ನಾ ನಿನ್ನ ನೋಡಲು ಪ್ರೇಮ ಸಂಜೆಯಾಗಿರೇ
ಮನದಲ್ಲಿ ಮೂಡಿದ ಮಧುವಣಗಿತ್ತಿಯೇ....
ಕನವರಿಸೋ ಕನಸುಗಳು ಕದನವಾಡಿದೆ.
ನಿನ್ನ ಸನಿಹ ಸುಳಿಯಲು ಮನಸ್ಸ ಸೆಳೆಯಲು..
ಆ ಹುಣ್ಣಿಮೆ ..ಈ ಹೆಣ್ಣಿಗೆ ಧಾರೆ ಎರೆದಳೆ
ಕಾಂತಿಯ ಸೊಬಗ
ಅಂದವಾದ ನಿನ್ನ ಮಂದಹಾಸ ಚೆನ್ನಾ
ಸೋಲುತಾ ವಾಲುತಾ ಕಬ್ಬಿಗ ನಾ
ಚೂರು ನಕ್ಷತ್ರ ಹಣೆಗೆ ಚಿತ್ತಾರ
ಜಾರಿದ ಮುಂಗುರುಳು ಓಲೆಯ ಓಗರ
ನಸುಗಂಪಿನ ಕೆನ್ನೆಲಿ ಚಂದ್ರ ಕುಳಿ ಇಟ್ಟಂತೆ..
ಮರಳು ಮಾಡುವ ನಿನ್ನ
ಓರೆನೋಟಕೆ ಮನ ವಾಲಿದೆ ತಟ್ಟಂತೆ
ಒಮ್ಮೆ ತಿರುಗಿ ನೋಡು , ಪ್ರೀತಿ ಮಾತನಾಡು
ಇನ್ನು ಸಲಿಗೆ ನೀಡೆ ಪ್ರೇಮದರಸಿ
ಮನದಿ ನಿನ್ನ ಅಪ್ಪುವಂತೆ ಒಪ್ಪಿಕೊಳ್ಳೆ..
No comments:
Post a Comment