ಪದವಿನೋದಗಳು ಪದಗಳೊಂದಿಗೆ ಆಡುವ ಸಾಹಿತ್ಯದ ಆಟ
ಅಕ್ಷರಶಃ ಅಕ್ಷರಗಳಿಂದ ಚಮತ್ಕಾರ ಸೃಷ್ಟಿಸುವ ಬಗೆ..
ಪದಗಳೆಡೆಯಲಡಗಿದ ಡಬಲ್ ಮೀನಿಂಗ ತ್ರಿಬಲ್ ಮೀನಿಂಗಗಳನ್ನು ಹೊರಗೆಳೆಯುವ ಪರಿ...
ಉದಾಹರಣೆಗೆ
೧
ಬೇಡನ ಹೆಂಡತಿ ಬಸಿರಾಗಿದುದನ್ನು ಕಂಡು
ಕಾಡಹಕ್ಕಿಗಳು ಬೇಡಿ ಕೊಂಡವು
ಬೇಡ..ಬೇಡ...ಕಾಡಿಗೆ ಮತ್ತೊಬ್ಬ ಬೇಡ..
ಇಲ್ಲಿ ಕಾಡ ಹಕ್ಕಿಗಳು ಒಂದರ್ಥದಲ್ಲಿ ಬೇಡನ ಮಗನನ್ನು ಸ್ವಾಗತಿಸಿದರೆ..ಇನ್ನೊಂದರ್ಥದಲ್ಲಿ ನೋವನ್ನು ತೋಡಿಕೊಳ್ಳುತ್ತಿದೆ
೨
ಹೊತ್ತು ಸಾಗುವ ಮುನ್ನ
ಬಂದು(ಧು) ಸೇರುವ ಮುನ್ನ
ನೀನೆ ಬಾ..ಮೊದಲೇ ಬಾ..
ಇಲ್ಲಿನ ಸಾಲುಗಳು ಎರೆಡೆರಡು ಆರ್ಥ ಕೊಡುವಂತವುಗಳು.
ಇಲ್ಲಿ ಖುಷಿ ಹಾಗೂ ದುಃಖ ಎರಡು ಒಂದೇ ಸಾಲಿನಲ್ಲಿ ಅಡಕವಾಗಿದೆ..
ಸನ್ನಿವೇಶ ೧: ಇಬ್ಬರು ಪ್ರೇಮಿಗಳು ಇಬ್ಬರಲ್ಲೂ ಪ್ರೀತಿ ಸೆಳೆತವಿದೆ.ಅಲ್ಲಿ ಖುಷಿ ಇದೆ..ಪ್ರಿಯಕರ ಪ್ರಿಯತಮೆಗೆ ಹೇಳುತ್ತಾನೆ. "ಗೆಳತಿ ಸಂಜೆಯಾಗುವ ಮುನ್ನ ,ನಾನು ನಿನ್ನೆಡೆಗೆ ಬರುವ ಮುನ್ನ, ನೀನೆ ಮೊದಲು ನನ್ನ ಬಳಿ ಬಾ" ಎಂದು ಕರೆಯುತ್ತಾನೆ.
ಸನ್ನಿವೇಶ ೨: ಇಲ್ಲಿ ಏಕಮುಖ ಪ್ರೀತಿ.ಪ್ರೀಯತಮೆ ಎಂದೂ ಪ್ರಿಯಕರನ ಸ್ನೇಹ ಒಪ್ಪಿಕೊಂಡಿಲ್ಲ.ಬೇಸತ್ತ ಪ್ರಿಯಕರ ವಿರಹಿಯಾಗಿ ದುಃಖದಲ್ಲಿ ಹೀಗೆ ಹೇಳುತ್ತಾನೆ." ನಾನು ನಿನ್ನ ಬಿಟ್ಟು ಬದುಕಲಾರೆನು,ನಾನು ಸತ್ತಾಗ ಹೊತ್ತು ಸಾಗುವ ಮುನ್ನ,
ನನ್ನ ಬಂಧುಗಳು ಸೇರುವ ಮುನ್ನ,ಆಗಲಾದರೂ ನನ್ನ
ನೋಡಲು ಮೊದಲು ನೀ ಬಾ"
೩
ಅವನು ಎಲ್ಲರಿಗಿಂತ ಮುಂದಿದ್ದ..
ತುಸು ಬೇಗನೆ ಸಾವಾರಿಸಿಕೊಂಡು ಮುನ್ನೆಡೆದ....
ಇಲ್ಲಿಯು ಸಹ ಖುಷಿ ಹಾಗೂ ದುಃಖದ ವಿಚಾರಗಳಿವೆ.
ಖುಷಿಯೆಂದರೆ ಅವನು ಎಲ್ಲರಿಗಿಂತ ಮುಂದಿರುವುದು..ಸ್ವಲ್ಪ ಎಡವಿದರೂ ಬೇಗನೆ ಸರಿಪಡಿಸಿಕೊಂಡು ಮನ್ನೆಡೆದಿದ್ದು.
ದುಃಖವೆಂದರೆ ಅವನು ತನ್ನ ಎಳೆ ವಯಸ್ಸಿನಲ್ಲೇ ಸಾವನ್ನು ಆಯ್ಕೆ ಮಾಡಿಕೊಂಡಿದ್ದು..
೪
ಅಂದು ಕಂಡಂತೆ ಎಂದು ಕಾಣುವಿ...?
ಮನದಲಿ ಅಂದುಕೊಂಡಂತೆ ಎಂದೂ ಕಾಣುವೆ
ನೀನಂದು ಕಂಡಂತೆ ಎಂದು ಕಾಣುವಿ?
ನನಗೆ ನೀ ಅಂದು ಕಂಡಂತೆ ಇಂದು ಕಾಣುವೆ..
೫
ಇದು ಸಾಲದ ಮನೆ
ಇಲ್ಲಿ ಸಾಲವು ಸಿಗುವುದು ಬನ್ನಿ.
ಊಟಕೂ ಸಾಲದ ಮನೆ
ಪ್ರೀತಿಗೂ ಸಾಲದ ಮನೆ
ನೋಟಕೆ ಸಾಲಾದ ಮನೆ.
ನೋಟಿಗೆ ಸಾಲದ ಮನೆ
ಬನ್ನಿ ಇದು ಸಾಲು ಸಾಲಾದ ಮನೆ
೬
ಕರಿಮಣಿ ಮಾಲಿಕ ನೀ ನಲ್ಲ
೭
ಅವನು ನನ್ನವನಲ್ಲ..
೮
ಪ್ರೀತಿಸಿಯೇ ಬಿಟ್ಟಳು
ಹೀಗೆ ಇನ್ನು ಕೆಲವು ಉದಾಹರಣೆಗೆ
ಹಿಂದಿನಿಂದಲೂ ಅಥವಾ ಮುಂದಿನಿಂದಲೂ ಒದಿದರೂ ಒಂದೇ ಅರ್ಥ ನೀಡುವಂತದ್ದು
ಕುಬೇರನಿಗೇನಿರಬೇಕು
ವಿಕಟಕವಿ
ಮದ್ರಾಸಿನ ಸಿದ್ರಾಮ
ಹೀಗೆ ಕನ್ನಡದಲ್ಲಿ ತುಂಬಾನೆ ಇದೆ..ನಾವು ಇಂತಹ ಸೂಕ್ಷ್ಮಗಳನ್ನು
ಗುರುತಿಸಬೇಕಷ್ಟೇ...
No comments:
Post a Comment