ನಡುಮನಿ ಸಿದ್ದ
ಅವ್ ಹೊತಾ ಬತ್ತಾ..ಅತ್ತಿತ್ತ ತಿರ್ಗಾಡ್ತಿದ್ದ, ನಿತ್ತಲ್ಲ ನಿತ್ಕಂತಿಲ್ಲ..
ಹೊಯ್ ಎಂತಾ ನಾನ್ ಕತಿ ಹೇಳ್ತಿದ್ನ ನೀವ್ ಹೂಂಗುಟ್ಟುಕ್ಯ..
ಇದ ದಿನ ನಿತ್ಯದ ಸ್ಟೋರಿ ಮಾರ್ರೆ.ಅದೆ ನಮ್ಮ ಸಿದ್ದಣ್ಣನ ಸ್ಟೋರಿ..
ಅವನಿಗ್ಯಾ ಹಿಂದಾ ಮುಂದಾ?
ಒಂದ್ ಜೀವ್
ಆರು ಕಾಣಿ...ಅವನ್ ಕಂಡ್ ಕಲಿಕ್.
ಎಷ್ಟ್ ಚುರ್ಕ್ ಕಾಣಿ.
ಅವನ್ ಮುಖದ್ಯಾಗ ಇಪ್ಪು ಖುಷಿ ನಿಮ್ಗೆಲ್ಲ್ ಬತ್ತತ್?
"ಬಾಡದಾ ಆರದಾ ಅವನ ಮುಖದರವಿಂದ ಚಂದ ಚಂದ.."
ಅವ್ನಿಗೆ ಈ ಹೊಸ್ರ ಬಪ್ಪುಕು ಒಂದ್ ಕಾರಣ ಇತ್ತ್.
ಓಲ್ಕಾಣಿ ಆ ಗೆದ್ದಿ ತುಂಡೆಗೆ ಸಾಲ್ ಮನಿ ಕಾಣ್ಸತ್ತಾ?
ಆಗಳಿಕೆ ಅಲ್ಲ ಮೂರ್ ಮನಿ ಇದ್ದಿತ್ ಮಾರ್ರೆ.
ಆ ನಡ್ಗಿನ ಮನೆಗೆ ಈ ಶ್ರೀಧರ ಇದ್ದದ್.
ಆಬ್ಬಿ ಸಾಯುವರ್ಷದಾಗ ಇವನಿಗೊಂದ್ ಮದಿ ಮಾಡಿದಾಳ್.. ಹೆಂಡ್ತಿ ಏನೋ ಒಂತಿಂಗಳ ಇದ್ದಿದಾಳ್.ಕಡಿಕೆ ಯಾವನ್ನೊ ಕಟ್ಕಂಡ್ ಓಡಿ ಹೋದಳ್ ಅಂಬ್ರ..ನಂಗುತ್ತಿಲ್ಲಾ..ಊರೆಗ ಮಾತಾಡತ್ ಕೆಂಡದ್ ಅಷ್ಟೆ..
ನಿಜ ಯಂತ ಗುತಿತಾ..ಅದ್ ಬೇರೆನೆ ಕತಿ,
ದಿವಳಿ ಹಬ್ಬದ ಸುರೀಗೆ ಎಂತದ ಮರೆ ಕಿಚ್ಚ ಹಿಡದ.ನೆನ್ಪಿಗೆ ಬತ್ತಿಲ್ಲಾ
.ಹಾ ಹಾ..
ಅದೆ ಅಕ್ಕ ತಂಗಿಯರ್ ಹೂವ್ ಹೆಕ್ಕುಕ್ ಹೋಯ್ದೆ..
ಅಲ್ಲೆ ಒಂದ್ ಗಳ್ಗಿ ಮಾತಾಡ್ಸಕ್ ಬಂದೆ.
ಹ್ಯಾಂಗಿದ್ಯ ಎಂತ ಮರೆಯಾ ಅನ್ಕಂಡ,ಹಂಗೆ ಒಂದ ಮಾತ್ ಹೊತ್ತ ಹಾಕ್ದೆ..ನಂಗ ಬ್ಯಾಡ್ದಿದ್..ಆರೂ ಗಳ ಗಳ ಅಂಬ ಬಾಯ್ ಕೆಂತಾ..?
"ನೀನ್ ಒಬ್ನೆ ಹ್ಯಾಂಗ್ ಇರ್ತಿ ಮರೆ..ಇದ್ದದ್ ಒಂದ್ ಹೆಂಡ್ತಿನು ಮದಿಯಾಯಿ ಒಂದ್ ತಿಂಗಳ್ಯಾಗೆ ಅಟ್ಟೂಳಿ ಕೊಟ್ಟ ಓಡ್ಸದಿ ಅಂಬ್ರಲೆ"?
ಕೆಂಬುದ ಕೆಂಡ್ಕಂಡಿದೆ ಎದೆಗೆ ಪುಕ್ ಹುಟ್ಟಿತ್ ಬೈತ್ನೊ ಗೀತ್ನೋ ಅಂದೇಳಿ
ಸುಳ್ ಹೇಳ್ರೂ ಹೂ ಅಂಬ್ರಿ...ಬದ್ದು ಹೇಳ್ರೂ ಹೂ ಅಂಬ್ರಿ
ಪಾಪ ಅವ್ ಅದೇ ಮುಗಳ್ ನಗೆಗೆ ಹೇಳ್ದ್ ಕಾಣಿ..
" ನಂಗೆ ಮದಿ ಆಪತಿಗೆ ೩೫ ಮಳಿಗಾಲ ಕಳ್ದಿತ್. ಸುಮಾನಿಗೆ ೨೧ ಅಷ್ಟೇ.. ಅವಳಿಗೆ ಕಾಲೇಜ್ ಅಲ್ ಒಬ್ಬ ಪ್ರೇಂಡ್ ಇದ್ದಿದಾ ..ಅವನ್ನೆ ಮದಿ ಆಪ್ದ ಅಂತ ಅವರಿಬ್ಬರ ಅನ್ಕಂಡಿರ..ಈ ಆಬ್ಬಿ ಗಡ್ಬಿಡಿ ಮಾಡಿ ನಂಗ ಗೆಂಟಾಕ್ರ..
ನಂಗು ಅನ್ಸತ್ ಅವರಿಬ್ಬರ ಒಟ್ಟಿಗೆ ಇದ್ರ ಖುಷೆಗೆ ಇರ್ತರ್ ಅಂತ..ಅದ್ಕೆ ಅವನ್ ಕರ್ಸಿ ಘನ ಗಳ್ಗಿ ಕಂಡ ದೇವ್ಸತಾನ್ದಗೆ ನಾನೆ ಮದಿ ಮಾಡ್ಸಿ ಕಳ್ಸಿದೆ.."
ಎಂತ್ ಜನ ಮರ್ರೆ ಸಾವ್ರ ಕೊಟ್ರು ಸಿಗುದಿಲ್ಲ.
ಇಂತ ಉದಾತ್ತ ಜನ ಸಿಕ್ಕುದ ಅಪ್ರೂಪಾ..
"ಮನದಂಗಳ ಮರೆಯಲ್ಲಿ ಮರೆ ಮಾಡಿರುವ ನೋವುಗಳ
ಮೊಗದಲ್ಲಿ ಮಂದಹಾಸ ಮಾಸದ ಮಾರುಡಿಗ"
ಈ ಶ್ರೀಧರ ಎಲ್ಲಾ ಕೆಲ್ಸುಕು ರೆಡಿ..ಗೆದ್ದಿ ಹೂಡೂಕು,ದೋಣಿ ಒತ್ತುಕೂ,ಅಂಚ್ ಕೆರ್ಸುಕೂ,,ದರ್ಲಿ ತಪ್ಪುಕೂ,ಮಕ್ಕಳ ಆಡ್ಸುಕೂ..ಕಡಿನ್ ತುದಿಗೆ ಹೆಣ ಹೊರುಕು ರೆಡಿ...
ಹಿಂಗಾಯೇ ಅವ ಸಿದ್ದ..ಅದ್ದ್...
ಅನಿಗಿದ್ದ ಟಾಲೆಂಟ್ ಒಂದೆರಡಾ..ಬತ್ತಿಲ್ಲಾ ಅಂಬ ಕೆಲ್ಸ ಇಲ್ಲ..ಆತಿಲ್ಲ ಅಂಬ ಮಾತಿಲ್ಲ.. ಅವನ್ ಮಾಡೊ ಮಿಮಿಕ್ರಿ ಡ್ಯಾನ್ಸ.ಹಾಡೊ ಸೊಂಗ್ ಒಂದ ಎರಡಾ..ನಂಗೆ ಸೀಟಿ ಹೊಡುಕೆ ಅವನೆ ಕಲ್ಸಿಕೊಟ್ಟದ.
"ಸಕಲ ಕಲಾವಿದ ಸಕಲರಲ್ಲಿ ಒಂದಾಗಿದ್ದು
ಜನರ ಮನಶಿಖರವೇರಿದ್ದ"
ದುಡದ್ ದುಡ್ಡೆಗೆ ಒಂದ್ ಪೈಸೂನು ಇಟ್ಕಂಡಗೆ ಇಲ್ಲ..ಬರಿ ಹಾಳ್ಗೇಡಿ ಕಾಂಬರ ಕಣ್ಣಿಗೆ.ಅದ್ರೆ ಅವನ ವಿಚಾರನೆ ಬೇರೆ..ತಾನೆಂತು ಶಾಲಿಗೆ ಹೊಯಿಲಾ..ಅಂದೇಳಿ..ನಾಲ್ಕೈದ್ ಮಕ್ಕಳಿಗೆ ..ಶಾಲಿಚೀಲದಿಂದ ಹಿಡಿದ ಅವರ ಅಶ್ರಮದ ಪೀಸ್ ವರೆಗೂ.. ಅವಂದೆ ಖರ್ಚ್.
ಒನೊಂದಸಲ ನಂಗನ್ಸುದ ಇದ್ದರ್ ಓಡ್ತರ್ರ...ಇಲ್ದಿದ್ದರ್ ಒದ್ದಾಡ್ತರ್..
"ಉದಾತ್ತ ಚರಿತನು ಉದರ ಕಟ್ಟಿ,ಊರಿಗೇ ಪರೋಪಕಾರಿಯಾದ"
ಒಂದಸಲ ಟೆಂಪೊದಾಗೆ ಸರ್ಕಾರದ ಒಂದ ಅನೊನ್ಸಮೆಂಟ್ ಬಂದಿತ್.
ಮನೆಗೊಂದು ಮಗು
ಊರಿಗೊಂದು ವನ
ಅವತ್ತೆ ಅವ್ ಡಿಸೈಡ್ ಮಾಡಿದ ಅಂಬ್ರ..ಮರ ಬೆಳಸರ್ ಸಾಕತಿಲ್ಲ..ಕಾಡೆ ಬೆಳಸುವ ಅಂತ..
ಹಳಿಶಾಲಿ ಕಟ್ಟಡ ಇತ್ತ ಅಲ್ಲೊಂದ ಐದ್ ಎಕ್ರಿಜಾಗ..ಖಾಲಿ ಇತ್ತ..ಜಾಗದ ಒಡಿಯರ್ ಗಿಡಿಯಾರ್ ಯಾರೂ ಇಲ್ಲ..ಅಲ್ಲಿ ಒಂದ ಕಾಡನ್ನೆ ಸೃಷ್ಟಿ ಮಾಡಿದ..ಇದನ್ನ ಮಾತ್ರ ಎಷ್ಟ ಕಷ್ಟ ಅದ್ರು ಸರಿ ಕಡುಕೆ ಬಿಡುಕಾಗ ಮಗ ಅಂದಿದ್ದ.
ನಾನಂದೆ ಯಾರಾರು ಕಡುಕೆ ಬಂದ್ರೆ ಊರರೆಲ್ಲ ಸೇರಿ ಕತ್ತಿ ಹಿಡ್ಕ ಹೊಪಾ..ನೀನೆನ್ ಟೆನ್ಸನ್ ಮಾಡ್ಬೇಡ .
ಅರ್ದೊಸಿ ಕಾಡ್ ಹೋದ್ ಈ ಕತ್ತಿ ಹಿಡದ ಊರರಿಂದಲೆ..
ಊರಿಗಂತು ವನ ಆಯ್ತ್ ...ಮನಿಗೆ ಮಗು ಯಾವಾಗ ಕೇಳ್ದೆ...ನಾನಿದಿನಲ್ಲ ಅಂತ ನಕ್ಕ...
"ಮನಸ್ಸು ಮಗುವಾದಗ ಮನುಷ್ಯ ಲಘುವಾಗುವನು"
No comments:
Post a Comment