ಕೇಳು ನನ್ನವನೇ...ನನಗಾಗಿ ವ್ಯಥೆ ಪಡದಿರು..
ಭಾವದ ಜೀವ ನೂರು ಕಂಬನಿಯ ಹನಿಗಳ ಮಿಡಿವಾಗ...
ಸ್ನೇಹದ ಸಿಂಚನ ಹರಿಸಬಹುದೇ..?
ಮರಳು ಮಾಡದಿರು ಮರೆಯಾಗು ನೀನು
ಮರಳುವೆ ನಾನು ಹಳೆ ನೋವಿಗೆ..
ಮುರಿದಿರೋ ಮನದಲಿ ಹೊಸ ಹಾಡಿಗೆ..
ನನ್ನ ಭ್ರಮೆಲೋಕದಲಿ
ಹೇಗೆ ಸ್ಪಂದಿಸಲಿ ನಿನ್ನ ಭಾವಕೆ..
ಕಟ್ಟಿಕೊಂಡ ಬಂಧವಿನ್ನು ಬಿಟ್ಟು ಹೋಗದೆ ತಡೆದಿರುವಾಗ.
ಸ್ನೇಹಕ್ಕಿಲ್ಲಿ ಸೇತುವೆ ಕಟ್ಟದಿರು..
ಜಾರುತಿರುವ ಮನದಲಿ ಏರು ಪೇರಿನ ಭಾವ ಬೆಸೆಯದಿರು.
ಕೊಚ್ಜಿಹೋಗುವೆ ನಾ ನಿನ್ನ ಪ್ರೀತಿಯ ಪ್ರವಾಹದಲಿ...
ಕಲಕಿ ಹೋದ ಮನವ ಮತ್ತೆ ಕುಲುಕದಿರು..
ನೀ ನಿಲುಕದಿರು ನನಗೆ.. ಆಸೆಯ ಬಿತ್ತದಿರು..
ವಿರಹದಂಚಿಗೆ ನನ್ನ ದೂಡದಿರು.
ಗುಡಿಸಲೊಳಗಿನ ಮಡಿವಂತಿಕೆಗೆ..
ಹೆದರಿದ ಮರಿ ಜಿಂಕೆ ನಾನು..
ಬೇಡವೆಂದರೂ ಬೇಡನ ಸ್ನೇಹ ದೊರೆತಿರುವದೆನಗೆ..
ಬಾಳಿನ ಉರಿಯಲಿ ಮನದ ಮರೆಯಲಿ ಮರೆಯಾಗು ನೀ
ಕ್ಷಮಿಸು ಗೆಳೆಯಾ ಮುನಿಸ್ಸಿನ್ನೇಕೆ
ಶಪಿಸೆನು ನಾನು ಯಾರನ್ನು.
ಯಾರ ದೂಷಿಸಲಿ ನಿನ್ನನ್ನ ,ನನ್ನನ್ನ ಆ ದೇವನನ್ನ..
No comments:
Post a Comment