತ್ತಿರ ಬಂದರೆ
ಮರುಕ್ಷಣದಲ್ಲಿ
ಅದೇನೋ ಯೋಚಿಸಿ ದೂರ ತಳ್ಳುವಳು.


ಹನಿ ಹನಿ


 1
ನಾ ಮುಳುಗಿದೆ ಸಾಹಿತ್ಯದ ಸುಳಿಯಲಿ
ನನ್ನ ಮುಳುಗಿಸಿ ಅದು ಬೆಳೆಯಲಿ ಬೆಳಗಲಿ.

2.

ಮನಸ್ಸಿನಿಂದ ಮಾಸದ ನೆನಪು ನೀನು ಮುದ್ದು
ನೆನಪಿನಿಂದ ಮರೆತು ಹೋದ ಕನಸು ನಾನು ಇಂದು.
ದುಃಖವುಕ್ಕಿ  ಕಣ್ಣ ಬಿಂದು
ಜಾರಲಾಗದೆ ಆರಿತೀಗ ನೊಂದು..

3.

ಎದೆಯಾಳದಿಂದ ಏಳುವ ನೋವಿನ ಅಲೆಗಳು
ಕಣ್ಣವೆಯಲ್ಲಿ ಉಕ್ಕಿಸುವುದು ಬರಿ ನೀರಲ್ಲಾ..
ಹೆಪ್ಪುಗಟ್ಟಿದ ಭಾವಗಳನ್ನ
ಮುಪ್ಪಾದರು ವಾಸಿಯಾಗದ ನೋವನ್ನ
ಸುಪ್ತ ಹೃದಯದ ಆರ್ದ್ರತೆಯನ್ನ.
ಒಣ ಮನಸ್ಸಿನ ಅಸಾಹಯಕ ಅಳಲನ್ನ
ಒತ್ತರಿಸಿ ಬಿಕ್ಕಳಿಸುವ ದುಃಖವನ್ನ...

4.

ಮೋಡ ತಿಳಿಯಾಗಲು 
ಮಳೆಯೇ ಹನಿಯಬೇಕಿಲ್ಲಾ
ಗಾಳಿ ಬೀಸಿದರೂ ಸಾಕು...
ನಿನ್ನ ನೆನಪಾಗಲು 
ಬಳಿಯಿರಬೇಕಿಲ್ಲಾ
ಕ್ಷಣ ಕಣ್ಮುಚ್ಚಿದರೂ ಸಾಕು...
ಗಾಢ ಪ್ರೇಮವಾಗಲು ಬಂಧನದ
ಅಪ್ಪುಗೆ ಬೇಕಿಲ್ಲ
ನಿನ್ನ ಒಪ್ಪಿಗೆಯೊಂದಿದ್ದರೆ ಸಾಕು...

5.
ಸಿಗದ ತಾರೆಯ ಹಿಡಿದು ಬಂಧಿಸಿದರೆ..
ಆಕಾಶದಲ್ಲಿ ಮಿನುಗುವವರಾರು..?

6.
ಏನ ಬರೆಯಲಿ ನಿನ್ನ ನೆನಪಲಿ
ಗೀಚಲು ಪದಗಳಿಲ್ಲಾ..
ಯೋಚನೆ ಮನದಲೆಲ್ಲಾ..

7.
ಚಂದಿರನ ಮೊಗದಲಿ ಅಂದವೇಕೋ ಇಂದು
ಹುಣ್ಣಿಮೆಯೆ..?
 ನೈದಿಲೆಯ ಕಂಡ ಮೇಲಂತು ಬದಲಾಯಿತು ಚಹರೆ
ಇದು ನಿಜವೇ..?

8.
ನೀವು ಮೊದಲು ಮಾಡಿದ ಚಿಂತನೆ ಸರಿಯಾಗಿರುತ್ತೆ..
ಮತ್ತೆ ಬದಲಾಯಿಸಬೇಡಿ..
ತೀರ ಬದಲಾಯಿಸಲೇ ಬೇಕಾದ ಸಂಧರ್ಭ ಬಂದರೆ ಮತ್ತೆ ಮೊದಲಿನಿಂದಲೇ  ಚಿಂತಿಸಿ..

9.
ಮೊಗ್ಗು ಅರಳದೇ ತಾಯೆದೆಗೆ ಮರಳಿದೆ..
ಹಿಗ್ಗೆ ಇಲ್ಲದೇ ಹೂವು ಕುಗ್ಗಿ ಬಾಡಿದೆ..
ನರಳಲು ನೋವೆ ಇಲ್ಲದೆ ಸಾವು ಸಾಗಿದೆ..
ತೆರಳಲು ದಾರಿ ಇಲ್ಲದೆ ಎದೆ ನೂಕು ನುಗ್ಗಲಾಗಿದೆ.
ಒಪ್ಪದೆ ಬೆಪ್ಪನಾಗಿ ಅಣುಕು ನಗುವು ಮೂಡಾಯ್ತು....

10.
ತ್ಯಾಗವೆನ್ನುವ ಅಕ್ಷರದಲ್ಲಿ (ಅಕ್ಕರದಲಿ)
ಪ್ರೀತಿಯೊಂದು ಬಿಂದುವಷ್ಟೇ..
ಅನಂತ ಬಿಂದುವಿನ ಸಾಗರವೇ ಈ ತ್ಯಾಗ..

11.
ಪ್ರೀತಿ,ಸ್ನೇಹ ಯಾವತ್ತು ಯಾರಗೂ ಉಸಿರುಗಟ್ಟಿಸುವಂತೆ ಇರಬಾರದು..ಒಂದು ವೇಳೆ ಹಾಗನಿಸಿದರೆ ಅದು ತನ್ನ ಗೌರವವನ್ನ ಕಳೆದು ಕೊಳ್ಳುತ್ತಾ ಸಾಗುತ್ತದೆ.
ಕೆಲವರು ತುಂಬಾ ಗ್ರೇಟ್ ..ಯಾಕಂದ್ರೆ ಅವರು ಯಾರನ್ನು ಅಷ್ಟಾಗಿ ಹಚ್ಚಿ ಕೊಂಡಿರಲ್ಲ..ಕಾರಣ ಇಷ್ಟೇ
ಹೆಚ್ಚು ಹಚ್ಚಿಕೊಂಡ ವ್ಯಕ್ತಿಗಳು ಬೇಗ ದೂರಾಗ್ತರೆ ಅನ್ನೊ ಸತ್ಯ ಅವರಿಗೆ ಮೊದಲೇ ಗೊತ್ತಿರುತ್ತೆ..

12.
ನಿನ್ನ ಮನಸಲ್ಲಿ ನಾನಿಲ್ಲದೆ ಮೇಲೆ 
ಈ ಹೃದಯ ಚೂರಾಯಿತು
ಕನಸಲಿ ನಿನ್ನ ಕಾಣದೆ
ಕಣ್ಮಚ್ಚಿ ದಿನ ಮೂರಾಯಿತು
ಒಡಲಿನ ಒಡಕಿಗೆ 
ಕಂಬನಿ ಇಂಗಿ 
ನಡುಗಿದೆ‌ ದೇಹವು 
ಭಯದಲಿ ಜೋರಾಗಿ
ಇಂದೇನೆ ಮಡಿವೆನು ಎಂಬ ಆತಂಕದಿ..
ಯಾರಲು ಹೇಳದ ಮೂಕ ಮೌನ
ದೂರದೆ ದೂರಾದೆ ನನ್ನಿಂದ ನಾ...

13.
ದಾರಿ ಹೋಕ ನಾನು
ಈ ಪಯಣದಲಿ ಸಿಗುವೆಯಾ ನೀನು..
ಸಂಜೆ ತನಕ ಏನು...
ಕೊನೆಯ ತನಕ ನಗುವೆ ನಾನು....

14.
ನಿನಗಾಗಿ ಹುಟ್ಟಲಿಲ್ಲ ಕವಿತೆ
ನಿನ್ನ ನೆನಪಲಿ ಹಳೆ ಸಾಲುಗಳ ಮರೆತೆ
ಪದಗಳು ಮರೆಯಾದವು ನನ್ನೊಳಗೆ ಅವಿತೆ..

15.
ಬಣ್ಣಗಳು ಬೆರೆತು
ಸೌಂದರ್ಯವು ಕಲೆತು
ಚಂದಿರನ ಮೊಗದಲಿ ಮಂದಹಾಸ ಹೊರತು
ನೊಂದ ರಹಸ್ಯ ಇರಕೂಡದು..🌛🌕🌜

16.
ಸ್ಪೆಷಲ್ ಡೇ ಅಂದ್ರೆ...
ನಿನ್ನೊಲವಿನ ಸನಿಹಕೆ ಬಂದ ದಿನ
ನನ್ನೊಳಗೆ ನಿನ್ನ ಸೆಳೆದ ದಿನ
ನನ್ನ ಆತುರಕೆ ತುಸು ಬೇಸರಿಸಿ
ಕಾತುರದಿ ಕಾದ ದಿನ
ನಮ್ಮ ಹರುಷದ ಸಮ್ಮಿಲನ

17.
ಸಂಚಾರಿ ನಾನು ನಿನ್ನ ಹೃದಯಕೆ
ಸಂಚಲ್ಲೆ ಸೆಳೆದೆ ನೀ ತುಂಬಾ ಸನಿಹಕೆ
ಇಂಚಿಂಚು  ಪ್ರೀತಿನಾ ಹಂಚಿ ಬಾಳೋಣ ...
ಕಳೆದೋಗೋ ಸಮಯ ಮಿಂಚಿ ಮರೆಯಾಗೋ ಮುನ್ನ...

18.
ಹೇಳಲಾಗದ ಮಾತಿನಂತೆ
ಅರಿಯಲಾಗದ ನೋವಿನಂತೆ
ನಾನು ನೀನು ಮತ್ತೆ ಮೌನಿಯಂತೆ

ಕರೆಯಲಾರದ ಕೂಗು ನನ್ನದು
ಮರೆಯಲಾರದ ನೆನಪು ನಿನ್ನದು
ಬೆರೆಯಲಾಗದ ಸ್ನೇಹ ನಮ್ಮದು

19.
ಮಸಣದ ಹೂವೇ
ಪ್ರತಿಸಲ ನೋವೇ
ನಿನ್ನಲ್ಲೂ ಒಂದು   ಭಾವನೆ ಇದೆಯಾ

ನವೀನ ಹೃದಯದ
ವಾತ್ಸಲ್ಯ ನೋಟದ
ಹೊಂಬೆಳಕಿನ ಸನಿಹ  ಸುಳಿದೆಯಾ

20.
ನಿನ್ನ ಒಲವಿನ ಓಲೆ 
ಓದಿದ ಮೇಲೆ
ತರ ತರ ಭಾವ
ಬಯಸಿದೆ ಜೀವ

ಅರಿಯದೆ ಮೂಡಿದೆ ಪ್ರೀತಿ
ನಿಜಕೂ ಮರೆತೆನು 
ನಿನ್ನ ಅರಿತು ಬೆರೆತ ರೀತಿ

21.
ಹೆಚ್ಚಿನ ಸಮಯದಲ್ಲಿ ಹೀಗಾಗುತ್ತೆ...ಇಲ್ಲ ಹೀಗೆ ನಮಗನಿಸಬಹುದು.

ನಾವು ಸರಿಯಿದ್ದಾಗ ಸುತ್ತಲಿನ ಪರಿಸ್ಥಿತಿ ಸರಿಯಿರಲ್ಲ..
ಪರಿಸ್ಥಿತಿ ಸರಿಯಾದಗ ನಾವೇ ಸರಿಯಿರಲ್ಲ.

22.
ಬೆರಳು ಬೆರೆತು
ಕೊರಳ ಹಿಡಿದು..

ಅದರ ದೊರೆತು
ಅರಿವೆ ಮರೆತು

ಪರವಶ
ನಾ ನಿನ್ನ ವಶ...

23.
ಚಿತ್ತ ಗಾಮಿನಿ..
ಕಣ್ತೆರದು ಕಣ್ಬಿಡುವ ಮುನ್ನ ಕಣ್ಗಾವಲಲಿ ಮಾಯಾವಾಗುವ ಹರಿಣಿ.
ಇವಳಿಗಾಗಿ ಕಾದಿದೆ ಮನ ಚಂಪಕ ಮಾಲೆ ಹಿಡಿದು..

24.
ಹುಚ್ಚು ಹೃದಯ ಚುಚ್ಚಿ ಕೊಳ್ಳುತ್ತಿದೆ ನಿನ್ನ ಹಚ್ಚಿಕೊಂಡು, ತುಂಬ ಮೆಚ್ಚಿಕೊಂಡು..

25.
ನಿನ್ನ ಜೊತೆ ಆಡದ ಮಾತಿಗೆ 
ಕಾದಿದೆ ಈ ಮನ
ಮಾತಲ್ಲಿ ಹೇಳದಿದ್ದರೂ 
ಮೌನದಲ್ಲೆ ಎಲ್ಲಾ ಅರಿವೆಯಾ ಚಿನ್ನಾ...

26.
ನಿನ್ನ ಕವನಗಳಿಗೂ
ನನ್ನ ಭಾವನೆಗಳಿಗೂ
ಹೊಂದಾಣಿಕೆಯಾಗುತ್ತಿದೆ..
ನನ್ನೆದೆ ಹಾಳೆಯಲಿ ಅಚ್ಚೊತ್ತಿಡುವೆ
ಮತ್ತಷ್ಟು ಕಳುಹಿಸು..

27.
ಹೃದಯವೇ ಅರಿಯದ ಮೌನವೊಂದಿದೆ..
ಹೇಗೆ ಹೇಳಲಿ 
ಹೀಗೆ ಬಂದು ಹಾಗೆ ಹೋದ ಅತಿಥಿಯೆಂದು.

 ಕಾಡದಿದ್ದರೂ
 ಮಾತಾಡದಿದ್ದರೂ
ಬೇಡವೆಂದರೂ 
ನೆನಪು ಮೂಡದೆ.?
ಆ ನೋವು ಹೃದಯವ ಹಿಂಡದೆ..?

28.
ಕೊನೆಯ ಸಾಲು ಬರೆಯುತಿರುವೆ ನಾನಿಂದು ನಿನ್ನ ನೆನಪಲಿ..
ಮತ್ತೆ ನೆನಪು ಮೂಡಿದರೆ ಮೊದಲಿನಿಂದ ಬರೆಯುವೆ..

29.
ನನ್ನೊಳಗೆ ನಾನು ನಕ್ಕೆ 
ನಿನ್ನ ನೆನಪಿನಾಳಕ್ಕೆ 
ಮುಗ್ಧ ಮನಸ್ಸು ಜಾರಿ
ಅದು ಎಲ್ಲ ಎಲ್ಲೇ ಮೀರಿ
ಬೇಡ ಬೇಡವೆಂದು 
ಬಯಸಿದೆ  ನಿನ್ನ ಇಂದು..

30.
ಆತುರದ ಬಯಕೆಗಳಿಗಿಂತ 
ಕಾತರದ ಕಾಯುವಿಕೆ ಹಿತವಾಗಿರುತ್ತೆ

31.
ಸಮಾಜದಲ್ಲಿ ಸಮಾನತೆ ಯಾರಿಗೂ ಇಷ್ಟವಿದ್ದಂತಿಲ್ಲ..
ಅಸಮಾನ್ಯರೆಂದೆನಿಸಿಕೊಳ್ಳಲು ಅಸಮಾನತೆ ಸೃಷ್ಟಿಸಿದಂತಿದೆ..

32.
ಹೊಸತರಲ್ಲಿ ಅತಿ ಹೆಚ್ಚು ಸ್ನೇಹ ಪ್ರೀತಿ....
ಈಗ ಯೋಚಿಸುವಾಗ

33.
ನನಗನಿಸಿದ ಪ್ರಕಾರ ಬರವಣಿಗೆಯ ಹೊರತು ಬೇರಾರು ನಮ್ಮ ನೋವನ್ನ ಅರ್ಧಕ್ಕೆ ಇಳಿಸಲಾರರು.. ಖುಷಿಯನ್ನ ದ್ವಿಗುಣಗೊಳಿಸಲಾರರು.

ಒಂದು ವೇಳೆ ಪವಾಡ ನೆಡೆದರೆ they are  best Friends...👊

34.
ಪ್ರೀತಿ ಎಂದರೇನು?...ಒಂದು ಕ್ಷಣ ಕಣ್ಮುಚ್ಚಿ ಎದೆಯ ಮೇಲೆ ಕೈಯಿಟ್ಟು ಬಡಿತ ಆಲಿಸಿದ ಮೇಲೂ ಅರಿವಾಗದಿದ್ದರೆ
ಯಾರನ್ನೇಕೆ ಕೇಳಲಿ.

35.
ಈ ಸಂಬಂಧಗಳೇ ಹೀಗೆ ದೂರಿದ್ದರೆ ಹತ್ತಿರವಾಗುವ ಕಾತುರ.. ಯೋಗ್ಯತೆ ಮೀರಿ ಸ್ನೇಹ ಬಯಸುತ್ತದೆ‌.
ನಿರೀಕ್ಷೆಯಂತೆ ಹತ್ತಿರವಾಗುತ್ತಿದ್ದೇವೆ ಎಂದಾಗ ಇನ್ನಷ್ಟು ಒಲವಾಗಿರಬೇಕಿತ್ತು.ಇಲ್ಲಾ ನಲಿವಾದರೂ ಇರಬೇಕಿತ್ತು.‌
ಅದರೆ ಮನಕೆ  ಬೀಸಿದೆ ಬಿರುಗಾಳಿ
ಹೊಸ ಸುದ್ದಿಯ ಕೇಳಿ
ಹತ್ತಿರವಾಗಬೇಡಿ ಯಾರು
ವಿಸ್ತಾರವಾಗಿರುವ ಪ್ರಪಂಚದಲ್ಲಿ
ಅದೃಷ್ಯನಾಗಿರುವಾಸೆ..ಎನ್ನಲು ಕಾರಣ ಏನಿರಬಹುದು..?

36.
ಅದರಗಳು ನಾಚುತ್ತಿದೆ
ನಿನ್ನ ಮಧುರ ಭಾವನೆಯ ಅರಿತು
ಮೌನದಲಿ ಸೋಕೀಗ
ತನುವಿಗದೇ.. ಸಾಕೀಗಾ

37.
ಮನದಿ ನೂರಾರು ನಿನಾದದ ತರಂಗ
ಮಾತು ತುಂಬಿ ಮೌನ ತುಳುಕಿದ ಅಂತರಂಗ
ಮುಗ್ದತೆಯ ಲೂಟಿ ಮಾಡಿ 
ಕನಸುಗಳ ಪೈಪೋಟಿ ನಡೆದಿದೆ..

38.
ಹೂವಿಗೆ ಹೂವ ನೀಡಿ ಪ್ರೀತಿ ಮಾಡಿದೆ 🌹
ಬಾಡದೆ ಹೀಗೆ ಇರಲಿ ಎಂದು  ದಿನವೂ ಬೇಡಿದೆ 🙏

39.
ಹಾಯ್ಕ

ಅಪ್ಪನೆಂದರೇ
ಕಪ್ಪುಕುಳಿಯಿಲ್ಲದ
ಚಂದಿರನವ

ಅಪ್ಪನೆಂದರೆ
ಮುದ್ದು ಮಾಡದೆ ತಪ್ಪ
ತಿದ್ದಿದವನು

40.
ಅವನ ಸ್ಪರ್ಶಕ್ಕೆ ಮುಳ್ಳುಗಳೇ
ನಾಚಿದನ್ನು ನೋಡಿ 
ನಾನು ಸೋತಿದ್ದು.

41.
ಎಲ್ಲಾ ಹೇಳಿದ ಮೇಲೆ ನೀನೆಲ್ಲ ಅರಿತಮೇಲೆ
ಮಾತೆಲ್ಲಾ ಮೌನವಾಗಿದೆ.
ಒಂದೆರಡು ಮಾತನ್ನು ನನ್ನಲ್ಲೆ ಉಳಿಸಿಕೊಂಡಿದ್ದರೆ..
ನಿನಗೂ ಕೇಳುವ ಕುತೂಹಲವಿರುತ್ತಿತ್ತೇನೋ
ನನಗೂ ಹೇಳುವ ಹಂಬಲವಿರುತ್ತಿತ್ತೇನೋ
ಈ ಮೌನ ಸಾಕಾಗಿದೆ 
ನನ್ನ ಮೂಗನನ್ನಾಗಿ ಮಾಡಿದೆ..
ಹತಾಶೆಯಲ್ಲು ಮುಗಳ್ನಗೆ ಬೀರುವೆ 
ಮೌನ ಸೀಳಲು
ತೆರೆಯ ಸರಿಸಿ ನೀನು ಸ್ಪಂದಿಸುವೆಯಾ?

42.
ಹುದುಗಿರುವ ಭಾವಗಳ ಮತ್ತೆ ಕೆದುಕದಿರು ಮನವೇ
ತದುಕಿ ಎತ್ತಿದ ಅವಶೇಷಗಳ ಪಳೆಯುಳಿಕೆಗೆ
ಮರುಜನ್ಮ  ನೀಡದಿರು.
ಬಣ್ಣ ಬಯಲಿನಲ್ಲಿ ದಕ್ಕದೇನು 
ದಿಕ್ಕರಿಸಿ ದುಡುಕದಿರು ಸುಮ್ಮನೆ

43.
ನನ್ನಲ್ಲಿ ಮೊಳೆತ ಪ್ರೀತಿಯ ಭಾವನೆಗಳು ಆಳವಾಗಿ ಬಲಿತಿಲ್ಲ..ಕಾರಣವಿಷ್ಟೆ ಅವು ನಿನ್ನೊಂದಿಗೆ ಬೆರೆತಿಲ್ಲ..

44.
ಕೆಲವೊಂದು ಘಟನೆಯಲ್ಲಿನ ಭಾವನೆಗಳು ಭಾರವಾದ ಅನುಭವಗಳನ್ನು ನೀಡುತ್ತೆ.
ನಾವು ಎಲ್ಲವನ್ನೂ ಮರೆಯಬಹುದು..ಅದರೆ ಒಮ್ಮೊಮ್ಮೆ ಕೆಲ ಘಟನೆಗಳು ನಾನಿನ್ನು ನಿನ್ನ ಮರೆತಿಲ್ಲ ಎಂದು ನಕ್ಕು ಬಿಡುತ್ತೆ..
ಆ ನಗು ಒಂದು ಘಳಿಗೆಯಾದರೂ ಹೃದಯವನ್ನು ಭಾರಗೊಳಿಸುವುದು...😜

45.
ಅವಳೂ ರಾಧೆಯಂತೆ
ಮನದಲಿ ನೊಂದಳಂತೆ
ತನುವಲಿ ಬೆಂದಳಂತೆ....ಕೃಷ್ಣನ ನೆನೆದು..

ಪ್ರೀತಿಯ ಕರೆಯು ಕೇಳಲೆ ಇಲ್ಲ
ಅವನೂ‌ ದೇವರು ಅಲ್ಲ
ಕೊನೆಗೂ ದೂರಲೆ ಇಲ್ಲ....ತನ್ನನೆ ಹಳೆದು..

46.
ಮೌನಿ ನೀನಾಗ ಬೇಡ
ಮೌನದಲೂ ಮಾತಾಡುವೆ ನಾನೀಗ.
ಧ್ಯಾನಿ ನೀನಾಗ ಬೇಡ
ನಿನ್ನ ಧ್ಯಾನದಲ್ಲಿ ನಾನಿರುವಾಗ.

47.
ಇಂದು ಬಸ್ ಬಂದಿದೆ..
ಹಾಗಾಗಿ ಬಸ್ ಬಂದಿಲ್ಲ..
ಸೋ ಬಾಸ್ ಸಹ ಬಂದಿಲ್ಲ..
😂😂😂


48.
ಬೇರೊಬ್ಬರ ಟೈಮ್ ಪಾಸ್ ಗಾಗಿ ನೀವು ಬಳಕೆಯಾಗತ್ತಿದ್ದೀರಿ ಎಂದರೆ...ಅವರು ನಿಮ್ಮನ್ನು ಕಡಗಣಿಸುತ್ತಿದ್ದಾರೆಯೆಂದಲ್ಲ..
ಆ ಮೂರ್ಖರು ಅವರಿಗರಿವಿಲ್ಲದೆ ಅವರ ಜೀವನದ ಅತಿ ಮೌಲ್ಯ ನೀವೆಂದು ಭಾವಿಸಿರುವುದು.

49.
ಈ ಬ್ರಹ್ಮಾಂಡದಲ್ಲಿ ಅಗಣಿತ ತಾರೆಗಳಿದ್ದರೂ ನಿನ್ನನ್ನೇ ಹುಡುಕಲು ಕಾರಣವಿದೆ..

50.
ಪ್ರತಿ ದಿನದಂತೆ ಇಂದು ಕೂಡ 
ತಾರೆಗಳ ಮಧ್ಯ ಚಂದ್ರ ಹೊಳೆಯುತಿರೆ
ನೋಡುವ ಕಂಗಳಿಗೇನೋ ಹೊಸ ಬೆರಗು..

ಅದೆ ಬಾನು ಅದೇ ನಕ್ಷತ್ರ...

51.
ನಲಿವಿಲ್ಲದ ಮೇಲೆ 
ಒಲವಿಲ್ಲದ ಬಳ್ಳಿ
ಬಲವಿಲ್ಲದ ಮರವ ಬಿಡಿಸಿ ಕೊಂಡಿತೆ....?

52.
ಹೋಳಿಗೆ

ನಾನು ತೆಗೆದಿಟ್ಟೆ ಹೋಳಿಗೆ
ಅವಳು ತೆಗೆದಿಟ್ಟಳು ಹೋಳಿಗೆ..
ನಾನು ಇಟ್ಟಿದ್ದು ಬಣ್ಣ .. ಲೇ
ಅವಳು ಇಟ್ಟಿದ್ದು ಬಣಾಲೆ..

53.
ಮುಂಜಾನೆ ಅವಳಿಟ್ಟ ರಂಗೋಲಿಯಲ್ಲಿ
ಎರಡು ಹಿಡಿ ಬಣ್ಣವ ಕದ್ದಿಟ್ಟಿದ್ದೆ
ಹೋಳಿಯಾಡಲು..
ಸಂಜೆ ಕಳೆದರೂ ಅವಳ ಸುಳಿವಿಲ್ಲ...

54.
ಅದ್ಭುತ ಪ್ರೀತಿಯ ಶಕ್ತಿ

ನಮ್ಮನ್ನು ಇಷ್ಟಪಡುವವರನ್ನು ಕಡೆಗಣಿಸಿ..
ನಮ್ಮನ್ನು ಕಡೆಗಣಿಸಿದವರನ್ನು ಇಷ್ಟಪಡುವುದು..😂😂😂

55.
ಗಂಧ ಮೊಗ್ಗಿನಲ್ಲೇ ಇದ್ದರೂ ಪರಿಮಳ ಪಸರಿಸುವುದು ಅರಳಿದಾಗ..

56.
ಸಾಗಿದ ದೂರ ಕಾಲು ದಾರಿ
ಕಂಗಲಾಗಿಸುವ ಕವಲು ದಾರಿ
ಅಂದು ಕೈ ಬೀಸಿ ಕರೆದಾಗ ಮಾಯಾ ನಗರಿ
ಹೆದರಿ ಹೆದ್ದಾರಿ ಹುಡುಕಿ ಕುಳಿತಿದ್ದೆ ಬಸ್ಸನ್ನೇರಿ.
ತಲುಪಾಯ್ತು ಅರ್ಧ ದಾರಿ
ಇಂದು ಇಳಿಯುವ ಮನಸ್ಸಿಲ್ಲ..
ಪಯಣದಲಿ  ಸುಖವಿಲ್ಲ..

57.
ಕರವೊಡ್ಡಿ ಕೊರಗಿ ಕೊರಗಿ ಕರೆದ ಕರೆಗೆ ಕರಗಲಾರದೆ ನಿನ್ನ ಕರುಳು.
ಕುರುಹು ತೋರಲು ತಡವೇಕೆ
ದೊರೆಗೆ ಧರೆಯ ದಾರಿ ದೂರವೇ?

58.
ಅಭಿಮಾನದ ಹುಚ್ಚು....ಎಷ್ಟಿತ್ತೆಂದರೆ 
ಬದುಕಿರುವಾಗಲೆ ಪೋಟೋಗೆ
ಹಾರ ಹಾಕಿ ಕುಂಕುಮವಿಟ್ಟರು.

59.
ವಿಚಾರ ಒಳ್ಳೆಯದಾಗಿದ್ದರೆ ಶತ್ರುಗಳಿಗೂ ಶಹಬ್ಬಾಷ್ ಎನ್ನು.
ಆದರೆ ಅಳವಡಿಸಿಕೊಳ್ಳವ ಮುನ್ನ ವಿಮರ್ಶೆ ಮಾಡುವುದನ್ನು ಮರೆಯ ಬೇಡ.

60.
ಜಾತ್ರೆ

ಎಲ್ಲ ಅರಿತ ದೇವರು
ಹೊರಟಾಯಿತು
ತೇರ ಏರಿ ಮೆರವಣಿಗೆಗೆ.
ಎಂದಿನಂತೆ ಇಂದು ಸಹ 
ಕೊನೆಗುಳಿದಿರುವುದು
ನಾನು ನನ್ನ ನೆನಪು

61.
ತಪ್ಪಾಯಿತೇ...ನಿನ್ನ ನಗುವೇ 
ಕರೆಯೋಲೆ  ಎಂದು ಭಾವಿಸಿದ್ದು.
ನಿನ್ನೆದೆಯ ಸಾಮ್ರಾಜ್ಯಕ್ಕೆ ದಕ್ಕಲಿಲ್ಲ ಆಮಂತ್ರಣ,
ಗೆಳೆಯ..ನಿನ್ನ ನೋಡಲು ನೆಪ ಹುಡುಕುತಿರುವೆ ..
ಈಗಲಾದರು ನೀಡು ಆಮಂತ್ರಣ.
ಸಂಧಿಸುವೆ ಮಂಟಪದಲ್ಲಿ...

62.
ಪರೀಕ್ಷೆಗಳು ಎದುರಾದಗ ನಿರೀಕ್ಷೆಗಳು ಹುಸಿಯಾಗುವುದು ಸಹಜ.
ಮಾನಸಿಕ ಸದೃಢತೆ, ಧೈರ್ಯ, ಛಲ ಮನದಲ್ಲಿದ್ದರೆ
ಬದುಕಿನ ಸಮೀಕ್ಷೆ ಸರಿದೂಗುವುದು ಅಷ್ಟೇ ನಿಜ


63.
ಕರವೊಡ್ಡಿ ಕೊರಗಿ ಕೊರಗಿ ಕರೆದ ಕರೆಗೆ ಕರಗಲಾರದೆ ನಿನ್ನ ಕರುಳು.
ಕುರುಹು ತೋರಲು ತಡವೇಕೆ
ದೊರೆಗೆ ಧರೆಯ ದಾರಿ ದೂರವೇ?

64.
ಮನಸ್ಸಿಗೆ  ಹೊಸ ನೆನಪಿನ ಗಂಟು ಅಂಟಿಕೊಳ್ಳುವ ಮುನ್ನ 
ಹಳೆ ನೆನಪಿನ ಬುತ್ತಿಯು ಹುತ್ತದಂತೆ ಆವರಿಸಿರುತ್ತದೆ..
ಮರೆವು ಯಾವತ್ತೂ ಹಳೆಯದನ್ನು ಮರೆಸಿಲ್ಲ..ಅಥವಾ ಮಾಸುವಂತೆ ಮಾಡಿಲ್ಲ..
ಸತ್ಯವೇನೆಂದರೆ ಸದೃಢ ಮನಸ್ಸಿನ ನಾವೇ ಹಳೆಯದನ್ನು ನೆನೆಸಿಕೊಳ್ಳದೆ ಬದುಕುತ್ತಿರುವುದು.


65.
ಕ್ಷಮಿಸು ಗೆಳತಿ
ಬೇಸರವ ಕಾಡೈತಿ

ನಿನ್ನ ಮನವ ಕಲಕಿ..ನೋವು ಕೊಟ್ಟೆ..
ಮಾತಿನ ಮಲ್ಲೆಯ  ಮೌನಕ್ಕೆ ನೂಕಿ ಬಿಟ್ಟೆ.


66.
ಪ್ರೀತಿ ಕದ್ದ ಒಲವೆ...
ಮುದ್ದು ಮುದ್ದು ಚೆಲುವೆ...
ನೀ ನಕ್ಕಾಗ ನನ್ನ ಮನದಲ್ಲಿ ನಲಿವೇ...

67.
ವಧುವಾಗದೇನೆ ಕನಸ ವಧೆ ಮಾಡಿದೆ..
ಸ್ವಲ್ಪ ಸಲಿಗೆ ನೀಡಿ ಮೃದುವಾಗು...ಮಧುವಾಗು..
ನಿನ್ನ ನಾನು ಆವರಿಸಲು.....

68.
ಎಲ್ಲ ಅರಿತ ಮೇಲೆ...ನೀ ನನ್ನ ತೊರೆದ ಮೇಲೆ..
ಮರೆತು ಹೋದೆ ನಾ.
ನಿನ್ನ ಮೌನದ ಜೊತೆ ಬೆರೆತು ಹೋದೆ ನಾ.


69.
ಅಂತರವೆನ್ನುವುದು ಆಂತರ್ಯ ತೆರದುಕೊಳ್ಳುವವರೆಗೆ ಮಾತ್ರ ದೂರ..
ಸ್ನೇಹ ಬೆಸೆದ ನಂತರ ಎಲ್ಲವೂ ಹತ್ತಿರ.


70.
ಬೆಳಿಗ್ಗೆ   ಘಮ್ಮೆಂದು ಅರಳಿದ ಕುಸುಮವು
ಸಂಜೆವೇಳೆಗೆ ತನ್ನೆಲ್ಲ ಕಂಪನು ಬೀರಿ 
ಬದುಕು ಸಾರ್ಥಕಗೊಳಿಸಿಕೊಂಡಿತು.
ಕೊನೆಗೆ ಆಸ್ವಾದಿಸುವ ಕಂಗಳಿಗೆ ನೋವು ನೀಡಿತು.

71.
ಖಾಲಿ ಖಾಲಿ ಜೀವನಕ್ಕೇಕೆ ಬೇಲಿ
ದೋಚಲು ಬಾಚಲು ಇಲ್ಲೇನಿದೆ....

72.
ನಿನ್ನ ಪ್ರೀತಿಯ ಸಾಗರದಲ್ಲಿ ಇಳಿದ ಮೇಲೆ.
ನಿದ್ದೆಯೇ ಬಾರದು ಮುದ್ದು ಕಣ್ಗಳಿಗೆ
ಕನಸೇ ಬೀಳದು ಮನಸ್ಸಿನ ಭಾವಗಳಿಗೆ..

73.
ಮನ ಮೆರೆಸಿದ ಚೆಲುವು
ಮೈ ಮರೆಸಿದ ಒಲವು 
ತಿರುಗ ಬೇಕೆಂದ ಪ್ರತಿ ಸಲವು
ಬಯಕೆ ಹಲವು.

74.
ಹಸಿದ ಹಸುವು ಹಸಿವಾಯ್ತೆಂದು ಹಸಿರು ಹುಲ್ಲನಲ್ಲದೆ ಹಸಿಯ ಮಾಂಸ ಮುಟ್ಟದು..
ಹಾಗೆ  ಹಸಿವ ಹೆತ್ತವರು ಬಿದುರು ಹೆಡಿಗೆಯಲ್ಲಿ ಕದಿರ ಹೆಕ್ಕುವರು ಹೊರತು ಹೇಸಿಗೆಯ ಕಸುಬಿನಲ್ಲಿ ಹಳಸಿದನ್ನವ ಉಣ್ಣರು...

75.
ಹಾರೋ ಹಕ್ಕಿಗೆ  🕊 ಹಾರೋ ಹಕ್ಕಿದೆ..

76.
ಆಸೆಯ ಹಂಚಿಕೊಂಡು 
ಕಾಯುವ ಕಾತುರ ನನಗಿಲ್ಲ
ಭಾಷೆಯ ನೀಡಿದಂತೆ
ನೀ ಬಂದು ಸೇರುವೆಯಲ್ಲ
ಏಕಾಂತಕ್ಕಿಂದು 
ಕೊನೆಯಿಡು ನನ್ನ ನಲ್ಲ..

77.
ಹೆಜ್ಜೆ ಹೆಜ್ಜೆಗೂ ನಿನ್ನ ಗೆಜ್ಜೆ ಕೇಳಿದಂತೆ
ಎದುರು ನಿಲ್ಲದ ನಿನ್ನ ಲಜ್ಜೆಯ ಕಂಪನ
ಹೆಚ್ಚು ಹುಚ್ಚು ಹಿಡಿಸದಿರು ಹುಡುಗಿ
ಕೊಚ್ಚಿ ಹೋಗುತಿರುವುದು ಮನಸ್ಸು 
ನಿನ್ನ ಪ್ರೀತಿ ಪ್ರವಾಹದಲ್ಲಿ

78.
ಕಾರಣ ತಿಳಿಸದ ಕೋರಿಕೆ ಬೇಕಿಲ್ಲ.
ಮೋಡದ ಮರೆಯ ಹಾರೈಕೆಯ ಸ್ವಾಗತ ಸಾಕೀಗ
ಭಾರದ ಹೃದಯದ ಆರದ ನೋವಿಗೆ
ತಂಪೆರೆಯದ ಭಾವ ಲಹರಿ ಯಾಕೀಗ

79.
ನಿನ್ನ ಬಾಳಿಗೆ ಕಂದ ನಾನಮ್ಮ
ನಿನ್ನ ಜೋಲಿಗೆ  ಚಂದ ನಾನಮ್ಮ
ಬಾಳು ಸಾಗುವುದು ಪ್ರತಿ ಕ್ಷಣ
ಜೋಲಿ ತೂಗುವೆ ಪ್ರತಿ ದಿನ

80.
ಬಾಡಿಗೆಯಾದರೇನು...ಭೋಗದ್ದಾದರೇನು.ಮನದ ಮುಂದೆ ಮನೆ ಶಾಶ್ವತವಲ್ಲ.
ಸಂಬಂಧಗಳು ಪ್ರೇಮದಲ್ಲಿ ಬಂಧಿಸಲಾಗದಿದ್ದರೇನಂತೆ
ಸ್ನೇಹದಲ್ಲಿ ಸಂಧಿಸಲಾಗದೇ?

81.
ಚಂದ ನೀನು ಚಂದಿರ ನೀನು ಅಂದದ ನಿನ್ನ ಮೊಗಕೆ
ಒಂದು ಬಿಂದು ಇಡಲೇ ನಾನು..
ಬಾಳ ದಾರಿಯಲಿ ಬಾನ ಕುಸುಮ ನೀ
ಬಹಳ ಬಳಿ ಬಂದು ಭಾದೆ ಕೊಡಲೇ  ಏನು?

82.
ನಿನ್ನ ನಗುವಿನ ಮೊಗ ಸದಾ ನೋಡುವಾಸೆ..
ಅಲ್ಪವಾದರೂ ಪರವಾಗಿಲ್ಲ..ಸೆಲ್ಪಿ ತೆಗೆದಿಡು...
ಆ ನಗುವ ಸೆರೆಯಲ್ಲಿ ಬಂಧಿಸಿ ಬಿಡು...

83.
ನೆನಪಿನ ಕಾಯಿಲೆಗಳಿಗೆ ಮದ್ದು ಮಾಡಬೇಡಿ..
ಪದೆ ಪದೆ ಕಾಡಿ ನಿಮ್ಮ ಮುದ್ದು ಮಾಡಲು ಬಿಡಿ..

84.
ಮನಸ್ಸಿಗೆ...ಅಹಂಕಾರದ ಅಲಂಕಾರ ಮಾಡಿ...
ಕೇವಲ ಭಾವನೆಗಳಿಲ್ಲದ ಬಣ್ಣನೆಯ ಮಾತಾಡಿ
ಸಂಬಂಧಗಳ ಬೆಸೆಯಲು ಪ್ರಯತ್ನ ಪಡಬೇಡಿ...

85.
ಹೊಸ ವರುಷ ಪ್ರತಿ ನಿಮಿಷ ಹರುಷ ತರಲಿ ತರಲಿ..
ಪ್ರತಿ ವರುಷ ನೂರು ಕನಸು ನಮಗೆ ಇರಲಿ ಇರಲಿ..
ರಾಷ್ಟ್ರ ಪ್ರಗತಿಯ ಪಥದಲ್ಲಿ
ಜನ ನೆಮ್ಮದಿಯ ಗತಿಯಲ್ಲಿ 
ಸಾಗುತಿರಲಿ...

86.
ವ್ಯಕ್ತಿಗಳು ಬದಲಾಗುತ್ತಿದ್ದಾರೆ ಎಂದರೆ ಅವರ ನಿರೀಕ್ಷೆಗಳು
 ಹುಸಿಯಾಗುತ್ತಿವೆ ಎಂದರ್ಥ..

ಅವರಿಗೆ ಬೇಕಿರುವುದು ನಿಮ್ಮಿಂದ ಸಾಂತ್ವನವಷ್ಟೆ..


87.
ಹಂಬಲಿಸುವ ಹೃದಯಕ್ಕಾಗಿ ಮನದಾಳದ ಮೌನವನ್ನು ಸರಿಸಲು 

ಬೆಂಬಲಿಸುವ ಮನಸ್ಸೆ ಮರೆಯಾಗಿದೆ....


88.
ನೀ ದೂರಿದ್ದರು ನನ್ನ ಮನ ನಿನ್ನ ಬಳಿ ಸುಳಿದಾಡಿದೆ....
ನೀ ದೂರಾದರೂ ನನಗರಿವಿಲ್ಲದೆ ನಿನ್ನ ನೆಪ ಮಾಡಿದೆ..

89.
ಮೊನ್ನೆ ತೆರದ ಹೃದಯಕೆ 
ನಿನ್ನೆಯು ಮರೆತೆ ಕದ ಹಾಕಲು 
ಎಂತ ಸಮಯವರಿತೆ ನೀ ಬಂದು ಕೂರಲು..

90.
ಇಂದೇಕೋ ಹೃದಯ ಸೋತಿದೆ
ಮೌನದಲ್ಲೂ ಕೇಳದ ಸಾವಿರ ಮಾತಿದೆ
ತೀರವೆ ಇರದ ದೂರ ಬಾಳಲಿ ಬೆರೆತಿದೆ.....

91.
ಮುಸುಕಿನ ಮುಂಜಾವಲ್ಲಿ ಇಳೆಗೆ ಬಿದ್ದ ಇಬ್ಬನಿ ಮುತ್ತಾಗುವುದೆಂದು ಕೊಂಡರೆ
ಭಾಸ್ಕರ ಬಾಷ್ಪೀಕರಿಸಿದನೇ?

92.
ಮೌನ ಮುರಿಯಲಿ
ಮಾತಿನ ಮರೆಯಲಿ
ಮೈತ್ರಿಯ ಕರೆಯಲಿ  👋👋

93.
ನಿನ್ನೆ ತೋರಿದೆ ಮೊಗವ
ಇಂದು ತೋರಿದೆ ನಗುವ
ನಿನ್ನ ನಗುವಿನ ಅಲೆ ಅಲೆಯಲ್ಲೂ 
ತುಂಬಿರುವುದು ನನ್ನ ಜೀವ.🌹

94.
ಅವನು ಎಲ್ಲರಿಗಿಂತ ಮುಂದಿದ್ದ..
ತುಸು ಬೇಗನೆ ಸಾವಾರಿಸಿಕೊಂಡು ಮುನ್ನೆಡೆದ.... 😢

95.
ಆಹಾ ಬಾನಾಡಿ ನೋಡು ಅಲ್ಲಿ ಸಾವಿರ ಸಾವಿರ ನೋಟವಿದೆ
ಕಣ್ಣು ಕೊರೈಸುವ ಮಾಟವಿದೆ
ಅಂದಿಗೂ ಇಂದಿಗೂ ಲೆಕ್ಕಕ್ಕೆ ಸಿಗದ ಸಾವಿರ ಸಾವಿರ ತಾರೆ ಇದೆ..

96.
ಒಂದು ಸಣ್ಣ ಅನುಮಾನ ದೊಡ್ಡ ದುರಂತಕ್ಕೆ ಕಾರಣವಾಗುವುದು ಎಂಬ ಕಾರಣಕ್ಕಾಗಿ ಚಿಕ್ಕದೊಂದು ಸುಳ್ಳು ಹೇಳ ಹೊರಟಿರುವೆ...ಕ್ಷಮಿಸುವೆಯಾ?...

97.
ರಕತದಿ ಬರೆದೆನು ಇದ ನಾನು
ಬಿಕ್ಕುತಲೆ  ಓದಿದೆ ಭಯವೇನು?

98.
ಅಂದು ಕಂಡಂತೆ ಎಂದು ಕಾಣುವಿ...?
ಮನದಲಿ ಅಂದುಕೊಂಡಂತೆ ಎಂದೂ ಕಾಣುವೆ
ನೀನಂದು ಕಂಡಂತೆ ಎಂದು ಕಾಣುವಿ?
ನನಗೆ ನೀ ಅಂದು ಕಂಡಂತೆ ಇಂದು ಕಾಣುವೆ..😂😂😇😇🤔

99.
ಬಾನು ಬಾಗಿರುವುದು ಭಾರದಿಂದಲ್ಲ..
ಭುವಿಯ ಬಾಂಧವ್ಯ ಬೆಸೆಯಲು..

100.
ನಿನ್ನ ಕೋಪದುರಿ
ನಾ ಬೆಂದು ಹೋಗವ ಪರಿ
ಯಾಕೆ ಬೇಕು,     ನೀ ಹೇಳಿದ್ದೆ ಸರಿ.. 😀😀

101.
ಹೊತ್ತು ಸಾಗುವ ಮುನ್ನ ನೀ ಯೋಚಿಸು..
ನಿನ್ನ ಹೊತ್ತು ಸಾಗುವ ಮುನ್ನ ನೀ ಸಾಧಿಸು

102.
ಅದೃಷ್ಟ ಅರಸುವ ಸೊತ್ತಲ್ಲ...
ಅದ್ರಷ್ಟಕ್ಕೆ ದೊರೆಯುವ ಮುತ್ತು...

103.
ಅವಳ ಮರಳು ಮಾಡಿದ ಮಲ್ಲಿಗೆ
ತರುಣಿ ತುರಬನೇರತು ಮೆಲ್ಲಗೆ
ಅವಳು ಮುಡಿದುದಾದರೂ ಕಂಪು ಮಾತ್ರ ನಲ್ಲಗೆ...🌼


104.

ಹುಣ್ಣಿಮೆ ರಾತ್ರಿಯಲಿ
ಹೆಣ್ಣಿನ ಮನದಲ್ಲಿ
ಸಣ್ಣನೆ ನಗು ತರಿಸಿ
ಎಲ್ಲಾ ದೋಚಿದ್ದ
ಮನವೆಲ್ಲಾ ದೋಚಿದ್ದ

105.

ಬಣ್ಣ ಬಯಲಿನಲ್ಲಿ
ಸಣ್ಣ ಮಳೆಯಲಿ ನಿನ್ನ ನೆನಪೇ ಕಾಡುತಿರುವುದು..
ಭಾವ ಭಿತ್ತಿಯೊಳು
ತನುವ ನೆತ್ತರೊಳು ನೀನೇ ಹರಿಯುತ್ತಿರುವುದು












ಮಡದಿಯ ಮಾಂಗಲ್ಯ

 ಮಡದಿಯ (ಮಾಂಗಲ್ಯ)

ಚಿನ್ನದ ಬಳ್ಳಿಯ ನಡುವೆ
ನಾ ನಿನ್ನ ಪ್ರೀತಿಯ ಒಡವೆ..

ಅಂದದ ಚಂದದ ನಡುವೆ
ನಾ ನಿನ್ನ ತಬ್ಬಿರುವೆ..

guess the double( two) meaning
think way of wife and way of husband