ಭಾವನೆಯ ಕಲರವ.
ತುಂತುರು ಸಿಂಚನ
ಮಣ್ಣಿನ ಒಡಲಿಗೆ ಘಮ್ಮನೆ ಅಮಲಿಗೆ ತುಂತುರು ಹನಿಗಳ ಮಿಲನ.
ತಣ್ಣನೆ ಗಾಳಿಯ ಸಣ್ಣನೆ ಮಳೆಗೆ ತಂಗಾಳಿಗೂ ಹೊಸದಾದ ಕಂಪನ.
ವರ್ಷದ ಧಾರೆಗೆ ಹರ್ಷವ ಮೂಡಿರಲು ರೋಮಾಂಚನ ಈ ಮೈ ಮನ.
ಇಳೆಯಲಿ ಮಳೆಯ ಮುದ್ದಿಗೆ ತಂಬೆಲ್ಲರ ಋತುಗಾನ..
ಚಾತಕ ಪಕ್ಷಿಯ ಕಾತುರಕೆ ಹೊಸ ಋತುವಿನ ಆಗಮನ..
Post a Comment
No comments:
Post a Comment