ಯಾರೋ ನೋವಿನಿಂದ ನೊಂದು ನರಳುವ ಧ್ವನಿ ಹೆಣ್ಣು ಸ್ವರವಿರಬೇಕು, ಕಣ್ಣ ರೆಪ್ಪೆಗಳು ಒಂದನ್ನೊಂದು ಬಿಗಿದುಕೊಂಡಿವೆ.ಒದ್ದಾಡಿ ಮಿಸುಕಾಡಿದಾಗ ಹಣೆಯಲ್ಲಿ ನೆರಿಗೆಗಳು ಮೂಡಿದವು ಹೊರತು ಕಣ್ಣು ತೆರಯಲಾಗಲಿಲ್ಲ.ನನ್ನ ಕೈಕಾಲುಗಳು ಸ್ವಾದಿನ ಕಳೆದು ಕೊಂಡಿವೆಯೆನೋ ಅವುಗಳು ನನಗೆ ಸ್ಪಂದಿಸಲಿಲ್ಲ.
ಒಂದೆರಡು ಬಾರಿ ಉಸಿರೆಳೆದುಕೊಂಡ ನೆನಪು.ನರಳುವ ಧ್ವನಿ ಕ್ಷೀಣಿಸಿ ನಿರ್ಜನವಾದ ಮೌನ ಆವರಿಸಿತು.ಗಡಿಯಾರದ ಸೆಕೆಂಡು ಮುಳ್ಳುಗಳು ಘಂಟೆಯ ಶಬ್ದಕ್ಕಿಂತ ಹೆಚ್ಚಿಗೆ ಬಡಿದು ಕೊಳ್ಳುತ್ತಿತ್ತು.
ಅಲ್ಲೆ ಕಣ್ಣು ಬಾಡಿದಂತಾಗಿ ನಿದ್ರೆ ಸಮಿಪಿಸುತ್ತಿರಬೇಕು.ಅದೊಂದು ವಿಚಿತ್ರವಾದ ದ್ವೀಪ,ನಾನು ನನ್ನ ನಾಲ್ಕು ಜನ ಸ್ನೇಹಿತರು ಎಲ್ಲಿಗೋ ಹೊರಟಿದ್ದಿವಿ ಎಲ್ಲಿಗಂತ ತಿಳಿಯದು. ಬಹುಶಃ ನಾವು ದಾರಿ ತಪ್ಪಿ ಬಂದಿರಬಹುದು.. ಸೂರ್ಯನ ಬೆಳಕು ಬೀಳದ ಜನವಸತಿ ಇಲ್ಲದ ಪ್ರದೇಶವದು.ಒಂದು ಹಾಳು ಬಿದ್ದ ಗುಡಿಯಲ್ಲಿ ನಾವೆಲ್ಲ ಮಲಗಿದ್ದೆವೆ..ಎನೋ ಕತ್ತರಿಸುವ ಸದ್ದಿಗೆ ಎಚ್ಚರವಾಗಿ ನೋಡಿದೆ..ದಡೂತಿ ದೇಹ ರಕ್ತ ಸಿಕ್ತವಾದ ಕರುಳೊಂದು ಅವನ ಕೊರಳಲ್ಲಿ ನೇತಾಡುತ್ತಿತ್ತು.
ಅವನು ಚಾಕುವಿನಿಂದ ಇರುಳ್ಳಿ ಕತ್ತರಿಸುವಂತೆ ಎಲ್ಲರನ್ನು ಹದವಾಗಿ ಕೊಚ್ಚುತ್ತಿದ್ದ.ನನ್ನ ನೋಡಿಕೊಂಡೆ ನನಗೆ ಕಾಲುಗಳೆ ಇರಲಿಲ್ಲ..ಅದಾಗಲೆ ಕೊಚ್ಚಿ ಮುಗಿಸಿದ್ದ.ಎದೆ ಝೆಲ್ ಎಂದಿತು ಕಿಟರನೆ ಕಿರುಚಿ ಎದ್ದು ಬಿಟ್ಟೆ..ಗಡಿಯಾರ ನೋಡಿದಾಗ ಘಂಟೆ ಎರಡಾಗಿತ್ತು.
ಭಯದಿಂದ ನನ್ನ ಮಖದಲ್ಲಿ ಬೆವರಿಳಿಯಿತು.ಬೆಳಗಿಂದ ಸಾಮನುಗಳನ್ನು ತಂದು ಜೋಡಿಸಿ ಸುಸ್ತಾಗಿತ್ತು.ಆ ಸುಸ್ತಿಗಂತಲೇ ಕಾಣುತ್ತೆ ಜ್ವರದಿಂದ ಮೈ ಸುಡುತ್ತಿತ್ತು.
ರಂಜಿತ್ ಹಾಗೂ ರಾಜೇಶ್ ನನ್ನ ಪಕ್ಕದಲ್ಲಿ ಮಲಗಿದ್ದರು.
ಅವರಿಬ್ಬರನ್ನು ಎಬ್ಬಿಸುವ ಮನಸ್ಸಗದೆ ನಾನೆ ಬಾತ್ ರೂಮ್ ಗೆ ಹೋಗಿ ಟವೆಲ್ ಒದ್ದೆಮಾಡಿ ಹಣೆಗೆ ಪಟ್ಟಿಯಂತೆ ಕಟ್ಟಿಕೊಂಡು ಮತ್ತೆ ಮಲಗಿಕೊಂಡೆ. ಹೊರಗಿನ ಬೀದಿ ದೀಪ ಕಿಟಕಿಯ ಗಾಜನ್ನು ಹಾಯ್ದು ಕೋಣೆಯಲ್ಲಿ ಪ್ರತಿ ಫಲಿಸುತ್ತಿತ್ತು.
ಇನ್ನೂ ನಿದ್ದೆ ಬಂದಿಲ್ಲ ಯಾರೊ ಗುನುಗುತ್ತಿದ್ದರು..ರಂಜಿತ್..
"ಭ್ರುಕುಟಿ ಪುಟ ಕಟ ಕಟ"
"ಅಕ್ಷಿ ಸಂಪುಟ ದುರುಳ ಸಂಕಟ"
"ಮಾರ್ಜಾಲ ಮರ್ಕಟ"
ರಂಜಿತ್ ಮರದ ಕುರ್ಚಿಯ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತ್ತಿದ್ದ,ಅವನು ಎನೇನೊ ಹೇಳುತ್ತಿದ್ದ ಗಹಗಹಿಸಿ ನಗುತ್ತಿದ್ದ..
ನೋಡಲ್ಲಿ ನೋಡಲ್ಲಿ...
ಎದುರಿಗಿದ್ದ ದೃಶ್ಯ ನೋಡಿ ನನ್ನ ಜಂಘಾಬಲವೆ ಹುದುಗಿ ಹೊಯಿತು.ರೋಮಗಳು ನಿಮಿರಿ ಹೆಗಲ ಮೇಲೆ ಮಿಂಚು ಸಂಚಾರವಾದಂತಾಯಿತು.
ರಾಜೇಶ್ ನೆಲದ ಮೇಲೆ ಕಂಬದ ಹಾಗೆ ಮಲಗಿದ್ದ..ಅವನ ಮುಖ ವಿಕಾರವಾಗಿತ್ತು..ಕಣ್ಣು ಗುಡ್ಡೆ ಹೊರಚಾಚಿದಂತೆ ಮಲಗಿದ್ದ.ಅವನ ಕಾಲ ಬೆರಳು ಸಂದಿನಿಂದ ರಕ್ತ ಒಸರುತ್ತಿತ್ತು.
ಅದೊ ಅದೋ ಆ ಕಪ್ಪು ಬೆಕ್ಕು ತನ್ನ ನಾಲಿಗೆ ಹೊರಚಾಚಿ ರಕ್ತ ಹೀರುತ್ತಿತ್ತು.
ಇದು ಕನಸಲ್ಲ..ನಾನು ನೋಡುತ್ತಿದ್ದೆನೆ..ಪ್ರತಿಭಟಿಸಲಾಗತ್ತಿಲ್ಲ,ಮಾತೆ ಬಾಯಿಯಿಂದ ಹೊರಹೊಮ್ಮುತ್ತಿರಲಿಲ್ಲ. ಬಹಳ ಕಷ್ಟಪಟ್ಟು ದೀಪ ಹೊತ್ತಿಸಿದೆ..ಹೌದು ಇಲ್ಯಾರು ಇಲ್ಲ..ಪಕ್ಕ ನನಗರಿವಿದೆ ನಾನು ಕಂಡಿದ್ದು ಕನಸಲ್ಲ..
ಯಾವಗ ನಿದ್ರೆ ಆವರಿಸಿತೊ ಒಂದು ತಿಳಿಯದು.ಎಚ್ಚರವಾದಗ ವಿನಯ್ ಹಾಸ್ಪಿಟಲ್ ನ ೨೦೩ ರೂಮ್ ನಂ ನಲ್ಲಿ ಅಡ್ಮಿಟ್ ಆಗಿದ್ದೆ. ಇಂದಿಗೂ ಅರ್ಥವಾಗುತ್ತಿಲ್ಲ..ಅಲ್ಲಿ ಕೊನೆಯ ಬಾರಿ ಕಂಡಿದ್ದು ನನ್ನ ಹೊರತು ಇನ್ಯಾರು ಇರಲಿಲ್ಲ.. ನಮ್ಮ ನಾಲ್ಕು ಜನರಲ್ಲಿ ಇನ್ನೊಬ್ಬರು ಯಾರೆಂದು ನೆನಪಿಗೆ ಬರುತ್ತಿಲ್ಲ...
No comments:
Post a Comment