ತಪ್ಪು ನನ್ನದಲ್ಲ ಗೆಳತಿ
ನಿನ್ನ ಮೇಲಿನ ಅತಿಯಾದ ಮೋಹ
ಎಲ್ಲಿ ನೀನು ಸಿಗದೇ ಹೋಗುವೆ ಅನ್ನುವ ಭಾವ
ಅದಕ್ಕೊಸ್ಕರನೆ ಕಾಡಿಸಿದೆ
ಪೀಡಿಸಿದೆ ಸತಾಯಿಸಿದೆ
ನಿನ್ನ ನೋವು ನನಗೆ ಕಾಣಿಸಲಿಲ್ಲ.
ನಿನ್ನ ಪಡೆಯಬೇಕೆಂಬ ಹಟದಲಿ
ನನ್ನತನವ ಮರೆತು ಬಿಟ್ಟಿದ್ದೆ.
ಹಟ ಮುಗಿದು ಸಿಟ್ಟು ತಣಿದು ಅರಿವಾದಗ
ನಿನ್ನ ಹೃದಯದಲಿ ನಾನು ಒರಟನಾಗಿರುವೆ.
ಅದೆಷ್ಟು ದೂರ ನಿನ್ನ ಮನಸ್ಸು ನನ್ನ ಬಿಟ್ಟು ಹೊರಟಿರಬಹುದೇನೋ
ಮತ್ತೆ ಮಮತೆಯಲಿ ಇಲ್ಲಿಗೆ ತಂದು ನಿಲ್ಲಿಸಿದ್ದು ಅದೇ ಪ್ರೀತಿಯಲ್ಲವೇ?
No comments:
Post a Comment