Friday, 28 October 2016

ಕವಿ

                      ಕವಿ

ಮಹಾ ಕಾವ್ಯದ ಸೃಷ್ಟಿಗೆ ಪಣ ತೊಟ್ಟಿದ್ದಾನೆ..ಪದಗಳೇ ಸಾಲುತ್ತಿಲ್ಲ...
ಬಳುವಳಿ ಪಡೆಯಲು ಅವನಿಗಿಷ್ಟವಿಲ್ಲ.
ಸಾರಸ್ವತ ಲೋಕದ ಬ್ರಹ್ಮನು ಅವನಲ್ಲ.ಆದರೂ ಆಸೆ ಚಿಗುರಿತಲ್ಲಾ..
ಅವನೊಬ್ಬ ಭಾವಜೀವಿ.
ಬಿರುದು ಸನ್ಮಾನವಿತ್ತ ಜನ ಮಹಾಕವಿಯೆಂದರು..ಅವನ ದೃಷ್ಟಿಯಲ್ಲಿ ಸೃಷ್ಟಿಕಾರ್ಯ ಮುಗಿದಿಲ್ಲ.
ಹುಚ್ಚನಂತೆ ಗೊಣಗುತ್ತಾನೆ...ನಾಲ್ಕು ಸಾಲು ಗೀಚುತ್ತಾನೆ...ಮತ್ತೆ ಗೀಚುತ್ತಾ ಇದ್ದಾನೆ
  
             ಸಂದೇಶ ಪೂಜಾರಿಗುಲ್ವಾಡಿ

ಕವಿತೆಯ ಹುಟ್ಟು

                     ಕವಿತೆಯ ಹುಟ್ಟು

ಹ್ರದಯದ ಕದ ತಟ್ಟಿ ಇಣುಕಿ
ಕೋಟಿ ಪದಗಳ ಪಟ್ಟಿ ಕೆಣುಕಿ
ಹುಟ್ಟುವುದು ಕಾಣ ಕವಿತೆ

ಈಗಷ್ಟೆ ಜನ್ಮ ಮ್ರತ್ಯುವಿಲ್ಲದೆ ಮರುಜನ್ಮ
ಸದ್ಯ ಸ್ವಸ್ಥ ಪುನರುತ್ಥಾನ
ನಿನ್ನಂತೆ ತುಂಬಿ ನಿಂತದಲ್ಲ ಸದಾ ಉಕ್ಕುವ ಒರತೆ.

ಯೋಜನೆಯ ಯೋಚನಾಲಹರಿ
ಮುಂಚೂಣಿಯಲ್ಲಿದೆ ಭಾವನೆ ಸಾಗಿದ್ದೆ ದಾರಿ.
ಮಿಥ್ಯವಾದವಲ್ಲ ಸತ್ಯದ ಕಲ್ಪನೆ ಒಡಲಾಳದ ಚರಿತೆ.

ಚೈತನ್ಯದ ದಾಳಿಗೆ ಚೇತ್ಕಾರ ಮೇಳೈಯಿಸಿ
ದೂರ ಸರಿದಿದೆ ಜಡತೆ ಕೊನೆಯರಸಿ
ಉದಯಿಸಿದೆ ಬೆಳದಿಂಗಳ ಬಾಂಧವ್ಯ ಕವಿತೆ.
          ಸಂದೇಶ ಪೂಜಾರಿ ಗುಲ್ವಾಡಿ

Saturday, 22 October 2016

ತ್ಯಾಗ

ತ್ಯಾಗ
ನಿನ್ನ ನೋಡಿ ನಕ್ಕೆ
ನೀ ನಗುವ ಮೊದಲೆ ನನ್ನೊಳಗೆ ಚಿಗುರಿತು ಪ್ರೀತಿ
ಮತ್ತೆ ಮತ್ತೆ ನಿನ್ನ ನೋಡಿದೆ
ನಗುತ್ತಿದ್ದ ನೀ ಸ್ತಬ್ಧಳಾದೆ ಕೆಂದುಟಿಯ ಜೋಡಿಸಿ
ಅಂದೆ ಯೋಚಿಸಿದೆ ನಿನ್ನ ನಗುವ ಕಸಿಯ ಬಾರದೆಂದು
ಮತ್ತೆ ಎಂದು ಸಹ ನಿನ್ನ ನೋಡಬಯಸಿಲ್ಲ.. 

           ಸಂದೇಶ ಪೂಜಾರಿ ಗುಲ್ವಾಡಿ

Thursday, 20 October 2016

ಅಂತರಾಳ


                      ಅಂತರಾಳ


ನನ್ನನ್ನೇ ಸಮರ್ಥಿಸುತ್ತಿರುತ್ತೆನೆ
ಯಾರಿಗೂ ಸೋಲಲ್ಲ ಅಂತ
ಏನು ಮೋಡಿ ಮಾಡಿದೆ
ಸೋತೆನಲ್ಲ ನಾ ನಿನಗೆ.
ನಿಜಕ್ಕೂ ನೀನು ಮಾಡಿದ್ದು ಮೋಡಿಯಲ್ಲ.
ನಿನಗೆ ನನ್ನಲ್ಲಿ ಪ್ರೀತಿ ಇಲ್ಲ.
ನಾನೆ ನಿನ್ನನ್ನು ನೋಡಿ ಮೂಢನಾದೆ

ಸತ್ಯ ಇರಬಹುದೆ?
ನಿನ್ನಲ್ಲಿ ಚೆಲುವಿದೆ ನಾ ನಿನ್ನ ಪರವಾದೆ.
ನೀ ಬಯಸುವುದು ಅದನ್ನೆ ಅಲ್ಲವೆ?
ಹಾಗೆಯೆ ನಾ ಭಾರವಾದೆ.
ಅರ್ಥವಾಗದು ಗೆಳತಿ ನನಗೆ
ನನ್ನ ನೆನಪು ಸುಳಿದರು ಸಹಿಸದ ನೀ ನನ್ನ ಮನ ಅರಿವ ಬಗೆ ಹೇಗೆ?

  ಸಂದೇಶ ಪೂಜಾರಿ ಗುಲ್ವಾಡಿ

Friday, 14 October 2016

ಸಂಚಾರಿ

                    ಸಂಚಾರಿ

ನನ್ನ ಮನಕೆ ನುಗ್ಗಿ ದಾಳಿ ಮಾಡಿದ ಮೇಲೆ. ನನ್ನ ಕನಸುಗಳೆಲ್ಲಾ ಸಂಚಾರ ಹೊರಟಿವೆ..
ಗೆಳತಿ ಅಲೆಮಾರಿ ಮಾಡದೆ ನೆಲೆಯುರಲು ಅವಕಾಶ ಕೇಳುತಿವೆ..
ಒಡಲಕೊರವ ಕಡಲಾಗದೆ
ಹುಣ್ಣಿಮೆ ಬಳದಿಂಗಳಾಗಿ ಬಾ..
 

                 ಸಂದೇಶಪೂಜಾರಿ ಗುಲ್ವಾಡಿ

ಸುಮ್ಮನೆ


                         ಸುಮ್ಮನೆ


ಸುಳ್ಳು ಸೃಷ್ಟಿಸಿದೆಯಾ ಕಳ್ಳ ಗೆಳೆಯಾ
ಹಳ್ಳ ದಿಣ್ಣೆಯನ್ನೇರಿ ಬೆಳ್ಳಿ ಮೋಡ ತೋರಿಸುವೆನೆಂದು...

ಇಲ್ಲಾ ಗೆಳತಿ ನಿಲ್ಲೆ ಗೆಳತಿ...ನಮಗಾಗೆ ಕರಗಿತಿಂದು....
ಹೊಗೋಣ ಪ್ರೀತಿಹನಿಯಲಿ ಮಿಂದು.

ತೊಯ್ದ ಮಳೆಗೆ ಸೃಷ್ಟಿಯಾಗಲಿ ಹಸಿರ ಬನ.
ಇಲ್ಲೆ ಕುಳಿತು ಹಗುರವಾಗಲಿ ನಮ್ಮ ಮನ...
   
                     ಸಂದೇಶ ಪೂಜಾರಿ ಗುಲ್ವಾಡಿ

Thursday, 13 October 2016

ನೀತಿ

                     ನೀತಿ

ನೀವು ಹಿರಿಯರು,ಪುರಾಣ ಗ್ರಂಥ ಹುಡುಕಿ ಹುಡುಕಿ ಕೊಡುತ್ತಿರುವಿರಿ ನಿದರ್ಶನ.
ಕಷ್ಟವಾದರೂ ಅವಡುಗಚ್ಚಿ ಪಾಲಿಸಿದೆ ನಿಮ್ಮ ಮಾರ್ಗದರ್ಶನ. 

ಸ್ವಂತಿಕೆಯ ಮೇಲೆ ಮೂಡುವ ಅದೆಷ್ಟೋ ಪ್ರಶ್ನೆ.
ರೀತಿ,ನೀತಿ,ರಿವಾಜುಗಳ ಮುಂದೆ ಮೂಕ ಸನ್ನೆ.

ನಾನು ಕಿರಿಯವ ನೈತಿಕತೆ ಭೋದಿಸಲು ಹೊರಟರೆ ತಪ್ಪು.
ಇರಲಿ ಬಿಡಿ ಕಾಯುವೆ ನನಗೂ ಬರುತ್ತಲ್ಲಾ ಮುಪ್ಪು.

ಕೊಂಚ ಹಿಡಿದರೂ ತಾಳೆಗರಿಗಳಿಗೆ ಹುಳುಕು,
ನನಗಿಲ್ಲ ಕಿಂಚಿತ್ತು ಅಂಜಿಕೆ,ಅಳುಕು.

ನೀತಿಗಳಲ್ಲಿ ಹುದುಗಿದ್ದರೆ ಸಾಕಲ್ಲವೆ ಸಾರ್ವಕಾಲಿಕ ಸತ್ವ.
ಇನ್ನೇನು ಬೇಕು ಮಂದಿ ಮನಸ್ಸುಗಳಲ್ಲಿ ಹೊಂದಲು ಅಮರತ್ವ.

                              ಸಂದೇಶ ಪೂಜಾರಿ ಗುಲ್ವಾಡಿ

ಬೊಂಬೆ ಮಾಡಿದರಯ್ಯ

             ಬೊಂಬೆ ಮಾಡಿದರಯ್ಯ

ನನ್ನ ಬೊಂಬೆ ಮಾಡಿದರಯ್ಯ
ಕೈಕಾಲು,ಗಂಟುಗಳಿಗೆ ಕೀಲು ಬಿಗಿದು
ಚಲನೆ ನೀಡಿದರಯ್ಯ.
ಈ ಲೋಕದ ನೇಪಥ್ಯದಲ್ಲಿ ನನ್ನದೇನಿದೆ..? ಆಡಿಸಿದಾತನ ಕೈಗೊಂಬೆ ನಾನು.
ಬಾಯ್ಬಿಟ್ಟು ಬೊಬ್ಬಿರಿದರು ಕೇಳುಗರು ಬೇಕಲ್ಲ..
ಸೂತ್ರ ಹಿಡಿದವನೆ ಮರೆತಿಹನಲ್ಲ.
ಕೆಳಗೆ ದುಮುಕಲು ಭಯ.ನನ್ನ ನಾ ಅರಿಯಲಾಗಲಿಲ್ಲ.ಮಣ್ಣಿನ ಬೊಂಬೆಯೊ ಚಂದನದ ಗೊಂಬೆಯೋ...

         ಸಂದೇಶ ಪೂಜಾರಿ ಗುಲ್ವಾಡಿ

ಗೊಂಬು

                 ಗೊಂಬು

ನೀ ನಡೆದರೆ ಚಂದ..ಕುಣಿದರೂ ಚಂದ
ಅಳಬೇಡ ನನ್ನ ಮುದ್ದು ಕಂದ

ಬೆಳ್ಳಂಬೆಳಗೆ ಬೆಳ್ಳಿ ಬಟ್ಟಲಲ್ಲಿ ಹಾಲ ಕಾಯಿಸಿ ಕುಡಿಸುವೆ ಬಾರೋ ನಂದ.

ನೂರಾಟ ತಂದು ಕೊಡುವೆ ನೀರಾಟ ಆಡದಿರು...
ಮುದ್ದು ಕಂದ ನನ್ನ ಗೊಂಬು.
ನಾ ಹೇಗೆ ಹಾಕಲಿ ಕಡಿವಾಣ ನಿನ್ನ ಓರೆ ಓಟಕೆ..
ಕಿರುನಗೆ ಮಿಂಚು ಕಣ್ಣಲ್ಲಿ ಕುಡಿನೋಟ ಸಾಟಿ ಯಾರು ನಿನ್ನ ನಗುವಿಗೆ..
ಕರ ನೀಡಿ ಕರೆದಾಗ ಓಡೋಡಿ ಬಂದು ಎದೆಗಪ್ಪು...ಬೆನ್ನು ತಟ್ಟುವೆ ನನ್ನ ಗೊಂಬೆ.

      ಸಂದೇಶ ಪೂಜಾರಿ ಗುಲ್ವಾಡಿ

ಬೊಂಬೆ

               ಬೊಂಬೆ

ನನ್ನ ಒಂದು ಬೊಂಬೆ ಮಾಡಿದೆ
ಹೊಳೆವ ಕಣ್ಣು ಕೆಂಪುಗಲ್ಲ ನನ್ನೆ ನಾ ನೋಡಿದೆ.
ಮುದ್ದಿಸುವೆ ಎಂದು ಕಾದಿರುವೆ..
ಮುದ್ದಿಸದೆ ಆಟವಾಡಿದೆ..ವಿನೋದ ನೋಡಿದೆ.

ಜೀವ ನೀಡಿದೆ ನೀನಿಲ್ಲದೆ ದೇಹ ಬಾಡಿದೆ.ನೋವ ಕಾಡಿದೆ..ಬೊಂಬೆ ಹಾಡಿದೆ..

ಬಾರದ ಬಯಕೆ ಬಯಸಿ ಬಂದರು ಬಹಳ ಮಂದಿ..
ನಿನ್ನ ಇರುವಿಕೆಯೇ ಇರದೆ ನಾ ಬೆದರಿದ ಬೊಂಬೆ

       ಸಂದೇಶ ಪೂಜಾರಿ ಗುಲ್ವಾಡಿ

Wednesday, 12 October 2016

ಸಿಂಧೂರ

                             ಸಿಂಧೂರ



ಆಕೆ ನಗುತ್ತಾಳೆ..ಅವನಿಲ್ಲದಿದ್ದರೂ..
ಜನ ಮನಬಂದಂತೆ ಹಂಗಿಸುವರು ಅವರಿಗೇನು ಗೊತ್ತು...
ಅವಳ ಹಣೆಯ ಮೇಲಿನ ಸಿಂಧೂರ ಅವಳ ಸೌಂದರ್ಯಕ್ಕಿಟ್ಟ ಕಲಶ.
ಪ್ರತಿ ದಿನ ಕುಂಕುಮ ಇಡುವಳು ಅವನ ನೆನಪಲ್ಲಿ..ಅಂದಿಟ್ಟ ನೆನಪಲಿ..ಅಂದವನಿಗಿಟ್ಟ ಮಾತಿನ ನೆನಪಲ್ಲಿ...

       ಸಂದೇಶ ಪೂಜಾರಿ ಗುಲ್ವಾಡಿ

Tuesday, 11 October 2016

ಗೊಂಬೆಯಾಟ

  ಗೊಂಬೆಯಾಟ

ನಾನು-ನನ್ನವಳ ಸಂಬಂಧ ಗೊಂಬೆ -ಮಗುವಿನ ಬಂಧ ಅವಳುಮುದ್ದುಬಲು ಮುದ್ದು ಗೊಂಬೆ ತರ..

ನಾನು ಮುಗ್ಧ ...ಮಗುವಿನ ತರ...

ಮಗುವಿನ ಕೈಯಲ್ಲಿ ಗೊಂಬೆಯಿದ್ದಂತೆ.ನನ್ನ ಕೈಯಲ್ಲಿ ಅವಳು..
ಎಷ್ಟು ಹೊತ್ತು ಆಡಿದರೂ ತುತ್ತಿನ ಪರಿವೇ ಇಲ್ಲ ತೃಪ್ತ ಬಾಳು ನಮ್ಮದು
                  ಸಂದೇಶ ಪೂಜಾರಿ ಗುಲ್ವಾಡಿ

ಮುದ್ದು ಕಂದ ನನ್ನ ತಮ್ಮ

                                ಮುದ್ದು ಕಂದ ನನ್ನ ತಮ್ಮ
 
ಅಂದು ಒಂಟಿಯಾಗಿದ್ದೆ ಹೆತ್ತಮ್ಮನ ಪ್ರೀತಿ ಸಿಗದೆ.ಜಗಕೆ ಇರುಳು ಕಾದಿರಲ್ ನೀ ನನಗೆ ಬೆಳಕಾಗಿ ಬಂದೆ.
ನನ್ನ ಮಾತ್ರೋಧರದಿಂದ ಉದಯಿಸಿದ ಸಹೋದರ ನಿನಗಿದೋ ಆದರದ ಸ್ವಾಗತಾ..
ತಾಯಿ ಪ್ರೀತಿ ಕೊಡಲಾರಳು,ಕಣ್ಣಿಗೆ ಪಟ್ಟಿ ಕಟ್ಟಿರುವಳು.ಕಾಣದ ನಿನ್ನ ಹೇಗೆ ಪ್ರೀತಿಸಿಯಾಳು...ಸಾಲದಕ್ಕೆ ಉದರವನ್ನೆ ಬಗೆದು ಬಂದವ ನೀನು.
ಬೇಸರಿಸದಿರು ಕಂದ ನಿನ್ನಗ್ರಜ ನಾನು...  
ನಾನಿರುವವರೆಗು ವಾತ್ಸಲ್ಯಕೆ ಕೊರತೆ ಕಾಣೆನು ನೀನು..
ನೀನಾಡಿದಿದ್ದೆರೆ ಒಂದು ಮಾತು
ಅಂದು ಸಂಗ್ರಾಮದಲ್ಲೂ ಸಂಧಾನ ಬಯಸುತ್ತಿದ್ದೆ.
ಮೊದಲು ಬಂದವ ನಾನು..ಕಂದ ವಂಚಿಸಿ ಹೋದೆಯಾ ನೀನು...
ನಿನ್ನ ಆತ್ಮಶಾಂತಿಗೆ ಅವನನ್ನೇ ಬಯಸಿದೆ ಬದ್ದ ವೈರಿಯೆಂದು.
ಕೊನೆಗೆ ನನ್ನುಸಿರ ನೀಡಿದೆ ನಿನ್ನೆಸರ ಉಸುರುತ...ಕಂದಾ...

                     ಸಂದೇಶ ಪೂಜಾರಿ ಗುಲ್ವಾಡಿ

ಬೇಸಿಗೆ

ಬೇಸಿಗೆ


ಸ್ನೇಹವು ಬತ್ತಿದೆ ಪ್ರೀತಿಯ ಒಡಲಲಿ
ಒಂದು ಹನಿ ನೀರಿಗಾಗಿ ಎದೆ ಆಳವಾಗಿ ಕೊರೆದೆ

ನನ್ನ ಆವರಿಸಿ ಕನಸು ಮೂಡಿಸಿದೆ
ನಾ ಕನವರಿಸಿ ಕಣ್ತೆರೆಯುವ ಮುನ್ನ
ನನ್ನಿಂದ ದೂರವಾಗಿ ಬಿಟ್ಟೆ

ಹೇಗೆ ಮರೆಯಲಿ ಎಲ್ಲವು ಕನಸೆಂದು
ನನ್ನ ಹ್ರದಯವ ಹಸಿರು ಮಾಡಿದ ನಿನ್ನ?..
ಕಾಯುವೆ ಇದು ಬೇಸಿಗೆ ಅಲ್ಲವೆ?
ಮುಂದೆ ಹನಿಗಾಗಿ.... 

       --ಸಂದೇಶ ಪೂಜಾರಿ ಗುಲ್ವಾಡಿ

ನೆನಪುಗಳು

          ನೆನಪುಗಳು

ಅಂದು ಹುಣ್ಣಿಮೆಯಾಗಿತ್ತು
ಅಂಗಳ ತುಂಬ ತಿಂಗಳ ಬೆಳಕು ಬೆಳದಿಂಗಳ ಚೆಲ್ಲಿತ್ತು..
ಮನವೇತಕೊ ಗತಕಕೆ ತಿರುಗಿತ್ತು. 

ಅಂದು ಚಿಂತೆಕಾಣದ ಮನ
ಚಿಂತೆಯಲೆ ನರಳುತಿದೆ ಈ ದಿನ.
ಬದುಕೆಲ್ಲಾ ಬರಿ ಯೋಗ ಧ್ಯಾನ
ಮೂಕವಾಯ್ತು ಮೌನ....

ಎಲ್ಲವ ಸಾಧಿಸಿ ಜಯಿಸುವ ಕನಸು ಆ ಯುವತನದಲ್ಲಿ.
ಬದುಕನು ನೀಗಿಸಿ ಮುಳುಗಿಸಿ ಮನಸು ಈ ಮುಪ್ಪಿನಲ್ಲಿ..

ಭೊಗಸೆಯ ತುಂಬ ಕಂಡ ಕನಸ ಕದ್ದೊಯ್ದವರಾರು 
ಮಾತು ಮಾತಿಗೂ ನಗಿಸುತಿದ್ದ ಜನ ಎಲ್ಲಿ ನನ್ನವರು?

ಬಾಳ ತಿರುಳೆಲ್ಲ ಇರುಳಲ್ಲಿ ತೊಯ್ದಂತಿದೆ.
ಕಾದ ಮರಳಲ್ಲಿ ಬಿಸಿ ನೀರ ಹೊಯ್ದಂತಿದೆ.

ಬಾ ಚಂದ್ರಮ ಇಲ್ಲಿ ಭುವಿಗೆ
ತಾ ಬೆಳಕನು ಎನ್ನ ಬಾಳಿಗೆ.....
         -ಸಂದೇಶ ಪೂಜಾರಿ ಗುಲ್ವಾಡಿ

Saturday, 8 October 2016

ಅ(ಆ)ಭಯ

                         ಅ(ಆ)ಭಯ



ಗೆಳತಿ ಹೃದಯ ಅದಲು ಬದಲಾಯಿತು.ನನಗೊಂದೆ ಭಯ..ನೀ ದೂರಾಗುವೆ ಅಂತಲ್ಲಾ.ನನ್ನೊಂದಿಗೆ ನಿನ್ನ ಹೃದಯ ಮಣ್ಣಾಗಬಹುದೆಂಬ ಭಯ..ಸಣ್ಣ ಬಿನ್ನಹ ...ಹೋಗಲಾಡಿಸಿ ನೀಡು ಅಭಯ..    

                                ಸಂದೇಶ ಪೂಜಾರಿ ಗುಲ್ವಾಡಿ

ಜೀವನ ಜಾತ್ರೆ

                          
                           ಜೀವನ ಜಾತ್ರೆ



ತೇರ ಹಬ್ಬದಿ ದೂರವಾದೆವು...

ಅಪ್ಪ ಅಮ್ಮನಾ ಕಾಣದೆ....
ಜಾತ್ರೆ  ಮುಗಿದು ರಾತ್ರಿ  
ಕಳೆದ ಮೇಲೆ  ಖಾತ್ರಿಯಾಗಿತ್ತು ...
ಇಲ್ಲಿರುವುದು  ಸುಮ್ಮನೆ.

ಬಿಕ್ಕಳಿಸಿದ ದುಃಖಕ್ಕೆ
ಅಣೆಕಟ್ಟು ಕಟ್ಟಿದಳಕ್ಕ
ಗಾಳಿ ಗುಳ್ಳೆ  ಊದುತ.
ಚಿಂದಿ ಆಯ್ದರು ಬದುಕು..
ಚಂದವೆನುತ...

ಇಂದಿಗೂ ಅದೇ ಜಾತ್ರೆಯಲಿ
ಮಾಸಿದ ಮುಖಗಳ
ನನ್ನ ಮಾತೆಯಾ
ಅವಳ ಪ್ರೀತಿಯಾ
ರುಜು ಮಾಡುವವರಾರು?

ಎಲ್ಲ ಅರಿತ ದೇವರು
ಹೊರಟಾಯಿತು
ತೇರ ಏರಿ ಮೆರವಣಿಗೆಗೆ.
ಎಂದಿನಂತೆ ಇಂದು ಸಹ
ಕೊನೆಗುಳಿದಿರುವುದು
ನಾನು ನನ್ನಕ್ಕ


Friday, 7 October 2016

ಚಂದ್ರ

ಚಂದ್ರ



ಬಾನಲಿ ನೋಡು ಓ ಕಂದ
ಚಂಡು ಚಂದಿರನ ಅಂದ
ಅಳುವ ಮಗುವಿಗೆ ಚಂದ್ರನ ಆಟ
ಮೇಘದ ಮರೆಗೆ ಅವನ ಓಟ
ಶಶಿಯ ಕಾಂತಿಯ ಸೊಬಗು
ಜನಮನಕೆ ತಂದಿದೆ ಬೆರಗು
ಚಂದಿರನ ಬೆಳಕಿನ ಎಳೆ
ಹದಿನಾರು ಬಣ್ಣದ ಕಳೆ
ಚುಕ್ಕಿ ನಕ್ಷತ್ರ ನಿನ್ನ ಬಳಗ
ಸ್ರಷ್ಟಿ ಸಾಗುತ್ತಿದೆ ಅದರ ಜೊತೆಗ
ಶಿವನ ಮುಡಿಗೆ ನೀನೆ ಜ್ಯೋತಿ
ಕಳೆಯುತ್ತಿದೆ ಜಗದ ಭ್ರಾಂತಿ
ಸೌಂದರ್ಯಕೆ ನೀನೆ ಮಿಗಿಲು
ರಾಚುತಿದೆ ಮೋಡ ಮುಗಿಲು
ಎಲ್ಲಾ ನಗಲು ನೀನಿಲ್ಲ ಹಗಲು
ನೀ ಬಂದೆ ರಾತ್ರಿ ಇರುಳನ್ನು ನೀಗಲು
ಆಮವಾಸ್ಯಗೆ ಕಾಣದ ದೊರೆ
ಹುಣ್ಣಿಮೆಗೆ ನೀನೆ ಅ ಬಾನ ತಾರೆ

                                  Sandesh poojari gulvady

Wednesday, 5 October 2016

ಶೂನ್ಯ

     
       


ನಿನ್ನ ಜೊತೆ  ತಿರುಗಿದ ನೆನಪು
ಆ ಕನಸಲ್ಲೆ ಜಗ ಮಗಿಸುವ ಭಾವ
ವಾಸ್ತವತೆ ಅರಿತಾಗ ಬರೀ ಶೂನ್ಯ

ನಿನ್ನ ಮಾತಿಗೆ ಮರುಳಾದ ಮನ
ಕಲ್ಪನೆಯಲ್ಲೂ ಒಂತರ ಆನಂದ
ಭರವಸೆಯೇ ಬತ್ತಿದ ಸಾಗರ ನಿನ್ನ ಉತ್ತರ.

ಅದೆಷ್ಟೋ ಮೊಳಕೆ ಒಡೆಯದ ಕನಸು
ಒಡೆದಿದ್ದರೆ ಬಲಿಯದೆ ಮುಗ್ಗುತ್ತಿತ್ತು.ಅದು ನನಗು ಗೊತ್ತು..ಬರಿ ಶೂನ್ಯ ಸಂಪತ್ತು.


          ಸಂದೇಶ ಪೂಜಾರಿ ಗುಲ್ವಾಡಿ

ಆಸೆ

                                ಆಸೆ


ಝಗಿಸುವ ಜಗದಲಿ ಜಿಗಿಯುವ ಆಸೆ
ನಲಿಸುವ ಜನರೊಳು ನಲಿಯುವ ಆಸೆ
ಹಸಿರಲೆ ಹರುಷವ ಹರಿಸುವ ಆಸೆ
ರಜತ ರಥದಲಿ ರಂಜಿಸುವಾಸೆ
ಹೂಗಳ ಹೊಳಪನು ಹೊಗಳುವ ಆಸೆ
ಪರಿಸರದಲಿ ಪರಿಮಳ ಪಸರಿಸುವ ಅಸೆ
ವರ್ಣ ಬಣ್ಣ ಬಣ್ಣನೆಯ ಬಣ್ಣಿಸುವಾಸೆ
ನದಿಯ ನಾದಕೆ ನರ್ತಿಸುವಾಸೆ
ಚಿತ್ತಾರದಾಗಸದಿ ಚಂದ್ರ ಬಂಬ ಚಿತ್ರಿಸುವಾಸೆ
ಮುಗಿಲಿನ ಮೊಗದಲಿ ಮುಗ್ಧತೆ ಮುದ್ರಿಸುವಾಸೆ
ಅಂತೆ ಕಂತೆ ಚಿಂತೆಗೆ ಚಿತೆಯಿಡುವಾಸೆ
ಸುತ್ತ ಮುತ್ತ ಜನರ ಜೊತೆಯಿರುವಾಸೆ..

            ಸಂದೇಶ ಪೂಜಾರಿ ಗುಲ್ವಾಡಿ 

ನಮ್ಮೂರ ಹೊಳೆ

ನಮ್ಮೂರ ಹೊಳೆ





ನಮ್ಮೂರ ನಾಡಿನ ಹೊಳೆಯದು ಬಲು ಸುಂದರ
ಅಂಟಿಕೊಂಡಿರುವುದು ಕಣ್ಮನ ತೊಯಿಸುವ ಹಸುರಿನ ಹಂದರ
ಕಮರಿಯ ಕನರಕೆ ತೊನೆಯುವ ಕಾಡು
ಪ್ರಕೃತಿ ಚೆಲುವಿನ ಹಸುರಿನ ಗೂಡು
ಸರದಿಯ ಸಾಕಲು ನಿಂತ ಮೇಘದ ಹೊದಿಕೆಯ ಬೆಟ್ಟ
ಅದರ ಚೆಲುವ ನೋಡಿ ರವಿಯು ಕಂಗೆಟ್ಟ.
ಗಿಡ ಮರ ಬಳ್ಳಿ ಹಬ್ಬಿ ಸಾಂಕೇತಿಸುತಿದೆ ಇಲ್ಲಿನ ಜನ ಒಂದು
ಪುಷ್ಪ ಕಮಲವರಳಿ ಸಾರುತಿದೆ ಜನಕೆ ಜಯವೆಂದು
ನದಿಯ ಜುಳು ಜುಳು ನಾದ ಸಂಗೀತವ ಮೀರಿತ್ತು
ದುಂಬಿಗಳ ಕಲರದ ಝೇಂಕಾರ ಅದು ಏನೊ ಗಮ್ಮತ್ತು.
ಪಂಚಮದಿಂಚರದಲಿ ಕೋಗಿಲೆಯ ಸ್ವರ
ಅದ ಕೇಳಿ ಕರಗಿದೆ ಮನದ ಭಾರ
ನಭ ಮಂಡಲದಲಿ ಶೋಭಿಸುವ ಸೂರ್ಯ
ಜಲಧಾರೆಯಲಿ ಕಾಣುವ ಬಂಗಾರ

                          ಸಂದೇಶ ಪೂಜಾರಿ ಗುಲ್ವಾಡಿ

Tuesday, 4 October 2016

ಮರಳಿ ಬಾ

ಕತ್ತಲ ಕಾನನದಲ್ಲಿ ಸುತ್ತಣ ಜಗದಂತಿಲ್ಲ
ಎತ್ತ ಸಾಗುತಿದೆ ನಿನ್ನ ಪಯಾಣ..
ಕಣ್ಣಿಗೆ ತಿಕ್ಕುವ ಕಾಡ ಬನ
ನಡುವೆ ಮೌನ ಧ್ಯಾನ
ನಿರಂತರ ಸಾಗತ್ತಿದೆ ನಿನ್ನ ಪಯಾಣ
ದುಡಿದು ದಣಿವಿಲ್ಲದ ನಡೆದು ಕೊನೆಯಿಲ್ಲ
ಸ್ರಷ್ಟಿಯ ದ್ರಷ್ಟಿಗೆ ನಿಲುಕದ ನಿನ್ನ ಪಯಾಣ
ದಾರಿ ಸವೆದಷ್ಟು ದೂರ ನೀ ತಿರುಗಿ ಬಾರ
ತರವಲ್ಲಾ ನಿನಗೆ ಒಂಟಿ ಪಯಾಣ
ಮರುಕ ತಂದ ಮನಕೆ ಕರಗಿ
ಕರೆದ ಜಗಕೆ
ಸಂತಸವ ನೀಡು ಬಾ ಜಾಣ
ಪೋಷಿಸಿದ ನಾಡ ತೊರೆದ
ಬೀಡ
ಸೇರಿ ತೀರಿಸು ಬಾ ನಿನ್ನ ಋಣ
ಅಂದು ನನ್ನಲ್ಲಿ ಒಡಮೂಡಿದ ಕರುನಾಡು ಕಟ್ಟುವ ಕನಸ ಮಾಡು ನೀ ದ್ವಿಗುಣ....

ಮಳೆ

ಮಳೆ


ಗಾಳಿಯ ತಂದಾನ
ಮೈಮನ ಸಿಂಚನ
ಮುಗಿಲ ಮಳೆ ಹೂವ ಹೊಳೆ

ಸೃಷ್ಟಿಯ ಹಂದರ
ಬಾನದು ಸುಂದರ
ಜೇನ ಮಳೆ ಭುವಿಯ ಕಳೆ

ರಾಗಕೆ ಭಾವ
ತಾಳಕೆ ಜೀವ
ಜಿನುಗಿ ಮಳೆ ತುಂತುರು ಮಳೆ

ಮಂಜಿನ ರಾಶಿ
ಮುತ್ತಿನ ಕಾಶಿ
ತಗ್ಗಿದ ಇಳೆ ಇಬ್ಬನಿ ಮಳೆ

ಸೂರ್ಯನ ಕಿರಣ
ಚಂದ್ರನ ಕಾರಣ
ನಿಂತ ಮಳೆ ಮುಂಗಾರು ಮಳೆ

ಭುವಿ ಮಂಜಾನೆ ವೇಳೆ
ರವಿ ಸೌಂದರ್ಯ ತಾಳಿ
ಮಂಜಿನ ಮಳೆ ಕಣ್ಮನ ಸೆಳೆ

Sunday, 2 October 2016

ಮಮತೆ ಮಾತಾಡಿದಾಗ


ಮಮತೆ ಮಾತಾಡಿದಾಗ

ನಿನ್ನ ಜೊತೆಗೇ ನಾನಿದ್ದರೂ ಕ್ಷಣ ಕ್ಷಣಕ್ಕೂ  ನಿನ್ನ ನೋಡೊ ಹಂಬಲ
ಬರಿ ವೇದನೆ, ಕರೆವ ಕೂಗು ಮಾತೆ ನನಗಿರಲಿಲ್ಲ..
ನಿನ್ನ ಆಸೆ ಕಂಡು ಪ್ರತಿ ದಿನ ತುಟಿ ಒಪ್ಪುತ್ತಿತ್ತು.ಒಂದೊಂದು ಅಕ್ಷರ ಜೋಡಿಸಿದಾಗಲು ನಿನ್ನ ಕರೆಯಲಾಗಲಿಲ್ಲಾ.
ದಣಿದ ಕೂಗು ಮನೆಯಲ್ಲಾ ಕೇಳಿಸಿ
ತೊಟ್ಟಿಲಲ್ಲೆ ಹೌಹಾರುತಿದ್ದೆ. ಮಡಿಲಿಗೇರಿದಾಗ ಮಾತ್ರ ಹರುಷ ಮಂದಹಾಸ ನಿನ್ನಲ್ಲಿ ಕಾಣುತಿದ್ದೆ
ನಿನ್ನ ವರಸೆ ಬದಲಾಗಲಿಲ್ಲ.
ನಿನ್ನ ಮಮತೆ ಹೆಚ್ಚಾದಾಗ ನನ್ನ ಎದೆಗೊತ್ತಿಕೊಂಡಿದ್ದೆ.
ನನ್ನುಸಿರು ಕಟ್ಟಿ ಕಾಲಿಂದ ಒದ್ದು ಬಿಡಿಸಿಕೊಂಡಾಗಲೂ ನೀ ಖುಷಿ ಪಟ್ಟೆ

ನನ್ನ ಜೊತೆ ನೀ ತೊದಲಿದೆ ಆಗನಿಸಿತ್ತು ನಾನೇನು  ದಡ್ಡನಲ್ಲ.
ಅದರೆ ದಡ್ಡತನದಲ್ಲಿದ್ದ ನನ್ನನ್ನು ದೊಡ್ಡವನು ಮಾಡಿದ್ದು ನೀನು ತಾನೆ  ಅಮ್ಮಾ.......

                         ಸಂದೇಶ ಪೂಜಾರಿ ಗುಲ್ವಾಡಿ