ಒಂದು ಭಾಷೆ ಹಾಗೂ ಅಲ್ಲಿನ ಸಂಸ್ಕ್ರತಿ ಎರಡೂ ವಿಭಿನ್ನವಾದುದು. ಒಂದು ಭಾಷೆ ಆ ಸಂಸ್ಕ್ರತಿಯ ಮೇಲೆ ಹೆಚ್ಚಿನ ಪ್ರಭಾವ ಬೀರದು.ಆದರೆ ಅಲ್ಲಿನ ಸಂಸ್ಕ್ರತಿ ಭಾಷೆಯಲ್ಲಿ ಬಿಂಬಿತವಾಗುವುದು.
ಸಂಸ್ಕ್ರತಿಯೆನ್ನುವುದು ನಾಗರೀಕತೆಗೆ ಸಂಬಂದಿಸಿದ್ದು.ಒಂದೇ ನಾಗರೀಕತೆಯಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ. ಕೇವಲ ಕನ್ನಡ ಸಂಸ್ಕ್ರತಿಯೆಂದು ಕರೆಯುವುದು ಸಂಕೀರ್ಣ ಪದವಾಗಬಹುದು. ಭಾರತೀಯ ಸಂಸ್ಕ್ರತಿಯಲ್ಲಿ ಕನ್ನಡದ್ದು ಪಾಲುದಾರಿಕೆಯಷ್ಟೇ.
ಸಾಹಿತ್ಯವೆನ್ನುವುದು ಸಂಸ್ಕ್ರತಿಯನ್ನು ಉತ್ತುಂಗಕ್ಕೇರಿಸುವ ಕೆಲಸ ಮಾಡುವುದರಿಂದ ಕನ್ನಡ ಸಿನಿಮಾ ಕ್ಷೇತ್ರವು ತನ್ನ ಕೊಡುಗೆಯನ್ನು ಸಹ ನೀಡಿದೆ.
ಅದರೆ ಇತ್ತಿಚಿನ ಕನ್ನಡ ಸಿನಿಮಾ ಪರದೆಯ ಮೇಲೆ ಇಣುಕಿ ನೋಡಿದರೆ ಭಾಷೆಯ ಗೌರವ ಹೆಚ್ಚಿಸುವ ಕೆಲಸ ಮಂದಗತಿಯಲ್ಲಿ ಸಾಗಿದಂತೆ ಕಾಣುತ್ತಿದೆ.
ಸಿನಿಮಾದಲ್ಲಿರುವ ಸಾಹಿತ್ಯ ಕಥೆಗೆ ಪೂರಕವಾಗಿರತ್ತದೆ.ಕಥೆ ಒಂದು ನಿರ್ದಿಷ್ಟ ಸಂದೇಶವನ್ನು ಪ್ರೇಕ್ಷಕರಿಗೆ ನೀಡುತ್ತದೆ ಇಲ್ಲವೇ ಹೊಸ ಚಿಂತನೆಯನ್ನು ಹುಟ್ಟುಹಾಕುತ್ತದೆ.
ಕನ್ನಡ ಸಿನಿಮಾ ಕಥಾಹಂದರವನ್ನು ಸೂಕ್ಷ್ಮವಾಗಿ ಅವಲೋಕಿಸೋಣ..ಕನ್ನಡ ಸಿನಿಮಾ ರಂಗ ಅನೇಕ ದಶಕಗಳಿಂದ ಬೇರೆ ಭಾಷೆ ಸಿನಿಮಾಗಳಿಗಿಂತ ಹಿಂದುಳಿದಿದೆ.ಇದು ಒಪ್ಪಲೇ ಬೇಕಾದ ಸತ್ಯ.
ಸಮಕಾಲಿನ ಬೆಳವಣಿಗೆಯಿಂದ ಇತರ ಭಾಷೆಗೆ ಸಡ್ಡು ಹೊಡೆಯಲು ಎಲ್ಲಾ ಸಿದ್ಧತೆ ಇಂದು ಮಾಡಿಕೊಂಡಿರುವ ಕನ್ನಡ ಸಿನಿ ಕ್ಷೇತ್ರ ರಿಮೇಕ್ ಗೆ ಮಾರು ಹೋಗಿದೆ. ವ್ಯಾಪರದ ದೃಷ್ಟಿಯಿಂದ ಈ ಬೆಳವಣಿಗೆ ಅಗತ್ಯವಾಗಿದೆ.ಕನ್ನಡ ಸಿನಿಮಾ ಇಂದು ಮನೊರಂಜನೆಯ ಮಾತಾಗಿದೆ.ಇಂದೇನಿದ್ದರೂ ಹೆಚ್ಚು ಪ್ರೇಕ್ಷಕರನ್ನು ಸೆಳೆದು ಬಾಕ್ಸ ಆಫೀಸ್ ಭರ್ತಿ ಮಾಡುವುದು. ಈ ಕಾರಣದಿಂದ ಸಿನಿಮಾ ನೋಡಿ ಭಾಷಾಭಿಮಾನ ಬೆಳೆಸಿಕೊಂಡವರು ಅತ್ಯಲ್ಪ, ಭಾಷಾಭಿಮಾನ ಬೆಳೆಸಲೆಂದೇ ಮಾಡಿದ ಸಿನಿಮಾ ನೋಡುವರೆ ಇಲ್ಲದಂತಾಗಿದೆ.
ಒಂದು ಬಗೆಯಲ್ಲಿ ಯೋಚಿಸಿದರೆ ಕನ್ನಡ ಸಂಸ್ಕ್ರತಿ ನಮ್ಮ ಹುಟ್ಟಿನಿಂದಲೆ ಬೆಳೆದು ಬಂದಿರುತ್ತದೆ.ಅದು ನಮ್ಮ ಭಾವನೆಗಳಿಂದಲೇ ಸದೃಡವಾಗಬೇಕೆ ಹೊರತು ಬಾಹ್ಯ ಪ್ರೇರಣೆಯಿಂದಲ್ಲ. ಕನ್ನಡ ಸಂಸ್ಕ್ರತಿಗೆ ಸಾವಿರಾರು ವರ್ಷದ ಇತಿಹಾಸವಿದೆ. ಹೋಲಿಕೆಯಲ್ಲಿ ಕನ್ನಡ ಸಿನಿರಂಗ ಇನ್ನು ಮಗುವಷ್ಟೇ..ಕನ್ನಡ ಸಿನಿಮಾಗಳಿಂದ ಕನ್ನಡ ಸಂಸ್ಕ್ರತಿ ಏಳ್ಗೆ ಕಂಡಿದ್ದಲ್ಲ ಎನ್ನುವುದು ಸಾಬೀತಾದರೂ, ಒಮ್ಮೊಮ್ಮೆ ಉತ್ಕ್ರಷ್ಟ ಸಾಹಿತ್ಯದಿಂದ,ಹಾಡುಗಳಿಂದ,ಕಥೆಗಳಿಂದ ಕನ್ನಡಿಗರ ಮೈಮನ ರೋಮಾಂಚನವಾಗುವುದಂತು ಸುಳ್ಳಲ್ಲ.
ಇದೆ ಕಾರಣಕ್ಕೆ ಕನ್ನಡ ಸಿನಿರಂಗ ಕನ್ನಡ ತಾಯಿಯ ಸೇವೆ ಸದಾ ಮಾಡುತ್ತಿರಲಿ.
No comments:
Post a Comment