ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ
ಮಾತಿಗಾಗಿ ಕರೆವೆಯಲ್ಲ ಮಾತಿನಲ್ಲಿ ಏನು ಇಲ್ಲ
ಮೌನದಲ್ಲೂ ನೆಮ್ಮದಿಯಿಲ್ಲ..
ಆದ್ರೂನು ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ
ನೋಡು ನೋಡು ಎಂತ ನೋಟ
ಮಾಯಾ ಜಿಂಕೆ ನಾಗಾಲೋಟ
ನಿನ್ನ ನೋಡಿ ಕೂಡ ಮಗ್ಗು ಬಾಡದು
ಅಂತದ್ರಲ್ಲಿ ..
ಅಂತದ್ರಲ್ಲಿ ನಾನು ಯಾಕೊ ಸಿಗ್ಗು ಸೋತೆನೋ..
ಮಾಯಾ ಮಂತ್ರ ನಂಬೋರ ಉಂಟೆ
ಆದ್ರೂನು ನಂಬಬೇಕ್ ಕಾಣೆ
ಎಲ್ಲಿ ಹೋದ್ರು ಬಂದೆ ಬರುವೆ .
ಪಕ್ಕಕ್ಕ ಬಂದು ಮಾಯವಾಗ್ವೆ...
ತಾನನಾ..ನಾ ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ
ನಿನ್ನ ಇಷ್ಟ ನನಗೂ ಇಷ್ಟ
ಅಂತ ಸ್ಪಷ್ಟವಾಗಿ ಹೇಳದಿದ್ರೂ..
ನೀ ಬೆಳೆದು ಬಿಟ್ಟೆ ಎಷ್ಟೋ ಎತ್ತರ ನನ್ನ ಮನದಲ್ಲಿ
ಆ ಕಲ್ಪನೆಯೇ ಎಷ್ಟೋ ಸುಂದರ..
ಆದ್ರೂನು ನಾ ಪ್ರೀತಿಗ್ಯಾಕೆ ಸೋತೆ ಕಾಣೆ ಹೇಳೆ ಓ ಜಾಣೆ
No comments:
Post a Comment