Tuesday, 19 March 2024

ನೆರಳ ಮನೆ

ನೆರಳ ಮನೆ
ಅಲ್ಲಿಯತನಕ ಶಾಂತತೆ ಮನೆಮಾಡಿತ್ತು
ಸುತ್ತ ಸಂಜೆ ಕತ್ತೆತ್ತಿ ನೋಡಿದೆ
ಕತ್ತಲು ಯಾಕೋ ದೀರ್ಘವಾಗಿತ್ತು
ಮನಸ್ಸು ಮರ್ಕಟದಂತೆ ಅರಿವಿದ್ದರೂ
ಮತ್ತೆ ಮತ್ತೆ ಕೆದಕುವ ಭಾವ.

ಆಸೆ ಆಳೆತ್ತರ ಅನುರಾಗವಿಲ್ಲ
ಕೊಂಡಿ ಯಾವತ್ತೊ ಕಳಚಿತ್ತು
ಹೂವಿಗಾಗಿ ಯಾರ ಮುಡಿ ಕಾದಿರುವುದೊ
ಬೆಸುಗೆ ಹಾಕುವ ಕೆಲಸವಂತು ಮಾಡಲಾಗಲಿಲ್ಲ

ಇರುಳು ದೀರ್ಘವಾಗಿದೆ ಇನ್ನೂ ದೀರ್ಘ
ನಾಳೆಯ ನೆಪಕ್ಕೆ ಕತ್ತಲು ಅಂಜಿದಂತಿದೆ.
ನಾ ಕತ್ತಲೆಯನ್ನೇ ಪ್ರೀತಿಸಿದೆ
ಬೆಳಕು ಹರಿದರೆ ಕತ್ತಲಾಗುವ ಬದುಕು.

ಹುಟ್ಟಿದ್ದು ಕನಸು ಕಾಣಲು ಕಲಿತದ್ದು ಇಲ್ಲಿಯೇ
ನನಗೆ ಬೇರೆ ಜಗತ್ತು ಬೇಕಿಲ್ಲ.
ಈ ನೆರಳ ಮನೆಯಲ್ಲಿ ನಾ ಹೇಗೆ ಒಂಟಿ
ಜೊತೆಗೆ ಚಂದ್ರನಿಲ್ಲವೇ? ಚುಕ್ಕಿ ಸಾಲಿಲ್ಲವೇ?



ನಿಸ್ವಾರ್ಥ ಪ್ರೀತಿ

 ಅರ್ಥ ಬೆಸೆದ ಕಣ್ಣ ಸನ್ನೆ ಮುಂದೆ

ನಿನ್ನ ಖುಷಿಯ ಸಣ್ಣ ನಗುವ ನಾ ನೋಡಿದೆ.

ಸ್ವಾರ್ಥವಿರದ ನಿನ್ನ ಪ್ರೀತಿಯ ಹಿಂದೆ ನಾ ಕರಗಿ ನೀರಾಗಿ ಹೋದೆ...

ಮೌನಿ

 

ಎಲ್ಲ ಅರಿತ ಮೇಲೆ...ನೀ ನನ್ನ ತೊರೆದ ಮೇಲೆ..
ಮರೆತು ಹೋದೆ ನಾ.
ನಿನ್ನ ಮೌನದ ಜೊತೆ ಬೆರೆತು ಹೋದೆ ನಾ.


ಮೇಘ

ಮೇಘ


ಬಾನಂಗಳದ ಮೇರೆಯಲ್ಲಿ
ನಲಿವ ನವಿಲಂತೆ ಇದ್ದ ನೀ
ಗಾಳಿಯಾಟಕ್ಕೆ ಸಿಲುಕಿ ಚಿತ್ತಾರವಾದೆ.

ಬಿಸಿಯ ಕೋಪಕೆ ಮಣಿದು
ಕಾರ್ಮೋಡವಾದ ನೀ
ಕಂಬನಿಗೈದ ರೈತರ ಕಂಡು ನೀರಾದೆ.

ಚೈತ್ರದ ಹೂವನುಂಡು
ಸಂತಸದಿ ಬಾನೆತ್ತರಕೆ ಹಾರುವ
ದುಂಬಿಯ ಗುಂಗಿಗೆ ಹಾಡಾದೆ.

ತಂತುರು ಹನಿಗಳ ಮಿಲನದಿ
ಗಗನದಲಿ ರೋಚಕ ಸೃಷ್ಟಿಸಿ
ರಸಿಕರ ಹೃದಯಕ್ಕೆ ಕಾಮನ ಬಿಲ್ಲಾದೆ

ತಾರೆಗಳ ಲೋಕದಲಿ ತಾವರೆಯಾಗಿ
ರವಿ ಶಶಿಯರ ಕಣ್ಣಾಮುಚ್ಚಾಲೆ
ಆಟಕೆ ಅಂಕಣದ ಪರದೆಯಾದೆ..



ಭರವಸೆ

 ಮಳೆಯು ತೋಯ್ದು ಹೋಯ್ತು

ಹಳೆ ಮಾಸಲು ನೆನಪು ಕೊಚ್ಚಿ ಹೋಯ್ತು..

ಹೊಸ ಕನಸು ಕಾಣಲು ತಿಳಿಯಾದ ಬಾನಿನಲ್ಲಿ ಬೆಳದಿಂಗಳು ಕರೆದಂತಿದೆ.


ಭಾವ ಲಹರಿ

 

ಕಾರಣ ತಿಳಿಸದ ಕೋರಿಕೆ ಬೇಕಿಲ್ಲ.
ಮೋಡದ ಮರೆಯ ಹಾರೈಕೆಯ ಸ್ವಾಗತ ಸಾಕೀಗ
ಭಾರದ ಹೃದಯದ ಆರದ ನೋವಿಗೆ
ತಂಪೆರೆಯದ ಭಾವ ಲಹರಿ ಯಾಕೀಗ


ಹೃದಯದ ಧ್ವನಿ -ಎರಡು ಹನಿ

 

ಇಂದೇಕೋ ಹೃದಯ ಸೋತಿದೆ
ಮೌನದಲ್ಲೂ ಕೇಳದ ಸಾವಿರ ಮಾತಿದೆ
ತೀರವೆ ಇರದ ದೂರ ಬಾಳಲಿ ಬೆರೆತಿದೆ.....

ಮೊನ್ನೆ ತೆರದ ಹೃದಯಕೆ
ನಿನ್ನೆಯು ಮರೆತೆ ಕದ ಹಾಕಲು
ಎಂತ ಸಮಯವರಿತೆ ನೀ ಬಂದು ಕೂರಲು..

ಹೃದಯ ಪದೆ ಪದೇ ಕೇಳಿಕೊಳ್ಳುತ್ತಿತ್ತು.
ಎಂದೋ ಕನಸು ಕದ್ದ ಚೆಲುವೆ
ಇವಳೇ ಆಗಿರಲೆಂದು.


ಎಲ್ಲಿ ನಿಶ್ಚಿಂತೆ

 

ನಾಳಿನ ಬದುಕಿಗೆ
ಬಾಳಿಗೊಂದು ಅರ್ಥಕೊಡಲು
ಕನಸುಗಳು ಸಾಲು ಸಾಲು ನಿಂತಿವೆ.

ಭಾರದ ಕನಸುಗಳು
ಭಾವರಹಿತ ಮನದ ಗೋಡೆಗಳ
ಕದ ತಟ್ಟುತ್ತಿವೆ

ಗಾಳಿ ಗೋಪುರದಂತೆ
ಅಭದ್ರತೆಯ ಬದುಕು ನೆನೆದಷ್ಟು ಚಿಂತೆ
ಇನ್ನೂ ಬಿರುಗಾಳಿ ಬೀಸಿಲ್ಲ ಅನ್ನವುದೊಂದೆ ನಿಶ್ಚಿಂತೆ.

ನನ್ನವ

 

ನನ್ನವ ನನ್ನವ
ನನ್ನೆದೆ ನಾದವ
ಮೀಟಿದ ಯಾದವ

ಕನಸಲಿ ಬಂದು
ಕಾಡಿಸಿ ಹೋದವ
ಮುನಿಸಲಿ ಬಂದು
ಮನ್ನಿಸೆ ಅಂದವ

ಸ್ವಲ್ಪ ಸಲಿಗೆಯಲ್ಲೆ
ಸುಲಿಗೆಯ ಮಾಡಿದವ
ಸವಿದು ಅಂದವ
ರಮಿಸೆ ಎಂದವ


ಒಲವೇ

 

ಪ್ರೀತಿಯ ಹನಿಗಳ ಮುತ್ತಿನ ಪಾಕಕೆ
ಬಯಕೆಯ ಬೆಸುಗೆ ನಾ ಹಾಕುವೆ
ನೀ ಕರೆದೊಳು ಬಂದು ಸಂಧಿಸುವೆ
ನನ್ನ ಕರದಲಿ ನಿನ್ನ ಬಂಧಿಸುವೆ..

ಅಕ್ಕರೆ ಮಾತಿಗೆ ನೀ ಸಿಕ್ಕರೆ
ನನ್ನೊಂದಿಗೆ ತುಸು ನಕ್ಕರೆ
ನನಗದೆ ಸ್ವರ್ಗ


ಮೌನ

 ಎಲ್ಲಾ ಹೇಳಿದ ಮೇಲೆ ನೀನೆಲ್ಲ ಅರಿತಮೇಲೆ

ಮಾತೆಲ್ಲಾ ಮೌನವಾಗಿದೆ.

ಒಂದೆರಡು ಮಾತನ್ನು ನನ್ನಲ್ಲೆ ಉಳಿಸಿಕೊಂಡಿದ್ದರೆ..

ನಿನಗೂ ಕೇಳುವ ಕುತೂಹಲವಿರುತ್ತಿತ್ತೇನೋ

ನನಗೂ ಹೇಳುವ ಹಂಬಲವಿರುತ್ತಿತ್ತೇನೋ

ಈ ಮೌನ ಸಾಕಾಗಿದೆ 

ನನ್ನ ಮೂಗನನ್ನಾಗಿ ಮಾಡಿದೆ..

ಹತಾಶೆಯಲ್ಲು ಮುಗಳ್ನಗೆ ಬೀರುವೆ 

ಮೌನ ಸೀಳಲು

ತೆರೆಯ ಸರಿಸಿ ನೀನು ಸ್ಪಂದಿಸುವೆಯಾ?


ಲತೆ

 ಹೋಲಿಕೆಯಲ್ಲಿ ಹೂ ಲತೆಯಂತೆ

ಮುಡಿಯದೆ ಮಡಿದ ಹೂವಂತೆ


ಬಿರುಸಿನ ಗಾಳಿಯೋ

ದುಂಬಿಯ ದಾಳಿಯೋ

ಸ್ಪಷ್ಟತೆ ಕಾಣದು

ಚಿವುಟಿದ ಮೊಗ್ಗಿನ ಅಂಕುರದಿ


ಬಾಡಿದ ದಳಗಳು ಹಳೆ ಕತೆ ಹೇಳಿವೆ

ಮಾಸಿದ ಎಲೆಗಳು ಇಳೆ ಕಡೆ

ಬಿದ್ದಿವೆ

ಅಂದ ನಂದಿದರೂ

ಗಂಧ ಬೀರುತಿದೆ


ಬಂಧನ

 ಬಂದು ನಾ ನಿನ್ನ ಬಂಧು ನಾ

ನನ್ನ ಬಾಹು ಬಂಧನದಲ್ಲಿ ಬಂಧಿಸುವೆ ಚಿನ್ನ.

ಬಿಂದು ಬಿಂದು ಬೆವರಿಳಿದರೂ

ಬೆಚ್ಚನೆಯ ಬಂಧಿ ನೀ ಭಾಂದವ್ಯದಲಿ


ಸಂಕಲ್ಪ


ಸಂಕಲ್ಪ


ಕಟ್ಟುಕತೆ ಹೇಳುವುದಕ್ಕಿಂತ ಕಟ್ಟಿ ಕತೆ ಹೇಳು
ಜನಮನ ಮುಟ್ಟಿ ತಟ್ಟಿ ಎಬ್ಬಿಸುವುದು ನಿನ್ನ ಕರೆಗೆ
ಕಪ್ಪೆಚಿಪ್ಪು ಸುಟ್ಟು ಸುಣ್ಣ ಮಾಡಿ ಗೋಡೆಗೆ ಬಣ್ಣ
ಬಳಿದರೆ ಎಲ್ಲಿ ಕಾಣುವುದು ಕಪ್ಪುಚುಕ್ಕಿ.

ಮಾಡಿದ ತಪ್ಪು ಒಪ್ಪು ನೀ ಲೆಕ್ಕ ಹಾಕದಿರು
ಗುರಿಯೆಡೆಗೆ ಸಾಗುವಾಗ ಸವಾಲು ಸುಮಾರು
ಸಾವಿರ ಬಾರಿ ಸಾಗಿದ ದಾರಿ ಅಗ್ನಿ ಪರ್ವತದಂತೆ ಕಾಣುವುದು ದಣಿದವನಿಗೆ.
ಸಾಗರ ಸವರಿ ಸಾವಿಗೆ ಹೆದರಿ ಬಿಟ್ಟನೇ ಅನ್ವೇಷಣೆ.
ಹೊಸ ಜಗತ್ತನ್ನೇ ಹುಡುಕಲಿಲ್ಲವೇ

ಬೆಚ್ಚನೆ ಮಲಗಿರಲು ಬೆಚ್ಚಿ ಬೀಳಿಸುವುದಿಲ್ಲವೇ
ದುಷ್ಟ ಸ್ವಪ್ನ
ಅದೇನು ವಾಸ್ತವಕ್ಕೆ ಹತ್ತಿರವಾದದ್ದೆ?
ದಟ್ಟ ಅರಣ್ಯದಲ್ಲಿ ದಿಟ್ಟತನದಿ ಹೋರಾಡಿ
ದುಷ್ಟರನ್ನುರುಳಿಸಿದ ದೃಷ್ಟಾಂತ ಇಲ್ಲವೇ?
ಸಾಮ್ರಾಟ ನಾಗುವ ಬಯಕೆ ಇದ್ದರೆ ಸಾಲದು
ಸಾಮ್ರಾಜ್ಯ ಕಟ್ಟುವ ಹೊಣೆ ಅರಿಯಬೇಕು.


ಪ್ರೀತಿಯ ಹನಿ

 



ನೀ ಕಡಲು
ನಾ ಮುಗಿಲು
ದೂರ ಹೇಗೆ?
ನೋಟ ಇರಲು
ಪ್ರತಿದಿನಲೂ..

ನನ್ನದೊಂದು
ಕಣ್ಣ ಬಿಂದು
ನಿನ್ನ ಬಂದು
ಹನಿಯಾಗಿ ಸೇರದೇ?

ನಿನ್ನ ಪ್ರೀತಿ
ಬೋರ್ಗೆರೆವ ರೀತಿ
ಅಲೆಯ ಸ್ತುತಿ
ಮುಗಿಲ ಹೆಗಲ ಮುಟ್ಟದೇ?


?..…...

 ಸೋಲದ ಹಂಬಲ ನಿಂದು

ಗೆಲ್ಲುವ ಜಂಭ ನಂದು

ಸೊರಗಿದ್ದು ಮಾತ್ರ ಪ್ರೀತಿ ಇಂದು...


ದಿನವೂ ನಿನ್ನ ನೆನಪಲಿ

ಬರೆದೆ ಕವಿತೆ ಮನದಲಿ

ಹೇಗೆ ಬಿಂಬಿಸಲಿ ಪ್ರೀತಿಯ ಒಲವಲ್ಲಿ?


ಸ್ನೇಹವೆಂದೆ ನೀ

ಪ್ರೀತಿಯಲಿ ಮಿಂದೆ ನಾ

ಸೂಕ್ಷ್ಮತೆಯ ಅರಿಯದೆ ಸಂಬಂಧ ಮುರಿದೆನಾ?


ಒಲವು

 

ಅರಿಯದೆ ಮೂಡಿರುವುದು ಪ್ರೀತಿಯೇ
ಬೆರೆತು ಬಾಳುವುದು ಅದರ ರೀತಿಯೇ
ಸಿಗದ ಒಲವ ಕಡೆ ಮನಸ್ಸು ಜಾರಿದೆಯೆಂದರೆ
ವಿರಹದ ಒಲವದು ಬಲು ಸುಂದರ
ನೋವ ನೀಡುವ ಹುಚ್ಚು ಭಾವಗಳೆ
ಪ್ರೇಮ ಮೂಡುವ ಹಚ್ಚ ಕನಸುಗಳು


ಬ(ದಲಾ)ವಣೆ

 ನಾನು ನೀನು ಅರಿತು ಬೆರೆತಿರಬಹುದು

ನೀನು ನನ್ನ ಮರೆತ ಮೇಲಂತು ಯೋಚನೆಯೇ ಬದಲಾಗಿದೆ

ವಂಚಿಸಿ ಮಿಂಚಿ ಮರೆಯಾಗುವ ಸಂಚು ನಿನ್ನದೇ ಇರಬಹುದು.

ಇಲ್ಲಾ ಹೊಸದೇನೋ ಸಿಕ್ಕಿ ನಾನು ಹಳಸೆನ್ನಿಸಿರಬಹುದು


ಚಂದ್ರಿಕೆ

 

ಇಂದು ಹುಣ್ಣಿಮೆ ಶುದ್ದ ಪೌರ್ಣಿಮೆ
ಮುಚ್ಚದೆ ನಿನ್ನನೇ ನೋಡುತಿವೆ ಕಣ್ಣೆವೆ

ಈಗಷ್ಟೇ ಜನ್ಮ
ಆ ಬಿದಿಗೆ ಚಂದ್ರಮ
ಮುಗಿಲ ಮೇರೆಗೆ
ಅವಳ ಸಂಭ್ರಮ.

ಈ ಇರುಳು
ನಿನ್ನ ಮುಂಗುರುಳು
ಹಾಲ್ಮೊಡವೆ ಬೆಳದಿಂಗಳು
ಆ ನೋಟವೇ
ನಗು ಚೆಲ್ಲೊ ತಿಂಗಳು

ಓ ನಿಶೇ ವಿಸ್ತರಿಸೇ
ಮುದ್ದಾದ ನಿನ್ನ
ಮುದ್ದಿಸುವಾಸೆ
ಇಂದೇಕೆ ಜರೂರು
ತಡವಾಗಿ ಬರಬಾರದೆ ಆ ಉಷೆ.


ಅಂತರಂಗದ ಚಳುವಳಿ

 

ಸ್ವಾಭಿಮನದ ನಲ್ಲೆ
ನಿನ್ನ ಸೌಮ್ಯತೆಯ ನಾ ಬಲ್ಲೆ
ಈ ಮೌನ ಯಾಕೆ
ನೀನಲ್ಲವೇ  ನನ್ನಾಕೆ

ಕನಸು ಕೊಟ್ಟು
ಮುನಿಸು ತೋರೊದು ಸರಿಯೇ..
ಮಾತಿಲ್ಲಾ ಕತೆಯಿಲ್ಲಾ
ಈ ಮೌನ ನನಗೂ ಬೇಕಿಲ್ಲ..

ನಿನ್ನ ವಿರಹವು
ನನ್ನ ಸುಡುತಿರೆ
ನಾ ಅರಿಯೆನೇ
ನಿನ್ನ ಒಳಮನಸ
ನಾ ತಿಳಿಯೆನೆ..
ನಿನ್ನೆಲ್ಲಾ ಕನಸ‌..


ಕೌತುಕ

 

ನೀನಿಲ್ಲದೆ ನಾನೀಗ
ನನಗೇನೆ ನಾ ಆಗಂತುಕ..
ಈ ಕ್ಷಣವೆಲ್ಲಾ ಬರಿ ಕ್ಷುಲ್ಲಕ..
ಹೆಚ್ಚಾಗಿದೆ ನಿನ್ನ ನೋಡೋ ಕೌತುಕ
ಬಿಗಿದಿಟ್ಟಿದೆ ನನ್ನೀಗ ಈ ತವಕ
ಬಚ್ಚಿಡುವೆ ಮೆಚ್ಚುಗೆಯ ನೀ ಬರೋ ತನಕ


ಜಾದುಗಾರ


ಅವನು ಜಾದುಗಾರ, ನಾಜೂಕುಗಾರ
ಹರೆಯದ ಮುಗ್ದ ಪೋರ.
ಇನ್ನೂ ವಿಸ್ಮಯ
ಯಾಕಾಗಿಲ್ಲ ಸಾಹುಕಾರ.

ಸುರಿಸುವ ಸುರಿಸುವ ಸರ ಸರ ನೋಟ
ಸಾವಿರ ನೋಟುಗಳ ನಡುವೆ  ನೋಟ
ಅವನೊಬ್ಬ ಜಾದುಗಾರ
ಎಲ್ಲರ ಬೆರಗಾಗಿಸಿದ ಮಾಯಾಗಾರ

ಸಕಲ ಕಲಾವಿದ ನುಡಿಯುವ
ಶಕಲಕ ಶಕಲಕ..
ಶುಕ ಪಿಕವಾಗಿದೆ ಭಯನಕ ಮೋಹಕ..
ಮುರಿಯದೆ ಪಂಜರದ ಚಿಲಕ.

ಎಲೆಗಳಲ್ಲೆ.,ಕಟ್ಟಿದ ಮನೆಗಳ..ಮನಗಳ
ತಣಿಸಿದ ಅದೆಷ್ಟು ಕಂಗಳ..
ಚಿತ್ರಕಾರ  ಚಿತ್ತಚೋರ ಪುಟ್ಟ ಧೀರ
ಜಾದುಗಾರ.


ಕ್ಷಣಗಣನೆ

 ನೆನಪುಗಳು ಮಧುರವೆನಿಸುತ್ತಿದೆ 

ನಿನ್ನ ಸನಿಹವನ್ನು ನೆನೆದು..

ಕನಸುಗಳು

ಹಾತೊರೆಯುತ್ತಿದೆ 

ನಿನ್ನ ನೋಡಲಿಂದು


ಓ ಒಲವೇ ಓ ಒಲವೇ

ನಿನಗೂ ಒಲವಿದ್ದರೆ ನನ್ನ ಸಂಧಿಸು ಪ್ರೀತಿಸು..

ಸಲುಗೆ ಇದ್ದರೆ ಬಳಿಗೆ ಬಂದರೆ ತೋಳಿಗೊರಗಿ ಬೆರಳ ಹಿಡುವ ಆಸೆ

ಇನ್ನು ಹಿತವೆನಿಸಿದರೆ ನನ್ನೊಳಗೆ ನಿನ್ನ 

ಬಚ್ಚಿಟ್ಟು ಮುದ್ದಿಸುವಾಸೆ


ಮತ್ತೆ ಮತ್ತೆ ಮನಸ್ಸು ಶರಣಾಗಿದೆ-ಕಾದಂಬರಿ

 ಮಂದಾರ ಪರ್ವತದಾಚೆ ಚಂದಿರ ಮರೆಯಾದಂತೆಲ್ಲ ಮಂಜಿನ ಹನಿಗಳು ಇಳೆಗಿಳಿದು ಮುತ್ತಿನಂತೆ ಪೋಣಿಸಲ್ಪಡುತ್ತಿದ್ದವು. ಹುಲ್ಲು ಹೊದ್ದ ಮಾಡು ತಣ್ಣಗಾಗುತ್ತಿದ್ದಂತೆ ಒಳಗಡೆ ಬೆಚ್ಚನೆಯ ಅನುಭವ ನೀಡುತ್ತಿದೆ. ಮಾಗಿಯ ಚಳಿಯಲಿ ಮೇಘಗಳಿಂದ ಉದುರಿದ್ದ ಹನಿಗಳು ಜೋಗಿಯ ಜೋಳಿಗೆ ತುಂಬಿಸಿ ಭೂತಾಯಿಯನ್ನು ಹಸಿರಿನಿಂದ ಹೊದಿಸಿದೆ. ಹೊಸ್ತಿಲ ದಾಟಿ ಹೊರ ಬಂದ ಕೃಷ್ಣನಿಗೆ ದೂರದಲ್ಲಿ ಸಿಂಧು ಅತ್ತೆ ಮಗಳು ಸಿಂಚನಾ ಸೀರೆ ನೆರಿಗೆಯನ್ನು ಗದ್ದೆ ಅಂಚಿನಿಂದ ಕೊಂಚ ಮೇಲೆತ್ತಿ ನಡೆದು ಬರುತ್ತಿರುವುದು ಕಾಣಿಸುತ್ತಿತ್ತಾದರೂ ಅವಳ ಹಿಂದೆ ನಡೆದು ಬರುತ್ತಿದ್ದ ಆಸಾಮಿಯ ಗುರುತಾಗಲಿಲ್ಲ. ಚಳಿಗಾಲದ ಮುಂಜಾವಿನಲ್ಲಿ ಇಬ್ಬನಿಯ ಹನಿಗಳು ಗದ್ದೆಯ ಅಂಚಿನ ಮೇಲೆ, ಬೆಳೆದ ಹುಲ್ಲಿನ ಮೇಲೆ ಬಿದ್ದು ಪಳ ಪಳ ಹೊಳೆಯುತ್ತಿತ್ತು..ಆಳೆತ್ತರಕೆ ಬೆಳೆದ ಭತ್ತದ ಪೈರು ಗಾಳಿಯ  ರಭಸಕ್ಕೆ ದಾರಿಗಡ್ಡವಾಗಿ ಬಿದ್ದಿದ್ದವು.. ಎಲ್ಲಾ ಸರಿಯಾಗಿ ಇದ್ದಿದ್ದರೆ ಸಿಂಚನಾ ಈ ಮನೆಯ ಮುದ್ದು ಸೊಸೆಯಾಗಬೇಕಿತ್ತು. ಅಪ್ಪ ಮತ್ತೆ ಅತ್ತೆಗೆ ಯಾವಗಲೂ ಹೊಂದಾಣಿಕೆ ಇದ್ದಂತಿರಲಿಲ್ಲ. ಅವರಿಬ್ಬರ ವೈಮನಸ್ಸಿಂದ ಇಂದು ಎಳೆಮನಸ್ಸುಗಳು ದೂರ ದೂರ ಉಳಿಯಬೇಕಾಗಿ ಬಂದದ್ದಂತು ನಿಜ.

ಅಪ್ಪನ ಕಾಲ ಮುಗಿದು ಸುಮಾರು ವರ್ಷವೇ ಆಯ್ತು.ಆದರೆ  ಹಳಿಸಿದ ಸಂಬಂಧ ಉಳಿಸಿ ಬೆಳಸಲು ಯಾರಿಗೂ ಇಷ್ಟ ಇದ್ದಂತಿರಲಿಲ್ಲ. 

ಇನ್ನೇನು ಅಂಗಳಕ್ಕೆ ಕಾಲಿಡುತ್ತಾರೆ ಎನ್ನುವಾಗ ಕೃಷ್ಣ ಸೀದಾ ಒಳ ನಡೆದಿದ್ದ..ಮನೆಯಂಗಳದ ಕಾಲು ದಾರಿ ಬಳಸಿ ಮಂದೆ ಸಾಗುತ್ತಿರುವಂತೆ ಮತ್ತೆ ಇಣುಕಿ ನೋಡಲು ಹೊರ ಬಂದಿದ್ದ. ಅದ್ಯಾಕೊ ಭಾರದ ಹೃದಯದ ದೂರದ ನೆನಪುಗಳನ್ನು ಮೆಲುಕು ಹಾಕಲು ಯಾರಿಗೂ ಇಷ್ಟವಿರಲಿಲ್ಲ.

ಇಂದು ಶ್ರಾವಣ ಶುಕ್ರವಾರ ಅಮ್ಮನವರ ದೇವಸ್ಥಾನಕ್ಕೆ ಸಿಂಚನಾ  ಹೊರಟಿದ್ದು ಬೆಳಿಗ್ಗೆ ಬೇಗನೆ..

ತಡವಾದಷ್ಟು ಜನಸಂದಣಿ ದಟ್ಟವಾಗುತ್ತಿತ್ತು. 

ಸುತ್ತಿ ಸುತ್ತಿ ಹೋಗುವುದಕ್ಕಿಂತ ಅತ್ತೆ ಮನೆಯ ದಾರಿ ಹತ್ತಿರವಾದುದರಿಂದ ಹೀಗೆ ಬಂದಿದ್ದಳು.


ಪೂರ್ವಜರು ಮಾಡಿಟ್ಟಿದ್ದ ಆಸ್ತಿ ಬಹಳಷ್ಟಿದ್ದರೂ ಅದ್ಯಾವುದು ನಮ್ಮ ಹೆಸರಲ್ಲಾಗಲಿ ಅಪ್ಪನ ಹೆಸರಲ್ಲಾಗಲಿ ಇರಲಿಲ್ಲ. ಒಂದು ವೇಳೆ ಇದ್ದಿದ್ದರೂ ಅಪ್ಪನ ಸ್ವಾರ್ಥಕ್ಕೆ ಬಲಿಯಾಗಿ ಇಂದಿಗೆ ಅವಶೇಷಗಳು ಸಹ ಉಳಿಯುತ್ತಿರಲಿಲ್ಲ.

ಸ್ವಂತ ತಂಗಿ ಮಕ್ಕಳನ್ನು ಬೀದಿಪಾಲು ಮಾಡಿದ ಮನುಷ್ಯ..ಇನ್ನು ಅಸ್ಥಿತ್ವವಿಲ್ಲದ ಆ ಆಸ್ತಿಯನ್ನು ಉಳಿಸುವನೆ.. 

ಹೇಳಲಿಕ್ಕೆ ಆದಿಮನೆ..ದ್ವೇಷ,ಅಸೂಯೆಗಳ ಬೆಂಕಿ ಉರಿದು  ಬೂದಿಯಾಗಿ..ಅಂತ್ಯ ಕಾಣುತ್ತಿದೆ.. 

ಹಿರಿಮಗ ವೇದಕೃಷ್ಣ ಆ ಮನೆಯನ್ನು ಬಿಟ್ಟು ತುಂಬ ವರ್ಷಗಳೆ ಕಳೆದವು..

ಸನ್ಯಾಸಿ ನೆಮ್ಮದಿ ಅರಸಿ ಪರ್ಣಕುಟೀರ ಕಟ್ಟಿಕೊಂಡಂತೆ

ಹುಲ್ಲು ಮಾಡುಗಳ ಜೋಪಡಿಯಲ್ಲಿ ಸಂತೃಪ್ತಿ ಕಂಡವನು.

ತಂದೆಯನ್ನು ನಿಂದಿಸಲಾಗದೆ ಕೋಪವನ್ನು ಬಂಧಿಸಲಾಗದಾಗ ಕಂಡುಕೊಂಡಿದ್ದ ಮಾರ್ಗ ಇಂದು  ಅವನನ್ನು ಒಬ್ಬಂಟಿಯನ್ನಾಗಿಸಿತ್ತು. 

ಪದವಿದಾರನಾದರೂ ಬಂದ ಉದ್ಯೋಗವನ್ನೆಲ್ಲ ನಿರಾಕರಿಸಿ ಹೊಲ ಗದ್ದೆ ಅಂತ ದುಡಿದವನಿಗೆ ದಕ್ಕಿದ್ದೇನು ಇಲ್ಲ.

  

ಅಬ್ಬಾ ಎಷ್ಟೊಂದು ರಶ್...ಹೊತ್ತು ಕಳೆದು ಹತ್ತು ಘಂಟೆನೇ ಸರಿದೊಯ್ತು‌..ಬೇಗ ಮನೆಗೆ ಹೋಗೋಣ ಎಂದುಕೊಂಡರೆ ಲೇಟಾಯ್ತಲ್ಲ..ಎಂದು ಬೇಗ ಬೇಗನೆ ಹೊರಟಳು ಸಿಂಚನಾ.

ಎಂಟು ತಿಂಗಳ ಮಗುವನ್ನು ಅಜ್ಜಿ ಜೊತೆ ಬಿಟ್ಟು ಬಂದಿದ್ದಳು..ಅವಳದ್ದು ಯಾತನೆ ಬದುಕು..ಕಟ್ಟಿಕೊಂಡ ಗಂಡ ಬಿಟ್ಟು ಹೊಗಿದ್ದ ..ಎಷ್ಟು ದೇವರ ಬೇಡಿದರೇನು..ಇಷ್ಟ ಪಟ್ಟ ಬಾಳು ದೊರೆತಿರಲಿಲ್ಲ.


ವೇದಕೃಷ್ಣನೆಂದರೆ ಸಿಂಚನಾಗೂ ತುಂಬ ಇಷ್ಟ...ಯಾರಿಗೆ ತಾನೆ ಇಷ್ಟವಾಗದು ಈ ಅಪರಂಜಿಯಂತಹ ಹುಡುಗನನ್ನು ಕಂಡರೆ..ಸಾಲದಕ್ಕೆ ಅತ್ತೆ ಮಗ ಬೇರೆ..

ವಿಧಿಯ ಆಟದಲ್ಲಿ ಕೃಷ್ಣನನ್ನು ತನ್ನ ಪಾಲುದಾರನಾಗಿ ಮಾಡಿಕೊಳ್ಳಲು ಸಿಂಚನಾ ಇಷ್ಟ ಪಟ್ಟಿರಲಿಲ್ಲ..

  

ಆದರೂ ಇತ್ತಿಚೆಗೆ ಸಿಂಚನನ ಬೇಟಿಯಾಗಲು ಬಯಸಿದ್ದ..ಅವಳಿಗಿಷ್ಟವಿದ್ದು ಅವನ ಅಹ್ವಾನ ತಿರಸ್ಕರಿಸಿದ್ದಳು..ಎಲ್ಲಿ ಅವನಿಗೆ ಕರಗಿ ಹೋಗವೆನೆಂದು ಭಯ ಬಿದ್ದಂತಿತ್ತು.


ದೀರವ್ ಯಾವತ್ತೂ ಸಿಂಚನನಾ ದೃಷ್ಟಿಯಲ್ಲಿ ಯೋಚಿಸಿಯೇ ಇರಲಿಲ್ಲ. ಒಂದು ವೇಳೆ ಯೋಚಿಸಿದ್ದೆ ಆಗಿದ್ದಿದ್ದರೆ ತನ್ನ ಮೂರು ಮಕ್ಕಳೊಂದಿಗೆ ಸಿಂಚನನ ಮಗುವಿಗೂ ಒಳ್ಳೆ ಅಪ್ಪನಾಗಿರುತ್ತಿದ್ದ..

ವಿಧಿಯಾಟವೇ ಹೀಗೆ ಗೊತ್ತಿದ್ದು ಗೊತ್ತಿದ್ದು  ಸಿಂಚನಾ ಪ್ರಪಾತಕ್ಕೆ ಬಿದ್ದವಳು‌.ಅವಳ ತಾಳ್ಮೆ ಶಬರಿಗಿಂತ ಮುಂದಿತ್ತು..ಈ ನಾಲ್ಕು ವರ್ಷದಲ್ಲಿ ಯಂತ್ರ ,ತಂತ್ರ,ಮಂತ್ರ ದೀರವ್ ಗೆ ಏನು ಮಾಡಲಿಲ್ಲ..ವಶೀಕರಣಕ್ಕೆ ಸುರಿದ ಹಣ ಯಾರ್ಯರ ವಶವಾಯ್ತು.


ಅಮ್ಮ,ತಮ್ಮ ಹಾಗೂ ಸಿಂಚು ಮೂರರ ಬದುಕಲ್ಲಿ ಬಂಧುಗಳು ದೂರ ದೂರ..ಕಾಲೇಜು ಹುಡುಗಿ ಮನೊರಂಜನೆ ಅಂದ್ರೆ ಮಾಮೂಲಿ ಟ.ವಿ..ಅದನ್ನ ಸಹ ನೋಡಬೇಕಂದರೆ..ಮೂರು ಹರಿದಾರಿ ದೂರದ ವಸಂತಕ್ಕನ ಮನೆ....


ವಸಂತಕ್ಕನ ಮೂರು ಗಂಡು ಮಕ್ಕಳು ಬಾಂಬೆಯಲ್ಲಿದ್ದರೂ ಮುದ್ದಿನ ಮಗಳು ಮಾತ್ರ ಊರಲ್ಲಿ..ಅಗರ್ಭ ಶ್ರೀಮಂತರಲ್ಲದಿದ್ದರೂ..ಮನೆಯಲ್ಲಿ ಟಿವಿ ,ಪ್ರಿಡ್ಜ್  ಆ ಕಾಲದಲ್ಲೆ ತಂದಿದ್ದರು..ಗಂಡು ಮಕ್ಕಳ ಸಂಪಾದನೆ ಜೋತೆ ಗಂಡನ ಸಂಬಳ ಹೀಗೆ ಐಶ್ಯರಾಮಿ ಜೀವನ. ಮಗಳಿಗೂ ಸಿಂಚನಾಗೂ ಸರಿ ಸುಮಾರು ಒಂದೆ ವಯಸ್ಸು ಹೀಗಾಗಿ ಗೆಳತಿಯರಾಗಿದ್ದರು..ಕಾಲೇಜು ರಜೆಯಿರುವಾಗೆಲ್ಲ ಅವರ ಮನೆಯಲ್ಲೆ ಉಳಿದು ಕೊಳ್ಳುತ್ತಿದ್ದಳು. ಒಂದಿನ ಮಗನ ಸ್ನೇಹಿತ ದೀರವ್ ಬಾಂಬೆಯಿಂದ ಬಂದಿದ್ದ..ಅವರ ಅಮ್ಮ ಅವನಿಗಾಗಿ ಹುಡುಗಿ ಹುಡುಕುತ್ತಿದ್ದನ್ನು ಮನಗಂಡಿದ್ದರು ವಸಂತಕ್ಕ..


ಹರೆಯದ ಹುಡುಗಿ ಅರಿಯದೆ ಸೋತಿದ್ದಳು ಕೃಷ್ಣನ ಮರೆತು.. ಮುಂದರಿಯದ ಕನಸ ಕಾಣಲು ಅವಳ ಮನಸ್ಸು ಸ್ವಚ್ಚಂದವಾಗಿ ಬಿತ್ತಿದ ಮೋಡಗಳಂತೆ ತೇಲತೊಡಗಿತ್ತು..


ಎಲ್ಲ ಸರಿಯಾಗಿತ್ತು ಈ ತುಂಬು ಕುಟುಂಬದಲ್ಲಿ. ಹೀಗೊಂದು ಎಲೆಮನೆಯಲ್ಲಿ  ವಾಸಿಸುವೆಯೆನ್ನುವ  ಕಲ್ಪನೆ ಸಹ ಇರಲಿಲ್ಲ.. 

ಮದುವೆಯವರೆಗೂ ಅಣ್ಣನ ಮುದ್ದು ತಂಗಿ.ಅದ್ಯಾಕೊ ಸಂಸಾರ ಬೆಳೆದಂತೆ ಸಸಾರವಾಗುತ್ತಿದ್ದಳು ಸಿಂಧು.. ಭಾಮೈದ  ಮನೆ ಅಳಿಯನಾಗಿದ್ದೆ ಕಾರಣವಾಯ್ತೆನೋ..

ಹಾಗೂ ಹೀಗೂ ಹೊಸತನ ಎನಿಲ್ಲದಿದ್ದರೂ  ಅಸಮಧಾನದ ಮದ್ಯ ಜೀವನವಂತು ಸಾಗುತ್ತಿತ್ತು.


ಸೌಂದರ್ಯ ದೇವತೆಯಂತಿದ್ದ ಸಿಂಧುವಿನ ಸಿಂಧೂರದ ಮೇಲೆ ಆ ವಿಧಿಯ ಕೆಂಗಣ್ಣು ಬಿದ್ದಿತೇನೋ

ಅತ್ಯಂತ ಕರಾಳ ದಿನವದು, ಹೆಣ್ಣಿನ ಸೌಂದರ್ಯಕ್ಕೆ ಕಳಸದಂತಿದ್ದ ಕುಂಕುಮವನ್ನು ಕಳಚಿಡಬೇಕಿತ್ತು..


ಈ ಸಮಾಜದ ಕೆಲವೊಂದು ಸಂಪ್ರದಾಯಗಳು ತುಂಬ ವಿಚಿತ್ರ.. ನನಗೊಂದಂತು ಆರ್ಥವಾಗುತ್ತಿಲ್ಲ  ಸಮಾಜದ ಬುದ್ದಿಜೀವಿಗಳೆನಿಸಿಕೊಂಡ ನಮ್ಮಿಂದಲೇ ಬೆಂಬಲ ಪಡೆದು  ಇಂದಿಗೂ ಬೆಳದು ನಿಂತಿದೆ.

ಹುಟ್ಟುತ್ತಲೇ ಅವಳು ಆ ಎಲ್ಲ ಹಕ್ಕುಗಳನ್ನು ಪಡೆದು ಬಂದಿರುತ್ತಾಳೆ,ಆದರೂ ಅದನ್ನು ಕಸಿದು ಕೊಳ್ಳಲು ನಾವ್ಯಾರು..

ಕರುಣೆ ತೋರದ ಬಂಧುಗಳು ಕರೆದು ಕಳಿಸುವ ನೆಪದಲಿ ಕರಿಮಣಿಯ ಕಡಿದು, ಕರದ ಕಡಗವ ಒಡೆದು  ತರುಳೆಯ ಕರುಳ ಹಿಂಡುವರು..ಇದಕ್ಕೊಂದು ಸಂಪ್ರದಾಯದ ಬಣ್ಣ ಹಳೆದ ಬಿಳಿ ಸೀರೆಯ ಉಡಿಸುವರು.


ಎರಡು ಎಳೆ ಜೀವದೊಂದಿಗೆ  ಮಾಸಿದ ಬದುಕ ಕಟ್ಟಿಕೊಳ್ಳುತಿರುವಾಗಲೇ ಅಣ್ಣನ ಚುಚ್ಚು ಮಾತುಗಳು ಘಾಸಿಗೊಳಿಸುತ್ತಿದ್ದವು.ಇದೊಂತರ ಅಡಕತ್ತರಿಯ ಜೀವನ..ಸವೆಸಬೇಕೆ ಹೊರತು ಮುಗಿಸಲಾಗದು.


ದುರಂತದ ದಿನಗಳು ಅವಳಿಗಾಗಿಯೇ ಸಿದ್ದವಾಗಿದ್ದವು.ಹಳೆ ಮನೆಯಿಂದ ಎಲೆಮನೆಯ ಕಡೆ ಸಾಗಬೇಕಿತ್ತು.

ಅದೊಂದು ದಿನ ಮನಸ್ಸು ಗಟ್ಟಿ ಮಾಡಿಕೊಂಡು ಹೊರ ಹೋದವಳು ಹಿಂದಿರುಗಿ ತವರ ನೋಡಲೇ ಇಲ್ಲ.


ಸಂಬಂಧ ಬೆಸೆಯುವ  ಸಂಬಂಧಿಕರಗೆ ಎಳ್ಳು ನೀರು ಬಿಟ್ಟಾಗಿತ್ತು.ಮುಗ್ದ ಮನಸ್ಸುಗಳು ಮಾತ್ರ ನಲುಗಿದ್ದವು.

ಪಾಪ ಏನು ತಪ್ಪು ಮಾಡದ ಕೃಷ್ಣ ಹಾಗೂ ಸಿಂಚನರ ದೂರ ದೂರ ಮಾಡಿದ್ದರು..

ಕನಸಲ್ಲು ಕಾಡುವ ಅವನ ಪ್ರೀತಿಯನ್ನು ಎದೆಯಲ್ಲೆ ಬಚ್ಚಿಟ್ಟುಕೊಂಡು ಅವನತಿ ಮಾಡಿದಳು.




ವಸಂತಕ್ಕನ ಮನೆಯಲ್ಲಿ ದೀರವ್ ನ ನೋಡಿದ ಮೇಲೆ ಹೊಸ ಭಾವನೆ ಮೂಡಿತವಳಿಗೆ..ಕೈಗೆ ಸಿಗದ ಕೃಷ್ಣ ದೀರವ್ನ ಮುಂದೆ ಒಂದರೆಗಳಿಗೆ ಮಸುಕಾಗಿದ್ದಂತು ನಿಜ.


ಅವನ ಕದ್ದು ಕದ್ದು ನೋಡುವ ಮುದ್ದು ನೋಟದಲ್ಲಿ ಅವಳು ಕಳೆದು ಹೋಗಿದ್ದಳು. 

ಈ ವಯಸ್ಸಲಿ ಮನದಲಿ ಮೂಡುವ ಭಾವಗಳು ಬನದಲಿ ಅರಳುವ ಹೂವಗಳಂತೆ..

ಏನೇ ಸಿಂಚು ನಗ್ತಿದಿಯಾ ..ಎನ್ ಯೋಚಿಸ್ತಿದಿಯಾ 

ವಸಂತಕ್ಕನ ಮಾತಿಗೆ  ಮರು ಉತ್ತರಿಸದೆ ಒಳನಡೆದಿದ್ದಳು ನಸು ನಗುತ್ತ.


ಕನಸು ಕಾಣಲು  ಗುಡಿಸಲಾದರೇನು ,ಅರಮನೆಯಾದರೇನು..ಅಮ್ಮನಲ್ಲಿ ಹೇಳಲೋ ಬೇಡವೋ ..ನಾನಾಗಿ ಏನೇ ಹೇಳಿದರೂ ಅಮ್ಮ ತಲೆಗೆ ಹಾಕಿಕೊಳ್ಳಲಾರಳು.

ಒಂದರ್ಥದಲ್ಲಿ ವಸಂತಕ್ಕ ಆ ಮುಗ್ದ ಹುಡುಗಿಯ ತಲೆಯನ್ನು ಕೆಡಿಸಿದ್ದಂತು ನಿಜ.


ಬಿಳಿ ಹಾಳೆಯಲ್ಲಿ ಅದೇನೊ ಗೀಚುತ್ತಿದ್ದಳು.ರಂಗೇರಿದ ಬಾನಿನಿಂದ ಸೂರ್ಯ ಇನ್ನೇನು ವಿರಮಿಸಿ ಕತ್ತಲ ಸೃಷ್ಟಿಸಿ ಹೋಗಿದ್ದ.

ಓದಲು ಹಿಡಿದ ಪುಸ್ತಕ ಮತ್ತೆ ಮಡಿಚಿದಳು. ಮಸ್ತಕದ ತುಂಬೆಲ್ಲ ತುಂಬಿರುವ ಆಲೋಚನೆಗಳು ಬೆಳಕಿಲ್ಲದೆ ಮಬ್ಬಾಗಿದ್ದವು. 

ಚಿಮಣಿ ದೀಪ ಹುಳಗಳನ್ನು ಆಕರ್ಷಿಸಿಸಿ ಸೆಳೆದಂತೆಲ್ಲ ಅವಳಿಗೆ ಕಿರಿ ಕಿರಿಯಾಗುತ್ತಿತ್ತು.

ಸಿಂಚು ಸೀಮೆ ಎಣ್ಣೆಯಿಲ್ಲ ದೀಪ ಆರಿಸಿ ಮಲಗು..ಎಂದ ಅಮ್ಮ ನ ಮಾತಿಗೆ ಹೂಂ ಎಂದವಳೆ  ಹೋಗಿ ಮಲಗಿದ್ದಳು..ಆದರೆ ನಿದ್ದೆ ಕಣ್ಣಿಗೆ ಪೊರೆಯಂತೆ ಕಾಡಿಸುತ್ತಿತ್ತು.

ಒಂದು ವೇಳೆ ದೀರವ್ ನ ಮದುವೆಯಾದರೆ ಈ ಎಲ್ಲಾ ಕಷ್ಟಗಳಿಗೆ ಕೊನೆಯಿಡಬಹುದು.. ಅಮ್ಮನನ್ನು ಜೋತೆಗೆ ಮುಂಬಾಯಿಗೆ ಕರೆದುಕೊಂಡು ಹೋಗಬಹುದು. ಶ್ರಿಕಾಂತ್ ಕೂಡ ಅಲ್ಲೆನಾದ್ರು ಕೆಲಸ ಮಾಡಿಕೊಂಡಿರಲಿ..

ಅವಳು ಪ್ಲಾನ್ ಎ ಪ್ಲಾನ್ ಬಿ ಅಂತ ಲೆಕ್ಕಚಾರದಲ್ಲಿ ತೊಡಗಿದಳು.

ದೀರವ್ ಗೆ ಮುಂಬಾಯಿಯಲ್ಲಿ ಮೂರು ಹೋಟೆಲ್ ಇದೆಯಂತೆ..ಅಮ್ಮನ ಒತ್ತಾಯಕ್ಕೆ ಊರಿನ ಹುಡುಗಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾನೆ.

ದುಡ್ಡು ಚಿನ್ನ ಜಾಸ್ತಿ ಕೇಳಲ್ಲ ಅಂತೆ. ನಾಲವತ್ತು ಸಾವಿರ ಜೊತೆಗೆ ಹತ್ತು ಪಾವನ್ ಚಿನ್ನ.. ಚರ್ಚೆ ಮಾಡಿದ್ರೆ ಸ್ವಲ್ಪ ಕಮ್ಮಿ ಬರಬಹುದು. ನನ್ನ ಮಗಳಿಗೆ ಈ ಸಂಬಂಧ ತಂದ್ಕೊಳ್ಳ ಬಹುದಿತ್ತು..ಒಬ್ಬಳೆ ಮಗಳು ನನ್ನ ಕಣ್ಮಂದೆ ಇರಲಿ ಅಂತ ಬೇಡ ಅಂದೆ.. ಒಳ್ಳೆ ಸಂಬಂಧ ..ನೋಡು ಅಮ್ಮನತ್ರ ಮಾತಾಡು.


ವಸಂತಕ್ಕ  ಹೇಳಿದ್ದು ನನ್ನೊಳ್ಳೆದಕ್ಕೆ ..ಅದೆ ಯೋಚನೆಯಲ್ಲಿದ್ದವಳು ಅಮ್ಮ... ಎಂದಳು..

ಏನು ಇನ್ನು ಮಲಗಿಲ್ವಾ..ನಾಳೆ ಕಾಲೇಜಿಗೆ ಹೋಗಲ್ವಾ..


ಅಲ್ಲಾ ಅಮ್ಮ..ವಸಂತಕ್ಕ ನಿಂಗೆ ಪ್ರೀ ಇದ್ದಾಗ ಮನೆಗೆ ಬಂದು ಹೋಗೋಕೆ ಹೇಳಿದ್ರು..

ಏನಂತೆ ಅವಳಿಗೆ  ನನ್ನ ಕೆಲಸವೇ ನಂಗೆ ಮಾಡಿ ಸಾಕಾಗುತ್ತೆ ..ಇನ್ನ ಅವಳ ಕೆಲಸ ಬೇರೆ..


ಅದ್ಕಲ್ಲಾ ಅಮ್ಮ.. 

ಒಂದ ಹುಡ್ಗ ಇದ್ದನಂತೆ..ಬೊಂಬಾಯಿಂದ ಬಂದವರು..ನಿನ್ ಜೋತೆ ಮಾತಡ್ಬೇಕು ಅಂದ್ಲು..

ಹುಂ ...ನಾಳೆ ನೋಡೋಣ..


ಅಬ್ಬಾ ಏನೋ ನೆಮ್ಮದಿ.. ಮಲಗಿದವಳಿಗೆ ಎಚ್ಚರವಾಗಿದ್ದು  ಹೊಂಬೆಳಕ ಬಾಸ್ಕರ  ಮುಗಿಲ ತೆರೆಗೆ ಬಂದಾಗಲೇ..


ದೀರವ್ ಊರಲ್ಲಿರುವುದು ಒಂದೇ ತಿಂಗಳು,ಅಷ್ಟರೊಳಗೆ ನಿಶ್ಚಿತಾರ್ಥ ನಡೆಯಲಿ.. ಮದುವೇ ಬೇಕಾದ್ರೆ ಅವಳ ಕಾಲೇಜು ಮುಗಿಲಿ.


ವಸಂತಕ್ಕನೂ ಒಪ್ಪಿದ್ರಿಂದ ಸಿಂಚನಳ ನಿಶ್ಚಿತಾರ್ಥಕ್ಕೆ  

ಅಕ್ಕನ ಮನೆ ಚೊಕ್ಕವಾಗಿ ಶೃಂಗರಿಸಲ್ಪಟ್ಟಿತು. ಅಡ್ವಾನ್ಸ ಹಣಕ್ಕಾಗಿ ಮುಂದೆ  ಶ್ರೀಕಾಂತನು ಕಾಲೇಜು ಬಿಡಬೇಕಾದ   ಪರಿಸ್ಥಿತಿ ಬಂದೊದಗಿತು.


ಮೊಬೈಲ್ ಅಷ್ಟಾಗಿ ಪ್ರಚಲಿತವಿಲ್ಲದ ಕಾಲ..ಹಾಗಂತ ಮನೆಯಲ್ಲಿಲ್ಲದ ದೂರವಾಣಿಗಾಗಿ ಪ್ರತಿ ಬಾರಿ ವಸಂತಕ್ಕನ ಮನೆಗೆ ಹೋಗೊದು ಕಷ್ಟನೆ.


ಪತ್ರಗಳೊಂದಿಗೆ ಕುಶಲ ಸಮಚಾರ..

ರೀ ನಿಮ್ಮ ಪೋಟೊ ಒಂದನ್ನ ಕಳುಹಿಸಿ ಕೊಡಿ..

ಎಂದು ಬರೆದಿರೊದಕ್ಕೆ ಅವನೂ ಕಳುಹಿಸಿದ್ದ..

ದೀರವ್ ನ ಗಡ್ಡದಾರಿ ಪ್ರತಿಬಿಂಬಕ್ಕೆ  ನಸುನಕ್ಕಿದಳು.


ಪೋನ್ ನಲ್ಲಿ ಮಾತಾಡುವಾಗ ಒಮ್ಮೆ ಯಾಕ್ರಿ ಗಡ್ಡ ಬಿಟ್ಟಿದ್ದಿರಿ ಎಂದು ಕೇಳಿದಕ್ಕೆ ಮೊದಲ ಹೆಂಡತಿ ಸೀಮಂತವಿತ್ತು ಎಂದು ನಕ್ಕಿದ. ತುಸು ಕೋಪಗೊಂಡವಳು ಪೋನಿಟ್ಟಳು..


ಮತ್ತೆ ಮತ್ತೆ ಮನಸ್ಸು ಶರಣಾಗಿದೆ

ಹುಸಿ ಕೋಪ ಚೂರಾಗಿದೆ ಕರಗಿ ನೀರಾಗಿದೆ..

ಇನಿಯ  ನೀನಿಲ್ಲದೆ ಸನಿಹ ಬೋರಾಗಿದೆ...

ಚೇ...ನಾನೇನು ಮಾಡಿದೆ .

ಪಾಪ ಅವರು...

ನಾನೇ ಬೇಕಂತ ಸುಮ್ಮನೆ ಕೋಪ ಮಾಡ್ಕೊಂಡು ಸುಮಧುರ ಕ್ಷಣನ ಹಾಳು ಮಾಡಿದೆ.

ಮೂಗಿನ ತುದಿಯಲ್ಲಿರುವ ಈ ಕೋಪನ ಮೊದ್ಲು ಕಮ್ಮಿ ಮಾಡ್ಕೊಬೇಕು.ಹೀಗೆ ಆದ್ರೆ ಮುಂದೆ ಸಂಸಾರ ಕಷ್ಟ ಕಾಣೆ ಸಿಂಚನಾ.

ತನಗೆ ತಾನೆ ಬುದ್ದಿ ಹೇಳಿಕೊಳ್ಳುವಷ್ಟು ದೊಡ್ಡವಳಾಗಿದ್ದಳು.

ಹೆಚ್ಚೇನು ತಲೆ ಕೆಡಿಸಿಕೊಳ್ಳಲು ಸಮಯವಿರಲಿಲ್ಲ,ಮುಂದಿನ ವಾರದ ಪರೀಕ್ಷೆಗೆ ಇವಾಗಿಂದಲೇ  ತಯಾರಿ ಮಾಡುತ್ತಿದ್ದಳು.


ಎಗ್ಸಾಂ ಮುಗಿಯುವರೆಗೂ ಪೋನ್ ಮಾಡಲ್ಲ ಎಂದವರು ಇಂದೇಕೆ  ವಸಂತಕ್ಕನ ಮನೆಗೆ ೬ ಘಂಟೆಗೆ ಬರ ಹೇಳಿದರು..

ಬೇಗ ಬೇಗ ಓಡಿದವಳು ಮುಗ್ಗರಿಸಿದ್ದಳು..ಹುಡುಗಿಗೆ ಕಾಲುಂಗುರ ಹೊಸತಲ್ವ..ಬೆರಳಿಗೆ ಕಲ್ಲು ಪರಚಿತಷ್ಟೆ..


ಆ ಕಡೆಯ ಧ್ವನಿ ದೀರವನದ್ದಾಗಿರಲಿಲ್ಲ ಬದಲಿಗೆ ವಸಂತಕ್ಕನ ಮಗನದ್ದಾಗಿತ್ತು.


ಪರೀಕ್ಷೆ ಬರೆಯಲು ಕುಳಿತವಳಿಗೆ  ಏನು ನೆನಪಿಗೆ ಬರುತ್ತಿರಲಿಲ್ಲ..ನಡುಗುತ್ತಿದ್ದಳು ಪೆನ್ನು ಹಿಡಿದ ಕೈ ಬೆವೆತುಕೊಳ್ಳಲು ಕಾರಣವಿಷ್ಟೆ. ನಿನ್ನೆ ವಸಂತಕ್ಕನ ಮಗ ಕಾಲ್ ಮಾಡಿದ್ದು ಅವನಂದ ಮಾತು ಕೇಳಿ ಭಯವಾಗಿತ್ತು.

ದೀರವ್ ಗೆ ಬಾಂಬೆಯಲ್ಲಿ ಒಬ್ಬಳು ಹುಡುಗಿ ಪರಿಚಯವಂತೆ.ಅಲ್ಲಲ್ಲಾ ಅವರು ಲವರ್ಸ ಅಂತೆ..ಮೊದಲು ನಂಗೂ ತಿಳಿದಿಲ್ಲ..ಗೊತ್ತಿದ್ರೆ ನಿಂಗೆ ಈ ಸಂಬಂಧ ಹೇಳ್ತಾನೆ ಇರಲಿಲ್ಲ.

ಮನೆಯಲ್ಲಿ ಮಾತಾಡು ಎಂದಿದ್ದ.


ಈಗವಳು ತನಗೆ ಬಿದ್ದಿದ್ದ ಎಲ್ಲ ಕನಸ್ಸನ್ನು ಎಳೆದು ತಂದಿದ್ದಳು, ಪ್ರಸ್ತತ ಸ್ಥಿತಿಗೂ ಹಳೆ ಕನಸಿಗೂ ತಾಳೆ ಹಾಕಲು. ಒಮ್ಮೊಮ್ಮೆ ಅವನಾಡಿದ ಮಾತು ನೆನಪಿಗೆ ಬರಲು ಅಳು ಸಹ ಬಂತು.

ನಿಶ್ಚಿತಾರ್ಥ ಸಹ ಮುಗಿದಿದೆ..ಆ ಎಳೆಮನಸ್ಸು ಎಷ್ಟಂತ ಯೋಚಿಸಿಯಾಳು..


ಪ್ರೀತಿಸಿದರೆ ಏನಂತೆ ..ಏನು ಮದುವೆ ಆಗಿಲ್ವಲ್ಲಾ..ಪ್ರೀತಿ ಬಲೆಯಲ್ಲಿ ಬೀಳದವರು ಯಾರಿದ್ದಾರೆ.ಇದೆಲ್ಲ ಮದುವೆ ಆಗುವ ತನಕ ಅಷ್ಟೇ.ಆಮೇಲೆ ಎಲ್ಲಾ ಸರಿಯಾಗುತ್ತೆ..

ಗೆಳತಿಯ ಸಮಜಾಯಿಸಿ ಕೊಂಚ ಸಮಧಾನ ತಂದಿತ್ತು..


ಹೌದು ನಿಶ್ಚಿತಾರ್ಥ ಆದಮೇಲೆ   ಅರ್ಧ ಮದುವೆ ನಡೆದಂತೆ. ಈ ದ್ವಂದ್ವದಲ್ಲಿ ಅವಳೊಂದು ನಿರ್ಧಾರಕ್ಕೆ ಬಂದಿದ್ದಳು.ಏನೆ ಆಗಲಿ ಅದನ್ನು ಎದುರಿಸಲು ಸಿದ್ದಳಾಗಿದ್ದಳು.


ಮನೆಯಲ್ಲಿದ್ದ ಸಂಭ್ರಮ ಮನದಲ್ಲಿರಲಿಲ್ಲ.. ಮೌನದಲ್ಲಿದ್ದ ರೋಧನೆ ಮಾತಿನಲ್ಲಿರಲಿಲ್ಲ..ಎಲ್ಲವೂ ಸರ್ವೆಸಾಮನ್ಯವೆಂಬಂತೆ ನಡೆದು ಹೋಗುತ್ತಿತ್ತು.



ಹೆಸರು ಮಾತ್ರ ಕೃಷ್ಣ..ಹೆಸರಿಗೆ ತಕ್ಕಂತೆ ಅವನಿಲ್ಲ ..ಅವನು ಅಪ್ಪಟ ರಾಮನಂತೆ.

ಕೆಸರ ನೇಜಿಯಲ್ಲಿ ಉಸಿರು  ಬಗೆದು ಬಿತ್ತಿದ್ದ ಬೀಜ, ಎಸಳು ಮೊಳೆಯದ  ಸಸಿಯಂತಾಯ್ತು ಅವನ ನಂಬಿಕೆ.ಪ್ರೀತಿಗಾಗಿ ಅಷ್ಟೇನು ತಲೆಕೆಡಿಸಿಕೊಂಡವನಲ್ಲ ಆದರೂ ಮನೆಯೊಳಗಿನ ಕಿಚ್ಚು ಮನೆಯನ್ನೆ ಸುಟ್ಟಂತೆ ತನುವೊಳಗಿನ ಬೆಂಕಿ ಆರಿಸಲು ನಾಲ್ಕಾರು ತಣ್ಣೀರು ಸ್ನಾನ.


ಮನೆಯ ದಾರಿ ಮರೆತು ಹೋಗಿದೆ.ಸಾಗುವ ದಾರಿಯಲ್ಲಿದ್ದ ಸಾಲು ಸಾಲು ಸಾಗುವಾನಿ ಮರಗಳು ಕಾಣದಾಗಿದೆ.ಅಪ್ಪನ ಕುಡಿತದ ಅಮಲಿಗೆ ಅದೆಷ್ಟು ಮರಗಳು ಮರಣಿಸಿದವು.

ಯಾಕೊ ಮುಂದೆ ಕಾಲಿಡಲು ಮನಸ್ಸಾಗಲಿಲ್ಲ.. ಹಿಂದಿರುಗಿ ಹೊಳೆ ದಂಡೆಯ ಕಡೆ ನಡೆದ.


ಈ ಪ್ರಕೃತಿಯೇ ಹಾಗೆ ಸಮತೋಲನ ಕಾಯ್ದುಕೊಳ್ಳುತ್ತಿದೆ..ಬಿರು ಬಿಸಿಲು ಹೆಚ್ಚಾದಾಗ ಮತ್ತೆ ಮಳೆ ಸುರಿಸಿದಂತೆ, ಮನ ಸೀಳುವ ನೋವಿಗೆ  ಮುಲಾಮು ಹಚ್ಚಿದಂತೆ, ಬಾಲಕನಾಗ ಹೊರಟಂತೆಲ್ಲ ಬಾಲಿಷವಾದ ಭಾವನೆಗಳೆ ಹೆಚ್ಚು.


ವೇದಕೃಷ್ಣನಿಗೆ ಮನಸ್ಸಿಗೆ ಬೇಜಾರಾದಂತೆಲ್ಲ ಇಲ್ಲಿಗೆ ಬರತ್ತಿದ್ದ..ಇಲ್ಲೆನೋ ಒಂತರ ಖುಷಿ ಅವನ ಮಾಮೂಲಿ ಜಾಗ.

ಶಾಂತವಾದ ನದಿಯಲ್ಲಿ ಒಂದು ಕಿಲೋಮೀಟರ್ ಈಜಿದರೆ ಸಾಕಿತ್ತು.ಈ ದ್ವೀಪ ಒಂದಿಪ್ಪತ್ತು ಎಕ್ರೆಯಷ್ಟಿರಬಹುದು. ಹುಲುಸಾಗಿ ಬೆಳೆದ  ಹುಲ್ಲುಗಳಿಗಾಗಿಯೇ ದನ ಕರುಗಳು ನದಿಯಲ್ಲಿ ಮಿಂದು ಬರುತ್ತಿದ್ದವು.

ಆ ನಡುಗಡ್ಡೆ ಸುತ್ತಲೂ ನೀರಿನಿಂದ ತುಂಬಿರುವುದರಿಂದ  ಶಾಂತತೆ, ನಿರಾಳತೆ ಮನೆ ಮಾಡಿತ್ತು. ಅದೆಂತಹ ಕಲ್ಪನೆ ಇವನದು.. ಇಲ್ಲಿಯೇ ಮಂಟಪ ಕಟ್ಟಿಸಿ ಸಿಂಚನಳ ಕೈ ಹಿಡಿಯಬೇಕೆಂದು ಕೊಂಡಿದ್ದ.

ಹುಲ್ಲು ಹಾಸಿನ ಮೇಲೆ ಮಲಗಿ ಸಂಜೆಯವರೆಗೂ ಆಕಾಶ ದಿಟ್ಟಿಸುತ್ತಿದ್ದ. ತುಂಬ ಎತ್ತರಕ್ಕೆ ಹಾರುತ್ತಿದ್ದ ಬಾವಲಿಗಳು T ರೀತಿಯಲ್ಲಿ ಕಾಣುತ್ತಿದ್ದವು.

ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಆ ಕಡೆಯಿಂದ ಈ ಕಡೆಗೆ..ಈ ಕಡೆಯಿಂದ ಆ ಕಡೆಗೆ ಹಾರುತ್ತಿದ್ದವು.ಅವುಗಳ ಲಯಭರಿತ ಹಾರಾಟ ಚುಕ್ಕಿಗಳಿಟ್ಟ ರಂಗೋಲಿಯಂತೆ ಕಾಣಿಸತ್ತಿತ್ತು..ಮೋಡಗಳಿಲ್ಲದ ಆಕಾಶ ಕೆಂಬಣ್ಣ ಹೊತ್ತು ನಿಂತಿದೆ.


ದೂರದಲ್ಲಿ ಕಾಣುವ ಅತ್ತೆಯ ಮನೆಯಲ್ಲಿ ಸಂಭ್ರಮ ಕಾವೇರಿತ್ತು...ಮಧುವಣಗಿತ್ತಿಯಂತೆ ಕಾಣುತ್ತಿರುವ ಸಿಂಚನಾ ನೆನಪಿಗೆ ಬಂದಳು.

ಇಷ್ಟು ದಿನ ಅವಳನ್ನು ದೂರವಿಟ್ಟವನಿಗೆ..ಇನ್ನೇನು ಅವಳು ಇನ್ನೊಬ್ಬನ ಮದುವೆಯಾಗುತ್ತಾಳೆ ಎಂದಗ ಅದುಮಿಟ್ಟ ದುಃಖ ಸಹಿಸಲಾಗಲಿಲ್ಲ...


ಇಂದಾದರೂ ಎಲ್ಲವ ಹೇಳಿ ಅತ್ತು ಬಿಡಲೇ ಅನಿಸಿತವನಿಗೆ..ಇಷ್ಟು ದಿನ ಕಡಿವಾಣ ಹಾಕಿದ್ದ ಅವನ ಮನಸ್ಸು ಮತ್ತೆ ಮತ್ತೆ ಅವಳಿಗೆ ಶರಣಾಗುತ್ತಿದೆ...

ಆದದ್ದು ಆಗಲಿ ಎಂದು ಅತ್ತೆ ಮನೆ ಕಡೆನೇ ನಡೆದಿದ್ದ...

ಅವನ ಮನದಲ್ಲಿ ಅಳುಕಾಗಲಿ ಅಂಜಿಕೆಯಾಗಲಿ ಕಾಣಲಿಲ್ಲ..

ಮುಂದೆ ಹೆಜ್ಜೆಯಿಟ್ಟಂತೆ ಅವನು ಯೋಜನೆಗೆ ಬದ್ದವಾಗಿದ್ದ.ಇನ್ನೆನು ಒಳಗಡಿಯಿಡಬೇಕೆನ್ನವಷ್ಟರಲ್ಲಿ ಸಿಂಧು ಅತ್ತೆಯ ಮನೆಯ ಎದುರಿಗಿದ್ದ ಮಾವಿನ ತೋರಣ ಅವನ ಅಣಕಿಸಿತು..


ಮನಸ್ಸು ಸ್ವಲ್ಪ ವಿಚಲಿತವಾಯ್ತು. ನಾನೇನ ಮಾಡ ಹೊರಟಿರುವೆ..ಇಷ್ಟೊಂದು ಸಂಭ್ರಮ ಮನೆಮಾಡಿರುವಾಗ ನಾನೆಲ್ಲ ಹಾಳು ಮಾಡಲು ಹೊರಟಿರುವುದು ಸರಿಯೇ..


ಯಾರಾದರೂ ನೋಡುವುದರೊಳಗೆ ಇಲ್ಲಿಂದ ಹೊರಟು ಹೋಗಬೇಕು. ಇದ್ದಕ್ಕಿದ್ದಂತೆ ಹೆಗಲ ಮೇಲೆ ಬಿದ್ದ ಕೈಗೆ ಬೆದರಿದ ಕೃಷ್ಣ,


ಅರೆ ...ಶ್ರೀಕಾಂತ್ ...

ಬನ್ನಿ..ಬನ್ನಿ  ಭಾವ ಅಂತ ಕರೆದ ಅವನ ಆತ್ಮೀಯತೆಗೆ  ಚಪ್ಪರದ ಒಳ ನಡದಿದ್ದ.

ಕಾಫಿ ಲೋಟ ತಂದಿಟ್ಟ ಸಿಂಚನನ ನೋಡುತ್ತಿದ್ದಂತೆ  ಅವನಿಗೆ ಹುಡುಗಿ ನೋಡಲು ಬಂದಂತಹ ಅನುಭವ.. 

ಅವನ ದೃಷ್ಟಿ ಎದುರಿಸಲಾಗದೆ ಸಿಂಚು ತಲೆ ತಗ್ಗಿಸಿದ್ದಳು. 

ಮಾತೆಲ್ಲ ಮರೆತು ಹೋಗಿದ್ದ ಕೃಷ್ಣನ  ಶ್ರೀಕಾಂತ್ ಹೊರಗೆ ಕರೆತಂದಿದ್ದ ಮಾತನಾಡುವ ನೆಪವೊಡ್ಡಿ.


ಭಾವ..    

ತುಂಬ ಆಲೋಚಿಸಿ ಸಾಕಾಗಿದೆ..ಮದುವೆಗೆ ಹಣ ಹೊಂದಿಸಲಾಗತ್ತಿಲ್ಲ. ತಪ್ಪು ತಿಳಿದುಕೊಳ್ಳಬೇಡಿ..ನೀವೆ ಏನಾದರೊಂದು ದಾರಿ ತೋರಿಸಬೇಕು.ನಮಗಂತ ಯಾರಿದ್ದಾರೆ.. ಕಣ್ಣಿನಿಂದ ಎರಡು ಹನಿ ಜಾರಿ ಬಿತ್ತು.


ಅಯ್ಯೋ ಇದಕ್ಕೆಲ್ಲ ಚಿಂತೆ ಮಾಡ್ಬಬೇಡಪ್ಪ ಏನಾದರೊಂದು ಮಾಡೋಣ ..ಎಲ್ಲ ದೇವರ ಇಚ್ಚೆಯಂತೆ ನಡಿಯುತ್ತೆ..

ಮಾತಿಗೇನೊ ಸಮಧಾನ ಮಾಡಿದ್ದ .ತನ್ನೊಡಲಿಗೆ ಬಿದ್ದ ಬೆಂಕಿ ಆರಿಸುವವರು ಯಾರು..


ಚಿಕ್ಕ ಚಿಕ್ಕ ವಿಷಯದಲ್ಲಿ ಸಂಭ್ರಮ ಸಡಗರ ತುಂಬಿತ್ತು..ಸಾಂಪ್ರದಾಯಿಕ ವಿಧಿ ವಿಧಾನದಲ್ಲೆ ಮದುವೆ ನಡೆದಿತ್ತು.ಕೊನೆಯಲ್ಲಾದ  ವರೋಪಚಾರ ಲೋಪ ಬಿಟ್ಟರೆ ಉಳಿದೆಲ್ಲವು ಸಾಂಗವಾಗಿ ಸಾಗಿತ್ತು.


ಅಳುವ - ನಗಿಸುವ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಕೊನೆಯಲ್ಲಿ ಉಳಿದ ಐದು ಮಂದಿ ಮನೆ ತುಂಬಿಸಿ ಬಂದಿದ್ದರು..


ದೂರದಲ್ಲಿದ್ದ ದೀರವ್ ಆಗಾಗ ಹೆಂಡತಿಯ ಯೋಗ ಕ್ಷೇಮ ವಿಚಾರಿಸುತ್ತಿದ್ದ.ಇಂದು ಅವಳ ಬಾಳಿನ ಸುಂದರ ಕ್ಷಣ ಮದುವೆಯಾಗಿ ನಾಲ್ಕು ತಿಂಗಳ ನಂತರ ಗಂಡನ ಕರೆಯೋಲೆ..ಇನ್ನು ಮುಂದೆ ಅವಳು ದೀರವ್ ನೊಂದಿಗೆ ಮುಂಬಾಯಿಯಲ್ಲಿ ನೆಲಸಬಹುದು.



ದೀರವ್ ನ ದಾರಿ ಎರಡು ದೋಣಿಗಳ ಮೇಲಿನ ಪಯಣದಂತಾಗಿದೆ.ತಾನೆಲ್ಲವ ನಿಭಾಯಿಸುವೆ ಎಂಬ ಹುಂಬ ಧೈರ್ಯದಲ್ಲಿ  ಭಾವಿ ಪತ್ನಿಯ ಭಾವನೆಗೆ ದಕ್ಕೆ ಮಾಡದೆ ಕರೆಸಿಕೊಂಡಿದ್ದನು.


ಸುಮಾರು ಹನ್ನೆರಡು ವರ್ಷಗಳ ಹಿಂದೆ ಮುಂಬಾಯಿಯಂತ  ಮಹಾನಗರದಲ್ಲಿ ಜೀವನ ಕಟ್ಟಿಕೊಳ್ಳಲು ಬಂದವವನು ಇಂದು ದೊಡ್ಡ ಉದ್ಯಾಮಿ.

ಹೋಟೆಲ್ ಬ್ಯುಸ್ನೆಸ್ ಅವನ ಕೈ ಹಿಡಿದಿತ್ತು.


ಮೂರನೆಯ ಅಂತಸ್ತಿನಲ್ಲಿದ್ದ  ನನ್ನನ್ನು ದಟ್ಟ ಹೊಗೆ ಆವರಿಸಿತು.ಭಯದಲ್ಲಿ ಹೊರಬಂದು ನೋಡಿದೆ.

ಆರ್ಧ ಎಕರೆ ವಿಶಾಲವಾದ ಜಾಗ ಎದುರಲ್ಲಿ ಮೂರು ಇಟ್ಟಿಗೆಗಳ ಒಲೆ ಅದ್ರಿಂದಲೆ ದಟ್ಟ ಹೊಗೆ ಏಳುತ್ತಿತ್ತು.


ಅದೊಂದು ಬಡತನದ ಕುಟುಂಬವಿರಬಹುದೆಂದು ನಾನು ಉಹಿಸಿದ್ದೆ. ಒಂದು ಬದಿಯಲ್ಲಿ ಎರಡು ರೂಮು, ರೂಮ್ಗಳಿಗೆ ಅದರದ್ದೆ ಆದ ಬಾಗಿಲುಗಳಿವೆ. ಎದುರಲ್ಲೆ ಮೂರು ಇಟ್ಟಿಗೆಗಳ ಒಲೆ.

ತಾಯಿ ಸರೋಜ  ಬೆಳಿಗ್ಗೆ ಎದ್ದವಳೆ ಹಳೆ ಬ್ಯಾರಲ್ಗಳನ್ನು ಹುಲ್ಲಿನಿಂದ ಉಜ್ಜಿ ಉಜ್ಜಿ ತೊಳೆದು ನೀರು ತುಂಬಿಸುತ್ತಿದ್ದಳು.

ಪ್ರತಿ ದಿನ ಉಜ್ಜುವುದ ನಾ ನೋಡಿದ್ದೆ,ಅದರೂ ತಳದಲ್ಲಿ ಅಂಟಿರುವ ಮಣ್ಣು ಪ್ಲಾಸ್ಟಿಕ್ ಗೂ ತುಕ್ಕು ಹಿಡಿದಂತೆ ತೋರುತ್ತಿತ್ತು.ಬ್ಯಾರಲ್ ಆಳ ಆಳೆತ್ತರಕ್ಕಿರುವುದರಿಂದ ಅವಳ ಕೈ ಮುಕ್ಕಾಲು ಮಾತ್ರ  ಸಲಿಸಾಗಿ ಎಟುಕುತ್ತಿತ್ತು.

ಮಾಲಿನಿ ಅವಳ ಒಬ್ಬಳೆ ಮಗಳು ವಯಸ್ಸು ಸುಮಾರು ಇಪ್ಪತ್ತು ಇರಬಹುದು..


ಮಾಲಿನಿ ಎದ್ದವಳೆ ಒಂದು ಉದ್ದನೆಯ ಪುಸ್ತಕ ಹಿಡಿದು ಬಂದಳು. ಮನೆಯ ಮುಂದೆ ಮೂರು ಕಲ್ಲಿನ ಒಲೆಯ ಮೇಲೆ ಯಾವಾಗಲೂ ಒಂದು ಮಡಿಕೆ ಇರುತ್ತಿತ್ತು. ಹೊಗೆ ಹಿಡಿದು ಮಣ್ಣಿನ ಮಡಿಕೆಯ ಹಾಗೆ ಕಾಣಿಸುತ್ತಿತ್ತು..ಮಣ್ಣಿನದೆ ಇದ್ದರೂ ಇರಬಹುದು.

ನಾನು ಕಂಡಾಗಲೆಲ್ಲ ಸ್ವಲ್ಪ ಬೆಂಕಿ ಇಣುಕಿ ಹೊಗೆಯಾಡಿದ್ದೆ ಜಾಸ್ತಿ.

ಬಿಸಿ ನೀರು ಇರಬಹುದೆ? ಅಥವಾ ಬೆಳಿಗ್ಗೆ ಗಂಜಿ ಇರಬಹುದೆ?


ಉದ್ದನೆಯ ಪುಸ್ತಕ ಹಿಡಿದ ಮಾಲಿನಿ ಹೊಗೆಯಾಡುತ್ತಿದ್ದ ಬೆಂಕಿ ಮುಂದೆ ಕುಳಿತು ಓದುತ್ತಾಳೆ ಎಂದುಕೊಂಡೆ. ಮದ್ಯ ಹಾಳೆ ತೆರದಾಗ ಅವಳ ದುಂಡನೆಯ ಅಕ್ಷರಗಳು ಮಸುಕು ಮಸುಕಾಗಿ ಕಾಣಿಸಿತು. ಏನೊ  ಯೋಚಿಸಿದವಳಂತೆ ಹಾಗೆ ಕಿತ್ತು ಒಲೆಗೆ ಹಾಕಿದಳು.

ಬೆಂಕಿ ಹಿಡಿಸಿದಳು ಜೋಡು ಪುಟಗಳು ಒಂದೊಂದರಂತೆ ಬೆಂಕಿಗೆ ಆಹುತಿಯಾಗುತ್ತಿತ್ತು.  

ಸುತ್ತ ಕಟ್ಟಿಗೆಗಳಿಲ್ಲ ಇದ್ದಿದ್ದು ಯಾರೊ ಕುಡಿದು ಎಸೆದ ಎರಡು ಹಸಿ ಎಳೆನೀರನ ಸಿಪ್ಪೆ,ದೊಡ್ಡ ಬೆಂಕಿ ಪೊಟ್ಟಣ.

  ಹೊಗೆ  ಮೂರಂತಸ್ತಿನಲ್ಲಿದ್ದ ನನ್ನನ್ನು ಸಮಿಪಿಸುವ ವೇಳೆ ಸ್ವಲ್ಪ ಬೆಚ್ಚಗಾಗಿರಬೇಕು.ಅವಳು ಬಿಸಿಲಿಗೆ ಬೆಚ್ಚಗಾದಳು.ಮೈಮುರಿದು ಒಳನಡೆದಳು.


ಸರೋಜಮ್ಮನ ಸ್ವಚ್ಚತಾ ಕಾರ್ಯ ಮುಗಿತು ಅನ್ನಿಸುತ್ತಿದೆ ಮೊರದಲ್ಲಿ ಒಂದಿಷ್ಟು ಒಳಗಿಂದ ಕಸತಂದು ಒಲೆಗೆ ಅರ್ಪಿಸಿದಳು.ಹೋಮಕ್ಕೆ ಹಾಕಿದ್ದ ತುಪ್ಪದಂತೆ ದಟ್ಟ ಹೊಗೆ ಎದ್ದಾಗ ಅದೇ ಪ್ಲಾಸ್ಟಿಕ್ ಮೊರ ಹಿಡಿದು ಬೀಸಣಿಗೆಯಂತೆ ಗಾಳಿಯಾಡಿಸಿದಳು.

ಲಟಕ್ ಅದರ ಹಿಡಿ ಮುರಿದಿದೆ..ಇನ್ನು ಅದು ಖಾಯಂ ಒಲೆ ಪಕ್ಕನೆ..

ಮಾಲಿನಿ ಅವಾಗವಗ ಬಂದು ಪ್ಲಾಸ್ಟಿಕ್ ತೊಟ್ಟಿ ಪೆಪರ್ ತಂದು ಬೆಂಕಿಗೆ ಹಾಕುತ್ತಿದ್ದಳು.

ನನಗೆ ಆಶ್ಚರ್ಯ, ದೇಶ ತುಂಬ ಮುಂದುವರಿದಿದೆ.ಇಂದಿನ ದಿನದಲ್ಲಿ ಅದೆಷ್ಟು ಸೌಕರ್ಯ ಬಂದಿದೆ, ಗ್ಯಾಸ್ ಸಿಲಿಂಡರ್,ವಿದ್ಯುತ ಒಲೆ,ಸೌರ ಒಲೆ..ಅದ್ಯಾವದನ್ನು ಕರಿದಿಸಲಾಗದ ಜನ ಇನ್ನು ಇದ್ದಾರಾ...

ಹಳ್ಳಿಗಳಲ್ಲಾದರೆ ಯತೆಚ್ಚವಾಗ ಕಟ್ಟಿಗೆ ಸಿಗುವುದೆಂದು ಜನ ಸೌದೆ ಒಲೆ ಬಳಸುವುದು ರೂಡಿ.

ರಾಜ್ಯದ ರಾಜಧಾನಿ ಜನ ಹೀಗೆ ಕಷ್ಟಪಡುತ್ತಿದ್ದಾರೆ.ನೋಡದವರಿಗೆ ಆಶ್ಚರ್ಯ, ಪ್ರತಿದಿನ ನೋಡುತ್ತಿದ್ದವನಿಗೆ ಬೇಸರ.


ಅಷ್ಟಕ್ಕೂಆ ಒಲೆಯಲ್ಲಿ ಬೇಯುತ್ತಿರುವುದು ಏನು...ಪ್ರತಿದಿನವೂ ನನಗೆ ಅಸ್ಪಷ್ಟವಾಗಿತ್ತು..

ಈ ತಲಾಸ್ ನಲ್ಲೆ ಬೇಟಿಯಾದವಳು ಮಾಲಿನಿ..

ಅವಳಿಗಾಗಿ ಸದಾ ಹೊರಗಡೆ ಇಣುಕುತ್ತಿರುವುದು ಅವಳ ಗಮನಕ್ಕೂ ಬಂತೊಂದು ದಿನ.

ಸಂಜೆ ಇನ್ನು ಕತ್ತಲಾವರಿಸಿಲ್ಲ.ಹೊಟೆಲ್ ನಿಂದ ಸ್ವಲ್ಪ ಬೇಗನೆ ಬಂದಿದ್ದೆ. ತಲೆ ನೋವಿನ ಕಾರಣ ರೂಮ್ ನಲ್ಲಿ ಕೂರಲಾಗದೆ, ಬಾಲ್ಕಾನಿನಲ್ಲಿ ನಿಂತಿದ್ದೆ..ಅಲ್ಲೂ ಮನಸ್ಸಾಗದೆ ಟೆರೆಸ್ ಮೇಲೆ ಹತ್ತಿ ನೂರು ಮೈಲಿ ಕಣ್ಣಾಡಿಸಿದೆ.ಬರಿ ಕಟ್ಟಡಗಳ ಪ್ರಪಂಚದಲ್ಲಿ ನಾನೊಬ್ಬ ಒಂಟಿ ಅನಿಸತೊಡಗಿತು.ನೋಟ ಕಿರಿದಾಗಿಸಿ ಕೆಳ ನೋಡತೊಡಗಿದೆ.ಕಿಕ್ಕಿರಿದ ಜನವಸತಿಯ ಮದ್ಯ ಅರ್ಧ ಎಕರೆ ಜಾಗದಲ್ಲಿ ಎರಡು ತಗಡಿನ ಮಾಡಿನ ರೂಮುಗಳು ಅಲ್ಲೆ ಹುಲ್ಲು ಮೆಳೆಗಳಿಂದ ಹಸಿರಾಗಿ ಕಾಣುತ್ತಿತ್ತು.


ಮಾಲಿನಿ ಹೊರಗಡೆ ನಿಂತಿದ್ದರೂ ಮುಖತಃ ಬೇಟಿ ಮಾಡಿ ಮಾತಾಡುವ ಅವಕಾಶ ಸಿಕ್ಕಿರಲಿಲ್ಲ. ಪಾಪ ಅವಳ ಓರೆಗಣ್ಣಿನ ನೋಟಕ್ಕೆ ನನ್ನ ಎತ್ತರವನ್ನು ದಿಟ್ಟಿಸಲಾಗಲಿಲ್ಲ ಸುಮಾರು ಐವತ್ತು ಅಡಿ ಎತ್ತರದಲ್ಲಿ ನಾನಿದ್ದೆ.


ಅಕಸ್ಮಾತ ಆದ ಘಟನೆಯದು  ಅಲ್ಲೆ ಹಸಿರು ಗಿಡಗಳ ಮದ್ಯ ಹಾವೊಂದು ಹರಿದಾಡುವುದು ನನ್ನ ಗಮನಕ್ಕೂ ಬಂತು.ಇನ್ನೇನು ಅವಳ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ನೇರ ಲಿಪ್ಟ್ ನಿಂದು ಇಳಿದು ಅವಳನ್ನು ಪಕ್ಕಕ್ಕೆ ಎಳೆದು ಕೊಂಡಿದ್ದೆ...ಇದೆ ಪರಿಚಯ ಮುಂದೆ ಸಂಬಂಧವಾಯ್ತು.


ಮರಾಠಿ ನನಗೆ ಅಷ್ಟಾಗಿ ಬರುತ್ತಿರಲಿಲ್ಲ ಅರ್ಧಂಬರ್ಧ ಹಿಂದಿಯಲ್ಲೆ ಸಂವಾದ ನಡೆಯುತ್ತಿತ್ತು.

ಅವರಿಗೂ ಯಾರು ಸಂಬಂಧಿಕರಿರಲಿಲ್ಲ  ..ಅಮ್ಮ ಮಗಳು ಮಾತ್ರ ಆ ಮನೆಯಲ್ಲಿ. ನನಗೂ

ಪೂರ್ವಪರ ಜಾಸ್ತಿ ವಿಚಾರಿಸುವುದು ಅಗತ್ಯವೆನಿಸಲಿಲ್ಲ.

ಅಸಲಿಗೆ ನಾನು ಅವಳ ವಶವಾಗಿದ್ದೆ. ಒಬ್ಬಂಟಿ ಪಯಾಣದಲ್ಲಿ ನನ್ನವರನ್ನು ನಾನು ಹುಡುಕಿಕೊಂಡಿದ್ದೆ..

ಈ ನಾಲ್ಕು ವರ್ಷದಲ್ಲಿ ಎಲ್ಲಾ ಮುಚ್ಚಿಟ್ಟು ಸಂಸಾರ ಮಾಡುತ್ತಿದ್ದ ಪರಿಣಾಮವೇ ಇನ್ನೊಂದು ಮದುವೆ..

ಸಿಂಚನಾನ ಕೊರಳಿಗೆ ದಾರ ಬಿಗಿದಿದ್ದು.



ಊರಲೆಲ್ಲ ಅದೇ ಮಾತು..

ಎನೊ ಕೃಷ್ಣ ನಿನ್ನ ಅತ್ತೆ ಮಗಳು ಬಾಂಬೆ ಸಾವುಕಾರನ ಕೈ ಹಿಡಿದವಳಂತೆ.ಮಾದುವೆಗಾದ್ರು ಹೊದ್ಯೊ ಇಲ್ವೊ..

ಎಲ್ಲಿ ನಿಮ್ಮಪ್ಪನ ಬುದ್ದಿ ಬಿಡ್ತಿಯೋ ಎಂದು ಮೂದಲಿಕೆ ಮಾತುಗಳನ್ನಾಡುತ್ತಾ ನಾರಾಯಣ ವರ್ಮರು ತಾವು ಉಟ್ಟ ಗೇಣು ಪಂಚೆಯನ್ನು ಇನ್ನೆರಡು ಸುತ್ತು ತಿರುಗಿಸಿದರು.


ಅವರ ಬಗ್ಗೆ ಮನದಲ್ಲಿ ಅಸಹ್ಯ ಭಾವ ಮೂಡಿದರೂ ತೋರಿಸಿಕೊಳ್ಳದೆ  

ಇಲ್ಲಾ ರಾಯರೇ..ಎಂದು ತಲೆಯಾಡಿಸಿದ್ದ.


ಎನ್ ಮಹಾರಾಯ ನಿಂಗೇನ್ ಕಮ್ಮಿ...ನಿನ್ನ ಮದುವೆ ಮಾಡ್ಕೊಂಡು ಊರಲ್ಲೆ ಇರಬಹುದಿತ್ತು.

ಅವರ ಚುಚ್ಚು ಮಾತಿಗೆ 

ನಾರಾಯಣ ವರ್ಮರೇ ಮದುವೆ ಅನ್ನೊದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ. ಋಣವಿಲ್ಲದೆ ಏನು ನಡೆಯಲ್ಲ, ದೊಡ್ಡವರಾದ ನಿಮಗೆ ಇದು ತಿಳಿಯದೆ...

ಈ ಬಾರಿ ಸ್ವಲ್ಪ ಖಾರವಾಗಿ ನುಡಿದ  ವೇದ ಕೃಷ್ಣ.


ಇಲ್ಲಿ ಹೃದಯವಂತು ಚೂರಾಗಿದೆ..ಮತ್ತೆ ಚೀರುವಂತೆ ಮಾಡಲು ತಾ ಮುಂದು ತಾ ಮುಂದು ಎಂದು ಮುನ್ನುಗ್ಗುವ ಭಾವನೆಗಳೆ ಸಾಕು..ಅದರಲ್ಲಿ ಈ ಮನುಷ್ಯ ಬೇರೆ,.ಉರಿಯುವ ಗಾಯಿಗೆ ಉಪ್ಪು ಸವರುತ್ತಿದ್ದಾನೆ.

ಅದರೂ ತನ್ನಲ್ಲೇನು ಕೊರತೆ ಕಂಡಿತು ಈ ಸಿಂಚನಾಳಿಗೆ...ದುಡ್ಡಿಗಾಗಿ ಹೋಗಿ ಹೋಗಿ ಪರದೇಸಿಯನ್ನು ಕಟ್ಟಿಕೊಂಡಳೆ...ಇರಲಿ ಬಿಡಿ ಅಲ್ಲಾದರೂ ಖುಷಿಯಾಗಿರಲಿ ಎಂದು ಅರೆ ಮನಸ್ಸಿನಲ್ಲೆ ಹಾರೈಸಿದನು.




ಮೊದಮೊದಲು ಸಿಂಚನ ಹೊರಗಡಿಯಿಡುತ್ತಿದ್ದಂತೆ ಎಲ್ಲ ರಹಸ್ಯಗಳು ಬಯಲಾಗಿದ್ದವು. ಮೂರ್ನಾಲ್ಕು ತಿಂಗಳಲ್ಲಿ ಹಿಂದಿಯ ಜೊತೆಯಲ್ಲಿ ಮರಾಠಿಯನ್ನು ಕಲಿತ್ತಿದ್ದಳು.ಪಕ್ಕದ ಮನೆಯವರ ಖಚಿತ ಮಾಹಿತಿಯ ಮೇರೆಗೆ ಮಾಲಿನಿಯ ಮನೆಗೆ ಬಂದಿದ್ದಳು.

ಅವರದ್ದು ಮದ್ದು ಹಾಕುವ ಮನೆ ನೀನೇನು ಅಲ್ಲಿ ತಿನ್ನೊದಾಗಲಿ ಕುಡಿಯೋದಾಗಲಿ ಮಾಡ್ಬೇಡಾ..ನಿನ್ನ ಗಂಡನ  ಹೀಗೆ ವಶೀಕರಣಮಾಡಿ ಮದುವೆ ಮಾಡಿಕೊಂಡಿದ್ದಳು.


ಕೊಟ್ಟ ಟೀ ಕಪ್ ನ್ನು ಸಾವಧಾನವಾಗಿ ಟಿಪಾಯಿಯ ಮೇಲಿಟ್ಟಳು.

ನಾನು ದೀರವ್ ವೈಪ್ ಎಂದಾಗ  ಮಾಲಿನಿ ಮೊಗದಲ್ಲಿ ಕೊಂಚವೂ ಬದಲಾವಣೆ ಕಾಣಿಸಲಿಲ್ಲ. ಅವಳಿಗೆ ವಿಷಯ ಮೊದಲೆ ತಿಳಿದಿರಬೇಕು..

ಅವಳ ನಡೆ ಒಂದಾಗಿ ಬಾಳುವ ಅನ್ನುವಂತಿತ್ತು

ನನ್ನ ಗಂಡನನ್ನು ನನಗೆ ಬಿಟ್ಟು ಕೊಡು ಎಂದಾಗ ಮಾತ್ರ ಕಣ್ಣು ಹುಬ್ಬು ಒಂದು ಮಾಡಿದ್ದಳು.

ನನಗೆ ಗಲಾಟೆ ಮಾಡಲು ಇಷ್ಟವಿಲ್ಲ, ನನ್ನ ಮಕ್ಕಳು ಮಲಗಿದ್ದಾರೆ ಎಂದು ಬಾಗಿಲು ಮುಚ್ಚಿ ಹೊರಕಳಿಸಿದ್ದಳು.


ಇಷ್ಟೆಲ್ಲ ರಾದ್ದಾಂತದ ನಡುವೆಯು ತನ್ನ ನೋವನ್ನು ಅಮ್ಮನಿಗಾಗಲಿ ,ತಮ್ಮನಿಗಾಗಲಿ ಹೇಳದೆ ಮರೆಮಾಚಿ ತಾನು ಸುಖವಾಗಿದ್ದೆ ಎನ್ನುವ ನಾಟಕ ಮಾಡುತ್ತಿದ್ದಳು.


ಮನೆಯ ಜ್ಯೋತಿ ಹೊರಹೋಗುತ್ತಿದ್ದಂತೆ  ಮನೆಗೆ ಜ್ಯೋತಿ ಹಾಕಿಸಿದ್ದರು. ಮದುವೆಗೆ ಬಂದ ಮುಯ್ಯಿ ಹಣದಿಂದ  ಹುಲ್ಲು ಮಾಡಿಗೂ ವಿದ್ಯುತ್ ದೀಪದ ಅಲಂಕಾರ.

ನಾಲ್ಕು ತಿಂಗಳ ಹಿಂದೆ ಅಳಿಯ ಬಂದಾಗ ತಂದಿದ್ದ ನಾಲ್ಕು ರೆಕ್ಕೆಯ ಪ್ಯಾನು, ಡೂಮ್ ಶೆಪ್ ನ ಟಿ.ವಿ. ಎರಡು ತಿಂಗಳು ಉರಿಸಿ ಬಿಲ್ ದುಬಾರಿಯಾಯಿತೆಂದು ಮೂರನೆ ತಿಂಗಳು ಶಾಲು ಹೊದಿಸಿ ಸನ್ಮಾನ ಮಾಡಿದ ರೀತಿ ಮೂಲೆಗಿರಿಸಿದ್ದರು.



ಮುಂಬಾಯಿಯಲ್ಲಿ ಅವಳಿಗೆ ನನ್ನ ಬಿಟ್ಟರೆ ಬೇರೆ ಅಸರೆ ಇಲ್ಲ.ಆದರೂ ಸ್ವಲ್ಪ ಭಯವಿದ್ದಿದಂತು ಖಂಡಿತ, ಏನಾದರೂ ಹೆಚ್ಚು ಕಮ್ಮಿ ಮಾಡಿಕೊಂಡರೆ...

ಅವಳ ಮನವೊಲಿಸಲಾಗಲಿಲ್ಲ, ಊರಿಗೆ ಕಳಿಸುವ ಪ್ರಯತ್ನವಂತು ವಿಫಲವಾಯ್ತು.


ಅವಳದೊಂದೆ ಹಟ ಬದುಕಿದ್ರು ಇಲ್ಲಾ ಸತ್ರು ಇಲ್ಲೇನೆ..ಈಗ ಎಲ್ಲಾ ಕಳೆಗುಂದುತ್ತ ಬಂದಿದೆ. ಮಾತಿಗೊಮ್ಮೆ ಬೇಸರದ ಜಗಳ ಸುಳಿದಾಡುತ್ತಿತ್ತು. ಸ್ವಾಭಿಮಾನ ಇಬ್ಬರಿಗೂ ತುಸು ಜಾಸ್ತಿನೇ..ಜೀವನದಲ್ಲಿ ಇಬ್ಬರೂ ಸೋಲೊಪ್ಪಲಾರರು.


ಒಂದು ದಿನ ಕುಡಿದ ಮತ್ತಿನಲ್ಲಿ ದೀರವ್ ಏನೆನೊ ಬಯ್ದು ಬಿಟ್ಟಿದ್ದ. ಅಷ್ಟಕ್ಕೆ ಸಾಡಟಿವ್ ಸ್ಲೀಪಿಂಗ ಟ್ಯಾಬ್ಲೇಟ್ ತಿಂದು ಮಲಗಿದ್ದಳು.

ಪಾಪ ಹುಡುಗಿಯ ಹುಚ್ಚಾಟಕ್ಕೆ  ಏನು ಅರಿಯದ ಭ್ರೂಣ ಮಡಿಲಿಗೇರದೆ ಮಡಿಯಬೇಕಾಯಿತು... 

ಅವಳೂ ತವರೂರ ಹಾದಿ ತುಳಿಯಬೆಕಾಯಿತು..


ಸುಮಾರು ವಯಸ್ಸು ನಲವತ್ತು ...ನಲವತೈದು ಆಗಿರಬಹುದು. ಅಲ್ಲಲ್ಲಿ ಬಿಳಿ ಕೂದಲು ವಯಸ್ಸನ್ನು ಅಂದಾಜಿಸಲೆಂದೆ ಹುಟ್ಟಿಕೊಂಡವು.  ನೀಟಾಗಿ ಶೇವ್ ಮಾಡಿದ ಕೆನ್ನೆಯ ಮೇಲೆ ಅಲ್ಲೊಂದಿಷ್ಟು ನೆರಿಗೆಗಳು,ಕನ್ನಡಕದ ‌ನೇರಕ್ಕೆ ದೃಷ್ಟಿ, ಅವನ ಮಾತುಗಳು ಖಡಕ್ ಆಗಿದ್ದವು.


ಹುಡುಗಿಗೆ ಇನ್ನು ಚಿಕ್ಕ ವಯಸ್ಸು , ಬೇರೆ ಸಂಬಂಧ ನೋಡಿ..ಹಾಗಂತ ನನಗೆ ಇಷ್ಟವಿಲ್ಲ ಅಂತಲ್ಲ.ಅವಳಿಗೂ ಆಸೆಗಳಿರುತ್ತದೆ..ಹುಡ್ಗಿನು ಒಂದ ಮಾತು ಕೇಳಿ ಅವಸರ ಬೇಡ..

ಜೆಂಟಲ್ ಮ್ಯಾನ್ ನ ನುಡಿಗಳಿಗೆ ಅದಾಗಲೇ ಮನೆಯವರ ಒಪ್ಪಿಗೆ ಸಿಕ್ಕಿತ್ತು. ಆದ್ರೂನು ಖುದ್ದಾಗಿ ಹುಡುಗಿಯ ಮನದಿಚ್ಚೆಯ ಮಾತು  ಅವನಿಗೆ ಬೇಕಾಗಿತ್ತು.


ಅವಳ ಜೊತೆ ಮಾತಾಡೊಕೆ ಅಂತನೆ ದೇವಸ್ಥಾನಕ್ಕೆ ಬಂದಿದ್ದರೂ ಅವಳೇನು ಮಾತಾಡಿರಲಿಲ್ಲ.


ಅವಳು ಮನಸ್ಸಿಲ್ಲದ ಮನಸ್ಸಲ್ಲಿ ಒಪ್ಪಿಗೆ ಸೂಚಿಸಿದ್ದರೂ ಅದಕ್ಕೆ ಕುಂದು ಬಾರದಂತೆ ನಡೆದು ಕೊಂಡಿದ್ದಳು.ಇದನ್ನು ಆ ಮಹಾನುಭಾವ ಉಹಿಸಲಾಗಲಿಲ್ಲ.. ಇಂದು ಅವಳ ಮಾರ್ಗ ಅಸಹಯಾಕತೆಯಿಂದ  ಕೂಡಿತ್ತು.

ಇಲ್ಲಿ ನಮ್ಮ ಲೆಕ್ಕಚಾರದಂತೆ ಏನು ನಡೆಯದು. ಬದುಕು ಬಂದಂತೆ ಸ್ವೀಕರಿಸುವುದು ಬುದ್ದಿವಂತಿಕೆ  ಅಷ್ಟೇ..



ಎರಡನೆಯ ಮದುವೆ ವಿಷ್ಯ ಬಂದಾಗ ಯಾರ ಮಾತು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ.ಅದರ ಕಲ್ಪನೆಯು ಅವಳಿಗಿರಲಿಲ್ಲ.. ಕಳೆದ ಮೂರುವರೆ ವರ್ಷ ಅವನಿಗಾಗಿ ಕಾದಿದ್ದಳು..ಕೇವಲ ಆರು ತಿಂಗಳ ಹಿಂದಷ್ಟೇ ಮನಸ್ಸು ಬದಲಾಯಿಸಿದಳು..ಇಂದು ಎಲ್ಲವೂ ಮುರಿದು ಬಿದ್ದಿದೆ. ಕೇವಲ ಕಾನೂನಿಗೆ ಅನ್ವಹಿಸುವಂತೆ ಡೈವರ್ಸ ಪೇಪರ್ ಗೆ ಸಹಿ ಅಷ್ಟೇ ಬಾಕಿ.

  

ಅವನ ಕೂಸನ್ನು ಅವಳು ಜೋಪಾನ ಮಾಡಿದಳು.

ಅವನಿಗಲ್ಲದಿದ್ದರೂ "ಅವನಿ"ಗಾಗಿ  ಅವಳ ಮುದ್ದು "ಅವನಿ"ಗಾಗಿ


ಇಂದು " ಅವನಿ" ಮಾತ್ರ ಅವಳ ಪ್ರಪಂಚ.ಅವಳಿಗಾಗಿ ಮನಸ್ಸು ಕಲ್ಲು ಮಾಡಿಕೊಂಡಿದ್ದಳು, ನಿರ್ಧಾರ ತೆಗೆದು ಕೊಂಡಿದ್ದಳು.


                   ************

  ಘಂಟೆ  ಮೂರು ಮೂವತ್ತು  ಅರ್ಧ ಬಾಟಲ್ ಗ್ಲೂಕೋಸ್ ದೇಹ ಸೇರಿತ್ತಷ್ಟೇ ಒಂದು ಅಂದಾಜಿನ ಪ್ರಕಾರ ಸಂಜೆ ಐದರ ಹೊತ್ತಿಗೆ ಶ್ರೀಕಾಂತ ಬಂದು ಮನೆಗೆ ಕರೆದುಕೊಂಡು ಹೋಗುವನು. 

ಅಬೋಷನ್ ಆದಗಿನಿಂದ ರಕ್ತ ಸ್ರಾವವಾಗಿ ತುಂಬ ಸುಸ್ತಾಗುತ್ತಿತ್ತು. ಪ್ರತಿವಾರ  ಗ್ಲೂಕೋಸ್ ಹಾಕಿಸಿಕೊಳ್ಳಲು ಒಂದು ತಿಂಗಳಿಂದ ಅಮ್ಮನ ಜೊತೆ ಬರವಳು. ಇಂದೊಬ್ಬಳೆ ಬಂದಿದ್ದರಿಂದ ಎಲ್ಲದಕ್ಕೂ ನರ್ಸ್ ನ ಅವಲಂಬಿಸಿದ್ದಳು.


ಅವಳು ಸಿಂಚನಾ ಅಲ್ವ ....

ಹೌದು ಜೊತೆಯಲ್ಲಿ ಯಾರು ಇಲ್ಲ..ಮಲಗಿದ್ದಲ್ಲೆ ಕೈ ತಡಕಾಡಿದಳು.ಪ್ಲಾಸ್ಟಿಕ್ ಕವರೊಂದು ಜಾರಿ ಬೆಡ್ ನಿಂದ ಕೆಳ ಬಿದ್ದಗ ಎತ್ತಿಕೊಟ್ಟ ವೇದ ಕೃಷ್ಣ..

ಅವಳ ದುರಂತದ ಕಥೆ ಕೇಳಿ ಅವನು ತುಂಬ ನೊಂದು ಕೊಂಡಿದ್ದ.

ಅವನ ಸಾಂತ್ವನದ ಮಾತಿಗೆ ಸುಮ್ಮನೆ ನಸುನಕ್ಕಿದ್ದಳು.ಅವನಿದ್ದಷ್ಟು ಹೊತ್ತು ಹಳೆಯದನ್ನೆಲ್ಲ ಮರೆತಿದ್ದಳು.ಮನೆಗೆ ಹೊರಡುವಾಗ  ಶ್ರೀಕಾಂತ ಸ್ವಲ್ಪ ಲೇಟಾಗಿ ಬರಬಾರದಿತ್ತೆ ಅಂದು ಕೊಂಡೆ ಆಟೊ ಹತ್ತಿದಳು.



ಎಲ್ಲ ಮಾಮೂಲಾಗಲು‌ ಎರಡು ತಿಂಗಳಾಯಿತು. 

ದೀರವ್ ಸಹ ಬಂದಿದ್ದ , ರಾಜಿ ಪಂಚಾಯಿತಿ‌ ಎಲ್ಲಾ ಮುಗಿದ ಮೇಲೆ ಇಬ್ಬರೂ ಆ ನಿರ್ಧಾರ ಒಪ್ಪಲೇ ಬೇಕಾಯಿತು.

ಅವಳು ಊರಲ್ಲೆ ಇರಲಿ ಅವಳ ಖರ್ಚು ವೆಚ್ಚ ಅವನೇ ಭರಿಸಬೇಕು..

ಹಣವೇನು ತಿಂಗಳು ತಿಂಗಳು ಬರುತ್ತಿತ್ತು.ಅದರೆ ಗಂಡನ ಪ್ರೀತಿಯಿಂದ ವಂಚಿತಳಾಗಿದ್ದಳು.


ಅವನಿಗೊಂದೆ ಸಿಟ್ಟು ತನ್ನ ಬಂಡವಾಳ ಎಲ್ಲರೆದುರು ಬಯಲಾಯಿತು..

ಅವಳ ಆ ತಪ್ಪಿಗೆ ತಾನು ಬದಲಾಗುವರೆಗೆ ಕಾಯಿತಿರು.ಅಲ್ಲಿ ತನಕ ಕೊರಗುತಿರು ಎಂದು ಹೇಳಿದ್ದ.


ಅವಳು ಪ್ರತಿ ದಿನ ದೇವರ ಬೇಡುತ್ತಿದ್ದದೊಂದೆ..ಹತ್ತಾರು ದೇವಸ್ಥಾನ ಸುತ್ತಿದಾಯ್ತು.. ಇಂದು ಅವನ ಒಲಿಸಿಕೊಳ್ಳಲು ಬ್ಲಾಕ್ ಮ್ಯಾಜಿಕ್ ಅಂದ್ರೆ ಭಾನುಮತಿಯ ಮೊರೆ ಹೋಗಿದ್ದಳು.

ಎಲ್ರು ದುಡ್ಡು ಕಿತ್ಕೊಂಡವರೇ  ಯಾವುದು ಪರಿಣಾಮ ಬೀರಿದ್ದಿಲ್ಲ.

ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡವರು ಒಂದಷ್ಟು ಜನವಾದರೆ ನಂಬಿ ಕೆಟ್ಟವರು ಬಹಳ ಮಂದಿ. ಈ ವಶೀಕರಣ,ಮಾಟ,ಮಂತ್ರ ಯಾವುದೋ ಕಾಲದಿಂದ ಇಂದಿನವರೆಗೂ ಜನರ ಮನಸ್ಸಲ್ಲಿ ಉಳಿದು ಬಂದಿದೆಯೆಂದರೆ ಕಾರಣ ಭಯ.. ಮೂಢ ಭಯವಷ್ಟೆ.


ಅವಳ ಒಳಿತಿಗಾಗಿ ಪ್ರಯತ್ನಿಸಿದವರು ತುಂಬ ಜನ..ಪಾಪ ಅವಳ ಹಣೆಬರಹವೇ ಅಷ್ಟೆ ಯಾರಿಂದಲೂ ಬದಲಾಯಿಸಲಾಗದ್ದು.

ತನ್ನ ಮಗಳಿಗೆ ಒಂದು ಮಗುವಾದರೆ ..

ಆ ಮಗುವಿಗಾದ್ರು ಅಳಿಯ ಮಗಳು ಕೂಡಿ  ಬಾಳಬಹುದು.

ಐಡಿಯಾ ಎನು ಚೆನ್ನಾಗಿದೆ ಅದ್ರೆ ಕಾರ್ಯರೂಪಕ್ಕೆ ತರೊದು  ಸ್ವಲ್ಪ ಕಷ್ಟ...


ಅವರು ಮಹನ್ ಜ್ಯೋತಿಷ್ಯ ಶಾಸ್ತ್ರಜ್ಞರು, ವೇದ ಪುರಾಣ ಕರಗತ ಪಂಡಿತರು ಪೂಜಾ ಕೈಂಕರೆಗಳಿಂದ ಊರಲ್ಲಿ ಪ್ರಸಿದ್ದರಾದವರು.

ಸಿಂಚನಾ ಇತ್ತೀಚೆಗೆ ಪ್ರತಿ ಶುಕ್ರವಾರ ಪೂಜಾ ಮಾಡಿಸುತ್ತಿದ್ದಳು..ಅವರಿಂದ ಹೇಳಿಸಿದರೆ.

ಅರ್ಚಕರ ಮನಸಾಕ್ಷಿ ಶ್ರೀಕಾಂತನ ಮಾತು ಮೊದಲು ಒಪ್ಪಲಿಲ್ಲ..ಹೀಗೆಲ್ಲ ಮಾಡಿದರೆ ಶಾಸ್ತ್ರಕ್ಕೆ ಸುಳ್ಳಾಡಿದಂತಾಗಿ ಪಾಪಾ ಪ್ರಜ್ಞೆ ಸದಾ ಕಾಡುತ್ತಿರುತ್ತದೆ.


ಕೈಯಿಂದ ಜಾರಿದ ಕವಡೆ ನಾಲ್ಕು ದಿಕ್ಕುಗಳಲ್ಲೂ ಬಿಡಿ ಬಿಡಿಯಾಗಿ ಬಿದ್ದಿದ್ದವು..ಬ್ರಾಹ್ಮಣೊತ್ತಮರು ಕಣ್ಣು ಮಿಟುಕಿಸಿ ಹೇಳಿದರು..ನಿನಗೆ ಸಂತಾನಭಾಗ್ಯವಿದೆ...ಪುತ್ರ ಪ್ರಾಪ್ತಿಯಿಂದ ಸಕಲ ಕಷ್ಟಗಳು ಕರಗಿ ನೀರಾಗುವುದು..ಎಲ್ಲ ಒಳಿತಾಗುವುದು.ಇದರಲ್ಲಿ ನಿನ್ನ ಪ್ರಯತ್ನ ಮಹತ್ವವಾದುದು.


ಇಷ್ಟೆಲ್ಲಾ ಸಂಕಷ್ಟದಲ್ಲೂ ಅವಳು ತಾಯಿಯಾದಳು.ಪುತ್ರನ ಬದಲಿಗೆ ಪುತ್ರಿಯ ಹಡದಿದ್ದಳು.ಮಗುವನ್ನು ಕಾಣುವ ಬಯಕೆಯಿಂದ ದೀರವ್ ಬಾಂಬೆಯಿಂದ ಊರಿಗೆ ಹೊರಟಿದ್ದ.  ಕಾರ್ ಎಕ್ಸಿಡೆಂಟ್ ಆಗಿ ಮೋರಿ ಮರೆಗೆ ಬಿದ್ದವನ ಅದ್ಯಾರೋ ಆಸ್ಪತ್ರೆ ದಾಖಲಿಸಿದರು.ಎಡಗಾಲಿನ ಮೊಣಕಾಲಿನಿಂದ ಕೆಳಗೆ ರಾಡ್ ಅಳವಡಿಸಲಾಗಿತ್ತು.

ಇದೆಲ್ಲ ಕಾರಣಕ್ಕೂ ಮಗು ಅವನಿಗೆ ಅಪಶಕುನದ ವಸ್ತುವಾಯ್ತು. ಮೊದಲು ಸಿಂಚನ ಈಗ ಅವನಿ ಇವರಿಬ್ಬರು ತನ್ನ ಅವನತಿಗೆ ಕಾರಣವೆಂದು ನಂಬಿ ಹೋಗಿದ್ದ.

ಅವನ ಮನದಲ್ಲಿ ಇಬ್ಬರ ಬಗ್ಗೆ ಕಿಂಚಿತ್ತು ಆಸೆಯಾಗಲಿ,ಪ್ರೀತಿಯಾಗಲಿ ಮೂಡಲೇ ಇಲ್ಲ.



ಇಂದು ನನ್ನ ಬಾಳಿಗೆ ಅರ್ಥ ನೀಡಲು ಮಹಾನುಭಾವನೊಬ್ಬ  ಮುಂದೆ ಬಂದಿದ್ದ ..ಮಗಳು ಅವನಿಗೆ ತಂದೆ ಸ್ಥಾನ ನೀಡಲು ಅವನು ಸಿಧ್ದನಿದ್ದ. ಹೇಗಿದ್ದರೂ ನನ್ನದು ಮುಗಿದ ಬಾಳು , ಅವನಿಯ ಭವಿಷ್ಯ ಕಣ್ಮುಂದೆ ಬಂತು. ಒಪ್ಪಿಗೆಯಂತು ನೀಡಿದ್ದಾಯ್ತು..ಅವನ ಮೇಲೆ ಗೌರವ ಭಾವನೆ ಹೆಚ್ಚಾಯಿತೇ ಹೊರತು ಪ್ರೀತಿ ಮೂಡಲಿಲ್ಲ.

ಮನಸ್ಸೇಕೊ ಅವನಿಗೆ ಶರಣಾಗುತ್ತಿಲ್ಲ..

ಅದೆಷ್ಟೋ ಅಪ್ಪುಗೆಯ ನಂತರವೂ ಆ ಬಂಡೆ ಸ್ಥಿರವಾಗಿದೆಯೆಂದರೆ ಅಲೆಗಿರುವ ಪ್ರೇಮ, ಆ ದುಂಡು ಕಲ್ಲಿಗೆ ದಂಡವಾಗಿ ಹೋಯಿತೇ?   ಇಲ್ಲಾ ಇನ್ನೆನನ್ನೊ ಬಯಸಿ ಅಡ್ಡನಿಂತಿರುವ  ಬಂಡೆಯನ್ನು ದಾಟಲಾಗದೆ ಹಿಂದೆ ಸರಿಯುತ್ತಿದೆಯೇ?


ಪ್ರೀತಿಯೆಂದರೆ ಹೀಗೆ 

ಅಲೆಯ ಅಲೆದಾಟವೋ. ಬಂಡೆಯ ಜಡತ್ವವೋ.

ಉತ್ಕಟ ಉತ್ಕರ್ಷದಲ್ಲಿ 

ಆರ್ಭಟಿಸಿದ ಝರಿಯು ಸೌಮ್ಯವಾಗಿ ಹಾಲ್ನೊರೆಯಲಿ ಹರಿದಿದ್ದು ಸಹ ನೋಡಿದೆ.

ತನಗೂ ಇದಕ್ಕೂ ಸಂಬಂಧವೇ ಇಲ್ಲಾ ಎನ್ನುವಂತೆ ನಿಶ್ಚಲವಾಗಿ ನಿಂತ ಬಂಡೆ ಕಲ್ಲಿನ ಜೀವನವೂ ಸೋಜಿಗವೇ..


ಉಳಿಸಿಕೊಳ್ಳಲಾಗದ ಯಾವ ಬಂಧಗಳಿಗೂ ಭಾವನೆಯನ್ನು ಬೆಸೆಯಬಾರದು.ಕಳೆದುಕೊಂಡು ಪರಿತಪಿಸಿ ಹಾರೈಸುವ  ಆ ಮನದ ನೋವು ಇನ್ನೊಬ್ಬರನ್ನು ನೆಮ್ಮದಿಯಾಗಿ ಇರಿಸಲಾರದು. ತಾಳ್ಮೆಯ ಈ ಪರಿ ಕೆಲವೊಮ್ಮೆ ಅಸಹನೀಯ ಎನಿಸಿದರೂ ಪವಿತ್ರ ಪ್ರೇಮದ ಮುಂದೆ ಎಲ್ಲವೂ ಗೌಣ.


ಮುಂಗೈಯನ್ನು ಕುರ್ಚಿಯ ಕೈಗೆ ಆನಿಸಿ ಎರಡು ಬೆರಳುಗಳಿಂದ ಹುಬ್ಬನ್ನು ಒಂದುಗೂಡುವಂತೆ ಉಜ್ಜಿ ಅದೆಷ್ಟು ಯೋಚಿಸಿದರೂ ಯಾವುದೇ ಸ್ಥಿರ ನಿರ್ಧಾರಕ್ಕೆ ಬರಲಾಗಲಿಲ್ಲ.

ಎದೆಯಾಳದಿಂದ ಏಳುವ ನೋವಿನ ಅಲೆಗಳು

ಕಣ್ಣವೆಯಲ್ಲಿ ಉಕ್ಕಿಸುವುದು ಬರಿ ನೀರಲ್ಲಾ..

ಹೆಪ್ಪುಗಟ್ಟಿದ ಭಾವಗಳನ್ನ

ಮುಪ್ಪಾದರು ವಾಸಿಯಾಗದ ನೋವನ್ನ

ಸುಪ್ತ ಹೃದಯದ ಆರ್ದ್ರತೆಯನ್ನ.

ಒಣ ಮನಸ್ಸಿನ ಅಸಾಹಯಕ ಅಳಲನ್ನ

ಒತ್ತರಿಸಿ ಬಿಕ್ಕಳಿಸುವ ದುಃಖವನ್ನ...


ಕುಸಿದಿದ್ದ ಅವಳನ್ನು ಹಸಿದಿದ್ದ ಅವನಿ ಅತ್ತು ಕರೆದಿದ್ದಳು.. ಎದೆಹಾಲು ನೀಡುತ್ತಿದ್ದವಳನ್ನು ಕಾಲಿಂದ ಒದ್ದು ತರಾಟೆಗೆ ತೆಗೆದುಕೊಂಡಗ ಮಾತ್ರ ಬಾಹ್ಯ ಪ್ರಪಂಚದ ಸುಖ ಅನುಭವಿಸಿದಳು.


ಬಾವನೆಗಳ ತಿಕ್ಕಾಟದಲ್ಲಿ ಸಿಂಚನಾ ರೋಸಿ ಹೋಗಿದ್ದಳು. ತಲೆ ಸಿಡಿದೆ ಹೋಗುವಂತ ತಲೆನೋವಿಗೆ  ಅಮ್ಮ ತಂದಿಟಿದ್ದ ಹಾಲಿಲ್ಲದ ಕಡು ಕಪ್ಪಿನ ಟೀ ತುಟಿಗೇರಿಸಿ ಎರಡು ಸಿಪ್ ಚಪ್ಪರಿಸಿದಳಷ್ಟೇ..


" ಸಿಂಚು  ಅವರು ಮದುವೆಗೆ ಒಪ್ಪಿದರಾ? 

ನೀನೇನು ಅಡ್ಡ ಮಾತಾಡಿಲ್ಲ ತಾನೆ? 

ಅವರೇನು ಕೇಳಿದರು?"

ಹೀಗೆ ಒಂದರ ಮೇಲೊಂದರಂತೆ ಪ್ರಶ್ನೆ ಕೇಳುತ್ತಿದ್ದರೆ ಸಿಂಚು ಮೌನಿಯಾಗಿದ್ದಳು.


ಅಮ್ಮನ ಸ್ವರ ಸ್ವಲ್ಪ ಜೋರಾದಗ..

"ನಾನು ಒಪ್ಪಿದ್ದಿನಿ ಅವರೂ ಒಪ್ಪಿದ್ದಾರೆ ಮದುವೆ ಮಾಡ್ಸೊಕೆ ರೆಡಿಯಾಗಿ" ಎಂದು ಒಳ ನಡೆದಳು.


ಸುಧಾಕರ್ ಗೆ ಅವಳು ನೀಡಿದ್ದು ಒಲ್ಲದ ಮನಸ್ಸಿನ ಒಪ್ಪಿಗೆ ಅಂತ ಅನಿಸಿರಲಿಲ್ಲ..ಅವನು ಕೇಳಿದ ಎಲ್ಲಾ ಪ್ರಶ್ನೆಗೂ ಅವಳು ಯೋಚಿಸಿಯೇ ಉತ್ತರಿಸಿದ್ದಳು. ಸುಮನ ಕಳೆದುಕೊಂಡು ಇಷ್ಟು ವರ್ಷ ಕಳೆದರೂ  ಮದುವೆಯ ಬಗ್ಗೆ ಯಾವ ಆಸೆಯು ಇದ್ದಿರಲಿಲ್ಲ..  ಮೂರು ತಿಂಗಳ ಹಿಂದೆ ಡೆಂಗ್ಯೂಗೆ ತುತ್ತಾಗಿ ಅಸ್ಪತ್ರೆಯ ಬೇಡ್ ಮೇಲೆ ಕಳೆದ ಹದಿನೈದು ದಿನಗಳು ..

ಆ ಹದಿನೈದು ದಿನಗಳೇ ಇಂದು ಒಂಟಿತನದ  ನೆನಪು ಮೂಡಿಸಿದ್ದವು.


ಅತ್ತ  ಓದನ್ನು ಮುಂದುವರಿಸಲಾಗದೆ.ಇತ್ತ ಒಳ್ಳೆಯ ಕೆಲಸವೂ ಸಿಗದೆ, ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಶ್ರೀಕಾಂತ, ಮಕ್ಕಳು ಎದೆಯೆತ್ತರಕ್ಕೆ ಬೆಳೆದು ನಿಂತರೂ ನೆಮ್ಮದಿ ಕಾಣದ ತಾಯಿ..ಗಂಡನಂತೆ ಬಂದು ಬದುಕು ಹಿಂಡಿದ ದೀರವ್,ಇಂದಿಗೂ ಎದೆಯಲ್ಲಿ ಪ್ರೀತಿ ಬಚ್ಚಿಟ್ಟುಕೊಂಡ ಮುದ್ದು ಕೃಷ್ಣ, ಗೌರವ ಘನತೆ ನೀಡಲು ಮುಂದೆ ಬಂದ ಮಹಾನುಭಾವ ಸುಧಾಕರ್. ಹಾಲುಗಲ್ಲದ ಬಟ್ಟಲುಗಣ್ಣಿನ ಪೋರಿ ಅವನಿ.. ಹೀಗೆ ಎಲ್ಲರ ಮುಖ   ಮೂಡಿ ಮರೆಯಾಗುತ್ತಿದ್ದರೆ.ಈ ಜಗತ್ತೆ ಒಂದು ನಾಟಕರಂಗದಂತೆ ಭಾಸವಾಗುತ್ತಿತ್ತು.ಅಲ್ಲೆ ನಿದ್ದೆ ಮಂಪರಿಗೆ ಜಾರಿದಳು.

ಕತ್ತಲು ಕವಿದು ಬೆಳಕು ಹರಿದು ಹಕ್ಕಿಗಳ ಇಂಚರ ದುಂಬಿಗಳ ಝೇಂಕಾರ ಎಲ್ಲಾ ಮುಗಿದು ಭೂಮಿ ತಾಪ ಏರುತ್ತಿತ್ತು.


ಗಾಳಿಗೆ ಈಚಲು ಮರದ ಗರಿಗಳು ಓಲೈಸುತ್ತಿದ್ದವು..ಹೊರಗಡೆ ಒಲೆಯಲ್ಲಿ ಎಸರಿಗಿಟ್ಟ ನೀರು ಬಿಸಿಲಿಗೆ ಕುದಿಯುತ್ತಿದ್ದ ಹಾಗೆ ಸೂರ್ಯನ ತಾಪ. ಮದ್ಯಾಹ್ನ ಊಟಕ್ಕೆ ನಾನಿಲ್ಲಾ‌  ದೇವಸ್ಥಾನಕ್ಕೆ ಹೊರಟಿರುವೆ ಎಂದಿದ್ದಕ್ಕೆ ಮಡಿಕೆಗೆ ಎರಡು ಹಿಡಿ ಅಕ್ಕಿ ಕಮ್ಮಿ ಬಿತ್ತು.


ಹಂಚಿನ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತಗೆ ಇನ್ನೆರಡು ವರ್ಷದಲ್ಲಿ ಪರ್ಮನೆಂಟ ಮಾಡುವ ಭರವಸೆ ಸಿಕ್ಕಿದ್ರಿಂದ ಮದುವೆ ಬಗ್ಗೆ ಮನಸ್ಸು ಮಾಡಿದ್ದು ಸಹಜ. ಅಕ್ಕನ ಬಗ್ಗೆ ಸಿಟ್ಟು ತಾತ್ಸರ ಏನಿದ್ದರೂ ಒಳಗೊಳಗೆ.. ಮುಕ್ತಿ ಸಿಗದ ಆತ್ಮ ಅವನೊಳಗಿತ್ತು.

ಸಿಂಚು ಹೋಗುವಾಗ ಶ್ರೀಕಾಂತನಿಗೆ ಊಟ ಕೊಟ್ಟುಬಿಡು ಎಂದು ದೈನೆಂದಿನ ತಮ್ಮ ಜವಾಬ್ದಾರಿಯನ್ನ ಮಗಳಿಗೆ ವಹಿಸಿ ನೆರಮನೆ ಕಡೆ ಪ್ರಯಣ ಬೆಳಸಿದರು.


ಸಿಂಚು ಹುಗ್ಗದ ತುಂಬ ಹುಗ್ಗಿ ತುಂಬಿದಂತೆ ಎರಡು ಸೌಟು ಅನ್ನದ ಜೊತೆ ಸಾರು ಸೇರಿಸಿ..ಗೊರಟು ಮಾವಿನಕಾಯಿ ಸೈಡಲಿರಿಸಿ..ಟಿಪಾನ್ ಬಾಕ್ಸ ರೆಡಿಮಾಡಿ  ವಾಚ್ ಮ್ಯಾನ್ ಕೈಗೆ ಕೊಟ್ಟು ದೇವಸ್ಥಾನದ ಕಡೆ ನಡೆದಳು.


Monday, 13 March 2023

ಹುಡುಕದಿರು

 

ಕರೆಯ ಬೇಡವೇ ನನ್ನ ಸೆಳೆಯಬೇಡವೆ
ಮೌನವಾಗಿ ಇರುವೆ ನಾ..ನಿನ್ನ ಕರೆಗೆ ನಾ

ಕಾಡು ನೀ..ಬೇಡು ನೀ ಎಷ್ಟೆ ಸನಿಹ ಬಂದರೂನು
ಓಡುತಿರುವೆ ಹಿಡಿಯಲಾರೆ ನೀ

ನನ್ನ ಹಟದ ಮುಂದೆ
ನಿನ್ನ ಪ್ರೀತಿಯೆಂದು  ಹಿಂದೆ..ಅದು ಉರಿವ ದೊಂದೆ

ಅರ್ಥವರಿಯದೆ ವ್ಯರ್ಥ ಮಾಡದಿರು
ನಿನ್ನ ಜೀವನ ...ನಿನ್ನ ನೋವನ್ನ..

ಚಿನ್ನ ನೀನು ಜ್ವಾಲೆ ನಾನು
ಕರಗಬೇಡ ಹತ್ತಿರ ಸುಳಿದು..ಬರಿ ಇದ್ದಿಲೆ ಉಳಿವುದು

ಕಂಗಳಿಂದ ಜಾರೋ ಕಂಬನಿ ನೀನು
ಹುಂಬ ನಾನು..ಏನು ಅರಿಯೆನು..
ಮತ್ತೆ ಹುಡುಕದಿರು.. ನೀ ಜಾರುವ ಹನಿಯ
ಮತ್ತೆ ಹುಡುಕದಿರು.....


Saturday, 11 July 2020

ಕರಿಮಣಿ ಮಾಲಿಕ ನಿ ನಲ್ಲ



ಕರಿಮಣಿ ಮಾಲಿಕ ನೀ ನಲ್ಲ.

ಇಂದೇಕೋ ಹೃದಯ ಸೋತಿದೆ
ಮೌನದಲ್ಲೂ ಕೇಳದ ಸಾವಿರ ಮಾತಿದೆ
ತೀರವೆ ಇರದ ದೂರ ಬಾಳಲಿ ಬೆರೆತಿದೆ.....


ನಾನು ನನ್ನ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ ನನ್ನ ನಿರ್ಧಾರ ಸರಿಯೋ ತಪ್ಪೋ..ಕೊರಳಲ್ಲಿ ತೂಗುವ ಮಂಗಲ್ಯಕ್ಕೂ ನನ್ನೊಳಗಿನ ಭಾವನೆಗಳಿಗೂ ಏನು ಸಂಭಂದ.ವಿಧಿ ನಿಶ್ಚಯಿಸಿರುವ ಬಾಳಿನಲ್ಲಿ ನನ್ನದು ಒಂದು ಪಾತ್ರವೆಂದು ಸುಮ್ಮನಿರಲೇ..ಇಲ್ಲ ನನ್ನ ಹಕ್ಕಿಗಾಗಿ ಹೋರಾಡಲೇ..
ಹೋರಟ ಯಾರೊಂದಿಗೆ ...ನನ್ನವರೊಂದಿಗಿನ ಹೋರಾಟದಲ್ಲಿ ಜಯ ಅಪಜಯ ಎರಡೂ ಒಂದೆ.
ಮನ ಕರಗಿ ಕೊರಗಿತಲ್ಲ..
ಈ ಕರಿಮಣಿ ಮಾಲಿಕ ನೀನಲ್ಲ.
ನಿಶ್ಚಯ ದೃಡ ನಿರ್ಧಾರವನ್ನೆ ಮಾಡಿದ್ದಳು. ಯಾರಿಗೂ ಬಾರದಿರಲಿ ಈ ದೌರ್ಭಾಗ್ಯ ತನ್ನ ಮಾಂಗಲ್ಯವನ್ನು ತಾನೆ ಕಿತ್ತೆಸೆಯುವ ದುರ್ವಿಧಿ.


ಮಲ್ಲಿಗೆಯ ಮುಡಿದವಳು
ಮೆಲ್ಲಗೆ ನಡೆದವಳು
ಎಲ್ಲಿಗೆ ಅಂತ ತಿಳಿಸದವಳು..
ಗಲ್ಲವ ಹಿಂಡಿದ ಸಲುಗೆಯಲ್ಲೆ
ಎಲ್ಲವ ಉಸುರಿದವಳು ಸನ್ನೆಯಲ್ಲೆ..


ಅವಳ ಕೋಮಲ ಸ್ಪರ್ಶಕ್ಕೆ ಮನಸೋತ ನೀರವ್ ಗೆ ಎನೊಂದು ಅರ್ಥವಾಗಲಿಲ್ಲ.ಕನಸಿನ ಕನವರಿಕೆಯಲ್ಲಿ ಮನಸ್ಸು ಗರಿಬಿಚ್ಚಿ ಹಾಡುವಾಗ ವಾಸ್ತವ ಗೌಣವಾದಂತೆ ಅವನು ತನ್ನದೆ ಲೋಕದಲ್ಲಿ ವಿಹರಿಸುತ್ತಿದನು.
ಸಾಲು ಸಾಲು ದೀಪ ನದಿಯಲ್ಲಿ ತೇಲಿ ಬಿಡುತ್ತಿದ್ದವನ ಮನದಲ್ಲಿ ಒಂದೇ ಯೋಚನೆ.ಅವನಿಗಿದ್ದಿದ್ದು ಅದೊಂದೆ ಆಸೆ.ಅವಳು ಎಲ್ಲರಂತೆ ಖುಷಿಯಾಗಿರಬೇಕು.
ಮದುವೆಯಾಗಿ ಒಂದುವರೆ ವರ್ಷವಾದರೂ ಅವರದಿಂದು  ಹೊಸ ಜೋಡಿ..ಹೊಸ ಪ್ರೇಮಿಗಳಂತೆ.
ಮೂಕಿಯಾದರೇನು ಭಾವನೆಗಳಿಲ್ಲದ ಮನುಷ್ಯನಿರುವನೇ..
ತಾಯ್ತನದ ಸುಖಕ್ಕೆ ಹಂಬಲಿಸುವ ಅವಳ ಮನ ಚಿಕ್ಕ ಮಕ್ಕಳನ್ನು ಕಂಡಾಗ ಎದೆಗೊತ್ತಿ ಮುದ್ದಾಡಿಸದಿದ್ದರೆ ಸಮಧಾನವೇ ಇಲ್ಲ..
ಇವಗಲೂ ಅವಳು ನೀರವ್ ಗೆ ಏನೇನೊ ಸನ್ನೆ ಮಾಡಿ ಹೋಗಿದ್ದಳು.
ಅಮೇರಿಕಾದಲ್ಲೇ  ಹುಟ್ಟಿ ಬೆಳೆದ ನೀರವ್ ಗೆ ತನ್ನ ತಾಯ್ನಾಡು ಇಂಡಿಯಾದ ಮೇಲೆ ಒಂತರ ಮಮಕಾರ. ಇಲ್ಲಿನ ಸಂಸ್ಕೃತಿಯ ಅರಿವಿಲ್ಲದಿದ್ದರೂ ಆಚರಿಸುವ ಗುಣವಿತ್ತು.
ತಿಂಗಳಿಗೊಮ್ಮೆ ಇಂಡಿಯಾ ಬೇಟಿ..ಎರಡು ದಿವಸವಿದ್ದು ಮತ್ತದೆ ಅಮೇರಿಕಾ...ಈ ನಿರ್ಧಾರಕ್ಕೆ ಕಾರಣ ತಾನೆಲ್ಲಿ ಹೆತ್ತವರಿಗೆ ನೋವು ಕೊಡುವೆನೋ ಅನ್ನೊ ಭಯ.
ಇಷ್ಟ ಪಟ್ಟು ಮದುವೆಯಾಗಿದ್ದು  ನಿಶ್ಚಯಳನ್ನು ಆದರೆ ಸಂಸಾರ ಮಾತ್ರ ನಿಶ್ಚಲಳೊಂದಿಗೆ...ಅವನಿಗೆ ತನ್ನ ಬಗ್ಗೆ ಪರಿತಾಪವಿಲ್ಲ.ಇಂದು ನೀರವ್ ನಿಶ್ಚಲಳನ್ನು ತುಂಬು ಹೃದಯದಿಂದ ಪ್ರೀತಿಸುತಿರುವನು.

ಹೃದಯದ ಒಡತಿ
ಬಾಳಿನ ಸ್ಪೂರ್ತಿ
ತನ್ಮಯ ತನ್ನೊಳಗಿನ ರೀತಿ
ಅದಲು ಬದಲಾದ ಪ್ರೀತಿ


ಇಪ್ಪತೈದು ವರ್ಷಗಳೇ ಸಂದವು, ಗಂಡನ ಒತ್ತಡಕ್ಕೆ ಇಂಡಿಯಾ  ಬಿಟ್ಟು ಅಮೇರಿಕಾದಲ್ಲಿ  ನೆಲಸಿದ ತ್ರಿವೇಣಿಯ ಏಕಮಾತ್ರ ಸುಪುತ್ರ ನೀರವ್.
ಮೂಲತಃ ಮೈಸೂರಿನವರಾಗಿದ್ದ ತ್ರಿವೇಣಿ ಸ್ವತಃ ಕವಿಯತ್ರಿಯಾಗಿ ಗುರುತಿಸಿ ಕೊಂಡವರು.
ತಾಯಿಯ ಕನ್ನಡಾಭಿಮಾನ,ಕವಿತೆಗಳು ನೀರವ್ ಗೂ ತುಂಬ ಇಷ್ಟ.
ಅಮೇರಿಕಾದಂತಹ ದೇಶದಲ್ಲಿ ಒಂದಿಬ್ಬರು ಕನ್ನಡ ಮಾತನಾಡಿದರೆ ಸಾಕು,ಕನ್ನಡ ಸಂಘಟನೆಯ ಮಾತೆತ್ತುತ್ತಿದ್ದ.
ವಾಷಿಂಗ್ಟನ್ ನ ಪುಲ್ಮನಾ ಯುನಿವರ್ಸಿಟಿಯಲ್ಲಿ ಓದುತ್ತಿರುವಾಗ ಪರಿಚಯವಾದವಳು ನಿಶ್ಚಯ..
ದೂರದಿಂದ ಕಾಣಿಸದಿದ್ದರೂ ಜೂಮ್ ಮಾಡಿ ನೋಡಿದಾಗ ಕಾಣುವ ಪುಟ್ಟ ಬಿಂದಿ, ಮೋಹಕ ಕಂಗಳು,ತಿದ್ದಿ ತೀಡಿದ ಹುಬ್ಬು, ತೀಕ್ಷ್ಣ ನೋಟ,ಮುಗ್ದ ನಗು ,ಅವಳಿಗೊಪ್ಪುವಂತ ಹೇರ್ ಸ್ಟೈಲ್,ಟಿ ಶರ್ಟ ಜೀನ್ಸನಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಳು.
ಅಯ್ಯೊ..ಅಮ್ಮ ನಾನೆನ್ ಚಿಕ್ಕ ಮಗುನಾ..ಇಲ್ಲಿ ಎಲ್ಲವೂ ಸರಿಯಾಗಿದೆ..ಚಿಕ್ಕಪ್ಪ ಎಲ್ಲ ನೊಡ್ಕೊಳ್ತಾರೆ..ಟೆನ್ಸನ್ ಮಾಡ್ಬೇಡಾ..ನಿಶ್ಚಲ ಹೇಗಿದ್ದಾಳೆ‌..
ಹಾ..ಸರಿ.. ಬಾಯ್ ಮಮ್ಮಿ..
ಮತ್ತೊಮ್ಮೆ  ನೀರವ್ ತಿರುಗಿ ನೋಡಿದ..ಇವಳು ಕನ್ನಡದವಳೆ..


ಮನ ಮೆರೆಸಿದ ಚೆಲುವು
ಮೈ ಮರೆಸಿದ ಒಲವು
ತಿರುಗ ಬೇಕೆಂದ ಪ್ರತಿ ಸಲವು
ಬಯಕೆ ಹಲವು.


ನಿಶ್ಚಯ ಹಾಗೂ ನಿಶ್ಚಲ ಅವಳಿ ಮಕ್ಕಳು..ಕೆಲವೇ ನಿಮಿಷಗಳ ಅಂತರ ನಿಶ್ಚಯನನ್ನು ಅಕ್ಕನಾಗಿಸಿತ್ತು.
ಬೆಳಯುತ್ತ ಅವರಿಬ್ಬರ ನಡುವೆ ಅದೇನು ಮೈತ್ರಿ,ಅದೆಂತಹ ಹೋಲಿಕೆ ಕೆಲವೊಮ್ಮೆ  ಹೆತ್ತ ತಾಯಿಗೂ ಗುರುತಿಸಲಾಗುತ್ತಿರಲಿಲ್ಲ ಯಾರ್ಯರೆಂದು..ಆದರೆ ಅದೊಂದು ಕೊರತೆ ಎದ್ದು ಕಾಣುತ್ತಿತ್ತು ನಿಶ್ಚಲ ಮಾತನಾಡಳು ಅವಳು ಹುಟ್ಟುತ್ತಲೇ ಮೂಕಿಯಾದವಳು.
ತನ್ನ ತಂಗಿಯೆಂದರೆ ಎಲ್ಲಿಲ್ಲದ ಪ್ರೀತಿ.
ಹಾಯ್ ಐ ಯಮ್ ನೀರವ್...ನಿಮ್ಮ ಹೆಸರು...
ಸ್ವರ ಬಂದತ್ತ ತಿರುಗಿದ್ದಳು ..ಅಮೇರಿಕಾದಲ್ಲೂ ಕನ್ನಡ ಕೇಳಿ ಪುಳಕಿತಗೊಂಡು..ಮುಗುಳ್ನಗುತ್ತ..
ಹಾಯ್ ನಾನು ನಿಶ್ಚಯ...ಇಲ್ಲಿನ ಯುನಿವರ್ಸಿಟಿಯಲ್ಲಿ ತನ್ನ ಪಿ.ಎಚ್.ಡಿ ಗೆ  ಸಂಬಂಧಿಸಿದಂತೆ ಒಂದು ತಿಂಗಳ ಅಧ್ಯಯನದ ಅವಕಾಶ ಸಿಕ್ಕರುವುದಾಗಿ ತಿಳಿಸಿದಳು..
ತಮ್ಮಿಬ್ಬರ ಪರಿಚಯದೊಂದಿಗೆ ಮಾತು ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ತಿರುಗಲು ಹೆಚ್ಚೇನು ಸಮಯ ಹಿಡಿಯಲಿಲ್ಲ.
ತ್ರಿವೇಣಿಯು ಮಗನಾಸೆ ತಳ್ಳಿ ಹಾಕುವ ಕೆಲಸ ಮಾಡಲಿಲ್ಲ.ತಂದೆಯನ್ನು ಅವರೆ ಒಪ್ಪಿಸಿದ್ದರು.
ನಿಶ್ಚಯಳ ತಂದೆ ತಾಯಂದಿರಿಗೂ ಯಾವುದೇ ಅಭ್ಯಂತರವಿರಲಿಲ್ಲ. ಶ್ರೀಮಂತ ಮನೆತನ,ಉತ್ತಮ ಸಂಬಂಧ. ನಿಶ್ಚಲಳಿಗೂ ಒಂದು ಗಂಡು ಸಿಕ್ಕಿದ್ದರೆ ಜೊತೆಯಲ್ಲೆ ಮದುವೆ ಮಾಡುವ ಆಸೆ ಇದ್ದಿದ್ದರೂ ಕಾಯುವ ಅವಕಾಶವಿರಲಿಲ್ಲ..


ಆಸೆಯ ಹಂಚಿಕೊಂಡು
ಕಾಯುವ ಕಾತುರ ನನಗಿಲ್ಲ
ಭಾಷೆಯ ನೀಡಿದಂತೆ
ನೀ ಬಂದು ಸೇರುವೆಯಲ್ಲ
ಏಕಾಂತಕ್ಕಿಂದು
ಕೊನೆಯಿಡು ನನ್ನ ನಲ್ಲ..


ಕನ್ನಡಿಯ ಪ್ರತಿಬಿಂಬ ಎದುರಿಗಿದ್ದರೂ ತನ್ನನ್ನೆ ತಾನು ಮರೆತ್ತಿದ್ದಳು..ಇದಕ್ಕೆ ಅವಳು ಒಂದು ಕಿವಿಗೆ ಧರಿಸಿದ್ದ ಓಲೆಯೇ ಸಾಕ್ಷಿ ಎನ್ನುವಂತಿತ್ತು.
ಮದುವೆಗೆ ಇನ್ನು ಹೆಚ್ಚು ದಿನವಿಲ್ಲ ..ಹುಚ್ಚು ಆಸೆಯೊಂದಿಗೆ ನೀರವ್ ನ ಹೆಚ್ಚು ಹೆಚ್ಚಾಗಿ ಹಚ್ಚಿಕೊಂಡಿದ್ದಳು.
ಅದ್ದೂರಿಯ ಸಂಭ್ರಮದಲ್ಲೇನೊ ಮದುವೆಯು ಮುಗಿಯಿತು.ಈಗಿನ ವಿಷ್ಯ ಪ್ರಸ್ಥದ್ದು, ನಿಗದಿಯಾಗಿದ್ದಂತೆ ಎಲ್ಲವು ನಡೆದಿದ್ದರೆ‌ ಯಾವ ಅನಾಹುತವೂ ಸಂಭವಿಸುತಿರಲಿಲ್ಲ.ಜ್ಯೋತಿಷ್ಯ ಶಾಸ್ತ್ರವೇ ಮುಳುವಾಯಿತೆ..ಅಮ್ಮನ ಪ್ರಕಾರ ಇನ್ನು ನಾಲ್ಕು ದಿನ ಒಳ್ಳೆಯ ದಿನವಿಲ್ಲ.
ಮೆತ್ತಗೆ ಬೀಸುವ ಗಾಳಿ ಸುಗಂಧ ದುಂದುಬಿಯಂತೆ ತೆರೆದಿರುವ ಕಿಟಕಿಯಿಂದ ನೀರವ್ ನನ್ನು ಅಣಕಿಸುತ್ತಿತ್ತು.ಮಣಿರತ್ನ ಮಂಚ ಚುಚ್ಚಿದಂತಾಗಿ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದನು..ಎದ್ದು ಕಾರಿಡಾರ್ ನಲ್ಲಿ ಒಂದೆರಡು ಹೆಜ್ಜೆಯಿಟ್ಟವನಿಗೆ ಅವಳ ಚೆಲುವು ಕೈ ಬೀಸಿ ಕರೆಯುತ್ತಿತ್ತು.
ತೆರೆದಿದೆ ಮನೆ..ಮನ... ಓ ..ಬಾ ಅತಿಥಿ ಎನ್ನುವಂತಿತ್ತು.

ಮೌನ ಮುರಿಯಲಿ
ಮಾತಿನ ಮರೆಯಲಿ
ಮೈತ್ರಿಯ ಕರೆಯಲಿ 

ಸ್ನೇಹದ ಸಲುಗೆಯಲ್ಲೆ ಅವಳ ಕೋಣೆ ಪ್ರವೇಶಿಸಿದವ ಮೃದುವಾಗಿ ಹಣೆಯನೊಮ್ಮೆ ಸ್ಪರ್ಶಿಸಿದ.ಗಡಿಬಿಡಿಯಲ್ಲಿ ತಡವರಿಸಿ ಮೇಲೇಳಲು  ಯತ್ನಿಸಿದವಳ ಬಾಯಿಗೆ ಕೈ ಅಡ್ಡ ಹಿಡಿದು...
...ಶ್.. ಸುಮ್ಮನಿರು ಅತ್ತೆ ಮಾವ ಎಚ್ಚರವಾಗುವರು..
ಎಂದು ಹಣೆಗೆ ಮತ್ತಿನ ಮುತ್ತನಿಟ್ಟನು.
ಪ್ರತಿಭಟಿಸಿದವಳ ತಡೆದು..ಇಲ್ಲ ಕಾಣೆ ಈ ಶಾಸ್ತ್ರವೆಲ್ಲ ಅಷ್ಟೊಂದು ಸಿರಿಯಸ್ ಅಲ್ವಂತೆ ಎಂಬ ಸಮಜಾಯಿಷಿಯೊಂದಿಗೆ ಮುಂದುವರಿದ.


ಬಿತ್ತಿದ ಪ್ರೀತಿಯು
ಮೆತ್ತಗೆ ಮಾಡಿದೆ ಭಾವವ.
ನಿನ್ನ ಬಾಹುವಿನ ಬಲದೊಂದಿಗೆ
ವಿರೋಧಿಸುವ ಮನಸಿಲ್ಲ.
ಮಾತು ಮೌನವಾಗಿರುವುದು
ಮೂಕ ವೇದನೆಯ ನಡುವಲ್ಲಿ.


ನೀರವತೆಯ ನಿಶ್ಚಬ್ದದ ನಡು ರಾತ್ರಿಯಲ್ಲಿ ನಿಶ್ಚಲಳ ಅಳುವ ಧ್ವನಿ ನಿದ್ದೆಯ ಮಂಪರಿನಲ್ಲಿದ್ದ ನಿಶ್ಚಯಳನ್ನು ಎಚ್ಚರಿಸಿತು.
ಅವಾಗಲೇ ಸತ್ಯದ ಅರಿವಾಗಿದ್ದು ನೀರವ್ ಗೆ
ತನುವಿನೊಳು ತನ್ನವಳಾಗಿದ್ದವಳು ನಿಶ್ಚಲಳೆಂದು.
ಇದೆಲ್ಲವೂ ಆಕಸ್ಮಿಕವಾಗಿದ್ದರೂ ವಾಸ್ತವವಾಗಿ ಸತ್ಯ ಕಣ್ಣೆದುರಲ್ಲೇ ಇತ್ತು.
ನದಿಯ ನೀರಿನಲ್ಲೂ ಬೆಳಕು ಪ್ರತಿ ಫಲನಗೊಂಡು  ಹೊಂಬಣ್ಣ ಚೆಲ್ಲಿತ್ತು. ಇನ್ನೆನು ಮಹಾ ಮಂಗಳಾರತಿ ಸಮಯ ಗುಡಿಯಲ್ಲಿ ಘಂಟಾ ನಾದವಾದಗ....
ನಿಶ್ಚಲ...ನಿಶ್ಚಲ...
ಕರೆದ ಕೂಗಿಗೆ ಹಸುಗೂಸನ್ನೆತ್ತಿಕೊಂಡು ನಸುನಗುತ್ತ ಬಂದಳು ಪ್ರಾಣಸಖಿ....


Sunday, 12 January 2020

ಸಂಯಮ ಮೀರಿದೆ


ಸಂಯಮ ಮೀರಿದೆ

ತೀರ ನೋಡುತಾ ದೂರ ಸರಿದಿದೆ ಮನ
ಯಾರೋ ಚಾಚಿ ಹೋದರು ಮೌನ
ನೂರು ಅಲೆಗಳ ಕದನ
ಮನದಲಿ ನಿನ್ನ ನೆನಪಲ್ಲೆ ಗಾಯನ.


ನಿನ್ನ ಪ್ರೀತಿಯ ಸೆಳೆತಕ್ಕೆ
ನನ್ನ ಸಂಯಮ ಜಾರಿದೆ
ಹೃದಯ ನಿಯಮ ಮುರಿದಿದೆ
ಬಯಕೆ ನಿನ್ನ ಬೆಸೆದಿದೆ


ಜೋರು ಜೋರು ಅಲೆಗಳ ಬಡಿತ
ನನ್ನೆದೆ ವೀಣೆಗೆ ನೀ ಸಂಗೀತ.
ನಿನ್ನ ನೆನಪಲೆ ಇದು ನಿಯಮಿತ
ಹೃದಯದ ಅರಮನೆಗೆ ನಿನಗೆ ಸ್ವಾಗತ



Sunday, 5 January 2020

ಅವನು ನನ್ನವ"ನಲ್ಲ"









ಅವನು ನನ್ನವ"ನಲ್ಲ"

ಹುಡುಗಿಯರೇ ಹೀಗೆ ಹುಡುಗರಿಗೆ ಮೋಸ ಮಾಡಿ ಕೈಕೊಟ್ಟು ಬಿಡುತ್ತಾರೆ ಅದೆಷ್ಟು ಹುಡುಗರ ಮೊದಲ ಲವ್ ಸ್ಟೋರಿ ಫೇಲ್ಯೂರ್. ಹಾಗಾದರೆ ಅವರನ್ನು ಪ್ರೀತಿಸಿದ ಹುಡುಗಿಯರದ್ದು...
ಲವ್ ಫೇಲ್ಯೂರ್ ಆದ ಹುಡುಗರೆಲ್ಲ ದೇವದಾಸ್ ಥರ ದಾಡಿ ಬಿಟ್ಟು ಎಣ್ಣೆ ಅಂಗಡಿಯಲ್ಲಿ ಕುಳಿತಿರುತ್ತಾರಾ?
ಹಾಗಾದರೆ ಹುಡುಗಿಯರು ಎಲ್ಲವನ್ನು ಮರೆತು ಬೇರೆ ಹುಡುಗನನ್ನು ಮದುವೆಯಾಗಿ ಹಾಯಾಗಿರುತ್ತಾರಾ?
ಮದುವೆಯಾಗಿ ಐದು ವರ್ಷವಾಯಿತು ಇವಾಗಲು ಅವನನ್ನು ಪ್ರೀತಿಸುತ್ತೇನೆ ಯಾಕ್ ಗೊತ್ತಾ ನಾನು ಅವನಿಗೆ ಮಾಡಿದ ಮೋಸಕ್ಕೆ ಇನ್ನೊಂದು ಅರ್ಥದಲ್ಲಿ ನನಗೆ ನಾನು ಮಾಡಿಕೊಂಡ ಮೋಸ.
ಹೆತ್ತ ತಂದೆ-ತಾಯಿಯರಿಗೆ ಮೋಸ ಮಾಡಲಾಗದೆ ನಾನೇ ನನಗೆ ಮಾಡಿಕೊಂಡ ಮೋಸ.
ವಿಶ್ ಯು ಹ್ಯಾಪಿ ಬರ್ಥಡೇ ಎಸ್ಪಿ... ಪದೇ ಪದೇ ಅದೇ ಮೆಸೇಜನ್ನು ನೋಡಿಕೊಂಡು ಸ್ಮಿತಾ ಭಾವುಕಳಾದಳು.
ಪ್ರಕಾಶ್ ಅವನ ಹೆಸರನ್ನು ಅವಳ ಹೆಸರಿಗೆ ಯಾವತ್ತೂ ಸೇರಿಸಿ ಬಿಟ್ಟಿದ್ದ. ಯಾವುದೋ ಅಪರಿಚಿತ ನಂಬರ್ ನಿಂದ ಮೆಸೇಜ್ ಬಂದಿದ್ದರು ಅವಳಿಗೆ ಗೊತ್ತು ಅದು ಪ್ರಕಾಶನದ್ದೆ ಎಂದು.
ಸ್ಮಿತಾ ಅವನ ಎಲ್ಲ ನಂಬರ್ ಗಳನ್ನು ಬ್ಲಾಕ್ ಮಾಡಿದ್ದಳು ಆದರೂ ವರ್ಷಕ್ಕೊಮ್ಮೆ ಬರುವ ಅವನ ವಿಶ್ ಗೆ ಅವಳು ವರ್ಷವಿಡೀ ಕಾಯುತ್ತಿದ್ದಳು.
ಸ್ಮಿತಾಳದ್ದು  ಅರೆಂಜ್ ಮ್ಯಾರೇಜ್ ಅಪ್ಪ-ಅಮ್ಮ ನೋಡಿದ ಹುಡುಗ ಶ್ರೀಮಂತನಲ್ಲದಿದ್ದರೂ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.
ಏನ್ ಸ್ಮಿತಾ ಯಾಕಿಷ್ಟು ಸಪ್ಪೆಯಾಗಿದ್ದಿಯಾ? ಇನ್ಮೇಲೆ ನೀನು ನಗು ನಗುತ್ತಾ ಇರಬೇಕು.
ಮಾತಿನ ಮಧ್ಯ ಸ್ಮಿತಾಳ ಮೆಸೇಜ್ ಟ್ಯೂನ್ ರಿಂಗಣಿಸಿತು.
  "ಹಾಯ್ .. ಮದುವೆಗೆ ಬರಬಾರದು ಅಂದುಕೊಂಡಿದ್ದೆ ಕೊನೆಯ ಬಾರಿ ನಿನ್ನ ನೋಡೋಣ ಅಂತ ಬಂದೆ. ಮಂಟಪದಲ್ಲಿ ರಾಜಕುಮಾರಿಯ ಹಾಗೆ ಕಾಣಿಸುತ್ತಿದ್ದಿಯಾ ವಿಶ್ ಯು ಹ್ಯಾಪಿ ಮ್ಯಾರೀಡ್ ಲೈಫ್ ಎಸ್.ಪಿ."
ಸ್ಮಿತಾ ಸೈಲೆಂಟಾಗಿ ಮೊಬೈಲ್ ಸ್ಕ್ರೀನ್ ಆಫ್ ಮಾಡಿದಳು.
ಪ್ರಮೋದ್ ಮುಂದುವರೆದು   "ನೋಡು ಸ್ಮಿತಾ ನಾನು ನಿನಗೊಂದು ವಿಷಯ ಹೇಳ್ತೀನಿ ಮದುವೆಗೆ ಮುಂಚೆ ನೀನು ಯಾರನ್ನಾದರೂ ಇಷ್ಟ ಪಟ್ಟಿರಬಹುದು ಅಥವಾ ಯಾರಾದರೂ ನಿನಗೆ ಪ್ರೊಪೋಸ್ ಮಾಡಿರಬಹುದು.
ಕಾಲೇಜು ಜೀವನದಲ್ಲಿ ಇದೆಲ್ಲ ಸಾಮಾನ್ಯ. ಇದು ಯಾವುದು ನಾನು ನಿನ್ನ ಕೇಳುವುದಿಲ್ಲ. ಯಾವ ಘಟನೆಯನ್ನು ನೀನು ಹೇಳಬೇಕಾಗಿಯೂ ಇಲ್ಲ.
ಇವತ್ತಿನಿಂದ ನೀನು ನನ್ನ ಹೆಂಡತಿ ಮುಂದೆ ನನ್ ಜೊತೆ ಚೆನ್ನಾಗಿದ್ದರೆ ಸಾಕು."
ಇಷ್ಟೇ ಸಾಕಿತ್ತು ಸ್ಮಿತಾಗೆ ಪ್ರಕಾಶ್ ನ ನಂಬರ್ ಬ್ಲಾಕ್ ಮಾಡಲು.
ಸ್ಮಿತಾ ಮಧ್ಯಮ ವರ್ಗದ ಚಂಚಲ ಸ್ವಭಾವದ ಹುಡುಗಿ ಕಾಲೇಜಿನಲ್ಲಿ ಓದುವುದಕ್ಕಿಂತ ಅವರವರ ಹೆಸರು ಮಧ್ಯೆ ತನ್ನ ಹೆಸರನ್ನು ತಳುಕು ಹಾಕಿಕೊಂಡು ಪ್ರಸಿದ್ಧಿ ಪಡೆದಿದ್ದೆ ಜಾಸ್ತಿ.
ಒಬ್ಬನಂತೂ ಅವಳ ನಗುವಿನ ಮೋಡಿಗೆ ಮರುಳಾಗಿ ಸೆಲ್ಫೋನ್ ಗಿಫ್ಟ್ ನೀಡಿದ್ದ ಆದರೆ ಫ್ರೆಂಡ್ ಅಂತಲೇ ಸ್ವೀಕರಿಸಿದಳು ಸ್ಮಿತಾ.
ಅದೊಂಥರಾ ಸ್ಮೈಲ್.
ಹೆಚ್ಚಿನ ಹುಡುಗರು ಅವಳ ನಗುವಿಗೆ ಹುಚ್ಚರಾಗಿ ಬಿಡುತ್ತಿದ್ದರು.
ಸೌಮ್ಯಳ ಅಣ್ಣ ಪ್ರಕಾಶ್ ಬೆಂಗಳೂರಿನ ಒಂದು ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ. ಸೌಮ್ಯ ಹತ್ತಿರ ಪೋನ ಇಲ್ಲದ ಕಾರಣ ಸ್ಮಿತಾಳ  ಫೋನ್ ನಂಬರ್ ಕೊಟ್ಟಿದ್ದಳು. ಅವನು ಅವಳಿಗೆ ಕಾಲ್ ಮಾಡಿ ತಂಗಿಯ ಕುಶಲೋಪಚಾರ ವಿಚಾರಿಸುತ್ತಿದ್ದನು. ಹೀಗೆ ಅವರಿಬ್ಬರ ನಡುವೆ ಮಾತಿನ ಸಲುಗೆಯಿತ್ತೆ ಹೊರತು ಮುಖ ಪರಿಚಯವಿರಲಿಲ್ಲ.
ಪ್ರಕಾಶ್ ಒಂದು ತಿಂಗಳ ನಂತರ ತಂಗಿಗಾಗಿ ಸೆಲ್ ಫೋನ್ ತೆಗೆದುಕೊಂಡು ಸೀದಾ ಹಾಸ್ಟೆಲಿಗೆ ಬಂದಿದ್ದನು.
ವಾರ್ಡನ್ ಪರ್ಮಿಷನ್ ನೊಂದಿಗೆ ಸ್ಮಿತಾ ಸೌಮ್ಯ ಹಾಗೂ ಪ್ರಕಾಶ್ ಹತ್ತಿರದಲ್ಲೇ ಇದ್ದ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ತಿಂದು ಪೇಟೆ ಸುತ್ತಿ ಹರಟೆ ಹೊಡೆದು ಹಾಸ್ಟಲ್ ಗೆ ಮರಳಿದರು.
ಸ್ಮಿತಾ ಅದೆಷ್ಟು ಹುಡುಗರ ನಿದ್ದೆ ಕದ್ದಿದ್ದರೂ ಪ್ರೀತಿಯಂತ ಆಗಿದ್ದು ಪ್ರಕಾಶನ ಮೇಲೆ ಮಾತ್ರ. ಅವನು ಅವಳ ಮೊದಲ ಕ್ರಶ್. ನಿದ್ದೆಯಲ್ಲು ಅವನ ಮುದ್ದು ಮುಖ ಅವಳ ಮನ ತುಂಬಿತ್ತು.
ಅದೊಂದು ದಿನ ಧೈರ್ಯ ಮಾಡಿಕೊಂಡು ಸ್ಮಿತಾ ಪ್ರಕಾಶ್ ಗೆ ಮೆಸೇಜ್ ಮಾಡಿದಳು.
ಅವರಿಬ್ಬರ ಹಾಯ್.. ವಿನಿಮಯದ ನಂತರ  ಐ ಲವ್ ಯು  ಪ್ರಕಾಶ್ ಎಂಬ ಮೆಸೇಜನ್ನು ಸ್ಮಿತಾ ಸೆಂಡ್ ಮಾಡಿದಳು.
ಪ್ರಕಾಶ್ ನಿಂದ ಯಾವುದೇ ಉತ್ತರವಿರಲಿಲ್ಲ.
ಎರಡು ದಿನಗಳ ನಂತರ ಸ್ಮಿತಾ ಧೈರ್ಯದಿಂದ ತಾನಾಗಿಯೇ ಕಾಲ್ ಮಾಡಿದಳು. ಪ್ರಕಾಶ್ ಯಾಕೋ ಅಂಜುತ್ತ ಮಾತಾಡುವಂತಿತ್ತು.
"ಸ್ಮಿತಾ ರಿಯಲ್ಲಾಗಿ ಹೇಳುತ್ತಿದ್ದೀಯ ಟೈಂಪಾಸ್ ಅಲ್ಲ ತಾನೇ"
"ಪ್ರೀತಿಯಲ್ಲಿ ರಿಯಲ್ ..ಟೈಮ್ ಪಾಸ್ ಅಂತ ಇದಿಯಾ?"
ಇಷ್ಟೇ ಸಾಕಿತ್ತು ಪ್ರಕಾಶ್ ಮುಗ್ಗರಿಸಲು..
ಗಂಟೆಗಟ್ಟಲೆ ಅವರಿಬ್ಬರ ನಡುವೆ ಫೋನ್ ಸಂಭಾಷಣೆ ನಡೆಯುತ್ತಿತ್ತು .ಏನು ಮಾತನಾಡುತ್ತಿದ್ದೇವೆ ಅಂತ ಅವರಿಗೆ ನೆನಪಿರಲಿಲ್ಲ.
ಒಂದು ಸಾರಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5:00 ಗಂಟೆ ತನಕ ಮಾತನಾಡಿ ರೆಕಾರ್ಡ್ ಸೃಷ್ಟಿಸಿದ್ದರು.
ಪ್ರಕಾಶ್ ಊರಿಗೆ ಬಂದಾಗ ಒಂದೆರಡು ಬಾರಿ ಸ್ಮಿತಾಳನ್ನು ಭೇಟಿಯಾಗಿದ್ದನು. ಸ್ಮಿತಾಳನ್ನು ಯಾವಾಗಲೂ ಎಸ್ಪಿ ಅಂತಾನೇ ಕರೆಯುತ್ತಿದ್ದ. 
ಸ್ಮಿತಾಪ್ರಕಾಶ್
ಅವನು ಅವಳ ಹೆಸರಿಗೆ ಅವನ ಹೆಸರನ್ನು ಸೇರಿಸಿ ಬಿಟ್ಟಿದ್ದ.
ಅವನು ಅವಳ ಹೆಸರಲ್ಲಿ ಆಶಾ ಮಹಲನ್ನೇ ಕಟ್ಟಿಸಿದ್ದ, ಹುಟ್ಟಲಿರುವ ಮಗುವಿಗೂ ಹೆಸರು ಇಟ್ಟಿದ್ದ.
ಬರುಬರುತ್ತಾ ಪ್ರಕಾಶನ ಬೇಡಿಕೆ ಹೆಚ್ಚುತ್ತಿತ್ತು.ಭೇಟಿಯಾಗೋಣ ಎನ್ನುತ್ತಿದ್ದ ಅವನ ಮಾತು ಅವಳಿಗೆ ಯಾಕೋ ಇತ್ತೀಚಿಗೆ ಕಿರಿಕಿರಿ ತರುತ್ತಿತ್ತು.
ಯಾರಾದರೂ ನಮ್ಮನ್ನು ನೋಡುವರು ಎನ್ನುವ ಭಯ ಅವಳಲ್ಲಿ ಮನೆಮಾಡಿತ್ತು. ಅವನ ಅತಿಯಾದ ಪ್ರೀತಿ ಅವಳಿಂದ ಸಹಿಸಿಕೊಳ್ಳಲಾಗುತ್ತಿರಲಿಲ್ಲ.
ಇತ್ತೀಚಿಗೆ ಎಕ್ಸಾಮ್ ಎಂಬ ನೆಪವೊಡ್ಡಿ ಅವನ ಫೋನ್ ರಿಸೀವ್ ಮಾಡೋದು ಕಮ್ಮಿ ಮಾಡಿದಳು.
ಒಂದಿನ ಪ್ರಕಾಶ್ ಸೌಮ್ಯಳಿಗೆ ಕಾಲ್ ಮಾಡಿ ಸ್ಮಿತಾ ಹೇಗಿದ್ದಾಳೆ ಎಂದಾಗ ಅವಳು ಬಾಯ್ ಫ್ರೆಂಡ್ ಜೊತೆ ಫಿಲಂಗೆ ಹೋಗಿದ್ದಾಳೆ ಎಂಬ ಮಾತು ಕೇಳಿ ಸಿಡಿಲು ಬಡಿದಂತಾಯ್ತು.
ಪ್ರಕಾಶ್ ಅದೆಷ್ಟು ಬಾರಿ ಕಾಲ್ ಮಾಡಿದರೂ ರಿಂಗಾಗುತ್ತಿತ್ತು ಫೋನ್ ಕೊನೆಗೊಮ್ಮೆ ಸ್ವಿಚ್ ಆಫ್ ಎನ್ನುವ ವಾಣಿಯೊಂದಿಗೆ ನಿಷ್ಕ್ರಿಯೆ ಗೊಂಡಿತ್ತು.
ಮೊಬೈಲ್ ಚಾರ್ಜಿಗಿಟ್ಟ ಸ್ಮಿತಾ ನೂರರ ಗಡಿದಾಟಿದ ಮಿಸ್ ಕಾಲ್ ನೋಡಿ ಹೌಹಾರಿದಳು ಮತ್ತೆ ಕಾಲ್ ಮಾಡಿದರೆ ಪ್ರಕಾಶನ ಮೊಬೈಲ್ ಸ್ವಿಚ್ ಆಫ್.
ಅಸಹ್ಯ ಭಾವದಿಂದ ಬೇಸತ್ತ ಪ್ರಕಾಶ್ ಸಿಟ್ಟಿನಿಂದ ಮೊಬೈಲ್ ಎಸೆದಿದ್ದ ನಾಲ್ಕು ಫ್ಲೋರ್ ನಿಂದ ಕೆಳಗುರುಳಿದ ಮೊಬೈಲ್ ಅದ್ಯಾವ ಮೋರಿಯಾ ಚರಂಡಿಯಲ್ಲಿ ಬಿದ್ದಿತೋ ತಿಳಿಯದಾದನು.
ಆ ದಿನ ಅವನಿಗೆ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ತನ್ನ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಬಿಕ್ಕಿಬಿಕ್ಕಿ ಅಳುತ್ತಿದ್ದ.
ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ಅವನ ಕೈಬೆರಳುಗಳು ತಡೆಯದಾದವು.ಸಮಾಧಾನ ಮಾಡಲು ಅಲ್ಲಿ ಯಾರು ಇಲ್ಲ ಧ್ವನಿಯೇರಿಸಿ ಅಳತೊಡಗಿದನು.
ಒಂದೆರಡು ದಿನಗಳ ನಂತರ ಡೂಪ್ಲಿಕೇಟ್ ಸಿಮ್ ನೊಂದಿಗೆ ಹೊಸ ಫೋನ್ ತಂದಿದ್ದನು.
ಸಿಮ್ ಆಕ್ಟಿವೇಟ್ ಆಗುತ್ತಿದ್ದಂತೆ ಒಂದರಮೇಲೊಂದು ಕರೆಗಳು.ಈಗ ಅವನಿಗೆ ಮನದಟ್ಟಾಯಿತು ನಾನೇನು ಒಂಟಿಯಲ್ಲ ಎಷ್ಟೊಂದು ಜನ ನನಗಾಗಿ ಇರುವವರು..
ಈಗ ಸ್ಮಿತಾಳ ಸಹ ಕಾಲ್ ಮಾಡಿದ್ದಳು ಅವನಿಚ್ಛೆಯಂತೆ ಭೇಟಿಯಾಗಲು ಸಮ್ಮತಿ ಸೂಚಿಸಿದ್ದಳು.
ಅಂದು ಮಂಗಳವಾರ ವಾದುದರಿಂದ ಪಾರ್ಕ್ನಲ್ಲಿ ಯಾರು ಇರಲಿಲ್ಲ.ಸ್ಮಿತಾಳೆ ಮಾತನಾಡಿ ಮೌನಕ್ಕೆ ಕತ್ತರಿ ಹಾಕಿದಳು.
"ಪ್ರಕಾಶ್ ಫೋನ್ ರಿಸೀವ್ ಮಾಡದ್ದಕ್ಕೆ ಸ್ವಾರಿ ಕೇಳಿ ಆಯ್ತಲ್ಲ"
"ಅದಲ್ಲ"
"ಮತ್ತೆ"
"ಫಿಲ್ಮಿ ಗೆ ಹೋಗಿದ್ದೀಯಾ"
"ಹೌದು"
"ಯಾರ ಜೊತೆ"
"ಫ್ರೆಂಡ್ಸ್ ಜೊತೆ"
"ಅಂದ್ರೆ"
"ಅಯ್ಯಾ ನನ್ನ ಕ್ಲಾಸ್ಮೇಟ್ ಹುಡುಗರು ಹುಡುಗಿಯರು ಜೊತೆಯಲ್ಲಿ ಹೋಗಿದ್ದೇವೆ "
"ಈ ಮಂತು ಕೋರ್ಸ್ ಮುಗಿಯಿತಲ್ಲ.. ಬಹಳ ಒತ್ತಾಯ ಮಾಡಿದರು"
ಪ್ರಕಾಶ್ ಸುಮ್ಮನಾದ ..ನಾನೇಕೆ ಇಷ್ಟು ಹಾಳಾದಯೋಚನೆ ಮಾಡಿ ಮನಸ್ಸು ಕೆಡಿಸಿಕೊಂಡೆ...  ತನ್ನ ಬುದ್ದಿನ ತಾನೆ ಹಳೆಯ ತೊಡಗಿದನು.
ಈಗ ಮನಸ್ಸು ಕೊಂಚ ನಿರ್ಮಲವಾಯಿತು. ಮೊಗ್ಗಾಗಿದ್ದ ಪ್ರೀತಿ ಹೂವಾಗಿ ಅರಳಿತು.
ಪ್ರಕಾಶನ ಮೊಗದಲ್ಲಿ ಮೂಡಿದ ಮಂದಸ್ಮಿತಕ್ಕೆ ಸ್ಮಿತಾ ಭಾವನೆಯಾದಳು.
ಕೈಯಲ್ಲಿ ಕರ್ಪೂರ ಹೊತ್ತಿಸಿ ದೇವರ ಮುಂದೆ ನಾನೆಂದು ನಿನ್ನವಳು ಎಂಬ ಪ್ರತಿಜ್ಞೆ ಮಾಡಿದಳು.
ಕಾಲೇಜು ಮುಗಿಸಿ ಹಾಸ್ಟೆಲಿನಿಂದ ಮನೆಗೆ ನಡೆದ ಸ್ಮಿತಾಳಿಗೆ ಅಚ್ಚರಿ ಕಾದಿತ್ತು. ತಂದೆ ಅದಾಗಲೇ ಎರಡು ಕಡೆ ಹುಡುಗನ ನೋಡಿ ಮದುವೆಯಾ ಸಿದ್ಧತೆಯಲ್ಲಿದ್ದರು.
ವಿಷಯ ತಿಳಿದ ಪ್ರಕಾಶ್ ಹೌಹಾರಿದ್ದ. ನೇರವಾಗಿ ಕೇಳಲು ಧೈರ್ಯ ಸಾಲದೆ ..
"ಮೊದಲು ಸೌಮ್ಯಳ ಮದುವೆ ನಡೆಯಲಿ ನಂತರ ನಮ್ಮ ಮದುವೆ ಪ್ಲೀಸ್ ಎಸ್.ಪಿ..ಹೇಗಾದರೂ ಅಪ್ಪನ ಒಪ್ಪಿಸು" ಎಂದಿದ್ದ.
ಅದಾಗಲೇ ಸ್ಮಿತಾನ ಹಳೆಯ ಗೆಳೆಯರು ಒಂದಷ್ಟು ವದಂತಿ ಹಬ್ಬಿಸಿದರು.ಅವಳ ಬಗ್ಗೆ ಅಸಹ್ಯವಾಗಿ ಮಾತನಾಡಿಕೊಂಡಿದ್ದರು.
ಒಂದೆರಡು ಫೇಸ್ಬುಕ ಕಾಮೆಂಟಗಳನ್ನು  ಪ್ರಕಾಶ್ ಸಹ ನೋಡಿದ್ದನು.ಅದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಸ್ಮಿತಾಗೆ ನಿರ್ಬಂಧ ವಿಧಿಸಿದನು.
ತಂದೆಗೂ ಮಗಳದ್ದೇ ಚಿಂತೆ ಒಬ್ಬಳನ್ನೇ ಎಂದು ಹೊರಗೆ ಬಿಡುತ್ತಿರಲಿಲ್ಲ.
ಮೊಬೈಲ್ ಜಾಸ್ತಿ ಉಪಯೋಗಿಸುವಂತಿಲ್ಲ ಹೀಗೆ ಸ್ಮಿತಾ ಒಂದೊಂದೇ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಳು.
ಒಂದೆರಡು ಬಾರಿ ಎಂಗೇಜ್ ಬರುತ್ತಿದ್ದ ಕಾರಣ ಸ್ಮಿತಾಗೆ ಪ್ರಕಾಶ್ ಪದೇಪದೇ ಕಾಲ್ ಮಾಡುತ್ತಿದ್ದ. ಹೀಗೆ ಅನುಮಾನಿಸುತ್ತಿದ್ದ ಪ್ರಕಾಶನನ್ ಕಂಡಾಗ ಇವನು ನನ್ನವನೇ ಎನಿಸುತ್ತಿತ್ತು.
ಪ್ರಕಾಶ್ ಏನು ಕೆಟ್ಟವನಲ್ಲ ಆದರೆ ತುಂಬಾ ಪೊಸೆಸಿವ್ನೆಸ್.
ನಾನು ಅವಳನ್ನು ಪ್ರೀತಿಸುತ್ತಿದ್ದೇನೆ. ಅವಳು ನನ್ನನ್ನು ಅಷ್ಟೇ ಪ್ರೀತಿಸಬೇಕು. ಅವಳು ನನ್ನವಳು.ನನ್ನ ಬಿಟ್ಟು ಯಾರು ಅವಳನ್ನು ನೋಡಕೂಡದು. ಅವಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಹೀಗೆ ಯೋಚಿಸುತ್ತಿದ್ದನು.
ಈಗ ಸ್ಮಿತಾ ಯೋಚಿಸತೊಡಗಿದಳು.
ಪ್ರೀತಿ ಎಂದರೆ ಏನು?
ಅದು ಮೊದಮೊದಲು ಕೊಡುತ್ತಿದ್ದ ಖುಷಿ ಈಗೇಕೆ ಕೊಡುತ್ತಿಲ್ಲ?
ನನ್ನ ಆಯ್ಕೆ ತಪ್ಪೇ?
ನನ್ನೆಲ್ಲ ಆಸೆ-ಆಕಾಂಕ್ಷೆಗಳನ್ನು ಸ್ವಾತಂತ್ರ್ಯವನ್ನು ಕಳೆದುಕೊಂಡು ಬೇರೆಯವರಿಗಾಗಿ ಬದುಕುವುದು ಪ್ರೀತಿನಾ?
ಯಾವ ಖುಷಿಗಾಗಿ ಪ್ರಕಾಶನನ್ನು ಪ್ರೀತಿಸಿದೆ ಹೀಗೆ ಅರ್ಥವಿಲ್ಲದ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು ಅವಳ ಮನಸ್ಸಿನ ಪಟಲದಲ್ಲಿ ಹಾದು ಹೋಗುತ್ತಿತ್ತು.
ಒಂದೇ ಸವನೆ ಮದುವೆಯಾಗು ಎಂಬ ತಂದೆಯ ಒತ್ತಡ ಅವಳ ಮನಸ್ಸನ್ನು ಇನ್ನಷ್ಟು ಜರ್ಜರಿತ ಗೊಳಿಸಿದ್ದು.
ಸ್ಮಿತಾಳಿಗೆ ದಿಕ್ಕೇ ತೋಚದಂತಾಯಿತು.
ಒಂದು ಸಂಜೆ ಯಾರಿಗೂ ಹೇಳದೆ ಮನೆ ಬಿಟ್ಟು ಬೆಂಗಳೂರಿಗೆ ಬಂದಳು.
ಪ್ರಕಾಶ್ ಅವಳಿಗೆ ಸಮಾಧಾನ ಮಾಡಿ ತಂದೆ ಜೊತೆ ಮಾತನಾಡುವುದಾಗಿ ತಿಳಿಸಿದನು.
ಪ್ರಕಾಶ್ ರಾತ್ರಿಯಿಡಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದ. ಮರುದಿನ ಆಫೀಸಿಗೆ ರಿಸೈನ್ ಲೆಟರ್ ಹಾಕಿ ಪ್ರಕಾಶ ಅವಳ ಜೊತೆ ಊರಿಗೆ ಹೊರಟನು.
ಮನೆಯಲ್ಲಿ ಗೊಂದಲವೇ ಸೃಷ್ಟಿಯಾಗಿತ್ತು ಮನೆ ಬಿಟ್ಟು ಓಡಿ ಹೋದ ಮಗಳಿಂದ ಅವಮಾನವಾಗಿ ಮೋಹನ್ ಪಾಲಿಡಾರ್ ತೆಗೆದುಕೊಂಡಿದ್ದರು.
ಸ್ಮಿತಾ ಆವೇಶಭರಿತಳಾಗಿ ವೆಂಟಿಲೇಟರ್ ನಲ್ಲಿದ್ದ ತಂದೆಯ ಕಡೆಯ ಓಡಿದಳು. ಪ್ರಕಾಶ್ ಇದೆಲ್ಲಕ್ಕೂ ತಾನೇ ಕಾರಣ ಎಂಬಂತೆ ಹಿಂದೆಸರಿದನು.
ತಿಂಗಳುಗಳೇ ಬೇಕಾಯಿತು ಮೋಹನ್ ಸರಿಯಾಗಲು ಇದೀಗ ತಂದೆಯ ಪ್ರತಿ ಮಾತಿಗೂ ಹೂ ಗುಟ್ಟುತ್ತಿದ್ದಳು. ಮಮತೆಯ ಮಡಿಲಲ್ಲಿ ಪ್ರೀತಿ ಕುರುಡಾಗಿತ್ತು.
ಸ್ಮಿತಾ ತಂದೆಯ ಮಾತಿನಂತೆ ಪ್ರಮೋದ್ ನನ್ನು ವರಿಸಲು ಸಿದ್ದಳಾಗಿದ್ದಳು.
ಪ್ರಕಾಶನ ಮನವೊಲಿಕೆಯ ಮಾತಿಗೆ ಅವಳು ಕರಗದಾದಳು.ಸಾಲದಕ್ಕೆ ನಾ ನಿನ್ನ ಪ್ರೀತಿಸಲೇ ಇಲ್ಲ ಎಂದು ಬಿಟ್ಟಳು.
"ನೀನೇ ಹೇಳೊ ಹಾಗೆ. ಅದೆಷ್ಟು ಹುಡುಗರ ಹಾಗೆ ನೀನು ನನಗೆ ಟೈಂಪಾಸ್"
ಅದೊಂದೇ ನುಡಿ ಸಾಕಿತ್ತು ಅವನ ಜೀವನದಲ್ಲಿ ಮುಂದುವರೆಯಲು.
ಈಗ ಎಲ್ಲವೂ ಇದೆ ಅವಳನ್ನು ಬಿಟ್ಟು.
ನಾನೆಲ್ಲಿ ಎಡವಿದೆ ಅವಳನ್ನು ಪಡೆದುಕೊಳ್ಳುವಲ್ಲಿ?
ಪ್ರತಿ ವ್ಯಕ್ತಿಯ ಜೀವನದಲ್ಲಿ ಮೊದಲ ಪ್ರೇಮ ಕಥೆ ದುಃಖಾಂತ್ಯ ವಾಗುವುದೇಕೆ?
ಅನುಭವಗಳ ಕೊರತೆಯೇ?
ಹಾಗಿದ್ದರೆ ಅನುಭವ ಪಡೆದು ಪ್ರೀತಿಸಲು ಅದೇನು ಆಟವೇ?
ಅದೇನೇ ಇರಲಿ ಅವಳು ಸಂಪೂರ್ಣ ಈಗ ನನ್ನನ್ನು ಮರೆತುಬಿಟ್ಟಿದ್ದಾಳೆ.ತನ್ನದೇ ಆದ ಜೀವನ ಕಟ್ಟಿಕೊಂಡು ಹಾಯಾಗಿದ್ದಾಳೆ.
ನಾನು ಪ್ರೇಮಿಯನ್ನು ಕಳೆದುಕೊಂಡಿರಬಹುದು ಆದರೆ ಪ್ರೀತಿಯನ್ನಲ್ಲ.
ಅವಳು ನನ್ನನ್ನು ಬ್ಲಾಕ್ ಮಾಡಿರಬಹುದು ಆದರೆ ಪ್ರೀತಿಯ ಸೆಳೆತವನ್ನಲ್ಲ.
ಎಂದಿನಂತೆ ವಿಶ್ ಮಾಡಿ ಸಿಮ್ ಕಟ್ ಮಾಡಿ ಎಸೆದ ಪ್ರಕಾಶ್.
ಸ್ಮಿತಾ ಯಾವತ್ತು ಪ್ರಕಾಶ್ ನನ್ನ ಮರೆತಿರಲಿಲ್ಲ.ಎಂದಿನಂತೆ ಅವನನ್ನು ಬ್ಲಾಕ್ ಮಾಡಲು ಇಂದು ಅವಳ ಮನಸ್ಸು ಸಿದ್ಧವಿರಲಿಲ್ಲ.ಇಂದೇಕೋ ಅವನಿಗೆ ಕರೆ ಮಾಡಬೇಕೆನಿಸಿತು.ನಾನಿನ್ನು ನಿನ್ನ ಮರೆತಿಲ್ಲ ಹೇಗಿದ್ದೀಯಾ ಅಂತ ಕೇಳಬೇಕೆನಿಸಿತು.
ನಂಬರ್ ಸೇವ್ ಮಾಡಿಕೊಂಡವಳೆ  ಫೋನ್ ಮಾಡಲು ಕಾಲ್ ಬಟನ್ ಪ್ರೆಸ್ ಮಾಡಿದಳು.
ಸ್ಮಿತಾ ಏನ್ ಮಾಡ್ತಿದ್ದೀಯಾ ಪಾರ್ಟಿಗೆ ರೆಡಿಯಾಗು ಎಂದ ಕೂಗಿಗೆ ಎಂಡ್ ಬಟನ್ ಅದುಮಿದಳು.


Monday, 23 December 2019

ಪಂಚಪದಿ-ಹೃದಯ

ಪಂಚಪದಿ -ಹೃದಯ

*೧*ವಿದಾಯಕೂ ಮುನ್ನ ಈ ಹೃದಯನ ಮಾತಾಡಿಸೇ ಓ ಮೌನಿ

*೨* ಹೆಚ್ಚೆನಾ ನಾ ಹೇಳಲಿ ಹುಚ್ಚು ಹೃದಯ ಚೂರು ಚೂರು,ನನ್ನೆದೆಯಲ್ಲಿ ನಿನ್ನದೆ ಪ್ರತಿಬಿಂಬ ನೂರಾರು

*೩* ಕದ ತೆರೆದ ಎದೆಯ ಮುಚ್ಚುವ ಮುನ್ನ ನೀ ಬಂದು ಕೂರು ಹೃದಯದಲಿ

*೪* ಪ್ರೀತಿ ಇರಿತಕ್ಕೆ ಸಿಕ್ಕಿ ಹೃದಯ ಭಾಗವಾಗಿದೆ.  ಹೃತ್ಕುಕ್ಷಿಯ ತುಡಿತದಿ ಕಂಬನಿ ಮಿಡಿದಿದೆ ಅಕ್ಷಿ.

*೫* ನಲುಗಿಸಬೇಡ ನಿನ್ನ ನಲ್ಮೆಯ ಹೃದಯವ,ಪ್ರೀತಿ ಕುಸುಮ ಅರಳಿಸಿ ಪಸರಿಸು ಪರಿಮಳವಾ

🖌 ಸಂದೇಶ ‌ಪೂಜಾರಿ ಗುಲ್ವಾಡಿ

Tuesday, 17 December 2019

ಜೀವನ ಪಯಣ

ಜೀವನ ಪಯಣ

ನಿನ್ನ ನಗುವೆ ನಿನ್ನ ಮೊಗವೇ ನನ್ನ ಜಗವು.
ನಗುವ ನಿನ್ನ ಮೊಗವೇ ನನ್ನ ಜಗವು.
ಈ ನಗೆಯ ಕಡಲಲ್ಲಿ ನಾ ಬಾಳ್ವೆನು |ಪ|

ನಮ್ಮಿಬ್ಬರ ಪ್ರೀತಿಯು ಸಾಗರದಾಳ
ಈ ಸಾಗರದಾಳದಲ್ಲಿಳಿದು ಮುತ್ತುಗಳ ಹುಡುಕುವ ಬಾ ಗೆಳತಿ
ಕೆಲ ಹೊತ್ತುಗಳ ಕಳೆಯುವ ಬಾ.|೧|

ಅದೆಷ್ಟು ಸಂವತ್ಸರ ಕಳೆದರು ತೀರ ತಲುಪದಾದೆಯಾ..
ಹೇಗೆ ಕರೆಯಲಿ ನಾ. ಈ ವಿರಹದುರಿಯಲಿ...
ಬೇಸರಿಸಿ ಕರೆದರೂ ಬಯಕೆ ಮನ್ನಿಸಲಾರೆಯಾ.ಗೆಳತಿ.|೨|

ಸನಿಹಕೂ ಸರಸಕೂ ಸುಳಿಯದೆ ಹೋದೆ
ಸಮಯಕೂ ಅರಿವಿಗೂ ಬಾರದ ನಿನ್ನ ಪಯಾಣ
ಹಾಗೆ ಮರೆಯಲು ಹೇಗೆ ಸಾದ್ಯ
ನಿನ್ನ ಜೋತೆ ಸಾಗಿದ ದೂರ
ಕೊಂಚ ಕೊಂಚವೇ ಈ ಹೃದಯ ಭಾರ.|೩|

🖋 ಸಂದೇಶ ಪೂಜಾರಿ ಗುಲ್ವಾಡಿ

Saturday, 7 December 2019

ದೀವಿಗೆಯ ಬೆಳಕಲಿ

     
          ದೀವಿಗೆಯ ಬೆಳಕಲಿ


ಯಾರೊ ದೀವಿಗೆಯ ಹಿಡಿದು ಬಂದರೋ
ಯಾರ ಹೃದಯವ ಬರಿದು ಮಾಡಲು.|ಪ|

ಬಂಧುಗಳ ತೊರೆದು ಬಂಧಿಯಾದೆ
ನಿನ್ನ ಬೆಚ್ಚನೆಯ ಬಂಧನದಲ್ಲಿ.
ಕನಸು ಕಂಡಂತೆ ಎಂದು ನಡೆಯಿತೆ
ಈ ಬಾಳ ಪಯಣದಲ್ಲಿ.

ಸುಡುವ ಒಡಲಿಗೆ ಸುಮದ  ಕಂಪೇತಕೆ
ಸುರಿವ ಮಳೆ ಸಾಕಲ್ಲವೇ ತಂಪೇರೊಕೆ?
ಕತ್ತಲೆ ಬಾಳಲಿ ಬೆಳಕ ಕಂಡು
ಹತ್ತಿರ ಬಂದರೆ ಎತ್ತರ ಎತ್ತರ
ಬಲು ಎತ್ತರ ಚಂದ್ರ ಬಿಂಬ.

ನೆತ್ತರ ಬತ್ತಿಸಿ ಬೆಳಕ ತೋರಿಸಿ
ಬಿಸಿಯ ಮುಟ್ಟಿಸಿ ಬೆಳೆದು ಹೋದರೋ..
ಮೋಹದ ಸುಳಿಗೆ ಸಿಕ್ಕು ಪ್ರೀತಿ
ಸುಕ್ಕುಗಟ್ಟಿ ಹೋಯಿತೇ..
 
      ಎಸ್.ಪಿ.ಗುಲ್ವಾಡಿ

Tuesday, 18 September 2018

ಮಣ್ಣಿನ ಗಣಪನೆ

ಮಣ್ಣಿನ ಗಣಪನೆ

ಮಣ್ಣಿನ ಗಣಪನೆ
ನಾ ನಿನ್ನ ಮಣ್ಣೆಂದು ಪೂಜಿಸಲಿಲ್ಲಾ.
ನನ್ನೆಲ್ಲಾ ಕಷ್ಟಕೆ ನೀ ನೀಡು ಸ್ಪಷ್ಟನೆ
ನಾ ನಿನ್ನ ಭಜಿಸಿದ್ದು ಸುಳ್ಳೆ..?

 ಕೈ ಎತ್ತಿ ಮುಗಿದಿಲ್ಲ..ಗರಿಕೆಯ ತಂದಿಲ್ಲಾ
ಹರಿಕೆಯಂತು ನಾ ಹೊತ್ತಿಲ್ಲ..
ನಿನ್ನ ನಾಮ ಮನದಲ್ಲಿರುವುದು ಸುಳ್ಳೆ..

ಹಚ್ಚಿದ ಬೆಂಕಿಗೂ ದೀಪದ ಬೆಳಕಿಗೂ
ವ್ಯತ್ಯಾಸ ನಾ ಕಾಣೆ
ಕೈ ಹಿಡಿದರೆ ಸುಡದೆ?
ಸುಡದೇ ಎನ್ನ ಕಾಪಾಡಿಕೋ

ಐಶ್ವರ್ಯ ಬೇಡಿಲ್ಲ..ಬೇರೇನು ಬೇಕಿಲ್ಲಾ‌.ಅದೃಷ್ಟ ನಂಬಿಲ್ಲ.
ಅದೃಶ್ಯವಾಗಿರುವ
ನಿನ್ನ ಒಲಮೆ ಒಂದೇ ಸಾಕೆನಗೆ....

ಸಂದೇಶ ಪೂಜಾರಿ ಗುಲ್ವಾಡಿ

Friday, 24 August 2018

ಪ್ರೀತಿಸಿಯೇ ಬಿಟ್ಟಳು -ಕಾದಂಬರಿ


ಪ್ರೀತಿಸಿಯೇ ಬಿಟ್ಟಳು







 ಜಾನ್ ನ ಪ್ರೇಮಸಾಗರದಲ್ಲಿ ಮುಳುಗಿದ್ದ ಸಿಲ್ವಿಯನ್ನು ಎಚ್ಚರಿಸಿದ್ದು ಮುಂಜಾನೆಯ ಸೂರ್ಯ ರಶ್ಮಿ.ಕಿಟಕಿಯ ಗಾಜನ್ನು  ಹಾಯ್ದು ಹೋದ ಬೆಳಗಿನ ಬೆಳಕಿನ ಕಿರಣಕ್ಕೆ ಉದಾಸೀನದಲ್ಲೆ ಓರೆಗಣ್ಣು ಮಾಡಿಕೊಂಡಳು. ಮಕ್ಕಳಿಬ್ಬರು ಗಂಡನ ಕಾಲುಗಳನ್ನು ದಿಂಬ ಮಾಡಿಕೊಂಡು ಮಲಗಿದ್ದರು.

 ವ್ಯಾವಹಾರಿಕವಾಗಿ ಪದವಿ ಪಡೆದಿದ್ದ ಜಾನ್ ಸ್ವಂತ ಉದ್ಯೋಗ ಮಾಡಿಕೊಂಡಿದ್ದನು.
ಇಂಜಿನಿಯರಿಂಗ್ ಮುಗಿಸಿದ್ದರೂ ಕೆಲಸ ಸಿಗದೆ ರಿಸೆಪ್ಸನ್ ಸೀಟ್ ಗೆ ಒಗ್ಗಿಕೊಂಡಿದ್ದಳು ಸಿಲ್ವಿ.
ಅವರದ್ದು ಸುಂದರ ಸಂಸಾರ. ಇಬ್ಬರು ದುಡಿಯುವದರಿಂದ ಮನೆ ಶ್ರೀಮಂತವಾಗಿತ್ತು.
ವಾರಕ್ಕೊಂದು ರಜೆ..ಇವತ್ತು ಸಂಡೆಯಾದುದರಿಂದ  ಇನ್ನು ಹಾಸಿಗೆಗೆ ಅಂಟಿಕೊಂಡಿದ್ದರು.

ಹೊರಗಡೆ ಹೊಗೋಣ ರೀ.. ಸಿಲ್ವಿ ನಾನ್ಸಿಗೆ  ಡ್ರೆಸ್ ಹಾಕಿದಳು.ಅವಳಿಗಿನ್ನು ಎರಡು ವರ್ಷ ತುಂಬಿಲ್ಲ.ಅಮ್ಮ ಹರ ಸಾಹಸಮಾಡಿ ತೊಡಿಸಿಯೇ ಬಿಟ್ಟಳು.

ಈಗ ತಾನೆ ಐರನ್ ಮಾಡಿಟ್ಟ ಶರ್ಟ್ ಎಲ್ಲಿ..ಒವ್ ಕೊಡು ಸ್ಟಿಪನ್
ಜೋಳಿಗೆಯಂತೆ ಅಪ್ಪನ ಅಂಗಿ ಹಾಕಿ ಕೊಂಡಿದ್ದ ಸ್ಟಿಪನ್.
ಇಲ್ಲ ಕೊಡಲ್ಲ..ನಾನ್ ಕೊಡಲ್ಲ..

ಹಾಗದ್ರೆ ನಿನ್ ನನ್ನ ಮಗನಲ್ಲ..ನಾನ್ಸಿ ಮಾತ್ರ ನನ್ ಮಗಳು..

ಹೌದಪ್ಪ ನಾನ ನಿನ್ನ ಮಗನಲ್ಲ..
  ತಾಯಿ ಗಲಿಬಿಲಿಗೊಂಡಳು...
ನಾನು ಅಮ್ಮನ ಮಗ..

ಒಂದ್ಸಲ ಗಲಿಬಿಲಿಗೊಂಡ ತಾಯಿ ಖಷಿಯಾದಳು.

ವಾರವಿಡಿ ಬ್ಯುಸಿಯಾಗಿದ್ದ ಅವರು ಸಂಡೆ ಬಜಾರ್ ಗೆ ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು ಖರಿದಿಸಿದರು. ಜನ ಸಂದಣಿ ದಟ್ಟವಾಗಿತ್ತು.ಮನೆಗೆ ಬೇಕಾದ ಎಲ್ಲಾ ಸಾಮಾನುಗಳು ಒಂದೇ ಸೂರಿನಡಿ ಸಿಗುತ್ತಿರುವುದರಿಂದಲೋ ಸ್ವಲ್ಪ ಡಿಸ್ಕೌಂಟ ಕಾರಣದಿಂದಲೊ ಜನ ಮುಗಿಬೀಳುತ್ತಿದ್ದರು.
 ಸಂಜೆ ತುಂಬ ತಡವಾಗಿರುದರಿಂದ ಯಾವುದೆ ಆಟೋ ಆ ಕಡೆ ಸುಳಿಯುತಿರಲಿಲ್ಲ.
ಮೊಣಭಾರದಿಂದ ಹಣೆ ಬೆವರಿಳಿಯಿತು..ಒಂದೆ ಒಂದು ಸೌತೆಕಾಯಿ ಹೊತ್ತ ಸ್ಟಿಪನ್ ಮುಂದಕ್ಕೊಮ್ಮೆ ಹಿಂದಕ್ಕೊಮ್ಮೆ ಓಡಾಡುತ್ತಿದ್ದ. 

ಅಮ್ಮ ಆಟೋ ಬರ್ತಿದೆ‌‌‌‌‌‌. 
ಸಿಲ್ವಿ  ಅಟೋ ನಿಲ್ಲಿಸುವುವಂತೆ ಕೈ ಆಡ್ಡಮಾಡಿದಳು..ಆಟೋ ನಿಲ್ಲಿಸದೆ ಮಂದೆ ಸರಿಯಿತು... ಹಿಂದಿರುಗಿ ನೋಡಿದ ಆತ..ಸಿಲ್ವಿ ದಿಗ್ ಭ್ರಾಂತಳಾದಳು‌‌‌‌‌‌‌.
                                 ***

30 ವರ್ಷಗಳ ಹಿಂದಿನ ಕತೆ
          ಮಗಳು ಮದುವೆ ವಯಸ್ಸಿಗೆ ಬಂದಿದ್ದರೂ ಸಂಬಂಧ ಕೂಡಿ ಬಂದಿರಲಿಲ್ಲ.ಬಡತನದಲ್ಲಯೆ ಹುಟ್ಟಿದ ಜೀವವದು.ತುಂಬ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಅಣ್ಣ ಜೇನಕ್ನ ಸ್ನೇಹಿತ ಕೊನೆಗೆ ಎಲ್ಲಿಂದಲೋ ವರ ಮಹಾಶಯನ ಹುಡುಕಿದ. ಮದುವೆಯೂ ಮುಗಿಯಿತು,ಒಂದೊಂದರಂತೆ ಮೂರು ಹೆಣ್ಣು ಮಕ್ಕಳನ್ನು ಹೆತ್ತ ತಾಯಿ ಗಂಡು ಮಗುವಿಗಾಗಿ ಕಾದಳು. ಮೊದಲ ಮಗಳೆ ಸಿಲ್ವಿ..

ನವ ಮಾಸಗಳು ತುಂಬಿದ್ದವು..ಮಳೆಗಾಲದ ಸಂಜೆ ಸಹಿಸಲಾರದಷ್ಟು ಹೆರಿಗೆ ನೋವು...ಸಂಜೆ ಮಳೆಯ ಕಾರಣ ಬೆಳಗಿನವರೆಗೆ ಕಾಯುವುದು ಮನೆಯವರ ಮಾತಾಗಿತ್ತು‌...ಆದರೆ... ಇದ್ದಕ್ಕಿದ್ದಂತೆ ನೋವು ಹೆಚ್ಚಾಗಿ ಎಲ್ಲರೂ ಕಂಗಲಾಗಿ ಆಸ್ಪತ್ರೆಗೆ ಕೊಂಡೊಯ್ಯುವುದರಲ್ಲಿ ಮಗುವಿನೊಂದಿಗೆ ತಾಯಿ ಕೂಡ  ಜೀವನ ಮುಗಿಸಿದಳು.

ಸಿಲ್ವಿ, ಜೋತ್ಸ್ನಾ ಹಾಗೂ ರೇಷ್ಮಾ ಮೂರು ಹೆಣ್ಣುಮಕ್ಕಳು. ಏನು ಅರಿಯದ ಮಕ್ಕಳ ರೋಧನ ಮುಗಿಲು ಮುಟ್ಟಿತು.
ಆದರೆ ಹಿರಿಯ ಮಗಳು ಸಿಲ್ವಿ ಅಳಲಾರದೆ ಹೋದಳು.ಮಾತೆ ನಿಂತು ಹೋಯಿತು.
ಇತ್ತ ಅಂತೋನಿ ಹೃದಯ ಸ್ತಂಭನಗೊಂಡು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು.

ಅಂತೋನಿ ತನಗಲ್ಲದಿದ್ದರು ಮಕ್ಕಳಿಗಾಗಿ ಮರು ಮದುವೆಯಾಗಬೇಕಾಯಿತು.

ಸಿಲ್ವಿಗೆ ಮಾತು ನಿಂತು ಮೂಕಿಯಾದಳು ಅನ್ನುವಷ್ಟರಲ್ಲಿ ಜೀಸಸ್ ನ ಕೃಪೆಯಿಂದ ಮತ್ತೆ ಮಾತನಾಡಲಾರಂಭಿಸಿದಾಗ ಮನೆಯವರೆಲ್ಲಾ ಖುಷಿಪಟ್ಟಿದ್ದರು.

ತಾಯಿ ಯಾವಾಗಲೂ ತಾಯಿಯೇ ಚಿಕ್ಕಮ್ಮ ಎಂಬ ಮಕ್ಕಳ ಕೂಗು ಕೊಂಚ ಬೇಸರ ತರುತ್ತಿತ್ತು.
        ****

ನೋಡಲು ಅಂಧವಾಗಿದ್ದಳು..ಸಿಲ್ವಿ ಹಣೆಯ ಮೇಲಿನ ಇಳಿಬಿದ್ದ ಮುಂಗುರುಳು ಅವಳಿಗೆ ಮತ್ತಷ್ಟು ಸೌಂದರ್ಯ ತಂದುಕೊಡುತ್ತಿತ್ತು.

ಕಾಲೆಜ್ ಕಾರಿಡಾರ್ ನಲ್ಲಿ ಅವಳದ್ದೆ ಹವಾ..ಎಲ್ಲಾ ಹುಡುಗರ ಹೃದಯ ಬಡಿತವಾಗಿದ್ದ ಅವಳನ್ನ ಸಿಂಡರ್ಲಾ..ಎಂದು ಕರೆದು ಚೇಡಿಸುತ್ತಿದ್ದರು..

ಯಾವದೇ ಕಾರಣಕ್ಕೂ ತಂದೆಯ ಮನ ನೋಯಿಸಬಾರದು ಎಂದು ತನ್ನೆಲ್ಲಾ ಆಸೆಗಳನ್ನು ಅದುಮಿಟ್ಟು ಓದಿನೆಡೆಗೆ ಗಮನ ಹರಿಸಿದಳು.

ಹೀಗಿದ್ದರೂ ಒಂದು ದಿನ ತನಗರಿವಿಲ್ಲದಂತೆ ಪ್ರೀತಿಯ ನಾಟಕದಲ್ಲಿ ತಾನೂ ಪಾತ್ರಧಾರಿಯಾದಳು...
ಅದೊಂದು ಅಟೋನಾಮಸ್ ಇಂಜಿನಿಯರಿಂಗ್ ಕಾಲೇಜು. ಹಳ್ಳಿಯಾಗಿದ್ದರೂ ಸುಂದರ ತಾಣ, ಪ್ರಕೃತಿ ಮಡಿಲಲ್ಲಿ ಶಾಂತವಾಗಿತ್ತು. ಕರ್ನಾಟಕದ ಒಂದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು.
ಸರಿ ಸುಮಾರು 23 ಎಕ್ರೆ ವಿಸ್ತೀರ್ಣ ಆವರಿಸಿರುವ ಕಾಲೇಜು ಕ್ಯಾಂಪಸ್ ಆಟದ ಮೈದಾನ, ಬ್ಯಾಂಕ್,ದೇವಾಲಯ, ಪಾರ್ಕ ,ಜಿಮ್ ಹೀಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿತ್ತು.
ಅಕ್ಕ ಪಕ್ಕದಲ್ಲಿ ಡಿಪ್ಲೊಮಾ,ಡಿಗ್ರಿ ಹಾಗೂ ಎಂ.ಬಿ.ಎ.ಕಾಲೇಜುಗಳಿದ್ದವು.. ರಜಾ ದಿನಗಳಲ್ಲಿ ಎಲ್ಲರು ಊರಿಗೆ ಹೋಗುತ್ತಿರುವುದರಿಂದ ಸ್ವಲ್ಪ ಬೋರ್ ಎನಿಸಿದರೂ ಉಳಿದ ದಿನಗಳು ವಿದ್ಯಾರ್ಥಿಗಳಿಗೆ ಜಾತ್ರೆಯಂತೆ ಭಾಸವಾಗುತ್ತಿತ್ತು.
                      ****
ಮನೋಹರ ಹಾಗೂ ಜೀವನ್ ಅಣ್ಣ ತಮ್ಮಂದಿರು.. ಮನು ಒಂತರ ಮುಗ್ದ ಹುಡುಗ. ತನ್ನ ತಮ್ಮ ಅಂದ್ರೆ ತುಂಬ ಪ್ರೀತಿ.

ಒಂದು ದಿನ ಸ್ಕೂಲಿಂದ ಅಳ್ತಾ ಬಂದಿದ್ದ. 
ವಿಷಯ ಇಷ್ಟೆ.ಯಾರೋ ಹೇಳಿದ್ರಂತೆ ಇವರ ಅನ್ಯೋನ್ಯತೆ ಕಂಡು 
ಚಿಕ್ಕ ಮಕ್ಕಳು ಹೀಗಿದ್ದಾರೆ.ದೊಡ್ಡವರಾದ ಮೇಲೆ ಹೊಡೆದಾಡಕೊಳ್ತಾರೆ..

ತನ್ನ ತಮ್ಮ ದೊಡ್ಡವನಾಗಬಾರ್ದು..ಅಂತ ಅಳ್ತಾ ಇದ್ದ.

ತಂದೆ ತಾಯಿ ತುಂಬ ಓದಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದರು.
ತುಂಬ ಚೆನ್ನಾಗಿ ಓದುತ್ತಿದ್ದ ಮನೋಹರ್ ಗೆ ಇಂಜಿನಿಯರಿಂಗ್ ಬಾಲ್ಯದ ಕನಸಾಗಿತ್ತು.
ಬಾಲ್ಯದಲ್ಲೇ ಡಯೋಡ್, ರೆಸಿಸ್ಟರ್,ಬಲ್ಬ,ಬ್ಯಾಟರಿ ಹಾಗೂ ಡಿಸಿ ಮೋಟಾರೆ ಅವನ ಆಟದ ಸಾಮಾನುಗಳು...



ಹೌದು ಅವಳೇ.. ನಾನು ತಿರುಗಿ ನೋಡಿದ್ದು..ಅವಳು ನೋಡಿದ್ದಾಳೆ..
ಛೆ...ಬೇರೆಯಾರದರು...
ಇಲ್ಲಾ ..ಅವಳ ನೋಟ ನನ್ನ ಅಣುಕಿಸುತ್ತಿತ್ತು.
 ಮೈ ಜುಮ್ ಅನ್ನುವಂತಾಯಿತು..ಅವಳು ಇದೇ ಊರಲ್ಲಿದ್ದಾಳೆ...

ರಕ್ತ ಕುದಿಯಿತು.ಕಾಲು ನಡುಗಿ ಅಲ್ಲೆ ಕುಸಿದು ಕುಳಿತ ಮನೋಹರ.
ಪ್ರೀತಿಸಿದ ಹುಡುಗಿ ಮೋಸ ಮಾಡಬಹುದು. ಆದರೆ ಕೈ ಹಿಡಿದವಳು ಮೋಸ ಮಾಡುವಳೇ..
ಮೋಸಗಾರರು ಯಾರಿಲ್ಲಿ.ತನ್ನ ಬದುಕಲ್ಲಿ ಇಂತಹದೊಂದು ತಿರುವು ಬರುವುದೆಂದು ಮನೋಹರ ಎಂದು ಯೋಚಿಸಿರಲಿಲ್ಲ..ನಾವು ಹಾಕಿದ ಪ್ಲಾನ್ ನಂತೆ ಜೀವನ ಎಂದು ಸಾಗಲ್ಲ..ಬದುಕಲ್ಲಿ ಏಳು ಬೀಳು ಸಹಜ ಇವೆ ನಮ್ಮ ಪಾಲಿನ ಅನುಭವಗಳು.ಈ ಅನುಭವಗಳು ಗಟ್ಟಿಯಾದಂತೆ ಮನಸ್ಸು ಪರಿಪಕ್ವಗೊಳ್ಳುತ್ತದೆ.ಅನುಭವದಿಂದ ಪಕ್ವಗೊಂಡ ಮನಸ್ಸು ಮುಂದಿನ ಜೀವನವನ್ನು ಎದುರಿಸಲು ನಮ್ಮನ್ನು ಅಣಿಗೊಳಿಸುತ್ತದೆ.ಜೀವನದಲ್ಲಿ ಗೆಲುವು ಮುಖ್ಯ ಹೇಗೆ ಗೆಲ್ಲುವೆವು ಅನ್ನುವುದು ಪರಿಗಣನೆಗೆ ಬರಲ್ಲ. ತನಗೆ ತಾನೆ ಸಮಧಾನ ಮಾಡಿಕೊಂಡ ಮನು.
             *****


ಅದು ಹಾಗಲ್ಲಾ  ಉಲ್ಟಾ ಇಡಬೇಕು ಕಾಣೊ. ಮನೋಹರ ಜೋಡಿಸಿದ್ದ ಪ್ಲವರ್ ಗಳನ್ನೆಲ್ಲ  ಮತ್ತೆ ಜೋಡಿಸಿದಳು. 
ಒಂದೇ ಒಂದು ಗುಲಾಬಿ ಹಿಡಿದು  ಐ ಲವ್ ಯು ಮನು ಅಂತ ತಮಾಷೆ ಮಾಡಿದಳು. ಮನೋಹರ ನಾಚಿಕೆಯಿಂದ ತಲೆ ತಗ್ಗಿಸಿದ..  

ಇಂಟರ್ ಕಾಲೇಜ್ ಪೆಸ್ಟ ಇವರ ಕಾಲೇಜಿನಲ್ಲಿ ಆಯೋಜಿರುವುದರಿಂದ  ಅವರವರಿಗೆ ಒಪ್ಪಿಸಿದ ಆರೆಂಜ್ ಮೆಂಟ ಮಾಡುತ್ತಿದ್ದರು.
ಓದಿನ ನಡುವೆ ಸಲ್ಪ ಬಿಡುವು ಅಂದರೆ ಆ ಮೂರು ದಿವಸಗಳು.

ಮನೋಹರ ಒಬ್ಬನೆ ಒಳಗೊಳಗೇ ನಗುತ್ತಿದ ನೋಡಿ 
ಏನೊ ಸಮಾಚಾರ   ಅಂದಾಗ 
ಅವನ ಮುಖ ಗಾಬರಿಯಿಂದ ಕಪ್ಪಿಟ್ಟಿತು.
ಪದೆ ಪದೇ ಹುಡುಗರ ಕೀಟಲೆ ಅವನ ಮನಸಲ್ಲಿ ಪ್ರೀತಿ ಹುಟ್ಟಿಸಿರಬಹುದು.

ಹುಚ್ಚು ಆಸೆ ಹೆಚ್ಚಿನದು ಸಾಧಿಸಲಾರೆ ಎಂದು ತಿಳಿದು ತಿಳಿದು ಹಳ್ಳಕ್ಕೆ ಬಿದ್ದವ..

ಕೆಲವೊಮ್ಮೆ ನಮಗಿಷ್ಟವಿಲ್ಲದಿದ್ರು  ನಮ್ಮ ಪ್ರೆಂಡ್ಸು ನಮ್ಮನ್ನ ಹಾಳು ಮಾಡ್ತಾರೆ.ಹಮ್ ಅದೇ ಅಲ್ವಾ ಕಾಲೇಜ್ ಜೀವನ..

ಮನೋಹರ ಇತ್ತಿಚೆಗೆ ಸ್ವಲ್ಪ ಸ್ವಲ್ಪವೇ ಅವಳ ಪ್ರೀತಿಯ ಗುಂಗಲ್ಲಿ ಬಿದ್ದು ಬಿಟ್ಟಿದ್ದ.
ಎನೇನೋ ಆಲೋಚನೆ ಅವಳ ರಂಗಾದ ತುಟಿ ಕಂಡಾಗೆಲ್ಲ ತನ್ನ ತುಟಿಯನ್ನ ತಾನೆ ಕಚ್ಚಿ ಕೊಳ್ಳುತ್ತಿದ್ದ.
ಹುಡುಗ ಎಂದು ಅಸಭ್ಯ ವರ್ತನೆ ತೋರಿದವನಲ್ಲ.
ಆದರೂ ಪದೆ ಪದೆ ಅವಳ ತೆರೆ ಮರೆಯ ಸೌಂದರ್ಯಕ್ಕೆ ಹಾತೊರಯುತ್ತಿದ್ದ.ಇದೇನು ಹೊಸತಲ್ಲ.ಹರೆಯದಲಿ ಎಲ್ಲರಂತೆ ಅವನಿಗೂ ಸ್ವಲ್ಪ ಸ್ವಲ್ಪ ಅನುಭವ ಅಷ್ಟೇ.

ಮಂದಿರಾ... ವಿದ್ಯೆ,ಐಶ್ವರ್ಯ ಹಾಗೂ ಸೌಂದರ್ಯ ಇವು ಮೂರು ಒಬ್ಬರಲ್ಲೆ ಇರುವುದು ಅತಿ ವಿರಳ. ಸೌಂದರ್ಯದ ವಿಷಯದಲ್ಲಂತು ಮಂದಿರಾ ಅತಿ ದೂರ.

ಮಂದಿರಾ...ಮಂದಿರಾ..
ಅಮಾವಾಸ್ಯೆ.. ಚಂದಿರಾ.

ಅವಳೆದುರು ಬಂದಾಗೆಲ್ಲಾ ಹುಡುಗರದ್ದು ಇದೇ ಹಾಡು.

ಯಾಕೊ ಸುಮ್ನೆ ಬೇಸರ ಮಾಡ್ತೀರಾ ಅವಳಿಗೆ..ಏನ್ನುತ್ತಿದ್ದ ಮನೋಹರ.
 ಅವಳೆದೆ ಮಂದಿರದಲ್ಲಿ ಮನೋಹರನ ಮೂರ್ತಿ ಪ್ರತಿಷ್ಟಾಪಿಸಿದ್ದಳು.ಸಾಲದ್ದಕ್ಕೆ ಎದೆ ಮೇಲೆ  ಹಚ್ಚೆ ಹಾಕಿಸಿಕೊಂಡಿದ್ದಳು..ಅದೇಕೋ ನಾ ಕಾಣೆ ಹೃದಯಕ್ಕೆ ಹತ್ತಿರವಿರಲಿ ಅನ್ನವ ಕಾರಣಕ್ಕೊ ಅಥವಾ ಯಾರಿಗೂ ಕಾಣಿಸಬಾರದು ಅನ್ನೋ ಸೀಕ್ರೇಟ್ಸ್ ಗೊಸ್ಕರನೋ..

ಸಂಜೆ ೫:೪೫ ಇರಬಹುದು.ಕಾಲೇಜು ಬಿಟ್ಟು ತಂಬಾನೆ ಹೊತ್ತಾಗಿತ್ತು..ಒಂದೇ ಸಮನೆ ಸುರಿಯುತ್ತಿರುವ ಮಳೆ,ಕಾಲೇಜ್ ಕಾರಿಡಾರ್ ನಲ್ಲಿ ಅಲ್ಲಲ್ಲಿ ಕೆಲವರು ನಿಂತಿದ್ದರು.
ಕಾಲೇಜು ಅಂದಮೇಲೆ.ಬ್ಯಾಗ್ ಛತ್ರಿ.ಟಿಪನ್ ಬಾಕ್ಸ್ ಇವೆಲ್ಲಾ ತರೋದು ಸ್ವಲ್ಪ ಒಲ್ಡ್ ಪ್ಯಾಶನ್ನೆ..

ಅದೇನ್ ಲಕ್ಕೊ ಆಫೀಸ್ ರೂಮ್ ಪಕ್ಕದಲ್ಲಿ ಯಾರೊ ಬಿಟ್ಟು ಹೋಗಿದ್ದ ಕೊಡೆ ಹಿಡಿದು ನಡೆದ ಮನೋಹರ..

ಐದುವರೆ ಅಡಿ ದೇಹವನ್ನ ನಾಲ್ಕುವರೆ ಮಾಡಿ ಕಂಬಕ್ಕೊರಗಿದ್ದ ಅವಳ ಲಕ್ಷ್ಯ ತಂಬಾ ದೂರನೆ ಇತ್ತು.
ಬೇಲೂರಿನ ಪ್ರತಿಬಿಂಬ ಇವಳದ್ದೆ ಇರಬಹುದೆ?
 ಮನೋಹರ ಕೊಂಚ ದೈರ್ಯತಂದುಕೊಂಡು ತನ್ನ ಎರಡೂ ಕೈಗಳಿಂದ ಅವಳ  ಕಣ್ಣುಗಳನ್ನ ಅದುಮಿದ..

ಅವಕ್ಕಾದ ಸಿಲ್ವಿ ಹಿಂದಿರುಗಿದಳು..

ಒವ್ ಮನು..

ಹಾಂ..ನಾನೇ ಕಾಣೆ..  ಕೊಂಚ ಗದ್ಗದಿತ ಧ್ವನಿಯಲ್ಲೆ ಉತ್ತರಿಸಿದ

ಮನುವಿನ ಸ್ಪರ್ಷಕ್ಕೆ ಮನಸ್ಸು ಕೊಂಚ ಗಲಿಬಿಲಿಯಾಯಿತು..ಇದ್ಯಾವುದನ್ನು ತೋರಿಸಿಕೊಳ್ಳದೆ ಸ್ವಲ್ಪ ದೂರ ಸರಿದು ನಿಂತಳು..
ಮಾತು ಬದಲಾಯಿಸಿದಳು    "ಈ ಮಳೆ ಇವಾಗ್ಲೇ ಶುರು ನೋಡು"
ಸಿಲ್ವಿ ಹಾಸ್ಟೆಲ್ ಇರುವುದು ಇನ್ನೂ ಒಂದು ಕಿಲೋಮೀಟರ್ ದೂರ.
ಹೋಗೋಣ ಬಾ ಎಂದು ಕರೆದ ಅವನ ಮಾತಿಗೆ ಮರುಮಾತನಾಡದೆ  ಜೊತೆ ನಡೆದಳು.
ಮಳೆ ಆರ್ಭಟಿಸುತ್ತಿದ್ದರೆ ಹಿಮದ ಗಾಳಿಗೆ ಚಳಿ ಚುಮುಚುಮು ಅನಿಸುತ್ತಿತ್ತು.
ಆಗೊಮ್ಮೆ ಈಗೊಮ್ಮೆ ಎಲ್ಲ ಕಡೆಯಿಂದ ನುಸುಳುತ್ತಿದ್ದ ಗಾಳಿ ಅವರನ್ನು ಮಳೆಯಿಂದ ತೋಯಿಸುತ್ತಿತ್ತು.
ಕೊಡೆ ನೆಪಮಾತ್ರ ಮಳೆಯಿಂದ ಅವರು ಅರ್ಧ ಒದ್ದೆಯಾಗಿ ಹೋಗಿದ್ದರು.ಮಳೆ ಇನ್ನೂ ಹೆಚ್ಚಾದಾಗ ಅಲ್ಲೇ ಹತ್ತಿರವಿದ್ದ ಮರದ ಬಳಿ ನಡೆದರು.
ಅವರ ವಯಸ್ಸು ಅಂತಹದು ಮನಸ್ಸಿನ ಭಾವನೆಗಳು ಗರಿಬಿಚ್ಚಿ ನರ್ತಿಸುತ್ತಿತ್ತು ಬಣ್ಣ ಬಣ್ಣದ ಕನಸುಗಳು ಮಿಂಚಿ ಮರೆಯಾಗುತ್ತಿತ್ತು.
ಬಯಕೆ ಬಿಚ್ಚಿಡದೆ ಹೋದರೂ ಅವನ ಬಿಸಿ ಉಸಿರು ತಾಗಿ ನಸು ಕೆಂಪಾದ ಅವಳು ಆ ಹಸಿ ಮಳೆಯಲ್ಲಿ ತುಸು ನಕ್ಕಳು.
ಕೊಂಚ ಆಹ್ಲಾದಕರವಾದ ಮನಕ್ಕೆ ಅವಳಿಂದ ಒಪ್ಪಿಗೆ ದೊರೆತಂತಾಯಿತು.
ಮನುವಿಗೆಕೊ ಹದಿನೈದು ನಿಮಿಷದ ದಾರಿ ಕೇವಲ ಮೂರು ನಿಮಿಷದಲ್ಲೆ ಮುಗಿದುಹೋಯಿತಲ್ಲ ಎನಿಸುತ್ತಿತ್ತು.
ಇದುವರೆಗೂ ಅವಳ ಆಕರ್ಷಣೆಯಲ್ಲಿ ಇದ್ದ ಮನುವಿಗೆ ನೈಜ ಪ್ರೇಮ ಆ ಜಡಿ ಮಳೆಯಲ್ಲಿ ಹುಟ್ಟಿತೆಂದರೆ ತಪ್ಪಾಗಲಾರದು.

ಜೊತೆಯಲ್ಲಿದ್ದಷ್ಟು ಹೊತ್ತು ಪ್ರಪಂಚವನ್ನೇ ಮರೆತಿದ್ದರು ಏನು ಮಾತನಾಡದ ಮೂಕರು. ಅಗಲಿಕೆ ಎಂದಾಗ ಹೇಳಿಕೊಂಡಷ್ಟು ಮುಗಿಯದ ಮಾತಿದೆ. ಹಾಸ್ಟೆಲ್ ತಲುಪಿದ ಸಿಲ್ವಿ ಒಂದೊಂದೆ ಮೆಟ್ಟಿಲೇರುತ್ತಾ ಕೈ ಬೀಸಿ ಅವನ ಬಿಳ್ಕೊಡುತ್ತಿದ್ದಳು.ಅವಳು ಮರೆಯಾಗುವವರಗೂ ಅವನು ನೋಡುತ್ತಿದ್ದ.ವಿರಾಹದ ನೋಟ ಅವರಿಬ್ಬರನ್ನು ಭಾವುಕರನ್ನಾಗಿಸಿತ್ತು.

ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡಿದಳು ..ಅವನ ನೆನಪೆ ಕಾಡುತ್ತಿತ್ತು.. ಹೇ ಹುಡುಗ ಯಾಕಿಷ್ಟು ದೂರ..
ಯಾಕೆ ಹೀಗೆ ಕಾಡುತ್ತಿರುವೆ..ನನ್ನ ಹೃದಯದ ತಳಮಳ ನಿನಗೆ ತಿಳಿಯದೆ..ಬಳಿ ಬಂದು  ನನ್ನ ಸೇರಬಾರದೆ..ಹೀಗೆ ಪ್ರೀತಿ ಗುಂಗಲ್ಲಿ ಚಡಪಡಿಸುತ್ತಾ  ಮಂದಿರಾ ಎದೆಯ ಮೇಲಿನ ಹಚ್ಚೆಯ ಸವರಿಕೊಂಡಳು..ಹಚ್ಚೆಯ ಶಾಯಿಂದ
ಮನುವಿನ ಹೆಸರು ಹಚ್ಚ ಹಸುರಾಗಿತ್ತು.
ಅವಳು ಅದೆಷ್ಟು ಬಾರಿ ಪ್ರಪೋಸ್ ಮಾಡಿದ್ದರೂ ಮನು ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ.  ನಸುನಕ್ಕು ಸುಮ್ಮನಾಗುತ್ತಿದ್ದ.
ಮಂದಿರಾ ಹೈ ಸೊಸೈಟಿಯ ದೊಡ್ಡ ಬ್ಯಾಗ್ರೌಂಡ್ ನ ಹುಡುಗಿ. ಬಯಸಿದ್ದೆಲ್ಲ ಕೊಂಡುಕೊಳ್ಳುವಷ್ಟು ಹಣ ಅವಳಲ್ಲಿತ್ತು.ಅದ್ಯಾಕೊ ಮನುವಿಗೆ ಮಾರು ಹೋಗಿದ್ದಳು.ಪ್ರೀತಿಯನ್ನು ಹಣದಿಂದ ಕೊಂಡುಕೊಳ್ಳಲಾಗದು ಎಂದರಿತಿರುವುದರಿಂದ ಮನುಗಾಗಿ ಅವನ ಹಿಂದೆ ಬಿದ್ದು ಗೋಳಾಡುತ್ತಿದ್ದಳು.

ಇನೈದು ದಿನ ಕಾಲೆಜಿಗೆ ರಜೆ ಇದೆ..ಅದೆ ಮಂದಿರಾನ ಗೊಂದಲಕ್ಕೆ ಕಾರಣ. ಹೇಗೆ ಮನುವನ್ನು ನೋಡಲಿ ..ಅವಳಿಗೆ ನಿದ್ದೆ ಬಂದಿಲ್ಲ..ಹಾಗೆ ಹಾಸ್ಟೆಲ್ ರೂಮ್ ನಿಂದ ಹೊರಬಂದಳು..ಯಾರೊ ಪೋನಿನಲ್ಲಿ ಮಾತಾಡುತ್ತಿದ್ದರು.
"ಪ್ಲೀಸ್ ಮನು ಮೀಟ್ ಅಗೊಕೆ ಅಗಲ್ಲ"
ಅರ್ಥ ಮಾಡ್ಕಳ್ಳೊ ಕಾಲೇಜಿನಲ್ಲಿ ಸಿಗ್ತಿಯಲ್ಲ ಏನಂತ  ಅಲ್ಲೆ ಹೇಳೊ.."
"ಇಲ್ಲಾ ಪ್ಲೀಸ್ ನಿನ್ ಜೊತೆ ಪರ್ಸನಲಾಗಿ ಮಾತಡಬೇಕು."
"ಆಗಲ್ಲಾ ಏನಿವಾಗ"
"ಇಷ್ಟೇ ತಾನೆ"
ಯಾವುದು ಸ್ಪಷ್ಟವಾಗಿರಲಿಲ್ಲ..ಅಸ್ಪಷ್ಟ ಮಾತುಗಳು ಕೇಳಿ ಬರುತ್ತಿದ್ದ ಕಡೆ ನಡೆದಾಗ.ಅ ಕತ್ತಲಲ್ಲಿ ಏನು ಕಾಣಿಸದಾಯ್ತು‌.
ನನ್ನದು ಭ್ರಮಲೋಕ ಸದಾ ಮನು ಮನು ಮನು..
ನಾನು ಹುಚ್ಚಿಯಾಗಿದ್ದನಿ..
ಅವಳಿಗೆ ಅವಳೆ ಸಮಾಧಾನ ಮಾಡಿಕೊಂಡಳು.

"ಸನ್ನಿಧಿ ಗಾರ್ಡನ್" ವಿಶಾಲವಾದ ಪಾರ್ಕ.ವಿವಿಧ ಬಗೆಯ ಗಿಡ ಮರಗಳು ,ಬಗೆಬಗೆಯ ಹೂ ಗಿಡಗಳು..ತೂಗು ಉಯ್ಯಾಲೆಗಳು,ಕಲ್ಲು ಮಂಚಗಳು.ಹಕ್ಕಿ ಸಂಕುಲಗಳು.ನೀರಿನ ಕೊಳಗಳು,ಮೀನಿನ ಪಾಂಡ್ ಗಳು ಹೀಗೆ ಮಿನಿ ಲಾಲ್ ಭಾಗ್ ಅನ್ನವಂತೆ ಕಂಗೊಳಿಸಿತ್ತು.
ಇನ್ನೊಂದು ಕಡೆ ಗ್ರಂಥಾಲಯಗಳು.ಪುಟ್ಟದೊಂದು ದೇವಸ್ಥಾನ.ಅಲ್ಲೆ ಪಕ್ಕದಲಿ ಸ್ಮಾರಕ..ಚಿಕ್ಕದೊಂದು ಹರಿಯುವ ಝರಿ.
ಇಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯಾರಿಗೂ ಪ್ರವೇಶವಿರಲಿಲ್ಲ.
ಐಡಿ ಕಾರ್ಡ್ ಗಳಿಂದ ಪ್ರವೇಶ ದ್ವಾರ ತೆರೆಯುತ್ತಿತ್ತು.

ತುಂಬ ಹೊತ್ತಿನಿಂದ ಅವನು ಕಾಯುತ್ತಿದ್ದ ಅವಳ ಅಗಮನವಿರಲಿ ಯಾರು ಕೂಡ ಅತ್ತ ಕಡೆ ಸುಳಿದಿಲ್ಲ.
ಸೌಂದರ್ಯ ರಾಶಿಯಲ್ಲಿ ಕುಳಿತ್ತದ್ದರೂ ಪ್ರಕೃತಿಯನ್ನು ಆಸ್ವಾಧಿಸುವ ಮನಸ್ಸಾಗಲಿ ಚೈತನ್ಯವಾಗಲಿ ಅವನಲ್ಲಿ ಇದ್ದಂತಿಲ್ಲ.ಇನ್ನೊಂದು ತಾಸು ಕಾಯಲು ಸಿದ್ದನಿದ್ದ.

ಅಬ್ಬಾ ಸ್ವರ್ಗದಿಂದ ದೇವತೆಯೇ ಇಳಿದು ಬಂದಂತೆ.ಒಂದು ಅರ್ಥವಾಗದ ಮನು ಅವಳತ್ತ ನೋಡತೊಡಗಿದ.
ಯಾಕಿಷ್ಟು ಅಲಂಕಾರ ಹಸೆಮಣೆ ಏರುವ ವಧುವಿನಂತೆ ಕಂಗೊಳಿಸುತ್ತಿದ್ದಳು. ಮನ ಮೋಹಕ ಚೆಲುವೆ ಹತ್ತಿರ ಬರುತ್ತಿದ್ದರೆ ಅವಳ ಕೈಗಳ ನೋಡಿ ಮನು ನಡುಗಲಾರಂಬಿಸಿದನು.
ಸಿಲ್ವಿ...
ಅವಳು ನಿರ್ಧಾರ ಮಾಡಿಕೊಂಡೆ ಬಂದಿದ್ದಳು.ಅಲೋಚನೆಯಂತೆ ಅವನನ್ನು ವರಿಸಲು ನಿರ್ಧಾರಿಸಿ ಸಿದ್ದಳಾಗೆ ಬಂದಿದ್ದಳು.ಕೈಯಲ್ಲಿ ಮಾಂಗಲ್ಯ ಹಿಡಿದೆ ಬಂದಿದ್ದಳು.
 
ಮನುವಿಗೆ  ಮಾತನಾಡಲು ಅವಕಾಶವೇ ಇರಲಿಲ್ಲ.ಅವನ ಕೈ ಹಿಡಿದು ಹತ್ತಿರದ ದೇವಸ್ಥಾನಕ್ಕೆ ಕರೆದೊಯ್ದಳು. ಗುಡಿಯಲ್ಲಿ ಮೊದಲ ಬಾರಿಗೆ ಅವಳೆ ದೀಪ ಹಚ್ಚಿದಳು.

ನಿನಗೆ ನನ್ನಲ್ಲಿ ಪ್ರೀತಿ ಇರುವುದು ಸತ್ಯವೆಂದರೆ ಈ ಮಾಂಗಲ್ಯವನ್ನು ದೇವರ ಎದುರಿಗೆ ಕಟ್ಟು ಇಲ್ಲವಾದರೆ
ನನ್ನ ಶವಕ್ಕೆ ಕಾಲುಂಗುರ ತೊಡಿಸು.
ಮಾತನಾಡಲು ಏನು ಉಳಿದಿಲ್ಲ ಅವಳಿಗೆ ತಾಳಿ ಕಟ್ಟಿ ಹಣೆಗೆ ಕಂಕುಮವಿಟ್ಟ..ದೀಪದ ಸುತ್ತ ಸಪ್ತಪದಿ ತುಳಿದರು..

ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಮನು-ಸಿಲ್ವಿ ಗಂಡ ಹೆಂಡತಿಯರಾದರು..ಅಂದಿನ ರಾತ್ರಿ ದೇವರ ಸನ್ನಿದಿಯಲ್ಲಿ ಕಳೆದರು.

ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಮನು-ಸಿಲ್ವಿ ಗಂಡ ಹೆಂಡತಿಯರಾದರು..ಅಂದಿನ ರಾತ್ರಿ ದೇವರ ಸನ್ನಿಧಿಯಲ್ಲಿ ಕಳೆದರು..

"ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ.."
ಯಾರು ಬರೆದರೋ ಈ ವಾಕ್ಯವನ್ನು ದೇವ ಭಾಷೆಯಲ್ಲಿ..
ಎತ್ತಣ ಎತ್ತಣದ ಸಂಬಂಧವೊ ಅವರಿಬ್ಬರನ್ನು ಒಂದುಗೂಡಿಸಿದ್ದು.. ಯಾರ ಒಪ್ಪಿಗೆಯ ಮೇರೆಗೆ ಅವರ ಪಯಣ.. ಯಾರು ಬಲ್ಲರು?..

ಹರಿಯುವ ಝರಿಯಲ್ಲಿ ಮುಖ ತೊಳೆದು ಅವನೆದುರು ನಿಂತಿರವಳು..ತ್ವಚೆಯ ಬಣ್ಣ ರಂಗೇರಿ ಕಾಂತಿಯಿಂದ ಕಂಗೊಳಿಸುತ್ತಿತು...ಅದ್ಯಾವ ಕಾರಣ ನಾ ಹೇಳಲಾರೆ.ಮುಂಜಾನೆಯ ಸೂರ್ಯರಶ್ಮಿಯ ಹೊಂಗಿರಣಕ್ಕೊ ಇಲ್ಲಾ ಹೆಣ್ಣೆದೆ  ಹಿಗ್ಗಿದ ಆನಂದಕ್ಕೊ.

ಇನ್ನೇನು ಒಂದು ತಿಂಗಳಷ್ಟೇ ಕಾಲೇಜು ಜೀವನ. ಆ ಒಂದು ತಿಂಗಳು ಕಳೆಯುವದು ಸಿಲ್ವಿಗೆ ತಂಬ ಕಷ್ಟವಾಯ್ತು.
ತನ್ನ ಗುಟ್ಟನ್ನು ಯಾರಲ್ಲು ಹೇಳಿಕೊಳ್ಳುವಂತಿರಲಿಲ್ಲ. ಸಾಲದ್ದಕ್ಕೆ ತಾಳಿ ಯಾರ ಕಣ್ಣಿಗೂ ಬೀಳವ ಹಾಗಿರಲಿಲ್ಲ.

ರಜಾ ಮುಗಿದರೂ ಎರಡು ದಿನ ಕಾಲೇಜಿಗೆ ಸಿಲ್ವಿಯ ಪಾದ ಸ್ಪರ್ಶವಿಲ್ಲ.. ಮನು ಮಂಕಾಗಿದ್ದ ಅವಳ ನೋಡದಿರುವುದು ಅವನಿಂದ ಸಾಧ್ಯವಿರಲಿಲ್ಲ. ಪೋನ್ ಮಾಡಿದಾಗ ಇಂದು ಬರುವುದಾಗಿ ತಿಳಿಸಿದ್ದಳು.

ಅಬ್ಬಾ ಮಾಡರ್ನ್ ಗೌರಮ್ಮ..ಕತ್ತಿನವರೆಗೂ ದಿರಿಸು ಧರಿಸಿದ್ದಳು. ಎಲ್ಲರಿಗೂ ಸಿಲ್ವಿಯ ಅವತಾರ ನೋಡಿ ಅಶ್ಚರ್ಯ, ಮನುವಿಗೆ ನನ್ನ ಚೆಲ್ವಿ ಇವಳೇನಾ ಅನಿಸಿತ್ತು.
ಮನು ಮಾತಾಡಲಿಲ್ಲ ,ಒಂದು ತಿಂಗಳು ಕಾಲೇಜಿನಲ್ಲಿ ಮಾತು ಕತೆ ಬೇಡ ಎಂದಿದ್ದಳು.

ಹನಿ ಹನಿ ಇಂಚರಕ್ಕೆ ತುಂತುರು ಮಳೆಯಲ್ಲಿ ನಾಟ್ಯವಾಡಿದೆ ಕಾಮನಬಿಲ್ಲು ಎಲ್ಲೋ ಮರೆಯಲ್ಲಿ. ಮನು ಕ್ಲಾಸಿನಲ್ಲಿ ಇದ್ದರೂ ಅವನ ಮನಸ್ಸು ಸಿಲ್ವಿಯೊಂದಿಗೆ ಡುಯೆಟ್ ಹಾಡುತ್ತಿತ್ತು.ಕ್ಲಾಸ್ ಮುಗಿದಿದ್ದರೂ ಅವನೊಬ್ಬನೇ ಅವನ ಗುಂಗಲ್ಲೆ ಕುಳಿತಿರುತ್ತಿದ್ದ ಅವನನ್ನು ಎಚ್ಚರಿಸಿದ್ದು ಅವಳ ಸ್ಪರ್ಶ.
ಹೆಗಲ ಮೇಲಿದ್ದ ಅವಳ ಕೈಯನ್ನು ನಿಧಾನವಾಗಿ ಪಕ್ಕಕ್ಕಿರಿಸಿ ಹಾಯ್ ಮಂದಿರಾ ನೀನು ಬಂದಿದ್ದು ಗೊತ್ತಾಗ್ಲಿಲ್ಲ ಸಾರಿ...

ಈಗೀಗ ಅವನಿಗೆ ಹಿಂಸೆ ಅನಿಸುತ್ತಿತ್ತು ಬೇಕೆಂತಲೇ ಮೈಮೇಲೆ ಬೀಳುತ್ತಿದ್ದ ಅವಳನ್ನು ಸಮಾಧಾನಿಸುವುದು ಅವನಿಂದ ಆಗುತ್ತಿರಲಿಲ್ಲ.

ಯಾಕೋ ಸೈಕೋತರ ಆಡ್ತೀಯಾ.
ನನ್ನ ಜೊತೆ ಸರಿಯಾಗಿ ಯಾಕೆ ಮಾತಾಡುತ್ತಿಲ್ಲ ಇನ್ನು ಕಾಲೇಜು ಕೆಲವೇ ದಿವಸ ಎಂದು ಅವನನ್ನು ತಬ್ಬಿಕೊಳ್ಳಲು ಮುಂದಾದಳು.
ಮನು ಕೊಂಚ ಹಿಂದೆಸರಿದ ಕ್ಲಾಸಿನಲ್ಲಿ ಅವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಇಂದೇಕೋ ಮಂದಿರಾ ತುಂಬಾ ಭಾವಪರವಶಳಾಗಿದ್ದಳು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡಳು.ಮನು  ಬಿಡಿಸಿಕೊಳ್ಳಲು ತಡಕಾಡಿದ..ಅವಳ ಬಂಧನ ಇನ್ನೂ ಗಾಢವಾಯಿತು ಅವನನ್ನು ಚುಂಬಿಸಲು ಯತ್ನಿಸಿದಳು ಅವಳನ್ನು ದೂರತಳ್ಳಿ ಕೋಪದಲ್ಲಿ ಕೆನ್ನೆಗೆ ಬಾರಿಸಿದ.

"ನೋಡು ನನಗೆ ನನ್ನದೇ ಆದ ಜೀವನವಿದೆ ಮೋಜು-ಮಸ್ತಿ ಮಾಡಲು ತುಂಬಾ ಜನರ ಸಿಗುತ್ತಾರೆ ಹೋಗು" ಎಂದು ಬಿರ ಬಿರನೆ ಹೊರಟು ಬಿಟ್ಟ.

"ಮನು ನಾನು ಅಪರಾಧಿ ಎಂಬ ಭಾವ ನನ್ನನ್ನು ಕಾಡುತ್ತಿದೆ ಇಲ್ಲಿರಲು ನನಗೆ ಸಾಧ್ಯವಾಗುತ್ತಿಲ್ಲ ಹೆತ್ತವರ ನಿರೀಕ್ಷೆಯನ್ನು ಹುಸಿ ಮಾಡಿರುವೆ.ಪ್ಲೀಸ್ ನನ್ನನ್ನು ಕ್ಷಮಿಸಿಬಿಡು. ನಿನ್ನ ಅಸಹಾಯಕತೆಯನ್ನು ನನ್ನಿಂದ ಸಹಿಸಲಾಗುತ್ತಿಲ್ಲ.
ಈ ಒಂದು ತಿಂಗಳು ನಮ್ಮಿಬ್ಬರ ಜೀವನದಲ್ಲಿ ಅಮೂಲ್ಯವಾದ ದಿನಗಳು.
ಹೌದು ನೀನು ನಿನ್ನ ಗುರಿ ಮುಟ್ಟಲು..ನಾನು ನನ್ನ ಹೆತ್ತವರೊಂದಿಗೆ ಕಡೆಯ ದಿನಗಳನ್ನು ಕಳೆಯಲು.

ಮೌನದ  ತೇರಿಗೆ ನೆನಪುಗಳೇ ರಾಯಭಾರಿ..
ಕಾಯುವೇ ಗೆಳೆಯ ನೀ ಬಂದು ಕರೆಯುವ ದಾರಿಯನು..
ಕೊಂಚ ಮನಸ್ಸು ಮಾಡು..ನನ್ನಿ ನಿರ್ಧಾರಕ್ಕೆ ಬೆಂಬಲಿಸು.ಇಂದು ಸಂಜೆ ಊರಿಗೆ ಪ್ರಯಾಣಿಸುತ್ತಿರುವೇ..
ಇಂತಿ ನಿನ್ನವಳು ಸಿಲ್ವಿ..."

"ಈ ಸಂಜೆ ನನ್ನ ಬದುಕನ್ನು ನಿರ್ಧರಿಸಿದರೆ ಅದರ ನಿರ್ಣಾಯಕ ನೀನೆ...
ಭಾನು ಬಾಗಿರುವುದು ಭಾರದಿಂದಲ್ಲ. ಭುವಿಯ ಬಾಂಧವ್ಯ ಬೆಸೆಯಲು..

ಮನು ನಾನು ನಿನ್ನ ತುಂಬಾ ಪ್ರೀತಿಸ್ತೀನಿ ನಿನ್ನ ಬಿಟ್ಟು ಒಂದು ಕ್ಷಣನು ನನ್ನಿಂದ ಇರೋಕಾಗಲ್ಲ ನೀನು ಹೊಡೆದಿರುವುದು ನನಗೆ ಬೇಜಾರಿಲ್ಲ. ಆದರೆ ನೀನಾಡಿದ ಮಾತು ನನ್ನನ್ನು ತುಂಬಾ ಕಾಡುತ್ತಿದೆ.

ನನಗೆ ತಂದೆ ತಾಯಿ ಯಾವುದಕ್ಕೂ ಇಲ್ಲ ಎಂದವರಲ್ಲ. ನಾನು ಕೇಳಿದ್ದೆಲ್ಲವೂ ನನಗೆ ಸಿಕ್ಕಿದೆ ಆದರೆ ಅವರಿಗೇನು ಗೊತ್ತು ನಾನು ಬಯಸಿದ ಪ್ರೀತಿ ಕೊಡಲು ಅವರು ಮರೆತರು.
ಆ ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ.

ನಂಗೊತ್ತು ಒಬ್ಬರನ್ನೊಬ್ಬರು ಪ್ರೀತಿಸಿದರೆ ಮಾತ್ರ ಜೀವನ. ಅಂತಹ ಜೀವನ ನನಗಿಲ್ಲ,
ಆದರೂ ಸಣ್ಣದೊಂದು ಆಸೆ, ಒಂದು ಅವಕಾಶ ನೀನು ನೀಡುವುದಾದರೆ ನಾನು ಜೀವಂತವಾಗಿರುವೆ ಇಲ್ಲದಿದ್ದರೆ ನಾನು ನನ್ನ ಬದುಕನ್ನು ಅಂತ್ಯಗೊಳಿಸಲು ಸಿದ್ದಳಿರುವೆ.
ಸಂಜೆ ಒಂಭತ್ತರ ತನಕ ನೀಲಾವರಿ ಬೆಟ್ಟದಲ್ಲಿ ನಿನಗಾಗಿ ಕೈಯಲ್ಲಿ ಜೀವ ಹಿಡಿದು ಕಾದಿರುವೆ..
ಇಂತಿ ನಿನ್ನ ಪ್ರೀತಿಯ ಮಂದಿರಾ"

ಏಕ ಕಾಲದಲ್ಲಿ ಬಂದ ಎರಡು ಮೆಸೇಜ್ ಗಳು ಮನುವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದವು..
ಸ್ವಲ್ಪ ಯಾಮಾರಿದರೂ ಪರಿಸ್ಥಿತಿ ಕೈ ಮೀರಿ ಹೋಗುವುದು.ಎರಡೂ ಸನ್ನಿವೇಶವನ್ನು ಬಹು ಜಾಗರೂಕತೆಯಿಂದ ನಿಭಾಯಿಸಬೇಕೆಂಬುದು ಮನುವಿಗೆ ತಿಳಿದಿತ್ತು.

ಮನದಲ್ಲಿ ಏನೋ ಲೆಕ್ಕಾಚಾರ ಹಾಕಿದವನು  ಗಿರಿಧಾಮ ಪಕ್ಕದ ನೀಲಾವರಿ ಬೆಟ್ಟದತ್ತ ಹೊರಟನು....

ನಿರ್ಜನವಾದ ಆ ರಾತ್ರಿಯಲ್ಲಿ ಹುಣ್ಣಿಮೆಯು ಹಾಲು ಬೆಳಕು ಸೂಸಿತ್ತು. ಅಲ್ಲಿ ಯಾರು ಇದ್ದಂತಿರಲಿಲ್ಲ,ಕಡಿದಾದ ಬೆಟ್ಟ ಒಂದು ಕಡೆಗೆ ಬಾಗಿತ್ತು.ಕಮರಿಯ ಆಳ ಸುಮಾರು ೧೨೦ ರಿಂದ ೧೫೦ ಅಡಿ ಇರಬಹುದು. 
ಮಂದಿರಾ ಅಲ್ಲೆಲ್ಲು ಕಾಣದ ಕಾರಣ ಪಕ್ಕದಲ್ಲೆ ಇದ್ದ ಮರವೇರಿ ಸುತ್ತಲೂ ಕಣ್ಣು ಹಾಯಿಸಿದ.
ಕೃಷ್ಣ ಸುಂದರಿ ವಸ್ತ್ರಲಂಕಾರದಲ್ಲಿ ಕಂಗೊಳಿಸುತ್ತಿದ್ದಳು.ಇವಳು ಸಹ ಮಧುವಣಗಿತ್ತಿ ತರಹ ಅಲಂಕಾರ ಮಾಡಿ ಕೊಂಡಿರುವಳು.

ಮನು ಮರದಿಂದಿಳಿದು ನೇರವಾಗಿ ಅವಳತ್ತ ಹೆಜ್ಜೆ ಹಾಕಿದ.
ಅಶ್ಚರ್ಯವೆನ್ನವಂತೆ ಅಲ್ಲಿ ಯಾರಿರಲಿಲ್ಲ. ಭಯದಲ್ಲಿ ಅವನ ಎದೆ ಹೊಡೆದು ಕೊಳ್ಳುತ್ತಿತ್ತು ಮತ್ತೆ ಮಂದಿರಾ ....ಮಂದಿರಾ...ಎನ್ನುತ್ತ ಬೆಟ್ಟದ ತುದಿ  ಏರಿ ಕಮರಿಯ ಕಡೆ ಇಣುಕಿದ....

"ನೀನು ಬಂದೇ ಬರ್ತಿಯಾ ಅಂತ ಗೊತ್ತು ಕಾಣೋ"
ಹಿಂದಿನಿಂದ ತಬ್ಬಿಕೊಂಡಳು ಮಂದಿರಾ... ಮನುವಿಗೆ ಹೋದ ಜೀವ ಬಂದಂತಾಯಿತು...
ಅವನು ಅವಳನ್ನು ವಿರೋಧಿಸಲಿಲ್ಲ... ಅವಳ ಮನಸ್ಸೊ ಇಚ್ಚೆಯಂತೆ ಅವನನ್ನು ಮುದ್ದಿಸಿದಳು.
ಮನು ಕಲ್ಲು ಬಂಡೆಯಂತೆ ನಿಂತಿದ್ದ..ಅವನ ಕಣ್ಣುಗಳಿಂದ ಉದುರಿದ ಬಾಷ್ಪ ಮಂದಿರಾನ ಕೆನ್ನೆ ಸವರಿತು.

ಏನಾಯಿತು ಮನು ಯಾಕೆ ಅಳುತ್ತಿದ್ದಿ?
ಮನು ಅವಳ ಕೈ ಹಿಡಿದು ಸ್ವಲ್ಪ ದೂರ ನಡೆದ..
ಅವರಿಬ್ಬರೂ ಅಲ್ಲೆ ಕಲ್ಲಿನ ಮೇಲೆ ಕುಳಿತರು..
ಮನು ಮಾತಾಡತೊಡಗಿದ.
ಮಂದಿರಾ ...ನನ್ನ ಎಷ್ಟು ಪ್ರೀತಿಸ್ತಿಯಾ?

ಮಂದಿರಾ: ತಂಬಾನೇ....ಮನು ನಿನ್ನ ಬಿಟ್ಟಿರೋಕೆ ಸಾಧ್ಯವಿಲ್ಲ ಕಾಣೋ

ಮನು: ನಾನು ಸಹ ಅವಳನ್ನ ಬಿಟ್ಟು ನಿನ್ ಜೋತೆ ಹೇಗಿರಲಿ..
ನಿಂಗೆ ಒಂದ‌ ದಿನನೂ ನಂಗೂ ಒಂದು ಮನಸ್ಸಿದೆ ಅಂತ ಅನಿಸಲಿಲ್ಲವೇ?

ಮಂದಿರಾ:  ಯಾಕೆ ನೀನು ಯಾರನ್ನಾದರೂ ಪ್ರೀತಿಸ್ತಿದ್ದಿಯಾ?

ಮನು: ಹೌದು..

ಮಂದಿರಾ: ಹಾಗಾದ್ರೆ ನನಗು ನಿನಗು ಏನು ಸಂಬಂಧ ಮತ್ಯಾಕೆ ಈ ನಡು ರಾತ್ರಿಯಲ್ಲಿ ಬಂದೆ?

ಮನು: ನಾನು ನಿನ್ನ ಭಾವನೆಗಳಿಗೆ ಬೆಲೆ ಕೊಟ್ಟು ಬಂದೆ..ತಪ್ಪೆ? ಹಾಗಾದರೆ ಪ್ರೀತಿಗಿರುವುದು ಒಂದೇ ಮುಖನಾ?

ಮಂದಿರಾ: ನಿನ್ನ ಪ್ರೀತಿಗೆ ಹತ್ತು ಹಲವು ಮುಖವಿರಬಹುದು. ಅದರೆ ನನ್ನ ಪ್ರೀತಿಗೆ  ಒಂದೇ ಮುಖ..ನೀನಂದು ಕೊಂಡಂತೆ ನಾನೇನು ಹೇಡಿಯಲ್ಲ.. ಅದರೂ ನಾನು ನನ್ನ ಮನಸ್ಸಿನ ಹತೋಟೆ ಕಳೆದುಕೊಂಡಿದ್ದು ಸುಳ್ಳಲ್ಲ. ಒಮ್ಮೊಮ್ಮೆ ನೀನಿಲ್ಲದ  ಈ ಜಗತ್ತು ಬರಿ ಶೂನ್ಯ ಅನಿಸಿಬಿಡುತ್ತೆ. ನಿನ್ನಷ್ಟು ಮಾನಸಿಕ ಸ್ಥೈರ್ಯ ನನ್ನಲಿಲ್ಲ..ಪ್ಲೀಸ್ ಅಳು ಬರುತ್ತೆ ನನ್ನ ಬಿಟ್ಟು ಹೋಗಬೇಡ...

ಮನು: ಇಲ್ಲ ಪುಟ್ಟ..ನಾನೆಂದು ನಿನ್ನ ಸ್ನೇಹಿತನೆ..ಆದರೆ ನೀನಂದು ಕೊಂಡಂತೆ ಪ್ರೇಮಿಯ ಸ್ಥಾನ ಆಲಂಕರಿಸಲಾರೆ.
ಇನ್ನಾದರೂ ನಿನ್ನ ಹುಚ್ಚಾಟವನ್ನು ಬಿಡಬಹುದು ತಾನೇ?

ಮಂದಿರಾ: ಹಾ...ಈ ಹುಚ್ಚು ಹುಡುಗಿ ನಿನ್ನ ಮರೆತು ಬಿಡುತ್ತಾಳೆ..ಹೆಣ್ಣು ಈ ಸಮಾಜದಲ್ಲಿ ಏನು ಬಯಸಿದರೂ ತಪ್ಪೆ.ಅವಳಿಗೆ ಏನು ಸಿಗುತ್ತದೋ ಅದರಲ್ಲಿ ತೃಪ್ತಿ ಕಾಣಬೇಕು.. ಅಲ್ಲವೇ..

ಅವರಿಬ್ಬರ ತರ್ಕ ಅಂತ್ಯವಿಲ್ಲದ್ದು. ಮೌನಿಯಾದ ಮನು ಆಕಾಶದ ಕಡೆ ಮಖಮಾಡಿ ಯೋಚಿಸುತ್ತಿದ್ದರೆ ಮಂದಿರಾ ಅವನ ಹೆಗಲಿಗೊರಗಿ ಕುಳಿತ್ತಿದ್ದಳು.
ಹುಣ್ಣಿಮೆಯ ಬೆಳದಿಂಗಳಲ್ಲಿ ನಕ್ಷತ್ರಗಳು ಕಣ್ಣಮುಚ್ಚಾಲೆ ಆಡುತ್ತಿದ್ದರೆ  ಅದರಲ್ಲೊಂದು ನಕ್ಷತ್ರ ಕಾಲು ಜಾರಿ ಭುವಿಯತ್ತ ಓಡೋಡಿ ಬರುತ್ತಿತ್ತು.

ಮನು ಮಂದಿರಾನ ಸಮಧಾನಿಸತೊಡಗಿದ...ಏಳು ..ನಾವಿಲ್ಲಿರುವುದು ಸರಿಯಲ್ಲ..ಯಾರಾದರೂ ನೋಡಿದರೂ ಚೆನ್ನಾಗಿರಲ್ಲ..
ಬಾ...ಹೋಗೋಣ ಎಂದು ಕೈ ಹಿಡಿದುಕೊಂಡ..
ಮಂದಿರಾಗೆ ಬೇರೆ ದಾರಿ ಇರಲಿಲ್ಲ ಅವನೊಂದಿಗೆ ನಡೆದಳು.ಅವಳನ್ನು ಹಾಸ್ಟೆಲ್ ಗೆ ಬಿಟ್ಟು ಮತ್ತೆ ಸ್ವಲ್ಪ ಸಮಧಾನ ಹೇಳಿ ಅಲ್ಲಿಂದ ಹೊರಟ.

ರಾತ್ರಿ ೨ ಘಂಟೆ ಇರಬಹುದು ,.ಗುಸು ಗುಸು ಪಿಸು ಮಾತು ಕೇಳಿ ಮನು ಗಕ್ಕನೆ ನಿಂತ..ನೀಲಾವರಿ ಬೆಟ್ಟದಿಂದ ಹಿಡಿದು ಗಿರಿಧಾಮದವರೆಗೆ ಯಾವುದೇ ಜನವಸತಿ ಇರಲಿಲ್ಲ..
ಆದರೂ ಐದಾರು ಜನರ ಗುಂಪೊಂದು ಬೆಂಕಿ ಹಾಕಿಕೊಂಡು  ಮಾತಾಡುತ್ತಿದ್ದರು. ಕೈಯಲ್ಲಿದ್ದ ನಾಡ ಕೋವಿಗಳು ಅವರನ್ನು ಬೇಟೆಗಾರರೆಂದು ಉಹಿಸಲು ಅಸಾಧ್ಯವಾಗಲಿಲ್ಲ.

ಮನುವನ್ನು ತಡೆದು ಹೀಗೆಲ್ಲ ತಿರುಗಾಡಬೇಡ..ಬೇಗ ಮನೆ ಸೇರಿಕೊ..ನಾವು ನಕ್ಸಲೇಟ್  ಯಾರಿಗೂ ನಮ್ಮ ಬಗ್ಗೆ ಹೇಳಬೇಡ ಎಂದು ಸೂಚಿಸಿದರು..  ತರಾತುರಿಯಲ್ಲಿ ಮನೋಹರ ಹಾಸ್ಟೆಲ್ ಸೇರಿಕೊಂಡ.

ಮುಂದಿನ ಒಂದಿಪ್ಪತ್ತು ದಿನಗಳು ಎಲ್ಲಾ ಮಾಮೂಲಿನಂತೆ ಇದ್ದವು.ಎಲ್ಲರೂ ಅವರವರ ಎಗ್ಸಾಂನಲ್ಲಿ ಬ್ಯುಸಿ..ಸಿಲ್ವಿಯ ಸುಳಿವು ಸುಳಿದಿರಲಿಲ್ಲ..
ಮನೋಹರ ತುಂಬಾ ಖುಷಿಯಾಗಿದ್ದ..ಇವತ್ತು ಅವನ ಕೊನೆಯ ಪರೀಕ್ಷೆ,ಇನ್ನೆನು ನಾಳೆ ಅವಳು ಬಂದು ಸೇರುವಳು..
ಕಡೆಯ ಪರೀಕ್ಷೆ ಮುಗಿಸಿದ್ದ ಮನು ನಾಪತ್ತೆಯಾಗಿದ್ದ.

ಸಿಲ್ವಿಯಲ್ಲಾದ ಬದಲಾವಣೆ ಅವಳ ಚಿಕ್ಕಮ್ಮನನ್ನು ಅನುಮಾನಕ್ಕಿಡುಮಾಡಿತ್ತು..ಪರೀಕ್ಷೆ ಪೋಸ್ಟಪೋನ್ ಅಗಿತ್ತೆಂದು ಸುಳ್ಳು ಹೇಳಿದ್ದಳು.ಅವರು ಅವಳ ಬ್ಯಾಗ್ ಪರಿಶೀಲಿಸಿದಾಗ ಕರಮಣಿ ಸರ ಅವರನ್ನು ಬೆಚ್ಚಿ ಬೀಳಿಸಿತ್ತು.
ಇತ್ತ ಸಿಲ್ವಿ ದೈಹಿಕವಾಗಿ ಬದಲಾಗಿದ್ದಳು.ವಿಪರೀತ ಸುಸ್ತು ,ತಲೆ ಸುತ್ತು ಏನೇನೋ ಸೂಚನೆ ನೀಡುತ್ತಿತ್ತು.
ಇನ್ನು ಮುಚ್ಚಿಡಲು ಭಯವಾದಗ ಚಿಕ್ಕಮ್ಮನೊಂದಿಗೆ ಎಲ್ಲಾ ಹೇಳಿ ಕೊಂಡಿದ್ದಳು.
ಅವರು ಯಾರಿಗೂ ತಿಳಿಯದಂತೆ ಸಿಲ್ವಿಯೊಂದಿಗೆ ಮನುವಿನ ಮೀಟ್ ಮಾಡಲು ಹೊರಟರು.
ಅದರೆ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿತ್ತು.. ಮನು ಸಿಲ್ವಿಗೆ ಕೈಕೊಟ್ಟು ತಲೆಮರೆಸಿಕೊಂಡಿರುವನು ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಯಾರು ಹಬ್ಬಿಸಿರುವರು ಎನ್ನುವುದಕ್ಕೆ ಆಧಾರವಿಲ್ಲ.. ಮನುವಿನ ಗೈರು ಅದಕ್ಕೆ ಪುಷ್ಟಿ ನೀಡುತ್ತಿತ್ತು.
ಯಾವುದೇ ಸುಳಿ ಸಿಗದ ಅವರು ಅಳುತ್ತ ಹಿಂದಿರುಗಿದರು.

ಸಿಲ್ವಿಯ ಅಳುವಿನ ರೋಧನ ತಾಯಿಗೆ ಸಹಿಸಲಾಗಲಿಲ್ಲ.ಹೀಗೆ  ಮನುವಿನ ಹುಡುಕಾಟದಲ್ಲಿ  ಒಂದು ವಾರ ಕಳೆದಿದ್ದರು. ಸಂದರ್ಭಕ್ಕನುಗುಣವಾಗಿ ಅವರ ಸಮಯ ಪ್ರಜ್ಞೆ ಕೆಲಸಮಾಡಿತು.ಸಿಲ್ವಿಯ ಜೀವನ ಹಾಳಾಗುವುದು ಅವರಿಗಿಷ್ಟವಿರಲಿಲ್ಲ.

ಜಾನ್ ಅವರ ದೂರ ಸಂಬಂಧಿ ತನ್ನದೆ ಸ್ವಂತ ಬ್ಯುಸಿನೆಸ್ ಮಾಡಿಕೊಂಡಿದ್ದ..ಅವಸರವಸರದಲ್ಲಿ ಮದುವೆಗೆ ಸಿದ್ದತೆ ಮಾಡಿಸಿದರು.

ಆತ್ಮಹತ್ಯೆಯ ಯೋಚನೆ ತಲೆಯಲ್ಲಿ ಸುಳಿದು ಸುಳಿದು ಮಾಯವಾಗುತ್ತಿತ್ತು.ಮನು ಮಾಡಿದ ಮೋಸದಿಂದ ಮನಸ್ಸು ಘಾಸಿಯಾಗಿತ್ತಾದರೂ...ಇನ್ನೊಂದು ಜೀವವನ್ನು ಸಾಯಿಸಲು ಅವಳಿಗೇನು ಹಕ್ಕಿದೆ?

ವಿಜೃಂಭಣೆಯ ಆಚರಣೆಯಲ್ಲಿ ಮುಗಿದ ಮದುವೆ ಅಂತೋನಿ ಕುಟುಂಬಕ್ಕೆ ಉಲ್ಲಾಸ ನೀಡಿದರೆ ಸಿಲ್ವಿಗೆ
ನುಂಗಲಾರದ ಬಿಸಿ ತುಪ್ಪ.ಒಳಗೊಳಗೆ ನೊಂದಳು,ಒಡಲೊಳಗೆ ಅತ್ತಳು.

ಹೆಣ್ಣಿನ ಜೀವನ ಕನ್ನಡಿಯಿದ್ದಂತೆ ಅದಕ್ಕೊಂದು ಪ್ರೇಮ್ ಇದ್ದರೇನೆ ಚಂದ..ಇಲ್ಲಾ ಇಲ್ಲಾ ಅದೊಂದು ಸುಂದರ ಭಾವಚಿತ್ರ ಯಾವ ಪ್ರೇಮ್ ಹಾಕಿದರೂ ಹೊಂದಿಕೊಂಡು ಬಿಡುತ್ತೆ..ಒಮ್ಮೆ ಹೊಂದಿಕೊಂಡರೆ...ಆ ಚೌಕಟ್ಟೆ ಅವಳಿಗೆ ರಕ್ಷಣೆ..ಅವಳು ಯಾವತ್ತೂ ಆ ಚೌಕಟ್ಟನ್ನು ಮೀರಿ ಹೊರಬರಲು ಮನಸ್ಸು ಮಾಡಳು..

ಅವಳಗೀಗ ಏಳುವರೆ ತಿಂಗಳು ಲೆಕ್ಕಚಾರ ಏನೇ ಇರಲಿ...ಮುದ್ದಾದ ಮಗು..ಎಲ್ಲರ ನಗುವಿಗೆ ಕಾರಣ..ಅತಿ ಸಂಭ್ರಮ ಪಟ್ಟವರ ಪಟ್ಟಿಯಲ್ಲಿ ಜಾನ್ ಮೊದಲನೆಯವ..ಚಿಕ್ಕಮ್ಮ ಅರಿತೆ ಬಾಣಂತನ ಮಾಡಿದರು.

ಛಲ ಬಿಡದ ಸಿಲ್ವಿ ಇಂಜಿನಿಯರಿಂಗ್ ನ ಕೊನೆಯ ಸೆಮಿಸ್ಟರ್ ಮುಗಿಸಿದ್ದಳು.. ಮಾರ್ಕ್ಸ್ ಕಾರ್ಡಗಾಗಿ ಕಾಲೇಜಿಗೆ ಬಂದಿದ್ದವಳಿಗೆ ಇದಿರಾದವನು ಮನೋಹರ್.
ತನ್ನ ಕಣ್ಣನ್ನು ತಾನೆ ನಂಬಲಾಗಲಿಲ್ಲ.
ಜನ್ಮ ಜನ್ಮಾಂತರದ ಬಾಂಧವ್ಯ ಸಾರಿ ಹೇಳುತ್ತಿತ್ತು.ಕೊರಳಲ್ಲಿರುವ ತಾಳಿ..

ಹತ್ತಿರ ಬಂದ ಮನುವಿನ ಮಧ್ಯ ತನ್ನ ಬ್ಯಾಗ್ ಹಿಡಿದು ಅಂತರ ಕಾಯ್ದುಕೊಂಡಳು.ರೋಷದಿಂದ ಅವಳ ರಕ್ತ ಕುದಿಯುತ್ತಿತ್ತು. ಕೈ ಹಿಡಿದ ಮನುವನ್ನೊಮ್ಮೆ ದಿಟ್ಟಿಸಿ ನೋಡಿದಳು, ಅದೇ ಮುಗ್ದ ಹುಡುಗ ನನ್ನವನು...ಯಾಕೊ ಅವಳ ಕೋಪ ಹೆಚ್ಚು ಹೊತ್ತು ನಿಲ್ಲಲಿಲ್ಲ....ಅವಳನ್ನು ಕಾಫಿ ಶಾಪ್ ಗೆ ಕರೆದು ಕಾರಣ ಕೇಳದಿದ್ದರೂ ಎಲ್ಲವನ್ನು ಹೇಳತೊಡಗಿದ..

ಅಂದು ನನ್ನ ಕೊನೆಯ ಪರೀಕ್ಷೆ.. ಎಷ್ಟು ಖಷಿಯಾಗಿದ್ದೆ..ನಿನ್ನ ನೋಡಲು ತುದಿಗಾಲಲ್ಲಿ ನಿಂತಿದ್ದೆ.ಬೆಳ್ಳಂಬೆಳೆಗೆ ೪:೩೦ ರ ಬಸ್ಸಗೆ ತುಸು ಬೇಗನೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದೆ.
ಯಾವದೋ ಗುಂಪೊಂದು ನನ್ನ ಕಿಡ್ನಪ್ ಮಾಡಿತ್ತು.ಎಚ್ಚರವಾದಗ ದಟ್ಟ ಕಾಡಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಢಕಾಯಿತರ ಮಧ್ಯ ನಾನಿದ್ದೆ..
ನಾನೆ ಮಾಡಿಕೊಂಡ ಎಡವಟ್ಟು ಅದರಲ್ಲಿ ಐದಾರು ಜನ ಪರಿಚಿತರು...ನೀವು ನಕ್ಸಲೇಟ್ ಅಲ್ಲವೇ ಎಂದು ಕೇಳಿದ್ದೆ..
ಸುಮಾರು ಹತ್ತು ದಿನಗಳ ಕಾಲ ನನ್ನನ್ನು ಕೂಡಿ ಹಾಕಿದ್ದರು..
ಮತ್ತೆಲ್ಲಿಗೋ ನನ್ನ ಸಾಗಿಸಿದರು.. ಗುಜರಾತ್ ನ ಸ್ಥಳಿಯ ಕೋರ್ಟ್ ನನಗೆ ೧೪ ತಿಂಗಳ ಶಿಕ್ಷೆ ವಿಧಿಸಿತ್ತು.ಕಾರಣ ಕೇಳಿದ್ದಕ್ಕೆ ನಾನೊಬ್ಬ ನಕ್ಸಲೇಟ್..
ಜಾಮೀನಿಗಾಗಿ ನನ್ನ ಅಪ್ಪ ಅಮ್ಮ ತಮ್ಮ ಅಲ್ಲಿಯ ತನಕ ಬಂದಿದ್ದರೂ ಯಾವುದೇ ಉಪಯೋಗವಾಗಲಿಲ್ಲ.
ಪರಿಸ್ಥಿತಿ ನೋಡು ಒಮ್ಮೊಮ್ಮೆ ನಮ್ಮ ತಪ್ಪು ಸರಿ ಯಾವುದು ಪರಿಗಣನೆಗೆ ಬರಲ್ಲ.
ಮಂದಿರಾ ಹೇಳಿದಳು ನೀನು ಪುನಃ ಪರೀಕ್ಷೆ ಬರೆದೆ ಅಂತ.

ಅಬ್ಬಾ ದೇವರು ದೊಡ್ಡವನು.ನನಗೆ ಎಷ್ಟೇ ನೋವು ಕೊಟ್ಟರು.. ನಿನ್ನನ್ನು ದೂರ ಮಾಡಲಿಲ್ಲ...
ನೀನು ಹೇಗಿದ್ದಿ ಸಿಲ್ವಿ..ತುಂಬ ನೋವು ಕೊಟ್ಟು ಬಿಟ್ಟೆ ಅಲ್ವಾ...

ಸಿಲ್ವಿ ನಗುತ್ತ ತನ್ನ ಬಗ್ಗೆ ಒಂದಿಂಚು ಮಾಹಿತಿ ಬಿಟ್ಟು ಕೊಡದೆ
"ಮನು..ಯಾರು ನನ್ನಿಂದ ನಿನ್ನನ್ನು ದೂರ ಮಾಡಲಾರರು..
ಈ ಒಂದುವರೆ ವರ್ಷದಲ್ಲಿ ನಿನಗಾಗಿ ಹಂಬಲಿಸದೆ ಇರುವ ದಿನವಿಲ್ಲ.. ನಮ್ಮಿಬ್ಬರ ಕಷ್ಟ ಮುಗಿಯಿತು...ಇನ್ನು ಸುಖದ ದಿನಗಳು..ನಮ್ಮ ಮನೆಯಲ್ಲು ಒಪ್ಪಿದ್ದಾರೆ. ಇನ್ನು ಹತ್ತು ದಿನಗಳು ಇಲ್ಲೆ ಮೀಟ್ ಮಾಡೋಣ..ನಾನು ಎಲ್ಲಾ ಸಿದ್ದತೆ ಮಾಡಿಕೊಳ್ಳುವೆ..ಅಲ್ಲಿ ತನಕ ನನಗೆ ಪೋನ್ ಮಾಡು ಎಂದು ಪೋನ್ ನಂಬರ್ ನೀಡಿದ್ದಳು..

ಅವರಿಬ್ಬರ ಊರು ಸುಮಾರು ೨೦ ಕಿ ಮಿ ಅಕ್ಕ ಪಕ್ಕದಲ್ಲಿತ್ತು..ಇಬ್ನರೂ ಒಂದೇ ಬಸ್ಸನಲಿ ಕೈ.ಕೈ ಹಿಡಿದು ಊರಿಗೆ ಬಂದಿದ್ದರು..

ಸಿಲ್ವಿ ತುಂಬ ಜಾಗರೂಕತೆಯಿಂದ ಸನ್ನಿವೇಶವನ್ನು ನಿಭಾಯಿಸಿದಳು. ಅವಳಿಗೆ ಎಲ್ಲವೂ ಅರಿವಾಗಿತ್ತು.ಇಲ್ಲಿ ಮನುವಿನ ಯಾವ ತಪ್ಪು ಇಲ್ಲ.. ಅವಳ ಜೀವನದ ಇಂಚಿಂಚು ಘಟನೆ ಅವನಿಗೆ ಹೇಳುವ ಮನಸ್ಸು ಮಾಡಲಿಲ್ಲ..ಹೇಳಿದರೂ ಏನು ಪ್ರಯೋಜನ..ನನ್ನ ಹಣೆಯಲ್ಲಿ ಬರೆದಿರುವುದೆ ಇಷ್ಟು . ಎಲ್ಲವನ್ನ ಹೇಳಿ ಅವನ ಜೀವನವಿಡಿ ಕೊರಗುವಂತೆ ಮಾಡುವುದಕ್ಕಿಂತ ನಾನು ಮೋಸಗಾರ್ತಿ ಆಗುವುದೇ ಲೇಸು...ನನ್ನ ದ್ವೇಷಿಸಿಯಾದರೂ ಅವನ ಜೀವನ ರೂಪುಗೊಳ್ಳಲಿ..  ಮನಸ್ಸು ಮನುವನ್ನೆ ಬಯಸುತ್ತಿದ್ದರೂ ,,ಜೀವನದಲ್ಲಿ ಅವನು ಎಂದೋ ಮುಗಿದು ಹೋದ ಅಧ್ಯಾಯ..
ಪ್ರತಿದಿನ ಮನುವಿನೊಂದಿಗೆ ಮುದ್ದು ಮುದ್ದಾಗಿ ಮಾತನಾಡುತ್ತಿದ್ದಳು...ಇಂದು ಮೊಬೈಲ್ ಸ್ವಿಚ್ಚಡ್ ಆಪ್..

ಮನುವಿಗೆ ಒಂದು ತೋಚಲಿಲ್ಲ..ಅವಳು ನಿಗದಿಪಡಿಸಿದ ಸ್ಥಳದಲ್ಲೂ ಅವಳಿಲ್ಲ..ಅಂತೂ ಹುಡುಕಾಡಿ ಅವಳ ಮನೆಗೆ ಹೋದ ಮನುವಿಗೆ ಅವಳ ಚಿಕ್ಕಮ್ಮನ  ಮಾತು ಕೇಳಿ ಸಿಡಿಲು ಬಡಿದಂತಾಯ್ತು..
"ಸಿಲ್ವಿಗೆ ಮೊನ್ನೆಯಷ್ಟೆ ಮದುವೆಯಾಯ್ತ... ಹುಡುಗ ಫ್ರಾನ್ಸ್‌ನಲ್ಲಿ ಬ್ಯುಸಿನೆಸ್‌ ಮ್ಯಾನ್..ಮದುವೆಯಾಗಿ ವಿದೇಶಕ್ಕೆ ತೆರಳಿದರು".   ನಂಬದಾದ ನನಗೆ ಸಾಕ್ಷಿ ಸಮೇತ ಪೋಟೊ ಮುಂದಿಟ್ಟರು..

ಇದೇನು ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ..ನಿನ್ನೆಯವರೆಗೂ ನನ್ನ ಜೊತೆ ಮುದ್ದು ಮುದ್ದಾಗಿ ಮಾತಾಡಿಕೊಂಡಿದ್ದಳು..
ಅವಳಿಗೆ ಇನ್ನೊಂದು ಮದುವೇನಾ?
ಅವಳು ನನ್ನನ್ನು ತಿರಸ್ಕರಿಸುವವಳಾಗಿದ್ದರೆ ಮೊನ್ನೆ ಮೊನ್ನೆ ವರೆಗೂ ತಾಳಿಯನ್ನೆಕೆ ಇಟ್ಟುಕೊಂಡಿದ್ದಳು.

ಹೌದು..ಕೆಲವೊಂದು ಪ್ರಶ್ನೆ ಪ್ರಶ್ನೆಯಾಗಿದ್ದರೆ ಚಂದ.ಒಂದಂತು ಸತ್ಯ ಅವಳಿಗೆ ನನ್ನ ಅವಶ್ಯಕತೆಯಿಲ್ಲ.ಇದ್ದಿದ್ದರೆ ನನ್ನೊಂದಿಗೆ ಇರುತ್ತಿದ್ದಳು.
ಎಲ್ಲಾ ಖುಷಿಯಾಗಿರಬೇಕಿದ್ದರೆ ನಾನೊಬ್ಬ ದುಃಖಿಯಗಿ ಅಳುವುದು ಎಷ್ಟು ಸರಿ ..
ನಾನು ನನ್ನ ಜವಬ್ದಾರಿ ಮರೆಯುವ ಹಾಗಿಲ್ಲ..ಮನೆ ಪರಿಸ್ಥಿತಿನ ಸ್ವಲ್ಪ ಸುಧಾರಿಸಬೇಕು.ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು.. ಅಮೇಲೆ ನನ್ನ ಜೀವನ ...

ಕೈ ತಪ್ಪಿ ಹೋದ ಕ್ಯಾಂಪಸ್ ಸೆಲೆಕ್ಷನ್..ಕೈಕೊಟ್ಟ ಮಡದಿ..ಎಲ್ಲವನ್ನು ಮರೆತು ಹೊಸ ಜೀವನಕ್ಕೆ ಕಾಲಿಟ್ಟಿದ್ದ ಮನು..

ಬೆಂಗಳೂರಿನಂತ ಮಹಾನಗರದಲ್ಲಿ ಕೆಲಸಕ್ಕೇನು ಬರವಿರಲಿಲ್ಲ‌.. ಓದಿಗೆ ತಕ್ಕ ಕೆಲಸವೂ ಸಿಕ್ಕಿತು.. ಮೊದಲೆಲ್ಲ ಮನುವಿಗೆ ಸಿಲ್ವಿ ಕನಸಾಗಿ ಕಾಡುತ್ತಿದ್ದಳು..ಬರು ಬರುತ್ತ ಕನಸು ಮಸುಕಾಗಿತ್ತು..ಅದರೆ ಎಂದೂ ಅವಳನ್ನ ಮರೆತವನಲ್ಲ..ಅದಕ್ಕೆ ಇನ್ನು ಮದುವೆಯಾಗದಿರುವುದೆ ಸಾಕ್ಷಿ.. ಈ ಆರು ವರ್ಷದಲ್ಲಿ ಅವಳು ಅವನಿಂದ ತುಂಬ ದೂರ ಹೋಗಿದ್ದಳು..ಇಂದೇಕೊ ಅವಳ ನೆನಪು ಬಹಳ ಕಾಡಿ ಕುಸಿದು  ಕುಳಿತ..

ಹೌದು ಅವಳೇ.. ನಾನು ತಿರುಗಿ ನೋಡಿದ್ದು..ಅವಳು ನೋಡಿದ್ದಾಳೆ..
ಛೆ...ಬೇರೆಯಾರದರು...

ಇಲ್ಲಾ ..ಅವಳ ನೋಟ ನನ್ನ ಅಣುಕಿಸುತ್ತಿತ್ತು.

 ಮೈ ಜುಮ್ ಅನ್ನುವಂತಾಯಿತು..ಅವಳು ಇದೇ ಊರಲ್ಲಿದ್ದಾಳೆ...
ಪ್ರೀತಿಸಿದ ಹುಡುಗಿ ಮೋಸ ಮಾಡಬಹುದು.
ಆದರೆ ಕೈ ಹಿಡಿದವಳು ಮೋಸ ಮಾಡುವಳೇ..

ಶಾಂತವಾಗಿದ್ದ ಮನುವಿನ ಬಾಳಲ್ಲಿ ಮತ್ತೆ  ಸಿಲ್ವಿ ಬಿರುಗಾಳಿ ಎಬ್ಬಿಸಿದಳು..ನಾನೇಕೆ ಆಟೊ ನಿಲ್ಲಿಸಿಲ್ಲ.. ಅಂದರೆ...ಅವಳ ಪಕ್ಕದಲ್ಲಿದ್ದವನು...ಜಾನ್...ಜಾನ್ ಜಾಕಸ್ ಪೆರ್ನಾಂಡಿಸ್...
ಅಯ್ಯೊ...ಒಂದಕ್ಕೊಂದು ತಾಳೆಯಾಗುತ್ತಿದೆ..ಹೌದು ಅವಳೆ ನನ್ನ ಸಿಲ್ವಿ..

ಹೌದು ಅವರು ನಮ್ಮ ಕಂಪನಿಗೆ ಎಂ ಎಸ್ ಸ್ಟೀಲ್ ರಾಡ್ಗಳ ಸಪ್ಲೈರ್ ಜಾನ್...
ಅವರ ಮನೆ ವಿಳಾಸ ಕಲೆ ಹಾಕಲು ಅವನಿಗೇನು ಕಷ್ಟವಾಗಲಿಲ್ಲ..ನೇರವಾಗಿ ಮನೆಗೆ ಹೋಗಲು ಅವನಿಗದು ಸರಿ ಅನಿಸುತ್ತಿರಲಿಲ್ಲ..
ಜಾನ್ ಇಲ್ಲದ ಸಮಯದಲ್ಲಿ ಅವಳನ್ನು ಬೇಟಿ ಮಾಡಬೇಕು.ತುಂಬ ಸಲ ಹಿಂಬಾಲಿಸಿದ್ದ,ಕೊನೆಗೊಂದು ದಿನ ಅವಕಾಶ ತಾನಾಗಿಯೇ ಒದಗಿ ಬಂತು.

ನನಗೊತ್ತಿತ್ತು ನೀನು ಬಂದೆ ಬರುತ್ತಿಯಂತ ಆದರೆ ಇಷ್ಟು ಬೇಗ ನಿನ್ನ ಆಗಮನ ಉಹಿಸಿರಲಿಲ್ಲ..
ಆಕಸ್ಮಿಕವಾಗಿ ಸಿಕ್ಕ ಅಪ್ಪುಗೆಗೆ  ಮನು ಬೆಚ್ಚಿ ಬಿದ್ದ....

ಸರಿ ತಪ್ಪುಗಳನ್ನು ಸೃಷ್ಟಿಸಿದವರಾರು..ಯಾವುದು ಸರಿ ಯಾವದು ತಪ್ಪು .. ಅತ್ಮವಂಚನೆ ಮಾಡಿಕೊಂಡು ಎಲ್ಲರ ಮೆಚ್ಚುಗೆಗಾಗಿ ಬದುಕುವುದು ಎಷ್ಟು ಸರಿ... ಆಕ್ಚವಲೀ ಅದೇ ಸರಿ.....

ನಾವು ಸಮಾಜಕ್ಕಾಗಿ ಬದುಕಬೇಕು.ಅತ್ಮವಂಚನೆಯಾದರೂ ಸರಿಯೇ ಮಾಡಿದ ತಪ್ಪನ್ನು ತಿದ್ದಿ ಬದುಕಬೇಕು.

ಮನು ರಿಯಾಲಿ ಸಾರಿ....ನಿನಗೆ ನನ್ನನ್ನ ಸಾಯಿಸಿಬಿಡುವಷ್ಟು ಕೋಪ ಇದೆಯಲ್ವಾ...
ಜೀವನ ನಾವಂದುಕೊಂಡಷ್ಟು ಸುಲಭವಲ್ಲ..ಅಂದು ನನ್ನ ಪರಿಸ್ಥಿತಿಯಲ್ಲಿ ನೀನಿದ್ದರೂ ಇದನ್ನೆ ಮಾಡುತ್ತಿದ್ದೆ...
ಯಾರು ಅರಿಯದ ಯಾರಲ್ಲೂ ಹೇಳಿಕೊಳ್ಳಲಾಗದ ಒಂದು ನಿಗೂಢ ಸತ್ಯ ಇಂದಿಗೂ ನನ್ನ ಜೀವ ಹಿಂಡುತಿದೆ..

ನಿನಂದುಕೊಂಡಂತೆ ನಾನು ನಿನಗೊಸ್ಕರ ನಿನ್ನ ಪ್ರೀತಿಗೊಸ್ಕರ ಒಂದುವರೆ ವರ್ಷ ಕಾದಿಲ್ಲಾ...ಒಂದು ವೇಳೆ ಕಾದಿದ್ದರೇ ಇದೆ ಸಮಾಜ ನನ್ನ ಚೀ... ತೂ ..ಅಂತ ಉಗಿಯುತ್ತಿತ್ತು..ಕಾರಣ ಸ್ಟಿಪನ್ ಗೆ ತಂದೆ ನೀನು...

ಈಗ ಹೇಳು ಸಮಾಜದ ಬಾಯಿಮುಚ್ಚಿ ನನಗೆ ಜೀವನ ಕೊಟ್ಟ ಜಾನ್ ಗೆ ಮೋಸ ಮಾಡಿ ನಿನ್ನ ಜೊತೆ ಬರಬೇಕಿತ್ತೆ?
ಅಥವಾ ಸತ್ಯ ಹೇಳಿದ್ದಿದ್ದರೆ ಆಗಿನ ಪರಿಸ್ಥಿತಿಯಲ್ಲಿ ನೀನು  ಏನು ಮಾಡುತ್ತಿದ್ದೆ..?

ಇಂದಿಗೂ ನಿನ್ನ ಪ್ರೀತಿಸುವೆ...ಹಾಗಂತ ನಿನ್ನನ್ನು ಪಡೆಯಬೇಕೆಂಬ ಸ್ವಾರ್ಥ ನನ್ನಲಿಲ್ಲ..ತ್ಯಾಗ ಎನ್ನುವುದು ಈ ಪ್ರೀತಿಯ ಇನ್ನೊಂದು ಮುಖ.
ನಾವಂದು ಕೊಂಡಂತೆ ಜಗತ್ತನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಒಬ್ಬರನ್ನು ಪ್ರೀತಿಸಿದರೆ ...ಅವರ ಪ್ರೀತಿ ಇನ್ನೊಬ್ಬರ ಮೇಲಿರುತ್ತೆ..ಹೀಗೆ ಯಾರೋ ಯಾರನ್ನೊ ಯಾವದೋ ಕಾರಣಕ್ಕೊ ಇಷ್ಟಪಡುತ್ತಾರೆ.
ವಿಪರ್ಯಾಸವೆಂದರೆ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿಯೂ ಹೀಗಿದ್ದಿವಿ ನೋಡು.

ಅವಳ ಮಾತಿನ ಮುಂದೆ ಮನುವಿಗಿದ್ದ ಪ್ರಶ್ನಾವಳಿಗಳು ಕುಸಿದು ಬಿದ್ದವು. ಏನು ಮಾತನಾಡಬೇಕು ಅನ್ನುವುದೆ ಅವನಿಗೆ ತೋಚಲಿಲ್ಲ..

ನನ್ನ ಜೀವನದಲ್ಲಿ ಅಂತದೇನು ವ್ಯತ್ಯಾಸವಿಲ್ಲ..ಕಳೆದು ಕೊಳ್ಳಲು ಕೊಂಡುಕೊಂಡಿದ್ದೇನು ಇಲ್ಲ.
ನಿನ್ನ ಜೀವನ ಚೆನ್ನಾಗಿದೆ, ಇದು ಹೀಗೆ ಇರಲಿ..ನಾನು ಇಲ್ಲೆ ಹೆಚ್ಚು ಹೊತ್ತಿದ್ದರೆ,ಸರಿಯಲ್ಲ...

ಅವಳ ಮರು ಮಾತಿಗೆ ಕಾಯದೆ ಬಿರಬಿರನೆ ಹೊರನೆಡೆದ.
ಸ್ಟಿಪನ್ ತುಂಟ ನಗು ಅಂಗಳದಲ್ಲಿ ಕೊಂಚ ಹೊತ್ತು ಅವನ ನಿಲ್ಲಿಸಿತ್ತು.
ಅದಾವಗಲೇ ಸ್ಕೂಲ್ ಮುಗಿಸಿ  ಬಂದ ಸ್ಟಿಪನ್ ಅಂಕಲ್ ಎನ್ನ ತೊಡಗಿದರಿಂದ  ಮನು ಅಲ್ಲೆ ನಿಂತಿದ್ದ.

ಮಗುವಿನ ಮುಖ ದಿಟ್ಟಿಸಲಾಗದೆ...ಕೈ ಬೀಸಿ ಟಾಟಾ ಮಾಡುತ್ತ ಹೊರ ನೆಡೆದ.

ಹೌದು ಎಲ್ಲಾ ಪ್ರಶ್ನೆಗಳಿಗು ಉತ್ತರ ಸಿಕ್ಕಿದ್ದರೂ ನನ್ನ ಬದುಕು ಪ್ರಶ್ನೆಯಾಗಿಯೇ ಉಳಿದಿದೆ. ನಾನೆ ನನ್ನ ಬಗ್ಗೆ ಯೋಚಿಸದ ಮೇಲೆ ಇನ್ಯಾರು ಚಿಂತಿಸುವರು.
                                    ***

ಇಷ್ಟು ದಿನವಿಲ್ಲದ ಯೋಚನೆ ಈಗ ಸಿಲ್ವಿಯ ಮನಸ್ಸು ಆವರಿಸಿಕೊಂಡಿತ್ತು

ಹೌದು ಅವನನ್ನು ಮದುವೆಗೆ ಒಪ್ಪಿಸಲು ಸಾಧ್ಯವೇ?
ಸಾಧ್ಯವಾಗಿರುತ್ತಿದ್ದರೆ...
ನನ್ನಿಂದ ಮನುವಿಗೆ ಅನ್ಯಾಯ ಆಗಿರಬಹುದು...ನಾನೆ ಏನಾದರೂ ಮಾಡಿ ಅವನ ಜೀವನ ಸರಿಪಡಿಸಬೇಕು. ಅವನು ಒಂಟಿತನದಿಂದಲೇ ಅದೆಷ್ಟು ನೋವನ್ನು ಅನುಭವಿಸುತ್ತಿದ್ದಾನೆ.
ಈ ಕೆಲಸವನ್ನು ನಾನು ಹೇಗೆ ಮಾಡಲಿ .. ಅವನನ್ನು ಹೇಗೆ ಮತ್ತೆ ಸಂಪರ್ಕಿಸಲಿ...
ಅದೇನು ಕಷ್ಟದ ಕೆಲಸವಲ್ಲ..ಯಾರದರೂ ಕಾಲೇಜಿ ಗೆಳರಯರನ್ನು ಸಂಪರ್ಕಿಸಿದ್ದೆ ಆದಲ್ಲಿ ಅವನ ಪೋನ್ ನಂಬರ್ ನ್ನು ಪಡೆಯಬಹುದಾಗಿತ್ತು..
ಹಳೆಯ ಡೈರಿಯಲ್ಲಿ ಸುಮಾರು ನಂಬರಗಳಿದ್ದವು,ಆದರೆ ಯಾವುದರ ಮುಂದು ಖುದ್ದಾಗಿ ಹೆಸರು ನಮೂದಿಸಿಲ್ಲ..
ಅದರಲ್ಲಿ ಸುಮಾರು ಮಂದಿ ೧೦೦ ಮೆಸೆಜ್ಗಳಿಗಾಗಿ  ಸಿಮ್ ತಗೊಂಡವರು.ವ್ಯಾಲಿಡಿಟಿ ಮುಗಿತ್ತಿದ್ದಂತೆ ಎಸೆದವರೆ ಜಾಸ್ತಿ...

ಹಾ ಹಾ ರಿಂಗಾಗುತ್ತಿದೆ ..ಆದರೆ ಯಾರು ರಿಸಿವ್ ಮಾಡಿರಲಿಲ್ಲ...ಎರಡು ಮೂರು ಪ್ರಯತ್ನಗಳ ನಂತರ ಅಡುಗೆ ಕೆಲಸಕ್ಕೆ ಒಳನಡೆದಳು.
 

ಯಾವುದೋ ಅನೌನ ಕರೆ ಬಂದಿರುವುದು ನೋಡಿ ಸಿಲ್ವಿ  ರಿ ಡಯಲ್ ಮಾಡಿದರೆ..ಅತ್ತ ಕಡೆಯಿಂದ
ಹು ಇಸ್ ದಿಸ್..?
ಹಾಯ್ ನಾನು ಸಿಲ್ವಿ ನೀವು..

ಯಾವ ಸಿಲ್ವಿ..?
ಅವಳು ಉತ್ತರಿಸುವ ಮೊದಲೆ..
ಒವ್  ನೀನಾ... ನಾನು ಲಾವಣ್ಯ ಕಣೆ...ಹೇಗಿದ್ದಿ...
ಇವಗಾ ಅದೇನು ಇಷ್ಟು ವರ್ಷದ ನಂತರ ನಮ್ಮ ನೆನಪು..

ಪರಸ್ಪರ ಕುಶಲೋಪಚಾರ ಮಗಿಸಿ ಸಿಲ್ವಿ ತನಗೆ ಬೇಕಾದ ಮಾಹಿತಿ ಕಲೆ ಹಾಕಿದಳು.
ಈ ನಡುವೆ ಹೆಚ್ಚು ಚರ್ಚೆ ಯಾಗಿದ್ದು ಮಂದಿರಾ ಬಗ್ಗೆ..
ಯಾಕೋ ಲಾವಣ್ಯಳ ಮಾತು ನಂಬಬೇಕೊ ಬೇಡವೊ ಒಂದು ಅರ್ಥವಾಗಲಿಲ್ಲ.
ಕಾಲೇಜಿನಲ್ಲಿರುವಾಗಲೇ ಮನು ಮತ್ತು ಮಂದಿರಾ ಪ್ರೀತಿಸಿರಲು ಸಾಧ್ಯವೇ?
ಅವರಿಬ್ಬರೂ ಅವಗಾವಗ ನೈಟೌಟ ಹೊಗ್ತಿರ್ತರಂತೆ....
ಚೇ ಈ ಲಾವಣ್ಯಳ ಮಾತು ಹೇಗೆ ನಂಬಲಿ..
ನಾನು ಸಹ ಅದೆ ಕಾಲೇಜಲ್ವಾ ...

ಅಬ್ಬಾ ಈ ಹುಡ್ಗಿರೆಲ್ಲಾ ಹೀಗೆ ಎಷ್ಟೊಂದ ಕಥೆ ಕಟ್ತರಪ್ಪ..
ಅದೇನೆ ಇರಲಿ..ಒಂದ್ಸಲ ಯಾಕೆ ಮನು ಹಾಗೂ ಮಂದಿರಾ ಜೊತೆ ಮಾತಡಬಾರ್ದು.

ಸಿಲ್ವಿ ಸುಮ್ಮನೆ ಮಂದಿರಾ ಜೊತೆ ಮಾತಾಡಿದಳು,
ಮನುವಿಗೆ ಇನ್ನು ಮದುವೆಯಾಗಿಲ್ಲ ಎಂದಾಗ ಅವಳು ಮನುವನ್ನು ಇಷ್ಟ ಪಟ್ಟಿದ್ದನ್ನು
ಅವನಿಗೆ ಪ್ರಪೋಸ್ ಮಾಡಿದ್ದನ್ನು
ಅವನು ಯಾರನ್ನೊ ಇಷ್ಟ ಪಟ್ಟಿದ್ದನ್ನು..ಎಳೆ ಎಳೆಯಾಗಿ ಬಿಚ್ಚಿಟ್ಟಳು.

ಸಿಲ್ವಿಗೆ ಈಗಾಗಲೇ ಎಲ್ಲಾ ಅರ್ಥವಾಗಿದ್ದು, ತಾನು ಯಾಕೊ ಸರಿಯಾದ ದಾರಿಯಲ್ಲಿ ಹೊಗ್ತಿರವುದು ಅರಿವಾಯ್ತು.
ಅದರೆ ಮನುವನ್ನು ಒಪ್ಪಿಸುವುದು ಅದೇನು ಸುಲಭದ ಮಾತಾಗಿರಲಿಲ್ಲ.
ಅವಳಿಗೆ ತೋಚಿದ್ದು ಒಂದೇ ಮಾರ್ಗ..ಇದನ್ನು ಬಿಟ್ಟರೆ ನನಗೇನು ತೋಚಲ್ಲ. ಸಾರಿ ಮನು..

ಮನದಲ್ಲಿ ಮುಂದಿನ ಯೋಚನೆ ರೆಡಿಯಾಗಿತ್ತು.ಎಲ್ಲಾ ಅವಳಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಮನು ಮಂದಿರನಾ ಮದುವೆ.
ಇದ್ದಕಿದ್ದಂತೆ ಅವಳ ಅಲೋಚನೆಗಳನ್ನೆಲ್ಲಾ ಹಿಂದಿಕ್ಕಿದ್ದು ಆ ವಾಟ್ಸಪ್ ಮೆಸೆಜ್.  ಓದಿದವಳ ಮೊಗದಲಿ ಗೆಲುವಿನ ಮಿಂಚೊಂದು ಮೂಡಿ ಮರೆಯಾಯಿತು.

ಹಾಯ್ ಸಿಲ್ವಿ  ಮುಂದಿನ ತಿಂಗಳು ನನ್ನ ಮದುವೆ ತಪ್ಪದೆ ಬರಬೇಕು.ಮೊದಲ ಇನ್ವಿಟೇಷನ್ ನಿನಗಾಗಿ..

ಚಿ | ಮನೋಹರ
ಚಿ |ಸೌ | ಮೈತ್ರಿ

ಬೇಡ ಬೇಡವೆಂದರೂ ಕಾಡಿ ಬೇಡಿ  ಪ್ರೀತಿಸಿಯೇ ಬಿಟ್ಟಳು ಮೈತ್ರಿ

ಹೇಗೋ ಅಂತು ಮನುವಿಗೆ ಮದುವೆಯಾದರೆ ಅವಳಿಗೆ ಸಾಕಿತ್ತು.ತಾನಾಗಿ ರಿಸ್ಕ್ ತಕೊಂಡು ಮಾಡಬೇಕಾದ ಕೆಲಸ ಯಾವುದೇ  ರಿಸ್ಕ್ ಇಲ್ಲದೆ ನೆರವೇರುತಿರುವುದು ಖುಷಿಕೊಟ್ಟ ವಿಚಾರ.

ಮಂದಿರಾ ಮತ್ತೊಮ್ಮೆ ಮನುವಿಗೆ ಪ್ರಪೋಸ್ ಮಾಡಿದ್ದಳು.ಅದು ಆರು ವರ್ಷದ ನಂತರ..
ಸಿಲ್ವಿ ಹೇಳಿದ ಮೇಲೆನೆ ಅವಳಿಗೆ ಗೊತ್ತಾಗಿದ್ದು ಮನುವಿಗಿನ್ನು ಮದುವೆಯಾಗಿಲ್ಲ ಅಂತ.

ಮನುವಿಗೂ ಅಶ್ಚರ್ಯವಾಗಿತ್ತು ಮಂದಿರಾ ಕಾಲ್ ಮಾಡಿದ್ದನ್ನು ನೋಡಿ.ಇದೆಲ್ಲ ಸಿಲ್ವಿಯ ಬೇಟಿಯ ಪರಿಣಾಮವೆಂಬುವುದು ಸಾಬಿತಾಗಿತ್ತು.

ಮನು ತನ್ನನ್ನೆ ತಾನು ಪ್ರಶ್ನಿಸಿಕೊಂಡಿದ್ದ.ಸಿಲ್ವಿಯನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗುವುದು ಅವನಿಗಾಗದ ಮಾತು.
ತನ್ನ ಮನಸ್ಸಿಗೆ ಮೋಸ ಮಾಡಿಕೊಂಡು ಪ್ರತಿನಿತ್ಯ  ನೋವು  ಅನುಭವಿಸುವುದಕ್ಕಿಂತ ಹೀಗೆ ಇದ್ದು ಬಿಡುವುದು ಎಷ್ಟೊ ವಾಸಿ.

ನಾವು ಅದೆಷ್ಟೋ ಯೋಚಿಸಿದರೂ ಕೆಲವೊಂದು ವಿಷಯಗಳಿಗೆ, ಭಾವನೆಗಳಿಗೆ ಸುಖಾಂತ್ಯ ನೀಡಲು ಸಾಧ್ಯವಿಲ್ಲ. ತಾತ್ಕಲಿಕವಾಗಿ ಶಮನ ಮಾಡಿದ ಸಮಸ್ಯೆಗಳು   ಮತ್ತೆ ಕವಲೊಡೆದು ಆಗಾಗ ನಮ್ಮನ್ನು ಕಾಡುವುದೇ ಹೆಚ್ಚು.
ಹೀಗಿದ್ದರೂ ನಮ್ಮೆಲ್ಲ ಸಮಸ್ಯೆಗಳಿಗೆ  ನಮ್ಮದೆ ಆದ ಪರಿಹಾರ ಮಾರ್ಗವಿರುವುದು ಖಂಡಿತ.ಇಲ್ಲಿ ನಾವು ಮನೋ ವೈಫಲ್ಯತೆಗೆ ಒಳಗಾಗಬಾರದಷ್ಟೆ.
ಕಟುವಾಗಿದ್ದರೂ ತೆಗೆದುಕೊಂಡ ನಿರ್ಧಾರಕ್ಕನುಗುಣವಾಗಿ ಬದುಕುವುದು ಲೇಸು. ನೋವನ್ನು ಎಲ್ಲರಿಗೂ ಹಂಚುವುದಕ್ಕಿಂತ  ನಮ್ಮೊಳಗೆ ಶಮನ ಮಾಡುವುದು ಒಳ್ಳೆಯದು.

ಒಂದರ್ಥದಲ್ಲಿ ಮನು ಹಾಗೆ ಮಾಡಿದ್ದ..ಮಂದಿರಾನ ಮಾತಿಗೆ  "ಸಾರಿ ...ಮಂದಿರಾ ಬೇಜರಾಗಬೇಡ ನಾನು ಮೊದಲೆ ಹೇಳಿದಿನಲ್ಲ .ಪ್ರೀತಿಸುತ್ತಿರುವ ವಿಷಯ...ಅವಳೇ ಮೈತ್ರಿ..ಮುಂದಿನ ತಿಂಗಳಲ್ಲಿ ಮದುವೆ ಕಾಣೆ...ಇಲ್ಲಿ ತನಕ ಅವಳ ಸ್ಟಡೀಸ್ ಗಾಗಿ ಕಾದಿದ್ದೆ..ಲಾಷ್ಟ ಮಂತ್ ಮಾತುಕತೆ ಮುಗಿತು, ಸಿಂಪಲ್ಲಾಗಿ ಊರಲ್ಲಿ..."
ಅವಳು ಸಪೋರ್ಟಿವ್ ಅಗಿ  ಒವ್ ಕಂಗ್ರಾಜುಲೇಷನ್ ಎಂದಿದ್ದಳು.

ಮೊದಲೆಲ್ಲ ಈ ಪ್ರಪಂಚ ಸ್ವಾರ್ಥದಲ್ಲಿ ಮುಳುಗಿ ಹೋಗಿದೆ ಎನ್ನುತ್ತಿದ್ದ ಮನುವಿಗೆ ಈಗೀಗ ಯೋಗಿಗಳು, ತ್ಯಾಗಿಗಳು ಕಾಣಿಸತೊಡಗಿದರು.
ಅದರಲ್ಲೂ ತನ್ನ ಜೀವನದ ಬಗ್ಗೆ ಮುತುವರ್ಜಿವಹಿಸಿದ ಸಿಲ್ವಿ ಮಹಾ ತ್ಯಾಗಿಯಂತೆ ಕಂಡಳು.

ಹೌದು ಅವಳ ಖುಷಿಗಾದರೂ ನಾನು ಮದುವೆಯಾಗಬೇಕು..ಕೇವಲ ಅವಳಿಗೋಸ್ಕರ ಮದುವೆಯಾಗಲು ಮನು ಸಿದ್ದನಾದ.  ಅದ್ಯರೋ ಮೈತ್ರಿ
ನಗು ನಗುತ್ತಲೆ ಹೆಸರನ್ನು ಟೈಪಿಸಿದ್ದ ಮನುವಿನೊಳಗೆ ಅದೇನೊ ರೋಧನೆ.
ಮೊದಲ ಪ್ರೀತಿಯನ್ನು ಮರೆಯುವದು ಅಷ್ಟು ಸುಲಭವಲ್ಲ..ಎದೆಯಾಳಕೆ ಚುಚ್ಚಿದ ಮುಳ್ಳಿನಂತೆ ಅವಾಗವಗ ವೇದನೆಯಾಗುವುದು

ಸಿಲ್ವಿ ..ಮದುವೆ ಇನ್ವಿಟೇಷನ್ ಕಂಡು ಸತ್ಯವೆಂದೇ ನಂಬಿದ್ದಳು.ಮನದ ಮೂಲೆಯಲ್ಲಿ ಅನುರಾಗದ ಅಲೆಯೊಂದಿಗೆ ಮನುವಿನ ನೆನಪು ಚೂರುಪಾರು ಹಾದು ಹೋದರು.. ವಾಸ್ತವದ ಮೊಗದಲಿ ಅದು ನಗಣ್ಯ..
ಇಂದು ಎಲ್ಲವನ್ನು ಮರೆತು ನೆಮ್ಮದಿಯಾಗಿದ್ದಾಳೆ..

ಸಿಲ್ವಿ ಬೆಂಗಳೂರಿನಲ್ಲೇ ಇರುವುದರಿಂದ
ಅಕಸ್ಮಾತ್ತಾಗಿಯು ಬೇಟಿಯಾಗಬಾರದೆಂಬ  ನಿರ್ಧಾರ ಹಾಗೂ ಜಾನ್ ಅವರ ಕಂಪನಿ ವೆಂಡರ್ ಆಗಿರುವುದರಿಂದ
ಮನೋಹರ ಕಂಪನಿ ಕೆಲಸಕ್ಕೆ ರಿಸೈನ್ ನೀಡಿ  ಊರಿಗೆ ಹೊರಟಿರುವನು.

ಊರಲ್ಲಿರುವ ಹತ್ತು ಎಕರೆ ಜಾಗದಲಿ ಅಪ್ಪ ಅಮ್ಮ ಹಾಗೂ ತಮ್ಮ ಜೀವನ್ ಜೊತೆ ಕೃಷಿ ಕಾರ್ಯದಲ್ಲಿ ಕೈಜೋಡಿಸುವುದು ಮುಂದಿನ ಪ್ಲಾನ್ ಆಗಿತ್ತು.

ನಿನ್ನೆಯ ಪ್ರಯಣ ತಂದೊಡ್ಡಿದ ಆಯಾಸದಿಂದ ಬೆಳಿಗ್ಗೆ ಒಂಬತ್ತಕ್ಕೆ ಎದ್ದು ಹಲ್ಲುಜ್ಜುತ್ತಿದ್ದ ಮನು ಅವಳನ್ನೆ ನೋಡುತ್ತಿದ್ದ.. ಎಲ್ಲೊ ನೋಡಿದ ನೆನಪಾಗಿ ತಾಯಿಯ ಮುಖ ನೋಡಿದಾಗ...

ಅವಳಾ ...ಪಕ್ಕದ ಮನೆ ಕಮಲಳ ಮಗಳು ಮೈತ್ರಿ ಹಾಲು ಕೊಟ್ಟು ಹೋಗಲು ಬಂದಿದ್ದಳು ಎಂದರು.

ಮುಗಿಯಿತು.

ನಿಮ್ಮ ಅನಿಸಿಕೆಗಳಿಗೆ ಸ್ವಾಗತ...🙏