ಕಣ್ಣಂಚಲಿ ಜಾರುವ ಹನಿಗಳನ್ನ ಸಾಕ್ಷಿಯಿಲ್ಲದೆ ಬತ್ತಿಸಿ ಬಿಟ್ಟವಳಲ್ಲವೇ...ಅದೆಂತಹ ಸಹನೆ ನಿನ್ನದು. ಹಾಗಂತ ಮುಖವಾಡದ ಬದುಕು ನಿನ್ನದಲ್ಲ..
ನೋವುಂಡ ಜೀವ ಕುಗ್ಗಿ ಹೋಗುವುದಂತೆ.ಅದರೆ ಅದೆಂತಹ ಜೀವನ ಸ್ಥೈರ್ಯ..
ತುಟಿಯಂಚಲಿ ಮಿನುಗುವ ಕಿರು ನಗೆಯ ಜೊತೆಗೆ
ಆಶಾಕಂಗಳ ಸ್ಪೂರ್ತಿಯ ಚಿಲಮೆ ಆ ಪ್ರತಿ ನೋಟವು.
ನೋವಿಗೂ ನಲಿವಿನ ಪಾಠ ಕಲಿಸಿದವಳು..ನೋವನು ಯಾರು ಹುಡುಕಲಾರದ ಆಳಕೆ ಹುದುಗಿಸಿಟ್ಟವಳು..
ಇದೆಲ್ಲಾ ಹೇಗೆ ಸಾಧ್ಯ..ಈ ಗೆಲುವಿಗೆ ಸ್ಪೂರ್ತಿಯಾರು.?
ನಿನ್ನ ಸಹನೆಯೇ..ಇಲ್ಲ ಆತ್ಮ ಸ್ಥೈರ್ಯವೇ..?
ಸಹನೆಗೂ ಅಷ್ಟೊಂದು ಶಕ್ತಿನಾ...
ಸೋಜಿಗವೇ ಕಾಡುವುದು..ಸರಮಾಲೆ ಪ್ರಶ್ನೆಗಳ ಜೊತೆ ಉತ್ತರವೇ ಸಿಗದೆ...
ಹೌದು..ಆ ನೋವಿನಲ್ಲೂ ನಗುವುದ ಹೇಗೆ ಕಲಿತೆ..?
No comments:
Post a Comment